< ಯಾಜಕಕಾಂಡ 4 >
1 ೧ ಯೆಹೋವನು ಮೋಶೆಗೆ ಇಂತೆಂದನು,
Olúwa sọ fún Mose pé,
2 ೨ “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಹೇಳಬೇಕಾದದ್ದೇನೆಂದರೆ ‘ಯಾರೇ ಆಗಲಿ ತಿಳಿಯದೆ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ಮಾಡಿ ದೋಷಿಯಾದರೆ ಅವನಿಗೆ ದೋಷಪರಿಹಾರ ಮಾಡಿಕೊಳ್ಳುವ ಕ್ರಮ ಹೀಗಿದೆ.
“Sọ fún àwọn ọmọ Israẹli pé, ‘Bí ẹnìkan bá ṣẹ̀ láìmọ̀, tí ó ṣe ohun tí kò yẹ kó ṣe sí ọ̀kan nínú àwọn òfin Olúwa.
3 ೩ ಅಭಿಷಿಕ್ತನಾದ ಯಾಜಕನೇ ದೋಷಿಯಾಗಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ, ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಸಮರ್ಪಿಸಬೇಕು.
“‘Bí àlùfáà tí a fi òróró yàn bá ṣẹ̀, tí ó sì mú ẹ̀bi wá sórí àwọn ènìyàn, ó gbọdọ̀ mú ọmọ akọ màlúù tí kò lábùkù wá fún Olúwa gẹ́gẹ́ bí ẹbọ ẹ̀ṣẹ̀ fún ẹ̀ṣẹ̀ tí ó ṣẹ̀.
4 ೪ ಅವನು ಆ ಹೋರಿಯನ್ನು ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಿಲಿಗೆ ತಂದು, ಅದರ ತಲೆಯ ಮೇಲೆ ಕೈಯನ್ನಿಟ್ಟು, ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
Kí ó mú ọ̀dọ́ màlúù wá síwájú Olúwa ní ẹnu-ọ̀nà àgọ́ ìpàdé. Kí ó gbé ọwọ́ rẹ̀ lé e lórí, kí ó sì pa á níwájú Olúwa.
5 ೫ ಅಭಿಷಿಕ್ತ ಯಾಜಕನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನದ ಗುಡಾರದೊಳಗೆ ಬರಬೇಕು.
Kí àlùfáà tí a fi òróró yàn mú díẹ̀ nínú ẹ̀jẹ̀ akọ màlúù, kí ó sì gbé e lọ sínú àgọ́ ìpàdé.
6 ೬ ಯಾಜಕನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ, ಮಹಾಪವಿತ್ರಸ್ಥಾನದ ಮುಂದಿನ ತೆರೆಯ ಎದುರಾಗಿ ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಚಿಮುಕಿಸಬೇಕು.
Kí ó ti ìka bọ inú ẹ̀jẹ̀ náà kí ó sì wọ́n díẹ̀ nínú rẹ̀ ní ẹ̀ẹ̀méje níwájú Olúwa, níwájú aṣọ títa ibi mímọ́.
7 ೭ ಆಗ ಯಾಜಕನು ದೇವದರ್ಶನದ ಗುಡಾರದೊಳಗೆ ಯೆಹೋವನ ಸನ್ನಿಧಿಯಲ್ಲಿರುವ ಪರಿಮಳಧೂಪವೇದಿಯ ಕೊಂಬುಗಳಿಗೆ ಆ ರಕ್ತವನ್ನು ಹಚ್ಚಿ, ಹೋರಿಯ ಉಳಿದ ರಕ್ತವನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿ ಸರ್ವಾಂಗಹೋಮಮಾಡುವ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.
Àlùfáà yóò tún mú díẹ̀ nínú ẹ̀jẹ̀ náà sórí ìwo pẹpẹ tùràrí tó wà níwájú Olúwa nínú àgọ́ ìpàdé. Kí ó da gbogbo ẹ̀jẹ̀ akọ màlúù tókù sí ìsàlẹ̀ pẹpẹ ẹbọ sísun ní ẹnu-ọ̀nà àgọ́ ìpàdé.
