< ಯೆಹೋಶುವನು 6 >
1 ೧ ಯೆರಿಕೋವಿನವರು ಇಸ್ರಾಯೇಲ್ಯರಿಗೆ ಹೆದರಿ ತಮ್ಮ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಒಳಗೆ ಹೋಗಲಿಲ್ಲ; ಹೊರಗೆ ಬರಲಿಲ್ಲ.
၁ဣသရေလအမျိုးသားများယေရိခေါမြို့ တွင်းသို့မဝင်နိုင်ရန်မြို့တံခါးများကိုပိတ် ၍ အစောင့်များချထားလေသည်။ မည်သူမျှ မြို့ကိုဝင်ထွက်သွားလာခြင်းမပြုနိုင်။-
2 ೨ ಆಗ ಯೆಹೋವನು ಯೆಹೋಶುವನಿಗೆ “ನೋಡು, ನಾನು ಯೆರಿಕೋವನ್ನೂ ಅದರ ಅರಸನನ್ನೂ ಹಾಗೂ ಯುದ್ಧವೀರರನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ.
၂ထာဝရဘုရားသည်ယောရှုအား``ငါသည် ယေရိခေါမြို့နှင့်တကွ မြို့ကိုအုပ်ချုပ်သော မင်းကြီးနှင့်သူရသတ္တိရှိသောစစ်သူရဲ အပေါင်းတို့ကို သင်၏လက်တွင်းသို့ကျ ရောက်စေမည်။-
3 ೩ ನಿನ್ನ ಭಟರೆಲ್ಲ ಆರು ದಿನಗಳ ವರೆಗೆ ದಿನಕ್ಕೆ ಒಂದು ಸಾರಿ ಪಟ್ಟಣವನ್ನು ಸುತ್ತಲಿ.
၃သင်နှင့်သင်၏စစ်သည်တို့သည်တစ်နေ့လျှင် တစ်ကြိမ်ကျဖြင့် ခြောက်ရက်တိုင်မြို့ကိုပတ် ၍ချီတက်ရကြမည်။-
4 ೪ ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿನ ನೀವು ಪಟ್ಟಣವನ್ನು ಏಳು ಸಾರಿ ಸುತ್ತಬೇಕು; ಯಾಜಕರು ಕೊಂಬುಗಳನ್ನು ಊದಬೇಕು.
၄ယဇ်ပုရောဟိတ်ခုနစ်ယောက်တို့သည်တံပိုးခရာ တစ်လုံးစီကိုင်၍ ပဋိညာဉ်သေတ္တာတော်ရှေ့က သွားရမည်။ သတ္တမနေ့တွင်ယဇ်ပုရောဟိတ်တို့ သည်တံပိုးခရာမှုတ်၍ရှေ့ဆောင်လျက် သင်နှင့် သင်၏စစ်သည်တို့သည်မြို့ကိုခုနစ်ကြိမ် ပတ်ရကြမည်။-
5 ೫ ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಗಟ್ಟಿಯಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವುದು; ಪ್ರತಿಯೊಬ್ಬನೂ ನೆಟ್ಟಗೆ ಒಳಗೆ ನುಗ್ಗಬಹುದು” ಎಂದು ಹೇಳಿದನು.
၅ထိုနောက်ယဇ်ပုရောဟိတ်တို့တံပိုးခရာကို အသံရှည်ရှည်တစ်ချက်မှုတ်ရကြမည်။ ထို အချက်ပေးသံကိုကြားရလျှင် လူအပေါင်း တို့သည် အသံကျယ်စွာအော်ဟစ်ရကြမည်။ ထိုအခါမြို့ရိုးများပြိုကျသဖြင့်စစ်သည် တပ်သားအားလုံး မိမိတို့ရှိနေရာမှမြို့ တွင်းသို့အတားအဆီးမရှိဘဲဝင်ရောက် နိုင်ကြလိမ့်မည်'' ဟုမိန့်တော်မူ၏။
6 ೬ ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಯೆಹೋವನ ಮಂಜೂಷದ ಮುಂದೆ ನಡೆಯಲಿ” ಎಂದನು.
