< ಲೂಕನು 9 >

1 ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಮತ್ತು ಅಧಿಕಾರಗಳನ್ನು ಕೊಟ್ಟು,
ততঃ পৰং স দ্ৱাদশশিষ্যানাহূয ভূতান্ ত্যাজযিতুং ৰোগান্ প্ৰতিকৰ্ত্তুঞ্চ তেভ্যঃ শক্তিমাধিপত্যঞ্চ দদৌ|
2 ದೇವರ ರಾಜ್ಯದ ವಿಷಯವನ್ನು ಸಾರುವುದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವುದಕ್ಕೂ ಅವರನ್ನು ಕಳುಹಿಸಿದನು.
অপৰঞ্চ ঈশ্ৱৰীযৰাজ্যস্য সুসংৱাদং প্ৰকাশযিতুম্ ৰোগিণামাৰোগ্যং কৰ্ত্তুঞ্চ প্ৰেৰণকালে তান্ জগাদ|
3 ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ನಿಮ್ಮ ಪ್ರಯಾಣಕ್ಕಾಗಿ ಏನನ್ನೂ ತೆಗೆದುಕೊಂಡು ಹೋಗಬೇಡಿರಿ, ಕೋಲು, ಚೀಲ, ಬುತ್ತಿ, ಹಣ ಬೇಡ; ಎರಡಂಗಿಗಳಿರಬಾರದು.
যাত্ৰাৰ্থং যষ্টি ৰ্ৱস্ত্ৰপুটকং ভক্ষ্যং মুদ্ৰা দ্ৱিতীযৱস্ত্ৰম্, এষাং কিমপি মা গৃহ্লীত|
4 ಇದಲ್ಲದೆ ಆ ಊರಿನಿಂದ ಹೊರಡುವ ತನಕ ನೀವು ಯಾವ ಮನೆಯಲ್ಲಿ ಇಳಿದುಕೊಂಡಿರುವಿರೋ, ಆ ಮನೆಯಲ್ಲೇ ಉಳಿದುಕೊಳ್ಳಿರಿ.
যূযঞ্চ যন্নিৱেশনং প্ৰৱিশথ নগৰত্যাগপৰ্য্যনতং তন্নিৱেশনে তিষ্ঠত|
5 ಮತ್ತು ಯಾವ ಊರಿನವರಾದರೂ ನಿಮ್ಮನ್ನು ಸ್ವೀಕರಿಸಿಕೊಳ್ಳದೆ ಹೋದರೆ ಆ ಊರನ್ನು ನೀವು ಬಿಟ್ಟುಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಅಂದನು.
তত্ৰ যদি কস্যচিৎ পুৰস্য লোকা যুষ্মাকমাতিথ্যং ন কুৰ্ৱ্ৱন্তি তৰ্হি তস্মান্নগৰাদ্ গমনকালে তেষাং ৱিৰুদ্ধং সাক্ষ্যাৰ্থং যুষ্মাকং পদধূলীঃ সম্পাতযত|
6 ಆಗ ಅವರು ಹೊರಟು ಗ್ರಾಮಗಳಿಗೆ ಹೋಗಿ, ಸುವಾರ್ತೆಯನ್ನು ಸಾರುತ್ತಾ ಎಲ್ಲಾ ಕಡೆಗಳಲ್ಲಿಯೂ ರೋಗಿಗಳನ್ನು ವಾಸಿಮಾಡುತ್ತಿದ್ದರು.
অথ তে প্ৰস্থায সৰ্ৱ্ৱত্ৰ সুসংৱাদং প্ৰচাৰযিতুং পীডিতান্ স্ৱস্থান্ কৰ্ত্তুঞ্চ গ্ৰামেষু ভ্ৰমিতুং প্ৰাৰেভিৰে|
7 ಹೀಗಿರಲಾಗಿ ಉಪರಾಜನಾದ ಹೆರೋದನು ನಡೆದ ಸಂಗತಿಗಳನ್ನೆಲ್ಲಾ ಕೇಳಿ ಬಹಳವಾಗಿ ಕಳವಳಗೊಂಡನು, ಏಕೆಂದರೆ ಸತ್ತಿದ್ದ ಯೋಹಾನನು ತಿರುಗಿ ಬದುಕಿಬಂದಿದ್ದಾನೆಂದು ಕೆಲವರೂ,
এতৰ্হি হেৰোদ্ ৰাজা যীশোঃ সৰ্ৱ্ৱকৰ্ম্মণাং ৱাৰ্ত্তাং শ্ৰুৎৱা ভৃশমুদ্ৱিৱিজে
8 ಎಲೀಯನು ಕಾಣಿಸಿಕೊಂಡನೆಂದು ಕೆಲವರೂ, ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆಂದು ಮತ್ತೆ ಕೆಲವರೂ ಹೇಳಿಕೊಳ್ಳುತ್ತಿದ್ದರು.
