< ಮತ್ತಾಯನು 10 >
1 ೧ ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವುದಕ್ಕೂ ಎಲ್ಲಾ ಬಗೆಯ ರೋಗಗಳನ್ನೂ ಎಲ್ಲಾ ರೀತಿಯ ಬೇನೆಗಳನ್ನೂ ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು.
तेबे यीशुए आपणे बारा चेले बुलाए और तिना खे दुष्टात्मा पाँदे अक्क दित्तेया कि हर बमारिया खे निकयाल़ो और हर कमजोरिया खे दूर करो।
2 ೨ ಈ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಯಾವುವೆಂದರೆ, ಮೊದಲನೆಯವನು ಪೇತ್ರನೆನಿಸಿಕೊಳ್ಳುವ ಸೀಮೋನನು, ಅವನ ತಮ್ಮ ಅಂದ್ರೆಯ, ಜೆಬೆದಾಯನ ಮಗ ಯಾಕೋಬ, ಅವನ ತಮ್ಮನಾದ ಯೋಹಾನ,
इना बारा प्रेरिता रे नाओं यो ए-पईला शमौन, जेसखे पतरस बी बोलोए, और तेसरा पाई अन्द्रियास, जब्दियो रा पाऊ याकूब और तेसरा पाई यूहन्ना।
3 ೩ ಫಿಲಿಪ್ಪ, ಬಾರ್ತೊಲೊಮಾಯ, ತೋಮ, ಸುಂಕ ವಸೂಲಿಗಾರನಾದ ಮತ್ತಾಯ, ಅಲ್ಫಾಯನ ಮಗ ಯಾಕೋಬ, ತದ್ದಾಯ,
फिलिप्पुस, बरतुल्मै थोमा, कर लणे वाल़ा मत्ती, हलफईसो रा पाऊ याकूब और तद्दै।
4 ೪ ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ ಹಾಗೂ ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ, ಎಂಬಿವರುಗಳೇ.
शमौन कनानी, यहूदा इस्करियोती, जिने सेयो पकड़वाए बी थे।
5 ೫ ಈ ಹನ್ನೆರಡು ಮಂದಿಯನ್ನು ಯೇಸು ಕಳುಹಿಸಿದನು; ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟದ್ದೇನಂದರೆ, “ಅನ್ಯಜನಗಳಿರುವಲ್ಲಿಗೆ ಹೋಗಬೇಡಿರಿ, ಸಮಾರ್ಯದವರ ಊರೊಳಗೆ ಕಾಲಿಡಬೇಡಿರಿ;
यो बारा जणे यीशुए ये आज्ञा देई की पेजे कि ओरी जातिया बीचे नि जाणा, “ना ई सामरिया रे केसी बी देशो रे जाणा।
6 ೬ ಇವರನ್ನು ಬಿಟ್ಟು ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ.
पर इस्राएलो रे कराने री राची रिया पेडा गे ई जाणा
7 ೭ ‘ಪರಲೋಕ ರಾಜ್ಯವು ಸಮೀಪವಾಯಿತೆಂದು’ ಸಾರಿಹೇಳುತ್ತಾ ಹೋಗಿರಿ.
और चलदे-चलदे ये प्रचार करो कि स्वर्गो रा राज्य नेड़े आईगा रा।
8 ೮ ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.
बमारा खे ठीक करो, मरेया रे खे जिऊँदा करो, कोढ़िया खे शुद्ध करो, दुष्टात्मा खे निकयाल़ो, तुसे मुफ्त पाई राखेया और मुफ्त ई देओ।
9 ೯ ನಿಮ್ಮ ಕೈ ಚೀಲಗಳಲ್ಲಿ ಚಿನ್ನ, ಹಣ ದುಡ್ಡುಗಳನ್ನೂ, ದಾರಿಗೆ ಪ್ರಯಾಣದ ಚೀಲಗಳನ್ನೂ,
आपणी गाठड़िया रे ना सुईना, ना रूपा और ना तांबा राखणा।
10 ೧೦ ಎರಡು ಅಂಗಿ, ಚಪ್ಪಲಿ, ಕೋಲು ಮೊದಲಾದವುಗಳನ್ನೂ ತೆಗೆದುಕೊಳ್ಳಬೇಡಿರಿ. ಆಳು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ.
