< ಲೂಕನು 18 >
1 ೧ ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬುದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.
Linu cha wambe nguli kuvali muva swanelela ku lapelela mi kanzi va zwafi ku wamba vulyo,
2 ೨ ಅದೇನೆಂದರೆ, “ಒಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು.
kuvena muleneñi u mwi mukuvena, Mwatuli ya sana vali kutiye Ireeza ni kusa kuteka vantu.
3 ೩ ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು, ‘ನ್ಯಾಯವಿಚಾರಣೆಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು’ ಎಂದು ಕೇಳಿಕೊಳ್ಳುತ್ತಿದ್ದಳು.
Linu ku vene Imbelwa mu muleneñi mi i vali kwizanga, nati, unituse ni wane ku atulelwa kozo ini zeka naye.'
4 ೪ ಅವನು ಸ್ವಲ್ಪ ಕಾಲ ಮನಸ್ಸುಕೊಡಲಿಲ್ಲ. ಆ ಮೇಲೆ ಅವನು, ‘ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯ ಮಾಡುವವನಲ್ಲ,
Chenako nde kana va tavele ku mutusa, linu chenako zana chati, kwali iye mwine, nga kuti kani tiiyi Ireeza nanga ku kuteka vantu.
5 ೫ ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುತ್ತಿರುವುದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು. ಇಲ್ಲವಾದರೆ ಈಕೆ ಪದೇಪದೇ ಬಂದು ನನ್ನನ್ನು ದಣಿಸಾಳು’ ಎಂದು ತನ್ನೊಳಗೆ ಅಂದುಕೊಂಡನು.”
Linu uzu mukulwakazi we Mbelwa yoni kateze. Linu, kani mutuse ku nkatulo, ili kuti kanzi ani katazi kwi zanga kwa ngu.”'
6 ೬ ಕರ್ತನು ಈ ಸಾಮ್ಯವನ್ನು ಹೇಳಿದ ಮೇಲೆ, “ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ.
Linu Ireeza chati, Muzuwe, mutekeleze ku mu atuli za wamba.
7 ೭ ದೇವರು ಆರಿಸಿಕೊಂಡವರು ಆತನಿಗೆ ಹಗಲುರಾತ್ರಿ ಮೊರೆಯಿಡುವಲ್ಲಿ, ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯವನ್ನು ತೀರಿಸದೆ ಇರುವನೇ?
Linu Ireeza kete ashemuve va ketetwe, avo va lilila kwali masiku ni musihali? Na, kana mwa liyehe ku vali?
8 ೮ ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ. ಹೀಗಿದ್ದರೂ ಮನುಷ್ಯಕುಮಾರನು ಬರುವಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣಲು ಸಾಧ್ಯವೋ?” ಅಂದನು.
Ni mi lwilite kuti ka shemuve vonse cha kuli tahanela Ni hakuva vulyo Mwana a Mukwame cheza, Chavu saku sima, keze a wane ntumelo mu nkanda?”
9 ೯ ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ತಿರಸ್ಕಾರ ಮಾಡುವಂತಹ ಕೆಲವರಿಗೆ ಒಂದು ಸಾಮ್ಯವನ್ನು ಯೇಸು ಹೇಳಿದನು.
Linu haho cha wambe, nguli ku vamwi avo vava shushwezwa avo vene kuva va shiyeme imi vavali ku sheununa vamwi vantu,
10 ೧೦ ಅದೇನೆಂದರೆ, “ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು. ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕದವನು.
Va kwame vo vele, vava yendi mwi Tempele kuku lapela zu mwi avali Mufalisi zu mwi avali Mutelisi.
11 ೧೧ ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ, ‘ದೇವರೇ, ದರೋಡೆಕೋರರೂ, ಅನ್ಯಾಯಗಾರರೂ, ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ, ಆದುದರಿಂದ ನಿನಗೆ ಸ್ತೋತ್ರಮಾಡುತ್ತೇನೆ.