যতঃ কেচিদূচুৰ্যোহন্ শ্মশানাদুদতিষ্ঠৎ| কেচিদূচুঃ, এলিযো দৰ্শনং দত্তৱান্; এৱমন্যলোকা ঊচুঃ পূৰ্ৱ্ৱীযঃ কশ্চিদ্ ভৱিষ্যদ্ৱাদী সমুত্থিতঃ|
9 ಆದರೆ ಹೆರೋದನು, “ಯೋಹಾನನನ್ನು ನಾನೇ ಶಿರಚ್ಛೇದನಮಾಡಿಸಿದೆನಷ್ಟೆ. ಹಾಗಿದ್ದಲಿ ಇವನಾರು? ಇವನ ವಿಷಯವಾಗಿ ಆಶ್ಚರ್ಯಕರವಾದ ಸಂಗತಿಗಳನ್ನು ಕೇಳುತ್ತೇನಲ್ಲಾ” ಎಂದು ಹೇಳಿ ಅವನನ್ನು ನೋಡಬೇಕೆಂದು ಪ್ರಯತ್ನಿಸಿದನು.
কিন্তু হেৰোদুৱাচ যোহনঃ শিৰোঽহমছিনদম্ ইদানীং যস্যেদৃক্কৰ্ম্মণাং ৱাৰ্ত্তাং প্ৰাপ্নোমি স কঃ? অথ স তং দ্ৰষ্টুম্ ঐচ্ছৎ|
10 ೧೦ ಇತ್ತಲಾಗಿ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದ್ದನ್ನೆಲ್ಲಾ ಯೇಸುವಿಗೆ ವಿವರವಾಗಿ ಹೇಳಿದರು. ಆತನು ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬೇತ್ಸಾಯಿದವೆಂಬ ಊರಿಗೆ ಹೋದರು.
১০অনন্তৰং প্ৰেৰিতাঃ প্ৰত্যাগত্য যানি যানি কৰ্ম্মাণি চক্ৰুস্তানি যীশৱে কথযামাসুঃ ততঃ স তান্ বৈৎসৈদানামকনগৰস্য ৱিজনং স্থানং নীৎৱা গুপ্তং জগাম|
11 ೧೧ ಜನರ ಗುಂಪು ಇದನ್ನು ತಿಳಿದು ಯೇಸುವಿನ ಹಿಂದೆ ಬರಲು ಆತನು ಅವರನ್ನು ಪ್ರೀತಿಯಿಂದ ಸೇರಿಸಿಕೊಂಡು ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಅಗತ್ಯವಿದ್ದವರನ್ನು ಗುಣಪಡಿಸಿದನು.
১১পশ্চাল্ লোকাস্তদ্ ৱিদিৎৱা তস্য পশ্চাদ্ যযুঃ; ততঃ স তান্ নযন্ ঈশ্ৱৰীযৰাজ্যস্য প্ৰসঙ্গমুক্তৱান্, যেষাং চিকিৎসযা প্ৰযোজনম্ আসীৎ তান্ স্ৱস্থান্ চকাৰ চ|
12 ೧೨ ಸಂಜೆಯಾಗುತ್ತಿರಲು, ಆ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಗುಂಪಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೋಸ್ಕರ ಊಟವಸತಿಗಳನ್ನು ಏರ್ಪಡಿಸಿಕೊಳ್ಳಲಿ; ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲಾ” ಎಂದು ಆತನಿಗೆ ಹೇಳಲಾಗಿ,
১২অপৰঞ্চ দিৱাৱসন্নে সতি দ্ৱাদশশিষ্যা যীশোৰন্তিকম্ এত্য কথযামাসুঃ, ৱযমত্ৰ প্ৰান্তৰস্থানে তিষ্ঠামঃ, ততো নগৰাণি গ্ৰামাণি গৎৱা ৱাসস্থানানি প্ৰাপ্য ভক্ষ্যদ্ৰৱ্যাণি ক্ৰেতুং জননিৱহং ভৱান্ ৱিসৃজতু|
13 ೧೩ ಆತನು, “ನೀವೇ ಅವರಿಗೆ ಊಟಕ್ಕೆ ಕೊಡಿರಿ” ಅಂದನು. ಅದಕ್ಕವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನು ಹೊರತು ಹೆಚ್ಚೇನೂ ಇಲ್ಲ, ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡು ತರಬೇಕೋ?” ಅಂದರು.
