< ಲೂಕನು 20 >
1 ೧ ಆ ದಿನಗಳಲ್ಲಿ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮುಖ್ಯಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಸಿಕೊಂಡು ಫಕ್ಕನೆ ಬಂದು,
ಅಥೈಕದಾ ಯೀಶು ರ್ಮನಿದರೇ ಸುಸಂವಾದಂ ಪ್ರಚಾರಯನ್ ಲೋಕಾನುಪದಿಶತಿ, ಏತರ್ಹಿ ಪ್ರಧಾನಯಾಜಕಾ ಅಧ್ಯಾಪಕಾಃ ಪ್ರಾಞ್ಚಶ್ಚ ತನ್ನಿಕಟಮಾಗತ್ಯ ಪಪ್ರಚ್ಛುಃ
2 ೨ “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ಹೇಳು” ಎಂದು ಆತನನ್ನು ಕೇಳಲು,
ಕಯಾಜ್ಞಯಾ ತ್ವಂ ಕರ್ಮ್ಮಾಣ್ಯೇತಾನಿ ಕರೋಷಿ? ಕೋ ವಾ ತ್ವಾಮಾಜ್ಞಾಪಯತ್? ತದಸ್ಮಾನ್ ವದ|
3 ೩ ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ನನಗೆ ಹೇಳಿರಿ.
ಸ ಪ್ರತ್ಯುವಾಚ, ತರ್ಹಿ ಯುಷ್ಮಾನಪಿ ಕಥಾಮೇಕಾಂ ಪೃಚ್ಛಾಮಿ ತಸ್ಯೋತ್ತರಂ ವದತ|
4 ೪ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಎಂದು ಅವರನ್ನು ಕೇಳಿದನು.
ಯೋಹನೋ ಮಜ್ಜನಮ್ ಈಶ್ವರಸ್ಯ ಮಾನುಷಾಣಾಂ ವಾಜ್ಞಾತೋ ಜಾತಂ?
5 ೫ ಆಗ ಅವರು, “‘ಪರಲೋಕದಿಂದ ಬಂದಿತೆಂದು ನಾವು ಹೇಳಿದರೆ ಮತ್ತೆ ನೀವು ಅವನನ್ನು ಯಾಕೆ ನಂಬಲಿಲ್ಲ ಅಂದಾನು,
ತತಸ್ತೇ ಮಿಥೋ ವಿವಿಚ್ಯ ಜಗದುಃ, ಯದೀಶ್ವರಸ್ಯ ವದಾಮಸ್ತರ್ಹಿ ತಂ ಕುತೋ ನ ಪ್ರತ್ಯೈತ ಸ ಇತಿ ವಕ್ಷ್ಯತಿ|
6 ೬ ಮನುಷ್ಯರಿಂದ ಬಂದಿತೆಂದು ಹೇಳಿದರೆ ಜನರೆಲ್ಲರೂ ಯೋಹಾನನನ್ನು ಪ್ರವಾದಿಯೆಂದು ನಂಬಿರುವುದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಂದಾರು’” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡು,
ಯದಿ ಮನುಷ್ಯಸ್ಯೇತಿ ವದಾಮಸ್ತರ್ಹಿ ಸರ್ವ್ವೇ ಲೋಕಾ ಅಸ್ಮಾನ್ ಪಾಷಾಣೈ ರ್ಹನಿಷ್ಯನ್ತಿ ಯತೋ ಯೋಹನ್ ಭವಿಷ್ಯದ್ವಾದೀತಿ ಸರ್ವ್ವೇ ದೃಢಂ ಜಾನನ್ತಿ|
7 ೭ ಅದು ಎಲ್ಲಿಂದ ಬಂದಿತೋ ನಾವರಿಯೆವು ಎಂದು ಉತ್ತರಕೊಟ್ಟರು.
ಅತಏವ ತೇ ಪ್ರತ್ಯೂಚುಃ ಕಸ್ಯಾಜ್ಞಯಾ ಜಾತಮ್ ಇತಿ ವಕ್ತುಂ ನ ಶಕ್ನುಮಃ|
8 ೮ ಆಗ ಯೇಸು ಅವರಿಗೆ, “ಇದನ್ನೆಲ್ಲಾ ಯಾವ ಅಧಿಕಾರದಿಂದ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವುದಿಲ್ಲ” ಎಂದು ಹೇಳಿದನು.
