< ಯಾಜಕಕಾಂಡ 16 >
1 ೧ ಆರೋನನ ಇಬ್ಬರು ಮಕ್ಕಳು ಯೆಹೋವನ ಸನ್ನಿಧಿಗೆ ಬಂದು ನಾಶವಾದ ಮೇಲೆ ಯೆಹೋವನು ಮೋಶೆಯ ಸಂಗಡ ಮಾತನಾಡಿ,
၁အာရုန်၏ သားနှစ်ယောက်တို့သည်၊ ထာဝရဘုရားရှေ့တော်၌ ပူဇော်၍ သေသောနောက်၊ ထာဝရဘုရားသည် မောရှေအား မိန့်တော်မူသည်ကား၊-
2 ೨ “ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ ಮಹಾಪವಿತ್ರವಾದ ಸ್ಥಾನದೊಳಕ್ಕೆ ಮಂಜೂಷದ ಮೇಲಣ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವುದರಿಂದ ಅವನು ನಾಶವಾಗುವನು.
၂သင်၏အစ်ကိုအာရုန်သည် သေဘေးနှင့်ကင်းလွတ်မည်အကြောင်း၊ သန့်ရှင်းရာဌာနတော်အထဲ၊ သေတ္တာအပေါ်မှာ တင်သောအဖုံးကို ကွယ်ကာသော ကုလားကာ အတွင်းသို့ အခါခပ်သိမ်း မဝင်စေ ခြင်းငှါ ဆင့်ဆိုလော့။ ငါသည် သေတ္တာအဖုံးအပေါ်၊ မိုဃ်းတိမ်၌ ထင်ရှားမည်။
3 ೩ ಆರೋನನು ಮಹಾಪವಿತ್ರಸ್ಥಾನದೊಳಗೆ ಬರುವಾಗ ಮುಂದೆ ಹೇಳುವ ರೀತಿಯಲ್ಲಿ ಬರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಹೋರಿಯನ್ನು ಮತ್ತು ಸರ್ವಾಂಗಹೋಮಕ್ಕಾಗಿ ಟಗರನ್ನು ತರಬೇಕು.
၃အာရုန်သည် သန့်ရှင်းရာဌာနတော်အထဲသို့ အဘယ်သို့ ဝင်ရမည်နည်းဟူမူကား၊ အပြစ်ဖြေရာယဇ် ဘို့ အသက်ပျိုသော နွားထီးတကောင်၊ မီးရှို့ရာယဇ်ဘို့ သိုးထီးတကောင် ပါရမည်။
4 ೪ ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನು ತೊಟ್ಟುಕೊಂಡು, ನಾರಿನ ಒಳಉಡುಪನ್ನು ಹಾಕಿಕೊಂಡು, ನಾರಿನ ನಡುಕಟ್ಟನ್ನು ಕಟ್ಟಿಕೊಂಡು ಮತ್ತು ತಲೆಗೆ ನಾರಿನ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನಮಾಡಬೇಕು.
၄သန့်ရှင်းသော ပိတ်ချောအင်္ကျီ၊ ပိတ်ချောပေါင်းဘီကို ဝတ်၍၊ ပိတ်ချောခါးပန်းကို စည်းရမည်။ ပိတ်ချောဗေါင်းကိုလည်း ဆောင်းရမည်။ ထိုအဝတ်တန်ဆာတို့သည် သန့်ရှင်းသောကြောင့်၊ ကိုယ်ကို ရေချိုးပြီးမှ ဝတ်ဆင်ရမည်။
5 ೫ ಇಸ್ರಾಯೇಲರ ಜನಸಮೂಹದಿಂದ ದೋಷಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
၅အပြစ်ဖြေရာယဇ်ဘို့ ဆိတ်သငယ်နှစ်ကောင်၊ မီးရှို့ရာယဇ်ဘို့ သိုးတကောင်ကို၊ ဣသရေလအမျိုးသား ပရိသတ် လက်မှခံယူရမည်။
6 ೬ ಆರೋನನು ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರ ಮಾಡಬೇಕು.
