< ನೆಹೆಮೀಯನು 4 >

1 ನಾವು ಪೌಳಿಗೋಡೆಯನ್ನು ಕಟ್ಟುತ್ತಿದ್ದ ಸುದ್ದಿಯು ಸನ್ಬಲ್ಲಟನಿಗೆ ಗೊತ್ತಾದಾಗ ಅವನು ಬಹಳ ಹೊಟ್ಟೆಕಿಚ್ಚಿನಿಂದ ಕೋಪಗೊಂಡು ಯೆಹೂದ್ಯರನ್ನು ಗೇಲಿ ಮಾಡಿದನು.
I stalo se, když uslyšel Sanballat, že stavíme zed, rozpálil se hněvem, a rozzlobiv se velmi, posmíval se Židům.
2 ತನ್ನ ಸಹೋದರರ ಮತ್ತು ಸಮಾರ್ಯದ ಸೈನ್ಯದವರ ಮುಂದೆಯೂ, “ಬಲಹೀನರಾದ ಈ ಯೆಹೂದ್ಯರು ಮಾಡುವುದೇನು? ಇವರು ತಮ್ಮನ್ನು ಬಲಪಡಿಸಿಕೊಳ್ಳಬೇಕೆಂದಿರುವರೋ? ಯಜ್ಞವನ್ನರ್ಪಿಸುವರೋ? ಈ ದಿನವೇ ಈ ಕೆಲಸವನ್ನು ಮುಗಿಸುವರೇನು? ಸುಟ್ಟುಹೋದ ಪಟ್ಟಣದ ಧೂಳಿನ ರಾಶಿಯೊಳಗೆ ಹುಗಿದುಹೋದ ಕಲ್ಲುಗಳನ್ನು ಬದುಕಿಸಲೂ ಸಾಧ್ಯವೇ?” ಎಂದು ಹೇಳಿದನು.
Nebo mluvil před bratřími svými a před vojskem Samařským, řka: Co ti bídní Židé berou před sebe? Tak-liž mají býti zanecháni? Což budou obětovati? Za jeden-liž den to dodělati mají? Také-liž i kamení z hromad rumu křísiti budou, kteréž spáleno jest?
3 ಅವನ ಬಳಿಯಲ್ಲಿ ನಿಂತಿದ್ದ ಅಮ್ಮೋನಿಯಾದ ಟೋಬೀಯನು, “ಅವರು ಹೇಗೆ ಕಟ್ಟಿದ್ದರೂ ಅವರು ಕಟ್ಟುವ ಕಲ್ಲುಗೋಡೆಯ ಮೇಲೆ ನರಿ ಹಾರಿದರೆ ಅದು ಉರುಳಿ ಬಿದ್ದು ಹೋಗುವುದು” ಎಂದನು.
Tobiáš pak Ammonitský podlé něho řekl: Nechať stavějí, však liška přiběhna, prorazí zed jejich kamennou.
4 ನಮ್ಮ ದೇವರೇ ಕೇಳು, ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಿದ್ದಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡು. ಅವರು ದೇಶಭ್ರಷ್ಟರಾಗಿ ಸೂರೆಹೋಗುವಂತೆ ಮಾಡು.
Slyš, ó Bože náš, že jsme v pohrdání, a obrať pohanění jejich na hlavu jejich, a dej je v loupež v zemi, do níž by zajati byli.
5 ಅವರ ಅಪರಾಧವನ್ನು ಕ್ಷಮಿಸಬೇಡ; ನಿನ್ನೆದುರಿಗಿರುವ ಅವರ ಅಪರಾಧವನ್ನು ಅಳಿಸಿಬಿಡಬೇಡ. ಕಟ್ಟುವವರ ಮುಂದೆಯೇ ಅವರು ನಿನ್ನನ್ನು ಕೆಣಕಿ ಕೋಪಗೊಳಿಸಿದ್ದಾರಲ್ಲಾ.
A nepřikrývej nepravosti jejich, a hřích jejich od tváři tvé ať není shlazen, proto že jsou tě popouzeli v stavitelích.
6 ಆದರೂ ನಾವು ಕಟ್ಟುವ ಕೆಲಸವನ್ನು ಮುಂದುವರಿಸಿದೆವು. ಜನರು ಅದಕ್ಕೆ ಮನಸ್ಸು ಕೊಟ್ಟಿದ್ದರಿಂದ ಗೋಡೆಯೆಲ್ಲಾ ಅರ್ಧ ಎತ್ತರದವರೆಗೂ ಸಮನಾಗಿ ಕಟ್ಟಲಾಯಿತು.
