< ಮಾರ್ಕನು 1 >
1 ೧ ದೇವಕುಮಾರನಾದ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯ ಪ್ರಾರಂಭವು.
Uwu ingi ng'wandyo nua nkani ninza niang'wa Yesu Kristo, Ng'wana wang'wa Itunda.
2 ೨ ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಬರೆದಿರುವ ಪ್ರಕಾರ, “ಇಗೋ, ನಾನು ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ; ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.”
Anga ni ikilisigwe nu munyakidagu uIsaya, “Gozeela, kumulagiilya u mutung'wa nuane ntongeela ako, ung'wi nuikazipiilya i nzila niako.
3 ೩ “‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.
Luli nula muntu nuitangaa mihaka, “Mikondeelyi i nzila a Mukulu; Igooli i nzila niakwe.”
4 ೪ ಯೋಹಾನನು ಬಂದು ಜನರಿಗೆ, ನೀವು ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಉಪದೇಶಿಸುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು.
uYohana ai uzile, wazoja mihaka nu kutanantya wogigwa nua kila itunu ku ulekelwa nua milandu.
5 ೫ ಆಗ ಯೂದಾಯ ಸೀಮೆಯೆಲ್ಲವೂ ಯೆರೂಸಲೇಮಿನವರೆಲ್ಲರೂ ಅವನ ಬಳಿಗೆ ಹೊರಟುಹೋಗಿ ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಂಡು ಯೊರ್ದನ್ ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುತ್ತಿದ್ದರು.
Ihi ihi a ku Yudea ni antu ihi nia ku Yerusalemu ai alongoe kitalakwe. Ai atulaa akogigwa nu ng'wenso mu mongo nua Yordani, aze ila itunu ku milandu ao.
6 ೬ ಈ ಯೋಹಾನನು ಒಂಟೆಯ ರೋಮದ ಹೊದಿಕೆಯನ್ನು ಧರಿಸಿಕೊಂಡು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಅವನು ಮಿಡತೆಯನ್ನೂ ಕಾಡುಜೇನನ್ನೂ ಆಹಾರವನ್ನಾಗಿ ಸೇವಿಸುತ್ತಿದ್ದನು.
uYohana ai watulaa utugae ng'wenda nua mauli a ngamia nu mukoha nua ndili mu kilino nikakwe, hangi ai watulaa ukulya ngaga nu uki nua mihaka.
7 ೭ ಅವನು “ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಪಟ್ಟಿಗಳನ್ನು ಬಗ್ಗಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ.
Ai utanantilye nu kuligitya, “Ukoli ung'wi upembilye ze yakilaa unene munya ngulu ikolo kukila unene, hangi nimugila u unoneli ga nu kutuna pihi nu kutungula i mikoha a ilatu niakwe.
8 ೮ ನಾನು ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ; ಆತನಾದರೋ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುತ್ತಾನೆ” ಎಂದು ಸಾರಿ ಹೇಳಿದನು.
Unene ai numogilye ku mazi, kuiti nuanso ukumoja unyenye ku Ng'wau Ng'welu.”
9 ೯ ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು.
Ai ipumie mu mahiku nanso kina uYesu ai uzile kupuma ku Nazareti a ku Galilaya, hangi ai wogigwe nu Yohana mu mongo nua Yordani.
10 ೧೦ ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು.
Itungo uYesu nai uhumbukile kupuma mu mazi, ai wihengile ilunde ligalanukile ng'walyi nu Ng'wau Ng'welu ukusima pihi migulya akwe anga i nkunda.
11 ೧೧ ಆಗ “ನೀನು ಪ್ರಿಯನಾಗಿರುವ ನನ್ನ ಮಗನು, ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ದೈವ ವಾಣಿ ಪರಲೋಕದಿಂದ ಕೇಳಿಸಿತು.
Nu luli ai lupumiie milunde, “Uewe ingi Ng'wana nuane mulowa, Ndoeigwe nangaluu nu ewe.”