၆အာရုန်သည် မိမိနှင့်ဆိုင်သော မိမိအပြစ်ဖြေရာယဇ်နွားကို ပူဇော်၍၊ မိမိအဘို့နှင့် မိမိအိမ်သူများ အဘို့ အပြစ်ဖြေခြင်းကို ပြုရမည်။
7 ೭ ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
၇ဆိတ်နှစ်ကောင်ကိုလည်းယူ၍ ပရိသတ်စည်းဝေးရာ တဲတော်တံခါးနား၊ ထာဝရဘုရား ရှေ့တော်၌ ဆက်ရမည်။
8 ೮ ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು.
၈အာရုန်သည် ထိုဆိတ်နှစ်ကောင်ကို ထာဝရဘုရားအဘို့ စာရေးတံတတံ၊ လွတ်လပ်လဟာအဘို့ တတံ၊ စာရေးတံနှစ်တံချ၍၊
9 ೯ ಯಾವ ಹೋತ ಯೆಹೋವನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಬೇಕು.
၉ထာဝရဘုရားအဘို့ စာရေးတံကျသော ဆိတ်ကို ဆောင်ခဲ့၍ အပြစ်ဖြေရာယဇ်ဘို့ ပူဇော်ရမည်။
10 ೧೦ ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷವನ್ನು ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಬೇಕು.
၁၀လွတ်လပ်လဟာအဘို့ စာရေးတံကျသော ဆိတ်ကို၊ အသက်ရှင်လျက် ထာဝရဘုရားရှေ့တော်၌ ဆက်၍၊ သူ့အပေါ်မှာ အပြစ်ဖြေခြင်းကို ပြုပြီးလျှင်၊ တော၌ လွတ်လပ်လဟာသို့ လွှတ်လိုက်ရမည်။
11 ೧೧ “ಆರೋನನು ತನಗಾಗಿ ದೋಷಪರಿಹಾರಕ ಯಜ್ಞದ ಹೋರಿಯನ್ನು ಸಮರ್ಪಿಸಿ ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರವನ್ನು ಮಾಡಬೇಕು.
၁၁အာရုန်သည် မိမိနှင့်ဆိုင်သော အပြစ်ဖြေရာယဇ်နွားကို ဆောင်ခဲ့ပြီးလျှင်၊ မိမိအဘို့နှင့် မိမိအိမ်သူ အိမ်သားများအဘို့ အပြစ်ဖြေခြင်းကို ပြု၍၊ မိမိနှင့်ဆိုင်သော အပြစ်ဖြေရာယဇ်နွားကို သတ်ရမည်။
12 ೧೨ ಅವನು ತನಗೋಸ್ಕರ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ, ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ಅವುಗಳನ್ನು ತೆರೆಯೊಳಗೆ ತರಬೇಕು.
၁၂ထာဝရဘုရားရှေ့တော် ယဇ်ပလ္လင် မီးခဲနှင့် ပြည့်သောလင်ပန်းကို ကိုင်လျက်၊ ညက်စွာသော နံ့သာ ပေါင်းမွှေးအမှုန့်ကို မိမိလက်၌ အပြည့်ယူ၍၊ ကုလားကာအတွင်းသို့ ဆောင်သွားရမည်။
13 ೧೩ ಅವನು ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಆ ಧೂಪದ ಹೊಗೆಯು ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಆವರಿಸಿಕೊಳ್ಳುವುದು.
