< ನ್ಯಾಯಸ್ಥಾಪಕರು 17 >

1 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಮೀಕನೆಂಬ ಒಬ್ಬ ಮನುಷ್ಯನಿದ್ದನು. ಅವನು ಒಂದು ದಿನ ತನ್ನ ತಾಯಿಗೆ, “ಅಮ್ಮಾ, ಕಳವಾಗಿದ್ದ ನಿನ್ನ ಸಾವಿರದ ನೂರು ರೂಪಾಯಿಗಳಿಗೋಸ್ಕರ ನೀನು ನನಗೆ ಕೇಳಿಸುವಂತೆ ಶಪಿಸಿದಿಯಲ್ಲಾ;
ここにエフライムの山地の人で、名をミカと呼ぶものがあった。
2 ಇಗೋ, ಆ ಸಾವಿರದ ನೂರು ರೂಪಾಯಿಗಳು ನನ್ನ ಹತ್ತಿರ ಇವೆ; ನಾನು ತೆಗೆದುಕೊಂಡಿದ್ದೆನು” ಎಂದು ಹೇಳಿದನು. ಆಕೆಯು, “ನನ್ನ ಮಗನೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಅಂದಳು.
彼は母に言った、「あなたはかつて銀千百枚を取られたので、それをのろい、わたしにも話されましたが、その銀はわたしが持っています。わたしがそれを取ったのです」。母は言った、「どうぞ主がわが子を祝福されますように」。
3 ಅವನು ಆ ಸಾವಿರದ ನೂರು ರೂಪಾಯಿಗಳನ್ನು ತನ್ನ ತಾಯಿಗೆ ಹಿಂದಕ್ಕೆ ಕೊಡಲು ಆಕೆಯು, “ನನ್ನ ಮಗನಿಗೆ ಹಿತವಾಗಲೆಂದು ಈ ಹಣವನ್ನು ಯೆಹೋವನಿಗೆ ಹರಕೆಮಾಡಿದ್ದೇನೆ; ಇದರಿಂದ ಒಂದು ಎರಕದ ವಿಗ್ರಹವನ್ನು ಮಾಡಿಸಿ ನಿನ್ನ ವಶಕ್ಕೆ ಕೊಡುವೆನು” ಎಂದು ಹೇಳಿ,
そして彼が銀千百枚を母に返したので、母は言った、「わたしはわたしの子のために一つの刻んだ像と、一つの鋳た像を造るためにその銀をわたしの手から主に献納します。それで今それをあなたに返しましょう」。
4 ಮಗನು ಹಿಂದಕ್ಕೆ ಕೊಟ್ಟ ರೂಪಾಯಿಗಳಲ್ಲಿ ಇನ್ನೂರು ರೂಪಾಯಿಗಳನ್ನು ತೆಗೆದು ಅಕ್ಕಸಾಲಿಗನಿಗೆ ಕೊಟ್ಟಳು. ಅವನು ಅವುಗಳಿಂದ ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನು ಮಾಡಿಕೊಟ್ಟನು. ಮೀಕನು ಅದನ್ನು ತನ್ನ ಮನೆಯಲ್ಲಿಟ್ಟುಕೊಂಡನು.
ミカがその銀を母に返したので、母はその銀二百枚をとって、それを銀細工人に与え、一つの刻んだ像と、一つの鋳た像を造らせた。その像はミカの家にあった。
5 ಈ ಮೀಕನು ಏಫೋದನ್ನೂ ವಿಗ್ರಹಗಳನ್ನೂ ಮಾಡಿಸಿ, ಅವುಗಳನ್ನು ತಾನು ಕಟ್ಟಿಸಿದ ದೇವಸ್ಥಾನದಲ್ಲಿಟ್ಟು, ತನ್ನ ಮಕ್ಕಳಲ್ಲಿ ಒಬ್ಬನನ್ನು ಅರ್ಚಕ ಸೇವೆಗಾಗಿ ಪ್ರತಿಷ್ಠಿಸಿದನು.
このミカという人は神の宮をもち、エポデとテラピムを造り、その子のひとりを立てて、自分の祭司とした。
6 ಆ ಕಾಲದಲ್ಲಿ ಇಸ್ರಾಯೇಲರೊಳಗೆ ಅರಸನಿರಲಿಲ್ಲ. ಪ್ರತಿಯೊಬ್ಬನೂ ಮನಸ್ಸಿಗೆ ಬಂದ ಹಾಗೆಯೇ ನಡೆದುಕೊಳ್ಳುತ್ತಿದ್ದನು.
