< ಲೂಕನು 2 >
1 ೧ ಆ ಕಾಲದಲ್ಲಿ ತನ್ನ ರಾಜ್ಯದ ಜನರೆಲ್ಲಾ ಜನಗಣತಿಯನ್ನು ಮಾಡಿಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು.
അപരഞ്ച തസ്മിൻ കാലേ രാജ്യസ്യ സർവ്വേഷാം ലോകാനാം നാമാനി ലേഖയിതുമ് അഗസ്തകൈസര ആജ്ഞാപയാമാസ|
2 ೨ ಇದು ಕುರೇನ್ಯನು ಸಿರಿಯಕ್ಕೆ ಅಧಿಪತಿಯಾಗಿದ್ದಾಗ ನಡೆದ ಮೊದಲನೆಯ ಜನಗಣತಿ.
തദനുസാരേണ കുരീണിയനാമനി സുരിയാദേശസ്യ ശാസകേ സതി നാമലേഖനം പ്രാരേഭേ|
3 ೩ ಆಗ ಎಲ್ಲರೂ ಜನಗಣತಿ ಮಾಡಿಸಿಕೊಳ್ಳುವುದಕ್ಕಾಗಿ ತಮ್ಮತಮ್ಮ ಊರುಗಳಿಗೆ ಹೊರಟರು.
അതോ ഹേതോ ർനാമ ലേഖിതും സർവ്വേ ജനാഃ സ്വീയം സ്വീയം നഗരം ജഗ്മുഃ|
4 ೪ ಯೋಸೇಫನು ಸಹ ತಾನು ದಾವೀದನ ಮನೆತನದವನೂ, ಗೋತ್ರದವನೂ ಆಗಿದ್ದದರಿಂದ ಹೆಸರು ನೊಂದಾಯಿಸಿಕೊಳ್ಳುವುದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಹಾಗೂ ಗರ್ಭವತಿಯಾಗಿದ್ದ ಮರಿಯಳ ಸಂಗಡ ಗಲಿಲಾಯ ಸೀಮೆಯ ನಜರೇತ್ ಎಂಬ ಊರಿನಿಂದ ಹೊರಟು ಯೂದಾಯದಲ್ಲಿರುವ ಬೇತ್ಲೆಹೇಮೆಂಬ ದಾವೀದನೂರಿಗೆ ಹೋದರು.
തദാനീം യൂഷഫ് നാമ ലേഖിതും വാഗ്ദത്തയാ സ്വഭാര്യ്യയാ ഗർബ്ഭവത്യാ മരിയമാ സഹ സ്വയം ദായൂദഃ സജാതിവംശ ഇതി കാരണാദ് ഗാലീൽപ്രദേശസ്യ നാസരത്നഗരാദ്
യിഹൂദാപ്രദേശസ്യ ബൈത്ലേഹമാഖ്യം ദായൂദ്നഗരം ജഗാമ|
6 ೬ ಅವರು ಅಲ್ಲಿದ್ದಾಗ ಆಕೆಗೆ ಪ್ರಸವಕ್ಕೆ ದಿನತುಂಬಿತು.
അന്യച്ച തത്ര സ്ഥാനേ തയോസ്തിഷ്ഠതോഃ സതോ ർമരിയമഃ പ്രസൂതികാല ഉപസ്ഥിതേ
7 ೭ ಆಕೆಯು ತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ ಛತ್ರದಲ್ಲಿ ಅವರಿಗೆ ಸ್ಥಳವಿಲ್ಲದ ಕಾರಣ ಅವನನ್ನು ಗೋದಲಿಯಲ್ಲಿ ಮಲಗಿಸಿದಳು.
