< ಮತ್ತಾಯನು 4 >
1 ೧ ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ದೇವರಾತ್ಮನು ಆತನನ್ನು ಅಡವಿಗೆ ನಡೆಸಿದನು.
ತತಃ ಪರಂ ಯೀಶುಃ ಪ್ರತಾರಕೇಣ ಪರೀಕ್ಷಿತೋ ಭವಿತುಮ್ ಆತ್ಮನಾ ಪ್ರಾನ್ತರಮ್ ಆಕೃಷ್ಟಃ
2 ೨ ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.
ಸನ್ ಚತ್ವಾರಿಂಶದಹೋರಾತ್ರಾನ್ ಅನಾಹಾರಸ್ತಿಷ್ಠನ್ ಕ್ಷುಧಿತೋ ಬಭೂವ|
3 ೩ ಆಗ ಸೈತಾನನು ಆತನ ಬಳಿಗೆ ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳಿಗೆ ರೊಟ್ಟಿಯಾಗುವಂತೆ ಅಪ್ಪಣೆಕೊಡು” ಎಂದು ಹೇಳಲು,
ತದಾನೀಂ ಪರೀಕ್ಷಿತಾ ತತ್ಸಮೀಪಮ್ ಆಗತ್ಯ ವ್ಯಾಹೃತವಾನ್, ಯದಿ ತ್ವಮೀಶ್ವರಾತ್ಮಜೋ ಭವೇಸ್ತರ್ಹ್ಯಾಜ್ಞಯಾ ಪಾಷಾಣಾನೇತಾನ್ ಪೂಪಾನ್ ವಿಧೇಹಿ|
4 ೪ ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು.
ತತಃ ಸ ಪ್ರತ್ಯಬ್ರವೀತ್, ಇತ್ಥಂ ಲಿಖಿತಮಾಸ್ತೇ, "ಮನುಜಃ ಕೇವಲಪೂಪೇನ ನ ಜೀವಿಷ್ಯತಿ, ಕಿನ್ತ್ವೀಶ್ವರಸ್ಯ ವದನಾದ್ ಯಾನಿ ಯಾನಿ ವಚಾಂಸಿ ನಿಃಸರನ್ತಿ ತೈರೇವ ಜೀವಿಷ್ಯತಿ| "
5 ೫ ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ಮೇಲೆ ನಿಲ್ಲಿಸಿ
ತದಾ ಪ್ರತಾರಕಸ್ತಂ ಪುಣ್ಯನಗರಂ ನೀತ್ವಾ ಮನ್ದಿರಸ್ಯ ಚೂಡೋಪರಿ ನಿಧಾಯ ಗದಿತವಾನ್,
6 ೬ ಯೇಸುವಿಗೆ, “ನೀನು ದೇವರ ಮಗನೇ ಆಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು; ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
ತ್ವಂ ಯದಿಶ್ವರಸ್ಯ ತನಯೋ ಭವೇಸ್ತರ್ಹೀತೋಽಧಃ ಪತ, ಯತ ಇತ್ಥಂ ಲಿಖಿತಮಾಸ್ತೇ, ಆದೇಕ್ಷ್ಯತಿ ನಿಜಾನ್ ದೂತಾನ್ ರಕ್ಷಿತುಂ ತ್ವಾಂ ಪರಮೇಶ್ವರಃ| ಯಥಾ ಸರ್ವ್ವೇಷು ಮಾರ್ಗೇಷು ತ್ವದೀಯಚರಣದ್ವಯೇ| ನ ಲಗೇತ್ ಪ್ರಸ್ತರಾಘಾತಸ್ತ್ವಾಂ ಘರಿಷ್ಯನ್ತಿ ತೇ ಕರೈಃ||
7 ೭ ಅದಕ್ಕೆ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬುದಾಗಿಯೂ ಬರೆದಿದೆ” ಅಂದನು.
