< ನ್ಯಾಯಸ್ಥಾಪಕರು 20 >

1 ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ, ಗಿಲ್ಯಾದಿನಲ್ಲಿಯೂ ಇರುವ ಇಸ್ರಾಯೇಲರೆಲ್ಲರೂ ಏಕಮನಸ್ಸಿನಿಂದ ಹೊರಟು ಮಿಚ್ಪೆಗೆ ಬಂದು ಯೆಹೋವನ ಸನ್ನಿಧಿಯಲ್ಲಿ ಸಭೆ ಸೇರಿದರು.
Khona bonke abantwana bakoIsrayeli baphuma, inhlangano yonke yabuthana njengamuntu munye, kusukela eDani kusiya eBherishebha lelizwe leGileyadi, eNkosini eMizipa.
2 ಆ ದೇವಜನರ ಸಭೆಯಲ್ಲಿ ಎಲ್ಲಾ ಕುಲಾಧಿಪತಿಗಳೂ, ಯುದ್ಧಸನ್ನದ್ಧರಾದ ನಾಲ್ಕು ಲಕ್ಷ ಕಾಲಾಳುಗಳೂ ಇದ್ದರು.
Njalo induna zabo bonke abantu, zazo zonke izizwe zakoIsrayeli, zazimisa ebandleni labantu bakaNkulunkulu, izinkulungwane ezingamakhulu amane zamadoda ahamba ngenyawo, ahwatsha inkemba.
3 ಇಸ್ರಾಯೇಲರು ಕೂಡಿಕೊಂಡು ಮಿಚ್ಪೆಗೆ ಬಂದಿದ್ದಾರೆಂಬ ವರ್ತಮಾನವು ಬೆನ್ಯಾಮೀನ್ಯರಿಗೆ ಮುಟ್ಟಿತು. ಇಸ್ರಾಯೇಲರು, “ಈ ದುಷ್ಟತನವು ಹೇಗೆ ನಡೆಯಿತೆಂದು ತಿಳಿಸಿರಿ” ಎಂದು ಕೇಳಲು
(Abantwana bakoBhenjamini basebesizwa ukuthi abantwana bakoIsrayeli babenyukele eMizipa.) Abantwana bakoIsrayeli basebesithi: Tshono, lobububi benziwa njani?
4 ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು, “ನಾನು ನನ್ನ ಉಪಪತ್ನಿಯ ಸಹಿತವಾಗಿ ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ಒಂದು ರಾತ್ರಿ ಉಳಿದುಕೊಂಡೆನು.
Indoda engumLevi, indoda yalowo owesifazana owayebulewe, yasiphendula yathi: Ngafika eGibeya engeyakoBhenjamini, mina lomfazi wami omncane, ukuze silale khona.
5 ಆ ಊರಿನ ಜನರು ನನ್ನನ್ನು ಕೊಲ್ಲಬೇಕೆಂದು ಅದೇ ರಾತ್ರಿ ನಾನು ಇಳಿದುಕೊಂಡಿದ್ದ ಮನೆಯನ್ನು ಸುತ್ತಿಕೊಂಡರು, ಮತ್ತು ನನ್ನ ಉಪಪತ್ನಿಯನ್ನು ಭಂಗಪಡಿಸಿದರು, ಆಕೆಯು ಸತ್ತುಹೋದಳು.
Abahlali beGibeya basebengivukela, bazingelezela indlu bemelene lami ebusuku, befuna ukungibulala, bamdlova umfazi wami omncane, waze wafa.
6 ಅವರು ಇಸ್ರಾಯೇಲರಲ್ಲಿ ನಡೆಸಿದ ಇಂಥ ಕೆಟ್ಟ ಮತ್ತು ಕ್ರೂರ ಕೆಲಸವು ಎಲ್ಲರಿಗೂ ಗೊತ್ತಾಗಲೆಂದು ನಾನು ಆಕೆಯ ಶವವನ್ನು ತುಂಡುಮಾಡಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದೆನು.
