< ಮಲಾಕಿಯನು 2 >
1 ೧ ಯಾಜಕರೇ, ಈ ಅಪ್ಪಣೆಯು ಈಗ ನಿಮಗಾಗಿದೆ.
ए पुजारी हो, यो आज्ञा तिमीहरूका निम्ति हो ।
2 ೨ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ನಾಮವನ್ನು ಘನಪಡಿಸಬೇಕೆಂಬ ಆಜ್ಞೆಯನ್ನು ನೀವು ಆಲಿಸಿ ಮನನಮಾಡಿ ಅರ್ಥಮಾಡಿಕೊಳ್ಳದಿದ್ದರೆ, ನಾನು ನಿಮಗೆ ಶಾಪವನ್ನು ಬರಮಾಡುವೆನು, ನಿಮಗೆ ಆಶೀರ್ವಾದವಾಗಿ ದಯಪಾಲಿಸಿದವುಗಳೆಲ್ಲವನ್ನೂ ಶಪಿಸುವೆನು; ಹೌದು, ಈ ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮನದಟ್ಟು ಮಾಡಿಕೊಳ್ಳದ ಕಾರಣ ನಾನು ನಿಮ್ಮನ್ನು ಶಪಿಸುತ್ತೇನೆ.
“यदि मेरो नाउँलाई आदर गर्न तिमीहरूले सुन्दैनौ र त्यो हृदयमा राख्दैनौ भने, म तिमीहरूकहाँ सराप पठाउनेछु, र तिमीहरूका आशिषलाई पनि सराप दिनेछु, सेनाहरूका परमप्रभु भन्नुहुन्छ । साँच्चै, मैले तिनीहरूलाई सराप दिइसकेको छु, किनभने तिमीहरूले मेरो आज्ञालाई आफ्नो हृदयमा राखेनौ ।
3 ೩ ಗಮನವಿಟ್ಟು ಕೇಳಿ, ನಿಮ್ಮ ಸಂತಾನ ಬೆಳೆಯದಂತೆ ಶಪಿಸುವೆ; ನಿಮ್ಮ ಮೇಲೆ ಯಜ್ಞಪಶುಗಳ ಸಗಣಿಯನ್ನು ಎರಚುವೆನು. ಈ ಅವಮಾನದಿಂದ ನೀವು ತಿಪ್ಪೆಯ ಪಾಲಾಗುವಿರಿ.
हेर, म तिमीहरूका सन्ततिलाई हप्काउन जाँदैछु, र म तिमीहरूका अनुहारमा गोबर छरिदिनेछु, तिमीहरूका चाड-पर्वहरूको गोबर, र त्योसँगै त्यसले तिमीहरूलाई लैजानेछ ।
4 ೪ ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆಯು ನೆಲೆಗೊಳ್ಳಬೇಕೆಂದು ಈ ಅಪ್ಪಣೆಯನ್ನು ನಿಮಗೆ ಹೇಳಿಕಳುಹಿಸಿದ್ದೇನೆಂಬುದು ನಿಮಗೆ ಗೊತ್ತಾಗಬೇಕು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
यो आज्ञा मैले नै तिमीहरूलाई दिएको हुँ, र मेरो करार लेवीसँग रहिरहनेछ भनेर तिमीहरूले जान्नेछौ,” सेनाहरूका परमप्रभु भन्नुहुन्छ ।
5 ೫ “ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆ ಜೀವದಾತ ಹಾಗು ಬದುಕಿನಲ್ಲಿ ಶಾಂತಿ, ಸುಖ ತರುವಂಥ ಒಡಂಬಡಿಕೆ. ಅವರು ಭಯ ಭಕ್ತಿಯಿಂದ ಬಾಳಲೆಂದೇ ನಾನು ಅದನ್ನು ಅವರಿಗೆ ವಿಧಿಸಿದೆನು. ಅದರಂತೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನನ್ನ ನಾಮಕ್ಕೆ ಹೆದರಿ ನಡೆದುಕೊಂಡರು.
