< ನ್ಯಾಯಸ್ಥಾಪಕರು 19 >
1 ೧ ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ. ಎಫ್ರಾಯೀಮ್ ಪರ್ವತಪ್ರದೇಶದ ಒಂದು ದೂರ ಸ್ಥಳದಲ್ಲಿ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಯೆಹೂದದ ಬೇತ್ಲೆಹೇಮಿನವಳಾದ ಒಬ್ಬ ಸ್ತ್ರೀಯು ಅವನಿಗೆ ಉಪಪತ್ನಿಯಾಗಿದ್ದಳು.
Kadagidiay nga al-aldaw, idi awan pay ti ari ti Israel, adda maysa a lalaki a Levita, agdama nga agnanaed idiay kasulsulinekan a disso iti katurturodan a pagilian ti Efraim. Nangala isuna iti maysa a babai a kakabbalayna manipud idiay Betlehem iti Juda.
2 ೨ ಆಕೆಯು ಇವನನ್ನು ಬಿಟ್ಟು ಜಾರತ್ವಮಾಡಿ, ಯೆಹೂದದ ಬೇತ್ಲೆಹೇಮಿನಲ್ಲಿದ್ದ ತನ್ನ ತವರುಮನೆಗೆ ಹೋಗಿ ಅಲ್ಲಿ ನಾಲ್ಕು ತಿಂಗಳು ಇದ್ದಳು.
Ngem saan a napudno kenkuana ti kabbalayna; pinanawanna isuna ket nagsubli iti balay ti amana idiay Betlehem iti Juda. Nagtalinaed isuna sadiay iti uppat a bulan.
3 ೩ ಅನಂತರ ಆಕೆಯ ಗಂಡನಾದ ಆ ಲೇವಿಯನು ಆಕೆಯನ್ನು ಪ್ರೀತಿಯಿಂದ ಮಾತನಾಡಿಸಿ ತಿರುಗಿ ಮನೆಗೆ ಕರೆದುಕೊಂಡು ಹೋಗಬೇಕೆಂದು ಒಬ್ಬ ಸೇವಕನನ್ನೂ, ಎರಡು ಕತ್ತೆಗಳನ್ನೂ ತೆಗೆದುಕೊಂಡು ಅಲ್ಲಿಗೆ ಹೋದನು. ಆಕೆಯು ಅವನನ್ನು ತನ್ನ ತವರುಮನೆಯಲ್ಲಿ ಸೇರಿಸಿಕೊಂಡಳು; ಆಕೆಯ ತಂದೆಯೂ ಅವನನ್ನು ನೋಡಿ ಸಂತೋಷಪಟ್ಟನು.
Kalpasanna, nagrubuat ti asawana ket sinurotna isuna tapno allukoyenna nga agsubli isuna. Kaduana ti adipenna, ken maysa a pares iti asno. Pinadanon isuna ti babai iti balay ti amana. Idi nakita isuna iti ama ti babai, naragsakan daytoy.
4 ೪ ಆ ಸ್ತ್ರೀಯ ತಂದೆಯಾದ ಅವನ ಮಾವನು ಅವನನ್ನು ಮೂರು ದಿನ ಅಲ್ಲೇ ಉಳಿಸಿಕೊಂಡನು; ಅವನೂ ಅವನ ಸೇವಕನೂ ಅನ್ನಪಾನಗಳನ್ನು ತೆಗೆದುಕೊಳ್ಳುತ್ತಾ ಅಲ್ಲಿದ್ದರು.
Inallukoy isuna ti katuganganna, nga ama ti babai, nga agtalinaed iti tallo nga aldaw. Nangan ken naginomda, ket pinalabasda ti rabii sadiay.
5 ೫ ಅವರು ನಾಲ್ಕನೆಯ ದಿನ ಬೆಳಿಗ್ಗೆ ಎದ್ದು ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಮೊದಲು ಸ್ವಲ್ಪ ಊಟಮಾಡಿ ಬಲಹೊಂದು; ಆಮೇಲೆ ಹೋಗಬಹುದು” ಎಂದು ಹೇಳಲು
Iti maikapat nga aldaw, nasapada a bimmangon ket nagsagana isuna a pumanaw, ngem kinuna ti ama ti babai iti manugangna, “Papigsaem ti bagim babaen iti bassit a tinapay, kalpasanna mabalinmon ti mapan.”
