< ನೆಹೆಮೀಯನು 6 >

1 ನಾನು ಪೌಳಿಗೋಡೆಯನ್ನು ಪುನಃ ಕಟ್ಟಿಸಿದೆನು, ಆದರೆ ಹೆಬ್ಬಾಗಿಲುಗಳನ್ನೂ ಇನ್ನೂ ಇಡಿಸಿರಲಿಲ್ಲ. ಜೀರ್ಣೋದ್ಧಾರದ ಕಾರ್ಯಗಳೆಲ್ಲವೂ ಪೂರ್ಣವಾಯಿತೆಂಬುದು ಸನ್ಬಲ್ಲಟ್, ಟೋಬೀಯ, ಅರಬಿಯನಾದ ಗೆಷೆಮ್ ಇವರಿಗೂ, ನಮ್ಮ ಬೇರೆ ವಿರೋಧಿಗಳಿಗೂ ಗೊತ್ತಾಯಿತು.
Bere a Sanbalat, Tobia, Arabni Gesem ne yɛn atamfo nkae no huu sɛ masiesie ɔfasu no awie a ɔkwan biara nneda ntam; nanso saa bere no na minsisii apon no,
2 ಅವರಲ್ಲಿ ಸನ್ಬಲ್ಲಟ್, ಗೆಷೆಮರು ನನಗೆ, “ಓನೋ ಸಮಭೂಮಿಯ ಒಂದು ಗ್ರಾಮದಲ್ಲಿ ಒಂದು ಸಭೆ ಸೇರೋಣ ಬಾ” ಎಂದು ಹೇಳಿ ಕಳುಹಿಸಿದರು. ಇದು ಅವರು ನನಗೆ ಕೇಡು ಬಗೆಯುವುದಕ್ಕಾಗಿಯೇ ಎಂದು ತಿಳಿಯಿತು.
Sanbalat ne Gesem de nkra brɛɛ me se, minhyia wɔn wɔ nkuraa no baako a ɛwɔ Ono tataw so hɔ. Nanso mihuu sɛ wɔrepam me ti so,
3 ಆಗ ನಾನು ದೂತರ ಮುಖಾಂತರವಾಗಿ ಅವರಿಗೆ, “ನನಗೆ ಒಂದು ದೊಡ್ಡ ಕೆಲಸವುಂಟು; ಅದನ್ನು ಬಿಟ್ಟು ನಿಮ್ಮ ಬಳಿಗೆ ಬಂದರೆ ಆ ಕೆಲಸವು ನಿಂತು ಹೋಗುವುದು; ನಾನು ಬರಲು ಸಾಧ್ಯವಿಲ್ಲ” ಎಂದು ಹೇಳಿ ಕಳುಹಿಸಿದೆನು.
enti memaa wɔn mmuae se, “Mereyɛ adwuma kɛse bi a merentumi nnyae mmehyia mo.”
4 ಅವರು ನಾಲ್ಕು ಬಾರಿ ನನಗೆ ಅದೇ ಪ್ರಕಾರ ಹೇಳಿ ಕಳುಹಿಸಿದರೂ ನಾನು ಅದೇ ಉತ್ತರವನ್ನು ಕೊಟ್ಟೆನು.
Wɔmaa me saa nkra no mpɛn anan. Ne nyinaa mu no, memaa mmuae koro no ara.
5 ಐದನೆಯ ಸಾರಿ ಸನ್ಬಲ್ಲಟನು ಅದೇ ಉದ್ದೇಶದಿಂದ ತನ್ನ ಸ್ವಂತ ಸೇವಕನ ಮುಖಾಂತರವಾಗಿ ತೆರೆದಿರುವ ಒಂದು ಪತ್ರವನ್ನು ಕಳುಹಿಸಿದನು.
Ne mpɛn anum so no, Sanbalat somfo bae no na okura krataa a wɔakyerɛw.
6 ಅದರಲ್ಲಿ “ಗೆಷೆಮ್ ಎಂಬುವನು ನನಗೆ ತಿಳಿಸಿದ ಪ್ರಕಾರ, ನೀನೂ ಮತ್ತು ಯೆಹೂದ್ಯರೂ ತಿರುಗಿ ಬೀಳಬೇಕೆಂದಿದ್ದೀರಿ; ಆದುದರಿಂದಲೇ ನೀನು ಆ ಗೋಡೆಯನ್ನು ಕಟ್ಟಿಸುತ್ತಿರುವೆ ಮತ್ತು ನೀನು ಅವರಿಗೆ ಅರಸನಾಗಬೇಕೆಂದಿರುವೆಯೆಂಬ ಸುದ್ದಿಯು ಜನರಲ್ಲಿ ಹಬ್ಬಿದೆ.
