< ಯಾಜಕಕಾಂಡ 16 >

1 ಆರೋನನ ಇಬ್ಬರು ಮಕ್ಕಳು ಯೆಹೋವನ ಸನ್ನಿಧಿಗೆ ಬಂದು ನಾಶವಾದ ಮೇಲೆ ಯೆಹೋವನು ಮೋಶೆಯ ಸಂಗಡ ಮಾತನಾಡಿ,
Aaron mmammarima baanu a wɔwuwuu wɔ Awurade anim wuo akyi no, Awurade ka kyerɛɛ Mose sɛ,
2 “ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ ಮಹಾಪವಿತ್ರವಾದ ಸ್ಥಾನದೊಳಕ್ಕೆ ಮಂಜೂಷದ ಮೇಲಣ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವುದರಿಂದ ಅವನು ನಾಶವಾಗುವನು.
“Bɔ wo nua Aaron kɔkɔ sɛ, ɔnnkɔ kronkronbea hɔ wɔ ntwamutam no akyi beaeɛ a apam adaka no si ne mmɔborɔhunu beaeɛ hɔ kwa. Ɔkɔ hɔ a ɔbɛwu, ɛfiri sɛ, mʼankasa mewɔ omununkum a ɛkata mpata beaeɛ so no mu.
3 ಆರೋನನು ಮಹಾಪವಿತ್ರಸ್ಥಾನದೊಳಗೆ ಬರುವಾಗ ಮುಂದೆ ಹೇಳುವ ರೀತಿಯಲ್ಲಿ ಬರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಹೋರಿಯನ್ನು ಮತ್ತು ಸರ್ವಾಂಗಹೋಮಕ್ಕಾಗಿ ಟಗರನ್ನು ತರಬೇಕು.
“Sɛ ɔpɛ sɛ ɔkɔ hɔ a, deɛ ɛsɛ sɛ ɔyɛ nie: Ɛsɛ sɛ ɔde nantwinini ba ba ma wɔde bɔ bɔne ho afɔdeɛ na ɔde odwennini nso ba ma wɔde bɔ ɔhyeɛ afɔdeɛ.
4 ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನು ತೊಟ್ಟುಕೊಂಡು, ನಾರಿನ ಒಳಉಡುಪನ್ನು ಹಾಕಿಕೊಂಡು, ನಾರಿನ ನಡುಕಟ್ಟನ್ನು ಕಟ್ಟಿಕೊಂಡು ಮತ್ತು ತಲೆಗೆ ನಾರಿನ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನಮಾಡಬೇಕು.
Ɛsɛ sɛ ɔdware na ɔhyɛ atadeɛ nahanaha ne ne nhyɛaseɛ na ɔbɔ abɔwomu ne abotire.
5 ಇಸ್ರಾಯೇಲರ ಜನಸಮೂಹದಿಂದ ದೋಷಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
Afei, Israelfoɔ bɛbrɛ no mmirekyie mmienu a wɔde bɛbɔ wɔn bɔne ho afɔdeɛ ne odwennini a wɔde bɛbɔ wɔn ɔhyeɛ afɔdeɛ.
6 ಆರೋನನು ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರ ಮಾಡಬೇಕು.
“Deɛ ɛdi ɛkan no, ɔde nantwie ba no bɛma Awurade sɛ bɔne ho afɔdeɛ a ɔrebɔ ama ne ho de ayɛ mpatadeɛ ama ne ho ne ne fiefoɔ.
7 ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
Afei, ɔde mmirekyie mmienu no bɛba Awurade anim wɔ Ahyiaeɛ Ntomadan no ano
8 ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು.
na wɔabɔ wɔn so ntonto ahunu Awurade deɛ, ne deɛ ɛsɛ sɛ wɔsane de no korɔ.
9 ಯಾವ ಹೋತ ಯೆಹೋವನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಬೇಕು.
Aaron de abirekyie a wɔde no rebɛbɔ Awurade afɔdeɛ no bɛbɔ bɔne ho afɔdeɛ.
10 ೧೦ ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷವನ್ನು ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಬೇಕು.
Wɔrenkum abirekyie baako a aka no na wɔde no aba Awurade anim. Wɔbɛyɛ mpatadeɛ ho dwumadie bi agu ne so na wɔde no akɔ ɛserɛ so akɔgya no wɔ hɔ sɛ mpatadwan.
