< ಯೆಹೋಶುವನು 21 >

1 ಲೇವಿ ಕುಲಾಧಿಪತಿಗಳು ಕಾನಾನ್ ದೇಶದ ಶೀಲೋವಿನಲ್ಲಿದ್ದ ಮಹಾಯಾಜಕನಾದ ಎಲ್ಲಾಜಾರ, ನೂನನ ಮಗನಾದ ಯೆಹೋಶುವ ಮತ್ತು ಇಸ್ರಾಯೇಲ ಕುಲಾಧಿಪತಿಗಳು ಇವರ ಬಳಿಗೆ ಬಂದು,
Báyìí ni olórí ìdílé àwọn ọmọ Lefi lọ bá Eleasari àlùfáà, Joṣua ọmọ Nuni àti olórí ẹ̀yà àwọn ìdílé ẹ̀yà Israẹli.
2 “ನಮ್ಮ ನಿವಾಸಕ್ಕೆ ಪಟ್ಟಣಗಳನ್ನೂ ಪಶುಗಳಿಗೆ ಗೋಮಾಳಗಳನ್ನೂ ಕೊಡಬೇಕೆಂದು ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ್ದಾನಲ್ಲವೆ?” ಅನ್ನಲು
Ní Ṣilo, ní Kenaani, wọn sọ fún wọn pé, “Olúwa pàṣẹ nípasẹ̀ Mose pé kí wọn fún wa ní ìlú láti máa gbé àti ilẹ̀ pápá oko tútù fún ẹran ọ̀sìn wa.”
3 ಅವರು ಯೆಹೋವನ ಆಜ್ಞೆಯಂತೆ ತಮ್ಮ ಸ್ವತ್ತಿನಿಂದ ಕೆಳಗೆ ಬರೆದಷ್ಟು ಪಟ್ಟಣಗಳನ್ನೂ ಅವುಗಳಿಗೆ ಸೇರಿದ ಗೋಮಾಳಗಳನ್ನೂ ಅವರಿಗೆ ಕೊಟ್ಟರು.
Àwọn ọmọ Israẹli sì fún àwọn ọmọ Lefi ní àwọn ìlú wọ̀nyí, àti ilẹ̀ pápá oko tútù lára ilẹ̀ ìní tiwọn gẹ́gẹ́ bí Olúwa ti pàṣẹ fún Mose.
4 ಕೆಹಾತ್ಯರಿಗೋಸ್ಕರ ಚೀಟುಹಾಕಿದಾಗ ಆರೋನನ ವಂಶದವರಾದ ಲೇವಿಯರಿಗೆ ಯೆಹೂದ, ಸಿಮೆಯೋನ್, ಬೆನ್ಯಾಮೀನ್ ಕುಲಗಳಿಂದ ಹದಿಮೂರು ಪಟ್ಟಣಗಳು ದೊರೆತವು.
Ìpín kìn-ín-ní wà fún àwọn ọmọ Kohati, ní agbo ilé, agbo ilé. Àwọn ọmọ Lefi tí wọ́n jẹ́ ọmọ Aaroni àlùfáà ni a pín ìlú mẹ́tàlá fún láti ara ẹ̀yà Juda, Simeoni àti Benjamini.
5 ಉಳಿದ ಕೆಹಾತ್ಯರಿಗೆ ಎಫ್ರಾಯೀಮ್ ದಾನ್ ಕುಲಗಳಿಂದ ಮನಸ್ಸೆಯ ಅರ್ಧಕುಲದಿಂದಲೂ ಹತ್ತು ಪಟ್ಟಣಗಳು ಸಿಕ್ಕಿದವು.
Ìyókù àwọn ọmọ Kohati ni a pín ìlú mẹ́wàá fún láti ara ẹ̀yà Efraimu, Dani àti ìdajì Manase.
6 ಪುನಃ ಚೀಟು ಹಾಕಿದಾಗ ಗೇರ್ಷೋನ್ಯರಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ ಎಂಬ ಕುಲಗಳಿಂದ ಮತ್ತು ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಕುಲದಿಂದಲೂ ಹದಿಮೂರು ಪಟ್ಟಣಗಳು ದೊರಕಿದವು.
