< ಮತ್ತಾಯನು 3 >

1 ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನೆಂಬುವವನು ಯೂದಾಯದ ಅಡವಿಯಲ್ಲಿ ಬೋಧನೆ ಮಾಡುತ್ತಾ,
তদানোং যোহ্ন্নামা মজ্জযিতা যিহূদীযদেশস্য প্ৰান্তৰম্ উপস্থায প্ৰচাৰযন্ কথযামাস,
2 ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.”
মনাংসি পৰাৱৰ্ত্তযত, স্ৱৰ্গীযৰাজৎৱং সমীপমাগতম্|
3 “‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಮಾರ್ಗವನ್ನು ಸರಾಗ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ” ಎಂಬುದಾಗಿ ಪ್ರವಾದಿಯಾದ ಯೆಶಾಯನಿಂದ ಸೂಚಿತನಾದವನು ಇವನೇ.
পৰমেশস্য পন্থানং পৰিষ্কুৰুত সৰ্ৱ্ৱতঃ| তস্য ৰাজপথাংশ্চৈৱ সমীকুৰুত সৰ্ৱ্ৱথা| ইত্যেতৎ প্ৰান্তৰে ৱাক্যং ৱদতঃ কস্যচিদ্ ৰৱঃ||
4 ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಿತ್ತು, ಅವನು ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆ ಮತ್ತು ಕಾಡುಜೇನು ಅವನ ಆಹಾರವಾಗಿತ್ತು.
এতদ্ৱচনং যিশযিযভৱিষ্যদ্ৱাদিনা যোহনমুদ্দিশ্য ভাষিতম্| যোহনো ৱসনং মহাঙ্গৰোমজং তস্য কটৌ চৰ্ম্মকটিবন্ধনং; স চ শূককীটান্ মধু চ ভুক্তৱান্|
5 ಆಗ ಯೆರೂಸಲೇಮಿನವರು, ಎಲ್ಲಾ ಯೂದಾಯದವರೂ ಮತ್ತು ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯ ಜನರು ಅವನ ಬಳಿಗೆ ಹೊರಟು ಬಂದು,
তদানীং যিৰূশালম্নগৰনিৱাসিনঃ সৰ্ৱ্ৱে যিহূদিদেশীযা যৰ্দ্দন্তটিন্যা উভযতটস্থাশ্চ মানৱা বহিৰাগত্য তস্য সমীপে
6 ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
স্ৱীযং স্ৱীযং দুৰিতম্ অঙ্গীকৃত্য তস্যাং যৰ্দ্দনি তেন মজ্জিতা বভূৱুঃ|
7 ಆದರೆ ಯೋಹಾನನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ ಬರುವುದನ್ನು ಕಂಡು ಅವರಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರಾರು?
অপৰং বহূন্ ফিৰূশিনঃ সিদূকিনশ্চ মনুজান্ মংক্তুং স্ৱসমীপম্ আগচ্ছ্তো ৱিলোক্য স তান্ অভিদধৌ, ৰে ৰে ভুজগৱংশা আগামীনঃ কোপাৎ পলাযিতুং যুষ্মান্ কশ্চেতিতৱান্?
8 ನೀವು ಮಾನಸಾಂತರ ಹೊಂದಿರುವಿರಿ ಎಂಬುದಕ್ಕೆ ಯೋಗ್ಯವಾದ ಫಲವನ್ನು ತೋರಿಸಿರಿ.
মনঃপৰাৱৰ্ত্তনস্য সমুচিতং ফলং ফলত|
9 ಅಬ್ರಹಾಮನು ನಮ್ಮ ತಂದೆ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗಾಗಿ ಈ ಕಲ್ಲುಗಳಿಂದಲೂ ಮಕ್ಕಳನ್ನು ಸೃಷ್ಟಿಮಾಡಬಲ್ಲನೆಂದು ನಿಮಗೆ ಹೇಳುತ್ತೇನೆ.
কিন্ত্ৱস্মাকং তাত ইব্ৰাহীম্ অস্তীতি স্ৱেষু মনঃসু চীন্তযন্তো মা ৱ্যাহৰত| যতো যুষ্মান্ অহং ৱদামি, ঈশ্ৱৰ এতেভ্যঃ পাষাণেভ্য ইব্ৰাহীমঃ সন্তানান্ উৎপাদযিতুং শক্নোতি|
10 ೧೦ ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಆದ್ದರಿಂದ ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು.
