< ಯಾಜಕಕಾಂಡ 17 >
1 ೧ ಯೆಹೋವನು ಮೋಶೆಯೊಂದಿಗೆ ಮಾತನಾಡಿ,
၁ထာဝရဘုရားသည် မောရှေမှတစ်ဆင့်အာရုန်၊ သူ၏သားများနှင့်ဣသရေလအမျိုးသား အပေါင်းတို့အား အောက်ဖော်ပြပါပညတ် များကိုချမှတ်ပေးတော်မူ၏။-
2 ೨ “ನೀನು ಆರೋನನಿಗೂ ಅವನ ಮಕ್ಕಳಿಗೂ ಮತ್ತು ಇಸ್ರಾಯೇಲರಿಗೂ ಹೀಗೆ ಹೇಳಬೇಕು,
၂
3 ೩ ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಇಸ್ರಾಯೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ, ಕುರಿಯನ್ನಾಗಲಿ ಅಥವಾ ಆಡನ್ನಾಗಲಿ ಕೊಯ್ಯುವಾಗ,
၃ထာဝရဘုရားစံတော်မူရာတဲတော်တံခါး ဝမှလွဲ၍ အခြားတစ်နေရာရာတွင်နွားကို ဖြစ်စေ၊ ဆိတ်ကိုဖြစ်စေသတ်၍ ထာဝရဘုရား အားပူဇော်သောဣသရေလအမျိုးသားသည် ပညတ်တော်ကိုချိုးဖောက်သူဖြစ်၏။ သူသည် သွေးသွန်းမှုလွန်ကူးသောကြောင့် ထာဝရ ဘုရား၏လူမျိုးတော်မှထုတ်ပယ်ခြင်းခံ ရမည်။-
4 ೪ ಅದನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ಆತನ ಗುಡಾರದ ಬಾಗಿಲಿಗೆ ತಾರದೆ, ಪಾಳೆಯದ ಒಳಗಾಗಲಿ ಅಥವಾ ಹೊರಗಾಗಲಿ ವಧಿಸಿದರೆ ಅವನನ್ನು ಕೊಲೆಪಾತಕನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು.
၄
5 ೫ ಏಕೆಂದರೆ ಯಜ್ಞಪಶುಗಳನ್ನು ಬಯಲಿನಲ್ಲಿ ವಧಿಸುತ್ತಿದ್ದ ಇಸ್ರಾಯೇಲರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತಂದು, ಯೆಹೋವನ ಮುಂದೆ ಸಮಾಧಾನಯಜ್ಞವಾಗಿ ಯೆಹೋವನಿಗೆ ಸಮರ್ಪಿಸಬೇಕು.
၅ဤပညတ်၏ရည်ရွယ်ချက်မှာဣသရေလ အမျိုးသားတို့သည် ယခင်ကတိရစ္ဆာန်များကို ကွင်းပြင်၌သတ်ခဲ့သော်လည်း ယခုထာဝရ ဘုရားရှေ့တော်၌သတ်စေရန်ဖြစ်သည်။ သူ တို့သည်တိရစ္ဆာန်များကို ယဇ်ပုရောဟိတ်ထံ တဲတော်တံခါးဝသို့ယူဆောင်ခဲ့ပြီးလျှင် မိတ်သဟာယယဇ်အဖြစ်သတ်၍ပူဇော် ရမည်။-
6 ೬ ಯಾಜಕನು ಅವುಗಳ ರಕ್ತವನ್ನು ದೇವದರ್ಶನದ ಗುಡಾರದ ಬಾಗಿಲಿನ ಮುಂದಿರುವ ಯಜ್ಞವೇದಿಗೆ ಎರಚಿ, ಅವುಗಳ ಕೊಬ್ಬನ್ನು ಹೋಮಮಾಡಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡಬೇಕು.