बाटा खे ना चोल़ा, ना दो कुरते, ना जोड़े और ना ई सोठा लओ, कऊँकि मजूरदारो खे तेसरी रोटी तो मिलणी ई चाईयो।
11 ೧೧ ನೀವು ಯಾವುದೇ ಊರಿಗೆ ಅಥವಾ ಹಳ್ಳಿಗೆ ಪ್ರವೇಶಿಸಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ ಮುಂದಕ್ಕೆ ಹೊರಡುವ ತನಕ ಅ ಊರಲ್ಲೇ ಇರಿ.
“तुसे जेते बी गांव या नगरो रे जाओ तो पता लगाओ कि कुण खरा ए? और जदुओ तक तेथा ते नि निकल़ो, तेसगे ई रओ।
12 ೧೨ ಆ ಮನೆಯೊಳಗೆ ಹೋಗುವಾಗ ಶುಭವಾಗಲಿ ಅನ್ನಿರಿ.
जेबे तुसे तेसरे कअरे जाओ तो तेसखे आशीष देणी।
13 ೧೩ ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಸಮಾಧಾನವು ಅವರಿಗೆ ಬರಲಿ; ಅಯೋಗ್ಯರಾಗಿದ್ದರೆ ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಿ ಬರಲಿ.
जे तेस कअरो रे मांणू खरे ओगे तो तुसा रा कल्याण तिना गे पऊँछणा, पर सेयो खरे नि ओगे तो तुसा रा कल्याण तुसा गे वापस आयी जाणा।
14 ೧೪ ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನೂ ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.
जो कोई तुसा खे मानोगा नि और तुसा री गल्ला नि सुणो, तो तेस कअरो या नगरो ते निकल़दे ऊए आपणे पैरा री तूड़ तेथी चाड़ी देयो।
15 ೧೫ ನ್ಯಾಯವಿಚಾರಣೆಯ ದಿನದಲ್ಲಿ ಅಂಥ ಊರಿನ ಗತಿಯು ಸೊದೋಮ್ ಗೊಮೋರಗಳ ಸೀಮೆಯ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
आऊँ तुसा खे सच बोलूँआ कि जेबे न्याय रा दिन आऊणा, तेबे तेस नगरो री दशा ते, सदोम और गमोरा रे देशो री दशा जादा सईणे जोगी ऊणी।”
16 ೧೬ “ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ.
और यीशुए बोलेया, “देखो, आऊँ तुसा खे पेडा जेड़े तिना लोका बीचे पेजुँआ जो भेड़िए जेड़े खतरनाक ए, तो तुसे सापो जेड़े अक्लमंद और कबूतरो जेड़े शरीफ रओ बणे रे।
17 ೧೭ ಇದಲ್ಲದೆ ಜನರ ವಿಷಯದಲ್ಲಿ ಎಚ್ಚರವಾಗಿರಿ; ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಚಾವಟಿಗಳಿಂದ ಹೊಡೆಯುವರು.
पर लोका ते चौकस रओ, कऊँकि तिना तुसे पंचायती रे देई देणे और आपणी प्रार्थना रे कअरो रे तुसा खे कोड़े बाणे।
18 ೧೮ ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಕರೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವಿರಿ.
तुसे मेरी तंईं हाकिमो और राजेया रे सामणे तिना पाँदे और दूजी जातिया पाँदे गवा ऊणे खे पऊँछाए जाणे।
19 ೧೯ ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಏನು ಮಾತನಾಡಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಸಮಯದಲ್ಲಿ ನಿಮಗೆ ಗೋಚರವಾಗುವುದು.
जेबे सेयो तुसा खे पकड़वाओगे, तेबे ये चिन्ता नि करनी कि आसा किंयाँ और क्या करना, कऊँकि जो बी तुसा बोलणा ओगा, से तुसा खे तेस बखते ई बताई देणा।
20 ೨೦ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತನಾಡುವನು.
कऊँकि बोलणे वाल़े तुसे नि, पर तुसा रे पिते रा पवित्र आत्मा तुसा रे बोलोआ।
21 ೨೧ ಇದಲ್ಲದೆ ಸಹೋದರನು ಸಹೋದರನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ತಂದೆತಾಯಿಗಳ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು.