১৩তদা স উৱাচ, যূযমেৱ তান্ ভেজযধ্ৱং; ততস্তে প্ৰোচুৰস্মাকং নিকটে কেৱলং পঞ্চ পূপা দ্ৱৌ মৎস্যৌ চ ৱিদ্যন্তে, অতএৱ স্থানান্তৰম্ ইৎৱা নিমিত্তমেতেষাং ভক্ষ্যদ্ৰৱ্যেষু ন ক্ৰীতেষু ন ভৱতি|
14 ೧೪ ಅಲ್ಲಿ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿಯಿದ್ದರು. ಆಗ ಯೇಸುವು ತನ್ನ ಶಿಷ್ಯರಿಗೆ, “ಇವರನ್ನು ಒಂದೊಂದು ಪಂಕ್ತಿಗೆ ಹೆಚ್ಚುಕಡಿಮೆ ಐವತ್ತೈವತ್ತರಂತೆ ಕೂರಿಸಿರಿ” ಎಂದು ಹೇಳಲು,
১৪তত্ৰ প্ৰাযেণ পঞ্চসহস্ৰাণি পুৰুষা আসন্|
15 ೧೫ ಅವರು ಅದರಂತೆ ಮಾಡಿ ಎಲ್ಲರನ್ನೂ ಕುಳ್ಳಿರಿಸಿದರು.
১৫তদা স শিষ্যান্ জগাদ পঞ্চাশৎ পঞ্চাশজ্জনৈঃ পংক্তীকৃত্য তানুপৱেশযত, তস্মাৎ তে তদনুসাৰেণ সৰ্ৱ্ৱলোকানুপৱেশযাপাসুঃ|
16 ೧೬ ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ, ಮುರಿದು ಶಿಷ್ಯರ ಕೈಗೆ ಕೊಟ್ಟು, ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು.
১৬ততঃ স তান্ পঞ্চ পূপান্ মীনদ্ৱযঞ্চ গৃহীৎৱা স্ৱৰ্গং ৱিলোক্যেশ্ৱৰগুণান্ কীৰ্ত্তযাঞ্চক্ৰে ভঙ্ক্তা চ লোকেভ্যঃ পৰিৱেষণাৰ্থং শিষ্যেষু সমৰ্পযাম্বভূৱ|
17 ೧೭ ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು.
১৭ততঃ সৰ্ৱ্ৱে ভুক্ত্ৱা তৃপ্তিং গতা অৱশিষ্টানাঞ্চ দ্ৱাদশ ডল্লকান্ সংজগৃহুঃ|
18 ೧೮ ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, “ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಲು,
১৮অথৈকদা নিৰ্জনে শিষ্যৈঃ সহ প্ৰাৰ্থনাকালে তান্ পপ্ৰচ্ছ, লোকা মাং কং ৱদন্তি?
19 ೧೯ ಅವರು, “ನಿನ್ನನ್ನು ಸ್ನಾನಿಕನಾದ ಯೋಹಾನನು ಎಂದೂ, ಕೆಲವರು ಎಲೀಯನು ಎಂದೂ, ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆ ಎಂದು ಅನ್ನುತ್ತಿದ್ದಾರೆ” ಎಂದು ಹೇಳಿದರು.
১৯ততস্তে প্ৰাচুঃ, ৎৱাং যোহন্মজ্জকং ৱদন্তি; কেচিৎ ৎৱাম্ এলিযং ৱদন্তি, পূৰ্ৱ্ৱকালিকঃ কশ্চিদ্ ভৱিষ্যদ্ৱাদী শ্মশানাদ্ উদতিষ্ঠদ্ ইত্যপি কেচিদ্ ৱদন্তি|
20 ೨೦ ಯೇಸು ಅವರನ್ನು, “ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು” ಎಂದು ಉತ್ತರ ಕೊಟ್ಟನು.
২০তদা স উৱাচ, যূযং মাং কং ৱদথ? ততঃ পিতৰ উক্তৱান্ ৎৱম্ ঈশ্ৱৰাভিষিক্তঃ পুৰুষঃ|
21 ೨೧ ಆಗ ಯೇಸುವು, ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆ ಕೊಟ್ಟನು.
২১তদা স তান্ দৃঢমাদিদেশ, কথামেতাং কস্মৈচিদপি মা কথযত|
22 ೨೨ ಯೇಸು ಅವರಿಗೆ, “ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕರಿಸಲ್ಪಟ್ಟು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ” ಎಂದು ಹೇಳಿದನು.
২২স পুনৰুৱাচ, মনুষ্যপুত্ৰেণ ৱহুযাতনা ভোক্তৱ্যাঃ প্ৰাচীনলোকৈঃ প্ৰধানযাজকৈৰধ্যাপকৈশ্চ সোৱজ্ঞায হন্তৱ্যঃ কিন্তু তৃতীযদিৱসে শ্মশানাৎ তেনোত্থাতৱ্যম্|
23 ೨೩ ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ಪ್ರತಿದಿನವು ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
২৩অপৰং স সৰ্ৱ্ৱানুৱাচ, কশ্চিদ্ যদি মম পশ্চাদ্ গন্তুং ৱাঞ্ছতি তৰ্হি স স্ৱং দাম্যতু, দিনে দিনে ক্ৰুশং গৃহীৎৱা চ মম পশ্চাদাগচ্ছতু|
24 ೨೪ ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.