ತದಾನೀಂ ಯೀಶುಸ್ತಸ್ಮೈ ಕಥಿತವಾನ್ ಏತದಪಿ ಲಿಖಿತಮಾಸ್ತೇ, "ತ್ವಂ ನಿಜಪ್ರಭುಂ ಪರಮೇಶ್ವರಂ ಮಾ ಪರೀಕ್ಷಸ್ವ| "
8 ೮ ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ,
ಅನನ್ತರಂ ಪ್ರತಾರಕಃ ಪುನರಪಿ ತಮ್ ಅತ್ಯುಞ್ಚಧರಾಧರೋಪರಿ ನೀತ್ವಾ ಜಗತಃ ಸಕಲರಾಜ್ಯಾನಿ ತದೈಶ್ವರ್ಯ್ಯಾಣಿ ಚ ದರ್ಶಯಾಶ್ಚಕಾರ ಕಥಯಾಞ್ಚಕಾರ ಚ,
9 ೯ ಯೇಸುವಿಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಅಂದನು.
ಯದಿ ತ್ವಂ ದಣ್ಡವದ್ ಭವನ್ ಮಾಂ ಪ್ರಣಮೇಸ್ತರ್ಹ್ಯಹಮ್ ಏತಾನಿ ತುಭ್ಯಂ ಪ್ರದಾಸ್ಯಾಮಿ|
10 ೧೦ ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
ತದಾನೀಂ ಯೀಶುಸ್ತಮವೋಚತ್, ದೂರೀಭವ ಪ್ರತಾರಕ, ಲಿಖಿತಮಿದಮ್ ಆಸ್ತೇ, "ತ್ವಯಾ ನಿಜಃ ಪ್ರಭುಃ ಪರಮೇಶ್ವರಃ ಪ್ರಣಮ್ಯಃ ಕೇವಲಃ ಸ ಸೇವ್ಯಶ್ಚ| "
11 ೧೧ ಆಗ ಸೈತಾನನು ಆತನನ್ನು ಬಿಟ್ಟು ಹೊರಟು ಹೋದನು, ಆಗ ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.
ತತಃ ಪ್ರತಾರಕೇಣ ಸ ಪರ್ಯ್ಯತ್ಯಾಜಿ, ತದಾ ಸ್ವರ್ಗೀಯದೂತೈರಾಗತ್ಯ ಸ ಸಿಷೇವೇ|
12 ೧೨ ಯೋಹಾನನು ಸೆರೆಯಾದನು ಎಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟು ಹೋದನು.
ತದನನ್ತರಂ ಯೋಹನ್ ಕಾರಾಯಾಂ ಬಬನ್ಧೇ, ತದ್ವಾರ್ತ್ತಾಂ ನಿಶಮ್ಯ ಯೀಶುನಾ ಗಾಲೀಲ್ ಪ್ರಾಸ್ಥೀಯತ|
13 ೧೩ ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್ ಮತ್ತು ನಫ್ತಾಲಿಯರ ಗಡಿ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ವಾಸಿಸತೊಡಗಿದನು.