Na krataa no mu nsɛm ni: “Gesem aka akyerɛ me se, baabiara a ɔbɛkɔ no, ɔte sɛ wo ne Yudafo no repam atew atua; ɛno nti na woresiesie ɔfasu no. Nea ɛka ho ne sɛ, wopɛ sɛ wubedi wɔn so hene,
7 ಇದಲ್ಲದೆ, ‘ಯೆಹೂದದಲ್ಲಿ ಒಬ್ಬ ಅರಸನಿರುತ್ತಾನೆ’ ಎಂದು ನಿನ್ನನ್ನು ಕುರಿತು ಯೆರೂಸಲೇಮಿನಲ್ಲಿ ಪ್ರಕಟಿಸುವುದಕ್ಕೋಸ್ಕರ ಪ್ರವಾದಿಗಳನ್ನು ನೇಮಿಸಿದ್ದಿ ಎಂಬುದಾಗಿಯೂ ಜನರು ಹೇಳುತ್ತಿದ್ದಾರೆ. ಈ ಸುದ್ದಿ ರಾಜನಿಗೂ ತಲುಪಿದೆ; ಆದುದರಿಂದ ನಾವು ಸಭೆ ಸೇರಿ ಆಲೋಚಿಸೋಣ ಬಾ” ಎಂದು ಅದರಲ್ಲಿ ಬರೆದಿತ್ತು.
na mpo, woayi adiyifo bi sɛ wɔnhyɛ wo ho nkɔm wɔ Yerusalem se, ‘Monhwɛ! Ɔhene bi wɔ Yuda!’ Ɛsɛ sɛ wugye to mu sɛ, saa asɛm yi beduu ɔhene aso mu, enti ɛsɛ sɛ woba, na wo ne me bɛka ho asɛm.”
8 ಅದಕ್ಕೆ ನಾನು, “ನೀನು ಬರೆದಿರುವಂಥ ವಿಚಾರಗಳು ಯಾವುದು ಇಲ್ಲಿ ನಡೆದಿರುವುದಿಲ್ಲ; ಅದನ್ನು ನೀನೇ ನಿನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವೆ” ಎಂದು ಹೇಳಿ ಕಳುಹಿಸಿದೆನು.
Mibuae se, “Wunim sɛ woretwa atoro. Asɛm a woreka no, nokware baako koraa nni mu.”
9 ಹೀಗೆ ಎಲ್ಲರೂ, “ಇವರ ಕೈಗಳು ಜೋಲು ಬಿದ್ದು ಕೆಲಸವನ್ನು ಮುಗಿಸದೆ ಇರಲಿ” ಎಂದು ನಮ್ಮನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದರು. ಆದರೆ ನನ್ನ ದೇವರೇ, ನನ್ನ ಕೈಗಳನ್ನು ಬಲಗೊಳಿಸಿ ನನ್ನನ್ನು ಧೈರ್ಯಪಡಿಸು ಎಂದು ಪ್ರಾರ್ಥಿಸಿದೆನು
Huna na na wɔpɛ sɛ wohunahuna yɛn. Na wususuw sɛ wobetumi abu yɛn aba mu na yegyae adwuma no yɛ. Ɛno nti, mebɔɔ mpae sɛ menya ahoɔden de atoa dwumadi no so.
10 ೧೦ ಆನಂತರ ನಾನು ಮೆಹೇಟಬೇಲನ ಮೊಮ್ಮಗನೂ, ದೆಲಾಯನ ಮಗನೂ ಆದ ಶೆಮಾಯನ ಮನೆಗೆ ಹೋದೆನು. ಅವನು ಅಲ್ಲಿ ಅಡಗಿಕೊಂಡಿದ್ದನು. ಅವನು ನನಗೆ, “ನಿನ್ನನ್ನು ಕೊಲ್ಲುವುದಕ್ಕೆ ಈ ರಾತ್ರಿಯೇ ಬರುತ್ತಾರೆ. ಆದುದರಿಂದ ನಾವಿಬ್ಬರೂ ದೇವಾಲಯಕ್ಕೆ ಹೋಗಿ ಗರ್ಭಗುಡಿ ಪ್ರವೇಶಿಸಿ ಅದರ ಕದಗಳನ್ನು ಮುಚ್ಚಿಕೊಳ್ಳೋಣ ಬಾ” ಎಂದು ಹೇಳಿದನು.
