< ಲೂಕನು 12 >
1 ೧ ಇಷ್ಟರಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿಯುವಷ್ಟು ಕೂಡಿಬಂದಿರಲಾಗಿ ಯೇಸು ಮೊದಲು ತನ್ನ ಶಿಷ್ಯರಿಗೆ ಉಪದೇಶಿಸಿ ಹೇಳಿದ್ದೇನೆಂದರೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ, ಅಂದರೆ ಅವರ ಕಪಟತನದ ವಿಷಯದಲ್ಲಿ ಜಾಗರೂಕರಾಗಿರಿ.
तदुओ की जेबे ह्जारा री पीड़ लगी गी, एथो तक कि एकी-दूजे पाँदे पड़ने लगी रे थे। तेबे यीशु सबी ते पईले आपणे चेलेया खे बोलणे लगे, “फरीसिये रे कपटी सजेड़े ते चौकस रणा।
2 ೨ ಮರೆಯಾಗಿರುವಂಥದ್ದು ವ್ಯಕ್ತವಾಗುವುದು. ರಹಸ್ಯವಾಗಿರುವಂಥದ್ದು ಪ್ರಕಟವಾಗುವುದು.
कुछ बी टकेया रा निए, जो खोलेया नि जाणा और ना कुछ छिपेया राए, जो जाणी नि सकदे।
3 ೩ ಹೀಗಿರುವುದರಿಂದ ನೀವು ಕತ್ತಲಲ್ಲಿ ಹೇಳಿದಂಥದು ಬೆಳಕಿನಲ್ಲಿ ಕೇಳಲಾಗುವುದು. ಮತ್ತು ನೀವು ಕೋಣೆಗಳೊಳಗೆ ಪಿಸುಗುಟ್ಟಿದ್ದು ಮಾಳಿಗೆಗಳ ಮೇಲೆ ಸಾರಲಾಗುವುದು.
तेबेई तो, जो कुछ तुसे न्हेरे रे बोली राखेया, से सामणे सुणेया जाणा और जो तुसे कोठरिया रे आपणे कानो रे खसफस करी की बोली राखेया, से छतो पाँदो ते बोलेया करो।
4 ೪ “ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ, ದೇಹವನ್ನು ಕೊಲ್ಲುವವರಿಗೆ ಭಯಪಡಬೇಡಿ. ಕೊಂದು ಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.
“आऊँ तुसा खे, जो मेरे दोस्त ए, बोलूँआ कि जो शरीरो खे काओए, पर तीजी ते पीछे ओर कुछ नि करी सकदे, तिना ते नि डरो।
5 ೫ ಆದರೆ ನೀವು ಯಾರಿಗೆ ಭಯಪಡಬೇಕೆಂದು ತೋರಿಸುತ್ತೇನೆ, ಕೇಳಿ. ಸತ್ತ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳಾತನಿಗೆ ಹೆದರಬೇಕು. ಹೌದು ಆತನಿಗೇ ಭಯಪಡಬೇಕೆಂದು ನಿಮಗೆ ಒತ್ತಿಹೇಳುತ್ತೇನೆ. (Geenna )
आऊँ तुसा खे बताऊँआ कि केस ते डरना चाईयो, घात करने ते बाद, जेसखे नरको रे सेटणे रा अक्क ए, तेसते ई डरो; बल्कि आऊँ तुसा खे बोलूँआ कि तेसते ई डरो। (Geenna )
6 ೬ ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲ? ಆದಾಗ್ಯೂ ಅವುಗಳಲ್ಲಿ ಒಂದನ್ನೂ ದೇವರು ಮರೆತುಹೋಗುವುದಿಲ್ಲ.
दो पैसे रिया पाँज चिड़िया बिकोईया? तेबे बी परमेशर तिना बीचा ते एकी खे पनि पुलदा।
7 ೭ ಅಷ್ಟುಮಾತ್ರವಲ್ಲ, ನಿಮ್ಮ ತಲೆ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ, ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.
बल्कि तुसा रे सिरो रे बाल़ बी सारे गिणे रे ए, तो डरो नि, तुसे बऊत चिड़िया ते बढ़ी की ए।
8 ೮ “ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಮನುಷ್ಯಕುಮಾರನು ಸಹ ಆ ವ್ಯಕ್ತಿಯನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು.
“आऊँ तुसा खे बोलूँआ कि जो कोई मांणूआ सामणे माखे मानी लओगा, तेबे से बी मां माणूं रे पुत्रो परमेशरो रे स्वर्गदूता सामणे मानी लणा।
9 ೯ ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು.
