< ಮತ್ತಾಯನು 1 >
1 ೧ ಅಬ್ರಹಾಮನ ಮಗನಾದ ದಾವೀದನ ಕುಮಾರನಾದ ಯೇಸು ಕ್ರಿಸ್ತನ ವಂಶಾವಳಿ.
ಇಬ್ರಾಹೀಮಃ ಸನ್ತಾನೋ ದಾಯೂದ್ ತಸ್ಯ ಸನ್ತಾನೋ ಯೀಶುಖ್ರೀಷ್ಟಸ್ತಸ್ಯ ಪೂರ್ವ್ವಪುರುಷವಂಶಶ್ರೇಣೀ|
2 ೨ ಅಬ್ರಹಾಮನ ಮಗನು ಇಸಾಕನು. ಇಸಾಕನ ಮಗನು ಯಾಕೋಬನು. ಯಾಕೋಬನ ಮಗನು ಯೆಹೂದನು, ಅವನ ಅಣ್ಣತಮ್ಮಂದಿರು ಯೆಹೂದನ ಮಕ್ಕಳು.
ಇಬ್ರಾಹೀಮಃ ಪುತ್ರ ಇಸ್ಹಾಕ್ ತಸ್ಯ ಪುತ್ರೋ ಯಾಕೂಬ್ ತಸ್ಯ ಪುತ್ರೋ ಯಿಹೂದಾಸ್ತಸ್ಯ ಭ್ರಾತರಶ್ಚ|
3 ೩ ಯೆಹೂದನಿಗೆ ತಾಮಾರಳಲ್ಲಿ ಪೆರೆಚನು, ಜೆರಹನು ಹುಟ್ಟಿದರು. ಪೆರೆಚನ ಮಗನು ಹೆಚ್ರೋನನು.
ತಸ್ಮಾದ್ ಯಿಹೂದಾತಸ್ತಾಮರೋ ಗರ್ಭೇ ಪೇರಸ್ಸೇರಹೌ ಜಜ್ಞಾತೇ, ತಸ್ಯ ಪೇರಸಃ ಪುತ್ರೋ ಹಿಷ್ರೋಣ್ ತಸ್ಯ ಪುತ್ರೋ ಽರಾಮ್|
4 ೪ ಹೆಚ್ರೋನನ ಮಗನು ಅರಾಮನು. ಅರಾಮನ ಮಗನು ಅಮ್ಮಿನಾದಾಬನು. ಅಮ್ಮಿನಾದಾಬನ ಮಗನು ನಹಶೋನನು. ನಹಶೋನನ ಮಗನು ಸಲ್ಮೋನನು.
ತಸ್ಯ ಪುತ್ರೋ ಽಮ್ಮೀನಾದಬ್ ತಸ್ಯ ಪುತ್ರೋ ನಹಶೋನ್ ತಸ್ಯ ಪುತ್ರಃ ಸಲ್ಮೋನ್|
5 ೫ ಸಲ್ಮೋನನ ಮಗನಾದ ಬೋವಜನು ರಾಹಾಬಳಲ್ಲಿ ಹುಟ್ಟಿದವನು. ಬೋವಜನ ಮಗನು ಓಬೇದನು ರೂತಳಲ್ಲಿ ಹುಟ್ಟಿದವನು. ಓಬೇದನ ಮಗನು ಇಷಯನು.
ತಸ್ಮಾದ್ ರಾಹಬೋ ಗರ್ಭೇ ಬೋಯಮ್ ಜಜ್ಞೇ, ತಸ್ಮಾದ್ ರೂತೋ ಗರ್ಭೇ ಓಬೇದ್ ಜಜ್ಞೇ, ತಸ್ಯ ಪುತ್ರೋ ಯಿಶಯಃ|
6 ೬ ಇಷಯನ ಮಗನು ಅರಸನಾದ ದಾವೀದನು. ದಾವೀದನ ಮಗನಾದ ಸೊಲೊಮೋನನು ಊರೀಯನ ಹೆಂಡತಿಯಲ್ಲಿ ಹುಟ್ಟಿದವನು.
ತಸ್ಯ ಪುತ್ರೋ ದಾಯೂದ್ ರಾಜಃ ತಸ್ಮಾದ್ ಮೃತೋರಿಯಸ್ಯ ಜಾಯಾಯಾಂ ಸುಲೇಮಾನ್ ಜಜ್ಞೇ|
7 ೭ ಸೊಲೊಮೋನನ ಮಗನು ರೆಹಬ್ಬಾಮನು. ರೆಹಬ್ಬಾಮನ ಮಗನು ಅಬೀಯನು. ಅಬೀಯನ ಮಗನು ಆಸನು.
