< ಮಾರ್ಕನು 16 >
1 ೧ ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಮತ್ತು ಸಲೋಮಿಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧ ದ್ರವ್ಯಗಳನ್ನು ಕೊಂಡರು.
১অথ ৱিশ্ৰামৱাৰে গতে মগ্দলীনী মৰিযম্ যাকূবমাতা মৰিযম্ শালোমী চেমাস্তং মৰ্দ্দযিতুং সুগন্ধিদ্ৰৱ্যাণি ক্ৰীৎৱা
2 ೨ ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು.
২সপ্তাহপ্ৰথমদিনেঽতিপ্ৰত্যূষে সূৰ্য্যোদযকালে শ্মশানমুপগতাঃ|
3 ೩ “ಸಮಾಧಿಯ ಬಾಗಿಲಿನಿಂದ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
৩কিন্তু শ্মশানদ্ৱাৰপাষাণোঽতিবৃহন্ তং কোঽপসাৰযিষ্যতীতি তাঃ পৰস্পৰং গদন্তি!
4 ೪ ಸಮಾಧಿಯ ಕಡೆಗೆ ನೋಡಿದಾಗ ಆ ದೊಡ್ಡ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡರು.
৪এতৰ্হি নিৰীক্ষ্য পাষাণো দ্ৱাৰো ঽপসাৰিত ইতি দদৃশুঃ|
5 ೫ ಅವರು ಸಮಾಧಿಯೊಳಗೆ ಹೋಗಿ, ಒಬ್ಬ ಯೌವನಸ್ಥನು ಬಿಳಿ ನಿಲುವಂಗಿಯನ್ನು ಧರಿಸಿಕೊಂಡು ಬಲ ಭಾಗದಲ್ಲಿ ಕುಳಿತಿರುವುದನ್ನು ಕಂಡು ಬೆಚ್ಚಿಬೆರಗಾದರು.
৫পশ্চাত্তাঃ শ্মশানং প্ৰৱিশ্য শুক্লৱৰ্ণদীৰ্ঘপৰিচ্ছদাৱৃতমেকং যুৱানং শ্মশানদক্ষিণপাৰ্শ্ৱ উপৱিষ্টং দৃষ্ট্ৱা চমচ্চক্ৰুঃ|
6 ೬ ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿರಲ್ಲವೇ. ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ; ಆತನನ್ನು ಇಟ್ಟಿದ್ದ ಸ್ಥಳ ಇದೇ ನೋಡಿರಿ,
৬সোঽৱদৎ, মাভৈষ্ট যূযং ক্ৰুশে হতং নাসৰতীযযীশুং গৱেষযথ সোত্ৰ নাস্তি শ্মশানাদুদস্থাৎ; তৈ ৰ্যত্ৰ স স্থাপিতঃ স্থানং তদিদং পশ্যত|
7 ೭ ಆದರೆ ನೀವು ಹೋಗಿ ಆತನ ಶಿಷ್ಯರಿಗೂ ಪೇತ್ರನಿಗೂ ಆತನು ನಿಮಗೆ ಹೇಳಿದಂತೆ ನಿಮಗಿಂತ ಮೊದಲು ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ” ಎಂದು ಹೇಳಿದನು.
৭কিন্তু তেন যথোক্তং তথা যুষ্মাকমগ্ৰে গালীলং যাস্যতে তত্ৰ স যুষ্মান্ সাক্ষাৎ কৰিষ্যতে যূযং গৎৱা তস্য শিষ্যেভ্যঃ পিতৰায চ ৱাৰ্ত্তামিমাং কথযত|
8 ೮ ಅವರು ವಿಸ್ಮಯಗೊಂಡು ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.
৮তাঃ কম্পিতা ৱিস্তিতাশ্চ তূৰ্ণং শ্মশানাদ্ বহিৰ্গৎৱা পলাযন্ত ভযাৎ কমপি কিমপি নাৱদংশ্চ|
9 ೯ (note: The most reliable and earliest manuscripts do not include Mark 16:9-20.) ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು.
৯(note: The most reliable and earliest manuscripts do not include Mark 16:9-20.) অপৰং যীশুঃ সপ্তাহপ্ৰথমদিনে প্ৰত্যূষে শ্মশানাদুত্থায যস্যাঃ সপ্তভূতাস্ত্যাজিতাস্তস্যৈ মগ্দলীনীমৰিযমে প্ৰথমং দৰ্শনং দদৌ|
10 ೧೦ ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಅವರು ಶೋಕಿಸುತ್ತಾ ಅಳುತ್ತಿದ್ದರು.
১০ততঃ সা গৎৱা শোকৰোদনকৃদ্ভ্যোঽনুগতলোকেভ্যস্তাং ৱাৰ্ত্তাং কথযামাস|
11 ೧೧ “ಆತನು ಬದುಕಿದ್ದಾನೆ ನನಗೆ ಕಾಣಿಸಿಕೊಂಡನು” ಎಂದು ಅವಳು ಹೇಳಿದ ಮಾತನ್ನು ಅವರು ನಂಬಲಿಲ್ಲ.