12 ೧೨ ಕೂಡಲೇ ಪವಿತ್ರಾತ್ಮ ಪ್ರೇರಿತನಾಗಿ ಯೇಸು ಅಡವಿಗೆ ಹೋದನು.
Uugwa nkua ing'wi u Ng'wau Ng'welu akamusinja kulongola mihaka.
13 ೧೩ ಆತನು ನಲವತ್ತು ದಿನ ಅಡವಿಯಲ್ಲಿ ಕಾಡುಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಟ್ಟನು ಮತ್ತು ದೇವದೂತರು ಯೇಸುವಿಗೆ ಉಪಚಾರ ಮಾಡಿದರು.
Ai ukoli mihaka mahiku makumi anne, wazegeng'wa nu Mulugu, Ai watulaa palung'wi ni ikali nia mihaka, nia malaika ai amuaiiye.
14 ೧೪ ಯೋಹಾನನು ಬಂಧಿತನಾದ ತರುವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಹೀಗೆ ಸಾರಿ ಹೇಳಿದನು,
Itungili ze yakilaa uYohana kuambwa, uYesu ai uzile ku Galilaya wazetanantya inkani ninza niang'wa Itunda,
15 ೧೫ “ಕಾಲವು ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು; ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ.”
wazeligitya, “Itungo lakondaniila, nu utemi nuang'wa Itunda wahumbeela. Ili itunu nu kuhuiila mu nkani ninza.”
16 ೧೬ ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನು ಮತ್ತು ಅವನ ತಮ್ಮನಾದ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುವುದನ್ನು ಕಂಡನು. ಅವರು ಬೆಸ್ತರಾಗಿದ್ದರು.
Hangi wazekila mu mpelo a luzi nula Galilaya, ai umihengile uSimioni nu Andrea muluna wang'wa Simioni azegumila i nyavu niao mu luzi, kunsoko ai atulaa avua nsamaki.
17 ೧೭ ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳಿದನು.
uYesu ai uatambuie, “Pembyi, ntyati, hangi kumuzipya avua antu.”
18 ೧೮ ಕೂಡಲೆ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
Ni nkua ing'wi ai alekile i nyavu hangi akamutyata.
19 ೧೯ ಯೇಸು ಇನ್ನು ಸ್ವಲ್ಪ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು; ಅವರು ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು.
Itungo uYesu naiwagenda kahelu iniino, ai umihengile uYakobo ng'wana wang'wa Zebedayo nu Yohana muluna nuakwe; ai atulaa mi ilinga akuzipya nyavu.
20 ೨೦ ಅವನು ಕೂಡಲೇ ಅವರನ್ನೂ ಕರೆದನು. ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನನ್ನು ಹಿಂಬಾಲಿಸಿದರು.
Katungo akaitanga ni enso ai amulekile u tata nuao uZebedayo mukati ilinga ni anyamulimo nia kugulwa, akamutyata.
21 ೨೧ ಬಳಿಕ ಅವರು ಕಪೆರ್ನೌಮೆಂಬ ಊರಿಗೆ ಹೋದರು. ಸಬ್ಬತ್ ದಿನವಾದಾಗ ಯೇಸು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡತೊಡಗಿದನು.
Nai akapika ku Kapernaumu, luhiku nula kusupya, uYesu ai wingie mi itekeelo nu kumanyisa.
22 ೨೨ ಜನರು ಆತನ ಬೋಧನೆಯನ್ನು ಕೇಳಿ ಆತ್ಯಾಶ್ಚರ್ಯಪಟ್ಟರು; ಏಕೆಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದವನಂತೆ ಅವರಿಗೆ ಬೋಧಿಸುತ್ತಿದ್ದನು.
Aka ukuilwa u umanyisa nuakwe. ku iti ai watulaa ukuamanyisa anga muntu naiza ukete uhumi hangi shanga anga amanyi.
23 ೨೩ ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು.