ತಸ್ಯ ಪುತ್ರೋ ರಿಹಬಿಯಾಮ್, ತಸ್ಯ ಪುತ್ರೋಽಬಿಯಃ, ತಸ್ಯ ಪುತ್ರ ಆಸಾ: |
8 ೮ ಆಸನ ಮಗನು ಯೆಹೋಷಾಫಾಟನು. ಯೆಹೋಷಾಫಾಟನ ಮಗನು ಯೆಹೋರಾಮನು. ಯೆಹೋರಾಮನ ಮಗನು ಉಜ್ಜೀಯನು.
ತಸ್ಯ ಸುತೋ ಯಿಹೋಶಾಫಟ್ ತಸ್ಯ ಸುತೋ ಯಿಹೋರಾಮ ತಸ್ಯ ಸುತ ಉಷಿಯಃ|
9 ೯ ಉಜ್ಜೀಯನ ಮಗನು ಯೋತಾಮನು. ಯೋತಾಮನ ಮಗನು ಆಹಾಜನನು. ಆಹಾಜನ ಮಗನು ಹಿಜ್ಕೀಯನು.
ತಸ್ಯ ಸುತೋ ಯೋಥಮ್ ತಸ್ಯ ಸುತ ಆಹಮ್ ತಸ್ಯ ಸುತೋ ಹಿಷ್ಕಿಯಃ|
10 ೧೦ ಹಿಜ್ಕೀಯನ ಮಗನು ಮನಸ್ಸೆಯನು. ಮನಸ್ಸೆಯ ಮಗನು ಆಮೋನನು.
ತಸ್ಯ ಸುತೋ ಮಿನಶಿಃ, ತಸ್ಯ ಸುತ ಆಮೋನ್ ತಸ್ಯ ಸುತೋ ಯೋಶಿಯಃ|
11 ೧೧ ಆಮೋನ ಮಗನು ಯೋಷೀಯನು. ಬಾಬಿಲೋನಿಗೆ ಸೆರೆಹೋದ ಸಮಯದಲ್ಲಿ ಯೋಷೀಯನಿಗೆ ಯೆಕೊನ್ಯನು, ಅವನ ಅಣ್ಣತಮ್ಮಂದಿರು ಹುಟ್ಟಿದರು.
ಬಾಬಿಲ್ನಗರೇ ಪ್ರವಸನಾತ್ ಪೂರ್ವ್ವಂ ಸ ಯೋಶಿಯೋ ಯಿಖನಿಯಂ ತಸ್ಯ ಭ್ರಾತೃಂಶ್ಚ ಜನಯಾಮಾಸ|
12 ೧೨ ಬಾಬಿಲೋನಿಗೆ ಸೆರೆಹೋದ ಮೇಲೆ ಯೆಕೊನ್ಯನು ಶೆಯಲ್ತಿಯೇಲನನ್ನು ಪಡೆದನು. ಶೆಯಲ್ತಿಯೇಲನ ಮಗನು ಜೆರುಬ್ಬಾಬೆಲನು
ತತೋ ಬಾಬಿಲಿ ಪ್ರವಸನಕಾಲೇ ಯಿಖನಿಯಃ ಶಲ್ತೀಯೇಲಂ ಜನಯಾಮಾಸ, ತಸ್ಯ ಸುತಃ ಸಿರುಬ್ಬಾವಿಲ್|
13 ೧೩ ಜೆರುಬ್ಬಾಬೆಲನ ಮಗನು ಅಬಿಹೂದನು. ಅಬಿಹೂದನ ಮಗನು ಎಲ್ಯಕೀಮನು. ಎಲ್ಯಕೀಮನ ಮಗನು ಅಜೋರನು.
ತಸ್ಯ ಸುತೋ ಽಬೋಹುದ್ ತಸ್ಯ ಸುತ ಇಲೀಯಾಕೀಮ್ ತಸ್ಯ ಸುತೋಽಸೋರ್|
14 ೧೪ ಅಜೋರನ ಮಗನು ಸದೋಕನು. ಸದೋಕನ ಮಗನು ಅಖೀಮನು. ಅಖೀಮನ ಮಗನು ಎಲಿಹೂದನು.