Mufalisi cha zima ni ku lapela manzwi aa kwali iye mwine, Ireeza, ni litumela kwako, ka kuti kani swani sina vantu vamwi vasa, va sa jolwele, mahule, kapa uzu Mutelisi.
12 ೧೨ ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಸಂಪಾದಿಸಿದ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ’ ಎಂದು ಪ್ರಾರ್ಥಿಸಿದನು.
Nili nyimanga zilyo tovele mwi nsunda, ni zwisanga vulishumi ku zonse zini wana.'
13 ೧೩ ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಆಗದೇ, ‘ದೇವರೇ, ಪಾಪಿಯಾದ ನನ್ನನ್ನು ಕರುಣಿಸು’ ಅಂದನು.
Kono Mutelisi, Na zimene vuta vule, na sa oli nanga ku nyamuna Menso akwe kwi ulu, na kwete kuli kava- kava achizuva, nati Ireeza, uni zuwile nkulo vutuku, ni tenda zivi.'
14 ೧೪ ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು. ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.
Niti kwako, uzu Mukwame ava voli kunzuvo yakwe na jolwezwe Kuhita mwakwe, cho kuti muntu yense yo likatula iye mwine ka vozwe haansi mi yo likokoveza iye mwine ka kakatulwe.”
15 ೧೫ ಕೆಲವರು ತಮ್ಮ ಕೂಸುಗಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು, ಶಿಷ್ಯರು ಕಂಡು ಅವರನ್ನು ಗದರಿಸಿದರು.
Vantu vava kuleta kwali ni va hwile vavo, ili kuti ava wonde, kono linu va rutwana nga vavona vulyo vava va kalimeli.
16 ೧೬ ಆದರೆ ಯೇಸು ಆ ಕೂಸುಗಳನ್ನು ತನ್ನ ಬಳಿಗೆ ಕರೆತರಿಸಿ, “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ದೇವರ ರಾಜ್ಯವು ಇಂಥವರದೇ.
Lino Jesu chava sumpila kwali, naati, “Muzuminine va hwile kukeza kwa ngu, mi kanzi mu vakanisi kwiza kwa ngu. Imi Muvuso wa Mulimu nji wavo vaswana navo.
17 ೧೭ ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಅಂದನು.
Chavu sakusima, niti kwenu, yense ya sate a amuhele muvuso we Ireeza sina munini, kete, enjile mumu vuso we Ireeza.”
18 ೧೮ ಒಬ್ಬ ಅಧಿಕಾರಿಯು ಬಂದು, “ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು?” ಎಂದು ಆತನನ್ನು ಕೇಳಲಾಗಿ, (aiōnios )
Muvusi zumwi cha mu vuza, nati, Muruti mulotu, moni tende vule kuti ni luwe muvuso we Ireeza?” (aiōnios )
19 ೧೯ ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.
Jesu chati kwali, uni sumpilazi Mulotu? kakwina muntu mulotu, kwande Ireeza yeke.
20 ೨೦ ‘ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.
Wizi milao ine kumi, kanzi uvuki, kanzi wihai, kanzi wi vii, kanzi uhi vupaki vwa mapa, ukuteke veso ni va nyoko.”
21 ೨೧ ಅದಕ್ಕವನು, “ನಾನು ಬಾಲ್ಯದಿಂದಲೂ ಇವೆಲ್ಲನ್ನು ಸರಿಯಾಗಿ ಪಾಲಿಸುತ್ತಾ ಬಂದಿದ್ದೇನೆ” ಎಂದು ಹೇಳಿದನು.
Muvusi chati, zonse zo chini va, zikuteki kuzwilila ku vu lombwana bwangu.”
