< ಯೆಹೋಶುವನು 4 >

1 ಜನರೆಲ್ಲರು ಯೊರ್ದನಿನ ಆಚೆಗೆ ದಾಟಿದ ಮೇಲೆ ಯೆಹೋವನು ಯೆಹೋಶುವನಿಗೆ
Ɛberɛ a ɔman no nyinaa twaa Yordan wieeɛ no, Awurade ka kyerɛɛ Yosua sɛ,
2 “ನೀನು ಜನರೊಳಗಿಂದ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಂಡು
“Yiyi mmarima dumienu firi ɔmanfoɔ no mu a ɔbaako biara firi abusuakuo no bi mu
3 ಯೊರ್ದನಿನ ಮಧ್ಯದಲ್ಲಿ ಯಾಜಕರು ನಿಂತಿದ್ದ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ಅವುಗಳನ್ನು ನಿಮ್ಮ ಸಂಗಡ ಈಚೇ ದಡಕ್ಕೆ ತಂದು ನೀವು ಈ ರಾತ್ರಿ ತಂಗುವ ಸ್ಥಳದಲ್ಲಿ ನಿಲ್ಲಿಸಿರಿ” ಎಂದು ಆಜ್ಞಾಪಿಸು ಎಂದನು.
na ka kyerɛ wɔn sɛ, wɔmfa aboɔ dumienu mfiri Yordan mfimfini nifa so wɔ baabi a na asɔfoɔ no gyina hɔ, na wɔnsoa mfa ntwa mmra mmɛgu baabi a mobɛtena anadwo yi.”
4 ಆಗ ಯೆಹೋಶುವನು ತಾನು ಇಸ್ರಾಯೇಲ್ಯರೊಳಗಿಂದ ಕುಲಕ್ಕೆ ಒಬ್ಬನಂತೆ ಆರಿಸಿಕೊಂಡ ಹನ್ನೆರಡು ಮಂದಿಯನ್ನು ಕರೆದು ಅವರಿಗೆ
Ɛnna Yosua frɛɛ mmarima dumienu a ɔyii wɔn firii Israelfoɔ no mu no a ɔbaako biara firi abusuakuo bi mu no,
5 “ನೀವು ನಿಮ್ಮ ದೇವರಾದ ಯೆಹೋವನ ಮಂಜೂಷದ ಮುಂದಾಗಿ ಯೊರ್ದನಿನ ಮಧ್ಯಕ್ಕೆ ಹೋಗಿ ಇಸ್ರಾಯೇಲರ ಕುಲಗಳ ಸಂಖ್ಯೆಗೆ ಸರಿಯಾಗುವಂತೆ ಪ್ರತಿಯೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿರಿ.
na ɔka kyerɛɛ wɔn sɛ, “Monkɔdi Awurade, mo Onyankopɔn, adaka no anim mfa nkɔ Yordan mfimfini. Ɔbaako biara mfa ɛboɔ nto ne batiri so sɛdeɛ Israelfoɔ mmusuakuo no dodoɔ te,
6 ಅವು ನಿಮ್ಮ ಮಧ್ಯದಲ್ಲಿ ಗುರುತಾಗಿರುವವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ನಿಮ್ಮನ್ನು ಕೇಳುವಾಗ
na ɛnyɛ nsɛnkyerɛnneɛ wɔ mo mu. Sɛ daakye bi, mo mma bisa mo sɛ, ‘Saa aboɔ yi ase kyerɛ sɛn’ a,
7 ನೀವು ಅವರಿಗೆ ಯೆಹೋವನ ಒಡಂಬಡಿಕೆಯ ಮಂಜೂಷವು ಯೊರ್ದನ್ ನದಿ ದಾಟುವಾಗ ಅದರ ಮುಂದೆ ಯೊರ್ದನಿನ ನೀರು ನಿಂತುಹೋಯಿತೆಂದು ಹೇಳಿರಿ. ಯೊರ್ದನಿನ ನೀರು ನಿಂತು ಹೋಯಿತೆಂಬುದಕ್ಕೆ ಈ ಕಲ್ಲುಗಳು ಇಸ್ರಾಯೇಲ್ಯರಿಗೆ ಸದಾಕಾಲಕ್ಕೂ ಸಾಕ್ಷಿಗಳಾಗಿರುವವು” ಅಂದನು.
