< ಮಾರ್ಕನು 10 >

1 ಯೇಸು ಅಲ್ಲಿಂದ ಹೊರಟು ಯೂದಾಯ ಪ್ರಾಂತ್ಯಕ್ಕೂ ಯೊರ್ದನ್ ಹೊಳೆಯ ಆಚೆಯ ಸೀಮೆಗೂ ಬಂದನು. ಅಲ್ಲಿ ಜನರು ತಿರುಗಿ ಗುಂಪುಗುಂಪಾಗಿ ಆತನ ಬಳಿಗೆ ಕೂಡಿ ಬರಲು ಆತನು ತಿರುಗಿ ಎಂದಿನಂತೆ ಅವರಿಗೆ ಉಪದೇಶಮಾಡುತ್ತಿದ್ದನು.
ਅਨਨ੍ਤਰੰ ਸ ਤਤ੍ਸ੍ਥਾਨਾਤ੍ ਪ੍ਰਸ੍ਥਾਯ ਯਰ੍ੱਦਨਨਦ੍ਯਾਃ ਪਾਰੇ ਯਿਹੂਦਾਪ੍ਰਦੇਸ਼ ਉਪਸ੍ਥਿਤਵਾਨ੍, ਤਤ੍ਰ ਤਦਨ੍ਤਿਕੇ ਲੋਕਾਨਾਂ ਸਮਾਗਮੇ ਜਾਤੇ ਸ ਨਿਜਰੀਤ੍ਯਨੁਸਾਰੇਣ ਪੁਨਸ੍ਤਾਨ੍ ਉਪਦਿਦੇਸ਼|
2 ಆಗ ಫರಿಸಾಯರು ಆತನ ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂಬ ಯೋಚನೆಯಿಂದ, “ಒಬ್ಬನು ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮವೋ ಹೇಗೆ” ಎಂದು ಕೇಳಿದರು.
ਤਦਾ ਫਿਰੂਸ਼ਿਨਸ੍ਤਤ੍ਸਮੀਪਮ੍ ਏਤ੍ਯ ਤੰ ਪਰੀਕ੍ਸ਼਼ਿਤੁੰ ਪਪ੍ਰੱਛਃ ਸ੍ਵਜਾਯਾ ਮਨੁਜਾਨਾਂ ਤ੍ਯਜ੍ਯਾ ਨ ਵੇਤਿ?
3 ಅದಕ್ಕೆ ಆತನು “ಮೋಶೆಯು ನಿಮಗೆ ಏನು ಆಜ್ಞೆ ಕೊಟ್ಟನು?” ಎಂದನು.
ਤਤਃ ਸ ਪ੍ਰਤ੍ਯਵਾਦੀਤ੍, ਅਤ੍ਰ ਕਾਰ੍ੱਯੇ ਮੂਸਾ ਯੁਸ਼਼੍ਮਾਨ੍ ਪ੍ਰਤਿ ਕਿਮਾਜ੍ਞਾਪਯਤ੍?
4 ಅದಕ್ಕೆ ಅವರು, “ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಅನುಮತಿ ಕೊಟ್ಟನು” ಅಂದರು.
ਤ ਊਚੁਃ ਤ੍ਯਾਗਪਤ੍ਰੰ ਲੇਖਿਤੁੰ ਸ੍ਵਪਤ੍ਨੀਂ ਤ੍ਯਕ੍ਤੁਞ੍ਚ ਮੂਸਾ(ਅ)ਨੁਮਨ੍ਯਤੇ|
5 ಆದರೆ ಯೇಸು ಅವರಿಗೆ, “ಅವನು ನಿಮ್ಮ ಮೊಂಡತನವನ್ನು ನೋಡಿ ನಿಮಗೆ ಇಂಥಾ ಆಜ್ಞೆಯನ್ನು ಬರೆದಿಟ್ಟನು.
ਤਦਾ ਯੀਸ਼ੁਃ ਪ੍ਰਤ੍ਯੁਵਾਚ, ਯੁਸ਼਼੍ਮਾਕੰ ਮਨਸਾਂ ਕਾਠਿਨ੍ਯਾੱਧੇਤੋ ਰ੍ਮੂਸਾ ਨਿਦੇਸ਼ਮਿਮਮ੍ ਅਲਿਖਤ੍|
6 ದೇವರಾದರೋ ಸೃಷ್ಟಿಯ ಮೊದಲಿನಿಂದಲೇಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿದನು.
ਕਿਨ੍ਤੁ ਸ੍ਰੁʼਸ਼਼੍ਟੇਰਾਦੌ ਈਸ਼੍ਵਰੋ ਨਰਾਨ੍ ਪੁੰਰੂਪੇਣ ਸ੍ਤ੍ਰੀਰੂਪੇਣ ਚ ਸਸਰ੍ਜ|
7 ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.
"ਤਤਃ ਕਾਰਣਾਤ੍ ਪੁਮਾਨ੍ ਪਿਤਰੰ ਮਾਤਰਞ੍ਚ ਤ੍ਯਕ੍ਤ੍ਵਾ ਸ੍ਵਜਾਯਾਯਾਮ੍ ਆਸਕ੍ਤੋ ਭਵਿਸ਼਼੍ਯਤਿ,
8 ಅವರಿಬ್ಬರು ಒಂದೇ ಶರೀರವಾಗಿರುವರು. ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ.
ਤੌ ਦ੍ਵਾਵ੍ ਏਕਾਙ੍ਗੌ ਭਵਿਸ਼਼੍ਯਤਃ| " ਤਸ੍ਮਾਤ੍ ਤਤ੍ਕਾਲਮਾਰਭ੍ਯ ਤੌ ਨ ਦ੍ਵਾਵ੍ ਏਕਾਙ੍ਗੌ|
9 ಆದ್ದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.