Akyiri no, mekɔsraa Delaia babarima a ɔyɛ Mehetabel nena Semaia a ɔhyɛ ne fi na ɔnkɔ baabiara no. Ɔkae se, “Ma yenhyia wɔ Onyankopɔn asɔredan no mu, na yɛmmram apon no akyi. Wʼatamfo reba abekum wo anadwo yi.”
11 ೧೧ ನಾನು, “ನನ್ನಂಥ ಪುರುಷನು ಓಡಿಹೋಗುವುದು ಯೋಗ್ಯವೋ? ಇದಲ್ಲದೆ, ನನ್ನಂಥವನು ಪ್ರಾಣರಕ್ಷಣೆಗಾಗಿ ಗರ್ಭಗುಡಿ ಪ್ರವೇಶಿಸಬಹುದೇ? ನಾನು ಬರುವುದಿಲ್ಲ” ಎಂದು ಉತ್ತರಕೊಟ್ಟೆನು.
Na mibuae se, “Enti ɛsɛ sɛ obi a ɔte sɛ me guan amanehunu ana? Enti ɛsɛ sɛ obi a ɔte sɛ me bɛkɔ akohintaw Asɔredan mu de apere me nkwa ana? Dabi, merenyɛ saa!”
12 ೧೨ ನಾನು ಸೂಕ್ಷ್ಮವಾಗಿ ವಿಚಾರ ಮಾಡಿದಾಗ ನನ್ನ ವಿಷಯವಾಗಿ ಆ ಕಾಲ, ಜ್ಞಾನ, ವಚನವನ್ನು ಉಚ್ಚರಿಸುವುದಕ್ಕೂ ಪ್ರವಾದನೆ ನುಡಿಯುವುದಕ್ಕೂ ಇವನನ್ನು ಪ್ರೇರೇಪಿಸಿದವನು ದೇವರಲ್ಲ, ಟೋಬೀಯನೂ, ಸನ್ಬಲ್ಲಟನೂ ಇವನಿಗೆ ಲಂಚ ಕೊಟ್ಟು ಹಾಗೆ ಹೇಳಿದ್ದಾರೆ ಎಂದು ನನಗೆ ಗೊತ್ತಾಯಿತು.
Mihuu sɛ Onyankopɔn nkasa nkyerɛɛ no, na ne nkɔm a ɔhyɛe no tia me, efisɛ Tobia ne Sanbalat abɔ no paa.
13 ೧೩ ನಾನು ಅಂಜಿಕೊಂಡು ಇವನ ಮಾತಿನಂತೆ ನಡೆದು ದೋಷಿಯಾಗಿ ತಮ್ಮ ನಿಂದೆಗೂ, ಕೆಟ್ಟ ಹೆಸರಿಗೂ ಒಳಗಾಗಲಿ ಎಂದು ಅವರು ಇವನಿಗೆ ಲಂಚ ಕೊಟ್ಟಿದ್ದರು.
Na wosusuw sɛ wobehunahuna me, na mafa nʼadwenkyerɛ no so ayɛ bɔne, na wɔnam so abɔ me sobo, asɛe me din.
14 ೧೪ ನನ್ನ ದೇವರೇ, ಟೋಬೀಯ, ಸನ್ಬಲ್ಲಟರು ಮಾಡಿದ ಈ ದುಷ್ಕೃತ್ಯಗಳು ನಿನ್ನ ನೆನಪಿನಲ್ಲಿರಲಿ; ನನ್ನನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದ ಪ್ರವಾದಿನಿಯಾದ ನೋವದ್ಯ ಮತ್ತು ಇತರ ಪ್ರವಾದಿಗಳನ್ನು ನೆನಪಿನಲ್ಲಿಟ್ಟುಕೋ.
Me Nyankopɔn, kae bɔne a Tobia ne Sanbalat ayɛ no nyinaa. Na kae odiyifobea Noadia ne adiyifo a wɔte sɛ ɔno a wɔpɛe sɛ wohunahuna me no.