၁၃ထိုအခါ သူသည်သေဘေးနှင့် ကင်းလွတ်မည်အကြောင်း၊ နံ့သာပေါင်းအခိုးအငွေ့သည် သက်သေခံ ချက် အပေါ်မှာရှိသော သေတ္တာအဖုံးကို မွှန်းစေခြင်းငှါ၊ ထာဝရဘုရားရှေ့တော်၌ နံ့သာပေါင်းကို မီးပေါ်မှာ တင်ရမည်။
14 ೧೪ ಆಗ ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
၁၄နွားအသွေးအချို့ကိုလည်း ယူ၍ အရှေ့မျက်နှာဘက် သေတ္တာဖုံးအပေါ်၌ လက်ညှိုးနှင့် ဖြန်းရမည်။ သေတ္တာဖုံး ရှေ့၌လည်း ခုနှစ်ကြိမ်တိုင်အောင် လက်ညှိုးနှင့်ဖြန်းရမည်။
15 ೧೫ “ತರುವಾಯ ಅವನು ಜನರಿಗಾಗಿ ಮಾಡಿದ ದೋಷಪರಿಹಾರಕ ಯಜ್ಞದ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯೊಳಗೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ, ಕೃಪಾಸನದ ಮೇಲೆಯೂ ಮತ್ತು ಅದರ ಎದುರಾಗಿಯೂ ಚಿಮುಕಿಸಬೇಕು.
၁၅ထိုနောက် လူများနှင့်ဆိုင်သော အပြစ်ဖြေရာယဇ်ဆိတ်ကိုသတ်၍၊ အသွေးကို ကုလားကာအတွင်း သို့ ဆောင်ခဲ့ပြီးလျှင်၊ နွားအသွေးကို ဖြန်းသကဲ့သို့၊ သေတ္တာဖုံးအပေါ်၌၎င်း၊ ရှေ့၌၎င်း ဖြန်းရမည်။
16 ೧೬ ಹೀಗೆ ಇಸ್ರಾಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೋಸ್ಕರವೂ ಅವನು ಹಾಗೆಯೇ ದೋಷಪರಿಹಾರ ಮಾಡುವನು.
၁၆ဣသရေလအမျိုးသားတို့၏ မစင်ကြယ်သော အပြစ်ကြောင့်၎င်း၊ ပြစ်မှားသော အပြစ်အမျိုးမျိုးတို့ ကြောင့်၎င်း၊ သန့်ရှင်းရာ ဌာနတော်အဘို့ အပြစ်ဖြေခြင်းကို ပြုရမည်။ ထိုသို့ ဣသရေလအမျိုးသား တို့၏ မစင်ကြယ်သော အပြစ်ထဲမှာနေရသော ပရိသတ်စည်းဝေးရာ တဲတော်အဘို့ ပြုရမည်။
17 ೧೭ ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾ ಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದಲ್ಲಿ ಹೋಗಬಾರದು. ಹಾಗೆ ತನಗಾಗಿಯೂ, ತನ್ನ ಮನೆತನದವರಿಗಾಗಿಯೂ ಮತ್ತು ಇಸ್ರಾಯೇಲರ ಎಲ್ಲಾ ಜನಸಮೂಹಕ್ಕಾಗಿಯೂ ದೋಷಪರಿಹಾರ ಮಾಡುವನು.
၁၇သန့်ရှင်းရာဌာနတော်၌ အပြစ်ဖြေခြင်းကို ပြုအံ့သောငှါ ဝင်သောအခါ၊ မိမိအဘို့၊ မိမိအိမ်သူအိမ် သားများအဘို့၊ ဣသရေလပရိသတ်အပေါင်းတို့အဘို့၊ အပြစ်ဖြေခြင်းကိုပြု၍ မထွက်မှီတိုင်အောင်၊ ပရိသတ်စည်းဝေးရာ တဲတော်ထဲမှာ အဘယ်သူမျှ မနေရ။
18 ೧೮ ತರುವಾಯ ಅವನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಹಾಗೂ ಆ ಹೋತದ ರಕ್ತದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
၁၈နောက်တဖန် ထာဝရဘုရားရှေ့တော် ယဇ်ပလ္လင်သို့ ထွက်လာ၍ ထိုပလ္လင်အဘို့ အပြစ်ဖြေခြင်းကို ပြုအံ့သောငှါ၊ နွားအသွေး၊ ဆိတ်အသွေးကိုယူ၍ ယဇ်ပလ္လင်ပတ်လည် ဦးချိုတို့၌ ထည့်ရမည်။
19 ೧೯ ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿ ಇಸ್ರಾಯೇಲರಿಂದ ಅದಕ್ಕೆ ಉಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.