A tak stavěli jsme tu zed, a spojili všecku až do polu, a měl lid srdce k tomu dílu.
7 ಸನ್ಬಲ್ಲಟನೂ, ಟೋಬೀಯನೂ, ಅರಬಿಯರೂ, ಅಮ್ಮೋನಿಯರೂ, ಅಷ್ಡೋದಿನವರೂ ಯೆರೂಸಲೇಮಿನ ಗೋಡೆಯ ಜೀರ್ಣೋದ್ಧಾರ ಕಾರ್ಯವು ಮುಂದುವರಿದು, ಅದರ ಸಂದುಗಳು ತಿರುಗಿ ಸರಿಯಾಗುತ್ತಾ ಬರುವುದನ್ನು ಕೇಳಿ ಬಹುಕೋಪಗೊಂಡರು.
Což když uslyšel Sanballat, a Tobiáš a Arabští, Ammonitští i Azotští, že by na dýl přibývalo zdi Jeruzalémské, a že se již byly počaly mezery zavírati, rozpálili se hněvem velice.
8 ನಾವು ಒಟ್ಟಾಗಿ ಯೆರೂಸಲೇಮಿನವರಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗಿ ಅವರನ್ನು ಗಲಿಬಿಲಿಗೊಳಿಸೋಣ ಎಂದು ಒಳಸಂಚು ಮಾಡಿಕೊಂಡರು.
Protož spuntovali se všickni společně, aby táhli k boji proti Jeruzalému a aby jemu překážku učinili.
9 ನಾವಾದರೋ ನಮ್ಮ ದೇವರಿಗೆ ಮೊರೆಯಿಟ್ಟು ಅವರಿಗೆ ವಿರುದ್ಧವಾಗಿ ಅವರು ಬರುವ ದಾರಿಯಲ್ಲಿ ಹಗಲಿರುಳು ಕಾವಲುಗಾರರನ್ನಿರಿಸಿದೆವು.
(My pak modlili jsem se Bohu svému, a postavili jsme stráž proti nim ve dne i v noci, bojíce se jich.
10 ೧೦ ಇತ್ತ ಯೆಹೂದ್ಯರು, “ಹೊರೆ ಹೊರುವವರ ಬಲವು ಕುಂದಿಹೋಯಿತು, ಧೂಳಿನ ರಾಶಿಯು ವಿಪರೀತವಾಗಿದೆ; ಈ ಗೋಡೆಯನ್ನು ಕಟ್ಟುವುದು ನಮ್ಮಿಂದ ಆಗುವುದಿಲ್ಲ” ಎಂದರು.
Nebo řekli Judští: Zemdlelať jest síla nosičů, a rumu ještě mnoho jest, neodolaliť bychom jim, stavějíce zed.)
11 ೧೧ ಮತ್ತು ನಮ್ಮ ವಿರೋಧಿಗಳು, “ಅವರಿಗೆ ತಿಳಿಯದಂತೆ, ಗೋಚರವಾಗದಂತೆ ಫಕ್ಕನೆ ಅವರೊಳಗೆ ನುಗ್ಗಿ ಅವರನ್ನು ಕೊಂದು ಕೆಲಸವನ್ನು ನಿಲ್ಲಿಸಿಬಿಡೋಣ” ಎಂದುಕೊಳ್ಳುತ್ತಿದ್ದರು.
Anobrž i řekli nepřátelé naši: Nezvědíť, ani spatří, až vpadneme mezi ně, a pomordujeme je, aneb zastavíme to dílo.
12 ೧೨ ಅವರ ನೆರೆಯೂರುಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರು ಬಂದು ಬಂದು ನಮಗೆ, ನೀವು ಯಾವ ಕಡೆಗೆ ತಿರುಗಿಕೊಂಡರೂ ಎಲ್ಲಾ ಕಡೆಗಳಿಂದಲೂ ಅವರು ನಮ್ಮ ವಿರುದ್ಧವಾಗಿ ಯುದ್ಧಕ್ಕೆ ಬರುತ್ತಾರೆ ಎಂದು ಪದೇ ಪದೇ ಬಂದು ತಿಳಿಸುತ್ತಿದ್ದರು.
