< ನ್ಯಾಯಸ್ಥಾಪಕರು 10 >

1 ಅಬೀಮೆಲೆಕನ ಮರಣದ ತರುವಾಯ ಇಸ್ಸಾಕಾರ್ ಕುಲದ ಪೂವನ ಮಗನೂ, ದೋದೋವಿನ ಮೊಮ್ಮಗನೂ ಆಗಿದ್ದ ತೋಲನು ಇಸ್ರಾಯೇಲ್ಯರನ್ನು ರಕ್ಷಿಸಿವುದಕ್ಕೋಸ್ಕರ ಎದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸವಾಗಿದ್ದನು.
अबीमलेखाच्या मृत्यूनंतर इस्राएलाच्या सुटकेसाठी दोदोचा पुत्र पुवा याचा पुत्र तोला, जो इस्साखारातला मनुष्य तो उभा झाला, आणि तो एफ्राइम डोंगराळ प्रदेशात शामीर शहरात राहत होता.
2 ಇಪ್ಪತ್ತಮೂರು ವರ್ಷಗಳವರೆಗೆ ಇಸ್ರಾಯೇಲರನ್ನು ಪಾಲಿಸಿದ ನಂತರ, ಅವನು ಸತ್ತು ಶಾಮೀರಿನಲ್ಲಿ ಹೂಣಲ್ಪಟ್ಟನು.
त्याने तेवीस वर्षे इस्राएलाचा न्याय केला, मग तो मेला आणि शामीर नगरात पुरला गेला.
3 ತೋಲನ ಮರಣದ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲರನ್ನು ಇಪ್ಪತ್ತೆರಡು ವರ್ಷ ಪಾಲಿಸಿದನು.
नंतर त्याच्या मृत्यूनंतर गिलादी याईर उभा राहिला, आणि त्याने बावीस वर्षे इस्राएलाचा न्याय केला.
4 ಇವನಿಗೆ ಮೂವತ್ತು ಮಂದಿ ಮಕ್ಕಳಿದ್ದರು. ಇವರಿಗೆ ಮೂವತ್ತು ಸವಾರಿ ಕತ್ತೆಗಳೂ, ಗಿಲ್ಯಾದ್ ದೇಶದಲ್ಲಿ ಮೂವತ್ತು ಊರುಗಳೂ ಇದ್ದವು. ಅವುಗಳಿಗೆ ಇಂದಿನ ವರೆಗೂ ಯಾಯೀರನ ಗ್ರಾಮಗಳೆಂದು ಹೆಸರಿದೆ.
त्यास तीस पुत्र होते; प्रत्येकाचे आपापले गाढव होते ज्यावर ते सवार होत होते; आणि त्यास तीस नगरेही होती; आजपर्यंत त्यास हावोथ याईर म्हणतात; ती गिलादाच्या प्रांतात आहेत.
5 ಯಾಯೀರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು.
मग याईर मरण पावल्यावर त्यास कामोन शहरात पुरले.
6 ಇಸ್ರಾಯೇಲರು ಪುನಃ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. ಅವರು ಆತನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನೂ, ಅರಾಮ್ಯರು, ಚೀದೋನ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಇವರ ದೇವತೆಗಳನ್ನೂ ಪೂಜಿಸತೊಡಗಿದರು. ಯೆಹೋವನನ್ನು ಮರೆತು ಆತನನ್ನು ಆರಾಧಿಸುವುದನ್ನು ಬಿಟ್ಟೇಬಿಟ್ಟರು.
यानंतर इस्राएलाच्या लोकांनी फिरून देवाच्या दृष्टीने जे वाईट ते केले; कारण की त्यांनी बआल, अष्टारोथ, अरामाचे देव, सीदोनातले देव, मवाबातले देव व अम्मोनी लोकांचे देव व पलिष्ट्यांचे देव, यांची उपासना केली; त्यांनी परमेश्वरास सोडले, आणि त्यानंतर त्याची उपासना केलीच नाही.