၆ယဇ်ပုရောဟိတ်သည် သွေးကိုတဲတော်တံခါးဝ ရှိယဇ်ပလ္လင်လေးဘက်တွင် ပက်ဖျန်းရမည်။ ထို နောက်အဆီကိုမီးရှို့ပူဇော်သဖြင့် ထာဝရ ဘုရားနှစ်သက်တော်မူသောရနံ့ကိုထွက် ပေါ်စေမည်။-
7 ೭ ಅವರು ಇದುವರೆಗೆ ಪೂಜಿಸುತ್ತಿದ್ದ ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಮತ್ತು ಅವರ ಸಂತತಿಯವರಿಗೂ ಇದು ಶಾಶ್ವತನಿಯಮ.’
၇ဣသရေလအမျိုးသားတို့သည် ထာဝရ ဘုရားအားသစ္စာဖောက်၍ကွင်းပြင်များတွင် တိရစ္ဆာန်များကိုသတ်ပြီး နတ်မိစ္ဆာတို့အား နောက်တစ်ဖန်မပူဇော်ရ။ ဣသရေလအမျိုး သားတို့သည် ဤပညတ်ကိုထာဝစဉ်စောင့်ထိန်း ရကြမည်။
8 ೮ “ಇದಲ್ಲದೆ ನೀನು ಅವರಿಗೆ ಹೀಗೆ ಆಜ್ಞಾಪಿಸು, ‘ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸಮಾಡುತ್ತಿರುವ ಅನ್ಯದೇಶದವರಲ್ಲಿಯಾಗಲಿ ಯಾರಾದರೂ ಸರ್ವಾಂಗಹೋಮವನ್ನು ಅಥವಾ,
၈ဣသရေလအမျိုးသားဖြစ်စေ၊ ဣသရေလ အမျိုးသားတို့နှင့်နေထိုင်သောလူမျိုးခြား သားဖြစ်စေ၊ တဲတော်တံခါးဝမှလွဲ၍အခြား တစ်နေရာတွင် မီးရှို့သောယဇ်ကိုသော်လည်း ကောင်း၊ အခြားယဇ်ကောင်ကိုသော်လည်းကောင်း ထာဝရဘုရားအားပူဇော်လျှင်ထိုသူကို ဘုရားသခင်၏လူမျိုးတော်မှထုတ်ပယ် ရမည်။
9 ೯ ಬೇರೆ ವಿಧವಾದ ಯಜ್ಞವನ್ನು ಮಾಡುವಾಗ ಅದರ ಪಶುವನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲಿಗೆ ತೆಗೆದುಕೊಂಡು ಬಾರದಿದ್ದರೆ ಅವನು ಕುಲದಿಂದ ಹೊರಗೆ ಹಾಕಬೇಕು.
၉
10 ೧೦ “‘ಇದಲ್ಲದೆ ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡಿ ಅವನನ್ನು ಕುಲದಿಂದ ತೆಗೆದುಹಾಕುವೆನು.
၁၀ဣသရေလအမျိုးသားဖြစ်စေ၊ ဣသရေလ အမျိုးသားတို့နှင့်နေထိုင်သောလူမျိုးခြား သားဖြစ်စေ၊ သွေးပါသောအသားကိုစား လျှင် ထာဝရဘုရားသည်ထိုသူကိုမျက်နှာ လွှဲ၍ မိမိ၏လူမျိုးတော်မှထုတ်ပယ်တော် မူလိမ့်မည်။-
11 ೧೧ ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂತಹ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರ ಆಗುತ್ತದಷ್ಟೆ.
၁၁သတ္တဝါတိုင်း၏အသက်သည်သွေး၌တည်သော ကြောင့် ထာဝရဘုရားသည်လူတို့၏အပြစ် ပြေစေရန်အတွက် သွေးဟူသမျှကိုယဇ်ပလ္လင် ပေါ်သို့သွန်းလောင်းရမည်ဟုပညတ်တော် မူ၏။ သွေးသည်အသက်ဖြစ်၍ အပြစ်ကို ပြေစေ၏။-
12 ೧೨ ಆದುದರಿಂದ ನಿಮ್ಮಲ್ಲಿಯಾಗಲಿ ಅಥವಾ ನಿಮ್ಮ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಇಸ್ರಾಯೇಲರಿಗೆ ಆಜ್ಞಾಪಿಸಿದ್ದೇನೆ.
