< ಮತ್ತಾಯನು 28 >

1 ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ ಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು.
ತತಃ ಪರಂ ವಿಶ್ರಾಮವಾರಸ್ಯ ಶೇಷೇ ಸಪ್ತಾಹಪ್ರಥಮದಿನಸ್ಯ ಪ್ರಭೋತೇ ಜಾತೇ ಮಗ್ದಲೀನೀ ಮರಿಯಮ್ ಅನ್ಯಮರಿಯಮ್ ಚ ಶ್ಮಶಾನಂ ದ್ರಷ್ಟುಮಾಗತಾ|
2 ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು.
ತದಾ ಮಹಾನ್ ಭೂಕಮ್ಪೋಽಭವತ್; ಪರಮೇಶ್ವರೀಯದೂತಃ ಸ್ವರ್ಗಾದವರುಹ್ಯ ಶ್ಮಶಾನದ್ವಾರಾತ್ ಪಾಷಾಣಮಪಸಾರ್ಯ್ಯ ತದುಪರ್ಯ್ಯುಪವಿವೇಶ|
3 ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು;
ತದ್ವದನಂ ವಿದ್ಯುದ್ವತ್ ತೇಜೋಮಯಂ ವಸನಂ ಹಿಮಶುಭ್ರಞ್ಚ|
4 ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು.
ತದಾನೀಂ ರಕ್ಷಿಣಸ್ತದ್ಭಯಾತ್ ಕಮ್ಪಿತಾ ಮೃತವದ್ ಬಭೂವಃ|
5 ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು;
ಸ ದೂತೋ ಯೋಷಿತೋ ಜಗಾದ, ಯೂಯಂ ಮಾ ಭೈಷ್ಟ, ಕ್ರುಶಹತಯೀಶುಂ ಮೃಗಯಧ್ವೇ ತದಹಂ ವೇದ್ಮಿ|
6 ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ;
ಸೋಽತ್ರ ನಾಸ್ತಿ, ಯಥಾವದತ್ ತಥೋತ್ಥಿತವಾನ್; ಏತತ್ ಪ್ರಭೋಃ ಶಯನಸ್ಥಾನಂ ಪಶ್ಯತ|
7 ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು.
ತೂರ್ಣಂ ಗತ್ವಾ ತಚ್ಛಿಷ್ಯಾನ್ ಇತಿ ವದತ, ಸ ಶ್ಮಶಾನಾದ್ ಉದತಿಷ್ಠತ್, ಯುಷ್ಮಾಕಮಗ್ರೇ ಗಾಲೀಲಂ ಯಾಸ್ಯತಿ ಯೂಯಂ ತತ್ರ ತಂ ವೀಕ್ಷಿಷ್ಯಧ್ವೇ, ಪಶ್ಯತಾಹಂ ವಾರ್ತ್ತಾಮಿಮಾಂ ಯುಷ್ಮಾನವಾದಿಷಂ|
8 ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು.
ತತಸ್ತಾ ಭಯಾತ್ ಮಹಾನನ್ದಾಞ್ಚ ಶ್ಮಶಾನಾತ್ ತೂರ್ಣಂ ಬಹಿರ್ಭೂಯ ತಚ್ಛಿಷ್ಯಾನ್ ವಾರ್ತ್ತಾಂ ವಕ್ತುಂ ಧಾವಿತವತ್ಯಃ| ಕಿನ್ತು ಶಿಷ್ಯಾನ್ ವಾರ್ತ್ತಾಂ ವಕ್ತುಂ ಯಾನ್ತಿ, ತದಾ ಯೀಶು ರ್ದರ್ಶನಂ ದತ್ತ್ವಾ ತಾ ಜಗಾದ,
9 ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು.
ಯುಷ್ಮಾಕಂ ಕಲ್ಯಾಣಂ ಭೂಯಾತ್, ತತಸ್ತಾ ಆಗತ್ಯ ತತ್ಪಾದಯೋಃ ಪತಿತ್ವಾ ಪ್ರಣೇಮುಃ|
10 ೧೦ ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು.
ಯೀಶುಸ್ತಾ ಅವಾದೀತ್, ಮಾ ಬಿಭೀತ, ಯೂಯಂ ಗತ್ವಾ ಮಮ ಭ್ರಾತೃನ್ ಗಾಲೀಲಂ ಯಾತುಂ ವದತ, ತತ್ರ ತೇ ಮಾಂ ದ್ರಕ್ಷ್ಯನ್ತಿ|
11 ೧೧ ಆಗ ಹೆಂಗಸರು ಹೋಗುತ್ತಿರುವಾಗ, ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮುಖ್ಯಯಾಜಕರಿಗೆ ತಿಳಿಸಿದರು.