Itungo lilo liilo ai ukoli nu muntu mi itekeelo nilao nai ukete nu hing'wi, hangi ai uzogooye,
24 ೨೪ ಆ ದೆವ್ವವು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀನು ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಬಂದ ಪರಿಶುದ್ಧನು” ಎಂದು ಕೂಗಿ ಹೇಳಿತು.
wazeligitya, “Kukete ntuni nika kituma nu ewe, Yesu nua ku Nazereti? Uzile ku ulimilya? Nukulingile wi nyenyu. U ewe ingi Ng'welu wing'wene nuang'wa Itunda!”
25 ೨೫ ಯೇಸು ಅದನ್ನು ಗದರಿಸಿ, “ಸುಮ್ಮನಿರು, ಅವನನ್ನು ಬಿಟ್ಟು ಹೊರಗೆ ಬಾ” ಎಂದನು.
uYesu ai umukenee u hing'wi nu kuligitya, “Kilaga hangi upume mukati akwe!”
26 ೨೬ ಆ ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂದಿತು.
Nu hing'wi ai umugwisilye pihi hangi akapuma kitalakwe itungo wazelila ku luli nula migulya.
27 ೨೭ ಜನರೆಲ್ಲರೂ ಬೆರಗಾಗಿ, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ದೆವ್ವಗಳಿಗೂ ಸಹ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ವಿಚಾರಮಾಡಿಕೊಂಡರು.
Ni antu ihi ai akuiwe, iti gwa akikolya kila ung'wi, “iki ingi ntuni? Umanyisa ugeni ukete uhumi? Ga nukulagiilya ia hing'wi nienso aku mukulya!”
28 ೨೮ ಕೂಡಲೆ ಆತನ ಸುದ್ದಿಯು ಗಲಿಲಾಯ ಸೀಮೆಯಲ್ಲೆಲ್ಲಾ ಹಬ್ಬಿತು.
Nu lukani kutula ng'wenso nkua ing'wi lukasapatila kila kianza mukati a mukoa wihi nua Galilaya
29 ೨೯ ಆ ಮೇಲೆ ಅವರು ಸಭಾಮಂದಿರದಿಂದ ಹೊರಟು ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಗೆ ಹೋದರು.
Hangi nkua ing'wi ze yakilaa kupuma kunzi itekeelo, ai ingi mi ito nilang'wa Simioni nu Andrea aze akoli nu Yakobo nu Yohana.
30 ೩೦ ಅಲ್ಲಿ ಸೀಮೋನನ ಅತ್ತೆ ಜ್ವರದಿಂದ ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು.
Itungili mukwingwa nuang'wa Simioni ai watula ulae mulwae, ni nkua ing'wi ai amutambuie uYesu inkani niakwe.
31 ೩೧ ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು.
Iti gwa ai uzile, ai umuambile ku mukono, nu kumunyansula migulya; ulwae ukahega kitalakwe, hangi wakandya ku a aiilya.
32 ೩೨ ಸಂಜೆಯಾಗಿ ಹೊತ್ತು ಮುಳುಗಿದ ಮೇಲೆ ಜನರು ಅಸ್ವಸ್ಥರಾದವರನ್ನೂ, ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು.
Mpindi nanso itungo ilyoa lakondya kulimila, ai amuletee kitalakwe ihi nai atulaa alwae, ang'wi nai akete i ahing'wi.
33 ೩೩ ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು.
Kisali kihi ai kilingiie palung'wi pa mulango.
34 ೩೪ ಆಗ ಆತನು ನಾನಾ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದ ಬಹು ಜನರನ್ನು ಸ್ವಸ್ಥಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಆದರೆ ಅವುಗಳಿಗೆ ತಾನು ಇಂಥವನೆಂದು ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ.
Ai uagunile idu nai atulaa alwae a kila ulwae nu kupumya ahing'wi idu, ila shanga ai ulekee hing'wi kuligitya ku nsoko ai amulingile.
35 ೩೫ ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ನಿರ್ಜನ ಸ್ಥಳಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದನು.
Ai u ukile dau maniabwa, itungo nai ikili kiti; ai uhegile nu kulongola nkika a kinkunku nu kulompa kuko.
