< ಯೆಹೋಶುವನು 23 >
1 ೧ ಯೆಹೋವನು ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹು ದಿನಗಳಾದ ಮೇಲೆ ಯೆಹೋಶುವನು ದಿನತುಂಬಿದ ಮುದುಕನಾದನು.
Pǝrwǝrdigar Israilƣa ǝtrapidiki düxmǝnliridin aram berip uzun zamanlar ɵtüp, xundaⱪla Yǝxua ⱪerip, yeximu qongiyip ⱪalƣanda,
2 ೨ ಆತನು ಇಸ್ರಾಯೇಲ್ಯರ ಹಿರಿಯ ಪ್ರಭುಗಳು, ನ್ಯಾಯಾಧಿಪತಿಗಳು, ಅಧಿಕಾರಿಗಳು ಅಲ್ಲದೆ ಎಲ್ಲಾ ಇಸ್ರಾಯೇಲರ ಜನರನ್ನು ತನ್ನ ಬಳಿಗೆ ಕರಿಸಿ ಅವರಿಗೆ, “ನಾನು ದಿನತುಂಬಿದ ಮುದುಕನಾಗಿದ್ದೇನೆ.
Yǝxua pütkül Israilni, ularning aⱪsaⱪallirini, baxliⱪliri, ⱨakim-soraⱪqiliri bilǝn bǝg-ǝmǝldarlirini qaⱪirip ularƣa mundaⱪ dedi: — «Mǝn ⱪerip ⱪaldim, yeximmu qongiyip ⱪaldi.
3 ೩ ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಜನಾಂಗಗಳಿಗೆ ಮಾಡಿದೆಲ್ಲವನ್ನೂ ನೀವೆಲ್ಲರೂ ನೋಡಿದ್ದೀರಷ್ಟೇ. ಹೌದು, ನಿಮಗಾಗಿ ಯುದ್ಧ ಮಾಡಿದಾತನು ನಿಮ್ಮ ದೇವರಾದ ಯೆಹೋವನೇ.
Pǝrwǝrdigar Hudayinglarning silǝr üqün muxu yǝrdiki barliⱪ taipilǝrgǝ ⱪandaⱪ ixlarni ⱪilƣinini ɵzünglar kɵrdünglar; qünki silǝr tǝrǝptǝ turup jǝng ⱪilƣuqi Pǝrwǝrdigar Hudayinglar Ɵzidur.
4 ೪ ನಾನು ಯೊರ್ದನಿನಿಂದ ಪಶ್ಚಿಮದ ಸಮುದ್ರದವರೆಗೂ ಇರುವ ಜನಾಂಗಗಳಲ್ಲಿ ಸತ್ತವರ ಮತ್ತು ಉಳಿದಿರುವವರ ದೇಶವನ್ನು ನಿಮಗೆ ಸ್ವತ್ತಾಗಿ ಕೊಟ್ಟಿದ್ದೇನೆ.
Mana, mǝn ɵzüm yoⱪatⱪan ⱨǝmmǝ ǝllǝrning zeminliri bilǝn ⱪalƣan bu taipilǝrning zeminlirini ⱪoxup ⱪǝbilǝ-jǝmǝtinglar boyiqǝ qǝk taxlap Iordan dǝryasidin tartip kün petix tǝrǝptiki Uluƣ Dengizƣiqǝ, silǝrgǝ miras ⱪilip tǝⱪsim ⱪilip bǝrdim.
5 ೫ ನಿಮ್ಮ ದೇವರಾದ ಯೆಹೋವನು ತಾನೇ ಅವರನ್ನು ನಿಮ್ಮ ಕಣ್ಣೆದುರಿನಲ್ಲಿ ಹೊರಡಿಸಿಬಿಡುವನು. ಆತನ ವಾಗ್ದಾನದಂತೆ ಅವರ ದೇಶವನ್ನು ನೀವು ಸ್ವಂತ ಮಾಡಿಕೊಳ್ಳುವಿರಿ.
Pǝrwǝrdigar Hudayinglar Ɵzi ularni aldinglardin ⱪoƣlap qiⱪirip, kɵzünglardin neri ⱪilip, Pǝrwǝrdigar Hudayinglar silǝrgǝ eytⱪinidǝk silǝr ularning zeminiƣa igǝ bolisilǝr.
6 ೬ ಮೋಶೆಯ ಧರ್ಮಶಾಸ್ತ್ರವಿಧಿಗಳನ್ನೆಲ್ಲಾ ಸ್ಥಿರಚಿತ್ತದಿಂದ ಕೈಕೊಳ್ಳಿರಿ. ಅದನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡಿರಿ.