സാ തം പ്രഥമസുതം പ്രാസോഷ്ട കിന്തു തസ്മിൻ വാസഗൃഹേ സ്ഥാനാഭാവാദ് ബാലകം വസ്ത്രേണ വേഷ്ടയിത്വാ ഗോശാലായാം സ്ഥാപയാമാസ|
8 ೮ ಆ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರಿಹಿಂಡನ್ನು ಕಾಯುತ್ತಿರಲಾಗಿ,
അനന്തരം യേ കിയന്തോ മേഷപാലകാഃ സ്വമേഷവ്രജരക്ഷായൈ തത്പ്രദേശേ സ്ഥിത്വാ രജന്യാം പ്രാന്തരേ പ്രഹരിണഃ കർമ്മ കുർവ്വന്തി,
9 ೯ ಕರ್ತನ ದೂತನೊಬ್ಬನು ಬಂದು ಅವರ ಎದುರಿನಲ್ಲಿ ನಿಂತನು. ಕರ್ತನ ಪ್ರಭೆಯು ಅವರ ಸುತ್ತಲು ಪ್ರಕಾಶಿಸಿತು; ಅವರು ಬಹಳವಾಗಿ ಹೆದರಿದರು.
തേഷാം സമീപം പരമേശ്വരസ്യ ദൂത ആഗത്യോപതസ്ഥൗ; തദാ ചതുഷ്പാർശ്വേ പരമേശ്വരസ്യ തേജസഃ പ്രകാശിതത്വാത് തേഽതിശശങ്കിരേ|
10 ೧೦ ಆ ದೂತನು ಅವರಿಗೆ, “ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭವಾರ್ತೆಯನ್ನು ನಿಮಗೆ ತಿಳಿಸುತ್ತೇನೆ.
തദാ സ ദൂത ഉവാച മാ ഭൈഷ്ട പശ്യതാദ്യ ദായൂദഃ പുരേ യുഷ്മന്നിമിത്തം ത്രാതാ പ്രഭുഃ ഖ്രീഷ്ടോഽജനിഷ്ട,
11 ೧೧ ಅದೇನೆಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ.
സർവ്വേഷാം ലോകാനാം മഹാനന്ദജനകമ് ഇമം മങ്ഗലവൃത്താന്തം യുഷ്മാൻ ജ്ഞാപയാമി|
12 ೧೨ ಅದರ ಗುರುತೇನಂದರೆ, ಬಟ್ಟೆಯಿಂದ ಸುತ್ತಿರುವ ಒಂದು ಕೂಸು ಗೋದಲಿಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ” ಎಂದು ಹೇಳಿದನು.
യൂയം (തത്സ്ഥാനം ഗത്വാ) വസ്ത്രവേഷ്ടിതം തം ബാലകം ഗോശാലായാം ശയനം ദ്രക്ഷ്യഥ യുഷ്മാൻ പ്രതീദം ചിഹ്നം ഭവിഷ്യതി|
13 ೧೩ ಫಕ್ಕನೆ ಆ ದೂತನ ಸಂಗಡ ಸ್ವರ್ಗೀಯ ಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು, “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮನುಷ್ಯರೊಳಗೆ ಸಮಾಧಾನ” ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು.
ദൂത ഇമാം കഥാം കഥിതവതി തത്രാകസ്മാത് സ്വർഗീയാഃ പൃതനാ ആഗത്യ കഥാമ് ഇമാം കഥയിത്വേശ്വരസ്യ ഗുണാനന്വവാദിഷുഃ, യഥാ,
സർവ്വോർദ്വ്വസ്ഥൈരീശ്വരസ്യ മഹിമാ സമ്പ്രകാശ്യതാം| ശാന്തിർഭൂയാത് പൃഥിവ്യാസ്തു സന്തോഷശ്ച നരാൻ പ്രതി||
15 ೧೫ ದೇವದೂತರು ಅವರ ಬಳಿಯಿಂದ ಪರಲೋಕಕ್ಕೆ ಹೊರಟುಹೋದ ಮೇಲೆ ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ಕರ್ತನು ನಮಗೆ ತಿಳಿಯಪಡಿಸಿದ ಈ ಸಂಗತಿಯನ್ನು ನೋಡಲು ಹೋಗೋಣ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು,
തതഃ പരം തേഷാം സന്നിധേ ർദൂതഗണേ സ്വർഗം ഗതേ മേഷപാലകാഃ പരസ്പരമ് അവേചൻ ആഗച്ഛത പ്രഭുഃ പരമേശ്വരോ യാം ഘടനാം ജ്ഞാപിതവാൻ തസ്യാ യാഥര്യം ജ്ഞാതും വയമധുനാ ബൈത്ലേഹമ്പുരം യാമഃ|
16 ೧೬ ತ್ವರೆಯಾಗಿ ಹೋಗಿ ಮರಿಯಳನ್ನೂ ಯೋಸೇಫನನ್ನೂ ಗೋದಲಿಯಲ್ಲಿ ಮಲಗಿರುವ ಆ ಕೂಸನ್ನೂ ಕಂಡುಕೊಂಡರು.
