< ಮತ್ತಾಯನು 19 >

1 ಹೀಗಿರುವಾಗ ಯೇಸು ಈ ಮಾತುಗಳನ್ನು ಮುಗಿಸಿದ ಮೇಲೆ ಗಲಿಲಾಯವನ್ನು ಬಿಟ್ಟು ಯೊರ್ದನ್ ಹೊಳೆಯ ಆಚೆಯಿರುವ ಯೂದಾಯ ಪ್ರಾಂತ್ಯಗಳಿಗೆ ಹೋದನು.
ಅನನ್ತರಮ್ ಏತಾಸು ಕಥಾಸು ಸಮಾಪ್ತಾಸು ಯೀಶು ರ್ಗಾಲೀಲಪ್ರದೇಶಾತ್ ಪ್ರಸ್ಥಾಯ ಯರ್ದನ್ತೀರಸ್ಥಂ ಯಿಹೂದಾಪ್ರದೇಶಂ ಪ್ರಾಪ್ತಃ|
2 ಜನರ ದೊಡ್ಡ ಗುಂಪುಗಳು ಆತನನ್ನು ಹಿಂಬಾಲಿಸಿದವು, ಆತನು ಅವರನ್ನು ಅಲ್ಲಿಯೇ ಸ್ವಸ್ಥಮಾಡಿದನು.
ತದಾ ತತ್ಪಶ್ಚಾತ್ ಜನನಿವಹೇ ಗತೇ ಸ ತತ್ರ ತಾನ್ ನಿರಾಮಯಾನ್ ಅಕರೋತ್|
3 ಫರಿಸಾಯರು ಯೇಸುವನ್ನು ಪರೀಕ್ಷಿಸಲು ಆತನ ಹತ್ತಿರಕ್ಕೆ ಬಂದು, “ಒಬ್ಬನು ಯಾವುದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಶಾಸ್ತ್ರ ಸಮ್ಮತವೋ?” ಎಂದು ಕೇಳಲು,
ತದನನ್ತರಂ ಫಿರೂಶಿನಸ್ತತ್ಸಮೀಪಮಾಗತ್ಯ ಪಾರೀಕ್ಷಿತುಂ ತಂ ಪಪ್ರಚ್ಛುಃ, ಕಸ್ಮಾದಪಿ ಕಾರಣಾತ್ ನರೇಣ ಸ್ವಜಾಯಾ ಪರಿತ್ಯಾಜ್ಯಾ ನ ವಾ?
4 ಆತನು ಪ್ರತ್ಯುತ್ತರವಾಗಿ, “ಮನುಷ್ಯರನ್ನು ಉಂಟುಮಾಡಿದವನು ಆದಿಯಿಂದಲೇ ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟುಮಾಡಿದನು,
ಸ ಪ್ರತ್ಯುವಾಚ, ಪ್ರಥಮಮ್ ಈಶ್ವರೋ ನರತ್ವೇನ ನಾರೀತ್ವೇನ ಚ ಮನುಜಾನ್ ಸಸರ್ಜ, ತಸ್ಮಾತ್ ಕಥಿತವಾನ್,
5 ‘ಈ ಕಾರಣದಿಂದಲೇ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ನೀವು ಓದಲಿಲ್ಲವೋ?’
ಮಾನುಷಃ ಸ್ವಪಿತರೌ ಪರಿತ್ಯಜ್ಯ ಸ್ವಪತ್ನ್ಯಾಮ್ ಆಸಕ್ಷ್ಯತೇ, ತೌ ದ್ವೌ ಜನಾವೇಕಾಙ್ಗೌ ಭವಿಷ್ಯತಃ, ಕಿಮೇತದ್ ಯುಷ್ಮಾಭಿ ರ್ನ ಪಠಿತಮ್?
6 ಹೀಗಿರುವುದರಿಂದ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಅಂದನು.