Když pak přišli Židé, kteříž s nimi bydlili, a pravili nám na desetkrát: Mějte pozor na všecka místa, kudyž se chodí k nám:
13 ೧೩ ಆಗ ನಾನು ಜನರಿಗೆ ಕತ್ತಿ, ಬಿಲ್ಲು, ಬರ್ಜಿಗಳನ್ನು ಹಿಡಿದುಕೊಂಡು ಗೋಡೆಯ ಹಿಂದಣ ತಗ್ಗಾದ ಬಯಲುಗಳಲ್ಲಿ ಗೋತ್ರಗೋತ್ರಗಳಾಗಿ ನಿಲ್ಲಬೇಕೆಂದು ಆಜ್ಞಾಪಿಸಿದೆನು.
Tedy postavil jsem na dolních místech za zdí, i na místech příkrých, a osadil jsem lidem po čeledech s meči, s kopími a lučišti jejich.
14 ೧೪ ಆಗ ನಾನು ಅವರನ್ನು ಸಂದರ್ಶಿಸಿ ಅವರ ಮುಂದೆ ನಿಂತು ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಉಳಿದ ಜನರನ್ನೂ ಉದ್ದೇಶಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ, ಭಯಂಕರನೂ ಆಗಿರುವ ಕರ್ತನನ್ನು ನೆನಪುಮಾಡಿಕೊಂಡು ನಿಮ್ಮ ಸಹೋದರರಿಗಾಗಿಯೂ, ಗಂಡು ಹೆಣ್ಣು ಮಕ್ಕಳಿಗಾಗಿಯೂ, ಹೆಂಡತಿಯರಿಗಾಗಿಯೂ, ನಿಮ್ಮ ಮನೆಗಳಿಗೋಸ್ಕರವೂ ಹೋರಾಡಿರಿ” ಎಂದು ಹೇಳಿದೆನು.
A když jsem to spatřil, vstana, řekl jsem k přednějším a knížatům i k jinému lidu: Nebojte se jich, ale na Pána velikého a hrozného pamatujte, a bojujte za bratří své, za syny své a dcery své, za manželky své a domy své.
15 ೧೫ ನಮ್ಮ ಶತ್ರುಗಳು ತಮ್ಮ ಉದ್ದೇಶ ನಮಗೆ ಗೊತ್ತಾಯಿತೆಂದೂ ದೇವರು ಅದನ್ನು ವ್ಯರ್ಥಮಾಡಿದನೆಂದೂ ತಿಳಿದುಕೊಂಡಾಗ ಅವರು ನಮ್ಮನ್ನು ಬಿಟ್ಟು ಹೋದರು. ನಾವೆಲ್ಲರೂ ನಮ್ಮ ನಮ್ಮ ಪೌಳಿಗೋಡೆಯ ಕೆಲಸವನ್ನು ಪುನಃ ಪ್ರಾರಂಭಿಸಲು ತೊಡಗಿದೆವು.
I stalo se, když uslyšeli nepřátelé naši, že jest nám to oznámeno, tožť Bůh rozptýlil radu jejich, a my navrátili jsme se všickni ke zdem, každý k dílu svému.
16 ೧೬ ಅಂದಿನಿಂದ ನನ್ನ ಸ್ವಂತ ಆಳುಗಳಲ್ಲಿ ಅರ್ಧ ಮಂದಿ ಕೆಲಸದಲ್ಲಿ ಸಹಾಯಮಾಡಿದರು, ಅರ್ಧ ಮಂದಿ ಕವಚವನ್ನು ಧರಿಸಿಕೊಂಡು ಬರ್ಜಿ, ಗುರಾಣಿ, ಬಿಲ್ಲುಗಳನ್ನು ಹಿಡಿದುಕೊಂಡು ನಿಂತರು. ಅದೇ ಪ್ರಕಾರ ಈ ಕಾರ್ಯಕ್ಕಾಗಿ ನೇಮಿಸಲ್ಪಟ್ಟ ಅಧಿಕಾರಿಗಳು ಗೋಡೆಕಟ್ಟುವ ಯೆಹೂದ್ಯರ ಹಿಂದೆ ನಿಂತರು.
Ale však od toho dne polovice služebníků mých dělali, a polovice jich držela kopí, pavézy a lučiště, a pancíře, a knížata stála za vší čeledí Judskou.
17 ೧೭ ಹೊರೆ ಹೊರುವವರು ಒಂದು ಕೈಯಿಂದ ಹೊರೆಹೊತ್ತುಕೊಳ್ಳುತ್ತಾ ಇನ್ನೊಂದು ಕೈಯಿಂದ ಈಟಿ ಹಿಡಿದುಕೊಳ್ಳುತ್ತಿದ್ದರು.