ਅਤਃ ਕਾਰਣਾਦ੍ ਈਸ਼੍ਵਰੋ ਯਦਯੋਜਯਤ੍ ਕੋਪਿ ਨਰਸ੍ਤੰਨ ਵਿਯੇਜਯੇਤ੍|
10 ೧೦ ಅವರು ಮನೆಯಲ್ಲಿದ್ದಾಗ ಆತನ ಶಿಷ್ಯರು ಈ ವಿಷಯವಾಗಿ ಆತನನ್ನು ಪುನಃ ಕೇಳಿದರು.
ਅਥ ਯੀਸ਼ੁ ਰ੍ਗ੍ਰੁʼਹੰ ਪ੍ਰਵਿਸ਼਼੍ਟਸ੍ਤਦਾ ਸ਼ਿਸ਼਼੍ਯਾਃ ਪੁਨਸ੍ਤਤ੍ਕਥਾਂ ਤੰ ਪਪ੍ਰੱਛੁਃ|
11 ೧೧ ಅದಕ್ಕೆ ಆತನು, “ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ವಿರೋಧವಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ;
ਤਤਃ ਸੋਵਦਤ੍ ਕਸ਼੍ਚਿਦ੍ ਯਦਿ ਸ੍ਵਭਾਰ੍ੱਯਾਂ ਤ੍ਯਕ੍ਤਵਾਨ੍ਯਾਮ੍ ਉਦ੍ਵਹਤਿ ਤਰ੍ਹਿ ਸ ਸ੍ਵਭਾਰ੍ੱਯਾਯਾਃ ਪ੍ਰਾਤਿਕੂਲ੍ਯੇਨ ਵ੍ਯਭਿਚਾਰੀ ਭਵਤਿ|
12 ೧೨ ಮತ್ತು ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡಿದವಳಾಗಿದ್ದಾಳೆ” ಎಂದು ಹೇಳಿದನು.
ਕਾਚਿੰਨਾਰੀ ਯਦਿ ਸ੍ਵਪਤਿੰ ਹਿਤ੍ਵਾਨ੍ਯਪੁੰਸਾ ਵਿਵਾਹਿਤਾ ਭਵਤਿ ਤਰ੍ਹਿ ਸਾਪਿ ਵ੍ਯਭਿਚਾਰਿਣੀ ਭਵਤਿ|
13 ೧೩ ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ಕರತರಲು ಶಿಷ್ಯರು ಅವರನ್ನು ಗದರಿಸಿದರು.
ਅਥ ਸ ਯਥਾ ਸ਼ਿਸ਼ੂਨ੍ ਸ੍ਪ੍ਰੁʼਸ਼ੇਤ੍, ਤਦਰ੍ਥੰ ਲੋਕੈਸ੍ਤਦਨ੍ਤਿਕੰ ਸ਼ਿਸ਼ਵ ਆਨੀਯਨ੍ਤ, ਕਿਨ੍ਤੁ ਸ਼ਿਸ਼਼੍ਯਾਸ੍ਤਾਨਾਨੀਤਵਤਸ੍ਤਰ੍ਜਯਾਮਾਸੁਃ|
14 ೧೪ ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ, “ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ದೇವರ ರಾಜ್ಯವು ಇಂಥವರದೇ.
ਯੀਸ਼ੁਸ੍ਤਦ੍ ਦ੍ਰੁʼਸ਼਼੍ਟ੍ਵਾ ਕ੍ਰੁਧ੍ਯਨ੍ ਜਗਾਦ, ਮੰਨਿਕਟਮ੍ ਆਗਨ੍ਤੁੰ ਸ਼ਿਸ਼ੂਨ੍ ਮਾ ਵਾਰਯਤ, ਯਤ ਏਤਾਦ੍ਰੁʼਸ਼ਾ ਈਸ਼੍ਵਰਰਾਜ੍ਯਾਧਿਕਾਰਿਣਃ|
15 ೧೫ ನಿಮಗೆ ಸತ್ಯವಾಗಿ ಹೇಳುತ್ತೇನೆ ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಎಂದು ಹೇಳಿದನು.
ਯੁਸ਼਼੍ਮਾਨਹੰ ਯਥਾਰ੍ਥੰ ਵਚ੍ਮਿ, ਯਃ ਕਸ਼੍ਚਿਤ੍ ਸ਼ਿਸ਼ੁਵਦ੍ ਭੂਤ੍ਵਾ ਰਾਜ੍ਯਮੀਸ਼੍ਵਰਸ੍ਯ ਨ ਗ੍ਰੁʼਹ੍ਲੀਯਾਤ੍ ਸ ਕਦਾਪਿ ਤਦ੍ਰਾਜ੍ਯੰ ਪ੍ਰਵੇਸ਼਼੍ਟੁੰ ਨ ਸ਼ਕ੍ਨੋਤਿ|
16 ೧೬ ಆಗ ಆತನು ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.
