< ಮತ್ತಾಯನು 25 >
1 ೧ “ಪರಲೋಕ ರಾಜ್ಯವು ತಮ್ಮ ದೀಪಾರತಿಗಳನ್ನುತೆಗೆದುಕೊಂಡು ಮದಲಿಂಗನನ್ನು ಸಂಧಿಸುವುದಕ್ಕೆ ಹೊರಟಂತಹ ಹತ್ತು ಮಂದಿ ಕನ್ನಿಕೆಯರಿಗೆ ಹೋಲಿಕೆಯಾಗಿದೆ.
യാ ദശ കന്യാഃ പ്രദീപാൻ ഗൃഹ്ലത്യോ വരം സാക്ഷാത് കർത്തും ബഹിരിതാഃ, താഭിസ്തദാ സ്വർഗീയരാജ്യസ്യ സാദൃശ്യം ഭവിഷ്യതി|
2 ೨ ಅವರಲ್ಲಿ ಐದು ಮಂದಿ ಬುದ್ಧಿವಂತೆಯರು, ಐದು ಮಂದಿ ಬುದ್ಧಿಹೀನರು.
താസാം കന്യാനാം മധ്യേ പഞ്ച സുധിയഃ പഞ്ച ദുർധിയ ആസൻ|
3 ೩ ಅವಿವೇಕಿಗಳು ತಮ್ಮ ದೀಪಾರತಿಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.
യാ ദുർധിയസ്താഃ പ്രദീപാൻ സങ്ഗേ ഗൃഹീത്വാ തൈലം ന ജഗൃഹുഃ,
4 ೪ ಆದರೆ ಬುದ್ಧಿವಂತರಾದ ಕನ್ನಿಕೆಯರು ತಮ್ಮ ದೀಪಾರತಿಗಳೊಂದಿಗೆ ಪಾತ್ರೆಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.
കിന്തു സുധിയഃ പ്രദീപാൻ പാത്രേണ തൈലഞ്ച ജഗൃഹുഃ|
5 ೫ ಮದಲಿಂಗನು ಬರುವುದಕ್ಕೆ ತಡಮಾಡಲು ಅವರೆಲ್ಲರೂ ತೂಕಡಿಸಿ ನಿದ್ರಿಸಿದರು.
അനന്തരം വരേ വിലമ്ബിതേ താഃ സർവ്വാ നിദ്രാവിഷ്ടാ നിദ്രാം ജഗ്മുഃ|
6 ೬ ಆದರೆ ಅರ್ಧರಾತ್ರಿಯಲ್ಲಿ, ‘ಇಗೋ, ಮದಲಿಂಗನು ಬರುತ್ತಿದ್ದಾನೆ ಅವನನ್ನು ಎದುರುಗೊಳ್ಳಲು ಹೊರಡಿರಿ’ ಎಂಬ ಕೂಗು ಕೇಳಿಸಿತು.
അനന്തരമ് അർദ്ധരാത്രേ പശ്യത വര ആഗച്ഛതി, തം സാക്ഷാത് കർത്തും ബഹിര്യാതേതി ജനരവാത്
7 ೭ ಆಗ ಆ ಕನ್ನಿಕೆಯರೆಲ್ಲರು ಎಚ್ಚೆತ್ತು ತಮ್ಮ ದೀಪಾರತಿಗಳನ್ನು ಸರಿಮಾಡಿಕೊಂಡರು.
താഃ സർവ്വാഃ കന്യാ ഉത്ഥായ പ്രദീപാൻ ആസാദയിതും ആരഭന്ത|
8 ೮ ಆಗ ಬುದ್ಧಿಹೀನರಾದ ಕನ್ನಿಕೆಯರು ಬುದ್ಧಿವಂತರಾಗಿದ್ದ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ.