8 ೮ ಆ ದೋಷಪರಿಹಾರಕ ಯಜ್ಞದ ಹೋರಿಯ ಕೊಬ್ಬನ್ನೆಲ್ಲಾ ಅಂದರೆ ಅಂಗಾಂಶದ ಕೊಬ್ಬನ್ನು, ಕರುಳುಗಳ ಮೇಲಣ ಕೊಬ್ಬನ್ನು,
Kí ó yọ gbogbo ọ̀rá tí ń bẹ nínú akọ màlúù ẹbọ ẹ̀ṣẹ̀ náà ọ̀rá tí ó bo nǹkan inú àti gbogbo ohun tó so mọ́ wọn.
9 ೯ ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದ ಹತ್ತಿರ ಇರುವ ಕೊಬ್ಬನ್ನು ಮತ್ತು ಕಳಿಜದ ಹತ್ತಿರದಿಂದ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ತೆಗೆದುಬಿಡಬೇಕು.
Kíndìnrín méjèèjì pẹ̀lú ọ̀rá wọn tí ń bẹ lẹ́bàá ìhà àti ọ̀rá tí ó bo ẹ̀dọ̀, kí ó yọ ọ́ pẹ̀lú kíndìnrín.
10 ೧೦ ಅವನು ಅವುಗಳನ್ನು ಸಮಾಧಾನಯಜ್ಞದ ಹೋರಿಯಲ್ಲಿ ಪ್ರತ್ಯೇಕಿಸಿದಂತೆಯೇ ಇದರಲ್ಲಿಯೂ ಪ್ರತ್ಯೇಕಿಸಿ ಸರ್ವಾಂಗಹೋಮದ ಯಜ್ಞವೇದಿಯ ಮೇಲೆ ಹೋಮ ಮಾಡಬೇಕು.
Gẹ́gẹ́ bí a ṣe ń yọ ọ̀rá kúrò lára màlúù tí a fi rú ẹbọ àlàáfíà; àlùfáà yóò sì sun wọ́n lórí pẹpẹ ẹbọ sísun.
11 ೧೧ ಆ ಹೋರಿಯಲ್ಲಿ ಉಳಿದದ್ದನ್ನೆಲ್ಲಾ ಅಂದರೆ ಅದರ ಚರ್ಮ, ಮಾಂಸ, ತಲೆ, ಕಾಲುಗಳು,
Ṣùgbọ́n awọ màlúù àti gbogbo ara rẹ̀, àti ẹsẹ̀, gbogbo nǹkan inú àti ìgbẹ́ rẹ̀.
12 ೧೨ ಕರುಳುಗಳು, ಕರುಳುಗಳಲ್ಲಿರುವ ಕಲ್ಮಷ ಇವುಗಳನ್ನೆಲ್ಲಾ ಪಾಳೆಯದ ಹೊರಗೆ ಯಜ್ಞವೇದಿಯ ಬೂದಿಯನ್ನು ಹಾಕುವ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಕಟ್ಟಿಗೆಯ ಮೇಲಿರಿಸಿ, ಬೆಂಕಿಯಲ್ಲಿ ಸುಡಿಸಿಬಿಡಬೇಕು. ಬೂದಿಯನ್ನು ಹಾಕುವ ಸ್ಥಳದಲ್ಲೇ ಅದನ್ನು ಸುಡಿಸಿಬಿಡಬೇಕು.
Èyí túmọ̀ sí pé gbogbo ìyókù akọ màlúù náà ni kí ẹ gbé jáde síta lẹ́yìn ibùdó sí ibi tí a sọ di mímọ́ níbi tí à ń da eérú sí, kí ẹ sì sun wọ́n lórí iná igi, níbi eérú tí a kójọ.
13 ೧೩ “‘ಇಸ್ರಾಯೇಲರ ಸಮೂಹವೆಲ್ಲಾ ತಿಳಿಯದೆ ದೋಷಿಗಳಾದರೆ ಅಂದರೆ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಅವರು ಯಾವುದನ್ನಾದರೂ ಮಾಡಿ ದೋಷಕ್ಕೆ ಗುರಿಯಾದರೆ,
“‘Bí gbogbo àpapọ̀ ènìyàn Israẹli bá ṣèèṣì ṣẹ̀, tí wọ́n sì ṣe ohun tí kò yẹ kí wọ́n ṣe sí ọ̀kan nínú àwọn òfin Olúwa, bí ó tilẹ̀ jẹ́ pé àpapọ̀ ènìyàn náà kò mọ̀ sí ọ̀rọ̀ náà, wọ́n jẹ̀bi.