Ngasengimbamba umfazi wami omncane, ngamquma iziqa, ngamthumela elizweni lonke lelifa lakoIsrayeli, ngoba benza amanyala lobuwula koIsrayeli.
7 ಇಲ್ಲಿ ಕೂಡಿರುವ ಎಲ್ಲಾ ಇಸ್ರಾಯೇಲರೇ, ಈಗ ನಿಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹೇಳಿರಿ” ಅಂದನು.
Khangelani, lina lonke lingabantwana bakoIsrayeli, phanini ilizwi leseluleko senu lapha.
8 ಇದನ್ನು ಕೇಳಿ ಜನರು ಏಕಮನಸ್ಸಿನಿಂದ, “ನಮ್ಮಲ್ಲಿ ಯಾವನೂ ತನ್ನ ಗುಡಾರಕ್ಕೆ ಹೋಗಬಾರದು; ತನ್ನ ಮನೆಗೆ ಹಿಂದಿರುಗದಿರಲಿ.
Abantu bonke basebesukuma njengamuntu munye besithi: Asiyikuya, ngulowo ethenteni lakhe, njalo asiyikuphambukela, ngulowo endlini yakhe.
9 ನಾವು ಚೀಟು ಹಾಕೋಣ; ಅದು ಬಿದ್ದ ಪ್ರಕಾರವೇ ಗಿಬೆಯದವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ.
Kodwa khathesi, nansi into esizayenza kuyo iGibeya. Sizamelana layo ngenkatho,
10 ೧೦ ಇಸ್ರಾಯೇಲ್ಯರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವುದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾಮೀನ್ಯರಾದ ಗಿಬೆಯದವರು ಇಸ್ರಾಯೇಲರಲ್ಲಿ ನಡೆಸಿದ ದುಷ್ಟ ಕಾರ್ಯಕ್ಕಾಗಿ ಅವರಿಗೆ ದಂಡನೆಮಾಡೋಣ” ಅಂದುಕೊಂಡರು.
sithathe abantu abalitshumi phakathi kwekhulu ezizweni zonke zakoIsrayeli, lekhulu phakathi kwenkulungwane, lenkulungwane phakathi kwenkulungwane ezilitshumi, ukuze bathathele abantu umphako, ukuze, nxa sebefike eGibeya koBhenjamini, benze ngokobuwula bonke ababenze koIsrayeli.
11 ೧೧ ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರೋಧವಾಗಿ ಕೂಡಿಕೊಂಡರು.
Ngakho wonke amadoda akoIsrayeli ahlanganyela umuzi, njengamuntu munye emoya munye.
12 ೧೨ ಅವರು ಬೆನ್ಯಾಮೀನ್ಯರ ಸಮಸ್ತ ಕುಲದವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ನಿಮ್ಮಲ್ಲಿ ನಡೆದ ಈ ದುಷ್ಕೃತ್ಯ ಎಂಥದು?
Izizwe zakoIsrayeli zasezithuma amadoda esizweni sonke sakoBhenjamini zisithi: Yibubi bani lobu obenzeke phakathi kwenu?
13 ೧೩ ಈಗ ಗಿಬೆಯ ಊರಲ್ಲಿರುವ ಆ ದುಷ್ಟರನ್ನು ನಮಗೆ ಒಪ್ಪಿಸಿರಿ; ನಾವು ಅವರನ್ನು ಕೊಂದು ಇಸ್ರಾಯೇಲರ ಮಧ್ಯದಿಂದ ಇಂಥ ದುಷ್ಟತನವನ್ನು ತೆಗೆದುಹಾಕುತ್ತೇವೆ” ಎಂದು ಹೇಳಿದರು.
Ngakho-ke anikeleni lawomadoda, abantwana bakaBheliyali, abaseGibeya ukuze siwabulale, sisuse ububi koIsrayeli. Kodwa abakoBhenjamini kabafunanga ukulalela ilizwi labafowabo, abantwana bakoIsrayeli.