തതോ ദുർധിയഃ സുധിയ ഊചുഃ, കിഞ്ചിത് തൈലം ദത്ത, പ്രദീപാ അസ്മാകം നിർവ്വാണാഃ|
9 ೯ ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ’ ಎಂದು ಕೇಳಿದರು. ಅದಕ್ಕೆ ಆ ಬುದ್ಧಿವಂತರಾದ ಕನ್ನಿಕೆಯರು, ಆಗುವುದಿಲ್ಲ ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು’ ಅಂದರು.
കിന്തു സുധിയഃ പ്രത്യവദൻ, ദത്തേ യുഷ്മാനസ്മാംശ്ച പ്രതി തൈലം ന്യൂനീഭവേത്, തസ്മാദ് വിക്രേതൃണാം സമീപം ഗത്വാ സ്വാർഥം തൈലം ക്രീണീത|
10 ೧೦ ಅವರು ಕೊಂಡುಕೊಳ್ಳುವುದಕ್ಕೆ ಹೊರಟುಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಗೆ ಹೋದರು, ಬಾಗಿಲನ್ನು ಮುಚ್ಚಲಾಯಿತು.
തദാ താസു ക്രേതും ഗതാസു വര ആജഗാമ, തതോ യാഃ സജ്ജിതാ ആസൻ, താസ്തേന സാകം വിവാഹീയം വേശ്മ പ്രവിവിശുഃ|
11 ೧೧ ಅನಂತರ ಉಳಿದ ಕನ್ನಿಕೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲು ತೆರೆಯಿರಿ’ ಅಂದರು.
അനന്തരം ദ്വാരേ രുദ്ധേ അപരാഃ കന്യാ ആഗത്യ ജഗദുഃ, ഹേ പ്രഭോ, ഹേ പ്രഭോ, അസ്മാൻ പ്രതി ദ്വാരം മോചയ|
12 ೧೨ ಆದರೆ ಆತನು ಅವರಿಗೆ ಉತ್ತರವಾಗಿ, ‘ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅಂದನು.
കിന്തു സ ഉക്തവാൻ, തഥ്യം വദാമി, യുഷ്മാനഹം ന വേദ്മി|
13 ೧೩ ಏಕೆಂದರೆ ಆ ದಿನವಾದರೂ ಗಳಿಗೆಯಾದರೂ ನಿಮಗೆ ತಿಳಿಯದು, ಆದಕಾರಣ ಎಚ್ಚರವಾಗಿರಿ.
അതോ ജാഗ്രതഃ സന്തസ്തിഷ്ഠത, മനുജസുതഃ കസ്മിൻ ദിനേ കസ്മിൻ ദണ്ഡേ വാഗമിഷ്യതി, തദ് യുഷ്മാഭി ർന ജ്ഞായതേ|
14 ೧೪ “ದೇವರ ರಾಜ್ಯವು ಹೇಗೆಂದರೆದೇಶಾಂತರಕ್ಕೆ ಹೊರಟ್ಟಿದ್ದ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವುದು.
അപരം സ ഏതാദൃശഃ കസ്യചിത് പുംസസ്തുല്യഃ, യോ ദൂരദേശം പ്രതി യാത്രാകാലേ നിജദാസാൻ ആഹൂയ തേഷാം സ്വസ്വസാമർഥ്യാനുരൂപമ്
15 ೧೫ ಅವನು ಒಬ್ಬನಿಗೆ ಐದುತಲಾಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ತಲಾಂತನ್ನು ವಹಿಸಿಕೊಟ್ಟು ತನ್ನ ಪ್ರಯಾಣಕ್ಕೆ ಹೋದನು.
ഏകസ്മിൻ മുദ്രാണാം പഞ്ച പോടലികാഃ അന്യസ്മിംശ്ച ദ്വേ പോടലികേ അപരസ്മിംശ്ച പോടലികൈകാമ് ഇത്ഥം പ്രതിജനം സമർപ്യ സ്വയം പ്രവാസം ഗതവാൻ|
16 ೧೬ ತಕ್ಷಣವೇ ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು.