14 ೧೪ ಮೊದಲು ತಮಗೂ ಮರೆಯಾಗಿದ್ದ ಆ ದೋಷವು ತಿಳಿದುಬಂದ ನಂತರ ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಪೂರ್ಣಾಂಗವಾದ ಹೋರಿಯನ್ನು ಸಮರ್ಪಿಸಬೇಕು. ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತರಿಸಬೇಕು.
Nígbà tí wọ́n bá mọ̀, gbogbo ìjọ ènìyàn yóò mú akọ màlúù wá sí àgọ́ ìpàdé gẹ́gẹ́ bí ẹbọ ẹ̀ṣẹ̀.
15 ೧೫ ಸಮೂಹದ ಹಿರಿಯರು ಯೆಹೋವನ ಸನ್ನಿಧಿಯಲ್ಲಿ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟು ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
Kí àwọn àgbàgbà ìjọ Israẹli gbé ọwọ́ lórí akọ ọmọ màlúù náà níwájú Olúwa.
16 ೧೬ ಅಭಿಷಿಕ್ತ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನ ಗುಡಾರದೊಳಗೆ ತಂದು,
Kí àlùfáà tí a fi òróró yàn sì mú díẹ̀ lára ẹ̀jẹ̀ akọ ọmọ màlúù náà wá sínú àgọ́ ìpàdé.
17 ೧೭ ಅದರಲ್ಲಿ ಬೆರಳನ್ನು ಅದ್ದಿ, ತೆರೆಯ ಮುಂದೆ ಯೆಹೋವನ ಸನ್ನಿಧಿಯಲ್ಲಿ ಅದನ್ನು ಏಳು ಸಾರಿ ಚಿಮುಕಿಸಬೇಕು.
Kí ó ti ìka rẹ̀ bọ inú ẹ̀jẹ̀ náà kí ó sì wọn ní ẹ̀ẹ̀méje níwájú Olúwa níbi aṣọ títa ẹnu-ọ̀nà.
18 ೧೮ ಆ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನದ ಗುಡಾರದೊಳಗೆ ಯೆಹೋವನ ಸನ್ನಿಧಿಯಲ್ಲಿರುವ ಧೂಪವೇದಿಯ ಕೊಂಬುಗಳಿಗೆ ಹಚ್ಚಿ ಉಳಿದದ್ದನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.
Kí ó sì mú díẹ̀ nínú ẹ̀jẹ̀ náà sórí ìwo pẹpẹ tó wà níwájú Olúwa nínú àgọ́ ìpàdé. Ìyókù ẹ̀jẹ̀ náà ni kí ó dà sí ìsàlẹ̀ pẹpẹ ẹbọ sísun ní ẹnu-ọ̀nà àgọ́ ìpàdé.
19 ೧೯ ಅವನು ಹೋರಿಯ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಯಜ್ಞವೇದಿಯ ಮೇಲೆ ಹೋಮಮಾಡಬೇಕು.
Kí ó yọ gbogbo ọ̀rá kúrò lára rẹ̀, kí ó sì sun ún lórí pẹpẹ.
20 ೨೦ ಅವನು (ಅಭಿಷಿಕ್ತ ಯಾಜಕ) ದೋಷಪರಿಹಾರಕ ಯಜ್ಞದ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲ್ಪಟ್ಟಿತೋ, ಇದರ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದನಂತರ ಅವರಿಗೆ ಕ್ಷಮಾಪಣೆಯಾಗುವುದು.
Kí ó sì ṣe akọ ọmọ màlúù yìí gẹ́gẹ́ bí ó ṣe ṣe akọ màlúù tó wà fún ẹbọ ẹ̀ṣẹ̀. Báyìí ni àlùfáà yóò ṣe ṣe ètùtù fún wọn, á ó sì dáríjì wọ́n.
21 ೨೧ ಆ ಮೊದಲನೆಯ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಡಿಸಿಬಿಟ್ಟ ಪ್ರಕಾರ ಈ ಹೋರಿಯನ್ನು ಸುಡಿಸಿಬಿಡಬೇಕು. ಇದು ಜನಸಮೂಹದ ದೋಷಪರಿಹಾರಕ ಯಜ್ಞ.