২৪যতো যঃ কশ্চিৎ স্ৱপ্ৰাণান্ ৰিৰক্ষিষতি স তান্ হাৰযিষ্যতি, যঃ কশ্চিন্ মদৰ্থং প্ৰাণান্ হাৰযিষ্যতি স তান্ ৰক্ষিষ্যতি|
25 ೨೫ ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ತಾನು ಹಾಳುಮಾಡಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?
২৫কশ্চিদ্ যদি সৰ্ৱ্ৱং জগৎ প্ৰাপ্নোতি কিন্তু স্ৱপ্ৰাণান্ হাৰযতি স্ৱযং ৱিনশ্যতি চ তৰ্হি তস্য কো লাভঃ?
26 ೨೬ ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ, ಅವನಿಗೆ ಮನುಷ್ಯಕುಮಾರನು ತನಗೂ ತನ್ನ ತಂದೆಗೂ ಪರಿಶುದ್ಧ ದೂತರಿಗೂ ಇರುವ ಮಹಾಪ್ರಭಾವದೊಡನೆ ಬರುವಾಗ ಅವನ ಕುರಿತು ನಾಚಿಕೊಳ್ಳುವನು.
২৬পুন ৰ্যঃ কশ্চিন্ মাং মম ৱাক্যং ৱা লজ্জাস্পদং জানাতি মনুষ্যপুত্ৰো যদা স্ৱস্য পিতুশ্চ পৱিত্ৰাণাং দূতানাঞ্চ তেজোভিঃ পৰিৱেষ্টিত আগমিষ্যতি তদা সোপি তং লজ্জাস্পদং জ্ঞাস্যতি|
27 ೨೭ ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣಹೊಂದುವುದಿಲ್ಲ” ಎಂದು ಹೇಳಿದನು.
২৭কিন্তু যুষ্মানহং যথাৰ্থং ৱদামি, ঈশ্ৱৰীযৰাজৎৱং ন দৃষ্টৱা মৃত্যুং নাস্ৱাদিষ্যন্তে, এতাদৃশাঃ কিযন্তো লোকা অত্ৰ স্থনেঽপি দণ্ডাযমানাঃ সন্তি|
28 ೨೮ ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆಮಾಡುವುದಕ್ಕೆ ಬೆಟ್ಟವನ್ನು ಹತ್ತಿದನು.
২৮এতদাখ্যানকথনাৎ পৰং প্ৰাযেণাষ্টসু দিনেষু গতেষু স পিতৰং যোহনং যাকূবঞ্চ গৃহীৎৱা প্ৰাৰ্থযিতুং পৰ্ৱ্ৱতমেকং সমাৰুৰোহ|
29 ೨೯ ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬದಲಾಯಿತು. ಆತನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂದಿತು.
২৯অথ তস্য প্ৰাৰ্থনকালে তস্য মুখাকৃতিৰন্যৰূপা জাতা, তদীযং ৱস্ত্ৰমুজ্জ্ৱলশুক্লং জাতং|
30 ೩೦ ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತನಾಡುತ್ತಿದ್ದರು. ಅವರು ಯಾರೆಂದರೆ ಮೋಶೆಯೂ ಎಲೀಯನೂ.
৩০অপৰঞ্চ মূসা এলিযশ্চোভৌ তেজস্ৱিনৌ দৃষ্টৌ
31 ೩೧ ಅವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇಮಿನಲ್ಲಿ ಆತನು ಹೊಂದಬೇಕಾಗಿದ್ದ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.
৩১তৌ তেন যিৰূশালম্পুৰে যো মৃত্যুঃ সাধিষ্যতে তদীযাং কথাং তেন সাৰ্দ্ধং কথযিতুম্ আৰেভাতে|
32 ೩೨ ಇಷ್ಟರಲ್ಲಿ ಪೇತ್ರನಿಗೂ ಅವನ ಸಂಗಡ ಇದ್ದವರಿಗೂ ನಿದ್ರೆಯಿಂದ ಮೈಭಾರವಾಗಿತ್ತು. ಆದರೆ ಎಚ್ಚರವಾದ ಮೇಲೆ ಅವರು ಆತನ ಮಹಿಮೆಯನ್ನೂ ಆತನ ಸಂಗಡ ನಿಂತಿದ್ದ ಆ ಇಬ್ಬರು ಪುರುಷರನ್ನೂ ಕಂಡರು.