ತತಃ ಪರಂ ಸ ನಾಸರನ್ನಗರಂ ವಿಹಾಯ ಜಲಘೇಸ್ತಟೇ ಸಿಬೂಲೂನ್ನಪ್ತಾಲೀ ಏತಯೋರುವಭಯೋಃ ಪ್ರದೇಶಯೋಃ ಸೀಮ್ನೋರ್ಮಧ್ಯವರ್ತ್ತೀ ಯ: ಕಫರ್ನಾಹೂಮ್ ತನ್ನಗರಮ್ ಇತ್ವಾ ನ್ಯವಸತ್|
14 ೧೪ ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿರುವ ಮಾತು ನೆರವೇರಿತು; ಆ ಮಾತು ಏನೆಂದರೆ,
ತಸ್ಮಾತ್, ಅನ್ಯಾದೇಶೀಯಗಾಲೀಲಿ ಯರ್ದ್ದನ್ಪಾರೇಽಬ್ಧಿರೋಧಸಿ| ನಪ್ತಾಲಿಸಿಬೂಲೂನ್ದೇಶೌ ಯತ್ರ ಸ್ಥಾನೇ ಸ್ಥಿತೌ ಪುರಾ|
15 ೧೫ “ಜೆಬುಲೋನ್ ಸೀಮೆ ಮತ್ತು ನಫ್ತಾಲಿ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ,
ತತ್ರತ್ಯಾ ಮನುಜಾ ಯೇ ಯೇ ಪರ್ಯ್ಯಭ್ರಾಮ್ಯನ್ ತಮಿಸ್ರಕೇ| ತೈರ್ಜನೈರ್ಬೃಹದಾಲೋಕಃ ಪರಿದರ್ಶಿಷ್ಯತೇ ತದಾ| ಅವಸನ್ ಯೇ ಜನಾ ದೇಶೇ ಮೃತ್ಯುಚ್ಛಾಯಾಸ್ವರೂಪಕೇ| ತೇಷಾಮುಪರಿ ಲೋಕಾನಾಮಾಲೋಕಃ ಸಂಪ್ರಕಾಶಿತಃ||
16 ೧೬ ಹೀಗೆ ಕತ್ತಲಲ್ಲಿ ವಾಸಿಸಿದ ಈ ಸೀಮೆಯ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣದ ಛಾಯೆ ನೆರೆದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಳಕು ಉದಯವಾಯಿತು” ಎಂಬುದು.
ಯದೇತದ್ವಚನಂ ಯಿಶಯಿಯಭವಿಷ್ಯದ್ವಾದಿನಾ ಪ್ರೋಕ್ತಂ, ತತ್ ತದಾ ಸಫಲಮ್ ಅಭೂತ್|
17 ೧೭ ಅಂದಿನಿಂದ ಯೇಸು, “ಪಶ್ಚಾತ್ತಾಪಪಡಿರಿ ಪರಲೋಕ ರಾಜ್ಯವು ಸಮೀಪಿಸಿತು” ಎಂದು ಸಾರುವುದಕ್ಕೆ ಪ್ರಾರಂಭಿಸಿದನು.
ಅನನ್ತರಂ ಯೀಶುಃ ಸುಸಂವಾದಂ ಪ್ರಚಾರಯನ್ ಏತಾಂ ಕಥಾಂ ಕಥಯಿತುಮ್ ಆರೇಭೇ, ಮನಾಂಸಿ ಪರಾವರ್ತ್ತಯತ, ಸ್ವರ್ಗೀಯರಾಜತ್ವಂ ಸವಿಧಮಭವತ್|
18 ೧೮ ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದು ಹೋಗುವಾಗ ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ಸಹೋದರನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುವುದನ್ನು ಕಂಡನು; ಅವರು ಬೆಸ್ತರಾಗಿದ್ದರು.
ತತಃ ಪರಂ ಯೀಶು ರ್ಗಾಲೀಲೋ ಜಲಧೇಸ್ತಟೇನ ಗಚ್ಛನ್ ಗಚ್ಛನ್ ಆನ್ದ್ರಿಯಸ್ತಸ್ಯ ಭ್ರಾತಾ ಶಿಮೋನ್ ಅರ್ಥತೋ ಯಂ ಪಿತರಂ ವದನ್ತಿ ಏತಾವುಭೌ ಜಲಘೌ ಜಾಲಂ ಕ್ಷಿಪನ್ತೌ ದದರ್ಶ, ಯತಸ್ತೌ ಮೀನಧಾರಿಣಾವಾಸ್ತಾಮ್|
19 ೧೯ ಅವರಿಗೆ ಆತನು, “ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ,
ತದಾ ಸ ತಾವಾಹೂಯ ವ್ಯಾಜಹಾರ, ಯುವಾಂ ಮಮ ಪಶ್ಚಾದ್ ಆಗಚ್ಛತಂ, ಯುವಾಮಹಂ ಮನುಜಧಾರಿಣೌ ಕರಿಷ್ಯಾಮಿ|
20 ೨೦ ತಕ್ಷಣ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
ತೇನೈವ ತೌ ಜಾಲಂ ವಿಹಾಯ ತಸ್ಯ ಪಶ್ಚಾತ್ ಆಗಚ್ಛತಾಮ್|
21 ೨೧ ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು.