ತದಾ ಯೀಶುರವದತ್ ತರ್ಹಿ ಕಯಾಜ್ಞಯಾ ಕರ್ಮ್ಮಾಣ್ಯೇತಾತಿ ಕರೋಮೀತಿ ಚ ಯುಷ್ಮಾನ್ ನ ವಕ್ಷ್ಯಾಮಿ|
9 ೯ ಆಗ ಆತನು ಜನರಿಗೆ ಒಂದು ಸಾಮ್ಯವನ್ನು ಹೇಳುವುದಕ್ಕೆ ತೊಡಗಿದನು. ಅದೇನೆಂದರೆ, “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ, ಆದನ್ನು ಒಕ್ಕಲಿಗರಿಗೆ ಗುತ್ತಿಗೆಗೆ ಕೊಟ್ಟು, ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು.
ಅಥ ಲೋಕಾನಾಂ ಸಾಕ್ಷಾತ್ ಸ ಇಮಾಂ ದೃಷ್ಟಾನ್ತಕಥಾಂ ವಕ್ತುಮಾರೇಭೇ, ಕಶ್ಚಿದ್ ದ್ರಾಕ್ಷಾಕ್ಷೇತ್ರಂ ಕೃತ್ವಾ ತತ್ ಕ್ಷೇತ್ರಂ ಕೃಷೀವಲಾನಾಂ ಹಸ್ತೇಷು ಸಮರ್ಪ್ಯ ಬಹುಕಾಲಾರ್ಥಂ ದೂರದೇಶಂ ಜಗಾಮ|
10 ೧೦ ಫಲಕಾಲ ಬಂದಾಗ ದ್ರಾಕ್ಷಿಯ ತೋಟದ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಆಳನ್ನು ಒಕ್ಕಲಿಗರ ಬಳಿಗೆ ಕಳುಹಿಸಿದನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು.
ಅಥ ಫಲಕಾಲೇ ಫಲಾನಿ ಗ್ರಹೀತು ಕೃಷೀವಲಾನಾಂ ಸಮೀಪೇ ದಾಸಂ ಪ್ರಾಹಿಣೋತ್ ಕಿನ್ತು ಕೃಷೀವಲಾಸ್ತಂ ಪ್ರಹೃತ್ಯ ರಿಕ್ತಹಸ್ತಂ ವಿಸಸರ್ಜುಃ|
11 ೧೧ ಆ ಧಣಿಯು ಬೇರೊಬ್ಬ ಆಳನ್ನು ಕಳುಹಿಸಲಾಗಿ ಅವರು ಅವನನ್ನೂ ಹೊಡೆದು ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.
ತತಃ ಸೋಧಿಪತಿಃ ಪುನರನ್ಯಂ ದಾಸಂ ಪ್ರೇಷಯಾಮಾಸ, ತೇ ತಮಪಿ ಪ್ರಹೃತ್ಯ ಕುವ್ಯವಹೃತ್ಯ ರಿಕ್ತಹಸ್ತಂ ವಿಸಸೃಜುಃ|
12 ೧೨ ಆ ಮೇಲೆ ಮೂರನೆಯವನನ್ನು ಕಳುಹಿಸಲು ಅವರು ಅವನನ್ನೂ ಗಾಯಗೊಳಿಸಿ ಹೊರಕ್ಕೆ ಅಟ್ಟಿದರು.
ತತಃ ಸ ತೃತೀಯವಾರಮ್ ಅನ್ಯಂ ಪ್ರಾಹಿಣೋತ್ ತೇ ತಮಪಿ ಕ್ಷತಾಙ್ಗಂ ಕೃತ್ವಾ ಬಹಿ ರ್ನಿಚಿಕ್ಷಿಪುಃ|
13 ೧೩ ಆಗ ಆ ದ್ರಾಕ್ಷಿಯ ತೋಟದ ಧಣಿಯು, ‘ನಾನೇನು ಮಾಡಲಿ? ನನ್ನ ಮುದ್ದುಮಗನನ್ನು ಕಳುಹಿಸುತ್ತೇನೆ, ಒಂದು ವೇಳೆ ಅವನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡನು.
