< ಮತ್ತಾಯನು 8 >

1 “ಯೇಸು ಬೆಟ್ಟದಿಂದ ಕೆಳಗೆ ಇಳಿದು ಬರುವಾಗ ಜನರು ದೊಡ್ಡಗುಂಪು ಆತನ ಹಿಂದೆ ಹೋದರು.
Hĩndĩ ĩrĩa aikũrũkire kuuma kĩrĩma-inĩ, ikundi nene cia andũ ikĩmuuma thuutha.
2 ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನಿಗೆ ಅಡ್ಡಬಿದ್ದು, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಅಂದನು.
Na mũndũ warĩ na mangũ agĩthiĩ harĩ we, agĩturia maru mbere yake, akĩmwĩra atĩrĩ, “Mwathani, ũngĩenda-rĩ, no ũũtherie.”
3 ಆತನು ಕೈಚಾಚಿ ಆತನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು. ಕೂಡಲೆ ಅವನು ಕುಷ್ಠದಿಂದ ಶುದ್ಧನಾದನು.
Nake Jesũ agĩtambũrũkia guoko gwake, akĩhutia mũndũ ũcio, akĩmwĩra atĩrĩ, “Nĩngwenda. Therio!” O hĩndĩ ĩyo akĩhonio mangũ make.
4 ಆಗ ಯೇಸು ಅವನಿಗೆ; “ನೋಡು, ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಿಸಿದ ಕಾಣಿಕೆಯನ್ನು ಕೊಡು;”ಅದು ಅವರಿಗೆ ಸಾಕ್ಷಿಯಾಗಲಿ ಎಂದು ಹೇಳಿದನು.
Jesũ agĩcooka akĩmwĩra atĩrĩ, “Menya ndũkeere mũndũ o na ũrĩkũ. No thiĩ ũkeyonanie kũrĩ mũthĩnjĩri-Ngai, na ũrute kĩheo kĩrĩa Musa aathanire gĩtuĩke ũira kũrĩ o.”
5 ಯೇಸು ಕಪೆರ್ನೌಮಿಗೆ ಬಂದಾಗ ಒಬ್ಬ ದಂಡಿನ ಶತಾಧಿಪತಿಯು ಆತನ ಬಳಿಗೆ ಬಂದು,
Na Jesũ aarĩkia gũtoonya Kaperinaumu, mũnene-wa-thigari-igana agĩũka kũrĩ we, akĩmũhooya ũteithio.
6 “ಕರ್ತನೇ, ನನ್ನ ಆಳು ಪಾರ್ಶ್ವವಾಯುವಿನ ನಿಮಿತ್ತ ತೀವ್ರವಾದ ನೋವಿನಿಂದ ಮನೆಯಲ್ಲಿ ಮಲಗಿ ನರಳುತ್ತಿದ್ದಾನೆ” ಎಂದು ಹೇಳಿದನು.
Akĩmwĩra atĩrĩ, “Mwathani, ndungata yakwa ĩkomete mũciĩ ĩrũarĩte mũrimũ wa gũkua ciĩga na ĩrĩ na ruo rũingĩ mũno.”
7 ಯೇಸು ಅವನಿಗೆ, “ನಾನು ಬಂದು ಅವನನ್ನು ವಾಸಿ ಮಾಡುತ್ತೇನೆ” ಎಂದು ಹೇಳಲು,
Nake Jesũ akĩmwĩra atĩrĩ, “Nĩngũthiĩ kũmĩhonia.”
8 ಆ ಶತಾಧಿಪತಿಯು, “ಕರ್ತನೇ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.
No mũnene ũcio wa thigari igana akĩmũcookeria atĩrĩ, “Mwathani, niĩ ndiagĩrĩire atĩ wee ũũke gwakwa. No uga o kiugo, na ndungata yakwa nĩĩkũhona.
9 ನಾನು ಸಹ ಅಧಿಕಾರದ ಕೆಳಗಿರುವ ಮನುಷ್ಯನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಬರುತ್ತಾನೆ; ‘ನನ್ನ ಆಳಿಗೆ ಇಂಥಿಂಥದ್ದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಅಂದನು.
Nĩgũkorwo niĩ mwene ndĩ mũndũ wathagwo, na ndĩ na thigari njathaga. Ndeera ũmwe ‘Thiĩ,’ nĩathiiaga, na ndeera ũngĩ atĩrĩ, ‘Ũka,’ nĩokaga. Na ningĩ ndeera ndungata yakwa atĩrĩ, ‘Ĩka ũna,’ nĩĩkaga.”