पर जो मांणूआ सामणे माखे ना करो, तेसखे परमेशरो रे स्वर्गदूता सामणे ना ऊणी।
10 ೧೦ ಮನುಷ್ಯಕುಮಾರನ ವಿರುದ್ಧ ಮಾತನಾಡುವ ಪ್ರತಿಯೊಬ್ಬನಿಗೆ ಕ್ಷಮಾಪಣೆಯಾಗುವುದು. ಆದರೆ ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ.
जो कोई माणूं रे पुत्रो रे खलाफ कोई गल्ल बोलोगा, तेसरा से अपराध माफ ऊई जाणा, पर जो कोई पवित्र आत्मा री निन्दा करोगा, तेसरा से अपराध माफ नि ऊणा
11 ೧೧ ಅವರು ನಿಮ್ಮನ್ನು ಸಭಾಮಂದಿರಗಳಿಗೂ, ಸಭಾಮಂದಿರಗಳ ಅಧಿಕಾರಿಗಳ ಎದುರಿಗೂ, ಅಧಿಪತಿಗಳ ಎದುರಿಗೂ, ಹಿಡಿದುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರ ಕೊಡಬೇಕು? ಏನು ಹೇಳಬೇಕು? ಎಂದು ಚಿಂತೆಮಾಡಬೇಡಿರಿ.
जेबे लोक तुसा खे प्रार्थना रे कअरो रे, हाकिम और अधिकारिए सामणे लयी जाओगे, तो चिन्ता नि करना कि आसे किंयाँ और क्या जवाब देईए।
12 ೧೨ ಏಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು” ಅಂದನು.
कऊँकि पवित्र आत्मा तुसा गे तेसी बखते बताई देणा कि क्या बोलणा चाईयो।”
13 ೧೩ ಆಗ ಜನರಲ್ಲಿ ಒಬ್ಬನು, “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡುವಂತೆ ನನ್ನ ಅಣ್ಣನಿಗೆ ಹೇಳು” ಎಂದು ಯೇಸುವನ್ನು ಕೇಳಿಕೊಳ್ಳಲು,
तेबे पीड़ा बीचा ते एकी जणे यीशुए खे बोलेया, “ओ गुरू! मेरे पाईयो खे बोलो कि पिते री सम्पति माखे बांडी दे।”
14 ೧೪ ಅದಕ್ಕೆ ಯೇಸು, “ಮನುಷ್ಯನೇ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು?” ಎಂದು ಅವನನ್ನು ಕೇಳಿ,
यीशुए तेसखे बोलेया, “ओ मांणू! आऊँ किने तुसा रा न्यायी और बांडणे वाल़ा बणाई राखेया?”
15 ೧೫ ಜನರಿಗೆ, “ಎಲ್ಲಾ ದುರಾಶೆಗಳಿಂದಲು ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ” ಎಂದು ಹೇಳಿ, ಒಂದು ಸಾಮ್ಯವನ್ನು ಹೇಳಿದನು.
तेबे तिने तिना खे बोलेया, “चौकस रओ; और हर प्रकारा रे लोबो ते आपू खे बचाई की राखो, कऊँकि केसी री बी जिन्दगी, तेसरी सम्पतिया ते बड़ी नि ऊँदी।”
16 ೧೬ ಅದೇನೆಂದರೆ “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆ ಬೆಳೆಯಿತು.
यीशुए तिना खे एक उदारण बोलेया, “एक धनवानो री जमीना रे मुखती फसल ऊई।
17 ೧೭ ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವುದಕ್ಕೆ ನನಗೆ ಸ್ಥಳವಿಲ್ಲವಲ್ಲಾ?’ ಎಂದು ಆಲೋಚಿಸಿ,
तेबे से आपणे मनो रे सोचणे लगेया कि आऊँ क्या करुँ? कऊँकि मांगे तो जगा निए, जेती आपणी फसल बगैरा राखूँ।
18 ೧೮ ‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು,
तेबे तिने सोचेया कि मां आपणे पण्डार तोड़ी की ओर बड़े पण्डार बनाणे और तेती मां आपणी सारी फसल और सम्पति राखणी
19 ೧೯ ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.
और तिजी ते बाद आपणे प्राणो खे बोलणा कि ओ प्राण! ताखे कई साला तक मुखती सम्पति राखी ती री; चैन कर, खा-पी सुखो साथे रओ।
20 ೨೦ “ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.