ಅತಸ್ತೌ ಪುನ ರ್ನ ದ್ವೌ ತಯೋರೇಕಾಙ್ಗತ್ವಂ ಜಾತಂ, ಈಶ್ವರೇಣ ಯಚ್ಚ ಸಮಯುಜ್ಯತ, ಮನುಜೋ ನ ತದ್ ಭಿನ್ದ್ಯಾತ್|
7 ಅದಕ್ಕೆ ಅವರು ಆತನನ್ನು, “ಹಾಗಾದರೆ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಏಕೆ ಆಜ್ಞೆ ಕೊಟ್ಟನು?” ಎಂದು ಕೇಳಿದರು.
ತದಾನೀಂ ತೇ ತಂ ಪ್ರತ್ಯವದನ್, ತಥಾತ್ವೇ ತ್ಯಾಜ್ಯಪತ್ರಂ ದತ್ತ್ವಾ ಸ್ವಾಂ ಸ್ವಾಂ ಜಾಯಾಂ ತ್ಯಕ್ತುಂ ವ್ಯವಸ್ಥಾಂ ಮೂಸಾಃ ಕಥಂ ಲಿಲೇಖ?
8 ಅದಕ್ಕೆ ಯೇಸು ಅವರಿಗೆ, “ಮೋಶೆಯು ನಿಮ್ಮ ಮೊಂಡತನದ ದೆಸೆಯಿಂದ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಅಪ್ಪಣೆ ಕೊಟ್ಟನು. ಆದರೆ ಆದಿಯಿಂದ ಹೀಗೆ ಇರಲಿಲ್ಲ ಅಂದನು.
ತತಃ ಸ ಕಥಿತವಾನ್, ಯುಷ್ಮಾಕಂ ಮನಸಾಂ ಕಾಠಿನ್ಯಾದ್ ಯುಷ್ಮಾನ್ ಸ್ವಾಂ ಸ್ವಾಂ ಜಾಯಾಂ ತ್ಯಕ್ತುಮ್ ಅನ್ವಮನ್ಯತ ಕಿನ್ತು ಪ್ರಥಮಾದ್ ಏಷೋ ವಿಧಿರ್ನಾಸೀತ್|
9 ಮತ್ತು ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದಂತೆ; ಮತ್ತು ಗಂಡ ಬಿಟ್ಟವಳನ್ನು ಮದುವೆಯಾಗುವವನು ವ್ಯಭಿಚಾರ ಮಾಡಿದಂತೆ” ಎಂದು ನಿಮಗೆ ಹೇಳುತ್ತೇನೆ ಅಂದನು.
ಅತೋ ಯುಷ್ಮಾನಹಂ ವದಾಮಿ, ವ್ಯಭಿಚಾರಂ ವಿನಾ ಯೋ ನಿಜಜಾಯಾಂ ತ್ಯಜೇತ್ ಅನ್ಯಾಞ್ಚ ವಿವಹೇತ್, ಸ ಪರದಾರಾನ್ ಗಚ್ಛತಿ; ಯಶ್ಚ ತ್ಯಕ್ತಾಂ ನಾರೀಂ ವಿವಹತಿ ಸೋಪಿ ಪರದಾರೇಷು ರಮತೇ|
10 ೧೦ ಅದಕ್ಕೆ ಶಿಷ್ಯರು ಯೇಸುವಿಗೆ, “ಹೆಂಡತಿಯೊಂದಿಗೆ ಗಂಡನ ಸಂಬಂಧ ಹೀಗಿದ್ದರೆ ಮದುವೆಯಾಗುವುದು ಒಳ್ಳೆಯದಲ್ಲ” ಅಂದರು.