“पाईया आपणे पाई और पितेया आपणे पाऊ कुल़वाणे खे पकड़वाणे और बच्चे आपणे माया-बाओ रे खलाफ उठणे और तिना सेयो कुल़ाई देणे।
22 ೨೨ ಮತ್ತು ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆಹೊಂದುವನು.
मेरे नाओं री बजअ ते सबी लोका तुसा ते बैर राखणा, पर जो आखरी तक सब्र राखोगा, तेसरा ई उद्धार ऊणा।
23 ೨೩ ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳನ್ನು ಸಂಚರಿಸಿ ಮುಗಿಸಿರುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
जेबे सेयो तुसा खे एकी जगा रे सताओगे, तो तुसे दूजी जगा खे नठी जाणा। आऊँ तुसा खे सच लगी रा बोलणे कि तुसे इस्राएलो रे सारे देशो रे कूमी नि चुकणे कि तदुओ खे माणूं रा पुत्र आयी जाणा।
24 ೨೪ “ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ, ಒಡೆಯನಿಗಿಂತ ಆಳು ದೊಡ್ಡವನಲ್ಲ.
“चेला आपणे गुरूओ ते बड़ा नि ऊँदा; ना दास आपणे मालको ते।
25 ೨೫ ಗುರುವಿನಂತೆ ಆಗುವುದು ಶಿಷ್ಯನಿಗೆ ಸಾಕು, ಒಡೆಯನಂತೆ ಆಗುವುದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆಬೆಲ್ಜೆಬೂಲನೆಂದು ಹೆಸರಿಟ್ಟು ಕರೆದ ಮೇಲೆ ಆತನ ಮನೆಯವರನ್ನು ಇನ್ನೆಷ್ಟು ಅವಹೇಳನವಾಗಿ ಕರೆದಾರು?
चेले रा गुरूओ रे और दासो रा मालको रे बराबर ऊणा ई बऊत ए; जेबे तिने कअरो रे मालको खे शैतान बोलेया, तो तेसरे कअरो वाल़ेया खे क्या कुछ नि बोलणा?
26 ೨೬ ಆದರೂ ಅವರಿಗೆ ಹೆದರಬೇಡಿರಿ. ಮರೆಯಾಗಿರುವ ಯಾವುದೂ ವ್ಯಕ್ತವಾಗದೆ ಇರುವುದಿಲ್ಲ; ಬೆಳಕಿಗೆ ಬಾರದ ರಹಸ್ಯವು ಇಲ್ಲ.
“इजी री खातर मांणूआ ते नि डरो, कऊँकि कुछ बी टकेया रा निए, जो खोलेया नि जाणा और ना कुछ छिपेया राए, जो जाणी नि सकदे।
27 ೨೭ ನಾನು ಕತ್ತಲಲ್ಲಿ ನಿಮಗೆ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ, ಮತ್ತು ಕಿವಿಯಲ್ಲಿ ಕೇಳಿದ್ದನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ.
जो आऊँ तुसा खे न्हेरे रे बोलूँआ, तिजी खे तुसे लोका बीचे दिनो रे बखते सबी रे सामणे खुली की बोलेया करो और जो आपणे कानो रे खसफस करोए, तेस छतो पाँदो ते बोलेया करो।
28 ೨೮ ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ. (Geenna )
जो शरीरो खे काई सकोए, पर आत्मा खे काई नि सकदे, तिना ते नि डरो, पर परमेशरो तेई डरो, जो आत्मा और शरीर दूँईं खे नरको रे नाश करी सकोआ। (Geenna )
29 ೨೯ ಕಾಸಿಗೆ ಎರಡು ಗುಬ್ಬಿಗಳನ್ನು ಮಾರುವುದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳದು.
एकी पैसे साथे दो चिड़िया बिकोईया? तेबे बी तुसा रे पिते री इच्छा ते बिना तिना बीचा ते एक बी जमीना रे नि पड़ी सकदी।
30 ೩೦ ನಿಮ್ಮ ತಲೆಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.
तुसा रे सिरो रे बाल़ बी सारे गिणे रे ए।
31 ೩೧ ಆದುದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚು ಬೆಲೆಬಾಳುವವರಾಗಿದ್ದೀರಿ.