പശ്ചാത് തേ തൂർണം വ്രജിത്വാ മരിയമം യൂഷഫം ഗോശാലായാം ശയനം ബാലകഞ്ച ദദൃശുഃ|
17 ೧೭ ಅದನ್ನು ನೋಡಿದಾಗ ಅವರು ಆ ಮಗುವಿನ ವಿಷಯದಲ್ಲಿ ದೇವದೂತನು ತಮಗೆ ಹೇಳಿದ್ದ ಮಾತನ್ನು ಅವರಿಗೆ ತಿಳಿಸಿದರು.
ഇത്ഥം ദൃഷ്ട്വാ ബാലകസ്യാർഥേ പ്രോക്താം സർവ്വകഥാം തേ പ്രാചാരയാഞ്ചക്രുഃ|
18 ೧೮ ಅದನ್ನು ಕೇಳಿದವರೆಲ್ಲರೂ, ತಮಗೆ ಕುರುಬರು ಹೇಳಿದ ಮಾತುಗಳಿಗೆ ಆಶ್ಚರ್ಯಪಟ್ಟರು.
തതോ യേ ലോകാ മേഷരക്ഷകാണാം വദനേഭ്യസ്താം വാർത്താം ശുശ്രുവുസ്തേ മഹാശ്ചര്യ്യം മേനിരേ|
19 ೧೯ ಆದರೆ ಮರಿಯಳು ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಆಲೋಚಿಸುತ್ತಿದ್ದಳು.
കിന്തു മരിയമ് ഏതത്സർവ്വഘടനാനാം താത്പര്യ്യം വിവിച്യ മനസി സ്ഥാപയാമാസ|
20 ೨೦ ಕುರುಬರು ತಮಗೆ ದೂತರಿಂದ ಹೇಳಲ್ಪಟ್ಟಂತೆಯೇ ಎಲ್ಲಾ ಸಂಗತಿಗಳನ್ನು ಕೇಳಿ ನೋಡಿ ಅವುಗಳಿಗಾಗಿ ದೇವರನ್ನು ಕೊಂಡಾಡುತ್ತಾ ಸ್ತುತಿಸುತ್ತಾ ಹಿಂತಿರುಗಿ ಹೋದರು.
തത്പശ്ചാദ് ദൂതവിജ്ഞപ്താനുരൂപം ശ്രുത്വാ ദൃഷ്ട്വാ ച മേഷപാലകാ ഈശ്വരസ്യ ഗുണാനുവാദം ധന്യവാദഞ്ച കുർവ്വാണാഃ പരാവൃത്യ യയുഃ|
21 ೨೧ ಆ ಕೂಸಿಗೆ ಸುನ್ನತಿಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಅವರು ಅದಕ್ಕೆ ಯೇಸು ಎಂದು ಹೆಸರಿಟ್ಟರು. ಆ ಕೂಸನ್ನು ಗರ್ಭಧರಿಸುವುದಕ್ಕಿಂತ ಮೊದಲೇ ದೇವದೂತನು ಅದೇ ಹೆಸರನ್ನು ಸೂಚಿಸಿದ್ದನು.
അഥ ബാലകസ്യ ത്വക്ഛേദനകാലേഽഷ്ടമദിവസേ സമുപസ്ഥിതേ തസ്യ ഗർബ്ഭസ്ഥിതേഃ പുർവ്വം സ്വർഗീയദൂതോ യഥാജ്ഞാപയത് തദനുരൂപം തേ തന്നാമധേയം യീശുരിതി ചക്രിരേ|
22 ೨೨ ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಶುದ್ಧೀಕರಣದ ದಿನಗಳು ಮುಗಿದ ಮೇಲೆ, “ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವುದು” ಎಂದು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, ಅವರು ಆ ಕೂಸನ್ನು ಕರ್ತನಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತೆಗೆದುಕೊಂಡು ಹೋದರು.