ತದಾ ಕ್ಷೇತ್ರಪತಿ ರ್ವಿಚಾರಯಾಮಾಸ, ಮಮೇದಾನೀಂ ಕಿಂ ಕರ್ತ್ತವ್ಯಂ? ಮಮ ಪ್ರಿಯೇ ಪುತ್ರೇ ಪ್ರಹಿತೇ ತೇ ತಮವಶ್ಯಂ ದೃಷ್ಟ್ವಾ ಸಮಾದರಿಷ್ಯನ್ತೇ|
14 ೧೪ ಆದರೆ ಆ ಒಕ್ಕಲಿಗರು ದ್ರಾಕ್ಷಿಯ ತೋಟದ ಯಜಮಾನನ ಮಗನನ್ನು ಕಂಡು, ‘ಇವನೇ ಬಾಧ್ಯಸ್ಥನು; ಇವನನ್ನು ಕೊಂದು ಹಾಕೋಣ, ಇವನ ಪಿತ್ರಾರ್ಜಿತವೆಲ್ಲಾ ನಮ್ಮದಾಗುವುದು’ ಎಂದು ಒಬ್ಬರ ಸಂಗಡಲೊಬ್ಬರು ಮಾತನಾಡಿಕೊಂಡು,
ಕಿನ್ತು ಕೃಷೀವಲಾಸ್ತಂ ನಿರೀಕ್ಷ್ಯ ಪರಸ್ಪರಂ ವಿವಿಚ್ಯ ಪ್ರೋಚುಃ, ಅಯಮುತ್ತರಾಧಿಕಾರೀ ಆಗಚ್ಛತೈನಂ ಹನ್ಮಸ್ತತೋಧಿಕಾರೋಸ್ಮಾಕಂ ಭವಿಷ್ಯತಿ|
15 ೧೫ ಅವನನ್ನು ದ್ರಾಕ್ಷಿಯ ತೋಟದಿಂದ ಹೊರಕ್ಕೆ ದೊಬ್ಬಿ, ಕೊಂದು ಹಾಕಿದರು. ಹಾಗಾದರೆ ದ್ರಾಕ್ಷಿಯ ತೋಟದ ಧಣಿಯು ಅವರಿಗೆ ಏನು ಮಾಡಿಯಾನು?
ತತಸ್ತೇ ತಂ ಕ್ಷೇತ್ರಾದ್ ಬಹಿ ರ್ನಿಪಾತ್ಯ ಜಘ್ನುಸ್ತಸ್ಮಾತ್ ಸ ಕ್ಷೇತ್ರಪತಿಸ್ತಾನ್ ಪ್ರತಿ ಕಿಂ ಕರಿಷ್ಯತಿ?
16 ೧೬ ಅವನು ಬಂದು ಆ ಒಕ್ಕಲಿಗರನ್ನು ಸಂಹರಿಸಿ ತನ್ನ ತೋಟವನ್ನು ಬೇರೆ ಜನರಿಗೆ ಮಾಡುವುದಕ್ಕೆ ಕೊಡುವನು” ಅಂದನು. ಇದನ್ನು ಜನರು ಕೇಳಿ, “ಹಾಗಾಗಬಾರದು” ಅಂದರು.
ಸ ಆಗತ್ಯ ತಾನ್ ಕೃಷೀವಲಾನ್ ಹತ್ವಾ ಪರೇಷಾಂ ಹಸ್ತೇಷು ತತ್ಕ್ಷೇತ್ರಂ ಸಮರ್ಪಯಿಷ್ಯತಿ; ಇತಿ ಕಥಾಂ ಶ್ರುತ್ವಾ ತೇ ಽವದನ್ ಏತಾದೃಶೀ ಘಟನಾ ನ ಭವತು|
17 ೧೭ ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, ಹಾಗಾದರೆ “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು’ ಎಂದು ಬರೆದಿರುವ ಮಾತೇನು?
ಕಿನ್ತು ಯೀಶುಸ್ತಾನವಲೋಕ್ಯ ಜಗಾದ, ತರ್ಹಿ, ಸ್ಥಪತಯಃ ಕರಿಷ್ಯನ್ತಿ ಗ್ರಾವಾಣಂ ಯನ್ತು ತುಚ್ಛಕಂ| ಪ್ರಧಾನಪ್ರಸ್ತರಃ ಕೋಣೇ ಸ ಏವ ಹಿ ಭವಿಷ್ಯತಿ| ಏತಸ್ಯ ಶಾಸ್ತ್ರೀಯವಚನಸ್ಯ ಕಿಂ ತಾತ್ಪರ್ಯ್ಯಂ?