၁၉ယဇ်ပလ္လင်အပေါ်၌လည်း ထိုအသွေးကို လက်ညှိုးနှင့် ခုနှစ်ကြိမ်တိုင်အောင် ဖြန်း၍ ဣသရေလ အမျိုးသားတို့၏ မစင်ကြယ်သောအပြစ်မှ စင်ကြယ်သန့်ရှင်းစေရမည်။
20 ೨೦ “ಆರೋನನು ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ ಇವುಗಳಿಗೋಸ್ಕರ ದೋಷಪರಿಹಾರ ಮಾಡಿ ಮುಗಿಸಿದ ಮೇಲೆ ಆ ಸಜೀವವಾದ ಹೋತವನ್ನು ತರಿಸಬೇಕು.
၂၀ထိုသို့ သန့်ရှင်းရာ ဌာနတော်အဘို့၊ ပရိသတ်စည်းဝေးရာ တဲတော်အဘို့၊ ယဇ်ပလ္လင်အဘို့၊ အပြစ်ဖြေခြင်းကို ပြီးစီးပြီးမှ၊ အသက်ရှင်သော ဆိတ်ကို ဆောင်ခဲ့ရမည်။
21 ೨೧ ಅವನು ಅದರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು, ಇಸ್ರಾಯೇಲರ ಎಲ್ಲಾ ಪಾಪಗಳನ್ನು, ದ್ರೋಹಗಳನ್ನು ಮತ್ತು ಅಪರಾಧಗಳನ್ನು ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು.
၂၁အာရုန်သည် အသက်ရှင်သော ဆိတ်ခေါင်းပေါ်မှာ လက်နှစ်ဘက်ကို တင်လျက်၊ ဣသရေလအမျိုး သားတို့၏ ဒုစရိုက်မှစ၍ ပြစ်မှားသောအပြစ် အမျိုးမျိုးရှိသမျှတို့ကို ဘော်ပြ၍၊ ဆိတ်ခေါင်းပေါ်မှာ တင်ထားပြီးလျှင်၊ တော်လျော်သော လူတွင် တောသို့ စေလွှတ်ရမည်။
22 ೨೨ ಆ ಹೋತ ಅವರ ಎಲ್ಲಾ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಪ್ರದೇಶಕ್ಕೆ ಹೋಗುವಂತೆ ಆ ಮನುಷ್ಯನು ಅದನ್ನು ಅರಣ್ಯಕ್ಕೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
၂၂သူတို့အပြစ်ရှိသမျှကို၊ လူမနေသော အရပ်သို့ ဆောင်သွားသော ထိုဆိတ်ကို တော၌ လွှတ်လိုက်ရမည်။
23 ೨೩ “ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು ತಾನು ಮಹಾಪವಿತ್ರಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಡಬೇಕು.
၂၃တဖန် အာရုန်သည် ပရိသတ်စည်းဝေးရာ တဲတော်ထဲသို့ဝင်၍၊ သန့်ရှင်းရာဌာနတော်ထဲသို့ အရင် ဝင်သောအခါ၊ ဝတ်သော ပိတ်ချော အဝတ်ကို ချွတ်၍ ထိုအရပ်၌ ထားရမည်။
24 ೨೪ ಅವನು ಪವಿತ್ರ ಸ್ಥಳದ ಪ್ರಾಕಾರದಲ್ಲಿ ಸ್ನಾನಮಾಡಿ, ತನ್ನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಆಗ ಅವನು ಹೊರಗೆ ಬಂದು ತನಗಾಗಿಯೂ ಮತ್ತು ಜನಸಮೂಹಕ್ಕಾಗಿಯೂ ಸರ್ವಾಂಗಹೋಮಗಳನ್ನು ಸಮರ್ಪಿಸಿ, ತನಗಾಗಿಯೂ ಮತ್ತು ಜನರಿಗಾಗಿಯೂ ದೋಷಪರಿಹಾರ ಮಾಡಬೇಕು.