22 ೨೨ ಯೇಸು ಅದನ್ನು ಕೇಳಿ ಅವನಿಗೆ, “ಇನ್ನೂ ನಿನಗೆ ಒಂದು ಕೊರತೆಯಿದೆ. ನಿನಗಿರುವುದನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು, ಪರಲೋಕದಲ್ಲಿ ನಿನಗೆ ಸಂಪತ್ತುಂಟಾಗುವುದು. ತರುವಾಯ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
Linu Jesu nga zuwa bulyo, cha muwambila nati kwina chonke chosena uswanela ku uza zako zonse zokwete ni ku yavelela va votana, mi ko wane chifuma cha kwi ulu, linu wize uni chilile.”
23 ೨೩ ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ದುಃಖಪಟ್ಟನು.
Linu Muhumanehi nga zuwa izi zintu. Chava yo swavite ahulu. Sina avali Muhumanehi ahulu.
24 ೨೪ ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ.
Linu, Jesu cha muvona kuti uswavite ahulu mi chati, ku kukutu vule kwavo, va humanehi kukwinjila mumu vuso we Ireeza!
25 ೨೫ ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ” ಅಂದನು.
Imi ku huva ku nkamele kuku njila mulinso lye ndonga, ku hita mu Humanehi kwinjila mumu vuso we Ireeza.'
26 ೨೬ ಈ ಮಾತನ್ನು ಕೇಳಿದವರು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು?” ಎಂದು ಕೇಳಲು,
Avo vava tekeleze chivati, linu nji vani vete va puluswe?
27 ೨೭ ಆತನು, “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ” ಅಂದನು.
“Jesu chee tava, nati zintu zisa woliki ku vantu zi woleka kwe Ireeza.”
28 ೨೮ ಆಗ ಪೇತ್ರನು, “ಇಗೋ, ನಾವು ನಮ್ಮ ನಮ್ಮ ಮನೆ ಮಾರುಗಳನ್ನು ಬಿಟ್ಟು ನಿನ್ನ ಹಿಂಬಾಲಿಸಿದೆವು” ಎಂದು ಹೇಳಲು,
Pitrosi chati, “linu, tuvasiyi zintu zonse zivali zetu ni kukwichilila.”
29 ೨೯ ಆತನು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯಕ್ಕಾಗಿ ಮನೆಯನ್ನಾಗಲಿ, ಹೆಂಡತಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಗಳನ್ನಾಗಲಿ, ಮಕ್ಕಳನ್ನಾಗಲಿ ತ್ಯಜಿಸುತ್ತಾನೋ,
Jesu cha wamba kuvali, Chavu sakusima, ni wamba kwenu niti kakwina kwenu umwina ya vasiyi inzuvo yakwe kapa Mwihyavwe, kapa vana vakwe, nchizyakwe, kapa vashemi vakwe, vakeni cha muvuso we Ireeza.
30 ೩೦ ಅವನಿಗೆ ಈ ಲೋಕದಲ್ಲಿ ಅನೇಕ ಪಾಲು ಹೆಚ್ಚಾಗಿ ಸಿಕ್ಕೇ ಸಿಕ್ಕುತ್ತವೇ. ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು” ಎಂದು ಹೇಳಿದನು. (aiōn , aiōnios )
Yasate atambule kuhitiliza muno'munkanda ni munkanda ikeza, muvuhalo vusa mani.” (aiōn , aiōnios )
31 ೩೧ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನ ವಿಷಯದಲ್ಲಿ ಪ್ರವಾದಿಗಳು ಬರೆದದ್ದೆಲ್ಲಾ ಅವನಲ್ಲಿ ನೆರವೇರುವುದು.
Nga a kunganya va rutwana vakwe vene kumi, ni vovele, chava wambila nati, “muvone, chitukaya kwa Jerusalema mi ni zintu zonse ziñoletwe ku vapolofita cha Mwana Mukwame kazi zuzilikizwe.