15 ೧೫ ಗೋಡೆಯು ಭಾದ್ರಪದ ಮಾಸದ ಇಪ್ಪತ್ತೈದನೆಯ ದಿನದಲ್ಲಿ ಪೂರ್ಣಗೊಂಡಿತು. ಅದನ್ನು ಕಟ್ಟುವುದಕ್ಕೆ ಒಟ್ಟು ಐವತ್ತೆರಡು ದಿನಗಳು ಬೇಕಾದವು.
Enti Elul ɔsram (bɛyɛ Ɔsannaa) da a ɛto so abien no, wowiee ɔfasu no asiesie, nnafua aduonum abien a wofii dwumadi no ase no mu.
16 ೧೬ ಈ ಸುದ್ದಿಯು ನಮ್ಮ ವಿರೋಧಿಗಳಾದ ಸುತ್ತಣ ಎಲ್ಲಾ ಜನಾಂಗದವರಿಗೆ ತಲುಪಿದಾಗ ಅವರು ಭಯವುಳ್ಳವರಾಗಿ ಸೊಕ್ಕನ್ನು ಬಿಟ್ಟು ಬಹಳ ಮನಗುಂದಿ ತಗ್ಗಿ ಹೋದರು. ಈ ಕಾರ್ಯವು ದೇವರ ಸಹಾಯದಿಂದಲೇ ಪೂರ್ಣಗೊಂಡಿತು ಎಂಬುದು ಅವರಿಗೆ ತಿಳಿದುಬಂದಿತು.
Bere a yɛn atamfo ne aman a wɔatwa yɛn ho ahyia tee no, wosuroe, na ɛma wɔbotowee. Wohuu sɛ Onyankopɔn mmoa na wɔde ayɛ adwuma no.
17 ೧೭ ಅದೇ ಸಮಯದಲ್ಲಿ ಯೆಹೂದ್ಯ ಶ್ರೀಮಂತರಿಗೂ ಟೋಬೀಯನಿಗೂ ಬಹಳ ಪತ್ರ ವ್ಯವಹಾರಗಳು ನಡೆಯುತ್ತಿದ್ದವು.
Saa nnafua aduonum abien no mu no, nkrataa bebree dii akɔneaba wɔ Tobia ne Yuda adwumayɛfo no ntam.
18 ೧೮ ಏಕೆಂದರೆ ಅವನು ಆರಹನ ಮಗನಾದ ಶೆಕನ್ಯನ ಅಳಿಯನಾಗಿದ್ದ ಹಾಗೂ ಅವನ ಮಗನಾದ ಯೆಹೋಹಾನಾನನೆಂಬ ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ಮದುವೆ ಮಾಡಿಕೊಂಡಿದ್ದನು. ಆದುದರಿಂದ ಯೆಹೂದ್ಯರಲ್ಲಿ ಅನೇಕರು ಅವನೊಂದಿಗೆ ಪ್ರಮಾಣ ಮಾಡಿ ಅವರಿಗೆ ವಶವಾಗಿದ್ದರು.
Efisɛ na Yudafo bebree aka ntam sɛ, wɔbɛsom no. Afei, na Tobia ase ne Arah babarima Sekania. Na Sekania babarima Yehohanan nso aware Berekia babarima Mesulam babea.
19 ೧೯ ಅವರು ಅವನ ಒಳ್ಳೆತನವನ್ನೇ ನನ್ನ ಮುಂದೆ ವರ್ಣಿಸುತ್ತಾ ನನ್ನ ಮಾತುಗಳನ್ನು ಅವನಿಗೆ ತಿಳಿಸುತ್ತಾ ಇದ್ದರು. ಟೋಬೀಯನೂ ನನ್ನಲ್ಲಿ ಭಯಹುಟ್ಟಿಸುವುದಕ್ಕೋಸ್ಕರ ನನಗೆ ಪತ್ರಗಳನ್ನು ಕಳುಹಿಸುತ್ತಿದ್ದನು.
Wɔkɔɔ so kaa sɛnea Tobia ho yɛ nwonwa fa no kyerɛɛ me, na wɔkaa biribiara a mekae nso kyerɛɛ no. Na Tobia de ahunahuna nkrataa bebree brɛɛ me.

< ನೆಹೆಮೀಯನು 6 >