၆ယောရှုသည်ယဇ်ပုရောဟိတ်များကိုခေါ်ပြီး လျှင်``ပဋိညာဉ်သေတ္တာတော်ကိုပင့်ဆောင်ကြ လော့။ သင်တို့အနက်ခုနစ်ယောက်တို့သည် တံပိုးခရာများကိုကိုင်လျက် ပဋိညာဉ် သေတ္တာတော်ရှေ့ကသွားကြလော့'' ဟုမှာ ကြား၏။-
7 ೭ ಮತ್ತು ಅವನು ಜನರಿಗೆ “ನೀವು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ಧರೆಲ್ಲರೂ ಯೆಹೋವನ ಮಂಜೂಷದ ಮುಂದೆ ಹೋಗಲಿ” ಎಂದು ಹೇಳಿದನು.
၇ရှေ့ဆုံးမှတပ်သားများ၊ ထိုနောက်ထာဝရ ဘုရား၏ပဋိညာဉ်သေတ္တာတော်၊ နောက်ဆုံး တွင်လူတို့လိုက်ပါလျက် မြို့ကိုပတ်၍ချီ တက်ရန်ယောရှုအမိန့်ပေးလေ၏။-
8 ೮ ಯೆಹೋಶುವನು ಆಜ್ಞಾಪಿಸಿದಂತೆಯೇ ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಊದುತ್ತಾ, ಯೆಹೋವನ ಪ್ರಸನ್ನತೆಯಲ್ಲಿ ನಡೆದರು. ಯೆಹೋವನ ಒಡಂಬಡಿಕೆಯ ಮಂಜೂಷವು ಅವರ ಹಿಂದೆ ಹೋಯಿತು.
၈ယောရှုအမိန့်ပေးသည့်အတိုင်းတံပိုးခရာမှုတ် သောယဇ်ပုရောဟိတ်များရှေ့က လက်နက်ကိုင် တပ်သားများစတင်ချီတက်လေသည်။ သူတို့ နောက်တွင်ပဋိညာဉ်သေတ္တာတော်ကိုပင့်ဆောင် သောယဇ်ပုရောဟိတ်များ၊ သူတို့နောက်တွင် တပ်သားများလိုက်ပါချီတက်ကြသည်။ သူ တို့ချီတက်နေစဉ်ယဇ်ပုရောဟိတ်များက တံပိုးခရာများကိုမှုတ်ကြသည်။-
9 ೯ ಯುದ್ಧ ಸನ್ನದ್ಧರಾದವರು ಕೊಂಬುಗಳನ್ನು ಊದುತ್ತಿದ್ದ ಯಾಜಕರ ಮುಂದೆ ಇದ್ದರು. ಹಿಂಬದಿಯ ದಂಡು ಮಂಜೂಷದ ಹಿಂದಿತ್ತು. ಯಾಜಕರು ಕೊಂಬುಗಳನ್ನು ಊದುತ್ತಲೇ ಹೋಗುತ್ತಿದ್ದರು.
၉
10 ೧೦ ಯೆಹೋಶುವನು ಜನರಿಗೆ “ನೀವು ಈಗ ಆರ್ಭಟಿಸಬಾರದು; ನಿಮ್ಮ ಧ್ವನಿಯು ಕೇಳಿಸದಿರಲಿ, ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ. ಆರ್ಭಟಿಸಿರೆಂದು ನಾನು ಹೇಳುವ ದಿನದಲ್ಲಿ ಮಾತ್ರ ಆರ್ಭಟಿಸಿರಿ” ಎಂದು ಆಜ್ಞಾಪಿಸಿದನು.
၁၀ယောရှုကလူအပေါင်းတို့အား``ငါအမိန့် မပေးမီမည်သူမျှမအော်ဟစ်ရ။ စကား တစ်ခွန်းမျှမပြောရ'' ဟုမှာထားပြီး ဖြစ်၏။-
11 ೧೧ ಅವರು ಯೆಹೋವನ ಮಂಜೂಷವನ್ನು ಒಂದು ಸಾರಿ ಪಟ್ಟಣವನ್ನು ಪ್ರದಕ್ಷಿಣೆ ಮಾಡಿದ ಮೇಲೆ ತಿರುಗಿ ಪಾಳೆಯಕ್ಕೆ ಬಂದು ರಾತ್ರಿ ಕಳೆದರು.
