< ಯೆಹೋಶುವನು 5 >

1 ಯೊರ್ದನಿನ ಪಶ್ಚಿಮದಲ್ಲಿದ್ದ ಅಮೋರಿಯರ ಎಲ್ಲಾ ಅರಸರು ಮತ್ತು ಸಮುದ್ರದ ಬಳಿಯಲ್ಲಿದ್ದ ಎಲ್ಲಾ ಕಾನಾನ್ಯರ ರಾಜರು, ಯೆಹೋವನು ಇಸ್ರಾಯೇಲ್ಯರ ಮುಂದೆ ಯೊರ್ದನಿನ ಹೊಳೆಯನ್ನು ಬತ್ತಿಸಿ, ಅವರನ್ನು ದಾಟಿಸಿದನೆಂಬ ವಾರ್ತೆ ಕೇಳಲು ಅವರ ಎದೆಯೊಡೆದು ಹೋಯಿತು. ಇಸ್ರಾಯೇಲ್ಯರ ನಿಮಿತ್ತವಾಗಿ ಅವರು ಬಲಗುಂದಿ ಹೋದರು.
यर्दनको पश्‍चिमतिरका एमोरी राजाहरू र भूमध्य सागरको तटतिर कनानी राजाहरू इस्राएलका मानिसहरूले यर्दन नतरेसम्म यर्दनको पानी सुकाउनुभएको थियो भन्‍ने सुन्‍ने बित्तिकै तिनीहरूको हृदय शिथिल भयो र इस्राएलका मानिसहरूको कारण तिनीहरूमा कुनै आँट आएन ।
2 ಆ ಸಮಯದಲ್ಲಿ ಯೆಹೋವನು ಯೆಹೋಶುವನಿಗೆ “ನೀನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಪುನಃ ಇಸ್ರಾಯೇಲ್ಯರಿಗೆ ಸುನ್ನತಿ ಮಾಡು” ಎಂದು ಹೇಳಲು
त्यस बेला परमप्रभुले यहोशूलाई भन्‍नुभयो, “ढुङ्गाका कर्दहरू बना र इस्राएलका सबै पुरुषको फेरि एक पटक खतना गर् ।”
3 ಯೆಹೋಶುವನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಸುನ್ನತಿ ಗುಡ್ಡದಲ್ಲಿ ಇಸ್ರಾಯೇಲ್ಯರಿಗೆ ಸುನ್ನತಿ ಮಾಡಿದನು.
त्यसपछि यहोशू आफैले ढुङ्गाका कर्दहरू बनाए र तिनले इस्राएलका सबै पुरुषको गिबियथ-हाअरालोथमा खतना गरे ।
4 ಯೆಹೋಶುವನು ಸುನ್ನತಿ ಮಾಡಿದ್ದಕ್ಕೆ ಕಾರಣವೇನಂದರೆ ಐಗುಪ್ತದಿಂದ ಹೊರಟು ಬಂದ ಗಂಡಸರಲ್ಲಿ ಯುದ್ಧವೀರರೆಲ್ಲರು ಆ ದೇಶವನ್ನು ಬಿಟ್ಟು ಬಂದ ನಂತರ ಅರಣ್ಯದಲ್ಲಿ ಸತ್ತು ಹೋದರು.
यहोशूले तिनीहरूलाई खतना गर्ने कारण थियोः युद्ध गर्ने पुरुषहरूलगायत मिश्रबाट आएका सबै पुरुष मिश्रबाट आएपछि मरुभूमिको यात्रामा मरेका थिए ।
5 ಅಲ್ಲಿಂದ ಬಂದಿದ್ದ ಗಂಡಸರಿಗೆಲ್ಲಾ ಸುನ್ನತಿಯಾಗಿತ್ತು. ಐಗುಪ್ತವನ್ನು ಬಿಟ್ಟ ನಂತರ ಅರಣ್ಯ ಪ್ರಯಾಣದಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಸುನ್ನತಿಯಾಗಿರಲಿಲ್ಲ.
