< ಮತ್ತಾಯನು 13 >
1 ೧ ಆದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸಮುದ್ರದ ದಡದಲ್ಲಿ ಕುಳಿತುಕೊಂಡನು.
त्या दिन येशु घरमाईन निंघीसन समुद्र किनारले जाईन बसना.
2 ೨ ಬಹಳ ಜನರ ಗುಂಪು ಆತನ ಬಳಿಗೆ ಸೇರಿಬಂದುದರಿಂದ ಆತನು ದೋಣಿ ಹತ್ತಿ ಕುಳಿತುಕೊಂಡನು. ಆ ಜನರೆಲ್ಲರೂ ದಡದಲ್ಲಿ ನಿಂತಿದ್ದರು.
तवय लोकेसनी ईतली मोठी गर्दी त्यानाजोडे जमनी; म्हणीन तो नावमा जाईन बसना अनं सर्वा लोके किनारवर उभा राहिनात.
3 ೩ ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಹೇಳಿದನು.
मंग त्यानी त्यासले दृष्टांत दिसन बऱ्याच गोष्टी सांगात तवय तो बोलना, “दखा, एक पेरणारा पेरणी कराले निंघना.”
4 ೪ “ಕೇಳಿರಿ, ಬಿತ್ತುವವನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಅವುಗಳನ್ನು ತಿಂದು ಬಿಟ್ಟವು.
अनी तो पेरी राहिंता तवय काही बीया वाटवर पडनात अनं पक्षीसनी ईसन ते खाई टाकं.
5 ೫ ಕೆಲವು ಬೀಜಗಳು ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗ ಮೊಳೆತವು.
काही खडकाळ जमीनवर पडनात, तठे त्यासले पुरेशी जास्त माती मिळनी नही, अनी माती जास्त खोलपावत नव्हती म्हणीन त्या लवकर उगनात.
6 ೬ ಆದರೆ ಬಿಸಿಲೇರಿದಾಗ ಬೇರಿಲ್ಲದ ಕಾರಣ ಬಾಡಿ ಒಣಗಿಹೋದವು.
अनी जवय सुर्य वर निंघना तवय त्यासले उन लागनं अनं त्या लगेच वाळाई गयात कारण त्यासले मुयाच नव्हतात.
7 ೭ ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು, ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
काही काटेरी झुडपसमा पडनात; पण काटासना झुडपासनी वाढीसन त्यासनी वाढले दाबी टाकं.
8 ೮ ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು, ಕೆಲವು ಮೂವತ್ತರಷ್ಟು ಫಲವನ್ನು ಕೊಟ್ಟವು.
काही बीया चांगली जमीनवर पडनात, मंग त्यासनं कोठे शंभरपट, कोठे साठपट तर कोठे तीसपट, अस पीक वनं.
9 ೯ ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು.
अनी येशु त्यासले बोलना, ज्यासले कान शेतस त्या ऐकोत.
10 ೧೦ ತರುವಾಯ ಆತನ ಶಿಷ್ಯರು ಬಂದು, “ಏಕೆ ಸಾಮ್ಯರೂಪವಾಗಿ ಜನರ ಗುಂಪಿನ ಸಂಗಡ ಮಾತನಾಡುತ್ತಿ?” ಎಂದು ಕೇಳಿದರು.
मंग शिष्यसनी जोडे जाईसन त्याले ईचारं, तु त्यासनासंगे दृष्टांत दिसन का बरं बोलस?
11 ೧೧ ಅದಕ್ಕಾತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಪರಲೋಕ ರಾಜ್ಯದ ಮರ್ಮಗಳನ್ನು ತಿಳಿಯುವ ಭಾಗ್ಯವು ನಿಮಗೆ ಕೊಟ್ಟಿದೆ ಅವರಿಗೆ ಕೊಟ್ಟಿಲ್ಲ.
येशुनी त्यासले उत्तर दिधं, “स्वर्गना राज्यना रहस्य ओळखाना दान तुमले देयल शे, पण त्यासले देयल नही.”
12 ೧೨ ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು ಅವನಿಗೆ ಇನ್ನೂ ಹೆಚ್ಚು ಸಮೃದ್ಧಿಯಾಗುವುದು ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು.