11 ೧೧ “ಆರೋನನು ತನಗಾಗಿ ದೋಷಪರಿಹಾರಕ ಯಜ್ಞದ ಹೋರಿಯನ್ನು ಸಮರ್ಪಿಸಿ ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರವನ್ನು ಮಾಡಬೇಕು.
“Aaron de nantwinini ba no abɔ bɔne ho afɔdeɛ ama ne ho ne ne fiefoɔ awie no,
12 ೧೨ ಅವನು ತನಗೋಸ್ಕರ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ, ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ಅವುಗಳನ್ನು ತೆರೆಯೊಳಗೆ ತರಬೇಕು.
ɔbɛfa adeɛ a wɔhye aduhwam wɔ mu a egyasramma a wɔfaa no Awurade afɔrebukyia no so ayɛ no ma. Afei ɔde aduhwam a wɔayam no muhumuhu bɛyɛ ne nsam na ɔde akɔ ntwamutam no akyi.
13 ೧೩ ಅವನು ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಆ ಧೂಪದ ಹೊಗೆಯು ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಆವರಿಸಿಕೊಳ್ಳುವುದು.
Ɛhɔ na ɔde aduhwam no bɛgu bidie no so wɔ Awurade anim na ayi wisie kumɔnn wɔ mpata beaeɛ apam ne adaka (a aboɔ apono a wɔatwerɛ Mmaransɛm Edu agu so wɔ mu) no so nyinaa sɛdeɛ ɛbɛyɛ a ɔrenwu.
14 ೧೪ ಆಗ ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
Na ɔde nantwinini ba no mogya no bi bɛba na ɔde ne nsateaa baako abɔ mu apete mpata beaeɛ hɔ apueeɛ fam na wapete no mprɛnson wɔ animu.
15 ೧೫ “ತರುವಾಯ ಅವನು ಜನರಿಗಾಗಿ ಮಾಡಿದ ದೋಷಪರಿಹಾರಕ ಯಜ್ಞದ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯೊಳಗೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ, ಕೃಪಾಸನದ ಮೇಲೆಯೂ ಮತ್ತು ಅದರ ಎದುರಾಗಿಯೂ ಚಿಮುಕಿಸಬೇಕು.
“Afei, ɛsɛ sɛ ɔfiri adi na ɔde abirekyie no kɔbɔ ɔmanfoɔ no bɔne ho afɔdeɛ na wɔde ne mogya no ba ntwamutam no akyi na wɔpete gu mpata beaeɛ hɔ ne animu sɛdeɛ ɔde nantwinini ba no mogya no yɛeɛ no ara pɛ.
16 ೧೬ ಹೀಗೆ ಇಸ್ರಾಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೋಸ್ಕರವೂ ಅವನು ಹಾಗೆಯೇ ದೋಷಪರಿಹಾರ ಮಾಡುವನು.
Na ɛkyerɛ sɛ, wayɛ mpatadeɛ ama beaeɛ kronkron hɔ, ɛfiri sɛ, Israelfoɔ bɔne ama efi aka beaeɛ hɔ ne Ahyiaeɛ Ntomadan no a wɔasi wɔ wɔn mfimfini hɔ no.
17 ೧೭ ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾ ಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದಲ್ಲಿ ಹೋಗಬಾರದು. ಹಾಗೆ ತನಗಾಗಿಯೂ, ತನ್ನ ಮನೆತನದವರಿಗಾಗಿಯೂ ಮತ್ತು ಇಸ್ರಾಯೇಲರ ಎಲ್ಲಾ ಜನಸಮೂಹಕ್ಕಾಗಿಯೂ ದೋಷಪರಿಹಾರ ಮಾಡುವನು.
Sɛ Aaron wura Ahyiaeɛ Ntomadan no mu kɔ kronkronbea hɔ rekɔyɛ mpatadwuma no a, ɛnni ho kwan sɛ obiara kɔ hɔ bi, gye sɛ ɔyɛ mpatadeɛ no ma ne ho ne ne fiefoɔ ne Israelfoɔ nyinaa wie.
18 ೧೮ ತರುವಾಯ ಅವನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಹಾಗೂ ಆ ಹೋತದ ರಕ್ತದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
“Afei, ɔbɛkɔ afɔrebukyia no ho wɔ Awurade anim akɔyɛ mpatadeɛ ama afɔrebukyia no. Ɛsɛ sɛ ɔde nantwinini ba no ne abirekyie mogya no fɔre mmɛn a ɛtuatua afɔrebukyia no ho no ho,
19 ೧೯ ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿ ಇಸ್ರಾಯೇಲರಿಂದ ಅದಕ್ಕೆ ಉಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.
na ɔde ne nsateaa baako pete mogya no mprɛnson gu afɔrebukyia no so de te ho firi Israelfoɔ bɔne no ho yɛ no kronkron.