इजी री खातर डरो नि; तुसे मुखती चिड़िया ते बी बढ़ी की ए।
32 ೩೨ “ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.
“जो कोई मांणूआ सामणे माखे मानी लओगा, से मां बी आपणे स्वर्गिय पिते सामणे मानी लणा।
33 ೩೩ ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.
पर जो कोई मांणूआ सामणे माखे नि मानोगा, तो मां बी से स्वर्गिय पिते सामणे नि मानणा।
34 ೩೪ “ಭೂಲೋಕದ ಮೇಲೆ ಸಮಾಧಾನ ತರುವುದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವುದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವುದಕ್ಕೆ ಬಂದೆನು.
“ये नि समजो कि आऊँ तरतिया पाँदे मेल-जोल करने आयी रा, आऊँ मेल-जोल करने नि, पर तलवार चलवाणे आयी रा।
35 ೩೫ ಹೇಗೆಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದಹುಟ್ಟಿಸುವುದಕ್ಕೆ ಬಂದೆನು.
आऊँ तो आयी इजी खे रया कि ‘मांणूए खे तेसरे पिते ते और बेटिया खे तेसा री माया ते और बऊआ खे तेसा री सासुआ ते लग करुँ।
36 ೩೬ ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ಶತ್ರುಗಳಾಗಿರುವರು.
मांणूए रे बैरी तेसरे कअरो रेई लोक ऊणे।’
37 ೩೭ ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ.
“जो माया-बावा खे मांते जादा प्यार करोआ, से मेरे लायक निए और जो माठे-बेटिया खे मांते जादा प्यार करोआ, से बी मेरे लायक निए।
38 ೩೮ ಮತ್ತು ಯಾವನಾದರೂ ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದಿದ್ದರೆ ನನ್ನ ಶಿಷ್ಯನಾಗಲು ಯೋಗ್ಯನಲ್ಲ.
जे तुसे मेरे चेले बणना चाओए, पर मेरिया तंईं मरने खे त्यार निए, तो तुसे मेरे लायक निए।
39 ೩೯ ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳೆದುಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು.
जो आपणे प्राण बचाओआ, तेस से खोणा और जो मेरी बजअ ते आपणे प्राण खोओआ, तेस अनन्त जिन्दगी पाणी।
40 ೪೦ “ನಿಮ್ಮನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುವವನಾಗಿದ್ದಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವೀಕರಿಸುವವನಾಗಿದ್ದಾನೆ.
“जो तुसा खे मानोआ, से माखे मानोआ और जो माखे मानोआ, से मेरे पेजणे वाल़े खे मानोआ।
41 ೪೧ ಪ್ರವಾದಿಯನ್ನು ಪ್ರವಾದಿಯೆಂದು ಸ್ವೀಕರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು; ನೀತಿವಂತನನ್ನು ನೀತಿವಂತನೆಂದು ಸ್ವೀಕರಿಸಿಕೊಳ್ಳುವವನು ನೀತಿವಂತನಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು.
जो भविष्यबक्ते खे भविष्यबक्ता जाणी की ग्रहण करोआ, तेस भविष्यबक्ते जेड़ा ईनाम पाणा और जो तर्मिंयों खे तर्मी जाणी की ग्रहण करो, तेस तर्मिंयों जेड़ा ईनाम पाणा।
42 ೪೨ ಮತ್ತುಈ ಕನಿಷ್ಠರಾದವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಯಾರಾದರೂ ಒಂದು ತಂಬಿಗೆ ತಣ್ಣೀರನ್ನು ಕುಡಿಯುವುದಕ್ಕೆ ಕೊಟ್ಟರೆ ತಕ್ಕ ಪ್ರತಿಫಲವು ಅವನಿಗೆ ಬರುವುದು ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಅಂದನು.
जो कोई इना छोटेया बीचा ते एकी खे बी मेरा चेला जाणी की बस एक ठण्डे पाणिए रा कटोरा पल़याओगा, आऊँ तुसा खे सच लगी रा बोलणे, तेस किंयाँ बी आपणा प्रतिफल नि खोणा।”