10 ೧೦ ಯೇಸು ಇದನ್ನು ಕೇಳಿ ಆಶ್ಚರ್ಯಚಕಿತನಾದನು, ತನ್ನ ಹಿಂದೆ ಬರುತ್ತಿದ್ದವರಿಗೆ, “ನಾನು ಇಂಥಾ ಮಹತ್ತರವಾದ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.
Rĩrĩa Jesũ aiguire ũguo-rĩ, akĩgega, akĩĩra arĩa maamumĩte thuutha atĩrĩ, “Ngũmwĩra atĩrĩ na ma, ndionete mũndũ o na ũrĩkũ gũkũ Isiraeli ũrĩ na wĩtĩkio mũnene ũũ.
11 ೧೧ ಇದಲ್ಲದೆ ನಿಮಗೆ ಹೇಳುವುದೇನಂದರೆ ಪೂರ್ವ ಪಶ್ಚಿಮ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಎಂಬುವವರ ಸಂಗಡ ಊಟಕ್ಕೆ ಕುಳಿತುಕೊಳ್ಳುವರು;
Ngũmwĩra atĩrĩ, aingĩ nĩmagooka kuuma mwena wa irathĩro na wa ithũĩro, na nĩmagaikara iruga-inĩ hamwe na Iburahĩmu, na Isaaka, na Jakubu, ũthamaki-inĩ wa igũrũ.
12 ೧೨ ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ಎಸೆಯಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು” ಎಂದು ಹೇಳಿದನು.
No arĩa marĩ a ũthamaki ũcio nĩmagaikio nja, kũu nduma-inĩ, kũrĩa gũgaakorwo kĩrĩro na kũhagarania magego.”
13 ೧೩ ಬಳಿಕ ಯೇಸು ಆ ಶತಾಧಿಪತಿಗೆ, “ನೀನು ನಂಬಿದಂತೆ ನಿನಗಾಗಲಿ, ಹೋಗು” ಎಂದು ಹೇಳಿದನು. ಅದೇ ಗಳಿಗೆಯಲ್ಲಿ ಅವನ ಆಳಿಗೆ ಗುಣವಾಯಿತು.
Nake Jesũ agĩcooka akĩĩra mũnene ũcio wa thigari igana atĩrĩ, “Thiĩ! Nĩũgwĩkĩrwo o ũguo wĩtĩkĩtie.” Nayo ndungata yake ĩkĩhonio o ithaa rĩu.
14 ೧೪ ತರುವಾಯ ಯೇಸು ಪೇತ್ರನ ಮನೆಗೆ ಬಂದಾಗ, ಪೇತ್ರನ ಅತ್ತೆ ಜ್ವರದಲ್ಲಿ ಮಲಗಿರುವುದನ್ನು ಕಂಡು, ಆತನು ಆಕೆಯ ಕೈಯನ್ನು ಮುಟ್ಟಿದನು ತಕ್ಷಣವೇ
Rĩrĩa Jesũ aatoonyire nyũmba ya Petero, akĩona atĩ nyina wa mũtumia wa Petero aarĩ mũrũaru mũrimũ wa kũhiũha mwĩrĩ, agakoma gĩtanda-inĩ.
15 ೧೫ ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆ ಎದ್ದು ಆತನಿಗೆ ಉಪಚಾರಮಾಡಿದಳು.
Akĩmũhutia guoko, nake agĩtiga kũhiũha mwĩrĩ, akĩarahũka, akĩambĩrĩria kũmũtungatĩra.
16 ೧೬ ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರೆತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಅಸ್ವಸ್ಥರಾದವರೆಲ್ಲರನ್ನು ವಾಸಿಮಾಡಿದನು.
Hwaĩ-inĩ ũcio, andũ aingĩ arĩa maarĩ na ndaimono makĩrehwo kũrĩ we, nake akĩingata maroho macio na kuuga o kiugo, na akĩhonia arĩa othe maarĩ arũaru.
17 ೧೭ ಇದರಿಂದ “ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು” ಎಂದು ಯೆಶಾಯನೆಂಬ ಪ್ರವಾದಿ ನುಡಿದಂತಹ ಮಾತು ಹೀಗೆ ನೆರವೇರಿತು.
Ũhoro ũyũ warĩ wa kũhingia ũrĩa kwaarĩtio na kanua ka mũnabii Isaia, rĩrĩa oigire atĩrĩ: “We mwene nĩoire wonje witũ, na akĩeheria mĩrimũ iitũ.”
18 ೧೮ ಯೇಸು ತನ್ನ ಸುತ್ತಲಿದ್ದ ಜನಗಳ ದೊಡ್ಡ ಗುಂಪುಗಳನ್ನು ಕಂಡು ಗಲಿಲಾಯ ಸಮುದ್ರದ ಆಚೆ ಭಾಗಕ್ಕೆ ಹೊರಟು ಹೋಗಬೇಕೆಂದು ಅಪ್ಪಣೆ ಕೊಟ್ಟನು.
