< ಯಾಜಕಕಾಂಡ 9 >

1 ಎಂಟನೆಯ ದಿನದಲ್ಲಿ ಮೋಶೆ ಆರೋನನನ್ನು, ಅವನ ಮಕ್ಕಳನ್ನು ಮತ್ತು ಇಸ್ರಾಯೇಲರ ಹಿರಿಯರನ್ನು ಕರೆದನು.
و واقع شد که در روز هشتم، موسی هارون و پسرانش و مشایخ اسرائیل را خواند.۱
2 ಅವನು ಆರೋನನಿಗೆ, “ನೀನು ದೋಷಪರಿಹಾರ ಯಜ್ಞಕ್ಕಾಗಿ ಪೂರ್ಣಾಂಗವಾದ ಹೋರಿಕರುವನ್ನು ಮತ್ತು ಸರ್ವಾಂಗಹೋಮಕ್ಕಾಗಿ ಪೂರ್ಣಾಂಗವಾದ ಟಗರನ್ನು ನಿನಗೋಸ್ಕರ ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು.
وهارون را گفت: «گوساله‌ای نرینه برای قربانی گناه، و قوچی بجهت قربانی سوختنی، هر دو رابی عیب بگیر، و به حضور خداوند بگذران.۲
3 ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ, ‘ಈ ಹೊತ್ತು ಯೆಹೋವನು ಪ್ರತ್ಯಕ್ಷನಾಗುತ್ತಾನೆ, ಆದುದರಿಂದ ನೀವು ಆತನ ಸನ್ನಿಧಿಯಲ್ಲಿ ದೋಷಪರಿಹಾರಕ್ಕಾಗಿ ಸಮರ್ಪಿಸಲು ಒಂದು ಹೋತವನ್ನು, ಸರ್ವಾಂಗಹೋಮಕ್ಕಾಗಿ ಒಂದು ವರ್ಷದ ಪೂರ್ಣಾಂಗವಾದ ಕರುವನ್ನು,
وبنی‌اسرائیل را خطاب کرده، بگو: بزغاله نرینه برای قربانی گناه، و گوساله و بره‌ای هر دو یک ساله و بی‌عیب برای قربانی سوختنی بگیرید.۳
4 ಕುರಿಯನ್ನು ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನು, ಟಗರನ್ನು ಧಾನ್ಯನೈವೇದ್ಯಕ್ಕಾಗಿ ಎಣ್ಣೆಮಿಶ್ರವಾದ ಪದಾರ್ಥವನ್ನು ತೆಗೆದುಕೊಂಡು ಯೆಹೋವನ ಮುಂದೆ ಬರಬೇಕೆಂದು ಆಜ್ಞಾಪಿಸು’” ಅಂದನು.
وگاوی و قوچی برای ذبیحه سلامتی، تا به حضورخداوند ذبح شود، و هدیه آردی سرشته شده به روغن را، زیرا که امروز خداوند بر شما ظاهر خواهد شد.»۴
5 ಮೋಶೆ ಆಜ್ಞಾಪಿಸಿದ ಮೇರೆಗೆ ಅವರು ಅವುಗಳನ್ನೆಲ್ಲಾ ದೇವದರ್ಶನ ಗುಡಾರದ ಹತ್ತಿರಕ್ಕೆ ತಂದರು. ಸರ್ವಸಮೂಹದವರೆಲ್ಲರೂ ಹತ್ತಿರಕ್ಕೆ ಬಂದು ಯೆಹೋವನ ಸನ್ನಿಧಿಯಲ್ಲಿ ನಿಂತರು.
پس آنچه را که موسی‌امر فرموده بود پیش خیمه اجتماع آوردند. و تمامی جماعت نزدیک شده، به حضور خداوندایستادند.۵
6 ಆಗ ಮೋಶೆ ಅವರಿಗೆ, “ನೀವು ಏನು ಮಾಡಬೇಕೆಂದು ಯೆಹೋವನು ಆಜ್ಞಾಪಿಸಿದ್ದು ಇದೇ; ಅದರಂತೆ ನಡೆದರೆ ಯೆಹೋವನ ಮಹಿಮೆ ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.
