< ನ್ಯಾಯಸ್ಥಾಪಕರು 2 >
1 ೧ ಯೆಹೋವನ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು ಇಸ್ರಾಯೇಲ್ಯರಿಗೆ, “ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿ, ನಿಮ್ಮ ಪೂರ್ವಿಕರಿಗೆ ಪ್ರಮಾಣ ಮಾಡಿದ ದೇಶಕ್ಕೆ ಕರೆತಂದೆನು. ‘ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವುದಿಲ್ಲವೆಂದು ನಾನು ಮಾತು ಕೊಟ್ಟಾಗ,
HELE mai la ka anela o Iehova, mai Gilegala mai, a i Bokima, i mai la, Ua lawe mai au ia oukou mai Aigupita mai, a ua hookomo mai au ia oukou i ka aina a'u i hoohiki ai i ko oukou mau kupuna. I iho la au, Aole au e uhai i ka'u berita, a hiki loa i ka hopena.
2 ೨ ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು’ ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ?
Mai hana oukou i berita me ka poe e noho ana ma keia aina, e hoohiolo no oukou i ko lakou mau kuahu. Aole oukou i hoolohe i ko'u leo. No ke aha la oukou i hana'i i keia?
3 ೩ ‘ನೀವು ಹೀಗೆ ಮಾಡುವುದಾದರೆ ನಾನು ಈ ದೇಶ ನಿವಾಸಿಗಳನ್ನು ನಿಮ್ಮೆದುರಿನಿಂದ ಓಡಿಸುವುದಿಲ್ಲ; ಅವರು ನಿಮ್ಮ ಪಕ್ಕೆಗಳಿಗೆ ಮುಳ್ಳುಗಳಾಗಿರುವರು; ಅವರ ದೇವತೆಗಳು ನಿಮಗೆ ಉರುಲಾಗುವವು’ ಎಂದು ನಾನು ಮೊದಲೇ ಹೇಳಿದ್ದೆನಲ್ಲಾ” ಅಂದನು.
Nolaila au i olelo ai, Aole au e kipaku ia lakou, mai ko oukou alo aku, a e lilo lakou i poe enemi no oukou; a e lilo ko lakou mau akua i mea e hihia ai oukou.
4 ೪ ಯೆಹೋವನ ದೂತನು ಈ ಮಾತುಗಳನ್ನು ಹೇಳಿದಾಗ ಇಸ್ರಾಯೇಲರೆಲ್ಲರೂ ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು.
A i ka wa i olelo ai ka anela o Iehova i keia mau olelo i na mamo a pau a Iseraela, hookiekie ae la na kanaka i ko lakou leo, uwe iho la.
5 ೫ ಮತ್ತು ಆ ಸ್ಥಳಕ್ಕೆ ಬೋಕೀಮೆಂಬ ಹೆಸರಿಟ್ಟು, ಅಲ್ಲಿಯೇ ಯೆಹೋವನಿಗೋಸ್ಕರ ಯಜ್ಞಮಾಡಿದರು.
Kapa aku la lakou i ka inoa o ia wahi, Bokima. A malaila lakou i mohai aku ai no Iehova.
6 ೬ ಯೆಹೋಶುವನು ಇಸ್ರಾಯೇಲ್ಯರನ್ನು ಕಳುಹಿಸಿದ ಮೇಲೆ ಅವರು ತಮ್ಮ ತಮ್ಮ ಪಾಲಿಗೆ ಬಂದ ಪ್ರದೇಶಗಳಿಗೆ ಹೋಗಿ ಅವುಗಳನ್ನು ಸ್ವಾಧೀನಮಾಡಿಕೊಂಡರು.
I ka wa i kuu aku ai o Iosua i kanaka, alaila hele aku la kela kanaka keia kanaka o na mamo a Iseraela i kona hooilina iho, a komo i ka aina.
7 ೭ ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಬದುಕಿದ್ದ, ಯೆಹೋವನು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವನನ್ನು ಸೇವಿಸುತ್ತಿದ್ದರು.
Malama no na kanaka ia Iehova i na la a pau o Iosua, a i na la a pau o na lunakahiko i ola mahope iho o Iosua, ka poe i ike i na hana nui a pau a Iehova i hana mai ai no ka Iseraela.
8 ೮ ಯೆಹೋವನ ಸೇವಕನಾದ ನೂನನ ಮಗ ಯೆಹೋಶುವನು ನೂರ ಹತ್ತು ವರ್ಷದವನಾಗಿ ಮರಣಹೊಂದಿದನು.
A make iho la o Iosua, ke keiki a Nuna, ke kauwa a Iehova, hookahi no haneri kona mau makahiki me ka umi keu.
9 ೯ ಅವನನ್ನು ಅವನ ಸ್ವಾಧೀನದ ಭೂಮಿಯಾದ ತಿಮ್ನತ್ ಹೆರೆಸ್ ಎಂಬಲ್ಲಿ ಸಮಾಧಿಮಾಡಿದರು. ಅದು ಎಫ್ರಾಯೀಮ್ ಪರ್ವತಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿರುತ್ತದೆ.