၁၁သို့ဖြစ်၍ယောရှုသည်ထာဝရဘုရား၏ ပဋိညာဉ်သေတ္တာတော်အားမြို့ကို ပထမ အကြိမ်လှည့်ပတ်စေ၏။ ထိုနောက်သူတို့သည် စခန်းသို့ပြန်လာ၍တစ်ညတာရပ်နားကြ သည်။
12 ೧೨ ಯೆಹೋಶುವನು ಬೆಳಗಿನ ಜಾವದಲ್ಲೇ ಎದ್ದನು. ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡು ಹೊರಟರು.
၁၂နောက်တစ်နေ့နံနက်စောစောတွင်ယောရှုသည် နိုးထ၏။ ယဇ်ပုရောဟိတ်နှင့်စစ်သည်တို့သည် ဒုတိယအကြိမ်မြို့ကိုယခင်နည်းအတိုင်း လှည့်ပတ်ကြ၏။-
13 ೧೩ ಏಳು ಮಂದಿ ಯಾಜಕರು ಕೊಂಬುಗಳನ್ನು ಊದುತ್ತಾ ಯೆಹೋವನ ಮಂಜೂಷದ ಮುಂದೆ ನಡೆದರು. ಯುದ್ಧ ಸನ್ನದ್ಧರು ಅವರ ಮುಂದಿದ್ದರು. ಹಿಂಬದಿಯ ದಂಡು ಯೆಹೋವನ ಮಂಜೂಷದ ಹಿಂದಿತ್ತು. ಕೊಂಬುಗಳನ್ನು ಊದುತ್ತಲೇ ಹೋಗುತ್ತಿದ್ದರು.
၁၃ရှေ့ဆုံးကတပ်သားများ၊ ထိုနောက်တံပိုးခရာ ခုနစ်လုံးကိုမှုတ်သောယဇ်ပုရောဟိတ်ခုနစ် ယောက်၊ သူတို့နောက်ထာဝရဘုရား၏ပဋိ ညာဉ်သေတ္တာတော်ကိုပင့်ဆောင်သောယဇ်ပုရော ဟိတ်များနှင့်နောက်ဆုံးတပ်သားများလိုက် ပါချီတက်ကြ၏။ သူတို့ချီတက်နေစဉ် ယဇ်ပုရောဟိတ်များကတံပိုးခရာများ ကိုမှုတ်ကြသည်။-
14 ೧೪ ಹೀಗೆ ಎರಡನೆಯ ದಿನದಲ್ಲಿಯೂ ಪಟ್ಟಣವನ್ನು ಸುತ್ತಿ ಪಾಳೆಯಕ್ಕೆ ಹಿಂದಿರುಗಿದರು.
၁၄ဒုတိယနေ့၌သူတို့သည်တစ်ဖန်မြို့ကို တစ် ကြိမ်လှည့်ပတ်၍စခန်းသို့ပြန်လာကြလေ သည်။ သူတို့သည်ဤနည်းနှင်နှင်ခြောက်ရက် တိုင်တိုင်မြို့ကိုလှည့်ပတ်ကြသည်။
15 ೧೫ ಆರು ದಿನ ಈ ಪ್ರಕಾರ ಮಾಡಿದರು. ಏಳನೆಯ ದಿನದಲ್ಲಿ ಅವರು ಸೂರ್ಯೋದಯವಾಗುತ್ತಲೇ ಎದ್ದು ಅದೇ ಕ್ರಮದಲ್ಲಿ ಪಟ್ಟಣವನ್ನು ಏಳು ಸಾರಿ ಸುತ್ತಿದರು. ಈ ದಿನದಲ್ಲಿ ಮಾತ್ರ ಅದನ್ನು ಏಳು ಸಾರಿ ಸುತ್ತಿದರು.
၁၅သတ္တမနေ့နံနက်အရုဏ်တက်အချိန်၌သူတို့ သည်နိုးထ၍ ယခင်လှည့်ပတ်နည်းအတိုင်းမြို့ ကိုခုနစ်ကြိမ်လှည့်ပတ်ကြလေသည်။ ထိုနေ့၌ သာမြို့ကိုခုနစ်ကြိမ်တိုင်အောင်လှည့်ပတ်ကြ သည်။-
16 ೧೬ ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಲು ಯೆಹೋಶುವನು ಜನರಿಗೆ, “ಆರ್ಭಟಿಸಿರಿ, ಯೆಹೋವನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ.