कारण ज्यानाजोडे शे त्याले अजुन भेटी अनं त्याले भरपुर व्हई, पण ज्यानाजोडे काहीच नही त्यानाकडे त्यानं जे काही व्हई ते पण त्यानाकडतीन काढी लेतीन.
13 ೧೩ ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತನಾಡುವುದಕ್ಕೆ ಕಾರಣವೇನೆಂದರೆ, ಅವರು ಕಂಡರೂ ಕಾಣುವುದಿಲ್ಲ. ಅವರು ಕೇಳಿದರೂ ನಿಜವಾಗಿಯೂ ಆಲಿಸುವುದಿಲ್ಲ ಮತ್ತು ತಿಳಿದುಕೊಳ್ಳುವುದಿಲ್ಲ.
यामुये मी त्यासनासंगे दृष्टांत दिसन बोलस; कारण त्यासले दखाले मिळस, पण दखतस नही, ऐकाले मिळस पण ऐकतस नही, अनं समजी बी लेतस नही.
14 ೧೪ “ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ. ಅದೇನೆಂದರೆ, ‘ನೀವು ಕೇಳುತ್ತೀರಿ, ಕೇಳಿದರೂ ತಿಳಿದುಕೊಳ್ಳುವುದೇ ಇಲ್ಲ. ನೀವು ನೋಡುತ್ತೀರಿ, ನೋಡಿದರೂ ಗ್ರಹಿಸುವುದೇ ಇಲ್ಲ.
यशयाना संदेश त्यासना विषयी पुर्ण व्हई ऱ्हाईना शे; तो असा की, तुम्हीन ऐकशात खरं, पण तुमले समजावुच नही, अनं दखशात खरं, पण तुमले दिसावुच नही;
15 ೧೫ ಈ ಜನರ ಹೃದಯವು ಮಂಕಾಯಿತು. ಇವರ ಕಿವಿಗಳು ಮಂದವಾದವು. ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆ ಹೊಂದಬಾರದೆಂದು ನಿರ್ಧಾರ ಮಾಡಿಕೊಂಡಿದ್ದಾರೆ’” ಎಂಬುದೇ.
कारण ह्या लोकसना मन कठीण व्हई जायेल शे, त्या बधीर कानघाई ऐकतस, अनी त्यासनी आपला डोया झाकी लियेल शेतस; यानाकरता की, त्यासनी डोयासघाई दखाले नको, कानसघाई ऐकाले नको, मनमातीन समजाले नको, त्यासनी वळाले नको, अनी मी त्यासले बरा कराले नको.
16 ೧೬ “ಆದರೆ ನೀವು ಧನ್ಯರು ಏಕೆಂದರೆನಿಮ್ಮ ಕಣ್ಣುಗಳು ಕಾಣುತ್ತವೆ, ನಿಮ್ಮ ಕಿವಿಗಳು ಕೇಳುತ್ತವೆ.
पण धन्य शेतस, तुमना डोया, कारण त्या दखी ऱ्हाईनात; अनी धन्य शेतस, तुमना कान कारण त्या ऐकी ऱ्हाईनात.
17 ೧೭ ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ನೋಡುತ್ತಿರುವ ಕಾರ್ಯಗಳನ್ನು ಬಹು ಮಂದಿ ಪ್ರವಾದಿಗಳೂ, ನೀತಿವಂತರೂ ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಾಗಲಿಲ್ಲ. ನೀವು ಕೇಳುತ್ತಿರುವ ಸಂಗತಿಗಳನ್ನು ಅವರು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಾಗಲಿಲ್ಲ.
मी तुमले खरंखरं सांगस की, तुम्हीन ज्या दखतस तेच दखाकरता बराच संदेष्टा अनं धार्मीकजण उत्साही व्हतात, तरी त्यासले दखाले मिळनं नही; अनी तुम्हीन ज्या ऐकतस तेच ऐकासाठे त्या उत्साही व्हतात, तरी त्यासले ऐकाले मिळनं नही.
18 ೧೮ “ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ.
आता पेरणाराना दृष्टांत ऐकी ल्या.