14 ೧೪ ಆದರೆ ಬೆನ್ಯಾಮೀನ್ಯರು ತಮ್ಮ ಬಂಧುಗಳ ಮಾತಿಗೆ ಕಿವಿಗೊಡದೆ ತಮ್ಮ ಎಲ್ಲಾ ಊರುಗಳಿಂದ ಗಿಬೆಯಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಕ್ಕೆ ಸನ್ನದ್ಧರಾದರು.
Kodwa abantwana bakoBhenjamini babuthana bevela emizini baya eGibeya, ukuze baphume ukuya empini labantwana bakoIsrayeli.
15 ೧೫ ಆ ದಿನದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಸೇರಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.
Abantwana bakoBhenjamini basebebalwa ngalolosuku bevela emizini, amadoda azinkulungwane ezingamatshumi amabili lesithupha ahwatsha inkemba, ngaphandle kwabahlali beGibeya, ababalwa baba ngamadoda angamakhulu ayisikhombisa akhethiweyo.
16 ೧೬ ಈ ಎಲ್ಲಾ ಜನರಲ್ಲಿ ಏಳುನೂರು ಜನರು ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬರು ಕೂದಲೆಳೆಯಷ್ಟು ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವುದರಲ್ಲಿ ನಿಪುಣರಾಗಿದ್ದರು.
Phakathi kwabo bonke lababantu kwakulamadoda akhethiweyo angamakhulu ayisikhombisa angamanxele; wonke la ayejikijela ilitshe ngesavutha enweleni engakhuthi.
17 ೧೭ ಬೆನ್ಯಾಮೀನ್ಯರಲ್ಲದ ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು; ಇವರೆಲ್ಲರೂ ವೀರರಾಗಿದ್ದರು.
Amadoda akoIsrayeli asebalwa, ngaphandle kukaBhenjamini, amadoda azinkulungwane ezingamakhulu amane ahwatsha inkemba; wonke la ayengamadoda empi.
18 ೧೮ ಇಸ್ರಾಯೇಲ್ಯರು ಬೇತೇಲಿಗೆ ಹೋಗಿ, “ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ದೇವರಾದ ಯೆಹೋವನನ್ನು ಕೇಳಲು ಆತನು, “ಮೊದಲು ಯೆಹೂದ ಕುಲದವರು ಹೋಗಲಿ” ಎಂದು ಹೇಳಿದನು.
Abantwana bakoIsrayeli basebesukuma benyukela eBhetheli, babuza uNkulunkulu bathi: Ngubani phakathi kwethu ozakwenyukela kuqala empini labantwana bakoBhenjamini? INkosi yasisithi: NguJuda kuqala.
19 ೧೯ ಇಸ್ರಾಯೇಲ್ಯರು ಬೆಳಗ್ಗೆ ಹೊರಟುಹೋಗಿ ಗಿಬೆಯದ ಎದುರಿನಲ್ಲಿ ಪಾಳೆಯಮಾಡಿಕೊಂಡು,
Abantwana bakoIsrayeli basebevuka ekuseni, bamisa inkamba maqondana leGibeya.
20 ೨೦ ಬೆನ್ಯಾಮೀನ್ಯರೊಡನೆ ಯುದ್ಧಮಾಡುವುದಕ್ಕೋಸ್ಕರ ಸಿದ್ಧರಾಗಿ, ಗಿಬೆಯದ ಎದುರಿನಲ್ಲಿ ವ್ಯೂಹಕಟ್ಟಿ ನಿಂತರು.
Amadoda akoIsrayeli asephuma ukuya empini loBhenjamini; amadoda akoIsrayeli azihlelela ukumelana labo empini eGibeya.
21 ೨೧ ಆ ದಿನದಲ್ಲಿ ಬೆನ್ಯಾಮೀನ್ಯರು ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ನೆಲಕ್ಕುರುಳಿಸಿದರು.
Abantwana bakoBhenjamini basebephuma eGibeya, babhubhisela emhlabathini koIsrayeli ngalolosuku amadoda azinkulungwane ezingamatshumi amabili lambili.