၁၂ထိုအကြောင်းကြောင့်ဣသရေလအမျိုးသား ဖြစ်စေ၊ ဣသရေလအမျိုးသားတို့နှင့်နေ ထိုင်သောလူမျိုးခြားသားဖြစ်စေ သွေးပါ သောအသားကိုမစားရဟုထာဝရ ဘုရားပညတ်တော်မူ၏။
13 ೧೩ “‘ಇಸ್ರಾಯೇಲರಲ್ಲಾಗಲಿ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ಬೇಟೆಯಾಡಿ ತಿನ್ನತಕ್ಕ ಮೃಗವನ್ನು ಇಲ್ಲವೆ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು.
၁၃ဣသရေလအမျိုးသားဖြစ်စေ၊ ဣသရေလ အမျိုးသားတို့နှင့်နေထိုင်သောလူမျိုးခြား ဖြစ်စေ၊ စားနိုင်သောတိရစ္ဆာန်သို့မဟုတ်ငှက် ကိုဖမ်းမိလျှင် ထိုသတ္တဝါ၏သွေးကိုမြေကြီး ပေါ်သို့သွန်းလောင်း၍မြေဖြင့်ဖုံးရမည်။-
14 ೧೪ ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರವು. ಆದಕಾರಣ ನಾನು ಇಸ್ರಾಯೇಲರಿಗೆ, ಪ್ರತಿಪ್ರಾಣಿಗೂ ರಕ್ತವೇ ಪ್ರಾಣಾಧಾರವಾದುದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನು ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರವಾಗಬೇಕೆಂದು ಆಜ್ಞಾಪಿಸಿದ್ದೇನೆ.
၁၄သတ္တဝါတိုင်း၏အသက်သည်သွေး၌တည်သော ကြောင့် ဣသရေလအမျိုးသားတို့သည်သွေး ပါသောအသားကိုမစားရ။ စားသောသူသည် ကိုယ်တော်၏လူမျိုးတော်မှထုတ်ပယ်ခြင်း ကိုခံရမည်ဟုထာဝရဘုရားမိန့်တော် မူ၏။
15 ೧೫ “‘ತಾನಾಗಿ ಸತ್ತುಬಿದ್ದದ್ದನ್ನಾಗಲಿ ಅಥವಾ ಕಾಡುಮೃಗ ಕೊಂದದ್ದನ್ನು ತಿಂದವನಾಗಲಿ ಸ್ವದೇಶದವನಾದರೂ ಇಲ್ಲವೇ ಅನ್ಯದೇಶದವನಾದರೂ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಆ ಸಾಯಂಕಾಲದ ವರೆಗೆ ಅಶುದ್ಧನಾಗಿದ್ದು ಬಳಿಕ ಶುದ್ಧನಾಗುವನು.
၁၅ဣသရေလအမျိုးသားဖြစ်စေ၊ လူမျိုးခြား သားဖြစ်စေ၊ ဋ္ဌမ္မတာအလျောက်သေသော တိရစ္ဆာန်၏အသား သို့မဟုတ်သားရဲကိုက် သတ်၍သေသောတိရစ္ဆာန်၏အသားကိုစား လျှင် မိမိအဝတ်ကိုဖွပ်လျှော်၍ရေချိုးရ မည်။ သူသည်ညဦးတိုင်အောင်စောင့်ဆိုင်း ပြီးမှ ဘာသာရေးထုံးနည်းအရသန့်စင် လာလိမ့်မည်။-
16 ೧೬ ಅವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳದೆ ಅಥವಾ ಸ್ನಾನ ಮಾಡದೆ ಹೋದರೆ ತನ್ನ ಪಾಪದ ಫಲವನ್ನು ಅನುಭವಿಸಬೇಕು’” ಎಂದು ಹೇಳಿದನು.
၁၆ထိုပညတ်ကိုမလိုက်နာသူသည် မိမိ အပြစ်၏ဆိုးကျိုးဆက်ကိုခံရမည်။