Àwọn ẹ̀yà Gerṣoni ni a pín ìlú mẹ́tàlá fún láti ara ẹ̀yà Isakari, Aṣeri, Naftali àti ìdajì ẹ̀yà Manase ní Baṣani.
7 ಮೆರಾರೀ ಗೋತ್ರದವರಿಗೆ ರೂಬೇನ್, ಗಾದ್, ಜೆಬುಲೂನ್ ಕುಲಗಳಿಂದ ಹನ್ನೆರಡು ಪಟ್ಟಣಗಳು ಸಿಕ್ಕಿದವು
Àwọn ọmọ Merari ní agbo ilé, agbo ilé ni wọ́n fún ní ìlú méjìlá láti ara ẹ̀yà Reubeni, Gadi àti Sebuluni.
8 ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದಂತೆ ಇಸ್ರಾಯೇಲರು ಚೀಟು ಹಾಕಿ ಲೇವಿಯರಿಗೆ ಇಷ್ಟು ಪಟ್ಟಣಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಟ್ಟರು.
Báyìí ni àwọn ọmọ Israẹli pín ìlú wọ̀nyí àti ilẹ̀ pápá oko tútù fún àwọn ọmọ Lefi gẹ́gẹ́ bí Olúwa ti pàṣẹ láti ẹnu Mose.
9 ಲೇವಿ ಕುಲದವರು ಕೆಹಾತ್ಯರ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಮೊದಲು ಚೀಟು ಬಿದ್ದಿತು.
Láti ara ẹ̀yà Juda àti ẹ̀yà Simeoni ni wọ́n ti pín àwọn ìlú tí a dárúkọ wọ̀nyí,
10 ೧೦ ಆದ್ದರಿಂದ ಇಸ್ರಾಯೇಲ್ಯರು ಅವರಿಗೆ ಯೆಹೂದ ಸಿಮೆಯೋನ್ ಕುಲಗಳಿಂದ ಕೆಳಗೆ ಹೇಳಿರುವ ಪಟ್ಟಣಗಳನ್ನು ಕೊಟ್ಟರು.
(ìlú wọ̀nyí ni a fún àwọn ọmọ Aaroni tí ó jẹ́ ọ̀kan nínú ìdílé Kohati tí í ṣe ọmọ Lefi, nítorí tí ìpín àkọ́kọ́ jẹ́ tiwọn).
11 ೧೧ ಇವುಗಳಲ್ಲಿ ಯೆಹೂದ ಬೆಟ್ಟದ ಸೀಮೆಯ ಹೆಬ್ರೋನೆಂಬ ಗೋಮಾಳ ಸಹಿತವಾದ ಕಿರ್ಯತರ್ಬವೂ ಸೇರಿರುತ್ತದೆ. (ಕಿರ್ಯಾತ ಅರ್ಬ ಎಂದರೆ ಅನಾಕನ ತಂದೆಯಾದ ಅರ್ಬನ ಪಟ್ಟಣ) ಅದರ ಸುತ್ತಲಿರುವ ಉಪನಗರಗಳನ್ನೂ ಅವರಿಗೆ ಕೊಟ್ಟರು.
Wọ́n fún wọn ní Kiriati-Arba (tí í ṣe, Hebroni), pẹ̀lú ilẹ̀ pápá oko tútù tí ó yí wọn ká, ní ilẹ̀ òkè Juda. (Arba ni baba ńlá Anaki.)
12 ೧೨ ಆದರೆ ಇದರ ಹೊಲಗಳನ್ನೂ, ಇದಕ್ಕೆ ಸೇರಿದ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೆ ಕೊಟ್ಟರು.
Ṣùgbọ́n àwọn oko àti àwọn abúlé ní agbègbè ìlú náà ni wọ́n ti fi fún Kalebu ọmọ Jefunne gẹ́gẹ́ bí ohun ìní rẹ̀.