6 ೬ ಅವರಿಬ್ಬರೂ ಕುಳಿತುಕೊಂಡು ಅನ್ನಪಾನಗಳನ್ನು ತೆಗೆದುಕೊಂಡರು. ಊಟವಾದ ಮೇಲೆ ಆ ಸ್ತ್ರೀಯ ತಂದೆಯು ಪುನಃ ಅವನಿಗೆ, “ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇದ್ದು ಸಂತೋಷಪಡು” ಎಂದು ಹೇಳಿದರೂ ಆ ಲೇವಿಯನು ಹೊರಡುವುದಕ್ಕಿದ್ದನು;
Nagtugawda a dua tapno mangan ken uminomda. Ket kinuna ti ama ti babai, “Pangngaasim ta ummianka pay ket agragsakka.”
7 ೭ ಆದರೆ ಅವನ ಮಾವನು ಬಹಳ ಒತ್ತಾಯ ಮಾಡಿದ್ದರಿಂದ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು.
Idi bimmangon a nasapa ti Levita tapno pumanaw, inallukoy isuna ti ama ti babai nga agtalinaed, isu a binaliwanna ti panggepna ket naturog manen sadiay.
8 ೮ ಅವರು ಐದನೆಯ ದಿನ ಬೆಳಿಗ್ಗೆ ಎದ್ದು ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು, “ದಯವಿಟ್ಟು ಮಧ್ಯಾಹ್ನದವರೆಗೆ ಇಲ್ಲೇ ಇದ್ದು ಬಲಹೊಂದು” ಎಂದು ಅವನನ್ನು ಬೇಡಿಕೊಳ್ಳಲು ಅವರು ತಿರುಗಿ ಊಟಕ್ಕೆ ನಿಂತನು.
Iti maikalima nga aldaw, nasapa a bimmangon isuna tapno pumanaw, ngem kinuna ti ama ti babai, “Papigsaem ti bagim, ket urayem a mumalem.” Isu a nanganda a dua.
9 ೯ ಅನಂತರ ಅವನೂ, ಅವನ ಉಪಪತ್ನಿಯೂ, ಸೇವಕನೂ ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಹೊತ್ತು ಹೋಯಿತು; ಸಾಯಂಕಾಲವಾಗುತ್ತಿದೆ, ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇರು; ನೋಡು, ಈ ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು” ಎಂದು ಬೇಡಿಕೊಂಡನು.
Idi nagsaganan a pumanaw ti Levita, ti kakabkabbalayna ken ti adipenna, kinuna kenkuana ti ama ti babai a katuganganna, “Kitaenyo, mumalemen. Pangngaasiyo ta agtalinaedkayo pay iti maysa a rabii, ket agragsakkayo. Mabalinyo ti agrubuat a nasapa inton bigat nga agawid.”
10 ೧೦ ಆದರೆ ಆ ಲೇವಿಯನು ಒಪ್ಪದೆ ತನ್ನ ಎರಡು ಕತ್ತೆಗಳಿಗೆ ತಡಿಹಾಕಿಸಿ, ಉಪಪತ್ನಿಯನ್ನು ಕರೆದುಕೊಂಡು ಹೊರಟನು.
Ngem saanen a kayat ti Levita iti umian. Nagrubuat isuna sa pimmanaw. Nagturong isuna iti Jebus (dayta ket ti Jerusalem). Addaan isuna iti maysa a pares iti asno a nasilyetaan—ket kaduana ti kabbalayna.