ಅಸೋರಃ ಸುತಃ ಸಾದೋಕ್ ತಸ್ಯ ಸುತ ಆಖೀಮ್ ತಸ್ಯ ಸುತ ಇಲೀಹೂದ್|
15 ೧೫ ಎಲಿಹೂದನ ಮಗನು ಎಲಿಯಾಜರನು. ಎಲಿಯಾಜರನ ಮಗನು ಮತ್ತಾನನು. ಮತ್ತಾನನ ಮಗನು ಯಾಕೋಬನು.
ತಸ್ಯ ಸುತ ಇಲಿಯಾಸರ್ ತಸ್ಯ ಸುತೋ ಮತ್ತನ್|
16 ೧೬ ಯಾಕೋಬನ ಮಗನು ಯೋಸೇಫನು. ಯೋಸೇಫನು ಮರಿಯಳ ಗಂಡನು. ಈ ಮರಿಯಳಿಂದಲೇ ಕ್ರಿಸ್ತನೆಂಬ ಯೇಸು ಹುಟ್ಟಿದನು.
ತಸ್ಯ ಸುತೋ ಯಾಕೂಬ್ ತಸ್ಯ ಸುತೋ ಯೂಷಫ್ ತಸ್ಯ ಜಾಯಾ ಮರಿಯಮ್; ತಸ್ಯ ಗರ್ಭೇ ಯೀಶುರಜನಿ, ತಮೇವ ಖ್ರೀಷ್ಟಮ್ (ಅರ್ಥಾದ್ ಅಭಿಷಿಕ್ತಂ) ವದನ್ತಿ|
17 ೧೭ ಅಬ್ರಹಾಮನಿಂದ ದಾವೀದನ ವರೆಗೂ ಒಟ್ಟು ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿನ ದಾಸತ್ವಕ್ಕೆ ಹೋಗುವವರೆಗೂ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿನ ದಾಸತ್ವದ ದಿನದಿಂದ ಕ್ರಿಸ್ತನವರೆಗೆ ಹದಿನಾಲ್ಕು ತಲೆಮಾರುಗಳು.
ಇತ್ಥಮ್ ಇಬ್ರಾಹೀಮೋ ದಾಯೂದಂ ಯಾವತ್ ಸಾಕಲ್ಯೇನ ಚತುರ್ದಶಪುರುಷಾಃ; ಆ ದಾಯೂದಃ ಕಾಲಾದ್ ಬಾಬಿಲಿ ಪ್ರವಸನಕಾಲಂ ಯಾವತ್ ಚತುರ್ದಶಪುರುಷಾ ಭವನ್ತಿ| ಬಾಬಿಲಿ ಪ್ರವಾಸನಕಾಲಾತ್ ಖ್ರೀಷ್ಟಸ್ಯ ಕಾಲಂ ಯಾವತ್ ಚತುರ್ದಶಪುರುಷಾ ಭವನ್ತಿ|
18 ೧೮ ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ, ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು.
ಯೀಶುಖ್ರೀಷ್ಟಸ್ಯ ಜನ್ಮ ಕಥ್ಥತೇ| ಮರಿಯಮ್ ನಾಮಿಕಾ ಕನ್ಯಾ ಯೂಷಫೇ ವಾಗ್ದತ್ತಾಸೀತ್, ತದಾ ತಯೋಃ ಸಙ್ಗಮಾತ್ ಪ್ರಾಕ್ ಸಾ ಕನ್ಯಾ ಪವಿತ್ರೇಣಾತ್ಮನಾ ಗರ್ಭವತೀ ಬಭೂವ|
19 ೧೯ ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದ ಕಾರಣ ಮರಿಯಳನ್ನು ಬಯಲಿಗೆ ತಂದು ಅವಮಾನಕ್ಕೆ ಗುರಿಮಾಡದೆ ನಿಶ್ಚಿತಾರ್ಥವನ್ನು ರಹಸ್ಯವಾಗಿ ಮುರಿದುಬಿಡಬೇಕೆಂದು ಆಲೋಚಿಸಿದ್ದನು.
ತತ್ರ ತಸ್ಯಾಃ ಪತಿ ರ್ಯೂಷಫ್ ಸೌಜನ್ಯಾತ್ ತಸ್ಯಾಃ ಕಲಙ್ಗಂ ಪ್ರಕಾಶಯಿತುಮ್ ಅನಿಚ್ಛನ್ ಗೋಪನೇನೇ ತಾಂ ಪಾರಿತ್ಯಕ್ತುಂ ಮನಶ್ಚಕ್ರೇ|
20 ೨೦ ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ.