तथापि मिश्रबाट आएका सबै पुरुषको खतना भएको थियो, र मिश्रबाट आउँदा मरुभूमिमा जन्मेका कुनै पनि पुरुषको खतना भएको थिएन ।
6 ಐಗುಪ್ತದಿಂದ ಬಂದ ಇಸ್ರಾಯೇಲ್ಯರು ಯೆಹೋವನ ಮಾತನ್ನು ಕೇಳದೆ ಹೋಗಿದ್ದರಿಂದ ಅವರು ತಮ್ಮ ಭಟರೆಲ್ಲರು ಸಂಹಾರವಾಗುವ ತನಕ ನಲವತ್ತು ವರ್ಷ ಅರಣ್ಯದಲ್ಲೇ ಅಲೆಯುತ್ತಿರಬೇಕಾಯಿತು. ಯೆಹೋವನು ತಾನು ಆ ಜನರ ಪೂರ್ವಿಕರಿಗೆ ವಾಗ್ದಾನ ಮಾಡಿದ್ದ ಹಾಲೂ ಜೇನೂ ಹರಿಯುವ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಆಣೆಯಿಟ್ಟನು.
मिश्रबाट निस्केर आएका सबै पुरुष अर्थात् युद्ध गर्ने सबै पुरुष नमरेसम्म इस्राएलका मानिसहरू मरुभूमिमा हिँडिरहे, किनकि तिनीहरूले परमप्रभुको आवाज पालन गरेनन् । परमप्रभुले तिनीहरूका पिता-पुर्खालाई हामीलाई दिन्छु भनी प्रतिज्ञा गर्नुभएको भूमि अर्थात् दूध र मह बग्‍ने भूमि उहाँले तिनीहरूलाई देख्‍न दिनुहुन्थ्यो भनी शपथ खानुभएको थियो ।
7 ಆದುದರಿಂದ ಅವರ ಪೂರ್ವಿಕರಿಗೆ ಪ್ರತಿಯಾಗಿ ಹುಟ್ಟಿದ ಗಂಡು ಮಕ್ಕಳಿಗೆ ಯೆಹೋಶುವನು ಸುನ್ನತಿ ಮಾಡಿದನು. ದಾರಿಯಲ್ಲಿ ಯಾರೂ ಅವರಿಗೆ ಸುನ್ನತಿಮಾಡಿರಲಿಲ್ಲ. ಆದುದರಿಂದ ಅವರು ಸುನ್ನತಿಯಿಲ್ಲದವರಾಗಿದ್ದರು.
यहोशूले खतना गरेका मानिसहरू परमप्रभुले तिनीहरूका सट्टामा उठाउनुभएका तिनीहरूका छोराछोरीहरू थिए, किनभने तिनीहरूको त्यस किसिमले खतना भएको थिएन ।
8 ಸುನ್ನತಿಯಾದ ಮೇಲೆ ಆ ಜನರು ವಾಸಿಯಾಗುವ ತನಕ ತಮ್ಮ ತಮ್ಮ ಪಾಳೆಯಗಳಲ್ಲಿಯೇ ಇದ್ದರು.
जब तिनीहरू सबैको खतना भयो, तिनीहरू निको नभएसम्म तिनीहरू त्यहीँ नै रहे ।
9 ಯೆಹೋವನು ಯೆಹೋಶುವನಿಗೆ, “ನಾನು ಐಗುಪ್ತ್ಯರ ನಿಂದೆಯನ್ನು ಈ ಹೊತ್ತು ನಿಮ್ಮಿಂದ ನಿವಾರಿಸಿ ಬಿಟ್ಟಿದ್ದೇನೆ” ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿರುತ್ತದೆ.
त्यसपछि परमप्रभुले यहोशूलाई भन्‍नुभयो, “आजको दिन मैले मिश्रको अपमान तिमीहरूबाट हटाएको छु ।” त्यसैले, त्यस ठाउँको नाउँ वर्तमानसम्म पनि गिलगाल राखिएको छ ।
10 ೧೦ ಇಸ್ರಾಯೇಲ್ಯರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಯೆರಿಕೋವಿನ ಬೈಲಿನಲ್ಲಿ ಪಸ್ಕಹಬ್ಬವನ್ನು ಆಚರಿಸಿದರು.