ਅਨਨਤਰੰ ਸ ਸ਼ਿਸ਼ੂਨਙ੍ਕੇ ਨਿਧਾਯ ਤੇਸ਼਼ਾਂ ਗਾਤ੍ਰੇਸ਼਼ੁ ਹਸ੍ਤੌ ਦੱਤ੍ਵਾਸ਼ਿਸ਼਼ੰ ਬਭਾਸ਼਼ੇ|
17 ೧೭ ಅಲ್ಲಿಂದ ಯೇಸು ಪ್ರಯಾಣವನ್ನು ಪ್ರಾರಂಭಿಸಿದಾಗ, ದಾರಿಯಲ್ಲಿ ಒಬ್ಬನು ಓಡುತ್ತಾ ಆತನ ಎದುರಿಗೆ ಬಂದು ಮೊಣಕಾಲೂರಿ, “ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕೆಂದು” ಆತನನ್ನು ಕೇಳಿದನು. (aiōnios g166)
ਅਥ ਸ ਵਰ੍ਤ੍ਮਨਾ ਯਾਤਿ, ਏਤਰ੍ਹਿ ਜਨ ਏਕੋ ਧਾਵਨ੍ ਆਗਤ੍ਯ ਤਤ੍ਸੰਮੁਖੇ ਜਾਨੁਨੀ ਪਾਤਯਿਤ੍ਵਾ ਪ੍ਰੁʼਸ਼਼੍ਟਵਾਨ੍, ਭੋਃ ਪਰਮਗੁਰੋ, ਅਨਨ੍ਤਾਯੁਃ ਪ੍ਰਾਪ੍ਤਯੇ ਮਯਾ ਕਿੰ ਕਰ੍ੱਤਵ੍ਯੰ? (aiōnios g166)
18 ೧೮ ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾರೂ ಒಳ್ಳೆಯವರಲ್ಲ.
ਤਦਾ ਯੀਸ਼ੁਰੁਵਾਚ, ਮਾਂ ਪਰਮੰ ਕੁਤੋ ਵਦਸਿ? ਵਿਨੇਸ਼੍ਵਰੰ ਕੋਪਿ ਪਰਮੋ ਨ ਭਵਤਿ|
19 ೧೯ ನರಹತ್ಯಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.
ਪਰਸ੍ਤ੍ਰੀਂ ਨਾਭਿਗੱਛ; ਨਰੰ ਮਾ ਘਾਤਯ; ਸ੍ਤੇਯੰ ਮਾ ਕੁਰੁ; ਮ੍ਰੁʼਸ਼਼ਾਸਾਕ੍ਸ਼਼੍ਯੰ ਮਾ ਦੇਹਿ; ਹਿੰਸਾਞ੍ਚ ਮਾ ਕੁਰੁ; ਪਿਤਰੌ ਸੰਮਨ੍ਯਸ੍ਵ; ਨਿਦੇਸ਼ਾ ਏਤੇ ਤ੍ਵਯਾ ਜ੍ਞਾਤਾਃ|
20 ೨೦ ಅವನು ಆತನಿಗೆ, “ಬೋಧಕನೇ, ನಾನು ಚಿಕ್ಕಂದಿನಿಂದಲೂ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ” ಎಂದು ಹೇಳಲು,
ਤਤਸ੍ਤਨ ਪ੍ਰਤ੍ਯੁਕ੍ਤੰ, ਹੇ ਗੁਰੋ ਬਾਲ੍ਯਕਾਲਾਦਹੰ ਸਰ੍ੱਵਾਨੇਤਾਨ੍ ਆਚਰਾਮਿ|
21 ೨೧ ಯೇಸು ಅವನನ್ನು ದೃಷ್ಟಿಸಿ ನೋಡಿ ಪ್ರೀತಿಸಿ ಅವನಿಗೆ, “ನಿನಗೆ ಒಂದು ಕಡಿಮೆಯಾಗಿದೆ. ಹೋಗು ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
ਤਦਾ ਯੀਸ਼ੁਸ੍ਤੰ ਵਿਲੋਕ੍ਯ ਸ੍ਨੇਹੇਨ ਬਭਾਸ਼਼ੇ, ਤਵੈਕਸ੍ਯਾਭਾਵ ਆਸ੍ਤੇ; ਤ੍ਵੰ ਗਤ੍ਵਾ ਸਰ੍ੱਵਸ੍ਵੰ ਵਿਕ੍ਰੀਯ ਦਰਿਦ੍ਰੇਭ੍ਯੋ ਵਿਸ਼੍ਰਾਣਯ, ਤਤਃ ਸ੍ਵਰ੍ਗੇ ਧਨੰ ਪ੍ਰਾਪ੍ਸ੍ਯਸਿ; ਤਤਃ ਪਰਮ੍ ਏਤ੍ਯ ਕ੍ਰੁਸ਼ੰ ਵਹਨ੍ ਮਦਨੁਵਰ੍ੱਤੀ ਭਵ|
22 ೨೨ ಆದರೆ ಅವನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತಿಗೆ ವ್ಯಸನಗೊಂಡು ದುಃಖದಿಂದ ಹೊರಟುಹೋದನು.
ਕਿਨ੍ਤੁ ਤਸ੍ਯ ਬਹੁਸਮ੍ਪਦ੍ਵਿਦ੍ਯਮਾਨਤ੍ਵਾਤ੍ ਸ ਇਮਾਂ ਕਥਾਮਾਕਰ੍ਣ੍ਯ ਵਿਸ਼਼ਣੋ ਦੁਃਖਿਤਸ਼੍ਚ ਸਨ੍ ਜਗਾਮ|
23 ೨೩ ಆಗ ಯೇಸುವು ಸುತ್ತಲೂ ನೋಡಿ ತನ್ನ ಶಿಷ್ಯರಿಗೆ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ತುಂಬಾ ಕಷ್ಟ” ಎಂದು ಹೇಳಿದನು.