و موسی گفت: «این است کاری که خداوند امر فرموده است که بکنید، و جلال خداوند بر شما ظاهر خواهد شد.»۶
7 ಆಗ ಮೋಶೆ ಆರೋನನಿಗೆ, “ಯಜ್ಞವೇದಿಯ ಹತ್ತಿರಕ್ಕೆ ಬಂದು ನೀನು ಮಾಡಬೇಕಾದ ದೋಷಪರಿಹಾರಕ ಯಜ್ಞವನ್ನು, ಸರ್ವಾಂಗಹೋಮವನ್ನು ಸಮರ್ಪಿಸಿ ನಿನಗೋಸ್ಕರವೂ ಮತ್ತು ನಿನ್ನ ಜನರಿಗೋಸ್ಕರವೂ ದೋಷವನ್ನು ಪರಿಹರಿಸು; ಜನರು ತಂದದ್ದನ್ನು ಸಮರ್ಪಿಸಿ ಯೆಹೋವನ ಆಜ್ಞೆಯಂತೆ ಅವರಿಗಾಗಿ ದೋಷಪರಿಹಾರವನ್ನು ಮಾಡು” ಎಂದು ಹೇಳಿದನು.
و موسی هارون را گفت: «نزدیک مذبح بیا و قربانی گناه خود و قربانی سوختنی خود را بگذران، و برای خود و برای قوم کفاره کن، و قربانی قوم را بگذران و بجهت ایشان کفاره کن، چنانکه خداوند امرفرموده است.»۷
8 ಆರೋನನು ಯಜ್ಞವೇದಿಯ ಹತ್ತಿರಕ್ಕೆ ಹೋಗಿ ತನಗೋಸ್ಕರ ದೋಷಪರಿಹಾರಕ ಯಜ್ಞದ ಹೋರಿಯನ್ನು ವಧಿಸಿದನು.
و هارون به مذبح نزدیک آمده، گوساله قربانی گناه را که برای خودش بود ذبح کرد.۸
9 ಆರೋನನ ಮಕ್ಕಳು ಅದರ ರಕ್ತವನ್ನು ಅವನಿಗೆ ಒಪ್ಪಿಸಿದಾಗ ಅವನು ಅದರಲ್ಲಿ ತನ್ನ ಬೆರಳನ್ನು ಅದ್ದಿ, ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಹೊಯ್ದುಬಿಟ್ಟನು.
وپسران هارون خون را نزد او آوردند و انگشت خود را به خون فرو برده، آن را بر شاخهای مذبح مالید و خون را بر بنیان مذبح ریخت.۹
10 ೧೦ ಆ ದೋಷಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದಂತೆ ಯಜ್ಞವೇದಿಯ ಮೇಲೆ ಹೋಮಮಾಡಿದನು.
و پیه وگرده‌ها و سفیدی جگر از قربانی گناه را بر مذبح سوزانید، چنانکه خداوند موسی را امر فرموده بود.۱۰
11 ೧೧ ಅದರ ಮಾಂಸವನ್ನು ಮತ್ತು ಚರ್ಮವನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಡಿಸಿಬಿಟ್ಟನು.
و گوشت و پوست را بیرون لشکرگاه به آتش سوزانید.۱۱
12 ೧೨ ತರುವಾಯ ಸರ್ವಾಂಗಹೋಮ ಪಶುವನ್ನು ವಧಿಸಿದನು. ಆರೋನನ ಮಕ್ಕಳು ಅದರ ರಕ್ತವನ್ನು ಅವನಿಗೆ ತಂದು ಒಪ್ಪಿಸಿದಾಗ ಅವನು ಅದನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
و قربانی سوختنی را ذبح کرد، و پسران هارون خون را به او سپردند، و آن را به اطراف مذبح پاشید.۱۲
13 ೧೩ ಅವರು ಆ ಪಶುವಿನ ಮಾಂಸಭಾಗಗಳನ್ನು ಮತ್ತು ತಲೆಯನ್ನು ಒಂದೊಂದಾಗಿ ಒಪ್ಪಿಸಿದಾಗ ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.
و قربانی را به قطعه هایش و سرش به او سپردند، و آن را بر مذبح سوزانید.۱۳
14 ೧೪ ಅದರ ಕರುಳುಗಳನ್ನು ಮತ್ತು ಕಾಲುಗಳನ್ನು ತೊಳೆದು ಯಜ್ಞವೇದಿಯಲ್ಲಿ ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಹೋಮಮಾಡಿದನು.
و احشا و پاچه‌ها را شست و آنها را بر قربانی سوختنی بر مذبح سوزانید.۱۴
15 ೧೫ ತರುವಾಯ ಜನಸಮೂಹವು ಸಮರ್ಪಿಸುವ ಪಶುಗಳನ್ನು ಆರೋನನು ತರಿಸಿ ಅವುಗಳಲ್ಲಿ ದೋಷಪರಿಹಾರಕ ಹೋತವನ್ನು ಮೊದಲನೆಯ ಪಶುವಿನಂತೆ ವಧಿಸಿ ಅವರಿಗೋಸ್ಕರ ದೋಷಪರಿಹಾರಕ್ಕಾಗಿ ಅದನ್ನು ಸಮರ್ಪಿಸಿದನು.