13 ೧೩ ಮಹಾಯಾಜಕನಾದ ಆರೋನನ ವಂಶದವರಿಗೆ ಮೇಲೆ ಹೇಳಿದ ಎರಡು ಕುಲಗಳಿಂದ ಹೆಬ್ರೋನೆಂಬ ಆಶ್ರಯ ನಗರವಾದ ಲಿಬ್ನಾ,
Ní àfikún wọ́n sì fún àwọn ọmọ Aaroni tí í ṣe àlùfáà ní Hebroni (ọ̀kan nínú ìlú ààbò fún àwọn apànìyàn) pẹ̀lú ilẹ̀ pápá oko tútù rẹ̀, Libina,
14 ೧೪ ಯತ್ತೀರ್, ಎಷ್ಟೆಮೋಹ,
Jattiri, Eṣitemoa,
15 ೧೫ ಹೋಲೋನ್, ದೆಬೀರ್,
Holoni àti Debiri,
16 ೧೬ ಅಯಿನ್, ಯುಟ್ಟಾ, ಬೇತ್‌ಷೆಮೆಷ್‌ ಎಂಬ ಒಂಭತ್ತು ಗೋಮಾಳ ಸಹಿತವಾದ ಪಟ್ಟಣಗಳು
Aini, Jutta àti Beti-Ṣemeṣi, pẹ̀lú ilẹ̀ pápá oko wọn. Ìlú mẹ́sàn-án láti ara ẹ̀yà méjì wọ̀nyí.
17 ೧೭ ಹಾಗೂ ಬೆನ್ಯಾಮೀನನ ಕುಲದಿಂದ ಗಿಬ್ಯೋನ್, ಗೆಬ,
Láti ara ẹ̀yà Benjamini ni wọ́n ti fún wọn ní: Gibeoni, Geba,
18 ೧೮ ಅನಾತೋತ್, ಅಲ್ಮೋನ್ ಎಂಬ ನಾಲ್ಕು ಗೋಮಾಳ ಸಹಿತವಾದ ಪಟ್ಟಣಗಳೂ ದೊರಕಿದವು.
Anatoti àti Almoni, pẹ̀lú ilẹ̀ pápá oko wọn, wọ́n jẹ́ ìlú mẹ́rin.
19 ೧೯ ಮಹಾಯಾಜಕನಾದ ಆರೋನನ ವಂಶದವರ ಪಾಲಿಗೆ ಬಂದಂಥ ಗೋಮಾಳ ಸಹಿತವಾದ ಪಟ್ಟಣಗಳು ಹದಿಮೂರು.
Gbogbo ìlú àwọn àlùfáà, ìran Aaroni jẹ́ mẹ́tàlá pẹ̀lú ilẹ̀ pápá wọn.
20 ೨೦ ಲೇವಿಯರಾದ ಕೆಹಾತ್ಯರ ಉಳಿದ ಕುಟುಂಬಗಳಿಗೆ
Ìyókù ìdílé Kohati tí ó jẹ́ ọmọ Lefi ní a pín ìlú fún láti ara ẹ̀yà Efraimu.
21 ೨೧ ಎಫ್ರಾಯೀಮ್ಯರ ಸ್ವತ್ತಿನಿಂದ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ,
Ní ilẹ̀ òkè Efraimu wọ́n fún wọn ní: Ṣekemu (tí ó jẹ́ ìlú ààbò fún apànìyàn) àti Geseri,
22 ೨೨ ಗೆಜೆರ್, ಕಿಬ್ಚೈಮ್ ಹಾಗೂ ಬೇತ್‌ಹೋರೋನ್ ಎಂಬ ಗೋಮಾಳ ಸಹಿತವಾದ ನಾಲ್ಕು ಪಟ್ಟಣಗಳು,
Kibasaimu àti Beti-Horoni, pẹ̀lú ilẹ̀ pápá oko wọn jẹ́ ìlú mẹ́rin.
