< ನಹೂಮನು 2 >
1 ೧ ನಿನವೆಯೇ, ನಿನ್ನನ್ನು ಚದರಿಸುವವನು ನಿನಗೆ ಮುಖಾಮುಖಿಯಾಗಿ ಬಂದಿದ್ದಾನೆ; ಪೌಳಿಗೋಡೆಯನ್ನು ರಕ್ಷಿಸಲು ಸಿದ್ಧನಾಗು. ದಾರಿಯ ಮೇಲೆ ಕಣ್ಣಿಡು, ನಿನ್ನ ಸೊಂಟವನ್ನು ಬಲಪಡಿಸಿಕೋ, ನಿನ್ನ ಶಕ್ತಿಯನ್ನು ಚೆನ್ನಾಗಿ ದೃಢಮಾಡಿಕೋ.
Izaðe zatiraè na te, èuvaj grad, pazi na put, utvrdi bedra, ukrijepi se dobro.
2 ೨ ಆಹಾ, ಯೆಹೋವನು ಯಾಕೋಬಿನ ಅತಿಶಯವನ್ನು, ಇಸ್ರಾಯೇಲಿನ ಅತಿಶಯದಂತೆ ಪುನರುಜ್ಜೀವನಗೋಳಿಸುವನು; ಕೊಳ್ಳೆಹೊಡೆಯುವವರು ಆ ಅತಿಶಯವನ್ನು ಸೂರೆಗೈದು ಅವುಗಳ ದ್ರಾಕ್ಷಾಲತೆಗಳನ್ನು ಹಾಳುಮಾಡಿದ್ದಾರೆ.
Jer Gospod povrati slavu Jakovljevu kao slavu Izrailjevu, jer ih pustošnici opustošiše i loze im potrše.
3 ೩ ಶತ್ರುವಿನ ಶೂರರ ಗುರಾಣಿಯು ರಕ್ತವರ್ಣವಾಗಿದೆ, ಪರಾಕ್ರಮಿಗಳ ಉಡುಪುಗಳು ಕಿರಿಮಂಜಿನಂತೆ; ಅವನ ಸಿದ್ಧತೆಯ ದಿನಗಳಲ್ಲಿ ಸೈಪ್ರಸ್ ಮರದದಿಂದ ಮಾಡಿದ ಈಟಿಗಳು ಝಳಪಿಸುತ್ತವೆ ಮತ್ತು ಪಟ್ಟಣದಲ್ಲಿ ಅವರು ನಡೆದು ಹೋಗುವಾಗ ಅವರ ರಥಗಳ ಉಕ್ಕು ಥಳಥಳಿಸುತ್ತದೆ.
Štit je junaka njegovijeh crven, vojnici su u skerletu; kola æe mu biti kao zapaljeni luèevi na dan kad se uvrsta, i jele æe se ljuljati strašno.
4 ೪ ಪಟ್ಟಣದ ಹೊರಗೆ ರಥಗಳು ರಭಸದಿಂದ ತಿರುಗಾಡುತ್ತವೆ, ಮೈದಾನಗಳಲ್ಲಿ ಧಡಧಡ ಓಡಾಡುತ್ತವೆ; ಪಂಜುಗಳಂತೆ ಬೆಳಗುತ್ತವೆ, ಮಿಂಚುಗಳ ಹಾಗೆ ಹಾರುತ್ತವೆ.
Kola æe praskati po ulicama i udarati jedna o druga po putovima, biæe kao luèevi, i trèaæe kao munje.
5 ೫ ಪಟ್ಟಣದ ಅರಸನು ತನ್ನ ಸರದಾರರನ್ನು ಕರೆಕಳುಹಿಸಿದ್ದಾನೆ; ಅವರು ಓಡಿ ಹೋಗುತ್ತಾ ಮುಗ್ಗರಿಸುತ್ತಾರೆ; ಪೌಳಿಗೋಡೆ ಕಡೆಗೆ ತ್ವರೆಯಾಗಿ ಓಡುತ್ತಾರೆ; ಮರೆಯು ನಿಲ್ಲಿಸಲ್ಪಟ್ಟಿದೆ.
Pominjaæe junake svoje, a oni æe padati iduæi, pohitjeæe k zidovima njegovijem, i zaklon æe biti gotov.
6 ೬ ನದಿ ದ್ವಾರಗಳು ತೆರೆಯಲ್ಪಟ್ಟಿವೆ; ಅರಮನೆಯ ಗೋಡೆ ಕುಸಿದುಬಿದ್ದಿದೆ.
Vrata æe se rijekama otvoriti, i dvor æe se razvaliti.
7 ೭ ವಸ್ತ್ರವನ್ನು ಕಿತ್ತು ರಾಣಿಯನ್ನು ಬಯಲಿಗೆ ತರಲು ಆಕೆಯ ಸೇವಕಿಯರು ಎದೆ ಬಡೆದುಕೊಂಡು ಪಾರಿವಾಳಗಳಂತೆ ರೋದಿಸುತ್ತಾರೆ.