“त्यससँग मेरो करार जीवन र शान्तिको थियो, र मैले ती तिनीहरूलाई दिएँ । मैले त्यसलाई डर दिएँ, र त्यसले मेरो भय राख्यो, मेरो नाउँको भयमा त्यो उभियो ।
6 ೬ ಅವರ ಬಾಯಲ್ಲಿ ಸತ್ಯಬೋಧನೆಯು ನೆಲೆಸಿತ್ತು, ಅವರ ತುಟಿಗಳಲ್ಲಿ ಅಪವಾದದ ಮಾತುಗಳು ಬರಲಿಲ್ಲ. ಅವರು ಶಾಂತಿಯಿಂದಲೂ, ಸದ್ಧರ್ಮದಿಂದಲೂ ನನ್ನೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಬಹು ಜನರನ್ನು ಪಾಪದ ಕಡೆಯಿಂದ ತಿರುಗಿಸಿದರು.
त्यसको मुखमा साँचो शिक्षा थियो, र त्यसको ओठमा कुनै झुट पाइएन । त्यो मसँग शान्ति र सत्यतामा हिँड्यो र त्यसले धेरैलाई पापबाट टाढा राख्यो ।
7 ೭ ಜ್ಞಾನಾನುಸಾರವಾಗಿ ಮಾತನಾಡುವುದು ಯಾಜಕನ ತುಟಿಗಳ ಧರ್ಮವಷ್ಟೆ; ಅವನು ಸೇನಾಧೀಶ್ವರನಾದ ಯೆಹೋವನ ದೂತನಾಗಿರುವ ಕಾರಣ ಜನರು ಅವನ ಬಾಯಿಂದ ಧರ್ಮೋಪದೇಶವನ್ನು ಕೇಳುವುದು ಧರ್ಮ. ನೀವೋ ದಾರಿತಪ್ಪಿದ್ದೀರಿ;
किनभने पूजारीको ओठमा ज्ञान हुनुपर्छ र मानिसहरूले त्यसको मुखबाट शिक्षा खोज्नुपर्छ, किनभने त्यो सेनाहरूका परमप्रभुको समाचारवाहक हो ।
8 ೮ “ನಿಮ್ಮ ಧರ್ಮೋಪದೇಶದಿಂದ ಬಹು ಜನರನ್ನು ಮುಗ್ಗರಿಸುವ ಹಾಗೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
तर तिमीहरू साँचो मार्गबाट टाढा गएका छौ । तिमीहरूका शिक्षाले धेरैलाई ठेस लागेको छ । तिमीहरूले लेवीको करारलाई तोडेका छौ,” सेनाहरूका परमप्रभु भन्नुहुन्छ ।
9 ೯ “ನೀವು ನನ್ನ ಮಾರ್ಗಗಳನ್ನು ಅನುಸರಿಸದೆ ನಿಮ್ಮ ಧರ್ಮನಿಯಮ ಉಪದೇಶದಲ್ಲಿ ಪಕ್ಷಪಾತ ತೋರಿಸಿದ್ದರಿಂದ ನಾನಂತೂ ನಿಮ್ಮನ್ನು ಎಲ್ಲಾ ಜನರ ಮುಂದೆ ಅವಮಾನ ಹೊಂದುವಂತೆ ಅವರು ನಿಮ್ಮನ್ನು ಹೀಯಾಳಿಸಿ ಕೀಳಾಗಿ ಕಾಣುವಂತೆ ಮಾಡುವೆನು.”
“यसैले मैले पनि तिमीहरूलाई सारा मानिसहरूका अगाडि तुच्छ र निंदनीय बनाएको छु, किनभने तिमीहरू मेरा मार्गमा हिँडेका छैनौ, तर शिक्षा दिइएका कुराहरूमा पक्षपात गरेका छौ ।”
10 ೧೦ ನಮ್ಮೆಲ್ಲರಿಗೂ ಒಬ್ಬನೇ ತಂದೆ; ಒಬ್ಬನೇ ದೇವರು ನಮ್ಮನ್ನು ಸೃಷ್ಟಿಮಾಡಿದ್ದನಲ್ಲವೇ; ಹೀಗಿರಲು ನಾವು ಒಬ್ಬರಿಗೊಬ್ಬರು ದ್ರೋಹಮಾಡಿ ದೇವರು ನಮ್ಮ ಪೂರ್ವಿಕರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಹೊಲೆಮಾಡುವುದೇಕೆ?