19 ೧೯ ಯಾವನಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ತಿಳಿದುಕೊಳ್ಳದೆ ಇದ್ದರೆದುಷ್ಟನು ಬಂದು ಆತನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಹಾಕುತ್ತಾನೆ. ಇವನೇ ಬೀಜ ಬಿದ್ದ ದಾರಿಯ ಮಗ್ಗುಲಾಗಿರುವನು.
कोणी राज्यनं वचन ऐकस पण ते त्याले समजस नही; तवय तो दुष्ट ईसन त्याना मनमधला पेरेल वचन काढी लेस; वाटवर पेरेल तो हाऊ शे.
20 ೨೦ ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟವನು ಯಾರೆಂದರೆ, ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸಿದರೂ,
खडकाळ जमीनवर पेरेल तो हाऊ शे की, वचन ऐकस, अनं तवळच आनंद करस;
21 ೨೧ ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಕೂಡಲೆ ಎಡವಿ ಬೀಳುತ್ತಾನೆ.
पण त्यासले मुया रास नही त्यामुये त्या थोडाच काळ टिकाव धरतस; अनी वचनमुये संकट वना किंवा छळ व्हयना म्हणजेच तो अडखळाले लागस.
22 ೨೨ ಮುಳ್ಳುಗಿಡಗಳ ನೆಲದಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ, ಐಶ್ವರ್ಯದ ಮೋಸತನವೂ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ಫಲವನ್ನು ಕೊಡದೇ ಇರುತ್ತಾನೆ. (aiōn )
काटेरी झुडपसमा पेरेल तो हाऊ शे की, वचन ऐकस; पण संसारनी चिंता मोह या त्यानी वचननी वाढले दाबी टाकस, अनी तो निष्फळ व्हस. (aiōn )
23 ೨೩ ಒಳ್ಳೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿ ತಿಳಿದುಕೊಂಡು ಫಲವಂತನಾಗಿ ನೂರರಷ್ಟಾಗಲಿ, ಅರವತ್ತರಷ್ಟಾಗಲಿ, ಮೂವತ್ತರಷ್ಟಾಗಲಿ ಫಲವನ್ನು ಕೊಡುವವನೇ” ಎಂದು ಹೇಳಿದನು.
चांगली जमीनवर पेरेल या शेतस की, त्या वचन ऐकीन समजतस; तर त्या फळ देतस; कोणी शंभरपट, कोणी साठपट, कोणी तीसपट, असा फळ देतस.
24 ೨೪ ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.
त्यानी त्यासले दुसरा दृष्टांत दिधा की, स्वर्गनं राज्य त्या माणुसना मायक शे, ज्यानी आपला शेतमा चांगलं बी पेरं.
25 ೨೫ ಆದರೆ ಜನರು ನಿದ್ರೆ ಮಾಡುವ ಸಮಯದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೋದನು.
लोके झोपमा व्हतात तवयच त्याना वैरी ईसन गहुमा निदण पेरीसन गया;
26 ೨೬ ಗೋದಿಯು ಬೆಳೆದು ಫಲ ಬಿಟ್ಟಾಗ ಕಳೆಯು ಸಹ ಕಾಣ ಬಂದಿತು.
पण जवय शेतमा पिकले पानटा फुटीन अनं कणीसमा दाणा वनात तवय निदण बी दखायनात.
27 ೨೭ ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು.
तवय घरमालकना नोकरसनी ईसन त्याले सांगं, महाराज, आपन आपला शेतमा चांगलं बी पैरा ना? मंग त्यामा निदाण कोठेन वनं?
28 ೨೮ ಅದಕ್ಕೆ ಅವನು, ‘ಇದು ವೈರಿ ಮಾಡಿದ ಕೆಲಸ’ ಎಂದು ಹೇಳಿದನು, ಅದಕ್ಕೆ ಆಳುಗಳು ಅವನಿಗೆ, ‘ಹಾಗಾದರೆ ನಾವು ಹೋಗಿ ಅದನ್ನು ಕಿತ್ತುಹಾಕುವುದು ನಿಮಗೆ ಇಷ್ಟವಿದೆಯೋ?’ ಎಂದು ಕೇಳಿದರು.