Rĩrĩa Jesũ oonire gĩkundi kĩa andũ arĩa maamũthiũrũrũkĩirie, agĩathana maringe mũrĩmo ũrĩa ũngĩ wa iria.
19 ೧೯ ಆಗ ಒಬ್ಬ ಶಾಸ್ತ್ರಿಯು ಹತ್ತಿರಕ್ಕೆ ಬಂದು ಆತನಿಗೆ, “ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಲು,
Hĩndĩ ĩyo mũrutani ũmwe wa watho agĩũka harĩ we, akĩmwĩra atĩrĩ, “Mũrutani, nĩndĩkũrũmagĩrĩra kũrĩa guothe ũrĩthiiaga.”
20 ೨೦ ಯೇಸು ಅವನಿಗೆ, “ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು.
Nake Jesũ akĩmũcookeria atĩrĩ, “Mbwe nĩ irĩ marima, na nyoni cia rĩera-inĩ nĩ irĩ itara, no Mũrũ wa Mũndũ ndarĩ handũ angĩigĩrĩra mũtwe wake.”
21 ೨೧ ಶಿಷ್ಯರಲ್ಲಿ ಬೇರೊಬ್ಬನು, “ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅನ್ನಲಾಗಿ,
Nake mũrutwo ũngĩ akĩmwĩra atĩrĩ, “Mwathani, reke nyambe thiĩ ngathike baba.”
22 ೨೨ ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ” ಎಂದು ಹೇಳಿದನು.
Nowe Jesũ akĩmwĩra atĩrĩ, “Nũmĩrĩra, na ũreke arĩa akuũ mathike akuũ ao ene.”
23 ೨೩ ಯೇಸು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.
Hĩndĩ ĩyo agĩtoonya gatarũ, nao arutwo ake makĩmũrũmĩrĩra.
24 ೨೪ ಅವರು ಹೋಗುತ್ತಿರುವಾಗ ಸಮುದ್ರವು ಅಲ್ಲೋಲಕಲ್ಲೋಲವಾಗಿ ದೋಣಿಯು ಅಲೆಗಳಿಂದ ಮುಚ್ಚುವಂತೆ ಆಯಿತು; ಆದರೆ ಯೇಸು ನಿದ್ರಿಸುತ್ತಿದ್ದನು.
Na rĩrĩ, gũkĩgĩa kĩhuhũkanio kĩnene gĩteerĩgĩrĩirwo kũu iria-inĩ, gĩgĩtũma gatarũ kende kũhubwo nĩ makũmbĩ ma maaĩ. No Jesũ aarĩ toro.
25 ೨೫ ಆಗ ಶಿಷ್ಯರು ಆತನ ಹತ್ತಿರ ಬಂದು ಆತನನ್ನು ಎಬ್ಬಿಸಿ, “ಕರ್ತನೇ, ನಮ್ಮನ್ನು ಕಾಪಾಡು, ಸಾಯುತ್ತಿದ್ದೇವೆ” ಎಂದರು.
Nao arutwo magĩthiĩ, makĩmũũkĩria, makĩmwĩra atĩrĩ, “Mwathani, tũhonokie! Nĩtũkũũrĩra maaĩ-inĩ!”
26 ೨೬ ಆತನು ಅವರಿಗೆ, “ಅಲ್ಪ ವಿಶ್ವಾಸಿಗಳೇ, ಏಕೆ ಹೆದರುತ್ತೀರಿ?” ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಅಲ್ಲಿ ಸಂಪೂರ್ಣವಾಗಿ ಶಾಂತವಾಯಿತು.
Nake agĩcookia atĩrĩ, “Inyuĩ mũrĩ a wĩtĩkio mũnini, nĩ kĩĩ gĩgũtũma mwĩtigĩre ũguo?” Thuutha ũcio agĩũkĩra, agĩkũũma rũhuho na makũmbĩ macio, nakuo gũkĩhoorera biũ.
27 ೨೭ ಆ ಜನರು ಬೆರಗಾಗಿ, “ಈತನು ಎಂಥವನಾಗಿರಬಹುದು! ಗಾಳಿಯೂ ಸಮುದ್ರವೂ ಸಹ ಈತನಿಗೆ ವಿಧೇಯವಾಗುತ್ತವಲ್ಲಾ” ಅಂದರು.
Andũ acio makĩgega, makĩũria atĩrĩ, “Kaĩ mũndũ ũyũ akĩrĩ ũ atĩ o na rũhuho na makũmbĩ ma maaĩ nĩimwathĩkagĩra?”