I koja stoji, zarobiæe se i odvešæe se, djevojke njezine pratiæe je uzdišuæi kao golubice, bijuæi se u prsi.
8 ೮ ಪುರಾತನ ಕಾಲದಿಂದ ನಿನವೆ ಪಟ್ಟಣವೂ ಕಟ್ಟೆ ಒಡೆದು ನೀರು ತುಂಬಿದ ಕೆರೆಯಂತೆ ಇದೆ. ಆಹಾ! ಹರಿದು ಓಡುವ ನೀರಿನಂತೆ ಅದರ ನಿವಾಸಿಗಳು ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ ಎಂದು ಅಪ್ಪಣೆಯಾದರೂ ಯಾರೂ ಹಿಂದೆ ನೋಡರು.
Ninevija bijaše kao jezero vodeno otkako je; ali bježe. Stanite, stanite. Ali se niko ne obzire.
9 ೯ ಬೆಳ್ಳಿಯನ್ನು ಸೂರೆಮಾಡಿರಿ, ಬಂಗಾರವನ್ನು ಕೊಳ್ಳೆ ಹೊಡೆಯಿರಿ; ಕೂಡಿಸಿಟ್ಟ ಧನಕ್ಕೂ ಸಕಲ ವಿಧವಾದ ಶ್ರೇಷ್ಠವಸ್ತುಗಳ ನಿಧಿಗೂ ಮಿತಿಯೇ ಇಲ್ಲ.
Grabite srebro, grabite zlato; blagu nema kraja, mnoštvo je svakojakih dragih zaklada.
10 ೧೦ ನಿನವೆಯು ಬರಿದಾಗಿದೆ, ಬಟ್ಟಬರಿದಾಗಿ ಬೀಳುಬಿದ್ದಿದೆ; ಎದೆಯು ಕರಗಿ ನೀರಾಗಿ ಹೋಗಿದೆ, ಮೊಣಕಾಲುಗಳು ಅದರುತ್ತವೆ, ಎಲ್ಲರ ಸೊಂಟಗಳಿಗೂ ವೇದನೆಯಾಗಿದೆ, ಎಲ್ಲರ ಮುಖಗಳೂ ಬಾಡಿವೆ.
Isprazni se, i ogolje, i opustje; i srce se rastopi, koljena udaraju jedno o drugo, i bol je u svijem bedrima, i lica su svjema pocrnjela.
11 ೧೧ ಮೃಗರಾಜರ ಪ್ರಾಯದ ಸಿಂಹಗಳ ಗವಿ ಎಲ್ಲಿ? ಸಿಂಹ, ಸಿಂಹಿಣಿ, ಸಿಂಹದ ಮರಿ ಇವುಗಳು ಯಾರಿಗೂ ಹೆದರದೆ ತಿರುಗುತ್ತಿದ್ದ ಸ್ಥಳವೆಲ್ಲಿ?
Gdje je loža lavovima i pasište laviæima, kuda iðaše lav i lavica i laviæ, i nikoga ne bješe da plaši?
12 ೧೨ ಅಲ್ಲಿ ಸಿಂಹವು ತನ್ನ ಮರಿಗಳಿಗಾಗಿ ಬೇಕಾದಷ್ಟು ಬೇಟೆಯನ್ನು ಸೀಳುತ್ತಿತ್ತು, ತನ್ನ ಸಿಂಹಿಣಿಗಳಿಗಾಗಿ ಮೃಗಗಳ ಕುತ್ತಿಗೆಯನ್ನು ಸೀಳುತಿತ್ತು; ತನ್ನ ಗವಿಗಳನ್ನು ಬೇಟೆಯಿಂದಲೂ ತನ್ನ ಗುಹೆಯನ್ನು ಕೊಂದ ಮೃಗಗಳಿಂದಲೂ ತುಂಬಿಸಿತು.
Lav lovljaše svojim laviæima dosta, i davljaše lavicama svojim, i punjaše peæine svoje lova i lože svoje grabeža.
13 ೧೩ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ! ನಾನು ನಿನಗೆ ವಿರುದ್ಧನಾಗಿದ್ದೇನೆ, ನಿನ್ನ ರಥಗಳನ್ನು ಸುಟ್ಟು ಹೊಗೆಹಾಯಿಸುವೆನು, ಕತ್ತಿಯು ನಿನ್ನ ಪ್ರಾಯದ ಸಿಂಹಗಳನ್ನು ಸೀಳಿ ನುಂಗಿ ಬಿಡುವವು; ನಿನಗೆ ಸಿಕ್ಕಿದ ಬೇಟೆಯನ್ನು ಲೋಕದೊಳಗಿಂದ ನಿರ್ಮೂಲಮಾಡುವೆನು; ನಿನ್ನ ರಾಯಭಾರಿಗಳ ಧ್ವನಿಯು ಇನ್ನು ಕೇಳಿಸುವುದಿಲ್ಲ.”
Evo me na te, govori Gospod nad vojskama, i popaliæu kola tvoja u dim, i maè æe proždrijeti laviæe tvoje, i istrijebiæu sa zemlje grabež tvoj, i neæe se èuti glas poslanika tvojih.