ತದಾ ತಸ್ಯ ಶಿಷ್ಯಾಸ್ತಂ ಬಭಾಷಿರೇ, ಯದಿ ಸ್ವಜಾಯಯಾ ಸಾಕಂ ಪುಂಸ ಏತಾದೃಕ್ ಸಮ್ಬನ್ಧೋ ಜಾಯತೇ, ತರ್ಹಿ ವಿವಹನಮೇವ ನ ಭದ್ರಂ|
11 ೧೧ ಆದರೆ ಯೇಸು ಅವರಿಗೆ, “ಈ ಮಾತನ್ನು ಎಲ್ಲರೂ ಅಂಗೀಕರಿಸಲಾರರು ಆದರೆ ಯಾರಿಗೆ ಆ ವರವು ಕೊಡಲ್ಪಟ್ಟಿದೆಯೋ ಅವರು ಮಾತ್ರ ಅದನ್ನು ಅಂಗೀಕರಿಸುವರು.
ತತಃ ಸ ಉಕ್ತವಾನ್, ಯೇಭ್ಯಸ್ತತ್ಸಾಮರ್ಥ್ಯಂ ಆದಾಯಿ, ತಾನ್ ವಿನಾನ್ಯಃ ಕೋಪಿ ಮನುಜ ಏತನ್ಮತಂ ಗ್ರಹೀತುಂ ನ ಶಕ್ನೋತಿ|
12 ೧೨ ತಾಯಿಯ ಗರ್ಭದಿಂದ ನಪುಂಸಕರಾಗಿ ಹುಟ್ಟಿದವರು ಕೆಲವರು ಇದ್ದಾರೆ ಮತ್ತು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟವರು ಕೆಲವರು ಇದ್ದಾರೆ ಮತ್ತುಪರಲೋಕ ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರು ಕೆಲವರು ಇದ್ದಾರೆ. ಈ ಬೋಧನೆಯನ್ನು ಅಂಗೀಕರಿಸಬಲ್ಲವರು ಅಂಗೀಕರಿಸಲಿ” ಎಂದು ಹೇಳಿದನು.
ಕತಿಪಯಾ ಜನನಕ್ಲೀಬಃ ಕತಿಪಯಾ ನರಕೃತಕ್ಲೀಬಃ ಸ್ವರ್ಗರಾಜ್ಯಾಯ ಕತಿಪಯಾಃ ಸ್ವಕೃತಕ್ಲೀಬಾಶ್ಚ ಸನ್ತಿ, ಯೇ ಗ್ರಹೀತುಂ ಶಕ್ನುವನ್ತಿ ತೇ ಗೃಹ್ಲನ್ತು|
13 ೧೩ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ಕರೆತಂದು, ಅವರ ಮೇಲೆ ಆತನು ಕೈಗಳನ್ನಿಟ್ಟು ಪ್ರಾರ್ಥಿಸುವಂತೆ ಕೇಳಿದರು. ಆದರೆ ಶಿಷ್ಯರು ಅವರನ್ನು ಗದರಿಸಿದರು.
ಅಪರಮ್ ಯಥಾ ಸ ಶಿಶೂನಾಂ ಗಾತ್ರೇಷು ಹಸ್ತಂ ದತ್ವಾ ಪ್ರಾರ್ಥಯತೇ, ತದರ್ಥಂ ತತ್ಸಮೀಂಪಂ ಶಿಶವ ಆನೀಯನ್ತ, ತತ ಆನಯಿತೃನ್ ಶಿಷ್ಯಾಸ್ತಿರಸ್ಕೃತವನ್ತಃ|
14 ೧೪ ಆದರೆ ಯೇಸು, “ಮಕ್ಕಳನ್ನು ಬಿಡಿರಿ. ನನ್ನ ಹತ್ತಿರ ಬರುವುದಕ್ಕೆ ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ಪರಲೋಕ ರಾಜ್ಯವು ಇಂಥವರದೇ” ಎಂದು ಹೇಳಿದನು.
ಕಿನ್ತು ಯೀಶುರುವಾಚ, ಶಿಶವೋ ಮದನ್ತಿಕಮ್ ಆಗಚ್ಛನ್ತು, ತಾನ್ ಮಾ ವಾರಯತ, ಏತಾದೃಶಾಂ ಶಿಶೂನಾಮೇವ ಸ್ವರ್ಗರಾಜ್ಯಂ|
15 ೧೫ ಮತ್ತು ಅವರ ಮೇಲೆ ಕೈಯಿಟ್ಟು ಅನಂತರ ಅಲ್ಲಿಂದ ಹೊರಟು ಹೋದನು.