ಸ್ತ್ರಿಯೋ ಗಚ್ಛನ್ತಿ, ತದಾ ರಕ್ಷಿಣಾಂ ಕೇಚಿತ್ ಪುರಂ ಗತ್ವಾ ಯದ್ಯದ್ ಘಟಿತಂ ತತ್ಸರ್ವ್ವಂ ಪ್ರಧಾನಯಾಜಕಾನ್ ಜ್ಞಾಪಿತವನ್ತಃ|
12 ೧೨ ಯಾಜಕರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆ ಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು,
ತೇ ಪ್ರಾಚೀನೈಃ ಸಮಂ ಸಂಸದಂ ಕೃತ್ವಾ ಮನ್ತ್ರಯನ್ತೋ ಬಹುಮುದ್ರಾಃ ಸೇನಾಭ್ಯೋ ದತ್ತ್ವಾವದನ್,
13 ೧೩ “‘ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿದ್ದಾಗ ಅವನ ಮೃತದೇಹವನ್ನು ಕದ್ದುಕೊಂಡು ಹೋದರು’ ಎಂದು ಹೇಳಿರಿ;
ಅಸ್ಮಾಸು ನಿದ್ರಿತೇಷು ತಚ್ಛಿಷ್ಯಾ ಯಾಮಿನ್ಯಾಮಾಗತ್ಯ ತಂ ಹೃತ್ವಾನಯನ್, ಇತಿ ಯೂಯಂ ಪ್ರಚಾರಯತ|
14 ೧೪ ಈ ಸುದ್ದಿಯು ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದರು.
ಯದ್ಯೇತದಧಿಪತೇಃ ಶ್ರೋತ್ರಗೋಚರೀಭವೇತ್, ತರ್ಹಿ ತಂ ಬೋಧಯಿತ್ವಾ ಯುಷ್ಮಾನವಿಷ್ಯಾಮಃ|
15 ೧೫ ಅದರಂತೆ ಕಾವಲುಗಾರರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆಯೇ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹರಡಿಕೊಂಡಿದೆ.
ತತಸ್ತೇ ಮುದ್ರಾ ಗೃಹೀತ್ವಾ ಶಿಕ್ಷಾನುರೂಪಂ ಕರ್ಮ್ಮ ಚಕ್ರುಃ, ಯಿಹೂದೀಯಾನಾಂ ಮಧ್ಯೇ ತಸ್ಯಾದ್ಯಾಪಿ ಕಿಂವದನ್ತೀ ವಿದ್ಯತೇ|
16 ೧೬ ಆದರೆ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ, ಯೇಸು ತಮಗೆ ಗೊತ್ತುಮಾಡಿದ್ದ ಬೆಟ್ಟಕ್ಕೆ ಹೋಗಿ ಸೇರಿದರು.
ಏಕಾದಶ ಶಿಷ್ಯಾ ಯೀಶುನಿರೂಪಿತಾಗಾಲೀಲಸ್ಯಾದ್ರಿಂ ಗತ್ವಾ
17 ೧೭ ಅವರು ಅಲ್ಲಿ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹಪಟ್ಟರು.
ತತ್ರ ತಂ ಸಂವೀಕ್ಷ್ಯ ಪ್ರಣೇಮುಃ, ಕಿನ್ತು ಕೇಚಿತ್ ಸನ್ದಿಗ್ಧವನ್ತಃ|
18 ೧೮ ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.
ಯೀಶುಸ್ತೇಷಾಂ ಸಮೀಪಮಾಗತ್ಯ ವ್ಯಾಹೃತವಾನ್, ಸ್ವರ್ಗಮೇದಿನ್ಯೋಃ ಸರ್ವ್ವಾಧಿಪತಿತ್ವಭಾರೋ ಮಯ್ಯರ್ಪಿತ ಆಸ್ತೇ|
19 ೧೯ ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.
ಅತೋ ಯೂಯಂ ಪ್ರಯಾಯ ಸರ್ವ್ವದೇಶೀಯಾನ್ ಶಿಷ್ಯಾನ್ ಕೃತ್ವಾ ಪಿತುಃ ಪುತ್ರಸ್ಯ ಪವಿತ್ರಸ್ಯಾತ್ಮನಶ್ಚ ನಾಮ್ನಾ ತಾನವಗಾಹಯತ; ಅಹಂ ಯುಷ್ಮಾನ್ ಯದ್ಯದಾದಿಶಂ ತದಪಿ ಪಾಲಯಿತುಂ ತಾನುಪಾದಿಶತ|
20 ೨೦ ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗುಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು. (aiōn g165)
ಪಶ್ಯತ, ಜಗದನ್ತಂ ಯಾವತ್ ಸದಾಹಂ ಯುಷ್ಮಾಭಿಃ ಸಾಕಂ ತಿಷ್ಠಾಮಿ| ಇತಿ| (aiōn g165)

< ಮತ್ತಾಯನು 28 >