၂၄သန့်ရှင်းရာ ဌာန၌ ကိုယ်ကို ရေချိုး၍၊ မိမိအဝတ်ကို ဝတ်ပြီးမှ တဖန်ထွက်လာ၍၊ မိမိမီးရှို့ရာယဇ်၊ လူများမီးရှို့ရာယဇ်ကို ပူဇော်သဖြင့်၊ မိမိအဘို့နှင့် လူများအဘို့ အပြစ်ဖြေခြင်းကို ပြုရမည်။
25 ೨೫ ಅವನು ದೋಷಪರಿಹಾರಕ ಯಜ್ಞಪಶುಗಳ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು.
၂၅အပြစ်ဖြေရာ ယဇ်ကောင်ဆီဥကို ယဇ်ပလ္လင်ပေါ်မှာ မီးရှို့ရမည်။
26 ೨೬ “ಅಜಾಜೇಲನಿಗೆ ಹೋತವನ್ನು ಬಿಟ್ಟುಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
၂၆လွတ်လပ်လဟာသို့ ဆိတ်ကို လွှတ်လိုက်သောသူသည်လည်း မိမိအဝတ်ကို လျှော်၍ ကိုယ်ကို ရေချိုး ရမည်။ ထိုနောက်မှ တပ်ထဲသို့ ဝင်ရမည်။
27 ೨೭ ದೋಷಪರಿಹಾರಕ ಯಜ್ಞಪಶುಗಳಾದ ಹೋರಿ ಮತ್ತು ಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ಶರೀರಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ, ಚರ್ಮ, ಮಾಂಸ ಮತ್ತು ಕಲ್ಮಷಗಳೆಲ್ಲವನ್ನು ಬೆಂಕಿಯಿಂದ ಸುಡಿಸಬೇಕು.
၂၇သန့်ရှင်းရာဌာနတော်၌ အပြစ်ဖြေခြင်းကို ပြုအံ့သောငှါ ဆောင်သွင်းသော အသွေးနှင့်ဆိုင်သော အပြစ်ဖြေရာယဇ်နွားကို၎င်း၊ အပြစ်ဖြေရာယဇ် ဆိတ်ကို၎င်း၊ တပ်ပြင်သို့ ယူသွား၍ အရေ၊ အသား၊ ချေးနုကို မီးရှို့ရမည်။
28 ೨೮ ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯದೊಳಗೆ ಬರಬೇಕು.
၂၈မီးရှို့သောသူသည်လည်း မိမိအဝတ်ကို လျော်၍ ကိုယ်ကို ရေချိုးရမည်။ ထိုနောက်မှ တပ်ထဲသို့ ဝင်ရမည်။
29 ೨೯ “ಸ್ವದೇಶಸ್ಥರಾದ ನೀವೂ ಮತ್ತು ನಿಮ್ಮಲ್ಲಿ ವಾಸವಾಗಿರುವ ಅನ್ಯದೇಶದವರು, ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸಕಲ ವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. ಇದು ನಿಮಗೆ ಶಾಶ್ವತವಾದ ನಿಯಮ.