Lẹ́yìn náà ni yóò sun màlúù yìí lẹ́yìn ibùdó, yóò sì sun ún gẹ́gẹ́ bó ṣe sun màlúù àkọ́kọ́. Èyí ni ẹbọ ẹ̀ṣẹ̀ fún gbogbo ìjọ ènìyàn Israẹli.
22 ೨೨ “‘ಮುಖ್ಯಾಧಿಕಾರಿ ತನ್ನ ದೇವರಾಗಿರುವ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ,
“‘Bí olórí kan bá ṣèèṣì ṣẹ̀ láìmọ̀ tí ó sì ṣe ohun tí kò yẹ kí ó ṣe sí ọ̀kan nínú àwọn òfin Olúwa Ọlọ́run rẹ̀, ó jẹ̀bi.
23 ೨೩ ತನ್ನ ತಪ್ಪು ತನಗೆ ತಿಳಿದುಬಂದಾಗ ಅವನು ಪೂರ್ಣಾಂಗವಾದ ಹೋತವನ್ನು ತಂದು ಸಮರ್ಪಿಸಬೇಕು.
Nígbà tí a bá sì sọ ẹ̀ṣẹ̀ rẹ̀ fún un, ó gbọdọ̀ mú akọ ewúrẹ́ tí kò ní àbùkù wá gẹ́gẹ́ bí ẹbọ rẹ̀.
24 ೨೪ ಅವನು ಆ ಹೋತದ ತಲೆಯ ಮೇಲೆ ಕೈಯನ್ನಿಟ್ಟು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು. ಅದು ದೋಷಪರಿಹಾರಕ ಯಜ್ಞ.
Kí ó gbé ọwọ́ rẹ̀ lórí ewúrẹ́ náà, kí ó sì pa á níbi tí wọ́n ti ń pa ẹran ẹbọ sísun níwájú Olúwa. Ẹbọ ẹ̀ṣẹ̀ ni.
25 ೨೫ ಯಾಜಕನು ಆ ಪಶುರಕ್ತದಲ್ಲಿ ಸ್ವಲ್ಪವನ್ನು ಬೆರೆಳಿನಿಂದ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.
Lẹ́yìn èyí, kí àlùfáà ti ìka rẹ̀ bọ inú ẹ̀jẹ̀ ẹbọ ẹ̀ṣẹ̀ náà, kí ó fi sí orí ìwo pẹpẹ ẹbọ sísun, kí ó sì da ẹ̀jẹ̀ yòókù sí ìsàlẹ̀ pẹpẹ.
26 ೨೬ ಸಮಾಧಾನಯಜ್ಞದ ಪಶುವಿನ ಕೊಬ್ಬನ್ನು ಅವನು ಹೋಮಮಾಡುವ ಪ್ರಕಾರವೇ ಇದರ ಎಲ್ಲಾ ಕೊಬ್ಬನ್ನು ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.
Kí ó sun gbogbo ọ̀rá rẹ̀ lórí pẹpẹ bí ó ṣe sun ọ̀rá ọrẹ àlàáfíà. Báyìí ní àlùfáà yóò ṣe ètùtù fún ẹ̀ṣẹ̀ ọkùnrin náà, a ó sì dáríjì í.
27 ೨೭ “‘ನಿಮ್ಮ ದೇಶದ ಜನರಲ್ಲಿ ಬೇರೆ ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ,
“‘Bí ènìyàn nínú àwọn ará ìlú bá ṣèèṣì ṣẹ̀ láìmọ̀ tí ó sì ṣe ohun tí kò yẹ sí ọ̀kan nínú àwọn òfin Olúwa, ó jẹ̀bi.
28 ೨೮ ತನ್ನ ತಪ್ಪು ತನಗೆ ತಿಳಿದುಬಂದಾಗ ಆ ದೋಷಪರಿಹಾರಕ್ಕಾಗಿ ಪೂರ್ಣಾಂಗವಾದ ಹೆಣ್ಣು ಮೇಕೆಯನ್ನು ತಂದು ಸಮರ್ಪಿಸಬೇಕು.
Nígbà tí a bá sọ ẹ̀ṣẹ̀ rẹ̀ fún un, ó gbọdọ̀ mú abo ewúrẹ́ tí kò ní àbùkù wá gẹ́gẹ́ bí ẹbọ fún ẹ̀ṣẹ̀ rẹ̀.
