< ಲೂಕನು 3 >
1 ೧ ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ
అనన్తరం తిబిరియకైసరస్య రాజత్వస్య పఞ్చదశే వత్సరే సతి యదా పన్తీయపీలాతో యిహూదాదేశాధిపతి ర్హేరోద్ తు గాలీల్ప్రదేశస్య రాజా ఫిలిపనామా తస్య భ్రాతా తు యితూరియాయాస్త్రాఖోనీతియాప్రదేశస్య చ రాజాసీత్ లుషానీయనామా అవిలీనీదేశస్య రాజాసీత్
2 ೨ ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು.
హానన్ కియఫాశ్చేమౌ ప్రధానయాజాకావాస్తాం తదానీం సిఖరియస్య పుత్రాయ యోహనే మధ్యేప్రాన్తరమ్ ఈశ్వరస్య వాక్యే ప్రకాశితే సతి
3 ೩ ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು.
స యర్ద్దన ఉభయతటప్రదేశాన్ సమేత్య పాపమోచనార్థం మనఃపరావర్త్తనస్య చిహ్నరూపం యన్మజ్జనం తదీయాః కథాః సర్వ్వత్ర ప్రచారయితుమారేభే|
4 ೪ ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ, “‘ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವುದು, ಡೊಂಕಾಗಿರುವಂಥದು ನೆಟ್ಟಗಾಗುವುದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದಾಗುವ ರಕ್ಷಣೆಯನ್ನು ಕಾಣುವರು’ ಎಂಬುದಾಗಿ ಮರುಭೂಮಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.
యిశయియభవిష్యద్వక్తృగ్రన్థే యాదృశీ లిపిరాస్తే యథా, పరమేశస్య పన్థానం పరిష్కురుత సర్వ్వతః| తస్య రాజపథఞ్చైవ సమానం కురుతాధునా|
కారిష్యన్తే సముచ్ఛ్రాయాః సకలా నిమ్నభూమయః| కారిష్యన్తే నతాః సర్వ్వే పర్వ్వతాశ్చోపపర్వ్వతాః| కారిష్యన్తే చ యా వక్రాస్తాః సర్వ్వాః సరలా భువః| కారిష్యన్తే సమానాస్తా యా ఉచ్చనీచభూమయః|
ఈశ్వరేణ కృతం త్రాణం ద్రక్ష్యన్తి సర్వ్వమానవాః| ఇత్యేతత్ ప్రాన్తరే వాక్యం వదతః కస్యచిద్ రవః||
7 ೭ ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು?
యే యే లోకా మజ్జనార్థం బహిరాయయుస్తాన్ సోవదత్ రే రే సర్పవంశా ఆగామినః కోపాత్ పలాయితుం యుష్మాన్ కశ్చేతయామాస?
8 ೮ ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ.
తస్మాద్ ఇబ్రాహీమ్ అస్మాకం పితా కథామీదృశీం మనోభి ర్న కథయిత్వా యూయం మనఃపరివర్త్తనయోగ్యం ఫలం ఫలత; యుష్మానహం యథార్థం వదామి పాషాణేభ్య ఏతేభ్య ఈశ్వర ఇబ్రాహీమః సన్తానోత్పాదనే సమర్థః|
9 ೯ ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು.
అపరఞ్చ తరుమూలేఽధునాపి పరశుః సంలగ్నోస్తి యస్తరురుత్తమం ఫలం న ఫలతి స ఛిద్యతేఽగ్నౌ నిక్షిప్యతే చ|
10 ೧೦ ಆಗ ಆ ಗುಂಪಿನವರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಆತನನ್ನು ಕೇಳಿದ್ದಕ್ಕೆ,
తదానీం లోకాస్తం పప్రచ్ఛుస్తర్హి కిం కర్త్తవ్యమస్మాభిః?
11 ೧೧ ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು.
తతః సోవాదీత్ యస్య ద్వే వసనే విద్యేతే స వస్త్రహీనాయైకం వితరతు కింఞ్చ యస్య ఖాద్యద్రవ్యం విద్యతే సోపి తథైవ కరోతు|
12 ೧೨ ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು,
తతః పరం కరసఞ్చాయినో మజ్జనార్థమ్ ఆగత్య పప్రచ్ఛుః హే గురో కిం కర్త్తవ్యమస్మాభిః?
13 ೧೩ ಆತನು, “ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ” ಎಂದು ಅವರಿಗೆ ಹೇಳಿದನು.
తతః సోకథయత్ నిరూపితాదధికం న గృహ్లిత|
14 ೧೪ ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು.