monka nkyerɛ wɔn sɛ, Yordan asutene no twaeɛ wɔ Awurade apam adaka no anim. Ɛberɛ a Awurade apam adaka no twaa Yordan asutene no, asuo no weeɛ. Saa aboɔ yi bɛyɛ nkaedeɛ ama Israelfoɔ daa nyinaa.”
8 ಇಸ್ರಾಯೇಲ್ಯರು ಯೆಹೋಶುವನು ಆಜ್ಞಾಪಿಸಿದಂತೆಯೇ ಮಾಡಿದರು. ಯೆಹೋವನು ಯೆಹೋಶುವನಿಗೆ ಹೇಳಿದ ಪ್ರಕಾರ ಅವರು ಇಸ್ರಾಯೇಲ್ಯರ ಕುಲಸಂಖ್ಯೆಗೆ ಅನುಸಾರವಾಗಿ ಯೊರ್ದನಿನ ಮಧ್ಯದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ತಾವು ಇಳುಕೊಳ್ಳುವ ಸ್ಥಳಕ್ಕೆ ತಂದು ಅಲ್ಲಿ ಅವುಗಳನ್ನು ನಿಲ್ಲಿಸಿದರು.
Enti, mmarima no yɛɛ sɛdeɛ Yosua kyerɛɛ wɔn no. Wɔfaa aboɔ dumienu firii Asubɔnten Yordan mfimfini a ɛboɔ baako biara gyina hɔ ma abusuakuo baako, sɛdeɛ Awurade hyɛɛ Yosua no. Wɔsoa de kɔɔ baabi a wɔtenaa hɔ anadwo no na wɔsii nkaeɛdum wɔ hɔ.
9 ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸಿದನು. ಅವು ಇಂದಿನವರೆಗೂ ಅಲ್ಲಿಯೇ ಇವೆ.
Yosua nso de aboɔ dumienu sii nkaeɛdum wɔ Yordan mfimfini wɔ baabi a na asɔfoɔ a wɔso apam Adaka no gyina hɔ. Ɛwɔ hɔ bɛsi ɛnnɛ.
10 ೧೦ ಮೋಶೆಯು ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ ಯೆಹೋವನ ಅಪ್ಪಣೆಗಳನ್ನೆಲ್ಲಾ ಅವರು ನೆರವೇರಿಸುವ ತನಕ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲೇ ನಿಂತರು.
Asɔfoɔ a na wɔso adaka no gyinaa asuo no mfimfini hɔ ara kɔsii sɛ Awurade ahyɛdeɛ a ɔnam Mose so de maa Yosua no, wɔyɛɛ ne nyinaa. Saa ɛberɛ no, nnipa no yɛɛ ntɛm twaa asuo no kɔsii ne konkɔn so.
11 ೧೧ ಜನರು ಬೇಗನೆ ಹೊಳೆ ದಾಟಿದರು. ಅವರೆಲ್ಲರು ಆಚೆ ದಡ ಸೇರಿದ ಮೇಲೆ ಯಾಜಕರು ಯೆಹೋವನ ಮಂಜೂಷ ಸಹಿತವಾಗಿ ಹೊಳೆ ದಾಟಿ ಜನರ ಎದುರಿನಲ್ಲಿ ಹೋದರು.
Na ɛberɛ a obiara duruu asuo no fa hɔ no, asɔfoɔ no nso de Awurade adaka no tware kɔɔ ɛfa hɔ bi.