22 ೨೨ ಇಸ್ರಾಯೇಲ್ಯರು ತಿರುಗಿ ಧೈರ್ಯ ತಂದುಕೊಂಡು ಮೊದಲನೆಯ ದಿನದಲ್ಲಿ ವ್ಯೂಹಕಟ್ಟಿದ ಸ್ಥಳದಲ್ಲೇ ತಿರುಗಿ ವ್ಯೂಹಕಟ್ಟಿ ಯುದ್ಧಕ್ಕೆ ನಿಂತರು.
Abantu, amadoda akoIsrayeli, basebeziqinisa bahlela futhi impi kuleyondawo ababezihlelele khona ngosuku lokuqala.
23 ೨೩ ಇಸ್ರಾಯೇಲ್ಯರು ಹೋಗಿ ಯೆಹೋವನ ಮುಂದೆ ಅಳುತ್ತಾ, “ನಾವು ತಿರುಗಿ ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೋ?” ಎಂದು ಕೇಳಲು, ಆತನು, “ಹೋಗಿ ಯುದ್ಧಮಾಡಿರಿ” ಅಂದನು.
Abantwana bakoIsrayeli basebesenyuka bakhala inyembezi phambi kweNkosi kwaze kwahlwa. Babuza eNkosini bathi: Ngisondele yini futhi empini ngimelane labantwana bakoBhenjamini umfowethu? INkosi yasisithi: Yenyukani limelane laye.
24 ೨೪ ಆದ್ದರಿಂದ ಅವರು ಎರಡನೆಯ ದಿನದಲ್ಲಿಯೂ ಯುದ್ಧಕ್ಕೆ ಸಿದ್ಧರಾಗಿ ಬೆನ್ಯಾಮೀನ್ಯರ ಸಮೀಪಕ್ಕೆ ಬಂದರು.
Abantwana bakoIsrayeli basebesondela ebantwaneni bakoBhenjamini ngosuku lwesibili.
25 ೨೫ ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರನ್ನು ನೆಲಕ್ಕೆ ಉರುಳಿಸಿದರು.
UBhenjamini wasephuma eGibeya emelene labo ngosuku lwesibili, babuya babhubhisela emhlabathini ebantwaneni bakoIsrayeli amadoda azinkulungwane ezilitshumi leziyisificaminwembili; bonke labo bahwatsha inkemba.
26 ೨೬ ಆಗ ಇಸ್ರಾಯೇಲ್ಯರೆಲ್ಲರೂ, ಎಲ್ಲಾ ಜನರೂ ಬೇತೇಲಿಗೆ ಹೋಗಿ ಅಲ್ಲಿ ಯೆಹೋವನ ಮುಂದೆ ಅಳುತ್ತಾ ಬಿದ್ದು ಸಾಯಂಕಾಲದ ವರೆಗೆ ಉಪವಾಸಮಾಡಿದರು. ಅಲ್ಲಿ ಅವರು ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನ ಯಜ್ಞಗಳನ್ನೂ ಸಮರ್ಪಿಸಿದರು.
Ngakho bonke abantwana bakoIsrayeli labo bonke abantu benyuka bafika eBhetheli, bakhala inyembezi bahlala lapho phambi kweNkosi, bazila ukudla ngalolosuku kwaze kwahlwa, banikela iminikelo yokutshiswa leminikelo yokuthula phambi kweNkosi.