అనన్తరం సేనాగణ ఏత్య పప్రచ్ఛ కిమస్మాభి ర్వా కర్త్తవ్యమ్? తతః సోభిదధే కస్య కామపి హానిం మా కార్ష్ట తథా మృషాపవాదం మా కురుత నిజవేతనేన చ సన్తుష్య తిష్ఠత|
15 ೧೫ ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರು ನೋಡುವವರಾಗಿದ್ದದರಿಂದ ಅವರೆಲ್ಲರೂ ಯೋಹಾನನ ವಿಷಯವಾಗಿ ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು,
అపరఞ్చ లోకా అపేక్షయా స్థిత్వా సర్వ్వేపీతి మనోభి ర్వితర్కయాఞ్చక్రుః, యోహనయమ్ అభిషిక్తస్త్రాతా న వేతి?
16 ೧೬ ಯೋಹಾನನು ಅವರೆಲ್ಲರಿಗೆ, “ನಾನಂತೂ ನಿಮಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು.
తదా యోహన్ సర్వ్వాన్ వ్యాజహార, జలేఽహం యుష్మాన్ మజ్జయామి సత్యం కిన్తు యస్య పాదుకాబన్ధనం మోచయితుమపి న యోగ్యోస్మి తాదృశ ఏకో మత్తో గురుతరః పుమాన్ ఏతి, స యుష్మాన్ వహ్నిరూపే పవిత్ర ఆత్మని మజ్జయిష్యతి|
17 ೧೭ ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ. ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು. ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು.
అపరఞ్చ తస్య హస్తే శూర్ప ఆస్తే స స్వశస్యాని శుద్ధరూపం ప్రస్ఫోట్య గోధూమాన్ సర్వ్వాన్ భాణ్డాగారే సంగ్రహీష్యతి కిన్తు బూషాణి సర్వ్వాణ్యనిర్వ్వాణవహ్నినా దాహయిష్యతి|
18 ೧೮ ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು.
యోహన్ ఉపదేశేనేత్థం నానాకథా లోకానాం సమక్షం ప్రచారయామాస|
19 ೧೯ ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿಯೂ, ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ನಿಮಿತ್ತವಾಗಿಯೂ ಯೋಹಾನನಿಂದ ಗದರಿಸಲ್ಪಟ್ಟಿದರಿಂದ,
అపరఞ్చ హేరోద్ రాజా ఫిలిప్నామ్నః సహోదరస్య భార్య్యాం హేరోదియామధి తథాన్యాని యాని యాని కుకర్మ్మాణి కృతవాన్ తదధి చ
20 ೨೦ ಆತನನ್ನು ಸೆರೆಮನೆಯಲ್ಲಿ ಹಾಕಿಸಿ ತನ್ನ ದುಷ್ಕೃತ್ಯಗಳ ಪಟ್ಟಿಯನ್ನು ಇನ್ನೂ ಹೆಚ್ಚಿಸಿಕೊಂಡನು.
యోహనా తిరస్కృతో భూత్వా కారాగారే తస్య బన్ధనాద్ అపరమపి కుకర్మ్మ చకార|
21 ೨೧ ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಾಗ ಆಕಾಶವು ತೆರೆಯಲ್ಪಟ್ಟಿತು
ఇతః పూర్వ్వం యస్మిన్ సమయే సర్వ్వే యోహనా మజ్జితాస్తదానీం యీశురప్యాగత్య మజ్జితః|
22 ೨೨ ಮತ್ತು ಪವಿತ್ರಾತ್ಮನು ದೇಹಾಕಾರನಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ, “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಪರಲೋಕದಿಂದ ಬಂದಿತು.