၁၆မြို့ကိုသတ္တမအကြိမ်လှည့်ပတ်နေစဉ်ယဇ် ပုရောဟိတ်များ တံပိုးခရာများကိုမှုတ်အံ့ ဆဲဆဲ၌ယောရှုသည်လူအပေါင်းတို့အား``ဟစ် အော်ကြွေးကြော်ကြလော့။ ထာဝရဘုရား သည်သင်တို့အားမြို့ကိုအပ်တော်မူပြီ။-
17 ೧೭ ಇದೂ ಇದರಲ್ಲಿರುವುದೆಲ್ಲವೂ ಯೆಹೋವನಿಗೆ ಅರ್ಪಿತವಾದವುಗಳೇ ಎಂದು ತಿಳಿಯಿರಿ. ವೇಶ್ಯೆಯಾದ ರಾಹಾಬಳೂ ಅವಳ ಸಂಗಡ ಮನೆಯಲ್ಲಿರುವವರೆಲ್ಲರೂ ಉಳಿಯಲಿ. ಏಕೆಂದರೆ ನಾವು ಕಳುಹಿಸಿದ ಗೂಢಚಾರರನ್ನು ಅವಳು ಅಡಗಿಸಿಟ್ಟಿದ್ದಳಲ್ಲಾ.
၁၇မြို့နှင့်တကွမြို့တွင်း၌ရှိသမျှသောဥစ္စာ ပစ္စည်းတို့သည်ထာဝရဘုရားအတွက် ပူဇော် သကာအဖြစ်လုံးဝဖျက်ဆီးပစ်ရမည်။ ပြည့် တန်ဆာမရာခပ်သည်ငါတို့၏သူလျှိုများ ကိုဝှက်ထားခဲ့သောကြောင့် သူနှင့်သူ၏အိမ် သူအိမ်သားတို့ကိုသာလျှင်အသက်ချမ်း သာပေးရမည်။-
18 ೧೮ ನೀವಾದರೋ ಯೆಹೋವನಿಗೆ ಅರ್ಪಿಸುವ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವುದನ್ನಾದರೂ ತೆಗೆದುಕೊಂಡರೆ, ಇಸ್ರಾಯೇಲ್ಯರ ಪಾಳೆಯವು ಶಾಪಕ್ಕೆ ಗುರಿಯಾಗಿ ನಾಶವಾದೀತು.
၁၈သို့ရာတွင်သင်တို့သည်ဖျက်ဆီးပစ်ရမည့် အရာများမှမည်သည့်ပစ္စည်းမျှမယူရ။ အကယ်၍ယူမိလျှင်ဣသရေလအမျိုး သားတို့၏စခန်းတွင်ဘေးဒုက္ခဆိုက်ရောက် လိမ့်မည်။-
19 ೧೯ ಎಲ್ಲಾ ಬೆಳ್ಳಿ ಬಂಗಾರವೂ, ತಾಮ್ರ ಕಬ್ಬಿಣಗಳ ಪಾತ್ರೆಗಳೂ ಯೆಹೋವನಿಗೆ ಮೀಸಲಾಗಿದ್ದು ಆತನ ಭಂಡಾರಕ್ಕೆ ಸೇರತಕ್ಕವುಗಳು” ಎಂದನು.
၁၉ရွှေ၊ ငွေ၊ ကြေးနီ၊ သံတို့ဖြင့်ပြုလုပ်ထားသော ဝတ္ထုပစ္စည်းရှိသမျှတို့ကိုကား ထာဝရဘုရား အတွက်သီးသန့်သတ်မှတ်ထားသဖြင့် ထာဝရ ဘုရား၏ဘဏ္ဍာတော်တိုက်ထဲသို့သွင်းထားရ မည်'' ဟုမိန့်ဆိုလေသည်။
20 ೨೦ ಕೂಡಲೆ ಜನರ ಆರ್ಭಟವೂ ಕೊಂಬುಗಳ ಧ್ವನಿಯೂ ಉಂಟಾದವು. ಜನರು ಕೊಂಬಿನ ಧ್ವನಿಯನ್ನು ಕೇಳಿ ಗಟ್ಟಿಯಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು. ಪ್ರತಿಯೊಬ್ಬನೂ ನೆಟ್ಟಗೆ ಪಟ್ಟಣದಲ್ಲಿ ನುಗ್ಗಿ ಹೋದನು. ಅದು ಅವರಿಗೆ ವಶವಾಯಿತು.