അനന്തരം യോ ദാസഃ പഞ്ച പോടലികാഃ ലബ്ധവാൻ, സ ഗത്വാ വാണിജ്യം വിധായ താ ദ്വിഗുണീചകാര|
17 ೧೭ ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು.
യശ്ച ദാസോ ദ്വേ പോടലികേ അലഭത, സോപി താ മുദ്രാ ദ്വിഗുണീചകാര|
18 ೧೮ ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
കിന്തു യോ ദാസ ഏകാം പോടലികാം ലബ്ധവാൻ, സ ഗത്വാ ഭൂമിം ഖനിത്വാ തന്മധ്യേ നിജപ്രഭോസ്താ മുദ്രാ ഗോപയാഞ്ചകാര|
19 ೧೯ ಬಹುಕಾಲದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ತೆಗೆದುಕೊಳ್ಳಲು
തദനന്തരം ബഹുതിഥേ കാലേ ഗതേ തേഷാം ദാസാനാം പ്രഭുരാഗത്യ തൈർദാസൈഃ സമം ഗണയാഞ്ചകാര|
20 ೨೦ ಐದು ತಲಾಂತುಗಳು ಹೊಂದಿದವನು ಮುಂದೆ ಬಂದು ಇನ್ನೂ ಐದು ತಲಾಂತುಗಳನ್ನು ತಂದು, ‘ಯಜಮಾನನೇ, ನೀನು ಐದು ತಲಾಂತಗಳನ್ನು ನನಗೆ ಕೊಟ್ಟಿದ್ದೆಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ’ ಅಂದನು.
തദാനീം യഃ പഞ്ച പോടലികാഃ പ്രാപ്തവാൻ സ താ ദ്വിഗുണീകൃതമുദ്രാ ആനീയ ജഗാദ; ഹേ പ്രഭോ, ഭവതാ മയി പഞ്ച പോടലികാഃ സമർപിതാഃ, പശ്യതു, താ മയാ ദ്വിഗുണീകൃതാഃ|
21 ೨೧ ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ; ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಅಂದನು.
തദാനീം തസ്യ പ്രഭുസ്തമുവാച, ഹേ ഉത്തമ വിശ്വാസ്യ ദാസ, ത്വം ധന്യോസി, സ്തോകേന വിശ്വാസ്യോ ജാതഃ, തസ്മാത് ത്വാം ബഹുവിത്താധിപം കരോമി, ത്വം സ്വപ്രഭോഃ സുഖസ്യ ഭാഗീ ഭവ|
22 ೨೨ ಆಗ ಎರಡು ತಲಾಂತು ಹೊಂದಿದವನು ಮುಂದೆ ಬಂದು, ‘ಯಜಮಾನನೇ, ನೀನು ಎರಡು ತಲಾಂತನ್ನು ನನಗೆ ಒಪ್ಪಿಸಿದ್ದೆಯಲ್ಲಾ; ಇಗೋ, ಇನ್ನು ಎರಡು ತಲಾಂತು ಸಂಪಾದಿಸಿದ್ದೇನೆ’ ಅಂದನು.
തതോ യേന ദ്വേ പോടലികേ ലബ്ധേ സോപ്യാഗത്യ ജഗാദ, ഹേ പ്രഭോ, ഭവതാ മയി ദ്വേ പോടലികേ സമർപിതേ, പശ്യതു തേ മയാ ദ്വിഗുണീകൃതേ|
23 ೨೩ ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಎಂದು ಹೇಳಿದನು.