के हामीहरू सबैका निम्ति एउटै पिता हुनुहुन्न र? के एउटै परमेश्वरले हामीलाई बनाउनुभएको होइन र? हामीहरू हरेक किन आफ्नो दाजुभाइको विरुद्धमा विश्वासहीन हुन्छौँ, र हाम्रा पितापुर्खाका नाउँलाई अपमानित गर्दछौ?
11 ೧೧ ಯೆಹೂದವು ದ್ರೋಹಮಾಡಿದೆ, ಇಸ್ರಾಯೇಲಿನಲ್ಲಿಯೂ, ಯೆರೂಸಲೇಮಿನಲ್ಲಿಯೂ ಒಂದು ದುರಾಚಾರವು ನಡೆಯುತ್ತಿದೆ; ಯೆಹೂದವು ಅನ್ಯದೇವತೆಯನ್ನು ಆರಾಧಿಸುವ ಮಹಿಳೆಯರನ್ನು ಮದುವೆಯಾಗಿ ಯೆಹೋವನ ಪ್ರಿಯ ದೇವಾಲಯವನ್ನು ಹೊಲೆಗೆಡಿಸಿದೆ.
यहूदा विश्वासहीन भएको छ । इस्राएल र यरूशलेममा घिनलाग्दो काम भएको छ । परमप्रभुले प्रेम गर्नुहुने पवित्र ठाउँलाई यहूदाले अपवित्र बनाएको छ, र त्यसले पराई ईश्वरकी छोरीसँग विहे गरेको छ ।
12 ೧೨ ಇಂಥ ಕೆಲಸವನ್ನು ನಡೆಸಿದ ಪ್ರತಿಯೊಬ್ಬನ ಕುಟುಂಬದಲ್ಲಿ ಎಬ್ಬಿಸುವವರಾಗಲಿ, ಉತ್ತರ ಕೊಡುವವರಾಗಲಿ ಎಲ್ಲರನ್ನೂ ಯೆಹೋವನು ಯಾಕೋಬಿನ ಗುಡಾರಗಳೊಳಗಿಂದ ನಿರ್ಮೂಲಮಾಡುವನು; ಸೇನಾಧೀಶ್ವರನಾದ ಯೆಹೋವನಿಗೆ ನೈವೇದ್ಯ ತಂದು ಅರ್ಪಿಸುವವನನ್ನು ಕಡಿದುಬಿಡುವನು.
यसो गर्ने मानिस, जो बिउँझेको छ र जसले उत्तर दिन्छ, त्यसले सेनाहरूका परमप्रभुकहाँ भेटी अर्पण गर्ने भए तापनि, परमप्रभुले त्यसलाई याकूबका पालहरूबाट बहिष्कृत गरून् ।
13 ೧೩ ಇನ್ನೊಂದು ಕೆಲಸವನ್ನು ಮಾಡುತ್ತೀರಿ - ಯೆಹೋವನ ಯಜ್ಞವೇದಿಯನ್ನು ನರಳಾಟದಿಂದಲೂ, ಗೋಳಾಟದಿಂದಲೂ ಕಣ್ಣೀರಿನಿಂದಲೂ ತುಂಬಿಸಿ ಮುಚ್ಚುತ್ತೀರಿ; ಆದಕಾರಣ ಆತನು ನಿಮ್ಮ ನೈವೇದ್ಯವನ್ನು ಇನ್ನು ಲಕ್ಷಿಸನು, ನಿಮ್ಮ ಕೈಯಿಂದ ಅದನ್ನು ಪ್ರಸನ್ನನಾಗಿ ಸ್ವೀಕರಿಸನು.
तिमीहरू यसो पनि गर्दछौ: तिमीहरू परमप्रभुको वेदीलाई आँसु, रोदन र विलापले ढाक्छौ, किनभने तिमीहरूका हातका भेटीलाई उहाँले कृपासित ग्रहण गर्नुहुन्न, न त त्योतिर ध्यान नै दिनुहुन्छ ।
14 ೧೪ “ಇದಕ್ಕೆ ಕಾರಣವೇನೆಂದು ಕೇಳುತ್ತೀರೋ? ನಿನಗೂ, ನಿನ್ನ ಯೌವನ ಪ್ರಾಯದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ, ನಿನ್ನ ಸಹಚರಿಣಿಯೂ, ನಿನ್ನ ಒಡಂಬಡಿಕೆಯ ಪತ್ನಿಯಾದ ಆಕೆಗೆ ದ್ರೋಹಮಾಡಿದ್ದೀ.