18 ೧೮ “ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ಯಾರ ಮೇಲೆ ಬೀಳುವುದೋ ಅದು ಅವನನ್ನು ಪುಡಿಪುಡಿ ಮಾಡುವುದು” ಅಂದನು.
ಅಪರಂ ತತ್ಪಾಷಾಣೋಪರಿ ಯಃ ಪತಿಷ್ಯತಿ ಸ ಭಂಕ್ಷ್ಯತೇ ಕಿನ್ತು ಯಸ್ಯೋಪರಿ ಸ ಪಾಷಾಣಃ ಪತಿಷ್ಯತಿ ಸ ತೇನ ಧೂಲಿವಚ್ ಚೂರ್ಣೀಭವಿಷ್ಯತಿ|
19 ೧೯ ಶಾಸ್ತ್ರಿಗಳೂ ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದನು ಎಂದು ತಿಳಿದುಕೊಂಡು ಅದೇ ಗಳಿಗೆಯಲ್ಲಿ ಆತನನ್ನು ಹಿಡಿಯುವುದಕ್ಕೆ ಸಂದರ್ಭನೋಡಿದರು. ಆದರೆ ಜನರಿಗೆ ಭಯಪಟ್ಟರು.
ಸೋಸ್ಮಾಕಂ ವಿರುದ್ಧಂ ದೃಷ್ಟಾನ್ತಮಿಮಂ ಕಥಿತವಾನ್ ಇತಿ ಜ್ಞಾತ್ವಾ ಪ್ರಧಾನಯಾಜಕಾ ಅಧ್ಯಾಪಕಾಶ್ಚ ತದೈವ ತಂ ಧರ್ತುಂ ವವಾಞ್ಛುಃ ಕಿನ್ತು ಲೋಕೇಭ್ಯೋ ಬಿಭ್ಯುಃ|
20 ೨೦ ಆಮೇಲೆ ಅವರು ಯೇಸುವನ್ನು ಅಧಿಪತಿಯ ವಶಕ್ಕೂ ಅಧಿಕಾರಿಗಳಿಗೂ ಒಪ್ಪಿಸಬೇಕೆಂದು ಹೊಂಚು ಹಾಕುತ್ತಾ, ನೀತಿವಂತರಂತೆ ನಟಿಸುತ್ತಿರುವ ಗೂಢಚಾರರನ್ನು ಆತನ ಮಾತಿನಲ್ಲಿ ಏನನ್ನಾದರೂ ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ (ಆತನ ಬಳಿಗೆ) ಕಳುಹಿಸಿದರು.
ಅತಏವ ತಂ ಪ್ರತಿ ಸತರ್ಕಾಃ ಸನ್ತಃ ಕಥಂ ತದ್ವಾಕ್ಯದೋಷಂ ಧೃತ್ವಾ ತಂ ದೇಶಾಧಿಪಸ್ಯ ಸಾಧುವೇಶಧಾರಿಣಶ್ಚರಾನ್ ತಸ್ಯ ಸಮೀಪೇ ಪ್ರೇಷಯಾಮಾಸುಃ|
21 ೨೧ ಗೂಢಚಾರರು, “ಬೋಧಕನೇ, ನೀನು ಸರಿಯಾಗಿ ಮಾತನಾಡುತ್ತಾ ಉಪದೇಶಮಾಡುತ್ತೀ, ನೀನು ಮುಖದಾಕ್ಷಿಣ್ಯವಿಲ್ಲದೆ ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನಾಗಿದ್ದೀ ಎಂದು ಬಲ್ಲೆವು.
ತದಾ ತೇ ತಂ ಪಪ್ರಚ್ಛುಃ, ಹೇ ಉಪದೇಶಕ ಭವಾನ್ ಯಥಾರ್ಥಂ ಕಥಯನ್ ಉಪದಿಶತಿ, ಕಮಪ್ಯನಪೇಕ್ಷ್ಯ ಸತ್ಯತ್ವೇನೈಶ್ವರಂ ಮಾರ್ಗಮುಪದಿಶತಿ, ವಯಮೇತಜ್ಜಾನೀಮಃ|
22 ೨೨ ಕೈಸರನಿಗೆ ಕಂದಾಯ ಕೊಡುವುದು ಸರಿಯೋ ಸರಿಯಲ್ಲವೋ?” ಎಂದು ಆತನನ್ನು ಕೇಳಿದರು.