तवय मालक त्यासले बोलना, हाई काम कोणी वैरीनं शे. नोकरसनी त्याले सांगं, आम्हीन जाईसन त्यासले गोया करूत अशी तुमनी ईच्छा शे का?
29 ೨೯ ಅವರಿಗೆ ಅವನು, ‘ಬೇಡ, ಕಳೆಯನ್ನು ಕೀಳುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ.
तो त्यासले बोलना, नही, तुम्हीन निदाणले गोया करशात त्यानाबरोबर कदाचित गहुले पण उपटी टाकशात
30 ೩೦ ಸುಗ್ಗಿ ಕಾಲದ ತನಕ ಎರಡೂ ಒಟ್ಟಿಗೆ ಬೆಳೆಯಲಿ. ಸುಗ್ಗಿ ಕಾಲದಲ್ಲಿ ನಾನು ಕೊಯ್ಯುವವರಿಗೆ, ಮೊದಲು ಕಳೆಯನ್ನು ಕಿತ್ತು ತೆಗೆದು ಹೊರೆಕಟ್ಟಿ ಅದನ್ನು ಸುಡುವುದಕ್ಕೆ ಹಾಕಿ, ಗೋದಿಯನ್ನು ಕೂಡಿಸಿ ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು’” ಅಂದನು.
कापणीनी येळपावत दोन्हीसले बराबर वाढू द्या, मंग कापणीना येळले मी मजुरसले सांगसू की, पहिले निदाण गोया करा, अनं जाळाकरता त्याना पेंढ्या बांधा; अनी गहु मना कोठारसमा साठाडा.
31 ೩೧ ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು.
येशुनी त्यासले अजुन एक उदाहरण दिसन सांगं, की, स्वर्गनं राज्य मोहरीना दानासारखं शे; ते कोणी एक माणुसनी लिसन आपला वावरमा जाईन लाई दिधं;
32 ೩೨ ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಆದರೂ ಬೆಳೆದ ಮೇಲೆ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ” ಎಂದು ಹೇಳಿದನು.
तो तर सर्वा दानासमा बारीक शे, तरी तो वाढावर पालाभाज्याच पेक्षा मोठा व्हईन त्याना असं झाड व्हस की, आकाशमधला पक्षी ईसन त्याना फांद्यासमा घरटा बांधीसन राहतस.
33 ೩೩ ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.”
त्यानी त्यासले अजुन एक दृष्टांत सांगा, की, स्वर्गना राज्य खमीरना सारखं शे; ते एक बाईनी लिसन तीन माप पिठमा लपाईन ठेवं, म्हणीन ते खमीर शेवट सर्व फुगी गयं.
34 ೩೪ ಯೇಸು ಈ ಸಂಗತಿಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು. ಸಾಮ್ಯವಿಲ್ಲದೆ ಏನನ್ನೂ ಹೇಳಲಿಲ್ಲ.
या सर्वा गोष्टी येशुनी दृष्टांत दिसन लोकसनी गर्दीले सांग्यात; अनी उदाहरणशिवाय तो त्यासनासंगे काहीच बोलना नही;
35 ೩೫ ಹೀಗೆ, “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕದ ಆರಂಭದಿಂದ ಮರೆಯಾಗಿದ್ದವುಗಳನ್ನು ಗೋಚರಪಡಿಸುವೆನು” ಎಂದು ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು.
हाई असाकरता की, संदेष्टासनाद्वारा जे सांगामा येल व्हतं ते पुर्ण व्हावं; ते असं की, मी मनं तोंड उघाडीसन उदाहरण दिसु; जगना सुरवातपाईन जे गुप्त ते मी प्रकट करसु.
36 ೩೬ ಅನಂತರ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಹೋದನು. ಆಗ ಆತನ ಶಿಷ್ಯರು ಆತನ ಬಳಿಗೆ ಬಂದು, ಹೊಲದ ಕಳೆಯ ಸಾಮ್ಯದ ಅರ್ಥವನ್ನು ನಮಗೆ ವಿವರಿಸು ಅಂದರು.
नंतर येशु लोकसनी गर्दीले निरोप दिसन घरमा गया. अनी त्याना शिष्य त्यानाकडे ईसन बोलनात, वावरमधला निदणना उदाहरणना आमले फोड करीसन सांगा.