तर तिमीहरू भन्छौ, “उहाँले किन गर्नुहुन्न?” किनभने परमप्रभु तिमीहरू र तिमीहरूका जवानीपनकी पत्नीबिच साक्षी हुनुहुन्थ्यो, र त्यो तेरी जीवनसाथी र करारअनुसार तेरी पत्नी हुँदाहुँदै पनि त्यसको विरुद्ध तिमीहरू विश्वासहीन भयौ ।
15 ೧೫ ದೇವರು ನಿನ್ನ ಮತ್ತು ನಿನ್ನ ಪತ್ನಿಯ ತನುಮನಗಳನ್ನು ಒಂದು ಮಾಡಿ ಒಡಂಬಡಿಸಲಿಲ್ಲವೇ? ದೇವರ ಉದ್ದೇಶವೇನು? ದೇವರ ಮಕ್ಕಳಾಗಿ ಬಾಳುವ ಸಂತಾನ ದಯಪಾಲಿಸುವ ಉದ್ದೇಶ ಆತನದಾಗಿತ್ತು. ಆದುದರಿಂದ ಮದುವೆಯಾದ ಪತ್ನಿಗೆ ದ್ರೋಹಮಾಡದೆ ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.”
के उहाँले आफ्नो आत्मामा तिनीहरूलाई एक बनाउनुभएको होइन र? त्यसोभए किन उहाँले तिमीहरूलाई एक बनाउनुभयो? किनभने उहाँले परमेश्वरको सन्तान खोज्नुभएको थियो । त्यसैले आफैँलाई आफ्नो आत्मामा रखवाली गर र आफ्नो जवानी अवस्थाकी पत्नीसँग अविश्वासी नहोओ ।
16 ೧೬ ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನಾನು ಪತ್ನಿತ್ಯಾಗವನ್ನೂ, ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ.”
“किनभने म सम्बन्धविच्छेदलाई घृणा गर्दछु,” इस्राएलका परमेश्वर, परमप्रभु भन्नुहुन्छ, “र त्यसलाई पनि जसले आफ्नो वस्त्रलाई हिंसाले ढाक्दछ,” सेनाहरूका परमप्रभु भन्नुहुन्छ । “यसैकारण आफैँलाई आत्मामा रखवाली गर र विश्वासहीन नहोओ ।”
17 ೧೭ ನೀವು ಯೆಹೋವನನ್ನು ನಿಮ್ಮ ಮಾತುಗಳಿಂದ ಬೇಸರಗೊಳಿಸಿದ್ದೀರಿ. “ಯಾವ ವಿಷಯದಲ್ಲಿ ಆತನನ್ನು ಬೇಸರಗೊಳಿಸಿದ್ದೇವೆ ಅನ್ನುತ್ತೀರಾ? ಪ್ರತಿಯೊಬ್ಬ ದುರಾಚಾರಿಯು ಯೆಹೋವನ ದೃಷ್ಟಿಗೆ ಒಳ್ಳೆಯವನು. ಅವರೇ ಆತನಿಗೆ ಇಷ್ಟ. ನ್ಯಾಯತೀರಿಸುವ ದೇವರು ಎಲ್ಲಿದ್ದಾನೆ?” ಎಂದು ನೀವು ಕೇಳುವುದರಿಂದ ಆತನ ಗಮನದಲ್ಲಿ ಇದ್ದೀರಿ.
तिमीहरूले आफ्ना बोलीले परमप्रभुलाई थकित तुल्याका छौ । तर तिमीहरू भन्छौ, “हामीले उहाँलाई कसरी थकित तुल्याएका छौँ?” यसो भनेर, “दुष्ट काम गर्ने सबै परमप्रभुको दृष्टिमा असल छ, र उहाँ तिनीहरूमा खुशी हुनुहुन्छ,” वा “न्यायका परमेश्वर कहाँ हुनुहुन्छ?”