৩২তদা পিতৰাদযঃ স্ৱস্য সঙ্গিনো নিদ্ৰযাকৃষ্টা আসন্ কিন্তু জাগৰিৎৱা তস্য তেজস্তেন সাৰ্দ্ধম্ উত্তিষ্ঠন্তৌ জনৌ চ দদৃশুঃ|
33 ೩೩ ಅವರು ಯೇಸುವನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ, “ಗುರುವೇ ನಾವು ಇಲ್ಲೇ ಇರುವುದು ಒಳ್ಳೆಯದು, ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು ಎಲೀಯನಿಗೊಂದು ಹಾಗೂ ಮೋಶೆಗೊಂದು” ಎಂದು ಹೇಳಿದನು. ತಾನು ಏನು ಹೇಳುತ್ತಿದ್ದೇನೆಂದು ತನಗೇ ಗೊತ್ತಾಗಲಿಲ್ಲ.
৩৩অথ তযোৰুভযো ৰ্গমনকালে পিতৰো যীশুং বভাষে, হে গুৰোঽস্মাকং স্থানেঽস্মিন্ স্থিতিঃ শুভা, তত একা ৎৱদৰ্থা, একা মূসাৰ্থা, একা এলিযাৰ্থা, ইতি তিস্ৰঃ কুট্যোস্মাভি ৰ্নিৰ্ম্মীযন্তাং, ইমাং কথাং স ন ৱিৱিচ্য কথযামাস|
34 ೩೪ ಅವನು ಇದನ್ನು ಹೇಳುತ್ತಿರುವಲ್ಲಿ ಮೋಡವು ಬಂದು ಅವರ ಮೇಲೆ ಕವಿಯಿತು. ಮೋಡವು ಅವರನ್ನು ಆವರಿಸಿಕೊಂಡಾಗ ಅವರು ಹೆದರಿದರು.
৩৪অপৰঞ্চ তদ্ৱাক্যৱদনকালে পযোদ এক আগত্য তেষামুপৰি ছাযাং চকাৰ, ততস্তন্মধ্যে তযোঃ প্ৰৱেশাৎ তে শশঙ্কিৰে|
35 ೩೫ ಆಗ ಆ ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಆರಿಸಿಕೊಂಡವನು, ಈತನ ಮಾತನ್ನು ಕೇಳಿರಿ” ಎಂಬ ವಾಣಿ ಆಯಿತು.
৩৫তদা তস্মাৎ পযোদাদ্ ইযমাকাশীযা ৱাণী নিৰ্জগাম, মমাযং প্ৰিযঃ পুত্ৰ এতস্য কথাযাং মনো নিধত্ত|
36 ೩೬ ಆ ವಾಣಿ ಆದ ಮೇಲೆ ಯೇಸುವನ್ನು ಮಾತ್ರ ಕಂಡರು. ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿನಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.
৩৬ইতি শব্দে জাতে তে যীশুমেকাকিনং দদৃশুঃ কিন্তু তে তদানীং তস্য দৰ্শনস্য ৱাচমেকামপি নোক্ত্ৱা মনঃসু স্থাপযামাসুঃ|
37 ೩೭ ಮರುದಿನ ಅವರು ಬೆಟ್ಟದಿಂದ ಇಳಿದು ಬಂದಾಗ ಜನರ ದೊಡ್ಡ ಗುಂಪೊಂದು ಆತನನ್ನು ಎದುರುಗೊಂಡಿತು.
৩৭পৰেঽহনি তেষু তস্মাচ্ছৈলাদ্ অৱৰূঢেষু তং সাক্ষাৎ কৰ্ত্তুং বহৱো লোকা আজগ্মুঃ|
38 ೩೮ ಆಗ ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕನೇ, ನನ್ನ ಮಗನನ್ನು ಕಟಾಕ್ಷಿಸು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು.
৩৮তেষাং মধ্যাদ্ একো জন উচ্চৈৰুৱাচ, হে গুৰো অহং ৱিনযং কৰোমি মম পুত্ৰং প্ৰতি কৃপাদৃষ্টিং কৰোতু, মম স এৱৈকঃ পুত্ৰঃ|
39 ೩೯ ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ. ಅದು ಬಾಯಲ್ಲಿ ನೊರೆ ಬರುವಷ್ಟು ಇವನನ್ನು ಒದ್ದಾಡಿಸುತ್ತದೆ ಮತ್ತು ಬಹು ಕಷ್ಟಕೊಟ್ಟು ತೊಂದರೆಪಡಿಸಿದ ಹೊರತು ಬಿಟ್ಟುಬಿಡುವುದಿಲ್ಲ.