27 ೨೭ ಆ ಕಾಲದಲ್ಲಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಊರೊಳಗಿತ್ತು;
Abantwana bakoIsrayeli basebebuza eNkosini (ngoba umtshokotsho wesivumelwano sikaNkulunkulu wawulapho ngalezonsuku,
28 ೨೮ ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕಸೇವೆಮಾಡುತ್ತಿದ್ದನು. ಹೀಗಿರುವುದರಿಂದ ಇಸ್ರಾಯೇಲ್ಯರು, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ, ಬೇಡವೋ?” ಎಂದು ಯೆಹೋವನನ್ನು ಕೇಳಿದರು. ಆತನು ಅವರಿಗೆ, “ಹೋಗಿರಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು” ಅಂದನು.
loPhinehasi indodana kaEleyazare indodana kaAroni wema phambi kwawo ngalezonsuku) besithi: Ngibuye ngiphinde yini ukuphuma impi ngimelene labantwana bakoBhenjamini umfowethu, loba ngiyekele? INkosi yasisithi: Yenyukani, ngoba kusasa ngizabanikela esandleni sakho.
29 ೨೯ ಆಗ ಇಸ್ರಾಯೇಲ್ಯರು ಗಿಬೆಯದ ಸುತ್ತಲೂ ಕೆಲವರನ್ನು ಹೊಂಚು ಹಾಕುವುದಕ್ಕೆ ಇರಿಸಿ,
Ngakho uIsrayeli wamisa abacathami maqondana leGibeya inhlangothi zonke.
30 ೩೦ ಉಳಿದವರು ಬೆನ್ಯಾಮೀನ್ಯರ ಸಂಗಡ ಕಾದಾಡುವುದಕ್ಕೋಸ್ಕರ ಮುಂಚಿನಂತೆ ಮೂರನೆಯ ದಿನದಲ್ಲಿಯೂ ಗಿಬೆಯದ ಸಮೀಪದಲ್ಲಿ ವ್ಯೂಹಕಟ್ಟಿದರು.
Abantwana bakoIsrayeli basebesenyuka ukumelana labantwana bakoBhenjamini ngosuku lwesithathu, bazihlelela ukumelana leGibeya njengakwezinye izikhathi.
31 ೩೧ ಬೆನ್ಯಾಮೀನ್ಯರು ಇಸ್ರಾಯೇಲ್ಯರೊಡನೆ ಯುದ್ಧಮಾಡವುದಕ್ಕಾಗಿ ಪಟ್ಟಣವನ್ನು ಬಿಟ್ಟು ಊರೊಳಕ್ಕೆ ಬಂದರು. ಅವರು ಮೊದಲಿನಂತೆ ಜನರನ್ನು ಕೊಲ್ಲುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ, ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಮಾಡಿದರು.
Abantwana bakoBhenjamini basebephuma ukumelana labantu, badonswa besuka emzini, baqala ukutshaya ebantwini, ukubulala njengakwezinye izikhathi, emigwaqweni emikhulu, enye yazo eyenyukela eBhetheli lenye eya eGibeya emagcekeni, phose amadoda angamatshumi amathathu akoIsrayeli.
32 ೩೨ ಬೆನ್ಯಾಮೀನ್ಯರು, “ಅವರು ಮುಂಚಿನಂತೆ ಈಗಲೂ ಸೋತುಹೋಗುತ್ತಾರೆ” ಎಂದು ಅಂದುಕೊಂಡರು. ಇಸ್ರಾಯೇಲ್ಯರಾದರೋ, “ಅವರು ತಮ್ಮ ಪಟ್ಟಣಕ್ಕೆ ದೂರವಾಗುವಂತೆ ನಾವು ಸ್ವಲ್ಪ ದೂರ ಓಡಿಹೋಗೋಣ” ಎಂದು ಮಾತನಾಡಿಕೊಂಡು,
Abantwana bakoBhenjamini basebesithi: Sebetshayiwe phambi kwethu njengakuqala. Kodwa abantwana bakoIsrayeli bathi: Asibalekeni, sibadonse besuka emzini baye emigwaqweni emikhulu.