ತತಃ ಸ ತೇಷಾಂ ಗಾತ್ರೇಷು ಹಸ್ತಂ ದತ್ವಾ ತಸ್ಮಾತ್ ಸ್ಥಾನಾತ್ ಪ್ರತಸ್ಥೇ|
16 ೧೬ ಇಗೋ ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು. (aiōnios g166)
ಅಪರಮ್ ಏಕ ಆಗತ್ಯ ತಂ ಪಪ್ರಚ್ಛ, ಹೇ ಪರಮಗುರೋ, ಅನನ್ತಾಯುಃ ಪ್ರಾಪ್ತುಂ ಮಯಾ ಕಿಂ ಕಿಂ ಸತ್ಕರ್ಮ್ಮ ಕರ್ತ್ತವ್ಯಂ? (aiōnios g166)
17 ೧೭ ಆತನು ಅವನಿಗೆ, “ಒಳ್ಳೆಯದನ್ನು ಕುರಿತು ನನ್ನನ್ನು ಏಕೆ ಕೇಳುತ್ತೀಯಾ? ಒಳ್ಳೆಯವನು ಒಬ್ಬನೇ. ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು.
ತತಃ ಸ ಉವಾಚ, ಮಾಂ ಪರಮಂ ಕುತೋ ವದಸಿ? ವಿನೇಶ್ಚರಂ ನ ಕೋಪಿ ಪರಮಃ, ಕಿನ್ತು ಯದ್ಯನನ್ತಾಯುಃ ಪ್ರಾಪ್ತುಂ ವಾಞ್ಛಸಿ, ತರ್ಹ್ಯಾಜ್ಞಾಃ ಪಾಲಯ|
18 ೧೮ ಅದಕ್ಕೆ ಅವನು, “ಅವು ಯಾವುವು?” ಎಂದು ಕೇಳಲು ಯೇಸು, “ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು.
ತದಾ ಸ ಪೃಷ್ಟವಾನ್, ಕಾಃ ಕಾ ಆಜ್ಞಾಃ? ತತೋ ಯೀಶುಃ ಕಥಿತವಾನ್, ನರಂ ಮಾ ಹನ್ಯಾಃ, ಪರದಾರಾನ್ ಮಾ ಗಚ್ಛೇಃ, ಮಾ ಚೋರಯೇಃ, ಮೃಷಾಸಾಕ್ಷ್ಯಂ ಮಾ ದದ್ಯಾಃ,
19 ೧೯ ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಮತ್ತು ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸಬೇಕು” ಇವುಗಳೇ ಅಂದನು.
ನಿಜಪಿತರೌ ಸಂಮನ್ಯಸ್ವ, ಸ್ವಸಮೀಪವಾಸಿನಿ ಸ್ವವತ್ ಪ್ರೇಮ ಕುರು|
20 ೨೦ ಆ ಯೌವನಸ್ಥನು ಆತನಿಗೆ, “ಇವೆಲ್ಲಕ್ಕೂ ವಿಧೇಯನಾಗಿ ನಾನು ನಡೆದುಕೊಂಡಿದ್ದೇನೆ; ಇನ್ನೂ ನನಗೇನು ಕೊರತೆಯಾಗಿರಬಹುದು?” ಎಂದು ಕೇಳಿದನು.
ಸ ಯುವಾ ಕಥಿತವಾನ್, ಆ ಬಾಲ್ಯಾದ್ ಏತಾಃ ಪಾಲಯಾಮಿ, ಇದಾನೀಂ ಕಿಂ ನ್ಯೂನಮಾಸ್ತೇ?