12 ೧೨ ರೂಬೇನ್ಯರೂ, ಗಾದ್ಯರೂ, ಮನಸ್ಸೆ ಕುಲದ ಅರ್ಧ ಗೋತ್ರದವರೂ ಮೋಶೆಯು ತಮಗೆ ಆಜ್ಞಾಪಿಸಿದಂತೆ ಯುದ್ಧಸನ್ನದ್ದರಾಗಿ ಇಸ್ರಾಯೇಲ್ಯರ ಮುಂದಾಗಿ ಹೊರಟು ಹೊಳೆದಾಟಿದರು.
Na akofoɔ a wɔahyɛ wɔn akodeɛ a wɔfiri Ruben abusuakuo mu, Gad abusuakuo mu ne Manase abusuakuo fa mu akofoɔ no dii Israelfoɔ no anim twaa Yordan sɛdeɛ Mose kyerɛɛ wɔn no pɛpɛɛpɛ.
13 ೧೩ ಸುಮಾರು ನಲವತ್ತು ಸಾವಿರ ಭಟರು ಯುದ್ಧಮಾಡುವುದಕ್ಕಾಗಿ ಯೆಹೋವನ ಸಮ್ಮುಖದಲ್ಲಿ ಯೆರಿಕೋವಿನ ಬೈಲಿಗೆ ಬಂದರು:
Saa akofoɔ yi, na wɔn dodoɔ bɛyɛ mpem aduanan a wɔasiesie wɔn ho ama ɔko. Wɔtwa kɔɔ Yeriko asase so wɔ Awurade anim.
14 ೧೪ ಆ ದಿನದಲ್ಲಿ ಯೆಹೋವನು ಯೆಹೋಶುವನನ್ನು ಎಲ್ಲಾ ಇಸ್ರಾಯೇಲ್ಯರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಹೇಗೆ ನಡೆದುಕೊಂಡರೋ ಹಾಗೆಯೇ ಯೆಹೋಶುವನು ಭಯ ಮತ್ತು ಗೌರವದಿಂದ ನಡೆದುಕೊಂಡರು.
Saa ɛda no, Awurade yɛɛ Yosua kɛseɛ wɔ Israelfoɔ no nyinaa anim na Yosua nna a aka no nyinaa, Israelfoɔ de obuo ne anidie maa no sɛdeɛ wɔde obuo ne anidie maa Mose no.
15 ೧೫ ಯೆಹೋವನು ಯೆಹೋಶುವನ ಸಂಗಡ ಮಾತನಾಡಿ “ಆಜ್ಞಾಶಾಸನಗಳ ಮಂಜೂಷವನ್ನು ಹೊತ್ತ ಯಾಜಕರಿಗೆ ಯೊರ್ದನಿನ ಹೊಳೆಯಿಂದ ಮೇಲೆ ಬರಬೇಕೆಂದು ಆಜ್ಞಾಪಿಸು” ಎಂದನು.
Na Awurade ka kyerɛɛ Yosua sɛ,
16 ೧೬
“Hyɛ asɔfoɔ a Awurade apam adaka no so wɔn no sɛ, wɔmfiri subɔnhwa no mu hɔ mmra.”
17 ೧೭ ಆಗ ಯೆಹೋಶುವನು ಆ ಯಾಜಕರಿಗೆ ಯೊರ್ದನ್ ನದಿಯಿಂದ ಹೊರಕ್ಕೆ ಬರಬೇಕೆಂದು ಆಜ್ಞಾಪಿಸಿದನು.
Enti, Yosua hyɛɛ wɔn.
18 ೧೮ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನಿಂದ ಮೇಲೆ ಬಂದು ಒಣನೆಲದಲ್ಲಿ ತಮ್ಮ ಕಾಲುಗಳನ್ನಿಟ್ಟ ಕೂಡಲೇ ನೀರು ಮೊದಲಿನಂತೆ ಬಂದು, ಯೊರ್ದನ್ ನದಿಯು ದಡಮೀರಿ ಹರಿಯಿತು.
Na ɛberɛ a asɔfoɔ a wɔso Awurade apam adaka no firii subɔnhwa no mu ara pɛ na Asubɔnten Yordan sane ka sram so tɛntɛntɛn te sɛ kane no.