തേന തസ്യ പ്രഭുസ്തമവോചത്, ഹേ ഉത്തമ വിശ്വാസ്യ ദാസ, ത്വം ധന്യോസി, സ്തോകേന വിശ്വാസ്യോ ജാതഃ, തസ്മാത് ത്വാം ബഹുദ്രവിണാധിപം കരോമി, ത്വം നിജപ്രഭോഃ സുഖസ്യ ഭാഗീ ഭവ|
24 ೨೪ ತರುವಾಯ ಒಂದು ತಲಾಂತು ಹೊಂದಿದವನು ಸಹ ಮುಂದೆಬಂದು, ‘ಯಜಮಾನನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಆಗಿರುವ ಕಠಿಣ ಮನುಷ್ಯನು ಎಂದು ನಾನು ತಿಳಿದು
അനന്തരം യ ഏകാം പോടലികാം ലബ്ധവാൻ, സ ഏത്യ കഥിതവാൻ, ഹേ പ്രഭോ, ത്വാം കഠിനനരം ജ്ഞാതവാൻ, ത്വയാ യത്ര നോപ്തം, തത്രൈവ കൃത്യതേ, യത്ര ച ന കീർണം, തത്രൈവ സംഗൃഹ്യതേ|
25 ೨೫ ಹೆದರಿ, ಹೊರಟುಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೇ ಸಲ್ಲಿಸುತ್ತಿದ್ದೇನೆ’ ಅಂದನು.
അതോഹം സശങ്കഃ സൻ ഗത്വാ തവ മുദ്രാ ഭൂമധ്യേ സംഗോപ്യ സ്ഥാപിതവാൻ, പശ്യ, തവ യത് തദേവ ഗൃഹാണ|
26 ೨೬ ಆಗ ಅವನ ಯಜಮಾನನು ಅವನಿಗೆ, ‘ಮೈಗಳ್ಳನಾದ ದುಷ್ಟ ಸೇವಕನೇ; ನೀನು ನನ್ನನ್ನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿದ್ದೇಯಾ?
തദാ തസ്യ പ്രഭുഃ പ്രത്യവദത് രേ ദുഷ്ടാലസ ദാസ, യത്രാഹം ന വപാമി, തത്ര ഛിനദ്മി, യത്ര ച ന കിരാമി, തത്രേവ സംഗൃഹ്ലാമീതി ചേദജാനാസ്തർഹി
27 ೨೭ ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿ ಸಹಿತ ಪಡೆದುಕೊಳ್ಳುತ್ತಿದ್ದೆನು ಎಂದು ಹೇಳಿ,
വണിക്ഷു മമ വിത്താർപണം തവോചിതമാസീത്, യേനാഹമാഗത്യ വൃദ്വ്യാ സാകം മൂലമുദ്രാഃ പ്രാപ്സ്യമ്|
28 ೨೮ ಅವನಿಂದ ಆ ತಲಾಂತನ್ನು ತೆಗೆದು ಹತ್ತು ತಲಾಂತು ಇರುವ ಸೇವಕನಿಗೆ ಕೊಟ್ಟನು.
അതോസ്മാത് താം പോടലികാമ് ആദായ യസ്യ ദശ പോടലികാഃ സന്തി തസ്മിന്നർപയത|
29 ೨೯ ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲ್ಪಡುವುದು, ಅವರಿಗೆ ಇನ್ನೂ ಹೆಚ್ಚಾಗುವುದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು.
യേന വർദ്വ്യതേ തസ്മിന്നൈവാർപിഷ്യതേ, തസ്യൈവ ച ബാഹുല്യം ഭവിഷ്യതി, കിന്തു യേന ന വർദ്വ്യതേ, തസ്യാന്തികേ യത് കിഞ്ചന തിഷ്ഠതി, തദപി പുനർനേഷ്യതേ|
30 ೩೦ ಮತ್ತು ನಿಷ್ಪ್ರಯೋಜಕನಾದ ಈ ಸೇವಕನನ್ನು ಹೊರಗೆ ಕಗ್ಗತ್ತಲೆಗೆ ಹಾಕಿಬಿಡಿರಿ ಎಂದು ಅಪ್ಪಣೆಕೊಟ್ಟನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು.’