7 ಆದುದರಿಂದ ಆತನು ಇಸ್ರಾಯೇಲರ ಮೇಲೆ ಕೋಪಗೊಂಡು ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಒಪ್ಪಿಸಿಬಿಟ್ಟನು.
यास्तव परमेश्वराचा राग इस्राएलावर भडकला, आणि त्याने त्यांना पलिष्ट्यांच्या हाती व अम्मोनी लोकांच्या हाती दिले.
8 ಇವರು ಅಂದಿನಿಂದ ಹದಿನೆಂಟು ವರ್ಷಗಳ ವರೆಗೆ ಯೊರ್ದನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಾಯೇಲರನ್ನು ಬಹಳವಾಗಿ ಪೀಡಿಸುತ್ತಾ, ಕುಗ್ಗಿಸುತ್ತಾ ಇದ್ದರು. ಈ ದೇಶವು ಮೊದಲು ಅಮೋರಿಯರದಾಗಿತ್ತು.
त्या वर्षी, त्यानंतर अठरा वर्षे त्यांनी इस्राएलाच्या सर्व लोकांस छळले आणि यार्देनेच्या पलीकडे अमोऱ्यांच्या देशातल्या गिलादात जे इस्राएली होते त्या सर्वांना जाचले.
9 ಇದಲ್ಲದೆ ಅಮ್ಮೋನಿಯರು ಯೊರ್ದನ್ ಹೊಳೆಯನ್ನು ದಾಟಿ, ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಕುಲಗಳೊಡನೆ ಯುದ್ಧಮಾಡಿದ್ದರಿಂದ ಇಸ್ರಾಯೇಲರಿಗೆ ಬಹಳ ಕಷ್ಟವಾಯಿತು.
यहूदा व बन्यामीन व एफ्राइमाची घराणे यांच्याशीही लढावयास अम्मोनी लोक यार्देन पार करून अलीकडे आले, त्यामुळे इस्राएलावर फार मोठे दु: ख आले.
10 ೧೦ ಆಗ ಅವರು ಯೆಹೋವನಿಗೆ, “ನಾವು ನಮ್ಮ ದೇವರಾದ ನಿನ್ನನ್ನು ಬಿಟ್ಟು, ಬಾಳನ ಪ್ರತಿಮೆಗಳನ್ನು ಪೂಜಿಸಿ, ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಮೊರೆಯಿಟ್ಟರು.
१०तेव्हा इस्राएली लोकांनी परमेश्वरास मोठ्याने आरोळी मारीत म्हटले की, “आम्ही तुझ्याविरुद्ध पाप केले आहे; ते असे की आम्ही आपल्या देवाला सोडून बआलाच्या मूर्तींची उपासना केली.”
11 ೧೧ ಆತನು ಅವರಿಗೆ, “ಐಗುಪ್ತ, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, ಚೀದೋನ್ಯ, ಅಮಾಲೇಕ್ಯ, ಮಾವೋನ್ಯ ಇವೇ
११तेव्हा परमेश्वराने इस्राएलाच्या लोकांस म्हटले. “मिसऱ्यांपासून व अमोऱ्यांपासून व अम्मोन्यांच्या लोकांपासून व पलिष्ट्यांपासून मी तुम्हाला सोडवले नाही काय?
12 ೧೨ ಮೊದಲಾದ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವರಿಂದ ನಿಮ್ಮನ್ನು ಬಿಡಿಸಿದರೂ
१२आणि सीदोनी व अमालेकी व मावोनी यानी तुम्हाला जाचले, तेव्हा तुम्ही मला मोठ्याने हाक मारली, आणि मी तुम्हाला त्यांच्या हातातून सोडवले.
13 ೧೩ ನೀವು ಪುನಃ ನನ್ನನ್ನು ಬಿಟ್ಟು, ಅನ್ಯದೇವತೆಗಳನ್ನು ಸೇವಿಸುತ್ತಾ ಬಂದಿರಿ. ಆದುದರಿಂದ ನಾನು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದೇ ಇಲ್ಲ.