Ti také, kteříž dělali na zdi, i nosiči břemen, i nakladači, každý jednou rukou dělal, a v druhé držel braň.
18 ೧೮ ಪೌಳಿಗೋಡೆಯನ್ನು ಕಟ್ಟುವವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿದುಕೊಂಡು ಕಟ್ಟುತ್ತಿದ್ದನು. ನಾನಂತೂ ಕೊಂಬೂದುವವನೊಬ್ಬನನ್ನು ನನ್ನ ಬಳಿಯಲ್ಲಿರಿಸಿಕೊಂಡಿದ್ದೆ.
Z těch pak, kteříž stavěli, měl jeden každý meč svůj připásaný na bedrách svých, a tak stavěli, a trubač stál podlé mne.
19 ೧೯ ನಾನು ಶ್ರೀಮಂತರಿಗೂ, ಅಧಿಕಾರಿಗಳಿಗೂ ಉಳಿದ ಜನರಿಗೂ, “ನಾವು ಮಾಡುವ ಕೆಲಸವು ಬಹಳ ದೊಡ್ಡದೂ, ಅನೇಕ ಸ್ಥಳಗಳಲ್ಲಿ ನಡೆಯುವಂಥದ್ದೂ ಆಗಿದೆ; ನಾವು ಗೋಡೆಯ ಮೇಲೆ ಚದರಿ ಒಬ್ಬರಿಗೊಬ್ಬರು ದೂರವಾಗಿರುತ್ತೇವೆ.
Nebo jsem řekl k přednějším a knížatům i k jinému lidu: Dílo veliké a široké jest, a my porůznu jsme na zdi, podál jeden od druhého.
20 ೨೦ ನಿಮಗೆ ಕೊಂಬಿನ ಧ್ವನಿಯು ಯಾವ ಸ್ಥಳದಿಂದ ಕೇಳಿಬರುವುದೋ ಆ ಸ್ಥಳಕ್ಕೆ ನಮ್ಮ ಹತ್ತಿರ ಕೂಡಿಬನ್ನಿರಿ. ನಮ್ಮ ದೇವರು ನಮಗೋಸ್ಕರ ಯುದ್ಧ ಮಾಡುವನು” ಎಂದು ಹೇಳಿದೆನು.
Na kterém byste koli místě uslyšeli hlas trouby, tu se shromažďte k nám. Bůh náš bude bojovati za nás.
21 ೨೧ ಹೀಗೆ ನಾವು ಅರುಣೋದಯದಿಂದ ನಕ್ಷತ್ರಗಳು ಮೂಡುವವರೆಗೂ ಕೆಲಸ ಮಾಡುತ್ತಿದ್ದೆವು. ನನ್ನ ಸೇವಕರಲ್ಲಿ ಅರ್ಧ ಮಂದಿ ಬರ್ಜಿಯನ್ನು ಹಿಡಿದುಕೊಂಡಿದ್ದರು.
A tak my dělali jsme dílo, a polovice jich držela kopí od svitání až do soumraku.
22 ೨೨ ಇದಲ್ಲದೆ, ನಾನು ಆ ಸಮಯದಲ್ಲಿ ಜನರಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಲಾಗಿರುವಂತೆಯು ಹಾಗೂ ಹಗಲಿನಲ್ಲಿ ಕೆಲಸ ನಡಿಸುವಂತೆಯು ನೀವು ನಿಮ್ಮ ನಿಮ್ಮ ಆಳುಗಳೊಡನೆ ಯೆರೂಸಲೇಮಿನಲ್ಲಿಯೇ ವಾಸಮಾಡಬೇಕು” ಎಂದು ಅಪ್ಪಣೆ ಮಾಡಿದೆನು.
Tehdáž také řekl jsem lidu: Každý s služebníkem svým nocuj u prostřed Jeruzaléma, ať je máme k stráži v noci, a ve dne k dílu.
23 ೨೩ ನಾನೂ ನನ್ನ ಸಹೋದರರೂ, ಸೇವಕರೂ, ಮೈಗಾವಲಿನವರೂ ನಮ್ಮ ಬಟ್ಟೆಗಳನ್ನು ಬದಲಾಯಿಸಿರಲಿಲ್ಲ. ಪ್ರತಿಯೊಬ್ಬನು ನೀರನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದೆವು.
Pročež i já, i bratří moji, i služebníci moji, i strážní, kteříž chodí za mnou, nebudeme svláčeti oděvu svého. Žádný ho nesloží, leč u vody.

< ನೆಹೆಮೀಯನು 4 >