അപരം യൂയം തമകർമ്മണ്യം ദാസം നീത്വാ യത്ര സ്ഥാനേ ക്രന്ദനം ദന്തഘർഷണഞ്ച വിദ്യേതേ, തസ്മിൻ ബഹിർഭൂതതമസി നിക്ഷിപത|
31 ೩೧ “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಸಮಸ್ತ ದೇವದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು;
യദാ മനുജസുതഃ പവിത്രദൂതാൻ സങ്ഗിനഃ കൃത്വാ നിജപ്രഭാവേനാഗത്യ നിജതേജോമയേ സിംഹാസനേ നിവേക്ഷ്യതി,
32 ೩೨ ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು.
തദാ തത്സമ്മുഖേ സർവ്വജാതീയാ ജനാ സംമേലിഷ്യന്തി| തതോ മേഷപാലകോ യഥാ ഛാഗേഭ്യോഽവീൻ പൃഥക് കരോതി തഥാ സോപ്യേകസ്മാദന്യമ് ഇത്ഥം താൻ പൃഥക കൃത്വാവീൻ
33 ೩೩ ಕುರಿಗಳನ್ನು ತನ್ನ ಬಲಗಡೆಯಲ್ಲಿ ಮತ್ತು ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು.
ദക്ഷിണേ ഛാഗാംശ്ച വാമേ സ്ഥാപയിഷ്യതി|
34 ೩೪ ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ.
തതഃ പരം രാജാ ദക്ഷിണസ്ഥിതാൻ മാനവാൻ വദിഷ്യതി, ആഗച്ഛത മത്താതസ്യാനുഗ്രഹഭാജനാനി, യുഷ്മത്കൃത ആ ജഗദാരമ്ഭത് യദ് രാജ്യമ് ആസാദിതം തദധികുരുത|
35 ೩೫ ನಾನು ಹಸಿದಿದ್ದೆನು, ನನಗೆ ಊಟ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವುದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನಗೆ ಆಶ್ರಯ ಕೊಟ್ಟಿರಿ;
യതോ ബുഭുക്ഷിതായ മഹ്യം ഭോജ്യമ് അദത്ത, പിപാസിതായ പേയമദത്ത, വിദേശിനം മാം സ്വസ്ഥാനമനയത,
36 ೩೬ ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವುದಕ್ಕೆ ಕೊಟ್ಟಿರಿ; ಅಸ್ವಸ್ಥನಾಗಿದ್ದಾಗ, ನನ್ನನ್ನು ಆರೈಕೆ ಮಾಡಿದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುವನು.
വസ്ത്രഹീനം മാം വസനം പര്യ്യധാപയത, പീഡീതം മാം ദ്രഷ്ടുമാഗച്ഛത, കാരാസ്ഥഞ്ച മാം വീക്ഷിതുമ ആഗച്ഛത|
37 ೩೭ ಅದಕ್ಕೆ ಉತ್ತರವಾಗಿ ನೀತಿವಂತರು, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನು ಕಂಡು ನಿನಗೆ ಊಟ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವುದಕ್ಕೆ ಕೊಟ್ಟೆವು?
തദാ ധാർമ്മികാഃ പ്രതിവദിഷ്യന്തി, ഹേ പ്രഭോ, കദാ ത്വാം ക്ഷുധിതം വീക്ഷ്യ വയമഭോജയാമ? വാ പിപാസിതം വീക്ഷ്യ അപായയാമ?
38 ೩೮ ಯಾವಾಗ ನೀನು ಪರದೇಶಿಯಾಗಿರುವುದನ್ನು ಕಂಡು ಆಶ್ರಯ ನೀಡಿದೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವುದಕ್ಕೆ ಕೊಟ್ಟೆವು?
കദാ വാ ത്വാം വിദേശിനം വിലോക്യ സ്വസ്ഥാനമനയാമ? കദാ വാ ത്വാം നഗ്നം വീക്ഷ്യ വസനം പര്യ്യധാപയാമ?