১১কিন্তু যীশুঃ পুনৰ্জীৱন্ তস্যৈ দৰ্শনং দত্তৱানিতি শ্ৰুৎৱা তে ন প্ৰত্যযন্|
12 ೧೨ ಇದಾದ ಮೇಲೆ ಶಿಷ್ಯರಲ್ಲಿ ಇಬ್ಬರು ಊರಿಗೆ ಪ್ರಯಾಣ ಮಾಡುತ್ತಿರುವಾಗ ಆತನು ಅವರಿಗೆ ಬೇರೆ ರೂಪದಲ್ಲಿ ಕಾಣಿಸಿಕೊಂಡನು.
১২পশ্চাৎ তেষাং দ্ৱাযো ৰ্গ্ৰামযানকালে যীশুৰন্যৱেশং ধৃৎৱা তাভ্যাং দৰ্শন দদৌ!
13 ೧೩ ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಶಿಷ್ಯರು ಅವರನ್ನೂ ನಂಬಲಿಲ್ಲ.
১৩তাৱপি গৎৱান্যশিষ্যেভ্যস্তাং কথাং কথযাঞ্চক্ৰতুঃ কিন্তু তযোঃ কথামপি তে ন প্ৰত্যযন্|
14 ೧೪ ಅನಂತರ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕುಳಿತಿದ್ದಾಗ ಆತನು ಅವರಿಗೂ ಕಾಣಿಸಿಕೊಂಡನು. ತಾನು ಜೀವಿತನಾಗಿ ಎದ್ದು ಬಂದ ಮೇಲೆ ತನ್ನನ್ನು ನೋಡಿದವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಆತನು ಅವರ ಅಪನಂಬಿಕೆಗೂ ಅವರ ಮನಸ್ಸಿನ ಕಾಠಿಣ್ಯಕ್ಕೂ ಅವರನ್ನು ಗದರಿಸಿದನು.
১৪শেষত একাদশশিষ্যেষু ভোজনোপৱিষ্টেষু যীশুস্তেভ্যো দৰ্শনং দদৌ তথোত্থানাৎ পৰং তদ্দৰ্শনপ্ৰাপ্তলোকানাং কথাযামৱিশ্ৱাসকৰণাৎ তেষামৱিশ্ৱাসমনঃকাঠিন্যাভ্যাং হেতুভ্যাং স তাংস্তৰ্জিতৱান্|
15 ೧೫ ಆ ಮೇಲೆ ಅವರಿಗೆ, “ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ.
১৫অথ তানাচখ্যৌ যূযং সৰ্ৱ্ৱজগদ্ গৎৱা সৰ্ৱ্ৱজনান্ প্ৰতি সুসংৱাদং প্ৰচাৰযত|
16 ೧೬ ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು.
১৬তত্ৰ যঃ কশ্চিদ্ ৱিশ্ৱস্য মজ্জিতো ভৱেৎ স পৰিত্ৰাস্যতে কিন্তু যো ন ৱিশ্ৱসিষ্যতি স দণ্ডযিষ্যতে|
17 ೧೭ “ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು;
১৭কিঞ্চ যে প্ৰত্যেষ্যন্তি তৈৰীদৃগ্ আশ্চৰ্য্যং কৰ্ম্ম প্ৰকাশযিষ্যতে তে মন্নাম্না ভূতান্ ত্যাজযিষ্যন্তি ভাষা অন্যাশ্চ ৱদিষ্যন্তি|
18 ೧೮ ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು” ಎಂದು ಹೇಳಿದನು.
১৮অপৰং তৈঃ সৰ্পেষু ধৃতেষু প্ৰাণনাশকৱস্তুনি পীতে চ তেষাং কাপি ক্ষতি ৰ্ন ভৱিষ্যতি; ৰোগিণাং গাত্ৰেষু কৰাৰ্পিতে তেঽৰোগা ভৱিষ্যন্তি চ|
19 ೧೯ ಕರ್ತನಾದ ಯೇಸು ಅವರೊಂದಿಗೆ ಮಾತನಾಡಿದ ಮೇಲೆ ಪರಲೋಕಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು.
১৯অথ প্ৰভুস্তানিত্যাদিশ্য স্ৱৰ্গং নীতঃ সন্ পৰমেশ্ৱৰস্য দক্ষিণ উপৱিৱেশ|
20 ೨೦ ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.
২০ততস্তে প্ৰস্থায সৰ্ৱ্ৱত্ৰ সুসংৱাদীযকথাং প্ৰচাৰযিতুমাৰেভিৰে প্ৰভুস্তু তেষাং সহাযঃ সন্ প্ৰকাশিতাশ্চৰ্য্যক্ৰিযাভিস্তাং কথাং প্ৰমাণৱতীং চকাৰ| ইতি|