पर परमेशरे तेसखे बोलेया, ‘ओ मूर्ख! आज की राती ई तेरी मौत ऊई जाणी, तेबे जो कुछ तैं कट्ठा करी राखेया, से केसरा ऊणा?’
21 ೨೧ ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ” ಅಂದನು.
एड़ा ई से मांणू बीए, जो आपू खे पैसा कट्ठा करी राखेया, पर परमेशरो री नजरा रे अमीर निए।”
22 ೨೨ ಇದಲ್ಲದೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟ ಮಾಡಬೇಕು? ದೇಹ ರಕ್ಷಣೆಗೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬುದಾಗಿ ನಿಮಗೆ ಹೇಳುತ್ತೇನೆ.
तेबे यीशुए आपणे चेलेया खे बोलेया, “तेबेई तो आऊँ तुसा खे बोलूँआ कि आपणी जिन्दगिया रे बारे रे ये चिन्ता नि करो कि आसे क्या खाऊँगे, ना आपणे शरीरो रे बारे रे कि क्या पईनुँगे।
23 ೨೩ ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವು ಮೇಲಾದದು.
कऊँकि रोटिया ते जिन्दगी और टालेया ते शरीर केथी जादा किमती ए।
24 ೨೪ ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.
कावा पाँदे त्यान देओ, सेयो ना बांदे, ना बाडदे, ना तिना रे पण्डार ए और ना पेढ़ू ऊँदा, तेबे बी परमेशर तिना खे पाल़ोआ, तुसा री कीमत पंछिया ते केथी बढ़ी की ए।
25 ೨೫ ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಒಂದು ಮೊಳದಷ್ಟು ಹೆಚ್ಚಿಸಲುನಿಮ್ಮಲ್ಲಿ ಯಾರಿಂದಾದೀತು?
तुसा बीचा ते एड़ा कुण ए, जो चिन्ता करी की आपणिया जिन्दगिया री एक कअड़ी बी बढ़ाई सकोआ?
26 ೨೬ ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಆಸಕ್ತರಾಗಿರಲಾಗಿ ಉಳಿದ ವಿಷಯದಲ್ಲಿ ಚಿಂತೆಮಾಡುವುದೇಕೆ?
तेबेई तो जे तुसे सबी ते छोटा काम पनि करी सकदे, तो ओरी बड़ी गल्ला खे चिन्ता करी क्या फाईदा?
27 ೨೭ ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಗಮನಿಸಿ ನೋಡಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಅಡವಿಯ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪುಗಳನ್ನು ಧರಿಸಲಿಲ್ಲವೆಂದು ನಿಮಗೆ ಹೇಳುತ್ತೇನೆ.
बांके जंगल़ी फूला पाँदे त्यान करो कि सेयो किंयाँ बड़ोए, सेयो ना तो मईणत करदे, ना आपू खे टाले बणाओए, तेबे बी आऊँ तुसा खे बोलूँआ कि राजा सुलेमान बी आपणे सारे एशो-आरामो रे बी, तिना बीचा ते केसी एकी जेड़े बी टाले नि पईने रा था।
28 ೨೮ ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.
तेबेई तो जेबे परमेशर मैदानो रे काओ खे, जो आज आए, और काल आगी बीचे फूकी देणा, तो जो तिदे बी एड़े बांके फूल खिलाओआ, तो ओ कम विश्वास करने वाल़ेयो! तुसा खे तेस इना ते बढ़ी की बांके टाले कऊँ नि पनयाणे?
29 ೨೯ ಏನು ಊಟ ಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಟ್ಟು ಚಿಂತಿಸಬೇಡಿರಿ.
और तुसे एसा गल्ला री टोल़ा रे नि रओ कि आसे क्या खाऊँगे, क्या पिऊँगे और ना शक करो।
30 ೩೦ ಇವೆಲ್ಲವುಗಳ ಕುರಿತು ಇಹಲೋಕದ ಜನಗಳು ಅಲೆದಾಡುತ್ತಾರೆ. ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.
कऊँकि दुनिया री जातिया इना सबी चीजा री टोल़ा रे रओईया और तुसा रा पिता जाणोआ कि तुसा खे इना सबी चीजा री जरूरत ए।
31 ೩೧ ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ. ಇದರ ಕೂಡ ಅವೂ ನಿಮಗೆ ದೊರಕುವವು.