Xunga silǝr tolimu ⱪǝysǝr bolup Musaning ⱪanun kitabida pütülgǝnning ⱨǝmmisini tutup, ong ya solƣa qǝtnǝp kǝtmǝy, uningƣa ǝmǝl ⱪilixⱪa kɵngül bɵlünglar;
7 ೭ ಉಳಿದಿರುವ ಈ ಅನ್ಯಜನಾಂಗಗಳ ಜೊತೆಯಲ್ಲಿ ಇಜ್ಜೋಡಾಗಬೇಡಿರಿ. ಅವರ ದೇವತೆಗಳ ಹೆಸರನ್ನು ಹೇಳಿ ಆರಾಧಿಸಲೂ ಬಾರದು ಪ್ರಮಾಣಮಾಡಲೂ ಬಾರದು. ಅವುಗಳಿಗೆ ಅಡ್ಡ ಬಿದ್ದು ಸೇವಿಸಲೂ ಬಾರದು.
xundaⱪ ⱪilip, aranglarda ⱪelip ⱪalƣan bu taipilǝr bilǝn bardi-kǝldi ⱪilmanglar; xuningdǝk ularning ilaⱨlirining namlirini tilƣa almanglar yaki ularning nami bilǝn ⱪǝsǝm ⱪilmanglar; ularƣa ibadǝt ⱪilmanglar, ularƣa bax urmanglar;
8 ೮ ಈವರೆಗೆ ಹೇಗೊ ಹಾಗೆಯೇ ಇನ್ನು ಮುಂದೆಯೂ ನಿಮ್ಮ ದೇವರಾದ ಯೆಹೋವನನ್ನೇ ಆತುಕೊಂಡಿರಿ.
bǝlki bügüngiqǝ ⱪilƣininglardǝk, Pǝrwǝrdigar Hudayinglarƣa baƣlinip turunglar.
9 ೯ ಯೆಹೋವನು ಮಹಾಪರಾಕ್ರಮಿಗಳಾದ ಜನಾಂಗಗಳನ್ನು ನಿಮ್ಮೆದುರಿನಿಂದ ಓಡಿಸಿಬಿಟ್ಟಿದ್ದಾನೆ. ನಿಮ್ಮ ಮುಂದೆ ಈವರೆಗೂ ಒಬ್ಬನೂ ತಲೆಯೆತ್ತಿ ನಿಲ್ಲಲಿಲ್ಲವಲ್ಲಾ.
Qünki Pǝrwǝrdigar aldinglardin qong-qong wǝ küqlük ǝllǝrni ⱪoƣlap qiⱪiriwǝtkǝndur; bügüngiqǝ ⱨeqⱪandaⱪ adǝm aldinglarda put tirǝp turalmidi.
10 ೧೦ ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನದಂತೆ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.
Pǝrwǝrdigar Hudayinglar silǝrgǝ eytⱪini boyiqǝ silǝr tǝrǝptǝ turup jǝng ⱪilƣini üqün silǝrdin bir adiminglar ularning ming adimini tiripirǝn ⱪilidu.
11 ೧೧ ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವನನ್ನೇ ಪ್ರೀತಿಸಿರಿ.
Xunga Pǝrwǝrdigar Hudayinglarni sɵyüx üqün ɵz kɵnglünglarƣa ⱪattiⱪ sǝgǝk bolunglar!
12 ೧೨ ನೀವು ದೇವರಿಗೆ ವಿಮುಖರಾಗಿ ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳೊಡನೆ ಸೇರಿಕೊಂಡು ಅವರೊಂದಿಗೆ ಗಂಡು ಹೆಣ್ಣು ಕೊಟ್ಟು ತಂದು ಸಂಬಂಧವನ್ನಿಟ್ಟುಕೊಂಡರೆ,
Qünki ǝgǝr silǝr Uningdin yüz ɵrüp aranglarda ⱪalƣan bu ǝllǝr bilǝn arilixip-baƣlinip, ular bilǝn ⱪoda-baja bolup, ular bilǝn berix-kelix ⱪilsanglar,
13 ೧೩ ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಎದುರಿನಿಂದ ಹೊರಡಿಸುವುದೇ ಇಲ್ಲವೆಂದು ತಿಳಿದುಕೊಳ್ಳಿರಿ. ಅವರೇ ನಿಮಗೆ ಉರುಲೂ ಬೋನೂ ಆಗಿರುವರು. ಅವರು ಪಕ್ಕೆಗೆ ಹೊಡೆಯುವ ಕೊರಡೆಯಂತೆಯೂ ಕಣ್ಣಿಗೆ ಚುಚ್ಚುವ ಮುಳ್ಳಿನಂತೆಯೂ ಇರುವರು. ಕಡೆಯಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ಈ ಉತ್ತಮ ದೇಶದಲ್ಲಿ ನೀವು ಇಲ್ಲದಂತಾಗುವಿರಿ.