ಸ ತಥೈವ ಭಾವಯತಿ, ತದಾನೀಂ ಪರಮೇಶ್ವರಸ್ಯ ದೂತಃ ಸ್ವಪ್ನೇ ತಂ ದರ್ಶನಂ ದತ್ತ್ವಾ ವ್ಯಾಜಹಾರ, ಹೇ ದಾಯೂದಃ ಸನ್ತಾನ ಯೂಷಫ್ ತ್ವಂ ನಿಜಾಂ ಜಾಯಾಂ ಮರಿಯಮಮ್ ಆದಾತುಂ ಮಾ ಭೈಷೀಃ|
21 ೨೧ ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ‘ಯೇಸು’ ಎಂದು ಹೆಸರಿಡಬೇಕು; ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು,” ಅಂದನು.
ಯತಸ್ತಸ್ಯಾ ಗರ್ಭಃ ಪವಿತ್ರಾದಾತ್ಮನೋಽಭವತ್, ಸಾ ಚ ಪುತ್ರಂ ಪ್ರಸವಿಷ್ಯತೇ, ತದಾ ತ್ವಂ ತಸ್ಯ ನಾಮ ಯೀಶುಮ್ (ಅರ್ಥಾತ್ ತ್ರಾತಾರಂ) ಕರೀಷ್ಯಸೇ, ಯಸ್ಮಾತ್ ಸ ನಿಜಮನುಜಾನ್ ತೇಷಾಂ ಕಲುಷೇಭ್ಯ ಉದ್ಧರಿಷ್ಯತಿ|
22 ೨೨ ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನೆಂದರೆ,
ಇತ್ಥಂ ಸತಿ, ಪಶ್ಯ ಗರ್ಭವತೀ ಕನ್ಯಾ ತನಯಂ ಪ್ರಸವಿಷ್ಯತೇ| ಇಮ್ಮಾನೂಯೇಲ್ ತದೀಯಞ್ಚ ನಾಮಧೇಯಂ ಭವಿಷ್ಯತಿ|| ಇಮ್ಮಾನೂಯೇಲ್ ಅಸ್ಮಾಕಂ ಸಙ್ಗೀಶ್ವರಇತ್ಯರ್ಥಃ|
23 ೨೩ “ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು. ‘ದೇವರು ನಮ್ಮ ಕೂಡ ಇದ್ದಾನೆಂದು’ ಈ ಹೆಸರಿನ ಅರ್ಥ.”
ಇತಿ ಯದ್ ವಚನಂ ಪುರ್ವ್ವಂ ಭವಿಷ್ಯದ್ವಕ್ತ್ರಾ ಈಶ್ವರಃ ಕಥಾಯಾಮಾಸ, ತತ್ ತದಾನೀಂ ಸಿದ್ಧಮಭವತ್|
24 ೨೪ ಆಗ ಯೋಸೇಫನು ಎಚ್ಚೆತ್ತು ದೇವದೂತನು ಅಪ್ಪಣೆಕೊಟ್ಟ ಪ್ರಕಾರ ಮರಿಯಳನ್ನು ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು.
ಅನನ್ತರಂ ಯೂಷಫ್ ನಿದ್ರಾತೋ ಜಾಗರಿತ ಉತ್ಥಾಯ ಪರಮೇಶ್ವರೀಯದೂತಸ್ಯ ನಿದೇಶಾನುಸಾರೇಣ ನಿಜಾಂ ಜಾಯಾಂ ಜಗ್ರಾಹ,
25 ೨೫ ಆದರೆ ಆಕೆಯು ಗಂಡು ಮಗುವಿಗೆ ಜನ್ಮನೀಡುವವರೆಗೂ ಆಕೆಯೊಡನೆ ಶರೀರ ಸಂಬಂಧವಿಲ್ಲದೆ ಇದ್ದನು. ಮತ್ತು ಯೋಸೇಫನು ಆ ಮಗುವಿಗೆ ‘ಯೇಸು’ ಎಂದು ಹೆಸರಿಟ್ಟನು.
ಕಿನ್ತು ಯಾವತ್ ಸಾ ನಿಜಂ ಪ್ರಥಮಸುತಂ ಅ ಸುಷುವೇ, ತಾವತ್ ತಾಂ ನೋಪಾಗಚ್ಛತ್, ತತಃ ಸುತಸ್ಯ ನಾಮ ಯೀಶುಂ ಚಕ್ರೇ|