తదనన్తరం తేన ప్రార్థితే మేఘద్వారం ముక్తం తస్మాచ్చ పవిత్ర ఆత్మా మూర్త్తిమాన్ భూత్వా కపోతవత్ తదుపర్య్యవరురోహ; తదా త్వం మమ ప్రియః పుత్రస్త్వయి మమ పరమః సన్తోష ఇత్యాకాశవాణీ బభూవ|
23 ೨೩ ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು ಹೇಲಿಯನ ಮಗನು;
తదానీం యీశుః ప్రాయేణ త్రింశద్వర్షవయస్క ఆసీత్| లౌకికజ్ఞానే తు స యూషఫః పుత్రః,
24 ೨೪ ಹೇಲಿಯನು ಮತ್ಥಾತನ ಮಗನು; ಮತ್ಥಾತನನು ಲೇವಿಯ ಮಗನು; ಲೇವಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಯನ್ನಾಯನ ಮಗನು;
యూషఫ్ ఏలేః పుత్రః, ఏలిర్మత్తతః పుత్రః, మత్తత్ లేవేః పుత్రః, లేవి ర్మల్కేః పుత్రః, మల్కిర్యాన్నస్య పుత్రః; యాన్నో యూషఫః పుత్రః|
25 ೨೫ ಯನ್ನಾಯನು ಯೋಸೇಫನ ಮಗನು; ಯೋಸೇಫನು ಮತ್ತಥೀಯನ ಮಗನು; ಮತ್ತಥೀಯನು ಆಮೋಸನ ಮಗನು; ಆಮೋಸನು ನಹೂಮನ ಮಗನು; ನಹೂಮನು ಎಸ್ಲಿಯ ಮಗನು; ಎಸ್ಲಿಯನು ನಗ್ಗಾಯನ ಮಗನು; ನಗ್ಗಾಯನು ಮಹಾಥನ ಮಗನು;
యూషఫ్ మత్తథియస్య పుత్రః, మత్తథియ ఆమోసః పుత్రః, ఆమోస్ నహూమః పుత్రః, నహూమ్ ఇష్లేః పుత్రః ఇష్లిర్నగేః పుత్రః|
26 ೨೬ ಮಹಾಥನು ಮತ್ತಥೀಯನ ಮಗನು; ಮತ್ತಥೀಯನು ಶಿಮೀಯನ ಮಗನು; ಶಿಮೀಯನು ಯೋಸೇಖನ ಮಗನು; ಯೋಸೇಖನು ಯೂದನ ಮಗನು; ಯೂದನು ಯೋಹಾನನ ಮಗನು;
నగిర్మాటః పుత్రః, మాట్ మత్తథియస్య పుత్రః, మత్తథియః శిమియేః పుత్రః, శిమియిర్యూషఫః పుత్రః, యూషఫ్ యిహూదాః పుత్రః|
27 ೨೭ ಯೋಹಾನನು ರೇಸನ ಮಗನು; ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಸಲಥಿಯೇಲನ ಮಗನು; ಸಲಥಿಯೇಲನು ನೇರಿಯನ ಮಗನು;
యిహూదా యోహానాః పుత్రః, యోహానా రీషాః పుత్రః, రీషాః సిరుబ్బాబిలః పుత్రః, సిరుబ్బాబిల్ శల్తీయేలః పుత్రః, శల్తీయేల్ నేరేః పుత్రః|
28 ೨೮ ನೇರಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಅದ್ದಿಯನ ಮಗನು; ಅದ್ದಿಯನು ಕೋಸಾಮನ ಮಗನು; ಕೋಸಾಮನು ಎಲ್ಮದಾಮನ ಮಗನು; ಎಲ್ಮದಾಮನು ಏರನ ಮಗನು;
నేరిర్మల్కేః పుత్రః, మల్కిః అద్యః పుత్రః, అద్దీ కోషమః పుత్రః, కోషమ్ ఇల్మోదదః పుత్రః, ఇల్మోదద్ ఏరః పుత్రః|
29 ೨೯ ಏರನು ಯೆಹೋಷುವನ ಮಗನು; ಯೆಹೋಷುವನು ಎಲಿಯೇಜರನ ಮಗನು; ಎಲಿಯೇಜರನು ಯೋರೈಮನ ಮಗನು; ಯೋರೈಮನು ಮತ್ಥಾತನ ಮಗನು; ಮತ್ಥಾತನು ಲೇವಿಯನ ಮಗನು;
ఏర్ యోశేః పుత్రః, యోశిః ఇలీయేషరః పుత్రః, ఇలీయేషర్ యోరీమః పుత్రః, యోరీమ్ మత్తతః పుత్రః, మత్తత లేవేః పుత్రః|
30 ೩೦ ಲೇವಿಯನು ಸಿಮಿಯೋನನ ಮಗನು; ಸಿಮಿಯೋನನು ಯೂದನ ಮಗನು; ಯೂದನು ಯೋಸೇಫನ ಮಗನು; ಯೋಸೇಫನು ಯೋನಾಮನ ಮಗನು; ಯೋನಾಮನು ಎಲಿಯಕೀಮನ ಮಗನು;