23 ೨೩ ದಾನ್ಯರ ಸ್ವತ್ತಿನಿಂದ ಎಲ್ತೆಕೇ, ಗಿಬ್ಬೆತೋನ್,
Láti ara ẹ̀yà Dani ni wọ́n ti fún wọn ní: Elteke, Gibetoni,
24 ೨೪ ಅಯ್ಯಾಲೋನ್, ಗತ್‌ರಿಮ್ಮೋನ್ ಎಂಬ ಗೋಮಾಳ ಸಹಿತವಾದ ನಾಲ್ಕು ಪಟ್ಟಣಗಳು,
Aijaloni àti Gati-Rimoni, pẹ̀lú ilẹ̀ pápá oko tútù wọn jẹ́ ìlú mẹ́rin.
25 ೨೫ ಮನಸ್ಸೆ ಕುಲದ ಅರ್ಧಜನರ ಸ್ವತ್ತಿನಿಂದ ತಾನಾಕ್, ಗತ್‌ರಿಮ್ಮೋನ್, ಎಂಬ ಎರಡು ಗೋಮಾಳ ಸಹಿತವಾದ ಪಟ್ಟಣಗಳು ಚೀಟಿನಿಂದ ದೊರಕಿದವು.
Láti ara ìdajì ẹ̀yà Manase ni wọ́n ti fún wọn ní: Taanaki àti Gati-Rimoni pẹ̀lú ilẹ̀ pápá oko wọn jẹ́ ìlú méjì.
26 ೨೬ ಒಟ್ಟಾರೆ ಕೆಹಾತ್ಯರಿಗೆ ಸಿಕ್ಕಿದಂಥ ಗೋಮಾಳ ಸಹಿತವಾದ ಪಟ್ಟಣಗಳು ಹತ್ತು.
Gbogbo ìlú mẹ́wẹ̀ẹ̀wá yìí àti ilẹ̀ pápá wọn ni a fi fún ìyókù ìdílé Kohati.
27 ೨೭ ಗೆರ್ಷೋನ್ಯರ ಕುಟುಂಬಗಳಿಗೆ ಅರ್ಧ ಮನಸ್ಸೆಯವರ ಸ್ವತ್ತಿನಿಂದ ದೊರಕಿದ ಪಟ್ಟಣಗಳು ಇವು: ಕೊಲೆ ಮಾಡಿದವನಿಗೆ ಆಶ್ರಯ ನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ಪಟ್ಟಣಗಳು;
Àwọn ọmọ Gerṣoni ìdílé àwọn ọmọ Lefi ni wọ́n fún lára: ìdajì ẹ̀yà Manase, Golani ní Baṣani (ìlú ààbò fún apànìyàn) àti Be-Eṣterah pẹ̀lú ilẹ̀ pápá oko tútù wọ́n jẹ́ méjì.
28 ೨೮ ಇಸ್ಸಾಕಾರ್ ಸ್ವತ್ತಿನಿಂದ ಕಿಷ್ಯೋನ್, ದಾಬೆರತ್,
Láti ara ẹ̀yà Isakari ni wọ́n ti fún wọn ní, Kiṣioni Daberati,
29 ೨೯ ಯರ್ಮೂತ್, ಏಂಗನ್ನೀಮ್, ಎಂಬ ನಾಲ್ಕು ಗೋಮಾಳ ಸಹಿತವಾದ ಪಟ್ಟಣಗಳು;
Jarmatu àti Eni-Gannimu, pẹ̀lú ilẹ̀ pápá oko wọ́n jẹ́ ìlú mẹ́rin.
30 ೩೦ ಆಶೇರ್ ಕುಲದಿಂದ ಮಿಷಾಲ್, ಅಬ್ದೋನ್,
Láti ara ẹ̀yà Aṣeri ni wọ́n ti fún wọn ní Miṣali, àti Abdoni,
31 ೩೧ ಹೆಲ್ಕಾತ್ ರೆಹೋಬ್ ಎಂಬ ನಾಲ್ಕು ಗೋಮಾಳ ಸಹಿತವಾದ ಪಟ್ಟಣಗಳು;
Helikati àti Rehobu, pẹ̀lú ilẹ̀ pápá oko wọ́n jẹ́ ìlú mẹ́rin.