A kanu iho la lakou ia ia ma ke kihi o kona aina, me Timenaheresa, ma ka puu o Eperaima, ma ke kukulu akau o ka puu o Gaasa.
10 ೧೦ ಅವನ ಕಾಲದವರೆಲ್ಲರೂ ಪೂರ್ವಿಕರ ಬಳಿಗೆ ಸೇರಿದರು. ಆನಂತರ ಯೆಹೋವನನ್ನೂ, ಆತನು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.
Hui pu ia'e la ia hanauna a pau me ko lakou poe makua: a ala mai la kekahi hanauna hou, mahope mai o lakou, aole lakou i ike ia Iehova, aole hoi i na hana ana i hana mai ai no ka Iseraela.
11 ೧೧ ಈ ಇಸ್ರಾಯೇಲರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನು ಮಾಡಿದರು ಹಾಗೂ ಬಾಳನನ್ನು ಸೇವಿಸಿದರು.
Hana hewa aku la na mamo a Iseraela imua o Iehova, a malama lakou ia Baala.
12 ೧೨ ತಮ್ಮ ಪೂರ್ವಿಕರನ್ನು ಐಗುಪ್ತದಿಂದ ಕರತಂದ ದೇವರಾದ ಯೆಹೋವನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ, ತಮ್ಮ ಸುತ್ತಣ ಜನಾಂಗಗಳ ದೇವರುಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರುವಂತೆ ಮಾಡಿದರು.
Haalele lakou ia Iehova, i ke Akua o ko lakou poe makua, i ka mea i lawe mai ai ia lakou mai ka aina o Aigupita mai, a hahai lakou mamuli o na'kua e, i na'kua o ka poe kanaka e noho poai ana ia lakou, a kulou imua o lakou, a hoonaukiuki aku la ia Iehova.
13 ೧೩ ಅವರು ಯೆಹೋವನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸುವವರಾದರು.
Haalele lakou ia Iehova, a malama iho la ia Baala a me Asetarota.
14 ೧೪ ಆಗ ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು. ಆತನು ಅವರನ್ನು ಸುತ್ತಣ ವೈರಿಗಳಿಗೆ ಮಾರಿಬಿಟ್ಟನು. ಅವರು ಆ ಶತ್ರುಗಳ ಮುಂದೆ ನಿಲ್ಲಲಾರದವರಾದರು.
Wela iho la ka huhu o Iehova i ka Iseraela, a haawi ae la ia lakou i ka lima o ka poe hao, a hao ae la ia poe i ka lakou, a hoolilo aku oia ia lakou i ka lima o ko lakou poe enemi, e noho poai ana ia lakou, aole hiki ia lakou ke ku hou imua o ko lakou poe enemi.
15 ೧೫ ಯೆಹೋವನು ತಾನು ಮೊದಲೇ ಆಣೆಯಿಟ್ಟು ಹೇಳಿದಂತೆ ಇಸ್ರಾಯೇಲರು ಎಲ್ಲಿ ಹೋದರೂ ಆತನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರು ಬಹು ಕಷ್ಟಗಳಿಗೆ ಗುರಿಯಾದರು.
Ma na wahi a pau a lakou i hele aku ai, ku e no ka lima o Iehova ia lakou i mea e hewa'i, e like me ka Iehova i hoohiki mai ai ia lakou; a pilikia loa iho la lakou.
16 ೧೬ ಆಗ ಯೆಹೋವನು ಅವರನ್ನು ಸೂರೆಮಾಡುವವರ ಕೈಯಿಂದ ತಪ್ಪಿಸುವುದಕ್ಕೋಸ್ಕರ ನ್ಯಾಯಸ್ಥಾಪಕರನ್ನು ಕಳುಹಿಸಿದನು.
Hoala mai no nae o Iehova i na lunakanawai, a hoola ae la lakou i ka Iseraela mailoko ae o ka lima o ka poe i hao i ka lakou.
17 ೧೭ ಇಸ್ರಾಯೇಲರು ಅವರ ಮಾತನ್ನೂ ಕೇಳದೆ ಅನ್ಯದೇವರುಗಳನ್ನು ಪೂಜಿಸಿ, ಅವುಗಳಿಗೆ ಅಡ್ಡಬಿದ್ದು ದೈವದ್ರೋಹಿಗಳಾದರು. ಯೆಹೋವನ ಆಜ್ಞೆಗಳನ್ನು ಕೈಕೊಳ್ಳುತ್ತಿದ್ದ ತಮ್ಮ ಪೂರ್ವಿಕರ ಮಾರ್ಗವನ್ನು ಬೇಗನೆ ಬಿಟ್ಟುಬಿಟ್ಟರು. ಅವರಂತೆ ನಡೆಯಲೇ ಇಲ್ಲ.
Aole hoi lakou i hoolohe i na lunakanawai; aka, moe kolohe lakou mamuli o na'kua e, a kulou hoomana aku la ia lakou. Haalele koke lakou i ke ala a ko lakou poe makua i hele ai, me ka hoolohe pono i ke kauoha a Iehova; aole hana keia poe pela.