11 ೧೧ ಅವರು ಯೆಬೂಸಿಯರ ಊರಾದ ಯೆರೂಸಲೇಮಿನ ಸಮೀಪಕ್ಕೆ ಬಂದಾಗ ಹೊತ್ತುಮುಳುಗುವ ಸಮಯವಾಗಿದ್ದರಿಂದ ಸೇವಕನು ದಣಿಗೆ, “ದಯವಿಟ್ಟು ಬಾ; ನಾವು ಯೆಬೂಸಿಯರ ಈ ಪಟ್ಟಣಕ್ಕೆ ಹೋಗಿ, ಅಲ್ಲಿ ರಾತ್ರಿಯನ್ನು ಕಳೆಯೋಣ” ಅಂದನು.
Idi asidegdan iti Jebus, umadanin iti rabii, ket kinuna ti adipen iti amona, “Umaykayo, dumagastayo iti siudad dagiti Jebuseo ket palabasentayo ti rabii sadiay.”
12 ೧೨ ಆಗ ದಣಿಯು, “ನಾವು ಇಸ್ರಾಯೇಲ್ಯರಿಲ್ಲದ ಅನ್ಯರ ಪಟ್ಟಣದಲ್ಲಿ ಇಳಿಯಬಾರದು; ಗಿಬೆಯಕ್ಕೆ ಹೋಗೋಣ” ಅಂದನು.
Kinuna ti amona kenkuana, “Saantayo a dumagas iti siudad dagiti ganggannaet, a saan a maibilang kadagiti tattao ti Israel. Mapantayo iti Gabaa.”
13 ೧೩ ಅವನು ತಿರುಗಿ ತನ್ನ ಆಳಿಗೆ, “ನಾವು ಬೇಗನೆ ಹೋಗಿ ಮುಂದಿರುವ ಗಿಬೆಯದಲ್ಲಾಗಲಿ, ರಾಮದಲ್ಲಾಗಲಿ ಇಳಿದುಕೊಳ್ಳೋಣ ಬಾ” ಅಂದನು.
Kinuna ti Levita iti agtutubo a taona, “Umaykayo, mapantayo iti maysa kadagidiay a lugar, ket umiantayo idiay Gabaa wenno idiay Rama.”
14 ೧೪ ಹೀಗೆ ಅವರು ಮುಂದೆ ಸಾಗಿ ಬೆನ್ಯಾಮೀನ್ಯರ ಗಿಬೆಯ ಊರಿನ ಸಮೀಪಕ್ಕೆ ಬಂದಾಗ ಸೂರ್ಯನು ಮುಳುಗಿದ್ದನು.
Isu a nagtuloyda a napan, ket lumneken ti init idi asidegdan iti Gabaa, iti masakupan ti Benjamin.
15 ೧೫ ಅವರು ಇಳಿದುಕೊಳ್ಳುವುದಕ್ಕೋಸ್ಕರ ಗಿಬೆಯಕ್ಕೆ ಹೋದರು. ಆದರೆ ಯಾರೂ ಅವರನ್ನು ಮನೆಯಲ್ಲಿ ಉಳಿದುಕೊಳ್ಳಲು ಅವಕಾಶಕೊಡದ ಕಾರಣ ಅವರು ಪಟ್ಟಣದ ಮಧ್ಯದಲ್ಲಿ ಕುಳಿತುಕೊಂಡರು.
Nagdagusda sadiay tapno palabasenda ti rabii idiay Gabaa. Ket simrek isuna ken nagtugaw iti plasa, ta awan uray maysa ti nangpasangbay kadakuada iti balayna para iti rabii.
16 ೧೬ ಅಷ್ಟರಲ್ಲಿ ಎಫ್ರಾಯೀಮಿನ ಪರ್ವತಪ್ರದೇಶಕ್ಕೆ ಸೇರಿದ ಒಬ್ಬ ಮುದುಕನು, ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸವಾಗಿದ್ದ ಆ ಮುದುಕನು ಸಾಯಂಕಾಲವಾದ್ದರಿಂದ ಕೆಲಸವನ್ನು ಮುಗಿಸಿ ಹೊಲದಿಂದ ಮನೆಗೆ ಬರುತ್ತಿದ್ದನು.