ਅਥ ਯੀਸ਼ੁਸ਼੍ਚਤੁਰ੍ਦਿਸ਼ੋ ਨਿਰੀਕ੍ਸ਼਼੍ਯ ਸ਼ਿਸ਼਼੍ਯਾਨ੍ ਅਵਾਦੀਤ੍, ਧਨਿਲੋਕਾਨਾਮ੍ ਈਸ਼੍ਵਰਰਾਜ੍ਯਪ੍ਰਵੇਸ਼ਃ ਕੀਦ੍ਰੁʼਗ੍ ਦੁਸ਼਼੍ਕਰਃ|
24 ೨೪ ಶಿಷ್ಯರು ಆತನ ಮಾತುಗಳನ್ನು ಕೇಳಿ ಅಶ್ಚರ್ಯಪಟ್ಟರು. ಆದರೆ ಯೇಸು ಪುನಃ ಅವರಿಗೆ, “ಮಕ್ಕಳೇ, ದೇವರ ರಾಜ್ಯದಲ್ಲಿ ಸೇರುವುದು ಬಹಳ ಕಷ್ಟ.
ਤਸ੍ਯ ਕਥਾਤਃ ਸ਼ਿਸ਼਼੍ਯਾਸ਼੍ਚਮੱਚਕ੍ਰੁਃ, ਕਿਨ੍ਤੁ ਸ ਪੁਨਰਵਦਤ੍, ਹੇ ਬਾਲਕਾ ਯੇ ਧਨੇ ਵਿਸ਼੍ਵਸਨ੍ਤਿ ਤੇਸ਼਼ਾਮ੍ ਈਸ਼੍ਵਰਰਾਜ੍ਯਪ੍ਰਵੇਸ਼ਃ ਕੀਦ੍ਰੁʼਗ੍ ਦੁਸ਼਼੍ਕਰਃ|
25 ೨೫ ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ” ಎಂದು ಹೇಳಿದನು.
ਈਸ਼੍ਵਰਰਾਜ੍ਯੇ ਧਨਿਨਾਂ ਪ੍ਰਵੇਸ਼ਾਤ੍ ਸੂਚਿਰਨ੍ਧ੍ਰੇਣ ਮਹਾਙ੍ਗਸ੍ਯ ਗਮਨਾਗਮਨੰ ਸੁਕਰੰ|
26 ೨೬ ಈ ಮಾತಿಗೆ ಅವರು ಇನ್ನಷ್ಟು ಆಶ್ಚರ್ಯಪಟ್ಟು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.
ਤਦਾ ਸ਼ਿਸ਼਼੍ਯਾ ਅਤੀਵ ਵਿਸ੍ਮਿਤਾਃ ਪਰਸ੍ਪਰੰ ਪ੍ਰੋਚੁਃ, ਤਰ੍ਹਿ ਕਃ ਪਰਿਤ੍ਰਾਣੰ ਪ੍ਰਾਪ੍ਤੁੰ ਸ਼ਕ੍ਨੋਤਿ?
27 ೨೭ ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವೂ ಸಾಧ್ಯವೇ” ಅಂದನು.
ਤਤੋ ਯੀਸ਼ੁਸ੍ਤਾਨ੍ ਵਿਲੋਕ੍ਯ ਬਭਾਸ਼਼ੇ, ਤਨ੍ ਨਰਸ੍ਯਾਸਾਧ੍ਯੰ ਕਿਨ੍ਤੁ ਨੇਸ਼੍ਵਰਸ੍ਯ, ਯਤੋ ਹੇਤੋਰੀਸ਼੍ਵਰਸ੍ਯ ਸਰ੍ੱਵੰ ਸਾਧ੍ਯਮ੍|
28 ೨೮ ಪೇತ್ರನು ಆತನಿಗೆ, “ಇಗೋ ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ” ಎಂದು ಹೇಳುವುದಕ್ಕೆ ಪ್ರಾರಂಭಿಸಿದನು.
ਤਦਾ ਪਿਤਰ ਉਵਾਚ, ਪਸ਼੍ਯ ਵਯੰ ਸਰ੍ੱਵੰ ਪਰਿਤ੍ਯਜ੍ਯ ਭਵਤੋਨੁਗਾਮਿਨੋ ਜਾਤਾਃ|
29 ೨೯ ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ನನ್ನ ನಿಮಿತ್ತವೂ, ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ಬಿಟ್ಟು ಬಿಟ್ಟಿರುವನೋ,
ਤਤੋ ਯੀਸ਼ੁਃ ਪ੍ਰਤ੍ਯਵਦਤ੍, ਯੁਸ਼਼੍ਮਾਨਹੰ ਯਥਾਰ੍ਥੰ ਵਦਾਮਿ, ਮਦਰ੍ਥੰ ਸੁਸੰਵਾਦਾਰ੍ਥੰ ਵਾ ਯੋ ਜਨਃ ਸਦਨੰ ਭ੍ਰਾਤਰੰ ਭਗਿਨੀਂ ਪਿਤਰੰ ਮਾਤਰੰ ਜਾਯਾਂ ਸਨ੍ਤਾਨਾਨ੍ ਭੂਮਿ ਵਾ ਤ੍ਯਕ੍ਤ੍ਵਾ
30 ೩೦ ಅವನಿಗೆ ಈ ಕಾಲದಲ್ಲಿಯೇ ಮನೆ, ಸಹೋದರರು, ಸಹೋದರಿಯರು, ತಾಯಿ, ಮಕ್ಕಳು, ಹೊಲಗದ್ದೆಗಳು ಇವೆಲ್ಲವೂ ಹಿಂಸೆಗಳ ಸಹಿತವಾಗಿ ನೂರರಷ್ಟು ಸಿಕ್ಕೇ ಸಿಗುತ್ತವೆ ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು. (aiōn g165, aiōnios g166)
ਗ੍ਰੁʼਹਭ੍ਰਾਤ੍ਰੁʼਭਗਿਨੀਪਿਤ੍ਰੁʼਮਾਤ੍ਰੁʼਪਤ੍ਨੀਸਨ੍ਤਾਨਭੂਮੀਨਾਮਿਹ ਸ਼ਤਗੁਣਾਨ੍ ਪ੍ਰੇਤ੍ਯਾਨਨ੍ਤਾਯੁਸ਼੍ਚ ਨ ਪ੍ਰਾਪ੍ਨੋਤਿ ਤਾਦ੍ਰੁʼਸ਼ਃ ਕੋਪਿ ਨਾਸ੍ਤਿ| (aiōn g165, aiōnios g166)
31 ೩೧ ಆದರೆ ಬಹು ಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು” ಎಂದು ಹೇಳಿದನು.