इस्राएलका मानिसहरूले गिलगालमा छाउनी हाले । तिनीहरूले त्यही महिनाको चौधौँ दिनको साँझ यरीहोको मैदानमा निस्तार-चाड मनाए ।
11 ೧೧ ಮರುದಿನದಿಂದ ಆ ದೇಶದ ಧಾನ್ಯವನ್ನು ಊಟಕ್ಕೆ ಉಪಯೋಗಿಸಲು ತೊಡಗಿದರು. ಹೇಗೆಂದರೆ ಅದೇ ಪಸ್ಕಹಬ್ಬದ ದಿನದಲ್ಲಿ ಅವರು ಹುಳಿಯಿಲ್ಲದ ರೊಟ್ಟಿಗಳನ್ನೂ, ಸುಟ್ಟ ತೆನೆಗಳನ್ನೂ ತಿಂದರು.
निस्तार-चाडपछि त्यसै दिन तिनीहरूले त्यो भूमिको केही उब्जनीबाट अखमिरी रोटी र भुटेको अन्‍न खाए ।
12 ೧೨ ಆ ದೇಶದ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ತಿರುಗಿ ಸಿಕ್ಕಲೇ ಇಲ್ಲ. ಇಸ್ರಾಯೇಲ್ಯರು ಆ ವರ್ಷವೆಲ್ಲ ಕಾನಾನ್ ದೇಶದ ಉತ್ಪನ್ನವನ್ನೇ ಅನುಭವಿಸಿದರು.
तिनीहरूले त्यस भूमिको उब्जनीबाट खाएपछि त्यही दिन मन्‍न रोकियो । इस्राएलका मानिसहरूका निम्ति कुनै मन्‍न थिएन, तर तिनीहरूले त्यस वर्ष कनानको भूमिको उब्जनीबाट खाए ।
13 ೧೩ ಯೆಹೋಶುವನು ಯೆರಿಕೋವಿನ ಹತ್ತಿರದಲ್ಲಿ ಇದ್ದಾಗ ಒಮ್ಮೆ ತನ್ನ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ತನ್ನೆದುರಿನಲ್ಲಿ ನಿಂತಿರುವುದನ್ನು ಕಂಡನು. ಯೆಹೋಶುವನು ಅವನ ಸಮೀಪಕ್ಕೆ ಹೋಗಿ “ನೀನು ನಮ್ಮವನೋ ಅಥವಾ ಶತ್ರು ಪಕ್ಷದವನೋ?” ಎಂದು ಕೇಳಲು
यहोशू यरीहोको नजिक हुँदा तिनले माथि हेरे र हेर, एउटा मानिस तिनको सामु उभिरहेका थिए । तिनको हातमा नाङ्गो तरवार थियो । यहोशू तिनीकहाँ गएर सोधे, “तपाईं हाम्रो वा हाम्रा शत्रुको पक्षमा हुनुहुन्छ?”
14 ೧೪ ಆ ಮನುಷ್ಯನು “ನಾನು ಅಂಥವನಲ್ಲ; ಯೆಹೋವನ ಸೇನಾಧಿಪತಿ; ಈಗಲೇ ಬಂದಿದ್ದೇನೆ” ಎಂದು ಉತ್ತರಿಸಿದನು. ಆಗ ಯೆಹೋಶುವನು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ “ಒಡೆಯಾ, ನಿಮ್ಮ ದಾಸನಾದ ನನಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ?” ಅನ್ನಲು
तिनले भने, “कुनै पक्षको होइन । किनभने म परमप्रभुको फौजको सेनापति हुँ । अहिले म आएको छु ।” अनि यहोशूले जमिनमा घोप्टो परेर आराधना गरे र तिनलाई भने, “मेरा मालिकले उहाँको दासलाई के भन्‍नुहुन्छ?”
15 ೧೫ ಯೆಹೋವನ ಸೇನಾಧಿಪತಿಯು “ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು” ಎಂದು ಹೇಳಿದನು. ಯೆಹೋಶುವನು ಹಾಗೆಯೇ ಮಾಡಿದನು.
परमप्रभुको फौजका सेनापतिले यहोशूलाई भने, “तेरो खुट्टाको जुत्ता फुकाल्, किनभने तँ उभिरहेको ठाउँ पवित्र छ ।” यहोशूले त्यसै गरे ।

< ಯೆಹೋಶುವನು 5 >