29 ೨೯ ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟನಂತರ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ವಧಿಸಬೇಕು.
Kí ó gbé ọwọ́ rẹ̀ lórí ewúrẹ́ ẹbọ ẹ̀ṣẹ̀ náà, kí ó sì pa á níbi ẹbọ sísun.
30 ೩೦ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.
Àlùfáà yóò sì ti ìka rẹ̀ bọ́ ẹ̀jẹ̀ náà, yóò fi sí orí ìwo pẹpẹ ẹbọ sísun, kí ó sì da ìyókù ẹ̀jẹ̀ náà sí ìsàlẹ̀ pẹpẹ.
31 ೩೧ ಸಮಾಧಾನ ಯಜ್ಞಪಶುಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲಾ ಕೊಬ್ಬನ್ನು ಪ್ರತ್ಯೇಕಿಸಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಹೀಗೆ ಯಾಜಕನು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.
Kí ó yọ gbogbo ọ̀rá ẹran náà gẹ́gẹ́ bó ṣe yọ ọ̀rá ẹran fún ọrẹ àlàáfíà. Kí àlùfáà sì sun ọ̀rá yìí lórí pẹpẹ bí òórùn dídùn sí Olúwa. Báyìí ni àlùfáà yóò ṣe ètùtù fún ẹni náà, a ó sì dáríjì í.
32 ೩೨ “‘ಅವನು ತನ್ನ ದೋಷಪರಿಹಾರಕ್ಕಾಗಿ ತರುವುದು ಕುರಿಯಾದರೆ ಅದು ಪೂರ್ಣಾಂಗವಾದ ಹೆಣ್ಣಾಗಿರಬೇಕು.
“‘Bí ó bá mú ọ̀dọ́-àgùntàn wá gẹ́gẹ́ bí ẹbọ ẹ̀ṣẹ̀, kí ó mú abo tí kò lábùkù.
33 ೩೩ ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟನಂತರ ಸರ್ವಾಂಗಹೋಮದ ಪಶುಗಳನ್ನು ವಧಿಸುವ ಸ್ಥಳದಲ್ಲೇ ಅದನ್ನು ದೋಷಪರಿಹಾರಕ್ಕಾಗಿ ವಧಿಸಬೇಕು.
Kí ó gbé ọwọ́ rẹ̀ lé e lórí, kí ó sì pa á fún ẹbọ ẹ̀ṣẹ̀ níbi tí wọ́n ti ń pa ẹran ẹbọ sísun.
34 ೩೪ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ತೆಗೆದುಕೊಂಡು, ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು.
Àlùfáà yóò sì ti ìka rẹ̀ bọ inú ẹ̀jẹ̀ ẹbọ ẹ̀ṣẹ̀ náà, yóò sì fi sí orí ìwo pẹpẹ ẹbọ sísun, yóò sì da ìyókù ẹ̀jẹ̀ náà sí ìsàlẹ̀ pẹpẹ.
35 ೩೫ ಸಮಾಧಾನ ಯಜ್ಞಪಶುಗಳ ಕೊಬ್ಬನ್ನು ಪ್ರತ್ಯೇಕಿಸುವ ಪ್ರಕಾರ ಯಾಜಕನು ಇದರ ಎಲ್ಲಾ ಕೊಬ್ಬನ್ನು ಪ್ರತ್ಯೇಕಿಸಿ, ಯಜ್ಞವೇದಿಯಲ್ಲಿ ಉರಿಯುವ ಹೋಮ ದ್ರವ್ಯಗಳ ಮೇಲೆ ಯೆಹೋವನಿಗೆ ಹೋಮಮಾಡಬೇಕು. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದರಿಂದ ಅವನಿಗೆ ಕ್ಷಮಾಪಣೆಯಾಗುವುದು.
Kí ó yọ gbogbo ọ̀rá rẹ̀ bó ti yọ ọ̀rá lára ọ̀dọ́-àgùntàn ọrẹ àlàáfíà, àlùfáà yóò sì sun ún ní orí pẹpẹ, lórí ọrẹ tí a fi iná sun sí Olúwa. Báyìí ni àlùfáà yóò ṣe ètùtù fún ẹni náà, nítorí ẹ̀ṣẹ̀ tí ó sẹ̀, a ó sì dáríjì í.