ಕೈಸರರಾಜಾಯ ಕರೋಸ್ಮಾಭಿ ರ್ದೇಯೋ ನ ವಾ?
23 ೨೩ ಯೇಸು ಅವರ ಕುಯುಕ್ತಿಯನ್ನು ಅರಿತುಕೊಂಡು,
ಸ ತೇಷಾಂ ವಞ್ಚನಂ ಜ್ಞಾತ್ವಾವದತ್ ಕುತೋ ಮಾಂ ಪರೀಕ್ಷಧ್ವೇ? ಮಾಂ ಮುದ್ರಾಮೇಕಂ ದರ್ಶಯತ|
24 ೨೪ ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಇದರಲ್ಲಿ ಯಾರ ತಲೆ ಹಾಗು ಮುದ್ರೆಯದೆ?” ಎಂದು ಕೇಳಿದ್ದಕ್ಕೆ ಅವರು, “ಕೈಸರನದು” ಅಂದರು.
ಇಹ ಲಿಖಿತಾ ಮೂರ್ತಿರಿಯಂ ನಾಮ ಚ ಕಸ್ಯ? ತೇಽವದನ್ ಕೈಸರಸ್ಯ|
25 ೨೫ ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.
ತದಾ ಸ ಉವಾಚ, ತರ್ಹಿ ಕೈಸರಸ್ಯ ದ್ರವ್ಯಂ ಕೈಸರಾಯ ದತ್ತ; ಈಶ್ವರಸ್ಯ ತು ದ್ರವ್ಯಮೀಶ್ವರಾಯ ದತ್ತ|
26 ೨೬ ಯೇಸು ಜನರ ಮುಂದೆ ಹೇಳಿದ ಮಾತಿನಲ್ಲಿ ಅವರು ಯಾವ ತಪ್ಪನ್ನೂ ಹಿಡಿಯಲಾಗದೆ, ಆತನು ಕೊಟ್ಟ ಉತ್ತರಕ್ಕೆ ಆಶ್ಚರ್ಯಪಟ್ಟು ಸುಮ್ಮನಾದರು.
ತಸ್ಮಾಲ್ಲೋಕಾನಾಂ ಸಾಕ್ಷಾತ್ ತತ್ಕಥಾಯಾಃ ಕಮಪಿ ದೋಷಂ ಧರ್ತುಮಪ್ರಾಪ್ಯ ತೇ ತಸ್ಯೋತ್ತರಾದ್ ಆಶ್ಚರ್ಯ್ಯಂ ಮನ್ಯಮಾನಾ ಮೌನಿನಸ್ತಸ್ಥುಃ|
27 ೨೭ ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವವರಾದ ಸದ್ದುಕಾಯರಲ್ಲಿ ಕೆಲವರು ಬಂದು ಆತನಿಗೆ ಪ್ರಶ್ನೆಮಾಡಿದ್ದೇನಂದರೆ,
ಅಪರಞ್ಚ ಶ್ಮಶಾನಾದುತ್ಥಾನಾನಙ್ಗೀಕಾರಿಣಾಂ ಸಿದೂಕಿನಾಂ ಕಿಯನ್ತೋ ಜನಾ ಆಗತ್ಯ ತಂ ಪಪ್ರಚ್ಛುಃ,
28 ೨೮ “ಬೋಧಕನೇ, ಅಣ್ಣನಾದವನು ಹೆಂಡತಿಯುಳ್ಳವನಾಗಿದ್ದು ಮಕ್ಕಳಿಲ್ಲದೆ ಸತ್ತರೆ ಅವನ ತಮ್ಮನು ಆಕೆಯನ್ನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದಿಟ್ಟನಷ್ಟೆ.