39 ೩೯ ಯಾವಾಗ ನೀನು ಅಸ್ವಸ್ಥನಾಗಿದ್ದಾಗ ಅಥವಾ ಸೆರೆಮನೆಯಲ್ಲಿ ಇದ್ದುದನ್ನು ಕಂಡು ನಿನ್ನನ್ನು ನೋಡುವುದಕ್ಕೆ ಬಂದೆವು’ ಎಂದು ಕೇಳುವರು.
കദാ വാ ത്വാം പീഡിതം കാരാസ്ഥഞ്ച വീക്ഷ്യ ത്വദന്തികമഗച്ഛാമ?
40 ೪೦ ಅದಕ್ಕೆ ಉತ್ತರವಾಗಿ ಅರಸನು, ‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.
തദാനീം രാജാ താൻ പ്രതിവദിഷ്യതി, യുഷ്മാനഹം സത്യം വദാമി, മമൈതേഷാം ഭ്രാതൃണാം മധ്യേ കഞ്ചനൈകം ക്ഷുദ്രതമം പ്രതി യദ് അകുരുത, തന്മാം പ്രത്യകുരുത|
41 ೪೧ ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. (aiōnios )
പശ്ചാത് സ വാമസ്ഥിതാൻ ജനാൻ വദിഷ്യതി, രേ ശാപഗ്രസ്താഃ സർവ്വേ, ശൈതാനേ തസ്യ ദൂതേഭ്യശ്ച യോഽനന്തവഹ്നിരാസാദിത ആസ്തേ, യൂയം മദന്തികാത് തമഗ്നിം ഗച്ഛത| (aiōnios )
42 ೪೨ ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ.
യതോ ക്ഷുധിതായ മഹ്യമാഹാരം നാദത്ത, പിപാസിതായ മഹ്യം പേയം നാദത്ത,
43 ೪೩ ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು.
വിദേശിനം മാം സ്വസ്ഥാനം നാനയത, വസനഹീനം മാം വസനം ന പര്യ്യധാപയത, പീഡിതം കാരാസ്ഥഞ്ച മാം വീക്ഷിതും നാഗച്ഛത|
44 ೪೪ ಅದಕ್ಕೆ ಉತ್ತರವಾಗಿ ಅವರೂ ಸಹ, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾಗಿದ್ದನ್ನೂ, ಬಟ್ಟೆಯಿಲ್ಲದವನಾಗಿದ್ದನ್ನೂ, ಅಸ್ವಸ್ಥನಾಗಿದ್ದುದನ್ನೂ, ಸೆರೆಮನೆಯಲ್ಲಿದ್ದುದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?’ ಅನ್ನುವರು.
തദാ തേ പ്രതിവദിഷ്യന്തി, ഹേ പ്രഭോ, കദാ ത്വാം ക്ഷുധിതം വാ പിപാസിതം വാ വിദേശിനം വാ നഗ്നം വാ പീഡിതം വാ കാരാസ്ഥം വീക്ഷ്യ ത്വാം നാസേവാമഹി?
45 ೪೫ ಆಗ ಆತನು ಉತ್ತರವಾಗಿ ಅವರಿಗೆ, ‘ನೀವು ಈ ಕೇವಲ ಅಲ್ಪರಾದವರಲ್ಲಿ ಒಬ್ಬನಿಗೆ ಏನನ್ನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.
തദാ സ താൻ വദിഷ്യതി, തഥ്യമഹം യുഷ്മാൻ ബ്രവീമി, യുഷ്മാഭിരേഷാം കഞ്ചന ക്ഷോദിഷ്ഠം പ്രതി യന്നാകാരി, തന്മാം പ്രത്യേവ നാകാരി|
46 ೪೬ ಮತ್ತು ಅನೀತಿವಂತರಾದ ಇವರುನಿತ್ಯದಂಡನೆಗೆ ಹೋಗುವರು ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು” ಎಂದು ಹೇಳಿದನು. (aiōnios )
പശ്ചാദമ്യനന്തശാസ്തിം കിന്തു ധാർമ്മികാ അനന്തായുഷം ഭോക്തും യാസ്യന്തി| (aiōnios )