< ಯೂದನು ಬರೆದ ಪತ್ರಿಕೆ 1 >
1 ೧ ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ ದೇವರಲ್ಲಿ ಪ್ರಿಯರಾದವರಿಗೆ, ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ,
Юда, раб Ісуса Христа і брат Якова. Покликаним, улюбленим в Бозі Отці та збереженим Ісусом Христом.
2 ೨ ನಿಮಗೆ ಕರುಣೆಯೂ, ಶಾಂತಿಯೂ, ಪ್ರೀತಿಯೂ ಹೆಚ್ಚಾಗಿ ದೊರೆಯಲಿ.
Милосердя, мир і любов нехай вам примножаться!
3 ೩ ಪ್ರಿಯರೇ, ನಮಗೆ ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.
Любі, докладаючи всіх зусиль у написанні про наше спільне спасіння, я визнав за обов’язок написати вам і закликати боротися за віру, довірену святим раз і назавжди.
4 ೪ ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ. ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ.
Адже прокралися деякі люди, записані ще здавна для цього вироку, безбожні, які обертають благодать нашого Бога в розпусту та зрікаються єдиного Володаря й Господа нашого Ісуса Христа.
5 ೫ ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತ ದೇಶದೊಳಗಿಂದ ರಕ್ಷಿಸಿದರೂ, ತರುವಾಯ ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು.
Я хочу нагадати вам, хоч ви й так вже все знаєте, що Господь, визволивши спершу народ з Єгипетської землі, пізніше знищив тих, що не повірили.
6 ೬ ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ. (aïdios )
І ангелів, які не втримали свого початкового стану, але покинули своє житло, Він затримав у вічних кайданах під мороком для суду великого Дня. (aïdios )
7 ೭ ಸೊದೋಮ್ ಗೊಮೋರ ಪಟ್ಟಣಗಳವರೂ, ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು, ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ. (aiōnios )
Також Содом, Гоморра та довколишні міста, що подібно до них чинили розпусту й жадали іншого тіла, стали прикладом [для нас], зазнавши кари вічного вогню. (aiōnios )
8 ೮ ಹೀಗಿದ್ದರೂ ಈ ಜನರು ಅದೇ ರೀತಿಯಾಗಿ ಸ್ವಪ್ನಾವಸ್ಥೆಯಲ್ಲಿರುವವರಂತೆ ತಮ್ಮ ಶರೀರವನ್ನು ಮಲಿನಮಾಡಿಕೊಳ್ಳುತ್ತಾರೆ. ಪ್ರಭುತ್ವವನ್ನು ಅಸಡ್ಡೆಮಾಡುತ್ತಾರೆ. ಮಹಾ ಪದವಿಯವರನ್ನು ದೂಷಿಸುತ್ತಾರೆ.
Так само й ці сновиди оскверняють [своє] тіло, відкидають владу й зневажають славних.
9 ೯ ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ, ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನಾಡದೆ, “ಕರ್ತನು ನಿನ್ನನ್ನು ಗದರಿಸಲಿ” ಎಂದನು.
Та навіть сам архангел Михаїл, коли дорікав дияволу й говорив про тіло Мойсея, не дозволив собі винести зневажливого осуду, але сказав: «Нехай Господь тобі докорить!»
10 ೧೦ ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ದೂಷಿಸುತ್ತಾರೆ ಮತ್ತು ತಾವು ವಿವೇಕಶೂನ್ಯ ಪಶುಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
А ці [люди] зневажають те, чого не знають, а що знають від природи, – як ті нерозумні тварини, – то тим себе й гублять.
11 ೧೧ ಅವರ ಗತಿಯನ್ನು ಏನೆಂದು ಹೇಳಲಿ? ಇವರು ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ, ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ.
Горе їм! Адже вони пішли дорогою Каїна, заради винагороди кинулись в оману Валаама та загинули в бунті Корея.
12 ೧೨ ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು, ನಿಮ್ಮ ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ. ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ, ಸಂಪೂರ್ಣವಾಗಿ ಸತ್ತ, ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು.