32 ೩೨ ಹೇಗೆಂದರೆ, ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು, ಅವರು ಅವನನ್ನು ಅಪಹಾಸ್ಯ ಮಾಡುವರು, ಬೈಯುವರು, ಉಗುಳುವರು,
Kakuti kahewe mu manza avo vasezi Ireeze. mi, kava musomoze ni ku musheununa kumunyandisa ni kumu swila mate.
33 ೩೩ ಕೊರಡೆಗಳಿಂದ ಹೊಡೆಯುವರು, ಕೊಲ್ಲುವರು ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.
Chiva mushimeha ni kumwi haya mi mwi zuva lyavu tatu ka vuke hape.”
34 ೩೪ ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಆತನು ಏನು ಹೇಳುತ್ತಿದ್ದಾನೆಂದು ಅವರಿಗೆ ತಿಳಿಯಲಿಲ್ಲ.
Kena vava zuwisisi chimwi kwezi zintu mi aya manzwi ava humbitwe kuvali, mi kana vava zuwi mwi zintu zava wambi.
35 ೩೫ ಆತನು ಯೆರಿಕೋವಿನ ಸಮೀಪಕ್ಕೆ ಬಂದಾಗ ದಾರಿಯ ಬಳಿಯಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದ ಒಬ್ಬ ಕುರುಡನು,
Ku vezi vulyo sina Jesu chava atumele munzi wa Jeriko, mukwame wa chivofu ave kele hembali ne kululu na vu kumbila kuvantu,
36 ೩೬ ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು.
cha zuwa inyangela ni hitite, cha vuza ziva ku tendahala,
37 ೩೭ ಅವರು ಅವನಿಗೆ, ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗ,
chiva muwambila kuti nji Jesu wa Nazareta yo hitite he mbali.
38 ೩೮ ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಂಡನು.
Linu, Mukwame wa chivofu cha, huweleza, nati, “Jésu Mwana Davida, uni fwile nkumbu.”
39 ೩೯ ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಮತ್ತಷ್ಟು ಬೇಡಿಕೊಂಡನು.
vamwi vavali kwenda avusu, chi va mu kalimela Mukwame wa chivofu, ku muwambila kuti atontole. Kono nja huweleza kuhitiliza, Mwana Davida, uni fwile nkumbu.”
40 ೪೦ ಆಗ ಯೇಸು ನಿಂತು, ಅವನನ್ನು ತನ್ನ ಬಳಿಗೆ ಕರೆತರುವುದಕ್ಕೆ ಅಪ್ಪಣೆಕೊಟ್ಟನು. ಅವನು ಹತ್ತಿರಕ್ಕೆ ಬಂದಾಗ,
Jesu cha zimana ni kulaela vakwame kuti vamu lete kwali. Linu mukwame wa chivofu avena hafwi, Jesu cha muvuza,
41 ೪೧ ಆತನು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?” ಎಂದು ಕೇಳಲು, ಅವನು, “ನನಗೆ ಕಣ್ಣುಕಾಣುವಂತೆ ಮಾಡು ಕರ್ತನೇ” ಅಂದನು.
“Usaka kuti ni kutendele nzi?” chati, “Simwine nisaka ku hewa ku vona.”
42 ೪೨ ಯೇಸು ಅವನಿಗೆ, “ನಿನಗೆ ಕಣ್ಣುಕಾಣುವಂತಾಗಲಿ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ” ಎಂದು ಹೇಳಿದನು.
Jesu chati kwali, Linu tambule ku vona. Intumelo yako chi ya kuhoza.”
43 ೪೩ ತಕ್ಷಣವೇ ಅವನಿಗೆ ಕಣ್ಣು ಕಾಣಿಸಿದವು, ಅವನು ದೇವರನ್ನು ಕೊಂಡಾಡುತ್ತಾ ಯೇಸುವಿನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.
Chenako imwina chata mbula ku vona mi cha mwi chilila, nakavu lumbeke Ireeza. Ha kuvonwe zi, Vantu vonse chiva tanga kulumbeka Ireeza.