< ನ್ಯಾಯಸ್ಥಾಪಕರು 14 >

1 ಸಂಸೋನನು ಗಟ್ಟಾ ಇಳಿದು ತಿಮ್ನಾ ಊರಿಗೆ ಹೋಗಿ ಅಲ್ಲಿನ ಫಿಲಿಷ್ಟಿಯರ ಹೆಣ್ಣುಗಳಲ್ಲಿ ಒಬ್ಬಳನ್ನು ನೋಡಿ, ತಿರುಗಿ ತಂದೆತಾಯಿಗಳ ಬಳಿಗೆ ಬಂದು
शिमशोन तल तिम्नामा गए, र त्यहाँ पलिश्तीहरूका छोरीहरूमध्‍ये एक जना स्‍त्रीलाई तिनले देखे ।
2 ಅವರಿಗೆ, “ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿರಿ” ಎಂದು ಹೇಳಿದನು.
जब तिनी फर्के, तब तिनले आफ्ना बुबा र आमालाई भने, “मैले तिम्नामा पलिश्तीहरूका छोरीहरूमध्‍ये एक जना स्‍त्रीलाई देखें । तिनलाई मेरो पत्‍नी हुनलाई ल्याइदिनुहोस् ।”
3 ಆಗ ಅವರು ಅವನಿಗೆ, “ಸುನ್ನತಿಯಿಲ್ಲದ ಫಿಲಿಷ್ಟಿಯರ ಹೆಣ್ಣನ್ನು ಮದುವೆ ಮಾಡಿಕೊಳ್ಳಬೇಕೆಂದಿರುತ್ತೀಯಲ್ಲಾ; ನಿನ್ನ ಬಂಧುಗಳಲ್ಲಿಯೂ, ನಮ್ಮ ಎಲ್ಲಾ ಜನರಲ್ಲಿಯೂ ನಿನಗೆ ಹೆಣ್ಣು ಸಿಕ್ಕುವುದಿಲ್ಲವೋ?” ಎಂದು ಕೇಳಲು ಅವನು, “ನನಗೋಸ್ಕರ ಆಕೆಯನ್ನೇ ತೆಗೆದುಕೊಳ್ಳಬೇಕು; ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಅಂದನು.
तिनका बुबा र आमाले तिनलाई भने, “के तिम्रा नातेदारहरूका छोरीहरू वा हाम्रा मानिसहरूका माझमा कोही स्‍त्री छैन र? के तिमी खतना नभएका पलिश्तीहरूबाट आफ्नो निम्ति पत्‍नी लिन जाँदैछौ?” शिमशोनले आफ्ना बुबालाई भने, “तिनलाई मेरो निम्ति ल्याइदिनुहोस्, किनकि म जब तिनलाई हेर्छु, मलाई खुशी लाग्‍छ ।”
4 ಫಿಲಿಷ್ಟಿಯರ ಕೇಡಿಗೆ ಕಾರಣ ಹುಡುಕುತ್ತಿದ್ದ ಯೆಹೋವನ ಪ್ರೇರಣೆಯಿಂದಲೇ ಈ ಸಂಗತಿ ಉಂಟಾಯಿತೆಂಬುದು ಅವನ ತಂದೆತಾಯಿಗಳಿಗೆ ಗೊತ್ತಿರಲಿಲ್ಲ. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲರ ಮೇಲೆ ದೊರೆತನ ನಡೆಸುತ್ತಿದ್ದರು.
तर तिनका बुबा र आमालाई यो कुरा परमप्रभुबाट आएको हो भन्‍ने कुरा थाहा थिएन, किनकि उहाँले पलिश्तीहरूसँग झगडा ल्याउने योजना गर्नुभएको थियो (किनकि त्यो समयमा पलिश्तीहरूले इस्राएलमाथि शासन गरिरहेको थियो) ।
5 ಸಂಸೋನನು ತನ್ನ ತಂದೆತಾಯಿಗಳ ಸಹಿತ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷಿ ತೋಟಗಳ ಬಳಿಗೆ ಬಂದಾಗ, ಒಂದು ಪ್ರಾಯದ ಸಿಂಹವು ಗರ್ಜಿಸುತ್ತಾ ಅವನೆದುರಿಗೆ ಬಂದಿತು.
तब शिमशोन आफ्ना बुबा र आमासँग तल तिम्नामा गए, र तिनीहरू तिम्नाको दाखबारीमा गए । अनि हेर, त्‍यहाँ जवान सिंहहरूमध्‍ये एउटा माथि आयो र तिनीमाथि गर्जन थाल्यो ।
6 ಅವನ ಕೈಯಲ್ಲಿ ಏನೂ ಇಲ್ಲದಿದ್ದರೂ, ಯೆಹೋವನ ಆತ್ಮವು ಅವನ ಮೇಲೆ ಫಕ್ಕನೆ ಬಂದದ್ದರಿಂದ ಆ ಸಿಂಹವನ್ನು ಹೋತ ಮರಿಯನ್ನೋ ಎಂಬಂತೆ ಸೀಳಿಬಿಟ್ಟನು. ಈ ಸಂಗತಿಯನ್ನು ತಂದೆತಾಯಿಗಳಿಗೆ ತಿಳಿಸಲಿಲ್ಲ.