पर परमेशरो रे राज्य री टोल़ा रे रओ, तो यो सब चीजा बी तुसा खे मिली जाणिया।
32 ೩೨ ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
“ओ छोटे चूण्ड, डर नि; कऊँकि तुसा रे पिता परमेशरो खे ये अच्छा लगेया कि तुसा खे राज्य देऊँ।
33 ೩೩ ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.
आपणी सम्पति बेची की दान करी देओ और आपू खे एड़े बटुए बणाओ, जो पुराणे नि ऊँदे, मतलब-स्वर्गो रे एड़ा धन कट्ठा करो, जो कटदा नि और तीजी रे नेड़े चोर नि जांदा और कीड़ा नि खांदा।
34 ೩೪ ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುತ್ತದಷ್ಟೆ.
कऊँकि जेती तुसा रा धन ए, तेती तुसा रा मन बी लगेया रा रणा।
35 ೩೫ “ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ.
“तुसा परमेशरो रा काम करने खे सदा त्यार रओ और मसीह रे आऊणे रे बखते और तेसखे ग्रहण करने खे एड़े त्यार रओ जेड़े दिऊए बल़दे दिऊए रओ।
36 ೩೬ ನೀವಂತೂ ತಮ್ಮ ಯಜಮಾನನು ಯಾವಾಗ ಮದುವೆ ಔತಣ ಮುಗಿಸಿಕೊಂಡು ಹಿಂತಿರುಗುವನೋ ಎಂದು ಕಾಯುವಂಥ ಮತ್ತು ಆತನು ತಟ್ಟಿದ ಕೂಡಲೆ ಬಾಗಿಲನ್ನು ತೆರೆಯಲು ಸಿದ್ಧರಾಗಿರುವಂಥ ಆಳುಗಳಂತೆ ಇರಿ.
मेरे वापस आऊणे खे तिना दासा जेड़े त्यार रओ, जो आपणे स्वामिए खे न्याल़दे रओए कि से ब्याओ ते कदी जे आऊणा कि जेबे से आओ और द्वार खटखटाओ तो तेसखे फटाफट खोलेया जाओ।
37 ೩೭ ಯಜಮಾನನು ಬಂದು ಯಾವ ಆಳು ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಏಕೆಂದರೆ, ಯಜಮಾನನೇ ನಡುಕಟ್ಟಿಕೊಂಡು ಆ ಆಳುಗಳನ್ನು ಊಟಕ್ಕೆ ಕುಳ್ಳಿರಿಸಿ, ಹತ್ತಿರಕ್ಕೆ ಬಂದು ಅವರಿಗೆ ಊಟವನ್ನು ಬಡಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
धन्य ए सेयो दास, जिना खे स्वामी आयी की जागदे ऊए देखोए, आऊँ तुसा खे सच बोलूँआ कि स्वामिए एड़े टाले पईनणे जेड़े दास पईनोए और तेस दासा खे बठयाल़ी की से रोटी खाणे खे देणी जो तिने ब्याओ ते प्रिया ल्याई राखेया।
38 ೩೮ ಯಜಮಾನನು ಬರುವಾಗ ನಡು ರಾತ್ರಿಯಾಗಿರಲಿ, ಮುಂಜಾವವಾಗಿರಲಿ, ಆತನು ಬರುವಾಗ ಎಚ್ಚರವಾಗಿ ಕಾಣಿಸಿಕೊಳ್ಳುವ ಆಳುಗಳು ಧನ್ಯರು.
जे सेयो तिना खे राती रे दूजे या तीजे पईरे आयी की जागदा ऊआ पाओ, तो सेयो दास धन्य ए।
39 ೩೯ ಕಳ್ಳನು ಬರುವ ಗಳಿಗೆಯು ಮನೆ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು, ತನ್ನ ಮನೆಗೆ ಕನ್ನಾ ಹಾಕಗೊಡಿಸುತ್ತಿರಲಿಲ್ಲವೆಂದು ತಿಳಿದುಕೊಳ್ಳಿರಿ.
पर तुसे जाणी लओ कि जे कअरो रा मालक जाणदा कि चोर कदी जे आऊणा, तो जागदा रंदा और आपणे कअरे चोरी नि ऊणे देंदा।
40 ೪೦ ಅದುದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಅಂದನು.