৩৯ভূতেন ধৃতঃ সন্ সং প্ৰসভং চীচ্ছব্দং কৰোতি তন্মুখাৎ ফেণা নিৰ্গচ্ছন্তি চ, ভূত ইত্থং ৱিদাৰ্য্য ক্লিষ্ট্ৱা প্ৰাযশস্তং ন ত্যজতি|
40 ೪೦ ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಬೇಡಿಕೊಂಡೆನು. ಆದರೆ ಅವರಿಂದ ಆಗದೆಹೋಯಿತು” ಎಂದು ಹೇಳಿದನು.
৪০তস্মাৎ তং ভূতং ত্যাজযিতুং তৱ শিষ্যসমীপে ন্যৱেদযং কিন্তু তে ন শেকুঃ|
41 ೪೧ ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿದನು. ಮತ್ತು ಆ ಮನುಷ್ಯನಿಗೆ “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.
৪১তদা যীশুৰৱাদীৎ, ৰে আৱিশ্ৱাসিন্ ৱিপথগামিন্ ৱংশ কতিকালান্ যুষ্মাভিঃ সহ স্থাস্যাম্যহং যুষ্মাকম্ আচৰণানি চ সহিষ্যে? তৱ পুত্ৰমিহানয|
42 ೪೨ ಆ ಹುಡುಗನು ಇನ್ನೂ ಬರುತ್ತಿರುವಾಗಲೇ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ ಆ ಹುಡುಗನಿಗೆ ವಾಸಿಮಾಡಿ ಅವನ ತಂದೆಗೆ ಒಪ್ಪಿಸಿದನು.
৪২ততস্তস্মিন্নাগতমাত্ৰে ভূতস্তং ভূমৌ পাতযিৎৱা ৱিদদাৰ; তদা যীশুস্তমমেধ্যং ভূতং তৰ্জযিৎৱা বালকং স্ৱস্থং কৃৎৱা তস্য পিতৰি সমৰ্পযামাস|
43 ೪೩ ಅದನ್ನು ನೋಡಿ ಎಲ್ಲರು ದೇವರ ಮಹತ್ಕಾರ್ಯಕ್ಕೆ ಬೆರಗಾದರು. ಯೇಸುಮಾಡಿದ ಎಲ್ಲಾ ಮಹತ್ಕಾರ್ಯಗಳಿಗೆ ಎಲ್ಲರೂ ಆಶ್ಚರ್ಯಪಡುತ್ತಿರಲಾಗಿ, ಆತನು ತನ್ನ ಶಿಷ್ಯರಿಗೆ,
৪৩ঈশ্ৱৰস্য মহাশক্তিম্ ইমাং ৱিলোক্য সৰ্ৱ্ৱে চমচ্চক্ৰুঃ; ইত্থং যীশোঃ সৰ্ৱ্ৱাভিঃ ক্ৰিযাভিঃ সৰ্ৱ্ৱৈৰ্লোকৈৰাশ্চৰ্য্যে মন্যমানে সতি স শিষ্যান্ বভাষে,
44 ೪೪ “ನೀವಂತೂ ಈ ಮಾತುಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ, ಏಕೆಂದರೆ ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಲ್ಪಡುವನು” ಎಂದು ಹೇಳಿದನು.
৪৪কথেযং যুষ্মাকং কৰ্ণেষু প্ৰৱিশতু, মনুষ্যপুত্ৰো মনুষ্যাণাং কৰেষু সমৰ্পযিষ্যতে|
45 ೪೫ ಅವರು ಈ ಮಾತನ್ನು ಗ್ರಹಿಸಲಿಲ್ಲ. ಅದು ಅವರಿಗೆ ಮರೆಯಾಗಿದ್ದುದರಿಂದ ಅದರ ಅರ್ಥವನ್ನು ಅವರು ತಿಳಿಯದೆ ಹೋದರು. ಆ ಮಾತಿನ ವಿಷಯದಲ್ಲಿ ಅವರು ಆತನನ್ನು ಕೇಳುವುದಕ್ಕೆ ಅಂಜಿದರು.
৪৫কিন্তু তে তাং কথাং ন বুবুধিৰে, স্পষ্টৎৱাভাৱাৎ তস্যা অভিপ্ৰাযস্তেষাং বোধগম্যো ন বভূৱ; তস্যা আশযঃ ক ইত্যপি তে ভযাৎ প্ৰষ্টুং ন শেকুঃ|
46 ೪೬ ತರುವಾಯ ಶಿಷ್ಯರೊಳಗೆ, ತಮ್ಮಲ್ಲಿ ಯಾವನು ಹೆಚ್ಚಿನವನು ಎಂಬ ವಿಚಾರಹುಟ್ಟಿತು.