၂၀ထို့ကြောင့်ယဇ်ပုရောဟိတ်တို့တံပိုးခရာ မှုတ်လျှင်မှုတ်ခြင်း လူအပေါင်းတို့သည် တခဲနက်ကြွေးကြော်ရာမြို့ရိုးများပြိုကျ လေ၏။ ဣသရေလအမျိုးသားအပေါင်းတို့ သည်မြို့တွင်းသို့အတားအဆီးမရှိဘဲ ဝင်ရောက်၍မြို့ကိုသိမ်းယူကြ၏။-
21 ೨೧ ಪಟ್ಟಣದಲ್ಲಿದ್ದ ಗಂಡಸರನ್ನೂ, ಹೆಂಗಸರನ್ನೂ, ಹುಡುಗರನ್ನೂ, ಮುದುಕರನ್ನೂ, ದನ, ಕುರಿ ಕತ್ತೆಗಳನ್ನೂ ಸಂಪೂರ್ಣವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.
၂၁သူတို့သည်မြို့တွင်း၌ရှိသမျှသောယောကျာ်း၊ မိန်းမအကြီးအငယ်တို့ကိုလည်းကောင်း၊ သိုး၊ နွား၊ မြည်းတို့ကိုလည်းကောင်း၊ ဋ္ဌားဖြင့်သတ် ဖြတ်သုတ်သင်ကြ၏။
22 ೨೨ ಯೆಹೋಶುವನು ದೇಶವನ್ನು ಸಂಚರಿಸಿ ನೋಡಿದ್ದ ಇಬ್ಬರು ಗೂಢಚಾರರಿಗೆ “ನೀವು ಆ ವೇಶ್ಯೆಯ ಮನೆಗೆ ಹೋಗಿ ಅವಳಿಗೆ ಪ್ರಮಾಣಮಾಡಿದಂತೆ ಅವಳನ್ನೂ ಅವಳಿಗಿರುವುದೆಲ್ಲವನ್ನೂ ಹೊರಗೆ ತೆಗೆದುಕೊಂಡು ಬನ್ನಿರಿ” ಎಂದು ಹೇಳಲು
၂၂ထိုနောက်ယောရှုသည်ထိုပြည်ကိုထောက်လှမ်း ခဲ့သောသူလျှိုနှစ်ယောက်တို့အား``သင်တို့သည် ပြည့်တန်ဆာမအားကတိပေးခဲ့သည့်အတိုင်း သူ့အိမ်သူအိမ်သားတို့ကိုခေါ်ဆောင်ခဲ့လော့'' ဟု စေခိုင်းလေ၏။-
23 ೨೩ ಆ ಯೌವನಸ್ಥರು ಹೋಗಿ ರಾಹಾಬಳನ್ನೂ ಅವಳ ತಂದೆತಾಯಿಯನ್ನು, ಸಹೋದರರನ್ನು, ಅವಳಿಗಿರುವುದೆಲ್ಲವನ್ನೂ, ಅವಳ ಗೋತ್ರದ ಎಲ್ಲಾ ಜನರನ್ನೂ ತಂದು ಇಸ್ರಾಯೇಲ್ಯರ ಪಾಳೆಯದ ಹೊರಗೆ ಇಟ್ಟರು.
၂၃ထိုကြောင့်သူတို့သည်ရာခပ်နှင့်တကွသူ၏ မိဘများ၊ မောင်နှမများနှင့်အိမ်သူအိမ်သား များကိုခေါ်ဆောင်ခဲ့၏။ ကျေးကျွန်များပါ မကျန်သူတို့အားလုံးတို့ကိုဣသရေလ အမျိုးသားတို့၏စခန်းအနီးလုံခြုံသော အရပ်တွင်နေရာချထားကြလေသည်။-
24 ೨೪ ಇಸ್ರಾಯೇಲ್ಯರು ಪಟ್ಟಣವನ್ನೂ ಅದರಲ್ಲಿರುವುದೆಲ್ಲವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಆದರೆ ಬೆಳ್ಳಿಬಂಗಾರವನ್ನೂ, ತಾಮ್ರ ಕಬ್ಬಿಣಗಳ ಪಾತ್ರೆಗಳನ್ನೂ, ಯೆಹೋವನ ಆಲಯದ ಭಂಡಾರಕ್ಕೆ ಒಪ್ಪಿಸಿದರು.