परमप्रभुका आत्मा अचानक तिनीमाथि आउनुभयो, र तिनले एउटा सानो पाठोलाई झैं तुरुन्‍तै त्यो सिंहलाई च्यातिदिए, र तिनको हातमा तिनीसित कुनै कुरा पनि थिएन । तर आफूले जे गरेका थिए, त्‍यो तिनले आफ्ना बुबा वा आमालाई भनेनन् ।
7 ಅನಂತರ ಅವನು ಊರೊಳಗೆ ಹೋಗಿ ಆ ಸ್ತ್ರೀಯನ್ನು ಮಾತನಾಡಿಸಿ ಆಕೆಯನ್ನು ಮೆಚ್ಚಿಕೊಂಡನು.
तिनी गए र त्यो स्‍त्रीसँग कुरा गरे, र जब शिमशोनले उनलाई हेरे, तब उनले तिनलाई खुसी पारिन् ।
8 ಕೆಲವು ದಿನಗಳಾದ ಮೇಲೆ ಅವನು ಆಕೆಯನ್ನು ವರಿಸುವುದಕ್ಕೋಸ್ಕರ ತಿರುಗಿ ಆ ಊರಿಗೆ ಹೋಗುತ್ತಿದ್ದಾಗ ದಾರಿಯ ಸಮೀಪದಲ್ಲಿ ಬಿದ್ದಿದ್ದ ಸಿಂಹದ ಹೆಣವನ್ನು ನೋಡುವುದಕ್ಕೆ ಹೋಗಲು ಅದರ ಒಡಲಲ್ಲಿ ಜೇನುಹುಳಗಳನ್ನೂ, ಜೇನನ್ನೂ ಕಂಡು,
केही दिनपछि जब तिनी उनलाई विवाह गर्न भनेर फर्के, तब त्‍यो सिंहको सिनु हेर्नलाई तिनी त्‍यतातिर गए । अनि हेर, तिनले छाडेका त्यो सिंहको सिनुमा मौरीको झुण्ड र मह थियो ।
9 ಆ ಜೇನನ್ನು ಕೈಯಲ್ಲಿ ತೆಗೆದುಕೊಂಡು ತಿನ್ನುತ್ತಾ ಹೋದನು; ತನ್ನ ತಂದೆತಾಯಿಗಳಿಗೂ ಕೊಟ್ಟನು; ಅವರೂ ತಿಂದರು. ಆದರೆ ಸತ್ತ ಸಿಂಹದ ದೇಹದಿಂದ ತಾನು ಜೇನು ತೆಗೆದುಕೊಂಡನೆಂದು ಅವರಿಗೆ ತಿಳಿಸಲಿಲ್ಲ.
तिनले आफ्ना हातमा मह लिए र तिनी जाँदा खाँदै गए । जब तिनी आफ्ना बुबा र आमाकहाँ आए, तिनले अलिकति मह तिनीहरूलाई पनि दिए, र तिनीहरूले खाए । तर तिनले त्यो मह सिंहको सिनुबाट लिएका थिए भन्‍ने कुरा तिनले भनेनन् ।
10 ೧೦ ಸಂಸೋನನ ತಂದೆಯು ಹೆಣ್ಣಿನ ಮನೆಗೆ ಬಂದ ಮೇಲೆ ಸಂಸೋನನು ಯೌವನಸ್ಥರ ಪದ್ದತಿಯ ಪ್ರಕಾರ ಅಲ್ಲಿ ಔತಣವನ್ನು ಸಿದ್ಧಮಾಡಿಸಿದನು.
शिमशोनका बुबा तल त्यो स्‍त्री भएको ठाउँमा गए, र शिमशोनले त्यहाँ एउटा भोज दिए, किनकि त्‍यो दुलहाले गर्नैपर्ने प्रचलन थियो ।
11 ೧೧ ಅವರು ಅವನನ್ನು ನೋಡಿದಾಗ ತಮ್ಮಲ್ಲಿಂದ ಮೂವತ್ತು ಮಂದಿಯನ್ನು ಆರಿಸಿ ಅವನ ಜೊತೆಯಲ್ಲಿರಿಸಿದರು.