৪৬তদনন্তৰং তেষাং মধ্যে কঃ শ্ৰেষ্ঠঃ কথামেতাং গৃহীৎৱা তে মিথো ৱিৱাদং চক্ৰুঃ|
47 ೪೭ ಯೇಸು ಅವರ ಮನಸ್ಸಿನ ವಿಚಾರವನ್ನು ತಿಳಿದವನಾಗಿ, ಒಂದು ಚಿಕ್ಕಮಗುವನ್ನು ತನ್ನ ಪಕ್ಕದಲ್ಲಿ ನಿಲ್ಲಿಸಿ,
৪৭ততো যীশুস্তেষাং মনোভিপ্ৰাযং ৱিদিৎৱা বালকমেকং গৃহীৎৱা স্ৱস্য নিকটে স্থাপযিৎৱা তান্ জগাদ,
48 ೪೮ ಅವರಿಗೆ, “ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು, ಏಕೆಂದರೆ ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು” ಎಂದು ಹೇಳಿದನು.
৪৮যো জনো মম নাম্নাস্য বালাস্যাতিথ্যং ৱিদধাতি স মমাতিথ্যং ৱিদধাতি, যশ্চ মমাতিথ্যং ৱিদধাতি স মম প্ৰেৰকস্যাতিথ্যং ৱিদধাতি, যুষ্মাকং মধ্যেযঃ স্ৱং সৰ্ৱ্ৱস্মাৎ ক্ষুদ্ৰং জানীতে স এৱ শ্ৰেষ্ঠো ভৱিষ্যতি|
49 ೪೯ ಅದಕ್ಕೆ ಯೋಹಾನನು, “ಗುರುವೇ, ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವಬಿಡಿಸುವುದನ್ನು ನಾವು ಕಂಡು ಅವನು ನಮಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು” ಅನ್ನಲು,
৪৯অপৰঞ্চ যোহন্ ৱ্যাজহাৰ হে প্ৰভে তৱ নাম্না ভূতান্ ত্যাজযন্তং মানুষম্ একং দৃষ্টৱন্তো ৱযং, কিন্ত্ৱস্মাকম্ অপশ্চাদ্ গামিৎৱাৎ তং ন্যষেধাম্| তদানীং যীশুৰুৱাচ,
50 ೫೦ ಯೇಸು ಅವನಿಗೆ, “ಅಡ್ಡಿಮಾಡಬೇಡಿರಿ; ನಿಮಗೆ ವಿರುದ್ಧವಲ್ಲದವನು ನಿಮ್ಮ ಪಕ್ಷದವನೇ” ಎಂದು ಹೇಳಿದನು.
৫০তং মা নিষেধত, যতো যো জনোস্মাকং ন ৱিপক্ষঃ স এৱাস্মাকং সপক্ষো ভৱতি|
51 ೫೧ ಯೇಸು ತಾನು ಪರಲೋಕಕ್ಕೆ ಏರಿಹೋಗುವ ದಿನಗಳು ಸಮೀಪಿಸುತ್ತಿರುವಾಗ ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸನ್ನು ದೃಢಮಾಡಿಕೊಂಡನು.
৫১অনন্তৰং তস্যাৰোহণসময উপস্থিতে স স্থিৰচেতা যিৰূশালমং প্ৰতি যাত্ৰাং কৰ্ত্তুং নিশ্চিত্যাগ্ৰে দূতান্ প্ৰেষযামাস|
52 ೫೨ ತನ್ನ ಮುಂದಾಗಿ ದೂತರನ್ನು ಕಳುಹಿಸಿದನು. ಇವರು ಹೊರಟು ಆತನಿಗೆ ಬೇಕಾದದ್ದನ್ನು ಸಿದ್ಧಮಾಡುವುದಕ್ಕಾಗಿ ಸಮಾರ್ಯದವರ ಒಂದು ಹಳ್ಳಿಗೆ ಬಂದರು.
৫২তস্মাৎ তে গৎৱা তস্য প্ৰযোজনীযদ্ৰৱ্যাণি সংগ্ৰহীতুং শোমিৰোণীযানাং গ্ৰামং প্ৰৱিৱিশুঃ|
53 ೫೩ ಆದರೆ ಯೇಸು ಯೆರೂಸಲೇಮಿಗೆ ಹೋಗುವವನಾದ್ದರಿಂದ, ಆ ಸಮಾರ್ಯದವರು ಆತನನ್ನು ಸೇರಿಸಿಕೊಳ್ಳಲಿಲ್ಲ.