तेबेई तुसे बी त्यार रओ, कऊँकि जेसा कअड़िया रे बारे रे तुसे सोचदे पनि, तेसी कअड़िया आँऊ माणूं रा पुत्र आयी जाणा।”
41 ೪೧ ಆಗ ಪೇತ್ರನು, “ಕರ್ತನೇ, ನೀನು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತಿದ್ದೀಯೋ ಅಥವಾ ಎಲ್ಲರಿಗೋ?” ಎಂದು ಕೇಳಲು,
तेबे पतरसे बोलेया, “ओ प्रभु! क्या तुसे ये उदारण आसा खेई बोलणे लगी रे या सबी खे।”
42 ೪೨ ಕರ್ತನು ಹೇಳಿದ್ದೇನಂದರೆ, “ಹೊತ್ತು ಹೊತ್ತಿಗೆ ಅವಶ್ಯಕತೆಗೆ ಬೇಕಾದದ್ದನ್ನು ಅಳೆದು ಕೊಡುವುದಕ್ಕಾಗಿ ಯಜಮಾನನು ತನ್ನ ಆಳುಗಳ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆದ ಮೇಲ್ವಿಚಾರಕ ಯಾರು?
यीशुए बोलेया, “एक विश्वासो जोगा और अक्लमंद पण्डारी एड़ा ए: जेसखे कअरो रा मालक दूजे दासा पाँदे निगरानी और बखतो पाँदे रोटी देणे खे जिम्मेवारी देओआ। तिजी ते बाद से परदेशो खे चली जाओआ।
43 ೪೩ ಯಜಮಾನನು ಬಂದು ಯಾವ ಆಳು ಹೀಗೆ ಮಾಡುವುದನ್ನು ಕಾಣುವನೋ ಆ ಆಳು ಧನ್ಯನು.
धन्य ए से दास, जेसखे तेसरा मालक आयी की एड़ा ई करदा ऊआ पाओ।
44 ೪೪ ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯಾಗಿ ನೇಮಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
आऊँ तुसा खे सच लगी रा बोलणे कि तेस से आपणी सारी सम्पतिया पाँदे अक्कदार ठराणा।
45 ೪೫ ಆದರೆ ಆ ಆಳು, ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವುದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ,
पर जे से दास सोचणे लगो कि मेरा मालक आऊणे रे देर करने लगी रा और दास-दासिया खे कुटणे-फानणे और खाणे-पीणे और पियक्कड़ ऊणे लगो
46 ೪೬ ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾದ ಚಿತ್ರಹಿಂಸೆಗೂ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು.
तो तेस दासो रा मालक एड़े दिने आऊणा, जेबे से तेसखे न्याल़दा ई ना ओ और एड़िया कअड़िया दे, जेतेखे से नि जाणदा ओ। तेबे तेस तेसखे बऊत दण्ड देणा और तेसरा इस्सा कपटिया साथे ठराणा।
47 ೪೭ ತನ್ನ ಯಜಮಾನನ ಇಷ್ಟಾರ್ಥವನ್ನು ಆಳು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಕಠಿಣವಾದ ಶಿಕ್ಷೆಗೆ ಗುರಿಯಾಗುವನು.
से दास, जो आपणे मालको री इच्छा जाणोआ पर त्यार नि रया और ना तेसरी इच्छा रे मुताबिक चलेया, तो तेस बऊत मार खाणी।
48 ೪೮ ತಿಳಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳಲ್ಪಡುವುದು.
पर जो ना जाणी की मार खाणे जोगा काम करोगा, तेस थोड़ी मार खाणी, तेबेई तो जेसखे बऊत देई राखेया, तेसते बऊत मांगेया जाणा और जेसगे बऊत सम्बाल़ी राखेया, तेसते बऊत लया जाणा।
49 ೪೯ “ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕಬೇಕೆಂದು ಬಂದೆನು. ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ.
“आऊँ तरतिया पाँदे आग लगाणे आयी रा और ये चाऊँआ कि एबु ई सुलगी जांदी।
50 ೫೦ ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು, ಅದು ನೆರವೇರುವ ತನಕ ನನಗೆ ನೆಮ್ಮದಿಯಿಲ್ಲ.
मां तो एक दुःखदाई बपतिस्मा लणा ए और जदुओ तक से नि ऊई लो, तदुओ तक आऊँ केड़िया दशा रे रणा?
51 ೫೧ ನಾನು ಭೂಮಿಯಲ್ಲಿ ಸಮಾಧಾನವನ್ನುಂಟು ಮಾಡುವುದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭಿನ್ನಭೇದಗಳನ್ನು ಉಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ.