Ngem maysa a lakay iti sumungsungad iti dayta a rabii manipud iti nagubraanna a talon. Nagtaud isuna iti katurturodan a pagilian ti Efraim, ken agnanaed isuna iti agdama iti Gabaa. Ngem dagiti tattao nga agnanaed iti dayta a lugar ket Benjamenita.
17 ೧೭ ಈ ಮುದುಕನು ಬೀದಿಯಲ್ಲಿ ಕುಳಿತುಕೊಂಡಿದ್ದ ಆ ಪ್ರಯಾಣಿಕನನ್ನು ಕಂಡು, “ನೀನು ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು
Intannawagna dagiti matana, ket nakitana iti plasa ti siudad ti agdaldaliasat. Kinuna ti lakay, “Papananyo? Naggapuanyo?”
18 ೧೮ ಆ ಲೇವಿಯನು ಅವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮಿನ ಪರ್ವತಪ್ರದೇಶದ ಒಂದು ದೂರಸ್ಥಳದಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು; ಈಗ ತಿರುಗಿ ಯೆಹೋವನ ಮಂದಿರಕ್ಕೆ ಹೋಗುತ್ತೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲಿಲ್ಲ.
Kinuna ti Levita kenkuana, “Naggapukami idiay Betlehem iti Juda ket agturongkami iti kasulsulinekan a paset iti katurturodan ti Efraim, nga isu ti naggapuak. Napanak idiay Betlehem iti Juda, ken mapanak iti balay ni Yahweh, ngem awan a pulos ti mangpasangbay kaniak iti balayna.
19 ೧೯ ನಮ್ಮ ಕತ್ತೆಗಳಿಗೆ ಹುಲ್ಲೂ ಕಾಳೂ ಇವೆ; ನನಗೂ ನಿನ್ನ ಸೇವಕಿಗೂ, ನಿನ್ನ ಸೇವಕನ ಸಂಗಡ ಬಂದಿರುವ ಈ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿಯೂ, ದ್ರಾಕ್ಷಾರಸವೂ ಇರುತ್ತವೆ. ನಮಗೆ ಹೆಚ್ಚು ಏನೂ ಬೇಕಾಗಿರುವುದಿಲ್ಲ” ಎಂದು ಹೇಳಿದನು.
Adda garami ken ipakanmi para kadagiti asnomi, ken adda tinapay ken arak para kaniak ken ti adipenmo a babai ditoy, ken para daytoy agtutubo a lalaki a kadua ti adipenmo. Awanen ti kasapulanmi.”
20 ೨೦ ಆಗ ಆ ಮುದುಕನು, “ನಿನಗೆ ಶುಭವಾಗಲಿ; ನಿನಗೆ ಏನಾದರೂ ಕಡಿಮೆಯಾದರೆ ಅದನ್ನು ನೋಡಿಕೊಳ್ಳುತ್ತೇನೆ;
Kinablaawan ida ti lakay, “Talna koma ti adda kadakayo! Siak ti makaammo kadagiti amin a kasapulanyo. Saankayo laeng nga umian iti plasa.
21 ೨೧ ಈ ರಾತ್ರಿಯನ್ನು ಬೀದಿಯಲ್ಲಿ ಕಳೆಯಬೇಡ, ನನ್ನ ಮನೆಗೆ ಬಾ” ಎಂದು ಹೇಳಿ ಅವನನ್ನು ಕರೆದುಕೊಂಡು ಹೋಗಿ ಅವನ ಕತ್ತೆಗಳಿಗೆ ಮೇವು ಕೊಟ್ಟನು. ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಅಲ್ಲಿ ಅನ್ನಪಾನಗಳನ್ನು ತೆಗೆದುಕೊಂಡರು.
Pinastrek ngarud ti lakay ti Levita iti balayna ket pinakanna dagiti asno. Binuguanda dagiti sakada ket nangan ken imminomda.