৫৩কিন্তু স যিৰূশালমং নগৰং যাতি ততো হেতো ৰ্লোকাস্তস্যাতিথ্যং ন চক্ৰুঃ|
54 ೫೪ ಆತನ ಶಿಷ್ಯರಾದ ಯಾಕೋಬ, ಯೋಹಾನರು ಇದನ್ನು ಕಂಡು, “ಕರ್ತನೇ, ಆಕಾಶದಿಂದ ಬೆಂಕಿಬಿದ್ದು ಇವರನ್ನು ನಾಶ ಮಾಡಲಿ ಎಂದು ನಾವು ಆಜ್ಞಾಪಿಸುವುದಕ್ಕೆ ನಿನಗೆ ಮನಸ್ಸುಂಟೋ?” ಎಂದು ಕೇಳಲು,
৫৪অতএৱ যাকূব্যোহনৌ তস্য শিষ্যৌ তদ্ দৃষ্ট্ৱা জগদতুঃ, হে প্ৰভো এলিযো যথা চকাৰ তথা ৱযমপি কিং গগণাদ্ আগন্তুম্ এতান্ ভস্মীকৰ্ত্তুঞ্চ ৱহ্নিমাজ্ঞাপযামঃ? ভৱান্ কিমিচ্ছতি?
55 ೫೫ ಯೇಸು ತಿರುಗಿಕೊಂಡು ಅವರನ್ನು ಗದರಿಸಿದನು.
৫৫কিন্তু স মুখং পৰাৱৰ্ত্য তান্ তৰ্জযিৎৱা গদিতৱান্ যুষ্মাকং মনোভাৱঃ কঃ, ইতি যূযং ন জানীথ|
56 ೫೬ ಆಗ ಅವರೆಲ್ಲರೂ ಹೊರಟು ಬೇರೆ ಹಳ್ಳಿಗೆ ಹೋದರು.
৫৬মনুজসুতো মনুজানাং প্ৰাণান্ নাশযিতুং নাগচ্ছৎ, কিন্তু ৰক্ষিতুম্ আগচ্ছৎ| পশ্চাদ্ ইতৰগ্ৰামং তে যযুঃ|
57 ೫೭ ಅವರು ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬನು ಯೇಸುವಿಗೆ, “ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಲು,
৫৭তদনন্তৰং পথি গমনকালে জন একস্তং বভাষে, হে প্ৰভো ভৱান্ যত্ৰ যাতি ভৱতা সহাহমপি তত্ৰ যাস্যামি|
58 ೫೮ ಆತನು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು.
৫৮তদানীং যীশুস্তমুৱাচ, গোমাযূনাং গৰ্ত্তা আসতে, ৱিহাযসীযৱিহগানাং নীডানি চ সন্তি, কিন্তু মানৱতনযস্য শিৰঃ স্থাপযিতুং স্থানং নাস্তি|
59 ೫೯ ಯೇಸು ಮತ್ತೊಬ್ಬನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಲು ಅವನು, “ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅಂದನು.
৫৯ততঃ পৰং স ইতৰজনং জগাদ, ৎৱং মম পশ্চাদ্ এহি; ততঃ স উৱাচ, হে প্ৰভো পূৰ্ৱ্ৱং পিতৰং শ্মশানে স্থাপযিতুং মামাদিশতু|
60 ೬೦ ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು” ಎಂದು ಹೇಳಿದನು.
৬০তদা যীশুৰুৱাচ, মৃতা মৃতান্ শ্মশানে স্থাপযন্তু কিন্তু ৎৱং গৎৱেশ্ৱৰীযৰাজ্যস্য কথাং প্ৰচাৰয|
61 ೬೧ ಇನ್ನೊಬ್ಬನು ಸಹ, “ಕರ್ತನೇ, ನಾನು ನಿನ್ನನ್ನು ಹಿಂಬಾಲಿಸುತ್ತೇನೆ, ಆದರೆ ಮೊದಲು ನನ್ನ ಮನೆಯವರಿಗೆ ಬೀಳ್ಕೊಟ್ಟು ಬರುವುದಕ್ಕೆ ನನಗೆ ಅಪ್ಪಣೆಯಾಗಬೇಕು” ಅಂದನು.
৬১ততোন্যঃ কথযামাস, হে প্ৰভো মযাপি ভৱতঃ পশ্চাদ্ গংস্যতে, কিন্তু পূৰ্ৱ্ৱং মম নিৱেশনস্য পৰিজনানাম্ অনুমতিং গ্ৰহীতুম্ অহমাদিশ্যৈ ভৱতা|
62 ೬೨ ಯೇಸು ಅವನಿಗೆ, “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಎಂದು ಹೇಳಿದನು.
৬২তদানীং যীশুস্তং প্ৰোক্তৱান্, যো জনো লাঙ্গলে কৰমৰ্পযিৎৱা পশ্চাৎ পশ্যতি স ঈশ্ৱৰীযৰাজ্যং নাৰ্হতি|

< ಲೂಕನು 9 >