33 ೩೩ ತಾವು ಮೊದಲು ನಿಂತ ಸ್ಥಳದಿಂದ ಓಡತೊಡಗಿದರು. ಬಾಳ್‌ತಾಮರಿಗೆ ಮುಟ್ಟಿದ ಕೂಡಲೆ ಅಲ್ಲಿ ನಿಂತು ತಿರುಗಿ ಯುದ್ಧವನ್ನು ಪ್ರಾರಂಭಿಸಿದರು. ಅಷ್ಟರಲ್ಲಿ ಹೊಂಚಿ ನೋಡುತ್ತಿದ್ದವರು ತಾವು ಅಡಗಿಕೊಂಡಿದ್ದ ಗಿಬೆಯದ ಮೈದಾನದಿಂದ ಎದ್ದು
Wonke amadoda akoIsrayeli asevuka endaweni zawo, azihlela eBhali-Tamari, labacathami bakoIsrayeli bavumbuluka endaweni yabo emadlelweni eGibeya.
34 ೩೪ ಪಟ್ಟಣದ ಮುಂದೆ ಬಂದರು; ಅವರು ಸುಮಾರು ಹತ್ತು ಸಾವಿರ ಮಂದಿ ಯುದ್ಧವೀರರು. ಯುದ್ಧವು ಬಹುಘೋರವಾಯಿತು. ತಮಗೆ ಅಪಾಯವು ಒದಗಿ ಬಂದಿದೆ ಎಂಬುದು ಬೆನ್ಯಾಮೀನ್ಯರಿಗೆ ಇನ್ನೂ ಗೊತ್ತಾಗಿರಲಿಲ್ಲ.
Kwasekusiza kuvela maqondana leGibeya amadoda akhethiweyo azinkulungwane ezilitshumi evela kuIsrayeli wonke; lempi yaba nzima. Kodwa bona babengazi ukuthi ububi buzatshaya phezu kwabo.
35 ೩೫ ಯೆಹೋವನು ಇಸ್ರಾಯೇಲರಿಗೆ ಜಯವನ್ನು ಕೊಟ್ಟಿದ್ದರಿಂದ ಅವರು ಆ ದಿನದಲ್ಲಿ ಇಪ್ಪತ್ತೈದು ಸಾವಿರದ ನೂರು ಮಂದಿ ಬೆನ್ಯಾಮೀನ್ಯರ ಯೋಧರನ್ನು ಹತಮಾಡಿದರು.
INkosi yasimtshaya uBhenjamini phambi kukaIsrayeli. Abantwana bakoIsrayeli basebebhubhisa koBhenjamini amadoda azinkulungwane ezingamatshumi amabili lanhlanu lekhulu elilodwa ngalolosuku; bonke laba bahwatsha inkemba.
36 ೩೬ ತಾವು ಸೋತುಹೋದೆವೆಂಬುದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. ಇಸ್ರಾಯೇಲ್ಯರು ತಾವು ಗಿಬೆಯದ ಸಮೀಪದಲ್ಲಿ ಹೊಂಚು ಹಾಕುವುದಕ್ಕಾಗಿ ಇಟ್ಟ ಜನರಲ್ಲಿ ಭರವಸವುಳ್ಳವರಾಗಿದ್ದರಿಂದ, ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.
Abantwana bakoBhenjamini basebebona ukuthi sebetshayiwe, ngoba amadoda akoIsrayeli amdedela uBhenjamini, ngoba bethembe abacathami ababebamise maqondana leGibeya.
37 ೩೭ ಅಷ್ಟರಲ್ಲಿ ಅಡಗಿಕೊಂಡಿದ್ದವರು ಎದ್ದು ಗಿಬೆಯಕ್ಕೆ ಶೀಘ್ರವಾಗಿ ಹೋಗಿ, ಅದರೊಳಗಿದ್ದವರೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು.
Labacathami baphangisa bahlasela iGibeya baqhubeka batshaya umuzi wonke ngobukhali benkemba.
38 ೩೮ ಅಡಗಿದ್ದವರು ಊರಿಗೆ ಬೆಂಕಿಹೊತ್ತಿಸಿ ಹೊಗೆ ಏರಿಹೋಗುವಂತೆ ಮಾಡಿದ ಮೇಲೆ, ಓಡಿಹೋಗುತ್ತಿದ್ದವರು ಪುನಃ ಯುದ್ಧಕ್ಕೆ ನಿಲ್ಲಬೇಕೆಂದು ಹೊಂಚು ಹಾಕುವವರೂ ಹಾಗು ಉಳಿದ ಇಸ್ರಾಯೇಲರೂ ತಮ್ಮ ತಮ್ಮೊಳಗೆ ಮೊದಲೇ ಗೊತ್ತುಮಾಡಿಕೊಂಡಿದ್ದರು.