18 ೧೮ ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಯೆಹೋವನು ಕೇಳಿ, ಕನಿಕರಪಟ್ಟು, ನ್ಯಾಯಸ್ಥಾಪಕರನ್ನು ಎಬ್ಬಿಸಿ ಜೀವಮಾನವೆಲ್ಲಾ ಅವರ ಸಂಗಡ ಇದ್ದನು. ಅವರ ಮೂಲಕವಾಗಿ ಇಸ್ರಾಯೇಲರನ್ನು ಶತ್ರುಗಳಿಂದ ಬಿಡಿಸಿದನು.
A i ka wa i hoala mai ai o Iehova i na lunakanawai no lakou, alaila, noho pu o Iehova me ka lunakanawai, a hoola no ia ia lakou, mai ka lima ae o ko lakou poe enemi, i na la a pau o ia lunakanawai; no ka mea, minamina o Iehova, no ko lakou kaniuhu ana i ka hoopilikiaia, a me ka hookaumahaia mai.
19 ೧೯ ಅಂಥ ನ್ಯಾಯಸ್ಥಾಪಕರು ತೀರಿಹೋದನಂತರ ಇಸ್ರಾಯೇಲರು ಪುನಃ ತಮ್ಮ ಹಿರಿಯರಿಗಿಂತಲೂ ಭ್ರಷ್ಟರಾಗಿ ಅನ್ಯದೇವತೆಗಳನ್ನು ಅವಲಂಬಿಸಿ, ಸೇವಿಸಿ, ಅವುಗಳಿಗೆ ಅಡ್ಡಬಿದ್ದರು. ಅವರು ತಮ್ಮ ದುರ್ಮಾರ್ಗಗಳನ್ನು, ಮೊಂಡತನಗಳನ್ನು ಬಿಡಲೇ ಇಲ್ಲ.
A i ka wa i make ai ka lunakanawai, hoi hou no lakou, a oi aku no ko lakou hewa mamua o ko lakou poe makua, ma ka hahai ana mamuli o na'kua e, e malama ia lakou, a e kulou hoomana ia lakou. Aole lakou i hooki iki i ka lakou hana, aole i ko lakou aoao paakiki.
20 ೨೦ ಆದ್ದರಿಂದ ಯೆಹೋವನ ಕೋಪವು ಇಸ್ರಾಯೇಲರ ಮೇಲೆ ಹೆಚ್ಚಾಯಿತು. ಆತನು, “ಈ ಜನರ ಪೂರ್ವಿಕರಿಗೆ ನಾನು ಕೊಟ್ಟ ಒಡಂಬಡಿಕೆಯನ್ನು ಇವರು ಕೈಕೊಳ್ಳಲಿಲ್ಲ; ನನ್ನ ಮಾತಿಗೆ ಕಿವಿಗೊಡಲಿಲ್ಲ.
Wela iho la ka huhu o Iehova i ka Iseraela, i ae la ia, No ka hehi ana o keia poe kanaka maluna o ka'u berita, a'u i kauoha aku ai i ko lakou poe makua, aole hoi i hoolohe i ko'u leo;
21 ೨೧ ಹೀಗಿರುವುದರಿಂದ ಯೆಹೋಶುವನು ಸಾಯುವ ಮೊದಲು ಹೊರಡಿಸದೆ ಬಿಟ್ಟಿದ ಜನಾಂಗಗಳಲ್ಲಿ ನಾನು ಒಂದನ್ನು ಹೊರಡಿಸಿಬಿಡುವುದಿಲ್ಲ.
Nolaila, aole au e kipaku hou, mai ko lakou alo aku, i kekahi o ko na aina a Iosua i waiho ai i kona make ana.
22 ೨೨ ಇವರೂ ತಮ್ಮ ಹಿರಿಯರಂತೆ ಜಾಗರೂಕತೆಯಿಂದ ಯೆಹೋವನಾದ ನನ್ನ ಮಾರ್ಗದಲ್ಲಿ ನಡೆಯುವರೋ ಇಲ್ಲವೋ ಎಂದು ಈ ಜನಾಂಗಗಳ ಮೂಲಕವಾಗಿ ಪರೀಕ್ಷಿಸುವೆನು” ಅಂದನು.
I hoao aku ai au i ka Iseraela ma o lakou la, i malama paha lakou i ka aoao o Iehova, e hele malaila, e like me ka malama ana o ko lakou poe makua, aole paha.
23 ೨೩ ಇದರಿಂದ ಯೆಹೋವನು ಯೆಹೋಶುವನ ಕೈಗೆ ಒಪ್ಪಿಸದೆ ಉಳಿಸಿದ್ದ ಜನಾಂಗಗಳನ್ನು ಬೇಗನೆ ಓಡಿಸಲಿಲ್ಲ.
Waiho no o Iehova i ko ia mau aina, aole ia i kipaku koke aku ia lakou; aole hoi i haawi mai ia lakou i ka lima o Iosua.