22 ೨೨ ಅವರು ಭೋಜನದಿಂದ ತೃಪ್ತಿಪಡುವಷ್ಟರಲ್ಲಿ ಆ ಊರಲ್ಲಿದ್ದ ದುಷ್ಟ ಜನರು ಬಂದು ಆ ಮನೆಯನ್ನು ಸುತ್ತಿಕೊಂಡು, ಬಾಗಿಲನ್ನು ಬಡಿದು, ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದಿರುವಂಥ ಮನುಷ್ಯನನ್ನು ಹೊರಗೆ ಕರೆದುಕೊಂಡು ಬಾ; ಅವನೊಡನೆ ನಾವು ಸಂಗಮಿಸಬೇಕು” ಎಂದು ಕೂಗಿದರು.
Agragragsakda, idi pinalawlawan dagiti lallaki iti siudad ti balay, lallaki a nadangkes, pangpang-urenda ti ridaw. Kinasaritada ti lakay, ti amo iti balay, a kunkunada, “Paruarem ti lalaki a simrek iti balaymo, tapno makikaiddakami kenkuana.”
23 ೨೩ ಆಗ ಆ ಮುದುಕನು ಹೊರಗೆ ಹೋಗಿ ಅವರಿಗೆ, “ಸಹೋದರರೇ, ಇಂಥ ದುಷ್ಟತನವನ್ನು ನಡೆಸಬೇಡಿರಿ; ಅವನು ಆಶ್ರಯಕ್ಕಾಗಿ ನನ್ನ ಮನೆಗೆ ಬಂದಿದ್ದಾನೆ; ನೀವು ಇಂಥ ಹುಚ್ಚುತನವನ್ನು ಮಾಡಬೇಡಿರಿ.
Rimmuar ti lalaki, ti amo ti balay, ket kunana kadakuada, “Saan, kakabsatko, pangngaasiyo, saanyo nga aramiden daytoy a dakes a banag! Agsipud ta sangaili daytoy a tao iti balayko, saanyo nga aramiden daytoy a nadangkes a banag!
24 ೨೪ ಇನ್ನೂ ಮದುವೆಯಾಗದೆ ಇರುವ ನನ್ನ ಮಗಳನ್ನೂ, ಅವನ ಉಪಪತ್ನಿಯನ್ನೂ ಹೊರಗೆ ತರುತ್ತೇನೆ; ಅವರನ್ನು ಭಂಗಪಡಿಸಿರಿ; ನಿಮ್ಮ ಮನಸ್ಸಿಗೆ ಬಂದ ಹಾಗೆ ಅವರಿಗೆ ಮಾಡಿರಿ. ಈ ಮನುಷ್ಯನಿಗೆ ಮಾತ್ರ ಅಂಥ ದುಷ್ಕೃತ್ಯವನ್ನು ಮಾಡಬೇಡಿರಿ” ಅಂದನು.
Kitaenyo, adda ditoy ti birhen nga anakko ken ti kakabkabbalayna. Palubosandak nga iruarko ida ita. Ranggasanyo ida ken aramidenyo ti aniaman a kayatyo kadakuada. Ngem saanyo nga aramiden ti kinadangkes iti daytoy a lalaki!”
25 ೨೫ ಆದರೆ ಅವರು ಆ ಮುದುಕನಿಗೆ ಕಿವಿಗೊಡದೆ ಹೋದುದರಿಂದ ಆ ಮನುಷ್ಯನು ತನ್ನ ಉಪಪತ್ನಿಯನ್ನು ಹೊರಗೆ ಅವರ ಬಳಿಗೆ ಕಳುಹಿಸಿಬಿಟ್ಟನು. ಅವರು ಆಕೆಯನ್ನು ಕೆಡಿಸಿ, ರಾತ್ರಿಯೆಲ್ಲಾ ಬಹುಕ್ರೂರತನದಿಂದ ವರ್ತಿಸಿ, ಬೆಳಗಾಗುವಾಗ ಆಕೆಯನ್ನು ಬಿಟ್ಟುಹೋದರು.
Ngem saan a dumngeg dagiti lallaki kenkuana, isu a ginammatan ti lalaki ti kakabkabbalayna ket inruarna kadakuada. Ginammatanda isuna, kinaiddada, ken ginundawayanda isuna iti agpatnag, iti parbangon pinalubosanda isuna.