ಹೇ ಉಪದೇಶಕ ಶಾಸ್ತ್ರೇ ಮೂಸಾ ಅಸ್ಮಾನ್ ಪ್ರತೀತಿ ಲಿಲೇಖ ಯಸ್ಯ ಭ್ರಾತಾ ಭಾರ್ಯ್ಯಾಯಾಂ ಸತ್ಯಾಂ ನಿಃಸನ್ತಾನೋ ಮ್ರಿಯತೇ ಸ ತಜ್ಜಾಯಾಂ ವಿವಹ್ಯ ತದ್ವಂಶಮ್ ಉತ್ಪಾದಯಿಷ್ಯತಿ|
29 ೨೯ ಒಳ್ಳೆಯದು, ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು.
ತಥಾಚ ಕೇಚಿತ್ ಸಪ್ತ ಭ್ರಾತರ ಆಸನ್ ತೇಷಾಂ ಜ್ಯೇಷ್ಠೋ ಭ್ರಾತಾ ವಿವಹ್ಯ ನಿರಪತ್ಯಃ ಪ್ರಾಣಾನ್ ಜಹೌ|
30 ೩೦ ಎರಡನೆಯವನೂ ಅವನ ತರುವಾಯ ಮೂರನೆಯವನೂ ಆಕೆಯನ್ನು ಮದುವೆಮಾಡಿಕೊಂಡರು. ಇದೇ ರೀತಿಯಾಗಿ ಏಳು ಮಂದಿಯೂ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು.
ಅಥ ದ್ವಿತೀಯಸ್ತಸ್ಯ ಜಾಯಾಂ ವಿವಹ್ಯ ನಿರಪತ್ಯಃ ಸನ್ ಮಮಾರ| ತೃತೀಯಶ್ಚ ತಾಮೇವ ವ್ಯುವಾಹ;
ಇತ್ಥಂ ಸಪ್ತ ಭ್ರಾತರಸ್ತಾಮೇವ ವಿವಹ್ಯ ನಿರಪತ್ಯಾಃ ಸನ್ತೋ ಮಮ್ರುಃ|
32 ೩೨ ಕಡೆಯಲ್ಲಿ ಆ ಹೆಂಗಸೂ ಸತ್ತಳು.
ಶೇಷೇ ಸಾ ಸ್ತ್ರೀ ಚ ಮಮಾರ|
33 ೩೩ ಹಾಗಾದರೆ ಪುನರುತ್ಥಾನದಲ್ಲಿ ಆ ಸ್ತ್ರೀಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಏಳು ಮಂದಿಯೂ ಮದುವೆ ಮಾಡಿಕೊಂಡಿದ್ದರಲ್ಲಾ” ಅಂದರು.
ಅತಏವ ಶ್ಮಶಾನಾದುತ್ಥಾನಕಾಲೇ ತೇಷಾಂ ಸಪ್ತಜನಾನಾಂ ಕಸ್ಯ ಸಾ ಭಾರ್ಯ್ಯಾ ಭವಿಷ್ಯತಿ? ಯತಃ ಸಾ ತೇಷಾಂ ಸಪ್ತಾನಾಮೇವ ಭಾರ್ಯ್ಯಾಸೀತ್|
34 ೩೪ ಯೇಸು ಅವರಿಗೆ, “ಈ ಲೋಕದ ಜನರು ಮದುವೆಮಾಡಿಕೊಳ್ಳುತ್ತಾರೆ ಹಾಗೂ ಮದುವೆಮಾಡಿಕೊಡುತ್ತಾರೆ. (aiōn )
ತದಾ ಯೀಶುಃ ಪ್ರತ್ಯುವಾಚ, ಏತಸ್ಯ ಜಗತೋ ಲೋಕಾ ವಿವಹನ್ತಿ ವಾಗ್ದತ್ತಾಶ್ಚ ಭವನ್ತಿ (aiōn )
35 ೩೫ ಆದರೆ ಮುಂಬರುವ ಲೋಕವನ್ನೂ, ಸತ್ತವರೊಳಗಿಂದ ಪುನರುತ್ಥಾನವನ್ನೂ ಪಡೆಯುವುದಕ್ಕೆ ಯೋಗ್ಯರೆನಿಸಿಕೊಂಡಿರುವವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮಾಡಿಕೊಡುವುದೂ ಇಲ್ಲ. (aiōn )
ಕಿನ್ತು ಯೇ ತಜ್ಜಗತ್ಪ್ರಾಪ್ತಿಯೋಗ್ಯತ್ವೇನ ಗಣಿತಾಂ ಭವಿಷ್ಯನ್ತಿ ಶ್ಮಶಾನಾಚ್ಚೋತ್ಥಾಸ್ಯನ್ತಿ ತೇ ನ ವಿವಹನ್ತಿ ವಾಗ್ದತ್ತಾಶ್ಚ ನ ಭವನ್ತಿ, (aiōn )
36 ೩೬ ಅವರು ಇನ್ನು ಮರಣಕ್ಕೆ ಗುರಿಯಾಗುವುದೇ ಇಲ್ಲ. ಏಕೆಂದರೆ ಅವರು ದೇವದೂತರಿಗೆ ಸರಿಸಮಾನರೂ, ಪುನರುತ್ಥಾನವನ್ನು ಹೊಂದಿದವರಾಗಿವುದ್ದರಿಂದ ಅವರು ದೇವರ ಮಕ್ಕಳೂ ಆಗಿರುತ್ತಾರೆ.