Вони – підводні рифи на ваших вечерях любові, які безсоромно бенкетують із вами, пасучи лише самих себе; [вони] – безводні хмари, гнані навколо вітрами, безплідні осінні дерева, двічі мертві та вирвані з корінням,
13 ೧೩ ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ. (aiōn )
дикі морські хвилі, які піняться власним соромом, блукаючі зірки, для яких навіки зберігається морок темряви. (aiōn )
14 ೧೪ ಇಂಥವರ ವಿಷಯದಲ್ಲೇ ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ, “ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು,
Про них пророкував Енох, сьомий від Адама, кажучи: «Ось Господь гряде з міріадами Своїх святих,
15 ೧೫ ಎಲ್ಲರಿಗೂ ನ್ಯಾಯತೀರಿಸುವುದಕ್ಕೂ, ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಹೇಳಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೆ ಬಂದಿರುವನು” ಎಂಬುದಾಗಿ ಪ್ರವಾದಿಸಿದನು.
щоб учинити суд над усіма й викрити кожну душу в усіх їхніх вчинках безбожності, які вони безбожно виконували, і за всі суворі слова, які промовили проти Нього безбожні грішники».
16 ೧೬ ಇವರು ಗೊಣಗುಟ್ಟುವವರೂ, ದೂರು ಹೇಳುವವರೂ, ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ, ಬಂಡಾಯಿಕೊಚ್ಚಿಕೊಳ್ಳುವವರು, ಸ್ವಪ್ರಯೋಜನಕ್ಕಾಗಿ ಹೊಗಳಿಕೆಯ ಮಾತುಗಳನ್ನಾಡುವವರು ಆಗಿದ್ದಾರೆ.
Вони скаржники й критики, які живуть за своїми лихими бажаннями, а їхній рот говорить хвалебні слова, підлещуючись задля власної користі.
17 ೧೭ ಪ್ರಿಯರೇ, ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.
А ви, любі, запам’ятайте слова, сказані апостолами нашого Господа Ісуса Христа,
18 ೧೮ “ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು” ಅವರು ನಿಮಗೆ ಹೇಳಿದರು.
які говорили вам: «В останній час будуть насмішники, які житимуть за своїми безбожними бажаннями».
19 ೧೯ ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ, ಪ್ರಾಕೃತ ಮನುಷ್ಯರೂ, ದೇವರಾತ್ಮ ಇಲ್ಲದವರೂ ಆಗಿದ್ದಾರೆ.
Це ті, які спричиняють поділи, [люди] плотські, які не мають Духа.
20 ೨೦ ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ.
Ви ж, любі, будуйте себе найсвятішою вірою, молячись у Святому Дусі.
21 ೨೧ ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ, ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. (aiōnios )
Зберігайте себе в Божій любові, очікуючи милосердя Господа нашого Ісуса Христа, [що веде] до вічного життя, (aiōnios )
22 ೨೨ ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ,
та будьте милосердними до тих, хто вагається;
23 ೨೩ ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು ಭಯಪಡುತ್ತಾ ಕರುಣಿಸಿರಿ. ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.
інших рятуйте, вириваючи з вогню; ще до інших зі страхом виявляйте милосердя, відчуваючи огиду й до сорочки, опоганеної плоттю.
24 ೨೪ ಮುಗ್ಗರಿಸದಂತೆ ನಿಮ್ಮನ್ನು ಕಾಪಾಡಿಕೊಳ್ಳುತ್ತಾ, ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ ಶಕ್ತನಾಗಿರುವ,
А Тому, Хто може зберегти вас від падіння й поставити перед Своєю славою непорочними в радості,
25 ೨೫ ನಮ್ಮ ರಕ್ಷಕನಾದ ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ, ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್. (aiōn )
єдиному Богу, нашому Спасителю, через Ісуса Христа, Господа нашого, слава, велич, сила та влада раніше всякого віку, нині й на всі віки! Амінь. (aiōn )