21 ೨೧ ಯೇಸು ಅವನಿಗೆ, “ನೀನು ಪೂರ್ಣನಾಗುವುದಕ್ಕೆ ಬಯಸುವುದಾದರೆ, ಹೋಗಿ ನಿನಗಿರುವುದನ್ನೆಲ್ಲಾ ಮಾರಿ, ಬಡವರಿಗೆ ಕೊಡು, ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
ತತೋ ಯೀಶುರವದತ್, ಯದಿ ಸಿದ್ಧೋ ಭವಿತುಂ ವಾಞ್ಛಸಿ, ತರ್ಹಿ ಗತ್ವಾ ನಿಜಸರ್ವ್ವಸ್ವಂ ವಿಕ್ರೀಯ ದರಿದ್ರೇಭ್ಯೋ ವಿತರ, ತತಃ ಸ್ವರ್ಗೇ ವಿತ್ತಂ ಲಪ್ಸ್ಯಸೇ; ಆಗಚ್ಛ, ಮತ್ಪಶ್ಚಾದ್ವರ್ತ್ತೀ ಚ ಭವ|
22 ೨೨ ಆದರೆ ಆ ಯೌವನಸ್ಥನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು.
ಏತಾಂ ವಾಚಂ ಶ್ರುತ್ವಾ ಸ ಯುವಾ ಸ್ವೀಯಬಹುಸಮ್ಪತ್ತೇ ರ್ವಿಷಣಃ ಸನ್ ಚಲಿತವಾನ್|
23 ೨೩ ಆಗ ಯೇಸು ತನ್ನ ಶಿಷ್ಯರಿಗೆ, “ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ” ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
ತದಾ ಯೀಶುಃ ಸ್ವಶಿಷ್ಯಾನ್ ಅವದತ್, ಧನಿನಾಂ ಸ್ವರ್ಗರಾಜ್ಯಪ್ರವೇಶೋ ಮಹಾದುಷ್ಕರ ಇತಿ ಯುಷ್ಮಾನಹಂ ತಥ್ಯಂ ವದಾಮಿ|
24 ೨೪ “ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ನಿಮಗೆ ತಿರುಗಿ ಹೇಳುತ್ತೇನೆ” ಅಂದನು.
ಪುನರಪಿ ಯುಷ್ಮಾನಹಂ ವದಾಮಿ, ಧನಿನಾಂ ಸ್ವರ್ಗರಾಜ್ಯಪ್ರವೇಶಾತ್ ಸೂಚೀಛಿದ್ರೇಣ ಮಹಾಙ್ಗಗಮನಂ ಸುಕರಂ|
25 ೨೫ ಶಿಷ್ಯರು ಇದನ್ನು ಕೇಳಿ ಅತ್ಯಾಶ್ಚರ್ಯಪಟ್ಟು, “ಹೀಗಿದ್ದರೆ ರಕ್ಷಣೆ ಹೊಂದಲು ಯಾರಿಂದಾದೀತು?” ಎಂದು ಕೇಳಿದರು.
ಇತಿ ವಾಕ್ಯಂ ನಿಶಮ್ಯ ಶಿಷ್ಯಾ ಅತಿಚಮತ್ಕೃತ್ಯ ಕಥಯಾಮಾಸುಃ; ತರ್ಹಿ ಕಸ್ಯ ಪರಿತ್ರಾಣಂ ಭವಿತುಂ ಶಕ್ನೋತಿ?
26 ೨೬ ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಂದ ಅಸಾಧ್ಯ. ಆದರೆ ದೇವರಿಗೆ ಎಲ್ಲವು ಸಾಧ್ಯವೇ” ಅಂದನು.
ತದಾ ಸ ತಾನ್ ದೃಷ್ದ್ವಾ ಕಥಯಾಮಾಸ, ತತ್ ಮಾನುಷಾಣಾಮಶಕ್ಯಂ ಭವತಿ, ಕಿನ್ತ್ವೀಶ್ವರಸ್ಯ ಸರ್ವ್ವಂ ಶಕ್ಯಮ್|
27 ೨೭ ಆಗ ಪೇತ್ರನು ಆತನನ್ನು, ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಇದರಿಂದ ನಮಗೆ ಏನು ದೊರಕುವುದು? ಎಂದು ಕೇಳಿದನು.