32 ೩೨ ನಫ್ತಾಲಿ ಸ್ವತ್ತಿನಿಂದ, ಕೊಲೆ ಮಾಡಿದವನಿಗೆ ಆಶ್ರಯ ನಗರವಾದ ಗಲಿಲಾಯದ ಕೆದೆಷ್ ಹಮ್ಮೋತ್ ದೋರ್, ಕರ್ತಾನ್ ಎಂಬ ಗೋಮಾಳ ಸಹಿತವಾದ ಮೂರು ಪಟ್ಟಣಗಳು ದೊರಕಿದವು.
Láti ara ẹ̀yà Naftali ni a ti fún wọn ní: Kedeṣi ní Galili (tí ó jẹ́ ìlú ààbò fún apànìyàn), Hamoti Dori àti Karitani, pẹ̀lú ilẹ̀ pápá oko wọ́n jẹ́ ìlú mẹ́ta.
33 ೩೩ ಗೇರ್ಷೊನ್ಯರಿಗೆ ಸಿಕ್ಕಿದ ಗೋಮಾಳ ಸಹಿತವಾದ ಪಟ್ಟಣಗಳು ಹದಿಮೂರು.
Gbogbo ìlú tí ó jẹ́ ti ọmọ Gerṣoni jẹ́ mẹ́tàlá, pẹ̀lú ilẹ̀ pápá oko wọn.
34 ೩೪ ಮಿಕ್ಕ ಲೇವಿಯರಾದ ಮೆರಾರೀ ಗೋತ್ರದವರಿಗೆ ಜೆಬುಲೂನ್ ಸ್ವತ್ತಿನಿಂದ ಯೊಕ್ನೆಯಾಮ್,
Láti ara ẹ̀yà Sebuluni ni a ti fún ìdílé Merari (tí í ṣe ìyókù ọmọ Lefi) ní: Jokneamu, Karta,
35 ೩೫ ಕರ್ತಾ, ದಿಮ್ನಾ ಹಾಗೂ ನಹಲಾಲ್ ಎಂಬ ಗೋಮಾಳ ಸಹಿತವಾದ ನಾಲ್ಕುಪಟ್ಟಣಗಳು.
Dimina àti Nahalali, pẹ̀lú ilẹ̀ pápá oko wọn, wọ́n jẹ́ ìlú mẹ́rin.
36 ೩೬ ರೂಬೇನ್ಯರ ಸ್ವತ್ತಿನಿಂದ ಬೆಚೆರ್, ಯಹಚಾ,
Láti ara ẹ̀yà Reubeni ni wọ́n ti fún wọn ní Beseri, àti Jahisa,
37 ೩೭ ಕೆದೇಮೋತ್ ಹಾಗೂ ಮೇಫಾಗತ್ ಎಂಬ ಗೋಮಾಳ ಸಹಿತವಾದ ನಾಲ್ಕು ಪಟ್ಟಣಗಳು;
Kedemoti àti Mefaati, pẹ̀lú ilẹ̀ pápá oko wọ́n jẹ́ ìlú mẹ́rin.
38 ೩೮ ಗಾದ್ಯರ ಸ್ವತ್ತಿನಿಂದ ಕೊಲೆ ಮಾಡಿದವನಿಗೆ ಆಶ್ರಯ ನಗರವಾಗಿರುವ ಗಿಲ್ಯಾದಿನ ರಾಮೋತ್, ಮಹನಯಿಮ್,
Láti ara ẹ̀yà Gadi ni wọ́n ti fún wọn ní Ramoti ní Gileadi (tí ó jẹ́ ìlú ààbò fún apànìyàn), Mahanaimu,
39 ೩೯ ಹೆಷ್ಬೋನ್, ಯಗ್ಜೇರ್ ಎಂಬ ಗೋಮಾಳ ಸಹಿತವಾದ ನಾಲ್ಕುಪಟ್ಟಣಗಳು ದೊರಕಿದವು.
Heṣboni àti Jaseri, e pẹ̀lú ilẹ̀ pápá oko wọ́n jẹ́ ìlú mẹ́rin.