क्या तुसे एड़ा समजोए कि आऊँ तरतिया पाँदे मेल-जोल करने आयी रा? आऊँ बोलूँआ कि ना, बल्कि लग करने आयी रा।
52 ೫೨ ಹೇಗೆಂದರೆ, ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರೂ ಏಳುವರು.
कऊँकि आजो ते एकी कअरे पाँज जणे बिरोदी रणे। तीना, दूँईं ते और दूँईं तीना ते।
53 ೫೩ ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇದವುಳ್ಳವರಾಗಿ ವಿಂಗಡಿಸಿ ಹೋಗುವರು” ಅಂದನು.
पिते पाऊए ते और पाऊए, पिते ते, माया बेटिया ते और बेटिया माया ते, सासुआ बऊआ ते और बऊआ सासुआ ते बिरोद राखणा।”
54 ೫೪ ಇದಲ್ಲದೆ ಯೇಸು ಜನಸಮೂಹಕ್ಕೆ ಹೇಳಿದ್ದೇನಂದರೆ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ, ಹಾಗೆಯೇ ಆಗುತ್ತದೆ.
यीशुए पीड़ा खे बी बोलेया, “जेबे बादल़ो खे पच्छमा ते उड़दे ऊए देखोए, तेबे फटाफट बोलोए कि बर्खा ऊणी और एड़ा ई ओआ।
55 ೫೫ ದಕ್ಷಿಣ ದಿಕ್ಕಿನಿಂದ ಗಾಳಿ ಬೀಸಲಾಗಿ ಸೆಕೆ ಹುಟ್ಟುತ್ತದೆ ಅನ್ನುತ್ತೀರಿ. ಅದೂ ಹಾಗೆಯೇ ಆಗುತ್ತದೆ.
और जेबे अवा दक्खणो खे चलदी ऊई देखोए, तो बोलोए कि लू चलणी और एड़ा ई ओआ।
56 ೫೬ ಕಪಟಿಗಳೇ, ನೀವು ಭೂಮ್ಯಾಕಾಶಗಳ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳಬಲ್ಲಿರಿ, ಆದರೆ ಪ್ರಸ್ತುತ ಕಾಲವನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದದೆ ಹೋಗಿದ್ದಿರಾ?
ओ कपटियो! तुसे तरती और सर्गो रे रूप-रंगो रे भेद करी सकोए, पर एस जुगो रे बारे रे कऊँ भेद करना नि जाणदे?
57 ೫೭ “ಇದಲ್ಲದೆ ನ್ಯಾಯವಾದದ್ದು ಯಾವುದೆಂದು ನೀವೇ ಯಾಕೆ ತೀರ್ಮಾನ ಮಾಡಿಕೊಳ್ಳುವುದಿಲ್ಲ?
“तुसे आपू ई न्याय कऊँ नि करी लंदे कि अच्छा क्या ए?
58 ೫೮ ನೀನು ಪ್ರತಿವಾದಿಯ ಸಂಗಡ ನ್ಯಾಯಾಧಿಪತಿಯ ಬಳಿಗೆ ಹೋಗುತ್ತಿರುವಾಗ ದಾರಿಯಲ್ಲಿಯೇ ಜಗಳವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಎಳಕೊಂಡು ಹೋದಾನು. ನ್ಯಾಯಾಧಿಪತಿಯು ನಿನ್ನನ್ನು ಸೆರೆ ಯಜಮಾನನ ವಶಕ್ಕೆ ಒಪ್ಪಿಸಾನು. ಸೆರೆಯಜಮಾನನು ನಿನ್ನನ್ನು ಸೆರೆಮನೆಯಲ್ಲಿ ಹಾಕಿಯಾನು.
जेबे तूँ आपणे दुश्मणो साथे हाकिमो गे जाणे लगी रा, तो बाटा रेई तेसते छुटणे री कोशिश करी लो, एड़ा नि ओ कि से ताखे न्यायियो गे खिंजी की ल्याओ और न्यायी ताखे सिपाईया गे देयो और सिपाई ताखे जेला रे पाई देओ।
59 ೫೯ ನೀನು ಕೊನೆಯ ಕಾಸನ್ನು ಕೊಟ್ಟು ತೀರಿಸುವವರೆಗೂ ಅಲ್ಲಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲವೆಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಅಂದನು.
आऊँ तुसा खे बोलूँआ कि जदुओ तक तुसे दमड़ी-दमड़ी (पाई-पाई) नि देई देओगे, तदुओ तक तेथा ते छुटणा नि।”