തതഃ പരം മൂസാലിഖിതവ്യവസ്ഥായാ അനുസാരേണ മരിയമഃ ശുചിത്വകാല ഉപസ്ഥിതേ,
"പ്രഥമജഃ സർവ്വഃ പുരുഷസന്താനഃ പരമേശ്വരേ സമർപ്യതാം," ഇതി പരമേശ്വരസ്യ വ്യവസ്ഥയാ
24 ೨೪ ಇದಲ್ಲದೆ ಕರ್ತನ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ಅವರು “ಒಂದು ಜೋಡಿ ಬೆಳವಕ್ಕಿಯನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ” ಬಲಿಕೊಡಬೇಕಾಗಿತ್ತು.
യീശും പരമേശ്വരേ സമർപയിതുമ് ശാസ്ത്രീയവിധ്യുക്തം കപോതദ്വയം പാരാവതശാവകദ്വയം വാ ബലിം ദാതും തേ തം ഗൃഹീത്വാ യിരൂശാലമമ് ആയയുഃ|
25 ೨೫ ಆ ಕಾಲದಲ್ಲಿ ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಈ ಮನುಷ್ಯನು ನೀತಿವಂತನೂ ದೇವಭಕ್ತನೂ ಆಗಿದ್ದನು. ಇಸ್ರಾಯೇಲರನ್ನು ಸಂತೈಸುವವನು ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು ಮತ್ತು ಆತನು ಪವಿತ್ರಾತ್ಮಭರಿತನಾಗಿದ್ದನು.
യിരൂശാലമ്പുരനിവാസീ ശിമിയോന്നാമാ ധാർമ്മിക ഏക ആസീത് സ ഇസ്രായേലഃ സാന്ത്വനാമപേക്ഷ്യ തസ്ഥൗ കിഞ്ച പവിത്ര ആത്മാ തസ്മിന്നാവിർഭൂതഃ|
26 ೨೬ ಇದಲ್ಲದೆ, ಕರ್ತನು ಕಳುಹಿಸಬೇಕಾದ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ನೀನು ಸಾಯುವುದಿಲ್ಲವೆಂದು ಪವಿತ್ರಾತ್ಮನ ಮೂಲಕ ಅವನಿಗೆ ದೈವೋಕ್ತಿ ಉಂಟಾಗಿತ್ತು.
അപരം പ്രഭുണാ പരമേശ്വരേണാഭിഷിക്തേ ത്രാതരി ത്വയാ ന ദൃഷ്ടേ ത്വം ന മരിഷ്യസീതി വാക്യം പവിത്രേണ ആത്മനാ തസ്മ പ്രാകഥ്യത|
27 ೨೭ ಇವನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಆಗ ತಂದೆತಾಯಿಗಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವ ಪದ್ಧತಿಯ ಪ್ರಕಾರ ನಡೆಸಬೇಕೆಂದು ಮಗುವನ್ನು ಒಳಕ್ಕೆ ತರಲು,
അപരഞ്ച യദാ യീശോഃ പിതാ മാതാ ച തദർഥം വ്യവസ്ഥാനുരൂപം കർമ്മ കർത്തും തം മന്ദിരമ് ആനിന്യതുസ്തദാ
28 ೨೮ ಸಿಮೆಯೋನನು ಆ ಮಗುವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ,
ശിമിയോൻ ആത്മന ആകർഷണേന മന്ദിരമാഗത്യ തം ക്രോഡേ നിധായ ഈശ്വരസ്യ ധന്യവാദം കൃത്വാ കഥയാമാസ, യഥാ,
29 ೨೯ “ಕರ್ತನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು.
ഹേ പ്രഭോ തവ ദാസോയം നിജവാക്യാനുസാരതഃ| ഇദാനീന്തു സകല്യാണോ ഭവതാ സംവിസൃജ്യതാമ്|
30 ೩೦ ನೀನು ಎಲ್ಲಾ ಜನರ ಸಮ್ಮುಖದಲ್ಲಿ ಸಿದ್ಧಪಡಿಸಿದ ಆ ರಕ್ಷಣೆಯನ್ನು ನಾನು ಕಣ್ಣಾರೆ ಕಂಡೆನು.