ਕਿਨ੍ਤ੍ਵਗ੍ਰੀਯਾ ਅਨੇਕੇ ਲੋਕਾਃ ਸ਼ੇਸ਼਼ਾਃ, ਸ਼ੇਸ਼਼ੀਯਾ ਅਨੇਕੇ ਲੋਕਾਸ਼੍ਚਾਗ੍ਰਾ ਭਵਿਸ਼਼੍ਯਨ੍ਤਿ|
32 ೩೨ ಅವರು ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿರುವಾಗ ಯೇಸು ಅವರೆಲ್ಲರಿಗಿಂತ ಮುಂದಾಗಿ ನಡೆದುಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಆತನನ್ನು ಹಿಂಬಾಲಿಸುವವರು ಭಯಪಟ್ಟರು. ಆಗ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಪುನಃ ಕರೆದುಕೊಂಡು ಮುಂದೆ ತನಗೆ ಸಂಭವಿಸುವ ಸಂಗತಿಯನ್ನು ಹೇಳುವುದಕ್ಕೆ ಪ್ರಾರಂಭಿಸಿದನು;
ਅਥ ਯਿਰੂਸ਼ਾਲਮ੍ਯਾਨਕਾਲੇ ਯੀਸ਼ੁਸ੍ਤੇਸ਼਼ਾਮ੍ ਅਗ੍ਰਗਾਮੀ ਬਭੂਵ, ਤਸ੍ਮਾੱਤੇ ਚਿਤ੍ਰੰ ਜ੍ਞਾਤ੍ਵਾ ਪਸ਼੍ਚਾਦ੍ਗਾਮਿਨੋ ਭੂਤ੍ਵਾ ਬਿਭ੍ਯੁਃ| ਤਦਾ ਸ ਪੁਨ ਰ੍ਦ੍ਵਾਦਸ਼ਸ਼ਿਸ਼਼੍ਯਾਨ੍ ਗ੍ਰੁʼਹੀਤ੍ਵਾ ਸ੍ਵੀਯੰ ਯਦ੍ਯਦ੍ ਘਟਿਸ਼਼੍ਯਤੇ ਤੱਤਤ੍ ਤੇਭ੍ਯਃ ਕਥਯਿਤੁੰ ਪ੍ਰਾਰੇਭੇ;
33 ೩೩ ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಒಪ್ಪಿಸಿಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳ ಕೈಗೆ ಒಪ್ಪಿಸುವರು.
ਪਸ਼੍ਯਤ ਵਯੰ ਯਿਰੂਸ਼ਾਲਮ੍ਪੁਰੰ ਯਾਮਃ, ਤਤ੍ਰ ਮਨੁਸ਼਼੍ਯਪੁਤ੍ਰਃ ਪ੍ਰਧਾਨਯਾਜਕਾਨਾਮ੍ ਉਪਾਧ੍ਯਾਯਾਨਾਞ੍ਚ ਕਰੇਸ਼਼ੁ ਸਮਰ੍ਪਯਿਸ਼਼੍ਯਤੇ; ਤੇ ਚ ਵਧਦਣ੍ਡਾਜ੍ਞਾਂ ਦਾਪਯਿਤ੍ਵਾ ਪਰਦੇਸ਼ੀਯਾਨਾਂ ਕਰੇਸ਼਼ੁ ਤੰ ਸਮਰ੍ਪਯਿਸ਼਼੍ਯਨ੍ਤਿ|
34 ೩೪ ಇವರು ಆತನನ್ನು ಅಪಹಾಸ್ಯ ಮಾಡುವರು, ಆತನ ಮೇಲೆ ಉಗುಳುವರು, ಆತನನ್ನು ಚಾವಟಿಗಳಿಂದ ಹೊಡೆಯುವರು, ಅನಂತರ ಕೊಂದು ಹಾಕುವರು. ಆದರೆಆತನು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.
ਤੇ ਤਮੁਪਹਸ੍ਯ ਕਸ਼ਯਾ ਪ੍ਰਹ੍ਰੁʼਤ੍ਯ ਤਦ੍ਵਪੁਸ਼਼ਿ ਨਿਸ਼਼੍ਠੀਵੰ ਨਿਕ੍ਸ਼਼ਿਪ੍ਯ ਤੰ ਹਨਿਸ਼਼੍ਯਨ੍ਤਿ, ਤਤਃ ਸ ਤ੍ਰੁʼਤੀਯਦਿਨੇ ਪ੍ਰੋੱਥਾਸ੍ਯਤਿ|
35 ೩೫ ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಆತನ ಬಳಿಗೆ ಬಂದು ಆತನಿಗೆ, “ಗುರುವೇ, ನಾವು ಬೇಡಿಕೊಳ್ಳುವುದನ್ನು ನಮಗೋಸ್ಕರ ಮಾಡಬೇಕೆಂದು” ಹೇಳಿದರು.