स्‍त्रीका नातेदारहरूले तिनलाई देख्‍नेबित्तिकै, तिनीहरूले आफ्ना तिस जना साथी तिनीसँग बस्‍नलाई ल्याए ।
12 ೧೨ ಸಂಸೋನನು ಇವರಿಗೆ, “ನಾನು ನಿಮಗೆ ಒಂದು ಒಗಟನ್ನು ಹೇಳುತ್ತೇನೆ; ನೀವು ಔತಣದ ಏಳು ದಿನಗಳಲ್ಲಿಯೇ ಅದನ್ನು ಬಿಚ್ಚಿ ಅದರ ಅರ್ಥವನ್ನು ಹೇಳಿದರೆ ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷವಸ್ತ್ರಗಳನ್ನೂ ಕೊಡುವೆನು.
शिमशोनले तिनीहरूलाई भने, “म तिमीहरूलाई एउटा अड्को थाप्छु । तिमीहरूमध्ये कसैले भोजको सात दिनभित्रमा अड्को फुकाएर त्यसको उत्तर मलाई भन्‍न सक्यौ भने, म तिमीहरूलाई तिसवटा सुतीका लबेदा र तिस थान लुगाहरू दिनेछु ।
13 ೧೩ ನಿಮ್ಮಿಂದ ಆಗದೆ ಹೋದರೆ ನೀವು ನನಗೆ ಮೂವತ್ತು ನಾರು ಬಟ್ಟೆಯ ನಿಲುವಂಗಿಗಳನ್ನು (ದುಪ್ಪಟಿಗಳನ್ನೂ), ಮೂವತ್ತು ವಿಶೇಷವಸ್ತ್ರಗಳನ್ನೂ ಕೊಡಬೇಕು” ಅನ್ನಲು ಅವರು ಅವನಿಗೆ, “ನಿನ್ನ ಒಗಟನ್ನು ಹೇಳು, ಕೇಳೋಣ” ಎಂದು ಹೇಳಿದರು.
तर तिमीहरूले मलाई उत्तर भन्‍न सकेनौ भने, तिमीहरूले मलाई तिसवटा सुतीका लबेदा र तिस थान लुगाहरू दिनुपर्नेछ ।” तिनीहरूले उनलाई भने, “हामीलाई तिम्रो अड्को भन, ताकि हामी त्‍यो सनौं ।”
14 ೧೪ ಆಗ ಅವನು, “ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು; ಕ್ರೂರವಾದದ್ದರಿಂದ ಮಧುರವಾದದ್ದು ಹುಟ್ಟಿತು” ಎಂದು ಹೇಳಿದನು. ಮೂರು ದಿನಗಳಾದರೂ ಅವರು ಅದನ್ನು ಬಿಡಿಸಲಾರದೆ ಹೋದರು.
तिनले उनीहरूलाई भने, “खानेबाट केही खाने कुरो निस्क्यो, बलियोबाट केही गुलियो कुरो निस्क्यो ।” तर तिनका पाहुनाहरूले तिन दिनमा त्यसको उत्तर पाउन सकेनन् ।
15 ೧೫ ಅವರು ಏಳನೆಯ ದಿನದಲ್ಲಿ ಸಂಸೋನನ ಹೆಂಡತಿಗೆ, “ನಿನ್ನ ಗಂಡನನ್ನು ಮರುಳುಗೊಳಿಸಿ ಅವನಿಂದ ಒಗಟಿನ ಅರ್ಥವನ್ನು ತಿಳಿದುಕೋ; ಇಲ್ಲವಾದರೆ ನಾವು ನಿನ್ನನ್ನೂ, ನಿನ್ನ ತಂದೆಯ ಮನೆಯವರನ್ನೂ ಬೆಂಕಿಯಿಂದ ಸುಟ್ಟುಬಿಡುವೆವು; ನಮಗಿರುವುದೆಲ್ಲವನ್ನೂ ಕಸಿದುಕೊಳ್ಳುವುದಕ್ಕೆ ನಮ್ಮನ್ನು ಇಲ್ಲಿಗೆ ಕರೆಸಿದಿರೋ” ಅಂದರು.
चौथो दिनमा तिनीहरूले शिमशोनकी पत्‍नीलाई भने, “तिम्रो पतिलाई छल गर ताकि तिनले हामीलाई त्यो अड्कोको उत्तर बताऊन्, नत्रता हामी तिमी र तिम्रो बुबाको घरलाई आगो लगाइदिनेछौं । के हामीलाई गरिब बनाउनलाई तिमीले हामीलाई यहाँ बोलाएकी हौ?”