യതഃ സകലദേശസ്യ ദീപ്തയേ ദീപ്തിരൂപകം|
ഇസ്രായേലീയലോകസ്യ മഹാഗൗരവരൂപകം|
32 ೩೨ ಆತನು ಅನ್ಯಜನರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೀರ್ತಿ” ಅಂದನು.
യം ത്രായകം ജനാനാന്തു സമ്മുഖേ ത്വമജീജനഃ| സഏവ വിദ്യതേഽസ്മാകം ധ്രവം നയനനഗോചരേ||
33 ೩೩ ಆ ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳಿಗೆ ಅದರ ತಂದೆತಾಯಿಗಳು ಆಶ್ಚರ್ಯಪಡುತ್ತಿರಲು,
തദാനീം തേനോക്താ ഏതാഃ സകലാഃ കഥാഃ ശ്രുത്വാ തസ്യ മാതാ യൂഷഫ് ച വിസ്മയം മേനാതേ|
34 ೩೪ ಸಿಮೆಯೋನನು ಅವರನ್ನು ಆಶೀರ್ವದಿಸಿ ತಾಯಿಯಾದ ಮರಿಯಳಿಗೆ, “ಇಗೋ, ಈತನು ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವುದಕ್ಕೂ, ಅನೇಕರು ಏಳುವುದಕ್ಕೂ ಕಾರಣನಾಗಿರುವನು ಮತ್ತು ಜನರು ವಿರೋಧಿಸಿ ಮಾತನಾಡುವುದಕ್ಕೂ ಗುರುತಾಗಿರುವನು;
തതഃ പരം ശിമിയോൻ തേഭ്യ ആശിഷം ദത്ത്വാ തന്മാതരം മരിയമമ് ഉവാച, പശ്യ ഇസ്രായേലോ വംശമധ്യേ ബഹൂനാം പാതനായോത്ഥാപനായ ച തഥാ വിരോധപാത്രം ഭവിതും, ബഹൂനാം ഗുപ്തമനോഗതാനാം പ്രകടീകരണായ ബാലകോയം നിയുക്തോസ്തി|
35 ೩೫ ಹೀಗೆ ಬಹುಜನರ ಹೃದಯದ ಆಲೋಚನೆಗಳು ಬಹಿರಂಗವಾಗುವವು; ಈ ಕಾರಣಕ್ಕಾಗಿ ಈತನು ಹುಟ್ಟಿದ್ದು. ಇದಲ್ಲದೆ ನಿನ್ನ ಸ್ವಂತ ಮನಸ್ಸಿಗಂತೂ ಅಲಗು ನಾಟಿದಂತೆ ವೇದನೆ ಉಂಟಾಗುತ್ತದೆ” ಎಂದು ಹೇಳಿದನು.
തസ്മാത് തവാപി പ്രാണാഃ ശൂലേന വ്യത്സ്യന്തേ|
36 ೩೬ ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು. ಮದುವೆಯಾಗಿ ಏಳು ವರ್ಷ ಗಂಡನ ಕೂಡ ಸಂಸಾರ ಮಾಡಿ ವಿಧವೆಯಾಗಿದ್ದಳು,
അപരഞ്ച ആശേരസ്യ വംശീയഫിനൂയേലോ ദുഹിതാ ഹന്നാഖ്യാ അതിജരതീ ഭവിഷ്യദ്വാദിന്യേകാ യാ വിവാഹാത് പരം സപ്ത വത്സരാൻ പത്യാ സഹ ന്യവസത് തതോ വിധവാ ഭൂത്വാ ചതുരശീതിവർഷവയഃപര്യ്യനതം
37 ೩೭ ಅವಳು ಎಂಭತ್ತುನಾಲ್ಕು ವರ್ಷದವಳಾಗಿದ್ದಳು. ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರನ್ನು ಆರಾಧಿಸುತ್ತಿದ್ದಳು.
മന്ദിരേ സ്ഥിത്വാ പ്രാർഥനോപവാസൈർദിവാനിശമ് ഈശ്വരമ് അസേവത സാപി സ്ത്രീ തസ്മിൻ സമയേ മന്ദിരമാഗത്യ
38 ೩೮ ಆಕೆ ಅದೇ ಗಳಿಗೆಯಲ್ಲಿ ಅವರ ಹತ್ತಿರಕ್ಕೆ ಬಂದು ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತನಾಡುವವಳಾದಳು.
പരമേശ്വരസ്യ ധന്യവാദം ചകാര, യിരൂശാലമ്പുരവാസിനോ യാവന്തോ ലോകാ മുക്തിമപേക്ഷ്യ സ്ഥിതാസ്താൻ യീശോർവൃത്താന്തം ജ്ഞാപയാമാസ|
39 ೩೯ ಇತ್ತಲಾಗಿ ಅವರು ಧರ್ಮಶಾಸ್ತ್ರದಲ್ಲಿ ಹೇಳಿರುವ ಕಾರ್ಯಗಳನ್ನೆಲ್ಲಾ ನೆರವೇರಿಸಿದ ಮೇಲೆ ಗಲಿಲಾಯಕ್ಕೆ ಸೇರಿದ ನಜರೇತೆಂಬ ತಮ್ಮ ಊರಿಗೆ ಹಿಂತಿರುಗಿ ಹೋದರು.
ഇത്ഥം പരമേശ്വരസ്യ വ്യവസ്ഥാനുസാരേണ സർവ്വേഷു കർമ്മസു കൃതേഷു തൗ പുനശ്ച ഗാലീലോ നാസരത്നാമകം നിജനഗരം പ്രതസ്ഥാതേ|
40 ೪೦ ಆ ಬಾಲಕನು ಬೆಳೆದು ಬಲಗೊಂಡು ಜ್ಞಾನದಿಂದ ತುಂಬಿದವನಾದನು; ಮತ್ತು ಆತನ ಮೇಲೆ ದೇವರ ಕೃಪೆ ಇತ್ತು.
തത്പശ്ചാദ് ബാലകഃ ശരീരേണ വൃദ്ധിമേത്യ ജ്ഞാനേന പരിപൂർണ ആത്മനാ ശക്തിമാംശ്ച ഭവിതുമാരേഭേ തഥാ തസ്മിൻ ഈശ്വരാനുഗ്രഹോ ബഭൂവ|
41 ೪೧ ಯೇಸುವಿನ ತಂದೆತಾಯಿಗಳು ಪ್ರತಿವರ್ಷವೂ ಪಸ್ಕ ಹಬ್ಬಕ್ಕೆ ಯೆರೂಸಲೇಮಿಗೆ ಹೋಗುತ್ತಿದ್ದರು.
തസ്യ പിതാ മാതാ ച പ്രതിവർഷം നിസ്താരോത്സവസമയേ യിരൂശാലമമ് അഗച്ഛതാമ്|
42 ೪೨ ಆತನು ಹನ್ನೆರಡು ವರ್ಷದವನಾದಾಗ ಅವರು ಪದ್ಧತಿಯ ಪ್ರಕಾರ ಅಲ್ಲಿಗೆ ಹೋದರು.
അപരഞ്ച യീശൗ ദ്വാദശവർഷവയസ്കേ സതി തൗ പർവ്വസമയസ്യ രീത്യനുസാരേണ യിരൂശാലമം ഗത്വാ
43 ೪೩ ಹಬ್ಬದ ದಿನಗಳನ್ನು ಮುಗಿಸಿಕೊಂಡು ಹಿಂತಿರುಗಿ ಬರುವಾಗ ಬಾಲಕನಾದ ಯೇಸು ಯೆರೂಸಲೇಮಿನಲ್ಲಿಯೇ ಉಳಿದುಕೊಂಡನು. ಅವನ ತಂದೆತಾಯಿಗಳು ಅದನ್ನು ತಿಳಿಯದೆ,
പാർവ്വണം സമ്പാദ്യ പുനരപി വ്യാഘുയ്യ യാതഃ കിന്തു യീശുർബാലകോ യിരൂശാലമി തിഷ്ഠതി| യൂഷഫ് തന്മാതാ ച തദ് അവിദിത്വാ
44 ೪೪ ಆತನು ಯಾತ್ರಿಕರ ಗುಂಪಿನಲ್ಲಿ ಸೇರಿರಬಹುದೆಂದು ಊಹಿಸಿ, ಒಂದು ದಿನದ ಪ್ರಯಾಣ ಮಾಡಿಬಿಟ್ಟಿದ್ದರು. ನಂತರ ಬಂಧುಬಾಂಧವರಲ್ಲಿಯೂ ಪರಿಚಿತರಲ್ಲಿಯೂ ಹುಡುಕಾಡಿ,
സ സങ്ഗിഭിഃ സഹ വിദ്യത ഏതച്ച ബുദ്വ്വാ ദിനൈകഗമ്യമാർഗം ജഗ്മതുഃ| കിന്തു ശേഷേ ജ്ഞാതിബന്ധൂനാം സമീപേ മൃഗയിത്വാ തദുദ്ദേശമപ്രാപ്യ
45 ೪೫ ಆತನನ್ನು ಕಾಣದಿದ್ದಾಗ ತಿರುಗಿ ಯೆರೂಸಲೇಮಿಗೆ ಹುಡುಕಿಕೊಂಡು ಹೋದರು.