ਤਤਃ ਸਿਵਦੇਃ ਪੁਤ੍ਰੌ ਯਾਕੂਬ੍ਯੋਹਨੌ ਤਦਨ੍ਤਿਕਮ੍ ਏਤ੍ਯ ਪ੍ਰੋਚਤੁਃ, ਹੇ ਗੁਰੋ ਯਦ੍ ਆਵਾਭ੍ਯਾਂ ਯਾਚਿਸ਼਼੍ਯਤੇ ਤਦਸ੍ਮਦਰ੍ਥੰ ਭਵਾਨ੍ ਕਰੋਤੁ ਨਿਵੇਦਨਮਿਦਮਾਵਯੋਃ|
36 ೩೬ ಅದಕ್ಕೆ ಆತನು ಅವರಿಗೆ, “ನಾನು ನಿಮಗೇನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಲು,
ਤਤਃ ਸ ਕਥਿਤਵਾਨ੍, ਯੁਵਾਂ ਕਿਮਿੱਛਥਃ? ਕਿੰ ਮਯਾ ਯੁਸ਼਼੍ਮਦਰ੍ਥੰ ਕਰਣੀਯੰ?
37 ೩೭ ಅವರು ಆತನಿಗೆ, “ನಾವು ಪರಲೋಕದಲ್ಲಿ ಮಹಾಪದವಿಯನ್ನು ಪಡೆದಾಗ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಿಸಬೇಕು” ಅಂದರು.
ਤਦਾ ਤੌ ਪ੍ਰੋਚਤੁਃ, ਆਵਯੋਰੇਕੰ ਦਕ੍ਸ਼਼ਿਣਪਾਰ੍ਸ਼੍ਵੇ ਵਾਮਪਾਰ੍ਸ਼੍ਵੇ ਚੈਕੰ ਤਵੈਸ਼੍ਵਰ੍ੱਯਪਦੇ ਸਮੁਪਵੇਸ਼਼੍ਟੁਮ੍ ਆਜ੍ਞਾਪਯ|
38 ೩೮ ಆದರೆ ಯೇಸು ಅವರಿಗೆ, “ನೀವು ಬೇಡಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯುವ ಪಾತ್ರೆಯಲ್ಲಿ ಕುಡಿಯುವುದು ನಿಮ್ಮಿಂದಾದೀತೆ? ನನಗಾಗುವ ದೀಕ್ಷಾಸ್ನಾನವನ್ನು ಹೊಂದುವುದು ನಿಮ್ಮಿಂದಾದೀತೆ?” ಎಂದು ಕೇಳಲು ಅವರು “ನಮ್ಮಿಂದಾಗುವುದು” ಅಂದರು.
ਕਿਨ੍ਤੁ ਯੀਸ਼ੁਃ ਪ੍ਰਤ੍ਯੁਵਾਚ ਯੁਵਾਮਜ੍ਞਾਤ੍ਵੇਦੰ ਪ੍ਰਾਰ੍ਥਯੇਥੇ, ਯੇਨ ਕੰਸੇਨਾਹੰ ਪਾਸ੍ਯਾਮਿ ਤੇਨ ਯੁਵਾਭ੍ਯਾਂ ਕਿੰ ਪਾਤੁੰ ਸ਼ਕ੍ਸ਼਼੍ਯਤੇ? ਯਸ੍ਮਿਨ੍ ਮੱਜਨੇਨਾਹੰ ਮੱਜਿਸ਼਼੍ਯੇ ਤਨ੍ਮੱਜਨੇ ਮੱਜਯਿਤੁੰ ਕਿੰ ਯੁਵਾਭ੍ਯਾਂ ਸ਼ਕ੍ਸ਼਼੍ਯਤੇ? ਤੌ ਪ੍ਰਤ੍ਯੂਚਤੁਃ ਸ਼ਕ੍ਸ਼਼੍ਯਤੇ|
39 ೩೯ ಆಗ ಯೇಸು ಅವರಿಗೆ, “ನಾನು ಕುಡಿಯುವ ಪಾತ್ರೆಯಲ್ಲಿ ನೀವು ಕುಡಿಯುವಿರಿ. ನನಗಾಗುವ ದೀಕ್ಷಾಸ್ನಾನವು ನಿಮಗಾಗುವುದು.
ਤਦਾ ਯੀਸ਼ੁਰਵਦਤ੍ ਯੇਨ ਕੰਸੇਨਾਹੰ ਪਾਸ੍ਯਾਮਿ ਤੇਨਾਵਸ਼੍ਯੰ ਯੁਵਾਮਪਿ ਪਾਸ੍ਯਥਃ, ਯੇਨ ਮੱਜਨੇਨ ਚਾਹੰ ਮੱਜਿੱਯੇ ਤਤ੍ਰ ਯੁਵਾਮਪਿ ਮੱਜਿਸ਼਼੍ਯੇਥੇ|
40 ೪೦ ಆದರೆ ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವುದು ನನ್ನದಲ್ಲ; ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವುದು” ಎಂದು ಹೇಳಿದನು.
ਕਿਨ੍ਤੁ ਯੇਸ਼਼ਾਮਰ੍ਥਮ੍ ਇਦੰ ਨਿਰੂਪਿਤੰ, ਤਾਨ੍ ਵਿਹਾਯਾਨ੍ਯੰ ਕਮਪਿ ਮਮ ਦਕ੍ਸ਼਼ਿਣਪਾਰ੍ਸ਼੍ਵੇ ਵਾਮਪਾਰ੍ਸ਼੍ਵੇ ਵਾ ਸਮੁਪਵੇਸ਼ਯਿਤੁੰ ਮਮਾਧਿਕਾਰੋ ਨਾਸ੍ਤਿ|
41 ೪೧ ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಯಾಕೋಬ ಯೋಹಾನರ ಮೇಲೆ ಸಿಟ್ಟಿಗೆದ್ದರು.