లేవిః శిమియోనః పుత్రః, శిమియోన్ యిహూదాః పుత్రః, యిహూదా యూషుఫః పుత్రః, యూషుఫ్ యోననః పుత్రః, యానన్ ఇలీయాకీమః పుత్రః|
31 ೩೧ ಎಲಿಯಕೀಮನು ಮೆಲೆಯಾನ ಮಗನು; ಮೆಲೆಯಾನು ಮೆನ್ನನ ಮಗನು; ಮೆನ್ನನು ಮತ್ತಾಥನ ಮಗನು; ಮತ್ತಾಥನು ನಾಥಾನನ ಮಗನು; ನಾಥಾನನು ದಾವೀದನ ಮಗನು;
ఇలియాకీమ్ః మిలేయాః పుత్రః, మిలేయా మైననః పుత్రః, మైనన్ మత్తత్తస్య పుత్రః, మత్తత్తో నాథనః పుత్రః, నాథన్ దాయూదః పుత్రః|
32 ೩೨ ದಾವೀದನು ಇಷಯನ ಮಗನು; ಇಷಯನು ಓಬೇದನ ಮಗನು; ಓಬೇದನು ಬೋವಜನ ಮಗನು; ಬೋವಜನು ಸಲ್ಮೋನನ ಮಗನು; ಸಲ್ಮೋನನು ನಹಶೋನನ ಮಗನು;
దాయూద్ యిశయః పుత్రః, యిశయ ఓబేదః పుత్ర, ఓబేద్ బోయసః పుత్రః, బోయస్ సల్మోనః పుత్రః, సల్మోన్ నహశోనః పుత్రః|
33 ೩೩ ನಹಶೋನನು ಅಮ್ಮಿನಾದಾಬನ ಮಗನು; ಅಮ್ಮಿನಾದಾಬನು ಅದ್ಮಿನನ ಮಗನು; ಅದ್ಮಿನನು ಆರ್ನೈಯನ ಮಗನು; ಆರ್ನೈಯನು ಎಸ್ರೋನನ ಮಗನು; ಎಸ್ರೋನನು ಪೆರೆಚನ ಮಗನು;
నహశోన్ అమ్మీనాదబః పుత్రః, అమ్మీనాదబ్ అరామః పుత్రః, అరామ్ హిష్రోణః పుత్రః, హిష్రోణ్ పేరసః పుత్రః, పేరస్ యిహూదాః పుత్రః|
34 ೩೪ ಪೆರೆಚನು ಯೂದನ ಮಗನು; ಯೂದನು ಯಾಕೋಬನ ಮಗನು; ಯಾಕೋಬನು ಇಸಾಕನ ಮಗನು; ಇಸಾಕನು ಅಬ್ರಹಾಮನ ಮಗನು; ಅಬ್ರಹಾಮನು ತೇರನ ಮಗನು; ತೇರನು ನಾಹೋರನ ಮಗನು;
యిహూదా యాకూబః పుత్రః, యాకూబ్ ఇస్హాకః పుత్రః, ఇస్హాక్ ఇబ్రాహీమః పుత్రః, ఇబ్రాహీమ్ తేరహః పుత్రః, తేరహ్ నాహోరః పుత్రః|
35 ೩೫ ನಾಹೋರನು ಸೆರೂಗನ ಮಗನು; ಸೆರೂಗನು ರೆಗೂವನ ಮಗನು; ರೆಗೂವನು ಪೆಲೆಗನ ಮಗನು; ಪೆಲೆಗನು ಹೇಬೆರನ ಮಗನು; ಹೇಬೆರನು ಸಾಲನ ಮಗನು;
నాహోర్ సిరుగః పుత్రః, సిరుగ్ రియ్వః పుత్రః, రియూః పేలగః పుత్రః, పేలగ్ ఏవరః పుత్రః, ఏవర్ శేలహః పుత్రః|
36 ೩೬ ಸಾಲನು ಕಯಿನಾನನ ಮಗನು; ಕಯಿನಾನನು ಅರ್ಫಕ್ಷಾದನ ಮಗನು; ಅರ್ಫಕ್ಷಾದನು ಶೇಮನ ಮಗನು; ಶೇಮನು ನೋಹನ ಮಗನು; ನೋಹನು ಲಾಮೆಕನ ಮಗನು;
శేలహ్ కైననః పుత్రః, కైనన్ అర్ఫక్షదః పుత్రః, అర్ఫక్షద్ శామః పుత్రః, శామ్ నోహః పుత్రః, నోహో లేమకః పుత్రః|
37 ೩೭ ಲಾಮೆಕನು ಮೆತೂಷಲನ ಮಗನು; ಮೆತೂಷಲನು ಹನೋಕನ ಮಗನು; ಹನೋಕನು ಯೆರೆದನ ಮಗನು; ಯೆರೆದನು ಮಹಲಲೇಲನ ಮಗನು; ಮಹಲಲೇಲನು ಕಯಿನಾನನ ಮಗನು;
లేమక్ మిథూశేలహః పుత్రః, మిథూశేలహ్ హనోకః పుత్రః, హనోక్ యేరదః పుత్రః, యేరద్ మహలలేలః పుత్రః, మహలలేల్ కైననః పుత్రః|
38 ೩೮ ಕಯಿನಾನನು ಎನೋಷನ ಮಗನು; ಎನೋಷನು ಸೇಥನ ಮಗನು; ಸೇಥನು ಆದಾಮನ ಮಗನು ಆದಾಮನು ದೇವರ ಮಗನು.
కైనన్ ఇనోశః పుత్రః, ఇనోశ్ శేతః పుత్రః, శేత్ ఆదమః పుత్ర, ఆదమ్ ఈశ్వరస్య పుత్రః|