ತೇ ಪುನ ರ್ನ ಮ್ರಿಯನ್ತೇ ಕಿನ್ತು ಶ್ಮಶಾನಾದುತ್ಥಾಪಿತಾಃ ಸನ್ತ ಈಶ್ವರಸ್ಯ ಸನ್ತಾನಾಃ ಸ್ವರ್ಗೀಯದೂತಾನಾಂ ಸದೃಶಾಶ್ಚ ಭವನ್ತಿ|
37 ೩೭ ಸತ್ತವರು ಬದುಕಿ ಏಳುತ್ತಾರೆಂಬುದನ್ನು ಮೋಶೆಯೂ ಸೂಚಿಸಿದ್ದಾನೆ. ಅವನು ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿಕರ್ತನನ್ನು ‘ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು’ ಎಂದು ಹೇಳಿದ್ದಾನೆ.
ಅಧಿಕನ್ತು ಮೂಸಾಃ ಸ್ತಮ್ಬೋಪಾಖ್ಯಾನೇ ಪರಮೇಶ್ವರ ಈಬ್ರಾಹೀಮ ಈಶ್ವರ ಇಸ್ಹಾಕ ಈಶ್ವರೋ ಯಾಕೂಬಶ್ಚೇಶ್ವರ ಇತ್ಯುಕ್ತ್ವಾ ಮೃತಾನಾಂ ಶ್ಮಶಾನಾದ್ ಉತ್ಥಾನಸ್ಯ ಪ್ರಮಾಣಂ ಲಿಲೇಖ|
38 ೩೮ ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ” ಎಂದು ಹೇಳಿದನು.
ಅತಏವ ಯ ಈಶ್ವರಃ ಸ ಮೃತಾನಾಂ ಪ್ರಭು ರ್ನ ಕಿನ್ತು ಜೀವತಾಮೇವ ಪ್ರಭುಃ, ತನ್ನಿಕಟೇ ಸರ್ವ್ವೇ ಜೀವನ್ತಃ ಸನ್ತಿ|
39 ೩೯ ಶಾಸ್ತ್ರಿಗಳಲ್ಲಿ ಕೆಲವರು, “ಬೋಧಕನೇ, ಚೆನ್ನಾಗಿ ಹೇಳಿದಿ” ಅಂದರು.
ಇತಿ ಶ್ರುತ್ವಾ ಕಿಯನ್ತೋಧ್ಯಾಪಕಾ ಊಚುಃ, ಹೇ ಉಪದೇಶಕ ಭವಾನ್ ಭದ್ರಂ ಪ್ರತ್ಯುಕ್ತವಾನ್|
40 ೪೦ ಆತನನ್ನು ಇನ್ನೇನು ಕೇಳುವುದಕ್ಕೂ ಅವರಿಗೆ ಧೈರ್ಯವಿಲ್ಲದೆ ಹೋಯಿತು.
ಇತಃ ಪರಂ ತಂ ಕಿಮಪಿ ಪ್ರಷ್ಟಂ ತೇಷಾಂ ಪ್ರಗಲ್ಭತಾ ನಾಭೂತ್|
41 ೪೧ ಆಗ ಯೇಸು, “ಬರಬೇಕಾದ ಕ್ರಿಸ್ತನು ದಾವೀದನ ಮಗನೆಂದು ಹೇಳುತ್ತಾರಲ್ಲಾ, ಅದು ಹೇಗಾದೀತು?