26 ೨೬ ಆ ಸ್ತ್ರೀಯು ಸೂರ್ಯೋದಯಕ್ಕೆ ಮುಂಚೆಯೇ ಬಂದು ತನ್ನ ಯಜಮಾನನು ಇಳಿದುಕೊಂಡಿದ್ದ ಮನೆಯ ಬಾಗಿಲಲ್ಲಿ ಬಂದು ಬಿದ್ದವಳು ಬೆಳಗಾದರೂ ಏಳಲೇ ಇಲ್ಲ.
Iti parbangon, napan ti babai iti balay ti lalaki nga ayan ti amona ket napasag iti ruangan, ken nagidda sadiay agingga iti aglawag.
27 ೨೭ ಆಕೆಯ ಪತಿಯು ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆಯಲು, ತನ್ನ ಉಪಪತ್ನಿಯು ಬಾಗಿಲ ಮುಂದೆ ಬಿದ್ದಿರುವುದನ್ನೂ, ಆಕೆಯ ಕೈಗಳು ಹೊಸ್ತಿಲಿನ ಮೇಲಿರುವುದನ್ನೂ ಕಂಡನು.
Bimmangon ti amona iti bigat ket linukatanna dagiti ruangan iti balay ket rimmuar a mapan iti dalanna. Nakitana ti kakabkabbalayna nga agid-idda idiay ruangan, a nakaunnat ti imana iti ayan ti ridaw.
28 ೨೮ ಅವನು, “ಏಳು, ಹೋಗೋಣ” ಎಂದು ಆಕೆಯನ್ನು ಕರೆಯಲು ಪ್ರತ್ಯುತ್ತರವೇ ಇಲ್ಲ. ಆಗ ಅವನು ಆಕೆಯ ಶವವನ್ನು ಕತ್ತೆಯ ಮೇಲೆ ಹಾಕಿಕೊಂಡು ತನ್ನ ಮನೆಗೆ ಹೋದನು.
Kinuna ti Levita kenkuana, “Tumakderka. Intayon.” Ngem awan iti simmungbat. Impasakayna ti babai iti asno, ket nagrubuat ti lalaki nga agawid.
29 ೨೯ ಅವನು ತನ್ನ ಮನೆಗೆ ಸೇರಿದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು, ತನ್ನ ಉಪಪತ್ನಿಯ ಶವವನ್ನು ಎಲುಬುಗಳ ಸಹಿತವಾಗಿ ಹನ್ನೆರಡು ತುಂಡುಮಾಡಿ, ಅವುಗಳನ್ನು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದನು.
Idi nakasangpet ti Levita iti balayna, nangala isuna iti kutsilyo, ket tinengnelna ti kakabkabbalayna, ket pinutedputedna daytoy, rinangrangkayna, iti sangapulo ket dua a pidaso, ket inwarasna dagiti pidaso iti entero nga Israel.
30 ೩೦ ಅವುಗಳನ್ನು ಕಂಡವರೆಲ್ಲರೂ, “ಇಸ್ರಾಯೇಲರು ಐಗುಪ್ತವನ್ನು ಬಿಟ್ಟು ಬಂದ ದಿನದಿಂದ ಈ ದಿನದವರೆಗೆ ಇಂಥ ಕೃತ್ಯವು ನಡೆಯಲೇ ಇಲ್ಲ, ನಾವು ಅದನ್ನು ನೋಡಿಯೂ ಇಲ್ಲ. ಈ ಸಂಗತಿಯನ್ನು ಮನಸ್ಸಿಗೆ ತಂದು ವಿಚಾರಿಸತಕ್ಕದ್ದು” ಅಂದುಕೊಂಡರು.
Kinuna dagiti amin a nakakita, “Awan pay iti napasamak wenno naimatangan a kasta a banag manipud iti aldaw a rimmuar dagiti tattao ti Israel iti Egipto agingga iti agdama nga aldaw. Panunotenyo daytoy! Balakadandakami! Ibagayo ti aramidenmi!”