16 ೧೬ ಆಕೆಯು ಸಂಸೋನನ ಮುಂದೆ ಅಳುತ್ತಾ, “ನೀನು ನನ್ನನ್ನು ಪ್ರೀತಿಸುವುದಿಲ್ಲ, ದ್ವೇಷಿಸುತ್ತೀಯಷ್ಟೆ; ನನ್ನ ಜನರಿಗೆ ಒಗಟನ್ನು ಹೇಳಿದ್ದೀ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ” ಎಂದು ತೊಂದರೆಪಡಿಸಿದಳು. ಅವನು ಆಕೆಗೆ, “ಅದನ್ನು ನನ್ನ ತಂದೆತಾಯಿಗಳಿಗೂ ಹೇಳಲಿಲ್ಲ; ನಿನಗೆ ಹೇಳುವೆನೋ?” ಎಂದು ಉತ್ತರ ಕೊಟ್ಟನು.
शिमशोनकी पत्‍नी तिनको सामु रुन थालिन् । उनले भनिन्, “तपाईंले मलाई घृणा मात्र गर्नुहुन्छ! तपाईंले मलाई प्रेम गर्नुहुन्‍न । तपाईंले मेरा केही मानिसलाई अड्को थाप्नुभएको छ, तर तपाईंले मलाई उत्तर भन्‍नुभएको छैन ।” शिमशोनले त्यसलाई भने, “यता हेर, मैले मेरो बुबा वा आमालाई त भनेको छैनँ, त के म तिमीलाई भनूँ?”
17 ೧೭ ಆಕೆಯು ಔತಣದ ಏಳು ದಿನಗಳಲ್ಲಿಯೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನದಲ್ಲಿ ಆಕೆಯು ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳಿಬಿಟ್ಟನು. ಆಕೆಯು ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು.
भोजको सातौं दिनसम्म त्यो रोई । सातौं दिनमा तिनले उनलाई उत्तर भनिदिए किनभने उनले तिनलाई धेरै दबाब दिइन् । उनले आफ्ना नातेदारहरूलाई उत्तर भनिदिई ।
18 ೧೮ ಅವರು ಏಳನೆಯ ದಿನ ಸೂರ್ಯ ಮುಳುಗುವುದಕ್ಕಿಂತ ಮೊದಲು ಅವನಿಗೆ, “ಜೇನಿಗಿಂತ ಸಿಹಿಯಾದದ್ದು ಯಾವುದು? ಸಿಂಹಕ್ಕಿಂತ ಬಲಿಷ್ಠವಾದದ್ದು ಯಾವುದು?” ಎಂದು ಹೇಳಲು ಅವನು, “ನೀವು ನನ್ನ ಕಡಸಿನಿಂದ ಉಳದೇ ಹೋಗಿದ್ದರೆ ಒಗಟನ್ನು ಬಿಚ್ಚುವುದು ನಿಮ್ಮಿಂದಾಗುತ್ತಿರಲಿಲ್ಲ” ಅಂದನು.
सातौं दिनमा सूर्य अस्ताउनअगि सहरका मानिसले तिनलाई भने, “महभन्दा गुलियो के हुन्छ र? सिंहभन्दा बलियो के हुन्छ र?” शिमशोनले तिनीहरूलाई भने, “तिमीहरूले मेरो कोरेलीलाई नजोतेका भए, तिमीहरूले मेरो अड्कोको उत्तर पाउनेथिएनौ ।”
19 ೧೯ ಯೆಹೋವನ ಆತ್ಮವು ಫಕ್ಕನೆ ಅವನ ಮೇಲೆ ಬಂದಿತು; ಅವನು ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು, ಅವರ ವಸ್ತ್ರಗಳನ್ನು ಸುಲುಕೊಂಡು ಒಗಟನ್ನು ಬಿಚ್ಚಿದವರಿಗೆ ತಂದುಕೊಟ್ಟನು. ಮತ್ತು ಕೋಪಗೊಂಡವನಾಗಿ ತನ್ನ ತಂದೆಯ ಮನೆಗೆ ಹೋದನು.
तब परमप्रभुको आत्मा अचानक शक्तिको साथमा शिमशोनमाथि आउनुभयो । शिमशोन तल अश्कलोनमा गए र तिनीहरूका तिस जना मानिसहरूलाई मारे । तिनले तिनीहरूका लुटका सामान लिए, र त्यो अड्को फुकाउने मानिसहरूलाई तिनीहरूका लुगाहरू दिए । रिसले चूर भएर तिनी आफ्ना बुबाका घरमा गए ।
20 ೨೦ ಇತ್ತ ಸಂಸೋನನ ಹೆಂಡತಿಯನ್ನು ಆ ಮೂವತ್ತು ಮಂದಿಯಲ್ಲಿ ಅವನಿಗೆ ಸ್ನೇಹಿತನಾಗಿದ್ದವನಿಗೆ ಮದುವೆಮಾಡಿಕೊಟ್ಟರು.
शिमशोनको साथमा बसेको मित्रलाई तिनको पत्‍नी दिएर पठाइयो ।

< ನ್ಯಾಯಸ್ಥಾಪಕರು 14 >