20 ೨೦ “ಆರೋನನು ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ ಇವುಗಳಿಗೋಸ್ಕರ ದೋಷಪರಿಹಾರ ಮಾಡಿ ಮುಗಿಸಿದ ಮೇಲೆ ಆ ಸಜೀವವಾದ ಹೋತವನ್ನು ತರಿಸಬೇಕು.
“Sɛ ɔwie mpatadeɛ a ɛfa kronkronbea hɔ ne Ahyiaeɛ Ntomadan no ho nsɛm nyinaa ne afɔrebukyia no ho a, ɔde abirekyie no bɛba anikann
21 ೨೧ ಅವನು ಅದರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು, ಇಸ್ರಾಯೇಲರ ಎಲ್ಲಾ ಪಾಪಗಳನ್ನು, ದ್ರೋಹಗಳನ್ನು ಮತ್ತು ಅಪರಾಧಗಳನ್ನು ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು.
de ne nsa mmienu agu aboa no apampam, na waka atirimuɔden ne atuateɛ a Israelfoɔ ayɛ, wɔn bɔne nyinaa de agu abirekyie no apampam, na obi a wɔayi no sɛ ɔnyɛ saa adwuma no de aboa no bɛkɔ ɛserɛ so.
22 ೨೨ ಆ ಹೋತ ಅವರ ಎಲ್ಲಾ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಪ್ರದೇಶಕ್ಕೆ ಹೋಗುವಂತೆ ಆ ಮನುಷ್ಯನು ಅದನ್ನು ಅರಣ್ಯಕ್ಕೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
Enti abirekyie no bɛsoa nnipa no bɔne nyinaa de akɔ asase a obi nte so no so na onii no agyaa no wɔ ɛserɛ so hɔ.
23 ೨೩ “ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು ತಾನು ಮಹಾಪವಿತ್ರಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಡಬೇಕು.
“Afei, Aaron bɛkɔ Ahyiaeɛ Ntomadan mu hɔ bio akɔworɔ nʼatadeɛ nahanaha a ɔhyɛɛ wɔ ntwamutam no akyi no na wagya no wɔ hɔ.
24 ೨೪ ಅವನು ಪವಿತ್ರ ಸ್ಥಳದ ಪ್ರಾಕಾರದಲ್ಲಿ ಸ್ನಾನಮಾಡಿ, ತನ್ನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಆಗ ಅವನು ಹೊರಗೆ ಬಂದು ತನಗಾಗಿಯೂ ಮತ್ತು ಜನಸಮೂಹಕ್ಕಾಗಿಯೂ ಸರ್ವಾಂಗಹೋಮಗಳನ್ನು ಸಮರ್ಪಿಸಿ, ತನಗಾಗಿಯೂ ಮತ್ತು ಜನರಿಗಾಗಿಯೂ ದೋಷಪರಿಹಾರ ಮಾಡಬೇಕು.
Ɔbɛkɔ akɔdware wɔ baabi a wɔate hɔ ho na wahyɛ ne ntadeɛ no bio na wafiri adi akɔbɔ ɔno ankasa ɔhyeɛ afɔdeɛ asane abɔ ɔhyeɛ afɔdeɛ ama nnipa no na wayɛ mpatadeɛ ama ne ho ne wɔn.
25 ೨೫ ಅವನು ದೋಷಪರಿಹಾರಕ ಯಜ್ಞಪಶುಗಳ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು.
Ɔbɛhye sradeɛ de abɔ bɔne ho afɔdeɛ wɔ afɔrebukyia no so.
26 ೨೬ “ಅಜಾಜೇಲನಿಗೆ ಹೋತವನ್ನು ಬಿಟ್ಟುಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
“Akyire no, ɔbarima a ɔde abirekyie no kɔɔ ɛserɛ so no bɛsi ne ntoma na wadware na wasane aba beaeɛ hɔ bio.
27 ೨೭ ದೋಷಪರಿಹಾರಕ ಯಜ್ಞಪಶುಗಳಾದ ಹೋರಿ ಮತ್ತು ಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ಶರೀರಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ, ಚರ್ಮ, ಮಾಂಸ ಮತ್ತು ಕಲ್ಮಷಗಳೆಲ್ಲವನ್ನು ಬೆಂಕಿಯಿಂದ ಸುಡಿಸಬೇಕು.