28 ೨೮ ಆಮೇಲೆ ಆತನು ಆಚೇದಡಕ್ಕೆ ಗದರೇನರ ಸೀಮೆಗೆ ಬಂದಾಗ ದೆವ್ವಹಿಡಿದವರಿಬ್ಬರು ಸಮಾಧಿಯ ಗವಿಗಳೊಳಗಿಂದ ಹೊರಟು ಆತನೆದುರಿಗೆ ಬಂದರು. ಅವರು ಮಹಾಕ್ರೂರಿಗಳಾಗಿದ್ದುದರಿಂದ ಆ ದಾರಿಯಲ್ಲಿ ಯಾರೂ ತಿರುಗಾಡುತ್ತಿರಲಿಲ್ಲ.
Rĩrĩa aakinyire rũgongo rwa bũrũri wa Agadari-rĩ, agĩtũngwo nĩ andũ eerĩ maarĩ na ndaimono, moimĩte mbĩrĩra-inĩ. Maarĩ na ũũru mũingĩ mũno, atĩ gũtirĩ mũndũ ũngĩagerire njĩra ĩyo.
29 ೨೯ ಅವರು, “ದೇವರ ಕುಮಾರನೇ, ನಮ್ಮ ಗೊಡವೆ ನಿನಗೇಕೆ? ಕಾಲ ಬರುವುದಕ್ಕಿಂತ ಮೊದಲೇ ನಮ್ಮನ್ನು ದಂಡಿಸುವುದಕ್ಕೆ ಇಲ್ಲಿಗೆ ಬಂದಿರುವೆಯಾ” ಎಂದು ಕೂಗಿದರು.
Nao makĩanĩrĩra, makĩũria atĩrĩ, “Ũrenda atĩa na ithuĩ, wee Mũrũ wa Ngai. Woka gũkũ gũtũnyariira ihinda rĩrĩa rĩamũre rĩtanakinya?”
30 ೩೦ ಅವರಿಂದ ಸ್ವಲ್ಪ ದೂರದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು.
Nĩ haarĩ na rũũru rũnene rwa ngũrwe rwarĩithagio handũ hataarĩ haraaya na hau maarĩ.
31 ೩೧ ಆ ದೆವ್ವಗಳು, “ನೀನು ನಮ್ಮನ್ನು ಇವರೊಳಗಿಂದ ಹೊರಡಿಸುವುದಾದರೆ ಆ ಹಂದಿಯ ಗುಂಪಿನೊಳಗೆ ನಮ್ಮನ್ನು ಕಳುಹಿಸಿಕೊಡು” ಎಂದು ಬೇಡಿಕೊಂಡವು.
Nacio ndaimono igĩthaitha Jesũ, ikĩmwĩra atĩrĩ, “Akorwo nĩũgũtũingata-rĩ, tũtũme kũrĩ rũũru rũũrĩa rwa ngũrwe.”
32 ೩೨ ಆತನು ಅವುಗಳಿಗೆ, “ಹೋಗಿರಿ” ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಅ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಸತ್ತು ಹೋದವು.
Nake agĩciĩra atĩrĩ, “Thiĩi!” Nĩ ũndũ ũcio ikiuma, igĩtoonya ngũrwe, naruo rũũru ruothe rũgĩikũrũka kĩharũrũka-inĩ na ihenya, rũkĩgũa iria thĩinĩ, rũgĩkuĩra maaĩ-inĩ.
33 ೩೩ ಹಂದಿಗಳನ್ನು ಮೇಯಿಸುವವರು ಊರೊಳಕ್ಕೆ ಓಡಿಹೋಗಿ ಇದೆಲ್ಲವನ್ನು ದೆವ್ವಹಿಡಿದವರ ಸಂಗತಿ ಸಹಿತವಾಗಿ ತಿಳಿಸಲು;
Arĩa maarĩithagia ngũrwe icio makĩũra, magĩthiĩ itũũra-inĩ, makĩheana maũndũ macio mothe o na ũrĩa gwekĩkĩte kũrĩ andũ arĩa maarĩ na ndaimono.
34 ೩೪ ಆಗ ಊರಿನವರೆಲ್ಲರೂ ಯೇಸುವನ್ನು ಸಂಧಿಸಲು ಹೊರಟುಬಂದು ಆತನನ್ನು ಕಂಡು ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.
Hĩndĩ ĩyo itũũra rĩothe rĩkiumagara rĩgatũnge Jesũ. Na hĩndĩ ĩrĩa maamuonire, makĩmũthaitha oime rũgongo rwao.

< ಮತ್ತಾಯನು 8 >