19 ೧೯ ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಯೊರ್ದನನ್ನು ದಾಟಿ ಬಂದು ಯೆರಿಕೋವಿನ ಪೂರ್ವ ಗಡಿಯಲ್ಲಿರುವ ಗಿಲ್ಗಾಲಿನಲ್ಲಿ ಬಂದು ತಂಗಿದರು.
Bosome a ɛdi ɛkan no ɛda ɛtɔ so edu no nnipa no foro firii Yordan kɔbɔɔ atenaeɛ wɔ Gilgal, Yeriko apueeɛ.
20 ೨೦ ಯೆಹೋಶುವನು ಇಸ್ರಾಯೇಲರು ಯೊರ್ದನಿನಿಂದ ತೆಗೆದುಕೊಂಡು ಬಂದಿದ್ದ ಹನ್ನೆರಡು ಕಲ್ಲುಗಳನ್ನು ಗಿಲ್ಗಾಲಿನಲ್ಲೇ ನಿಲ್ಲಿಸಿದನು.
Gilgal hɔ na Yosua boaa aboɔ dumienu a wɔde firi Asubɔnten Yordan mu baeɛ no ano.
21 ೨೧ ಇಸ್ರಾಯೇಲ್ಯರಿಗೆ, “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ಈ ಕಲ್ಲುಗಳನ್ನು ಏಕೆ ಹೀಗೆ ನಿಲ್ಲಿಸಿದ್ದಾರೆಂದು ನಿಮ್ಮನ್ನು ಕೇಳಿದರೆ ನೀವು ಅವರಿಗೆ
Afei, Yosua ka kyerɛɛ Israelfoɔ no sɛ, “Daakye bi mo mma bɛbisa sɛ, ‘Saa aboɔ yi kyerɛ sɛn?’
22 ೨೨ ‘ಇಸ್ರಾಯೇಲ್ಯರು ಒಣನೆಲವಾಗಿದ್ದ ಈ ಯೊರ್ದನನ್ನು ದಾಟಿ ಬಂದ್ದದರ ಗುರುತು’ ಎಂದು ಹೇಳಿರಿ.
Na mo nso moaka akyerɛ wɔn sɛ, ‘Ɛha ne beaeɛ a Israelfoɔ twaa Yordan wɔ asase wesee so no.’
23 ೨೩ ನಿಮ್ಮ ದೇವರಾದ ಯೆಹೋವನು ನಮ್ಮ ಕಣ್ಣು ಮುಂದೆ ಕೆಂಪುಸಮುದ್ರವನ್ನು ಬತ್ತಿಸಿ, ನಮ್ಮನ್ನು ದಾಟಿಸಿದಂತೆ ಈಗ ನಿಮ್ಮ ಕಣ್ಣು ಮುಂದೆಯೇ ಈ ಯೊರ್ದನನ್ನು ಬತ್ತಿಸಿ, ನಿಮ್ಮನ್ನು ದಾಟಿಸಿದ್ದಾನೆ.
Awurade, mo Onyankopɔn, maa nsuo no wee wɔ mo anim na ɔkɔɔ so ma ɛweeɛ ara kɔsii sɛ mo nyinaa twareeɛ, sɛdeɛ ɔyɛeɛ wɔ Ɛpo Kɔkɔɔ no. Ɔmaa no weeɛ ara kɔsii sɛ yɛn nyinaa twareeɛ.
24 ೨೪ ಇದರಿಂದ ಭೂನಿವಾಸಿಗಳೆಲ್ಲರೂ ಯೆಹೋವನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವ ಹಾಗೆಯೂ ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವವರಾಗಿರುವರು” ಎಂದನು.
Ɔyɛɛ yei sɛdeɛ aman a wɔwɔ ewiase nyinaa bɛhunu Awurade tumi na mo nso moasuro Awurade, mo Onyankopɔn, daa nyinaa.”

< ಯೆಹೋಶುವನು 4 >