Kwasekusiba lesiboniso esimisiweyo phakathi kwamadoda akoIsrayeli labacathami sokuthunqisa insika yentuthu enkulu evela emzini.
39 ೩೯ ಬೆನ್ಯಾಮೀನ್ಯರಾದರೋ, “ಇಸ್ರಾಯೇಲ್ಯರು ಮುಂಚಿನಂತೆ ನಮ್ಮ ಮುಂದೆ ಸೋತುಹೋದರು” ಎಂದು ತಿಳಿದು ಅವರನ್ನು ಹತಮಾಡಲು ಪ್ರಾರಂಭಿಸಿ, ಸುಮಾರು ಮೂವತ್ತು ಮಂದಿಯನ್ನು ಕೊಂದುಹಾಕಿದರು.
Kwathi amadoda akoIsrayeli aphenduka empini, uBhenjamini waqalisa ukuwatshaya ukubulala emadodeni akoIsrayeli phose amadoda angamatshumi amathathu, ngoba bathi: Isibili atshayiwe lokutshaywa phambi kwethu njengempini yakuqala.
40 ೪೦ ಆದರೆ ಪಟ್ಟಣದಿಂದ ಹೊಗೆ ಎದ್ದು ಸ್ತಂಭದೋಪಾದಿಯಲ್ಲಿ ಕಾಣಿಸಿಕೊಳ್ಳಲು ಇಸ್ರಾಯೇಲರು ತಿರುಗಿ ನಿಂತರು.
Kwathi iyezi liqalisa ukuthunqa liphuma emzini, insika yentuthu, uBhenjamini enyemukula, khangela-ke ilangabi lomuzi lenyukela emazulwini.
41 ೪೧ ಬೆನ್ಯಾಮೀನ್ಯರು ಹಿಂದಿರುಗಿ ನೋಡಿ ತಮ್ಮ ಪಟ್ಟಣವು ಬೆಂಕಿಯಿಂದ ಸುಟ್ಟುಹೋಗುವುದನ್ನು ಕಂಡು ತಮಗೆ ಅಪಾಯ ಉಂಟಾಗುವುದೆಂದು ಕಳವಳಗೊಂಡರು.
Lapho amadoda akoIsrayeli etshibilika, amadoda akoBhenjamini atshaywa luvalo, ngoba abona ukuthi ububi sebuwehlele.
42 ೪೨ ಅವರು ಇಸ್ರಾಯೇಲರಿಗೆ ಬೆನ್ನು ತೋರಿಸಿ ಅರಣ್ಯಮಾರ್ಗವಾಗಿ ಓಡಿಹೋದರು. ಆದರೆ ಯುದ್ಧವೀರರು ಅವರನ್ನು ಹಿಂದಟ್ಟಿದ್ದರಿಂದಲೂ, ಪಟ್ಟಣಕ್ಕೆ ಬೆಂಕಿ ಹೊತ್ತಿಸಿದವರು ಹೊರಗೆ ಬಂದುಬಿಟ್ಟಿದ್ದರಿಂದಲೂ, ಅವರು ಇಬ್ಬರ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡರು.
Ngakho afulathela phambi kwamadoda akoIsrayeli esiya endleleni yenkangala; kodwa impi yawanamathela, lalabo abaphuma emizini bawabhubhisa phakathi kwabo.
43 ೪೩ ಇಸ್ರಾಯೇಲರು ಅವರನ್ನು ಸುತ್ತಿಕೊಂಡು, ಎಲ್ಲಿಯೂ ಓಡಿಹೋಗದಂತೆ, ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿರುವ ಮೆನೂಹದಲ್ಲಿ ತುಳಿದುಹಾಕಿಬಿಟ್ಟರು.