ਅਥਾਨ੍ਯਦਸ਼ਸ਼ਿਸ਼਼੍ਯਾ ਇਮਾਂ ਕਥਾਂ ਸ਼੍ਰੁਤ੍ਵਾ ਯਾਕੂਬ੍ਯੋਹਨ੍ਭ੍ਯਾਂ ਚੁਕੁਪੁਃ|
42 ೪೨ ಯೇಸು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಅನ್ಯಜನಗಳ ಅಧಿಪತಿಗಳು ಎನ್ನಿಸಿಕೊಳ್ಳುವವರು ಅವರ ಮೇಲೆ ದೊರೆತನ ಮಾಡುತ್ತಾರೆ. ಮತ್ತು ಅವರಲ್ಲಿ ಮುಖ್ಯಸ್ಥರು ಅವರ ಮೇಲೆ ಅಧಿಕಾರ ನಡೆಸುತ್ತಾರೆ ಎಂದು ನೀವು ಬಲ್ಲಿರಷ್ಟೆ.
ਕਿਨ੍ਤੁ ਯੀਸ਼ੁਸ੍ਤਾਨ੍ ਸਮਾਹੂਯ ਬਭਾਸ਼਼ੇ, ਅਨ੍ਯਦੇਸ਼ੀਯਾਨਾਂ ਰਾਜਤ੍ਵੰ ਯੇ ਕੁਰ੍ੱਵਨ੍ਤਿ ਤੇ ਤੇਸ਼਼ਾਮੇਵ ਪ੍ਰਭੁਤ੍ਵੰ ਕੁਰ੍ੱਵਨ੍ਤਿ, ਤਥਾ ਯੇ ਮਹਾਲੋਕਾਸ੍ਤੇ ਤੇਸ਼਼ਾਮ੍ ਅਧਿਪਤਿਤ੍ਵੰ ਕੁਰ੍ੱਵਨ੍ਤੀਤਿ ਯੂਯੰ ਜਾਨੀਥ|
43 ೪೩ ಆದರೆ ನಿಮ್ಮಲ್ಲಿ ಹಾಗಿರಬಾರದು; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಬೇಕು.
ਕਿਨ੍ਤੁ ਯੁਸ਼਼੍ਮਾਕੰ ਮਧ੍ਯੇ ਨ ਤਥਾ ਭਵਿਸ਼਼੍ਯਤਿ, ਯੁਸ਼਼੍ਮਾਕੰ ਮਧ੍ਯੇ ਯਃ ਪ੍ਰਾਧਾਨ੍ਯੰ ਵਾਞ੍ਛਤਿ ਸ ਯੁਸ਼਼੍ਮਾਕੰ ਸੇਵਕੋ ਭਵਿਸ਼਼੍ਯਤਿ,
44 ೪೪ ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಬೇಕು.
ਯੁਸ਼਼੍ਮਾਕੰ ਯੋ ਮਹਾਨ੍ ਭਵਿਤੁਮਿੱਛਤਿ ਸ ਸਰ੍ੱਵੇਸ਼਼ਾਂ ਕਿਙ੍ਕਰੋ ਭਵਿਸ਼਼੍ਯਤਿ|
45 ೪೫ ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಸೇವೆಮಾಡುವುದಕ್ಕೂಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವುದಕ್ಕಾಗಿ ಬಂದನು” ಎಂದು ಹೇಳಿದನು.
ਯਤੋ ਮਨੁਸ਼਼੍ਯਪੁਤ੍ਰਃ ਸੇਵ੍ਯੋ ਭਵਿਤੁੰ ਨਾਗਤਃ ਸੇਵਾਂ ਕਰ੍ੱਤਾਂ ਤਥਾਨੇਕੇਸ਼਼ਾਂ ਪਰਿਤ੍ਰਾਣਸ੍ਯ ਮੂਲ੍ਯਰੂਪਸ੍ਵਪ੍ਰਾਣੰ ਦਾਤੁਞ੍ਚਾਗਤਃ|
46 ೪೬ ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸುವೂ ತನ್ನ ಶಿಷ್ಯರೂ ಬಹು ಜನರ ಗುಂಪಿನೊಂದಿಗೆ ಆ ಊರಿನಿಂದ ಹೊರಟುಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಬದಿಯಲ್ಲಿ ಕುಳಿತಿದ್ದನು.
ਅਥ ਤੇ ਯਿਰੀਹੋਨਗਰੰ ਪ੍ਰਾਪ੍ਤਾਸ੍ਤਸ੍ਮਾਤ੍ ਸ਼ਿਸ਼਼੍ਯੈ ਰ੍ਲੋਕੈਸ਼੍ਚ ਸਹ ਯੀਸ਼ੋ ਰ੍ਗਮਨਕਾਲੇ ਟੀਮਯਸ੍ਯ ਪੁਤ੍ਰੋ ਬਰ੍ਟੀਮਯਨਾਮਾ ਅਨ੍ਧਸ੍ਤਨ੍ਮਾਰ੍ਗਪਾਰ੍ਸ਼੍ਵੇ ਭਿਕ੍ਸ਼਼ਾਰ੍ਥਮ੍ ਉਪਵਿਸ਼਼੍ਟਃ|
47 ೪೭ ಅವನು ಒಬ್ಬ ಕುರುಡ ಭಿಕ್ಷುಕನಾಗಿದ್ದನು. ಈ ಮಾರ್ಗವಾಗಿ ಹೋಗುತ್ತಿರುವವನು ನಜರೇತಿನ ಯೇಸುವೆಂದು ಅವನು ಕೇಳಿದಾಗ ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಳ್ಳುವುದಕ್ಕೆ ಪ್ರಾರಂಭಿಸಿದನು.