ತದಾ ಪಿತರಸ್ತಂ ಗದಿತವಾನ್, ಪಶ್ಯ, ವಯಂ ಸರ್ವ್ವಂ ಪರಿತ್ಯಜ್ಯ ಭವತಃ ಪಶ್ಚಾದ್ವರ್ತ್ತಿನೋ ಽಭವಾಮ; ವಯಂ ಕಿಂ ಪ್ರಾಪ್ಸ್ಯಾಮಃ?
28 ೨೮ ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವಾಗ, ನನ್ನನ್ನು ಹಿಂಬಾಲಿಸಿದವರಾದನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
ತತೋ ಯೀಶುಃ ಕಥಿತವಾನ್, ಯುಷ್ಮಾನಹಂ ತಥ್ಯಂ ವದಾಮಿ, ಯೂಯಂ ಮಮ ಪಶ್ಚಾದ್ವರ್ತ್ತಿನೋ ಜಾತಾ ಇತಿ ಕಾರಣಾತ್ ನವೀನಸೃಷ್ಟಿಕಾಲೇ ಯದಾ ಮನುಜಸುತಃ ಸ್ವೀಯೈಶ್ಚರ್ಯ್ಯಸಿಂಹಾಸನ ಉಪವೇಕ್ಷ್ಯತಿ, ತದಾ ಯೂಯಮಪಿ ದ್ವಾದಶಸಿಂಹಾಸನೇಷೂಪವಿಶ್ಯ ಇಸ್ರಾಯೇಲೀಯದ್ವಾದಶವಂಶಾನಾಂ ವಿಚಾರಂ ಕರಿಷ್ಯಥ|
29 ೨೯ ಮತ್ತು ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ, ತೊರೆದುಬಿಟ್ಟಿರುವ ಪ್ರತಿಯೊಬ್ಬನೂ ಎಲ್ಲವನ್ನೂ ನೂರರಷ್ಟು ಹೊಂದುವನು. ಅಲ್ಲದೆ ನಿತ್ಯಜೀವಕ್ಕೆ ಬಾಧ್ಯನಾಗುವನು. (aiōnios g166)
ಅನ್ಯಚ್ಚ ಯಃ ಕಶ್ಚಿತ್ ಮಮ ನಾಮಕಾರಣಾತ್ ಗೃಹಂ ವಾ ಭ್ರಾತರಂ ವಾ ಭಗಿನೀಂ ವಾ ಪಿತರಂ ವಾ ಮಾತರಂ ವಾ ಜಾಯಾಂ ವಾ ಬಾಲಕಂ ವಾ ಭೂಮಿಂ ಪರಿತ್ಯಜತಿ, ಸ ತೇಷಾಂ ಶತಗುಣಂ ಲಪ್ಸ್ಯತೇ, ಅನನ್ತಾಯುಮೋಽಧಿಕಾರಿತ್ವಞ್ಚ ಪ್ರಾಪ್ಸ್ಯತಿ| (aiōnios g166)
30 ೩೦ ಆದರೆ ಈಗ ಮೊದಲಿನವರಾದ ಬಹು ಮಂದಿ ಕಡೆಯವರಾಗುವರು ಮತ್ತು ಕಡೆಯವರಾದ ಬಹು ಮಂದಿ ಮೊದಲಿನವರಾಗುವರು.
ಕಿನ್ತು ಅಗ್ರೀಯಾ ಅನೇಕೇ ಜನಾಃ ಪಶ್ಚಾತ್, ಪಶ್ಚಾತೀಯಾಶ್ಚಾನೇಕೇ ಲೋಕಾ ಅಗ್ರೇ ಭವಿಷ್ಯನ್ತಿ|

< ಮತ್ತಾಯನು 19 >