ಪಶ್ಚಾತ್ ಸ ತಾನ್ ಉವಾಚ, ಯಃ ಖ್ರೀಷ್ಟಃ ಸ ದಾಯೂದಃ ಸನ್ತಾನ ಏತಾಂ ಕಥಾಂ ಲೋಕಾಃ ಕಥಂ ಕಥಯನ್ತಿ?
42 ೪೨ “‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳಿಗೆ ಪೀಠವನ್ನಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು’ ಎಂಬುದಾಗಿ ಕೀರ್ತನೆಗಳ ಗ್ರಂಥದಲ್ಲಿ ದಾವೀದನೇ ಹೇಳುತ್ತಾನಲ್ಲಾ.
ಯತಃ ಮಮ ಪ್ರಭುಮಿದಂ ವಾಕ್ಯಮವದತ್ ಪರಮೇಶ್ವರಃ| ತವ ಶತ್ರೂನಹಂ ಯಾವತ್ ಪಾದಪೀಠಂ ಕರೋಮಿ ನ| ತಾವತ್ ಕಾಲಂ ಮದೀಯೇ ತ್ವಂ ದಕ್ಷಪಾರ್ಶ್ವ ಉಪಾವಿಶ|
ಇತಿ ಕಥಾಂ ದಾಯೂದ್ ಸ್ವಯಂ ಗೀತಗ್ರನ್ಥೇಽವದತ್|
44 ೪೪ “ದಾವೀದನು ಆತನನ್ನು ‘ಒಡೆಯನೆಂದು’ ಹೇಳಿದ ಮೇಲೆ ಆತನು ಅವನಿಗೆ ಮಗನಾಗುವುದು ಹೇಗೆ?” ಎಂದು ಅವರನ್ನು ಕೇಳಿದನು.
ಅತಏವ ಯದಿ ದಾಯೂದ್ ತಂ ಪ್ರಭುಂ ವದತಿ, ತರ್ಹಿ ಸ ಕಥಂ ತಸ್ಯ ಸನ್ತಾನೋ ಭವತಿ?
45 ೪೫ ಜನರೆಲ್ಲರು ಕೇಳುತ್ತಿರುವಲ್ಲಿ ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ,
ಪಶ್ಚಾದ್ ಯೀಶುಃ ಸರ್ವ್ವಜನಾನಾಂ ಕರ್ಣಗೋಚರೇ ಶಿಷ್ಯಾನುವಾಚ,
46 ೪೬ “ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವುದರಲ್ಲಿ ಮನಸ್ಸುಳ್ಳವರೂ, ಅಂಗಡಿಬೀದಿಗಳಲ್ಲಿ ನಮಸ್ಕಾರಗಳು, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಔತಣಕೂಟಗಳಲ್ಲಿ ಪ್ರಥಮಸ್ಥಾನ, ಇವುಗಳನ್ನು ಬಯಸುವವರೂ ಆಗಿದ್ದಾರೆ.
ಯೇಽಧ್ಯಾಪಕಾ ದೀರ್ಘಪರಿಚ್ಛದಂ ಪರಿಧಾಯ ಭ್ರಮನ್ತಿ, ಹಟ್ಟಾಪಣಯೋ ರ್ನಮಸ್ಕಾರೇ ಭಜನಗೇಹಸ್ಯ ಪ್ರೋಚ್ಚಾಸನೇ ಭೋಜನಗೃಹಸ್ಯ ಪ್ರಧಾನಸ್ಥಾನೇ ಚ ಪ್ರೀಯನ್ತೇ
47 ೪೭ ಅವರು ವಿಧವೆಯರ ಮನೆಗಳನ್ನು ನುಂಗಿ, ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು” ಅಂದನು.
ವಿಧವಾನಾಂ ಸರ್ವ್ವಸ್ವಂ ಗ್ರಸಿತ್ವಾ ಛಲೇನ ದೀರ್ಘಕಾಲಂ ಪ್ರಾರ್ಥಯನ್ತೇ ಚ ತೇಷು ಸಾವಧಾನಾ ಭವತ, ತೇಷಾಮುಗ್ರದಣ್ಡೋ ಭವಿಷ್ಯತಿ|