१३तरी तुम्ही मला सोडून दुसऱ्या देवांची उपासना केली; यास्तव मी यापुढे तुमचा बचाव करणार नाही.
14 ೧೪ ಹೋಗಿ, ನೀವು ಆರಿಸಿಕೊಂಡ ದೇವತೆಗಳಿಗೆ ಮೊರೆಯಿಡಿರಿ; ಅವು ನಿಮ್ಮನ್ನು ಈ ಇಕ್ಕಟ್ಟಿನಿಂದ ಬಿಡಿಸಲಿ” ಅಂದನು.
१४जा, आणि ज्या देवाची तुम्ही उपासना करता त्यास हाक मारा; तुमच्या संकटाच्या वेळेस त्याने तुम्हाला सोडवावे.”
15 ೧೫ ಅವರು ತಿರುಗಿ ಯೆಹೋವನಿಗೆ, “ನಾವು ಪಾಪ ಮಾಡಿದ್ದೇವೆ; ನಿನಗೆ ಸರಿಕಾಣುವ ಪ್ರಕಾರ ನಮಗೆ ಮಾಡು; ಆದರೆ ಈ ಸಾರಿ ಹೇಗೂ ನಮ್ಮನ್ನು ರಕ್ಷಿಸಬೇಕು” ಎಂದು ಮೊರೆಯಿಟ್ಟು ಅನ್ಯದೇವತೆಗಳನ್ನು ತಮ್ಮಲ್ಲಿಂದ ತೆಗೆದು ಹಾಕಿ ಯೆಹೋವನನ್ನು ಸೇವಿಸುವವರಾದರು.
१५तेव्हा इस्राएलाच्या लोकांनी परमेश्वरास म्हटले, “आम्ही पाप केले आहे; जे सर्व तुला चांगले वाटेल, त्याप्रमाणे तू आम्हांला कर; आम्ही तुला विनंती करतो केवळ त्या दिवशी तू आम्हांला सोडव.”
16 ೧೬ ಆಗ ಆತನ ಮನಸ್ಸು ಇಸ್ರಾಯೇಲರ ಸಂಕಟದ ನಿಮಿತ್ತ ಬಹಳವಾಗಿ ನೊಂದಿತು.
१६तेव्हा त्यांनी आपल्यामधून परके देव दूर करून परमेश्वराची उपासना केली, आणि इस्राएलाच्या दुःखामुळे त्याच्या मनाला खेद झाला.
17 ೧೭ ಅಮ್ಮೋನಿಯರು ದಂಡೆತ್ತಿ ಬಂದು ಗಿಲ್ಯಾದಿನಲ್ಲಿ ಇಳಿದುಕೊಳ್ಳಲು ಇಸ್ರಾಯೇಲರು ಸೇರಿ ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು.
१७अम्मोनी लोक तर एकत्र मिळून त्यांनी गिलादात तळ दिला, आणि इस्राएलाच्या लोकांनी एकत्र जमून मिस्पात तळ दिला.
18 ೧೮ ಗಿಲ್ಯಾದಿನ ಜನರೂ ಅಧಿಪತಿಗಳೂ, “ನಮ್ಮಲ್ಲಿ ಅಮ್ಮೋನಿಯರೊಡನೆ ಯುದ್ಧಕ್ಕೆ ಕೈಹಾಕುವವನು ಯಾರು? ಅಂಥವನನ್ನು ಗಿಲ್ಯಾದಿನವರೆಲ್ಲರ ಮೇಲೆ ನಾಯಕನನ್ನಾಗಿ ಮಾಡುವೆವು” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.
१८तेव्हा गिलादातले लोक व अधिकारी एकमेकांना म्हणाले, “जो मनुष्य अम्मोनी लोकांशी लढू लागेल असा मनुष्य कोण आहे? तो गिलादातल्या सर्व राहणाऱ्यांचा अधिकारी असा होईल.”

< ನ್ಯಾಯಸ್ಥಾಪಕರು 10 >