そのころイスラエルには王がなかったので、人々はおのおの自分たちの目に正しいと思うことを行った。
7 ಯೆಹೂದದ ಬೇತ್ಲೆಹೇಮಿನವನೂ, ಯೆಹೂದ ಕುಲದವನೂ ಆಗಿದ್ದ ಒಬ್ಬ ಯೌವನಸ್ಥನಾದ ಲೇವಿಯು ಉಪಜೀವನಕ್ಕೆ ಅನುಕೂಲವಾಗುವಂತೆ
さてここにユダの氏族のもので、ユダのベツレヘムからきたひとりの若者があった。彼はレビびとであって、そこに寄留していたのである。
8 ವಾಸಮಾಡಲು ತನ್ನ ಸ್ವಂತ ಊರನ್ನು ಬಿಟ್ಟು, ಪ್ರಯಾಣಮಾಡುತ್ತಾ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದನು.
この人は自分の住むべきところを尋ねて、ユダのベツレヘムの町を去り、旅してエフライムの山地のミカの家にきた。
9 “ನೀನು ಎಲ್ಲಿಂದ ಬಂದಿ” ಎಂದು ಮೀಕನು ಅವನನ್ನು ಕೇಳಲು ಅವನು, “ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು; ಉಪಜೀವನಕ್ಕೆ ಅನುಕೂಲವಾದ ವಾಸಸ್ಥಳವನ್ನು ಹುಡುಕಿಕೊಂಡು ಹೊರಟಿದ್ದೇನೆ” ಎಂದು ಉತ್ತರಕೊಟ್ಟನು.
ミカは彼に言った、「あなたはどこからおいでになりましたか」。彼は言った、「わたしはユダのベツレヘムのレビびとですが、住むべきところを尋ねて旅をしているのです」。
10 ೧೦ ಮೀಕನು ಅವನಿಗೆ, “ನೀನು ನಮ್ಮಲ್ಲಿರು; ನಮಗೆ ತಂದೆಯೂ, ಯಾಜಕನೂ ಆಗು. ನಿನಗೆ ವರ್ಷಕ್ಕೆ ಹತ್ತು ಬೆಳ್ಳಿ ನಾಣ್ಯಗಳನ್ನೂ, ಬಟ್ಟೆಯನ್ನೂ, ಆಹಾರವನ್ನೂ ಕೊಡುತ್ತೇನೆ” ಅನ್ನಲು
ミカは言った、「わたしと一緒にいて、わたしのために父とも祭司ともなってください。そうすれば年に銀十枚と衣服ひとそろいと食物とをさしあげましょう」。
11 ೧೧ ಆ ಲೇವಿಯನು ಒಪ್ಪಿಕೊಂಡು ಅಲ್ಲೇ ವಾಸಮಾಡಿದನು; ಹೀಗೆ ಆ ಯೌವನಸ್ಥನು ಅವನ ಮಕ್ಕಳಲ್ಲೊಬ್ಬನಂತಾದನು.
レビびとはついにその人と一緒に住むことを承諾した。そしてその若者は彼の子のひとりのようになった。
12 ೧೨ ಮೀಕನು ಯೌವನಸ್ಥನಾದ ಆ ಲೇವಿಯನನ್ನು ಯಾಜಕಸೇವೆಗೋಸ್ಕರ ಪ್ರತಿಷ್ಠಿಸಿ ತನ್ನ ಮನೆಯಲ್ಲಿಟ್ಟುಕೊಂಡು,
ミカはレビびとであるこの若者を立てて自分の祭司としたので、彼はミカの家にいた。
13 ೧೩ “ಒಬ್ಬ ಲೇವಿಯು ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಯೆಹೋವನು ನನ್ನನ್ನು ಆಶೀರ್ವದಿಸುವನೆಂದು ಬಲ್ಲೆನು” ಅಂದುಕೊಂಡನು.
それでミカは言った、「今わたしはレビびとを祭司に持つようになったので、主がわたしをお恵みくださることがわかりました」。

< ನ್ಯಾಯಸ್ಥಾಪಕರು 17 >