40 ೪೦ ಮಿಕ್ಕ ಲೇವಿಯರಾದ ಮೆರಾರೀ ಗೋತ್ರಗಳಿಗೆ ಚೀಟಿಯಿಂದ ದೊರಕಿದ ಪಟ್ಟಣಗಳು ಒಟ್ಟು ಹನ್ನೆರಡು.
Gbogbo ìlú tí wọ́n pín fún àwọn ọmọ Merari tí wọ́n jẹ́ ìyókù àwọn ọmọ Lefi jẹ́ méjìlá.
41 ೪೧ ಲೇವಿಯರಿಗೆ ಇಸ್ರಾಯೇಲರ ಮಧ್ಯದಲ್ಲಿ ದೊರಕಿದ ಗೋಮಾಳ ಸಹಿತವಾದ ಪಟ್ಟಣಗಳು ನಲವತ್ತೆಂಟು.
Gbogbo ìlú àwọn ọmọ Lefi tó wà láàrín ara ilẹ̀ àwọn ọmọ Israẹli jẹ́ méjìdínláàádọ́ta lápapọ̀ pẹ̀lú pápá oko wọn.
42 ೪೨ ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಗೋಮಾಳಗಳಿದ್ದವು. ಎಲ್ಲಾ ಪಟ್ಟಣಗಳಿಗೂ ಹೀಗೆಯೇ ಇದ್ದಿತು.
Ọ̀kọ̀ọ̀kan ìlú wọ̀nyí ni ó ni ilẹ̀ pápá oko tí ó yí ì ká, bẹ́ẹ̀ náà ló rí fún gbogbo ìlú wọ̀nyí.
43 ೪೩ ಯೆಹೋವನು ಇಸ್ರಾಯೇಲರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇಸ್ರಾಯೇಲಿಗೆ ಕೊಟ್ಟನು. ಅವರು ಅದನ್ನು ಸ್ವತಂತ್ರಪಡಿಸಿಕೊಂಡು ಅದರಲ್ಲಿ ವಾಸಮಾಡಿದರು.
Báyìí ni Olúwa fún Israẹli ní gbogbo ilẹ̀ tí ó ṣèlérí láti fi fún àwọn baba ńlá wọn. Nígbà tí wọ́n sì gbà á tan wọ́n sì tẹ̀dó síbẹ̀.
44 ೪೪ ಯೆಹೋವನು ಅವರ ಪೂರ್ವಿಕರಿಗೆ ಆಣೆಯಿಟ್ಟು ಹೇಳಿದಂತೆ ಅವರಿಗೆ ಎಲ್ಲಾ ಕಡೆಗಳಿಂದಲೂ ಸಮಾಧಾನವನ್ನು ಅನುಗ್ರಹಿಸಿದನು. ವೈರಿಗಳಲ್ಲಿ ಒಬ್ಬನೂ ಅವರೆದುರು ನಿಲ್ಲಲಿಲ್ಲ. ಆತನು ಎಲ್ಲರನ್ನೂ ಅವರ ಕೈಗೆ ಒಪ್ಪಿಸಿದನು.
Olúwa sì fún wọn ní ìsinmi ní gbogbo ọ̀nà, gẹ́gẹ́ bí ó ti ṣèlérí fún baba ńlá wọn. Kò sì sí ọ̀kankan nínú àwọn ọ̀tá wọn tí ó lè dojúkọ wọ́n. Olúwa sì fi gbogbo àwọn ọ̀tá wọn lé wọn ní ọwọ́.
45 ೪೫ ಯೆಹೋವನು ಇಸ್ರಾಯೇಲ್ಯರಿಗೆ ಮಾಡಿದ ಅತಿ ಶ್ರೇಷ್ಠ ವಾಗ್ದಾನಗಳಲ್ಲಿ ಒಂದೂ ತಪ್ಪಿ ಹೋಗಲಿಲ್ಲ. ಎಲ್ಲವೂ ನೆರವೇರಿದವು.
Kò sí ọ̀kan nínú ìlérí rere tí Olúwa ṣe fún ilé Israẹli tí ó kùnà, gbogbo rẹ̀ ni ó ṣe.

< ಯೆಹೋಶುವನು 21 >