37 ೩೭ ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು.
त्यानी उत्तर दिधं की, चांगलं बी पेरणारा हाऊ मनुष्यना पोऱ्या शे;
38 ೩೮ ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆರಾಜ್ಯದ ಮಕ್ಕಳು.
शेत हाई जग शे; चांगलं बी हाई राज्याना पोऱ्या शेतस; निदण हाई त्या दुष्टना पोऱ्या शेतस;
39 ೩೯ ಕಳೆಯೆಂದರೆ ದುಷ್ಟನ ಮಕ್ಕಳು. ಅದನ್ನು ಬಿತ್ತುವ ವೈರಿ ಎಂದರೆ ಸೈತಾನನು. ಸುಗ್ಗಿಯ ಕಾಲವೆಂದರೆ ಯುಗದ ಸಮಾಪ್ತಿ. ಕೊಯ್ಯುವವರು ಅಂದರೆ ದೇವದೂತರು. (aiōn )
ते पेरणारा वैरी हाऊ सैतान शे; कापणी हाई या काळनी समाप्ती शे; अनी कापणी करनारा या देवदूत शेतस. (aiōn )
40 ೪೦ ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು. (aiōn )
यामुये जश निदाण गोया करीसन अग्नीमा जाळतस, तसच काळना समाप्तीना येळले व्हई. (aiōn )
41 ೪೧ ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದೊಳಗಿಂದ ಪಾಪಕ್ಕೆ ಕಾರಣವಾದವರೆಲ್ಲರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕಿ ಕೊಂಡದಲ್ಲಿ ಹಾಕುವರು.
मनुष्यना पोऱ्या आपला देवदूतसले धाडी, अनी त्या सर्वा अडखळा आणनारासले अनं अधर्म करनारासले त्याना राज्यमाईन गोया करतीन.
42 ೪೨ ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು
अनं त्यासले नरक अग्नीना भट्टीमा टाकतीन; तठे त्यासनं रडानं अनं दात खाणं राही.
43 ೪೩ ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದ್ದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ ಅಂದನು.
तवय “धार्मीकजण आपला बापना राज्यमा सूर्याना मायक ‘चमकतीन’ ज्याले कान शे तो ऐको.”
44 ೪೪ “ಪರಲೋಕ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಟ್ಟು. ತನಗಾದ ಸಂತೋಷದಿಂದ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.
स्वर्गनं राज्य शेतमा लपाईन ठेयल धनसारखं शे; ते एखादा माणुसले सापडावर त्यानी ते लपाईन ठेवं, अनी आनंद व्हवामुये त्यानी जाईसन आपला सर्व काही ईकी टाकं, अनी मंग ते शेत ईकत लिधं.
45 ೪೫ ಮತ್ತು ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
अजुन स्वर्गनं राज्य चांगला मोतीना शोध करनारा एखादा व्यापारीना सारखं शे;
46 ೪೬ ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.
त्याले एक अति मोलवान मोती आढळना तवय जाईसन त्यानी आपलं सर्वा काही ईकी टाकं अनी ते ईकत लिधं.
47 ೪೭ “ಪರಲೋಕ ರಾಜ್ಯವು ಸಮುದ್ರದಲ್ಲಿ ಎಲ್ಲಾ ತರವಾದ ಮೀನುಗಳನ್ನು ಹಿಡಿಯುವ ಒಂದು ಬಲೆಗೆ ಹೋಲಿಕೆಯಾಗಿದೆ.
अजुन स्वर्गनं राज्य समुद्रमा टाकेल जाळानामायक शे; ज्यामा सर्वा प्रकारना जीव एकत्र सापडतस.
48 ೪೮ ಅದು ತುಂಬಿದ ಮೇಲೆ ಬೆಸ್ತರು ಅದನ್ನು ದಡಕ್ಕೆ ಎಳೆದುತಂದು ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿಬಿಡುವರು.
ते भरावर माणसंसनी काठवर ओढी आणं अनी त्यासनी बशीसन ज्या चांगला त्या भांडामा गोया करात, अनं वाईट त्या फेकी दिधात.