undaⱪta silǝrgǝ xu ix ayan bolsunki, Pǝrwǝrdigar Hudayinglar aldinglardin bu ǝllǝrni ikkinqi ⱪoƣlap qiⱪarmaydu, bǝlki bular silǝrgǝ ⱪapⱪan wǝ ⱪiltaⱪ bolup, biⱪininglarƣa ⱪamqa bolup qüxüp, kɵzünglǝrgǝ tikǝn bolup sanjilidu; ahirda Pǝrwǝrdigar Hudayinglar silǝrgǝ bǝrgǝn bu yahxi zemindin mǝⱨrum bolup yoⱪilisilǝr.
14 ೧೪ ಭೂಲೋಕದವರೆಲ್ಲರೂ ಹೋಗುವ ಮಾರ್ಗವನ್ನು ನಾನು ಈಗ ಅನುಸರಿಸಬೇಕಾಗಿದೆ. ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಾದದ ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ. ಎಲ್ಲವೂ ತಪ್ಪದೆ ನೆರವೇರಿದೆ ಎಂಬುದು ನಿಮಗೆ ಮನದಟ್ಟಾಗಿದೆಯಲ್ಲ.
Mana, mǝn bügün barliⱪ adǝmlǝr muⱪǝrrǝr besip ɵtidiƣan yolni mangimǝn; silǝrning pütün dilinglar wǝ wujudunglarƣa xu roxǝnki, Pǝrwǝrdigar Hudayinglarning silǝr toƣruluⱪ ⱪilƣan mubarǝk wǝdilirining ⱨeqbiri ǝmǝlgǝ axurulmay ⱪalmidi; ⱨǝmmisi silǝr üqün bǝja kǝltürülüp, ⱨeqⱪaysisi yǝrdǝ ⱪalmidi.
15 ೧೫ ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನಕ್ಕನುಸಾರವಾಗಿ ಈಗ ನಿಮಗೆ ಎಲ್ಲಾ ತರದ ಮೇಲನ್ನು ಅನುಗ್ರಹಿಸಿದಂತೆಯೇ ನಿಮ್ಮ ಮೇಲೆ ಸಕಲ ವಿಧವಾದ ಕೇಡುಗಳನ್ನು ಬರಮಾಡಿ, ತಾನು ಕೊಟ್ಟಿರುವ ಈ ಉತ್ತಮ ದೇಶದಿಂದ ನಿಮ್ಮನ್ನು ತೆಗೆದು ನಾಶಮಾಡಿಬಿಡುವನು.
Lekin silǝr Pǝrwǝrdigar Hudayinglarning silǝrgǝ ǝmr ⱪilip tohtatⱪan ǝⱨdisini buzƣanda, Pǝrwǝrdigar Hudayinglar silǝrgǝ wǝdǝ ⱪilƣan ⱨǝmmǝ bǝrikǝt üstünglǝrgǝ qüxürülgǝndǝk, xundaⱪ boliduki, Pǝrwǝrdigar Hudayinglar silǝrni Ɵzi silǝrgǝ bǝrgǝn zemindin yoⱪatⱪuqǝ barliⱪ agaⱨ ⱪilƣan ixni qüxüridu; silǝr berip, [uning ǝⱨdisini buzup] baxⱪa ilaⱨlarƣa ibadǝt ⱪilip bax ursanglar, Pǝrwǝrdigarning ƣǝzipi silǝrgǝ tutixip, silǝrni Ɵzi silǝrgǝ bǝrgǝn yahxi zemindin tezla yoⱪ ⱪilidu».
16 ೧೬ ನಿಮ್ಮ ದೇವರಾದ ಯೆಹೋವನ ನಿಬಂಧನೆಯನ್ನು ಮೀರಿ ಅನ್ಯದೇವತೆಗಳಿಗೆ ಅಡ್ಡಬಿದ್ದು ಸೇವಿಸಿದರೆ ಯೆಹೋವನ ಕೋಪಾಗ್ನಿಯು ನಿಮ್ಮ ಮೇಲೆ ಉರಿಯುವುದು ಮತ್ತು ಆತನು ಕೊಟ್ಟ ಒಳ್ಳೆಯ ದೇಶದಿಂದ ನೀವು ತೆಗೆದುಹಾಕಲ್ಪಟ್ಟು ಬೇಗನೆ ನಾಶವಾದೀರಿ” ಎಂದನು.