১০অপৰং পাদপানাং মূলে কুঠাৰ ইদানীমপি লগন্ আস্তে, তস্মাদ্ যস্মিন্ পাদপে উত্তমং ফলং ন ভৱতি, স কৃত্তো মধ্যেঽগ্নিং নিক্ষেপ্স্যতে|
11 ೧೧ ನಾನಂತೂ ಮಾನಸಾಂತರಕ್ಕಾಗಿ ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನ್ನ ನಂತರ ಬರುವವನು ನನಗಿಂತ ಶಕ್ತನು; ಆತನ ಪಾದರಕ್ಷೆಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನಮಾಡಿಸುವನು.
১১অপৰম্ অহং মনঃপৰাৱৰ্ত্তনসূচকেন মজ্জনেন যুষ্মান্ মজ্জযামীতি সত্যং, কিন্তু মম পশ্চাদ্ য আগচ্ছতি, স মত্তোপি মহান্, অহং তদীযোপানহৌ ৱোঢুমপি নহি যোগ্যোস্মি, স যুষ্মান্ ৱহ্নিৰূপে পৱিত্ৰ আত্মনি সংমজ্জযিষ্যতি|
12 ೧೨ ಹೊಟ್ಟನು ತೂರುವ ಮೊರವನ್ನು ಆತನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನು ಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟು ಬಿಡುವನು” ಎಂದು ಹೇಳಿದನು.
১২তস্য কাৰে সূৰ্প আস্তে, স স্ৱীযশস্যানি সম্যক্ প্ৰস্ফোট্য নিজান্ সকলগোধূমান্ সংগৃহ্য ভাণ্ডাগাৰে স্থাপযিষ্যতি, কিংন্তু সৰ্ৱ্ৱাণি ৱুষাণ্যনিৰ্ৱ্ৱাণৱহ্নিনা দাহযিষ্যতি|
13 ೧೩ ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳೆಯ ಬಳಿ ಬಂದನು.
১৩অনন্তৰং যীশু ৰ্যোহনা মজ্জিতো ভৱিতুং গালীল্প্ৰদেশাদ্ যৰ্দ্দনি তস্য সমীপম্ আজগাম|
14 ೧೪ ಆತನಿಗೆ ಯೋಹಾನನು ತಡೆಯುತ್ತಾ, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿತ್ತು, ಆದರೆ ನೀನು ನನ್ನ ಬಳಿಗೆ ಬರುವುದೇಕೆ?” ಎಂದು ಹೇಳಿದಕ್ಕೆ,
১৪কিন্তু যোহন্ তং নিষিধ্য বভাষে, ৎৱং কিং মম সমীপম্ আগচ্ছসি? ৱৰং ৎৱযা মজ্জনং মম প্ৰযোজনম্ আস্তে|
15 ೧೫ ಯೇಸು ಪ್ರತ್ಯುತ್ತರವಾಗಿ ಅವನಿಗೆ, “ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ನೀತಿಯನ್ನು ನೆರವೇರಿಸತಕ್ಕದ್ದಾಗಿದೆ” ಎಂದು ಹೇಳಿದಾಗ ಯೋಹಾನನು ಒಪ್ಪಿಕೊಂಡನು.
১৫তদানীং যীশুঃ প্ৰত্যৱোচৎ; ঈদানীম্ অনুমন্যস্ৱ, যত ইত্থং সৰ্ৱ্ৱধৰ্ম্মসাধনম্ অস্মাকং কৰ্ত্তৱ্যং, ততঃ সোঽন্ৱমন্যত|
16 ೧೬ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನೀರಿನಿಂದ ಮೇಲಕ್ಕೆ ಬಂದ ಕೂಡಲೇ ಇಗೋ, ಆತನಿಗಾಗಿ ಪರಲೋಕವು ತೆರೆಯಿತು; ಮತ್ತು ದೇವರ ಆತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿದು ಬರುವುದನ್ನು ಕಂಡನು.
১৬অনন্তৰং যীশুৰম্মসি মজ্জিতুঃ সন্ তৎক্ষণাৎ তোযমধ্যাদ্ উত্থায জগাম, তদা জীমূতদ্ৱাৰে মুক্তে জাতে, স ঈশ্ৱৰস্যাত্মানং কপোতৱদ্ অৱৰুহ্য স্ৱোপৰ্য্যাগচ্ছন্তং ৱীক্ষাঞ্চক্ৰে|
17 ೧೭ ಆಗ “ಈತನು ನನ್ನ ಪ್ರಿಯ ಮಗನು, ಈತನನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ವಾಣಿ ಪರಲೋಕದಿಂದ ಕೇಳಿಬಂದಿತು.
১৭অপৰম্ এষ মম প্ৰিযঃ পুত্ৰ এতস্মিন্নেৱ মম মহাসন্তোষ এতাদৃশী ৱ্যোমজা ৱাগ্ বভূৱ|

< ಮತ್ತಾಯನು 3 >