Na nantwie ba ne abirekyie a wɔde bɔɔ bɔne ho afɔdeɛ no a Aaron de wɔn mogya kɔɔ kronkronbea hɔ kɔyɛɛ mpatadeɛ no, wɔde wɔn bɛkɔ sraban no akyiri baabi akɔhye a wɔn ho nhoma ne wɔn ayamdeɛ ka ho.
28 ೨೮ ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯದೊಳಗೆ ಬರಬೇಕು.
Akyire yi, onipa a ɔrebɛhye afɔrebɔdeɛ no bɛsi ne ntoma, adware na wasane akɔ beaeɛ hɔ bio.
29 ೨೯ “ಸ್ವದೇಶಸ್ಥರಾದ ನೀವೂ ಮತ್ತು ನಿಮ್ಮಲ್ಲಿ ವಾಸವಾಗಿರುವ ಅನ್ಯದೇಶದವರು, ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸಕಲ ವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. ಇದು ನಿಮಗೆ ಶಾಶ್ವತವಾದ ನಿಯಮ.
“Yei yɛ mmara a ɛwɔ hɔ daa. Ɔbosome a ɛtɔ so nson dadu so no, ɛnsɛ sɛ moyɛ adwuma biara, na mmom, momfa saa ɛda no nkari mo ho nhwɛ wɔ ahobrɛaseɛ mu. Saa mmara yi ka wɔn a wɔwoo wɔn wɔ asase yi so anaa ahɔhoɔ a wɔne Israelfoɔ teɛ;
30 ೩೦ ಏಕೆಂದರೆ ನೀವು ಪರಿಶುದ್ಧರಾಗುವುದಕ್ಕಾಗಿ ಈ ದಿನದಲ್ಲಿ ನಿಮಗೋಸ್ಕರ ದೋಷಪರಿಹಾರವಾಗುವುದು, ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವವು.
ɛfiri sɛ, ɛda yi na wɔde kae mo mpata ne mo ahodwira wɔ mo bɔne ho wɔ Awurade anim.
31 ೩೧ ಈ ದಿನ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸ ಮಾಡಬೇಕು; ಇದೇ ನಿಮಗೆ ಶಾಶ್ವತನಿಯಮ.
Ɛyɛ homeda a ɛsɛ sɛ mode home enti ɛsɛ sɛ modi ɛda no dinn wɔ ahobrɛaseɛ mu. Ɛyɛ mmara a ɛwɔ hɔ daa.
32 ೩೨ “ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ಆಚರಿಸಬೇಕು. ಅವನೇ ಆ ಪರಿಶುದ್ಧವಾದ ನಾರುಮಡಿಗಳನ್ನು ಧರಿಸಿಕೊಳ್ಳಬೇಕು.
Saa ahyɛdeɛ yi, awoɔ ntoatoasoɔ akyi, Ɔsɔfopanin a wɔasra no no na ɔbɛsi ne nana Aaron anan adi ho dwuma wɔ beaeɛ hɔ. Ɔno nko ara na ɔwɔ ho kwan sɛ ɔhyɛ atadeɛ kronkron nahanaha no
33 ೩೩ ಅವನು ದೇವಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ, ಯಾಜಕರು, ಜನಸಮೂಹದವರು ಈ ಎಲ್ಲರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು.
na ɔyɛ mpatadeɛ wɔ kronkronbea hɔ wɔ Ahyiaeɛ Ntomadan mu hɔ, afɔrebukyia no so, de ma asɔfoɔ no ne nnipa no.
34 ೩೪ ಇಸ್ರಾಯೇಲರ ಎಲ್ಲಾ ದೋಷಗಳನ್ನು ನಿವಾರಣೆಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ದೋಷಪರಿಹಾರವನ್ನು ಮಾಡಬೇಕೆಂಬುದೇ ನಿಮಗೆ ಶಾಶ್ವತನಿಯಮ” ಎಂದು ಹೇಳಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.
“Yei bɛyɛ mmara a ɛbɛtena hɔ daa ama mo, na Israelfoɔ bɔne enti, moagyina so afe biara de ayɛ mpatadeɛ ama Israelfoɔ afiri wɔn bɔne nyinaa mu.” Na Mose dii mmara a Awurade hyɛ maa no nyinaa so.

< ಯಾಜಕಕಾಂಡ 16 >