49 ೪೯ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವುದು. ದೇವದೂತರು ಹೊರಟು ಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆ ಮಾಡಿ ಅವರನ್ನು ಬೆಂಕಿಯ ಕೊಂಡದಲ್ಲಿ ಹಾಕುವರು. (aiōn )
तसच हाई युगना समाप्तीमा व्हई; देवदूत ईसन धार्मीकसपाईन दुष्टासले वेगळा करतीन; (aiōn )
50 ೫೦ ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
अनी त्यासले अग्नीना भट्टीमा टाकतीन, तठे रडानं अनं दातखाणं राही.
51 ೫೧ “ಈ ಎಲ್ಲಾ ಸಂಗತಿಗಳು ನಿಮಗೆ ಅರ್ಥವಾಯಿತೋ” ಎಂದು ಕೇಳಲು, ಶಿಷ್ಯರು, “ಅರ್ಥವಾಯಿತು” ಅಂದರು.
तुमले या गोष्टी समजन्यात का? त्या त्याले बोलनात, हा.
52 ೫೨ ಆಗ ಆತನು ಅವರಿಗೆ, “ಹೀಗಿರಲಾಗಿ ಪರಲೋಕ ರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು, ತನ್ನ ಬೊಕ್ಕಸದೊಳಗಿನಿಂದ ಹೊಸ ವಸ್ತುಗಳನ್ನೂ, ಹಳೆಯ ವಸ್ತುಗಳನ್ನೂ ಹೊರಗೆ ತೆಗೆಯುವಂಥ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ” ಎಂದು ಹೇಳಿದನು.
तवय त्यानी त्यासले सांगं, जो प्रत्येक शास्त्री स्वर्गना राज्यना शिष्य व्हयेल शे तो आपला भांडामाईन नवा जुना पदार्थ काढनारा माणुसना मायक शे.
53 ೫೩ ಯೇಸು ಈ ಸಾಮ್ಯಗಳನ್ನು ಹೇಳಿ ಮುಗಿಸಿದ ಮೇಲೆ ಅಲ್ಲಿಂದ ಹೊರಟು ಹೋದನು.
मंग असं व्हयनं की, या दृष्टांत समाप्त करावर येशु तठेन निंघी गया;
54 ೫೪ ತರುವಾಯ ಆತನು ತನ್ನ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಜನರಿಗೆ ಉಪದೇಶಮಾಡುತ್ತಿದ್ದನು. ಅವರು ಅದನ್ನು ಕೇಳಿ ಆಶ್ಚರ್ಯ ಪಟ್ಟು, “ಇವನಿಗೆ ಈ ಜ್ಞಾನವೂ ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದಿದ್ದಾವು?
अनी आपला गाववर येवावर त्यानी त्यासना सभास्थानमा त्यासले असं शिकाडं की, त्या थक्क व्हईसन बोलनात की, हाई ज्ञान अनं हाई सामर्थ्य याले कोठेन प्रकट व्हयनं?
55 ೫೫ ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬುವವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ?
काय हाऊ सुतारना पोऱ्या नही शे का? यानी मायले मरीया म्हणतस ना? याकोब, योसेफ, शिमोन अनं यहूदा, या त्याना भाऊ शेतस ना?
56 ೫೬ ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು.
अनी याना सर्व बहिणी या आपलाबरोबर राहतस नही का? तर हाई सर्वा याले कोठेन मिळनं?
57 ೫೭ ಆದರೆ ಯೇಸುವು ಅವರಿಗೆ “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು.
अस ऐकीन त्यासले ठोकर लागनी. पण येशुनी त्यासले सांगं, संदेष्टाले आपला देश अनं आपला घर, नातेवाईक यासमा सन्मान मिळस नही.
58 ೫೮ ಅವರ ಅಪನಂಬಿಕೆಯ ನಿಮಿತ್ತ ಆತನು ಅಲ್ಲಿ ಹೆಚ್ಚು ಮಹತ್ಕಾರ್ಯಗಳನ್ನು ಮಾಡಲಿಲ್ಲ.
त्यासना अईश्वासमुये त्यानी तठे जास्त चमत्कार करात नही.