തൗ പുനരപി യിരൂശാലമമ് പരാവൃത്യാഗത്യ തം മൃഗയാഞ്ചക്രതുഃ|
46 ೪೬ ಮೂರು ದಿನದ ಮೇಲೆ ಆತನನ್ನು ದೇವಾಲಯದಲ್ಲಿ ಕಂಡರು. ಆತನು ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆಮಾಡುತ್ತಾ ಇದ್ದನು.
അഥ ദിനത്രയാത് പരം പണ്ഡിതാനാം മധ്യേ തേഷാം കഥാഃ ശൃണ്വൻ തത്ത്വം പൃച്ഛംശ്ച മന്ദിരേ സമുപവിഷ്ടഃ സ താഭ്യാം ദൃഷ്ടഃ|
47 ೪೭ ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರು ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು.
തദാ തസ്യ ബുദ്ധ്യാ പ്രത്യുത്തരൈശ്ച സർവ്വേ ശ്രോതാരോ വിസ്മയമാപദ്യന്തേ|
48 ೪೮ ತಂದೆತಾಯಿಗಳು ಆತನನ್ನು ಕಂಡು ಬೆರಗಾದರು; ಮತ್ತು ಆತನ ತಾಯಿಯು, “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ” ಎಂದು ಹೇಳಲು,
താദൃശം ദൃഷ്ട്വാ തസ്യ ജനകോ ജനനീ ച ചമച്ചക്രതുഃ കിഞ്ച തസ്യ മാതാ തമവദത്, ഹേ പുത്ര, കഥമാവാം പ്രതീത്ഥം സമാചരസ്ത്വമ്? പശ്യ തവ പിതാഹഞ്ച ശോകാകുലൗ സന്തൗ ത്വാമന്വിച്ഛാവഃ സ്മ|
49 ೪೯ ಆತನು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದವನು ಎಂದು ನಿಮಗೆ ತಿಳಿಯಲಿಲ್ಲವೇ?” ಎಂದು ಕೇಳಿದನು.
തതഃ സോവദത് കുതോ മാമ് അന്വൈച്ഛതം? പിതുർഗൃഹേ മയാ സ്ഥാതവ്യമ് ഏതത് കിം യുവാഭ്യാം ന ജ്ഞായതേ?
50 ೫೦ ಆದರೆ ಆತನು ಹೇಳಿದ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ.
കിന്തു തൗ തസ്യൈതദ്വാക്യസ്യ താത്പര്യ്യം ബോദ്ധും നാശക്നുതാം|
51 ೫೧ ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿಯು ಈ ಸಂಗತಿಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಳು.
തതഃ പരം സ താഭ്യാം സഹ നാസരതം ഗത്വാ തയോർവശീഭൂതസ്തസ്ഥൗ കിന്തു സർവ്വാ ഏതാഃ കഥാസ്തസ്യ മാതാ മനസി സ്ഥാപയാമാസ|
52 ೫೨ ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆಯುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ಕೃಪೆಯು ಆತನ ಮೇಲೆ ಹೆಚ್ಚಾಗುತ್ತಾ ಬಂದಿತು.
അഥ യീശോ ർബുദ്ധിഃ ശരീരഞ്ച തഥാ തസ്മിൻ ഈശ്വരസ്യ മാനവാനാഞ്ചാനുഗ്രഹോ വർദ്ധിതുമ് ആരേഭേ|