ಅನನ್ತರಂ ತಸ್ಮಾತ್ ಸ್ಥಾನಾತ್ ವ್ರಜನ್ ವ್ರಜನ್ ಸಿವದಿಯಸ್ಯ ಸುತೌ ಯಾಕೂಬ್ ಯೋಹನ್ನಾಮಾನೌ ದ್ವೌ ಸಹಜೌ ತಾತೇನ ಸಾರ್ದ್ಧಂ ನೌಕೋಪರಿ ಜಾಲಸ್ಯ ಜೀರ್ಣೋದ್ಧಾರಂ ಕುರ್ವ್ವನ್ತೌ ವೀಕ್ಷ್ಯ ತಾವಾಹೂತವಾನ್|
22 ೨೨ ಕೂಡಲೆ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
ತತ್ಕ್ಷಣಾತ್ ತೌ ನಾವಂ ಸ್ವತಾತಞ್ಚ ವಿಹಾಯ ತಸ್ಯ ಪಶ್ಚಾದ್ಗಾಮಿನೌ ಬಭೂವತುಃ|
23 ೨೩ ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.
ಅನನ್ತರಂ ಭಜನಭವನೇ ಸಮುಪದಿಶನ್ ರಾಜ್ಯಸ್ಯ ಸುಸಂವಾದಂ ಪ್ರಚಾರಯನ್ ಮನುಜಾನಾಂ ಸರ್ವ್ವಪ್ರಕಾರಾನ್ ರೋಗಾನ್ ಸರ್ವ್ವಪ್ರಕಾರಪೀಡಾಶ್ಚ ಶಮಯನ್ ಯೀಶುಃ ಕೃತ್ಸ್ನಂ ಗಾಲೀಲ್ದೇಶಂ ಭ್ರಮಿತುಮ್ ಆರಭತ|
24 ೨೪ ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು.
ತೇನ ಕೃತ್ಸ್ನಸುರಿಯಾದೇಶಸ್ಯ ಮಧ್ಯಂ ತಸ್ಯ ಯಶೋ ವ್ಯಾಪ್ನೋತ್, ಅಪರಂ ಭೂತಗ್ರಸ್ತಾ ಅಪಸ್ಮಾರರ್ಗೀಣಃ ಪಕ್ಷಾಧಾತಿಪ್ರಭೃತಯಶ್ಚ ಯಾವನ್ತೋ ಮನುಜಾ ನಾನಾವಿಧವ್ಯಾಧಿಭಿಃ ಕ್ಲಿಷ್ಟಾ ಆಸನ್, ತೇಷು ಸರ್ವ್ವೇಷು ತಸ್ಯ ಸಮೀಪಮ್ ಆನೀತೇಷು ಸ ತಾನ್ ಸ್ವಸ್ಥಾನ್ ಚಕಾರ|
25 ೨೫ ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು.
ಏತೇನ ಗಾಲೀಲ್-ದಿಕಾಪನಿ-ಯಿರೂಶಾಲಮ್-ಯಿಹೂದೀಯದೇಶೇಭ್ಯೋ ಯರ್ದ್ದನಃ ಪಾರಾಞ್ಚ ಬಹವೋ ಮನುಜಾಸ್ತಸ್ಯ ಪಶ್ಚಾದ್ ಆಗಚ್ಛನ್|