၂၉သင်တို့သည် အစဉ်စောင့်ရသော ပညတ်တော်ဟူမူကား၊ အမျိုးသားချင်းဖြစ်စေ၊ သင်တို့တွင် တည်းနေ သော တပါးအမျိုးသားဖြစ်စေ၊ သတ္တမလ ဆယ်ရက်နေ့၌ အလုပ်ကို အလျှင်းမလုပ်၊ ခြိုးခြံစွာ ကျင့်လျက်နေရကြမည်။
30 ೩೦ ಏಕೆಂದರೆ ನೀವು ಪರಿಶುದ್ಧರಾಗುವುದಕ್ಕಾಗಿ ಈ ದಿನದಲ್ಲಿ ನಿಮಗೋಸ್ಕರ ದೋಷಪರಿಹಾರವಾಗುವುದು, ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವವು.
၃၀အကြောင်းမူကား၊ သင်တို့သည် ထာဝရဘုရားရှေ့တော်၌ အပြစ်ရှိသမျှတို့နှင့် ကင်းစင်မည်အကြောင်း၊ ထိုနေ့ရက်၌ ယဇ်ပုရောဟိတ်သည် သင်တို့ကို စင်ကြယ်စေခြင်းငှါ၊ အပြစ်ဖြေခြင်းကို ပြုရမည်။
31 ೩೧ ಈ ದಿನ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸ ಮಾಡಬೇಕು; ಇದೇ ನಿಮಗೆ ಶಾಶ್ವತನಿಯಮ.
၃၁ထိုနေ့ရက်သည် ထာဝရပညတ်တော်အတိုင်း၊ သင်တို့ ငြိမ်ဝပ်ရာ ဥပုသ်နေ့၊ ခြိုးခြံစွာကျင့်ရသော နေ့ ဖြစ်သတည်း။
32 ೩೨ “ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ಆಚರಿಸಬೇಕು. ಅವನೇ ಆ ಪರಿಶುದ್ಧವಾದ ನಾರುಮಡಿಗಳನ್ನು ಧರಿಸಿಕೊಳ್ಳಬೇಕು.
၃၂အဘအရာ၌ ယဇ်ပုရောဟိတ်အမှုကို ဆောင်စေခြင်းငှါ၊ အရင်ယဇ်ပုရောဟိတ်လက်မှ ဘိသိက်နှင့် တကွ ယဇ်ပုရောဟိတ်အရာကို ခံသောသူသည်၊ ထိုအပြစ်ဖြေခြင်းကို ပြုရမည်။ ထိုယဇ်ပုရောဟိတ် သည် သန့်ရှင်းသော ပိတ်ချောအဝတ်ကို ဝတ်၍၊-
33 ೩೩ ಅವನು ದೇವಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ, ಯಾಜಕರು, ಜನಸಮೂಹದವರು ಈ ಎಲ್ಲರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು.
၃၃သန့်ရှင်းရာဌာနတော်အဘို့၊ ပရိသတ်စည်းဝေးရာ တဲတော်အဘို့၊ ယဇ်ပလ္လင်အဘို့၊ ယဇ်ပုရောဟိတ် များအဘို့၊ ပရိသတ်အပေါင်းတို့အဘို့ အပြစ်ဖြေခြင်းကို ပြုရမည်။
34 ೩೪ ಇಸ್ರಾಯೇಲರ ಎಲ್ಲಾ ದೋಷಗಳನ್ನು ನಿವಾರಣೆಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ದೋಷಪರಿಹಾರವನ್ನು ಮಾಡಬೇಕೆಂಬುದೇ ನಿಮಗೆ ಶಾಶ್ವತನಿಯಮ” ಎಂದು ಹೇಳಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.
၃၄ဤရွေ့ကား၊ ဣသရေလအမျိုးသားတို့၏ အပြစ်ရှိသမျှတို့ကြောင့် တနှစ်တခါ အပြစ်ဖြေခြင်းကို ပြုမည်အကြောင်း၊ သင်တို့သည် အစဉ်စောင့်ရသော ပညတ်တော်ဖြစ်သတည်းဟု မောရှေအား ထာဝရဘုရားမှာထားတော်မူသည်အတိုင်း အာရုန်ပြုလေ၏။