၂၄ထိုနောက်သူတို့သည်မြို့နှင့်တကွမြို့တွင်း ၌ရှိသမျှသောအရာအားလုံးကိုမီးရှို့ ဖျက်ဆီးကြ၏။ သို့ရာတွင်သူတို့သည် ရွှေ၊ ငွေ၊ ကြေးနီ၊ သံတို့ဖြင့်ပြုလုပ်သောဝတ္ထုပစ္စည်း များကိုသိမ်းယူ၍ ထာဝရဘုရား၏ဘဏ္ဍာ တော်တိုက်ထဲသို့သွင်းကြသည်။-
25 ೨೫ ವೇಶ್ಯೆಯಾದ ರಾಹಾಬಳು ಯೆರಿಕೋ ಪಟ್ಟಣವನ್ನು ಸಂಚರಿಸಿ ನೋಡುವುದಕ್ಕೆ ಬಂದಿದ್ದ ಯೆಹೋಶುವನ ಗೂಢಚಾರರನ್ನು ಅಡಗಿಸಿಟ್ಟದ್ದರಿಂದ ಅವನು ಅವಳನ್ನೂ, ಅವಳ ತಂದೆಯ ಮನೆಯವರನ್ನೂ, ಅವಳಿಗಿರುವುದೆಲ್ಲವನ್ನೂ ಉಳಿಸಿದನು. ಅವಳು ಇಂದಿನವರೆಗೂ ಇಸ್ರಾಯೇಲ್ಯರಲ್ಲಿ ವಾಸವಾಗಿದ್ದಾಳೆ.
၂၅ပြည့်တန်ဆာမရာခပ်သည်ယေရိခေါမြို့ အခြေအနေကိုထောက်လှမ်းရန် စေလွှတ်လိုက် သောသူနှစ်ယောက်တို့ကိုဝှက်ထားခဲ့ခြင်း ကြောင့် ယောရှုသည်သူနှင့်သူ၏ဆွေမျိုးအား လုံးတို့ကိုအသက်ချမ်းသာပေး၏။ (သူ၏ အဆက်အနွယ်တို့သည်ယနေ့တိုင်အောင် ဣသရေလအမျိုးသားတို့နှင့်အတူနေ ထိုင်လျက်ရှိကြသည်။)
26 ೨೬ ಅದೇ ಸಮಯದಲ್ಲಿ ಯೆಹೋಶುವನು ಇಸ್ರಾಯೇಲ್ಯರಿಂದ ಪ್ರಮಾಣಮಾಡಿಸಿ ಅವರಿಗೆ “ಈ ಯೆರಿಕೋ ಪಟ್ಟಣವನ್ನು ಕಟ್ಟುವುದಕ್ಕೆ ಕೈ ಹಾಕುವ ಮನುಷ್ಯನು ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಿರಲಿ. ಅಂಥವನು ಅದಕ್ಕೆ ಅಸ್ತಿವಾರ ಹಾಕುವಾಗ ತನ್ನ ಹಿರಿಯ ಮಗನನ್ನೂ ಬಾಗಿಲುಗಳನ್ನಿಡುವಾಗ ಕಿರಿಯ ಮಗನನ್ನೂ ಕಳೆದುಕೊಳ್ಳಲಿ” ಎಂದು ಹೇಳಿದನು.
၂၆ထိုအခါယောရှုက``ယေရိခေါမြို့ကိုပြန် လည်တည်ဆောက်သောသူသည် ထာဝရ ဘုရား၏ကျိန်စာသင့်ပါစေသား။ မြို့၏အုတ်မြစ်ကိုတည်သောသူသည် သားဦးဆုံးရပါစေသား။ မြို့တံခါးကိုဆောက်သောသူသည်သားထွေး ဆုံးရပါစေသား'' ဟူ၍ကျိန်ဆိုလေ၏။
27 ೨೭ ಯೆಹೋವನು ಯೆಹೋಶುವನ ಸಂಗಡ ಇದ್ದುದರಿಂದ ಅವನ ಕೀರ್ತಿ ದೇಶದಲ್ಲೆಲ್ಲಾ ಹಬ್ಬಿತು.
၂၇ထာဝရဘုရားသည်ယောရှုနှင့်အတူရှိ တော်မူ၍သူ၏နာမည်သည်တစ်ပြည်လုံး တွင်ထင်ရှားကျော်စောလေ၏။