و قربانی قوم رانزدیک آورد، و بز قربانی گناه را که برای قوم بودگرفته، آن را ذبح کرد و آن را مثل اولین برای گناه گذرانید.۱۵
16 ೧೬ ಸರ್ವಾಂಗಹೋಮ ಪಶುವನ್ನು ಯಥಾವಿಧಿಯಾಗಿ ಸಮರ್ಪಿಸಿದನು.
و قربانی سوختنی را نزدیک آورده، آن را به حسب قانون گذرانید.۱۶
17 ೧೭ ಅವರು ತಂದ ಧಾನ್ಯನೈವೇದ್ಯ ದ್ರವ್ಯಗಳಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು, ಹೊತ್ತಾರೆಯ ಸರ್ವಾಂಗಹೋಮದ ಸಂಗಡ ಅದನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.
و هدیه آردی رانزدیک آورده، مشتی از آن برداشت، و آن را علاوه بر قربانی سوختنی صبح بر مذبح سوزانید.۱۷
18 ೧೮ ಬಳಿಕ ಜನರಿಗೋಸ್ಕರ ಸಮಾಧಾನಯಜ್ಞಕ್ಕಾಗಿ ನೇಮಕವಾದ ಹೋರಿಯನ್ನು ಮತ್ತು ಟಗರನ್ನು ವಧಿಸಿದನು. ಆರೋನನ ಮಕ್ಕಳು ಅವುಗಳ ರಕ್ತವನ್ನು ಒಪ್ಪಿಸಲಾಗಿ ಅವನು ಅದನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
و گاو و قوچ ذبیحه سلامتی را که برای قوم بودذبح کرد، و پسران هارون خون را به او سپردند وآن را به اطراف مذبح پاشید.۱۸
19 ೧೯ ಅವರು ಹೋರಿಯ ಕೊಬ್ಬನ್ನು, ಟಗರಿನ ಬಾಲದ ಕೊಬ್ಬನ್ನು, ಅಂಗಾಂಶದ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು,
و پیه گاو و دنبه قوچ و آنچه احشا را می‌پوشاند و گرده‌ها وسفیدی جگر را.۱۹
20 ೨೦ ಎದೆಯ ಭಾಗಗಳ ಮೇಲೆ ಇಟ್ಟು ಒಪ್ಪಿಸಲಾಗಿ ಅವನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.
و پیه را بر سینه‌ها نهادند، وپیه را بر مذبح سوزانید.۲۰
21 ೨೧ ಮೋಶೆಯು ಆಜ್ಞಾಪಿಸಿದಂತೆ ಆರೋನನು ಅವುಗಳ ಎದೆಯ ಭಾಗಗಳನ್ನು ಮತ್ತು ಬಲತೊಡೆಯನ್ನು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು.
و هارون سینه‌ها و ران راست را برای هدیه جنبانیدنی به حضور خداوندجنبانید، چنانکه موسی‌امر فرموده بود.۲۱
22 ೨೨ ಆರೋನನು ಆ ದೋಷಪರಿಹಾರಕ ಯಜ್ಞವನ್ನು, ಸರ್ವಾಂಗಹೋಮವನ್ನು ಮತ್ತು ಸಮಾಧಾನಯಜ್ಞಗಳನ್ನು ಸಮರ್ಪಿಸಿದ ನಂತರ ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿ ಇಳಿದು ಬಂದನು.
پس هارون دستهای خود را به سوی قوم برافراشته، ایشان را برکت داد، و از گذرانیدن قربانی گناه وقربانی سوختنی و ذبایح سلامتی بزیر آمد.۲۲
23 ೨೩ ತರುವಾಯ ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಅಲ್ಲಿಂದ ಹೊರಗೆ ಬಂದಾಗ ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು.
وموسی و هارون به خیمه اجتماع داخل شدند، وبیرون آمده، قوم را برکت دادند و جلال خداوندبر جمیع قوم ظاهر شد.۲۳
24 ೨೪ ಯೆಹೋವನ ಸನ್ನಿಧಿಯಿಂದ ಬೆಂಕಿಯು ಹೊರಟು ಯಜ್ಞವೇದಿಯ ಮೇಲಿದ್ದ ಸರ್ವಾಂಗಹೋಮದ್ರವ್ಯವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಉತ್ಸಾಹದಿಂದ ಆರ್ಭಟಿಸಿ, ಅಡ್ಡಬಿದ್ದು ನಮಸ್ಕರಿಸಿದರು.
و آتش از حضورخداوند بیرون آمده، قربانی سوختنی و پیه را برمذبح بلعید، و چون تمامی قوم این را دیدند، صدای بلند کرده، به روی در‌افتادند.۲۴

< ಯಾಜಕಕಾಂಡ 9 >