Bamhanqa uBhenjamini, baxotshana labo, babanyathelela phansi lula, kwaze kwaba maqondana leGibeya lapho okuphuma khona ilanga.
44 ೪೪ ಈ ಪ್ರಕಾರ ಬೆನ್ಯಾಮೀನ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರು ಹತರಾದರು.
Kwasekusiwa koBhenjamini amadoda azinkulungwane ezilitshumi leziyisificaminwembili; wonke la ayengamaqhawe.
45 ೪೫ ಇದಲ್ಲದೆ ಅವರು ಅರಣ್ಯದಲ್ಲಿರುವ ರಿಮ್ಮೋನ್ ಗಿರಿಗೆ ಓಡಿಹೋಗುವಾಗ ಹಕ್ಕಲು ತೆನೆಗಳನ್ನೋ ಎಂಬಂತೆ ಐದು ಸಾವಿರ ಜನರನ್ನು ರಾಜಮಾರ್ಗಗಳಲ್ಲಿ ಕೊಂದು ಹಾಕಿದರು. ಅಲ್ಲಿಂದ ಗಿದೋಮಿನವರೆಗೆ ಹಿಂದಟ್ಟಿ ತಿರುಗಿ ಎರಡು ಸಾವಿರ ಜನರನ್ನು ಹತಮಾಡಿದರು.
Basebephenduka babalekela enkangala edwaleni leRimoni. Bakhothoza kibo emigwaqweni emikhulu abantu abazinkulungwane ezinhlanu, babanamathela kwaze kwaba seGideyomu, batshaya futhi kibo abantu abazinkulungwane ezimbili.
46 ೪೬ ಹೀಗೆ ಆ ದಿನ ಬೆನ್ಯಾಮೀನ್ಯರಲ್ಲಿ ಇಪ್ಪತ್ತೈದು ಸಾವಿರ ಯುದ್ಧಸನ್ನದ್ಧರಾದ ಸೈನಿಕರು ಸಂಹರಿಸಲ್ಪಟ್ಟರು.
Ngakho bonke abawayo koBhenjamini mhlalokho babeyizinkulungwane ezingamatshumi amabili lanhlanu, amadoda ahwatsha inkemba; bonke labo babengamaqhawe.
47 ೪೭ ಆದರೆ ಆರು ನೂರು ಮಂದಿ ಅರಣ್ಯಮಾರ್ಗವಾಗಿ ಓಡಿಹೋಗಿ, ರಿಮ್ಮೋನ್ ಗಿರಿಯನ್ನು ಸೇರಿ ಅಲ್ಲಿ ನಾಲ್ಕು ತಿಂಗಳಿದ್ದರು.
Kodwa amadoda angamakhulu ayisithupha aphenduka abalekela enkangala edwaleni leRimoni; ahlala edwaleni leRimoni inyanga ezine.
48 ೪೮ ಇಸ್ರಾಯೇಲರು ಪುನಃ ಹಿಂತಿರುಗಿ ಬಂದು ಬೆನ್ಯಾಮೀನ್ ದೇಶದ ಉಳಿದ ಗ್ರಾಮನಗರಗಳಿಗೆ ಹೋಗಿ ಅವುಗಳ ನಿವಾಸಿಗಳನ್ನೂ, ದನಕುರಿಗಳನ್ನೂ, ಸಿಕ್ಕಿದ್ದೆಲ್ಲವನ್ನು ಸಂಹರಿಸಿ ಎಲ್ಲಾ ಊರುಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
Amadoda akoIsrayeli asebuyela ebantwaneni bakoBhenjamini, abatshaya ngobukhali benkemba, kusukela emzini wonke kusiya ezinyamazaneni, njalo kusiya kukho konke okwaficwayo. Layo yonke imizi abayificayo bayithungela ngomlilo.

< ನ್ಯಾಯಸ್ಥಾಪಕರು 20 >