ਸ ਨਾਸਰਤੀਯਸ੍ਯ ਯੀਸ਼ੋਰਾਗਮਨਵਾਰ੍ੱਤਾਂ ਪ੍ਰਾਪ੍ਯ ਪ੍ਰੋਚੈ ਰ੍ਵਕ੍ਤੁਮਾਰੇਭੇ, ਹੇ ਯੀਸ਼ੋ ਦਾਯੂਦਃ ਸਨ੍ਤਾਨ ਮਾਂ ਦਯਸ੍ਵ|
48 ೪೮ ಅನೇಕರು, ಅವನಿಗೆ ಸುಮ್ಮನಿರು ಎಂದು ಗದರಿಸಲು ಅವನು, “ದಾವೀದನ ಕುಮಾರನೇ ನನ್ನನ್ನು ಕರುಣಿಸು” ಎಂದು ಮತ್ತಷ್ಟು ಕೂಗಿಕೊಂಡನು.
ਤਤੋਨੇਕੇ ਲੋਕਾ ਮੌਨੀਭਵੇਤਿ ਤੰ ਤਰ੍ਜਯਾਮਾਸੁਃ, ਕਿਨ੍ਤੁ ਸ ਪੁਨਰਧਿਕਮੁੱਚੈ ਰ੍ਜਗਾਦ, ਹੇ ਯੀਸ਼ੋ ਦਾਯੂਦਃ ਸਨ੍ਤਾਨ ਮਾਂ ਦਯਸ੍ਵ|
49 ೪೯ ಆಗ ಯೇಸು ನಿಂತು, “ಅವನನ್ನು ಕರೆಯಿರಿ” ಅನ್ನಲು ಅವರು ಆ ಕುರುಡನನ್ನು ಕರೆದು, “ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಾನೆ” ಅಂದರು.
ਤਦਾ ਯੀਸ਼ੁਃ ਸ੍ਥਿਤ੍ਵਾ ਤਮਾਹ੍ਵਾਤੁੰ ਸਮਾਦਿਦੇਸ਼, ਤਤੋ ਲੋਕਾਸ੍ਤਮਨ੍ਧਮਾਹੂਯ ਬਭਾਸ਼਼ਿਰੇ, ਹੇ ਨਰ, ਸ੍ਥਿਰੋ ਭਵ, ਉੱਤਿਸ਼਼੍ਠ, ਸ ਤ੍ਵਾਮਾਹ੍ਵਯਤਿ|
50 ೫೦ ಅವನು ತನ್ನ ಹೊದಿಕೆಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು.
ਤਦਾ ਸ ਉੱਤਰੀਯਵਸ੍ਤ੍ਰੰ ਨਿਕ੍ਸ਼਼ਿਪ੍ਯ ਪ੍ਰੋੱਥਾਯ ਯੀਸ਼ੋਃ ਸਮੀਪੰ ਗਤਃ|
51 ೫೧ ಯೇಸು ಅವನನ್ನು, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ” ಎಂದು ಕೇಳಲು ಆ ಕುರುಡನು, “ಗುರುವೇ, ನನಗೆ ಕಣ್ಣಿನ ದೃಷ್ಟಿ ಬರುವಂತೆ ಮಾಡಬೇಕು” ಅಂದನು.
ਤਤੋ ਯੀਸ਼ੁਸ੍ਤਮਵਦਤ੍ ਤ੍ਵਯਾ ਕਿੰ ਪ੍ਰਾਰ੍ਥ੍ਯਤੇ? ਤੁਭ੍ਯਮਹੰ ਕਿੰ ਕਰਿਸ਼਼੍ਯਾਮੀ? ਤਦਾ ਸੋਨ੍ਧਸ੍ਤਮੁਵਾਚ, ਹੇ ਗੁਰੋ ਮਦੀਯਾ ਦ੍ਰੁʼਸ਼਼੍ਟਿਰ੍ਭਵੇਤ੍|
52 ೫೨ ಯೇಸು ಅವನಿಗೆ, “ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ” ಎಂದು ಹೇಳಿದನು. ಕೂಡಲೇ ಅವನಿಗೆ ಕಣ್ಣಿನ ದೃಷ್ಟಿ ಬಂದಿತು. ಅವನು ಆ ದಾರಿಯಲ್ಲಿ ಆತನನ್ನು ಹಿಂಬಾಲಿಸಿದನು.
ਤਤੋ ਯੀਸ਼ੁਸ੍ਤਮੁਵਾਚ ਯਾਹਿ ਤਵ ਵਿਸ਼੍ਵਾਸਸ੍ਤ੍ਵਾਂ ਸ੍ਵਸ੍ਥਮਕਾਰ੍ਸ਼਼ੀਤ੍, ਤਸ੍ਮਾਤ੍ ਤਤ੍ਕ੍ਸ਼਼ਣੰ ਸ ਦ੍ਰੁʼਸ਼਼੍ਟਿੰ ਪ੍ਰਾਪ੍ਯ ਪਥਾ ਯੀਸ਼ੋਃ ਪਸ਼੍ਚਾਦ੍ ਯਯੌ|

< ಮಾರ್ಕನು 10 >