36 ೩೬ ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದು,
uSimioni ni ihi nai atulaa palung'wi nu ng'wenso ai amudumile.
37 ೩೭ ಆತನನ್ನು ಕಂಡಾಗ “ಎಲ್ಲರೂ ನಿನ್ನನ್ನು ಎದುರುನೋಡುತ್ತಿದ್ದಾರೆ” ಎಂದರು.
Ai amuligilye hangi akamutambuila, “Kila ung'wi uku uduma”
38 ೩೮ ಆತನು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಇಲ್ಲಿಗೆ ಹೊರಟು ಬಂದಿದ್ದೇನೆ” ಎಂದು ಹೇಳಿದನು.
Ai uatambuie, “Kwini kianza kingiiza, kunzi mu isali ni ipilimikiiye, iti nihume kutanantya nuko ga. Yiyo nsoko aza nzile apa.”
39 ೩೯ ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.
Ai ulongoe waze ukiie i Galilaya ihi, waze tanantya mu matekeelo ao nu kuapatya ia hing'wi.
40 ೪೦ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು.
Munya mbili ung'wi ai uzile kitalakwe. Ai watulaa ukumusinja; ai utugamile nu kumutambuila, “Anga ize uloilwe, uhumile kunzipya ntule ni muza.”
41 ೪೧ ಯೇಸು ಕನಿಕರಪಟ್ಟು ತನ್ನ ಕೈ ಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು.
Waze usuntilwe ni kinya uwai, uYesu ai ugooe u mukono nuakwe nu kumuamba, akamuila, “Ndoilwe, Utule u muza.”
42 ೪೨ ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧನಾದನು.
Itungo ling'wi i mbili ikamupuma, hangi ai uzipigwe kutula muza.
43 ೪೩ ಆಗ ಯೇಸು ಅವನಿಗೆ, “ಯಾರಿಗೂ ಏನೂ ಹೇಳಬೇಡ ನೋಡು;
uYesu akamukania itaki nu kumuila walongole itungo ling'wi.
44 ೪೪ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ನಿನ್ನ ಶುದ್ಧಿಗಾಗಿಮೋಶೆಯು ಆಜ್ಞಾಪಿಸಿರುವಂಥವುಗಳನ್ನು ಅರ್ಪಿಸು. ಅದು ಜನರಿಗೆ ಸಾಕ್ಷಿಯಾಗಿರಲಿ ಎಂದು ಖಂಡಿತವಾಗಿ” ಹೇಳಿ ಅವನನ್ನು ಕೂಡಲೆ ಕಳುಹಿಸಿ ಬಿಟ್ಟನು.
Ai umutambuie, “Kendegeela shanga uligitilye lukani ku wihi, kuiti longola, wiambye kung'wa kuhani, hangi upumye isongelyo ku nsoko a weligwa naiza uMusa ai ulagiiye, anga ukuiili kitalao.”
45 ೪೫ ಆದರೆ ಅವನು ಹೊರಟುಹೋಗಿ ಎಲ್ಲಾ ಕಡೆಗೂ ಈ ಸಂಗತಿಯನ್ನು ಬಹಳವಾಗಿ ಸಾರಿ ಹಬ್ಬಿಸುವುದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಬಹಿರಂಗವಾಗಿ ಬೇರೆ ಊರುಗಳಿಗೆ ಹೋಗಲಾರದೆ ನಿರ್ಜನ ಸ್ಥಳಗಳಲ್ಲಿ ಇದ್ದನು. ಆದರೂ ಜನರು ಎಲ್ಲಾ ಕಡೆಯಿಂದಲೂ ಆತನ ಬಳಿಗೆ ಬರುತ್ತಿದ್ದರು.
Kuiti ai ulongoe nu kandya kumutambula kila ung'wi nu kenelya u lukani ikilo ga nu Yesu shanga ai uhumile hangi kingila mu kisali ku ulyuuku. Iti gwa ai wikiie kianza nika kinkunku ni antu ai azile kitalakwe kupuma kila nkika.