< ಯೆಹೋಶುವನು 2 >

1 ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಗುಪ್ತವಾಗಿ ಯೆರಿಕೋ ಪಟ್ಟಣವನ್ನೂ ನೋಡುವುದಕ್ಕೋಸ್ಕರ ಶಿಟ್ಟೀಮಿನಿಂದ ಕಳುಹಿಸಿದನು. ಅವರಿಗೆ “ನೀವು ಹೊರಟು ಹೋಗಿ ಕಾನಾನ್ ದೇಶದ ಯೆರಿಕೋ ಪಟ್ಟಣವನ್ನು ನೋಡಿರಿ” ಎಂದನು. ಆಗ ಅವರು ಹೊರಟು ಹೋಗಿ ರಾಹಾಬಳೆಂಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು.
Afei, Yosua somaa akwansrafoɔ baanu wɔ kɔkoam firii Israelfoɔ atenaeɛ a ɛwɔ Sitim. Ɔka kyerɛɛ wɔn sɛ, “Monkɔsra asase a ɛda Yordan agya no, ne titire ne deɛ atwa Yeriko ho ahyia no.” Enti, mmarima baanu no sii mu kɔduruu odwamanfoɔ bi a ne din de Rahab fie na wɔtenaa hɔ anadwo no.
2 ಜನರು ಯೆರಿಕೋವಿನ ಅರಸನಿಗೆ “ಇಗೋ, ಈ ರಾತ್ರಿ ಇಸ್ರಾಯೇಲ್ಯರ ಕಡೆಯವರು ನಮ್ಮ ದೇಶವನ್ನು ಸಂಚರಿಸಿ ಹೊಂಚುಹಾಕುವುದಕ್ಕೆ ಬಂದಿದ್ದಾರೆ” ಎಂದು ತಿಳಿಸಿದರು.
Obi kɔka kyerɛɛ Yerikohene sɛ, “Anadwo yi ara, Israelfoɔ no bi aba ha a wɔrebɛsra asase yi.”
3 ಆಗ ಯೆರಿಕೋವಿನ ಅರಸನು ರಾಹಾಬಳಿಗೆ “ನಿನ್ನ ಮನೆಯಲ್ಲಿ ಇಳಿದುಕೊಂಡಿರುವ ಆ ಮನುಷ್ಯರನ್ನು ತಂದೊಪ್ಪಿಸು; ಅವರು ದೇಶವನ್ನೆಲ್ಲಾ ಸಂಚರಿಸಿ ನೋಡಿ ಹೊಂಚುಹಾಕುವುದಕ್ಕೆ ಬಂದವರು” ಎಂದು ಹೇಳಿ ಕಳುಹಿಸಿದನು.
Enti Yerikohene soma kɔɔ Rahab nkyɛn kɔka kyerɛɛ no sɛ, “Fa mmarima a wɔabɛsoɛ wo no ma yɛn. Wɔyɛ akwansrafoɔ a wɔrebɛsra yɛn asase yi ahwehwɛ ɛkwan a wɔbɛfa so ato ahyɛ yɛn so.”
4 ಆದರೆ ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು ಕೇಳಲು ಬಂದವರಿಗೆ, “ಆ ಮನುಷ್ಯರು ನನ್ನ ಬಳಿಗೆ ಬಂದದ್ದು ನಿಜ; ಅವರು ಎಲ್ಲಿಯವರೆಂಬುದು ನನಗೆ ತಿಳಿಯಲಿಲ್ಲ.
Rahab a na ɔde mmarima baanu no asie no buaa sɛ, “Mmarima no baa me ha deɛ, nanso mennim baabi a wɔfiri baeɛ.
5 ಊರಬಾಗಿಲನ್ನು ಮುಚ್ಚುವ ಹೊತ್ತಿನಲ್ಲಿ ಕತ್ತಲಲ್ಲೇ ಹೊರಟುಹೋದರು. ಎಲ್ಲಿಗೆ ಹೋದರೆಂಬುದು ಗೊತ್ತಿಲ್ಲ. ಬೇಗನೆ ಅವರನ್ನು ಬೆನ್ನಟ್ಟಿರಿ; ನಿಮಗೆ ಸಿಕ್ಕಾರು” ಎಂದು ಹೇಳಿದಳು.
Adeɛ reyɛ asa a wɔrebɛtoto kuropɔn no apono mu no na wɔkɔeɛ, nso manhunu baabi a wɔfaeɛ. Sɛ moyɛ ntɛm ti wɔn a, ebia, mobɛto wɔn.”
6 ಆದರೆ ಅವಳು ಆ ಮನುಷ್ಯರನ್ನು ಮಾಳಿಗೆಯ ಮೇಲೆ ಹತ್ತಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನ ಹೊರೆಗಳ ಮಧ್ಯದಲ್ಲಿ ಬಚ್ಚಿಟ್ಟಿದ್ದಳು.
(Nanso, na ɔde wɔn akɔhyɛ ɛdan atifi, akɔhinta ɔkyɛnkyɛn a waboa ano akuakuo ase.)
7 ಅರಸನ ಆಳುಗಳು ಯೊರ್ದನಿನ ದಾರಿ ಹಿಡಿದು ಹೋಗಿ ಹೊಳೆದಾಟುವ ಸ್ಥಳದವರೆಗೂ ಹುಡುಕಿದರು. ಅವರನ್ನು ಹಿಂದಟ್ಟುವವರು ಹೋದ ಕೂಡಲೇ ಹೆಬ್ಬಾಗಿಲನ್ನು ಮುಚ್ಚಿದರು.
Enti, ɔhene asomafoɔ no sii mu sɛ wɔrekɔhwehwɛ akwansrafoɔ no wɔ ɛkwan a ɛkɔ Asubɔnten Yordan atwareeɛ hɔ. Asomafoɔ no firii hɔ ara pɛ na wɔtotoo kuropɔn no apono mu.
8 ಆ ಗೂಢಚಾರರು ಮಲಗಿಕೊಳ್ಳುವ ಮೊದಲೇ ಆಕೆಯು ಮಾಳಿಗೆ ಹತ್ತಿ ಅವರ ಬಳಿಗೆ ಬಂದು ಹೇಳಿದ್ದೇನೆಂದರೆ
Ansa na akwansrafoɔ no rebɛda anadwo no, Rahab kɔɔ ɛdan no atifi ne wɔn kɔkasaeɛ sɛ,
9 “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆಂದು ನಾನು ಬಲ್ಲೆನು. ನಿಮ್ಮ ವಿಷಯದಲ್ಲಿ ನಮಗೆ ಮಹಾಭಯವುಂಟಾಗಿದೆ; ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟುಹೋಗಿದ್ದಾರೆ.
“Menim sɛ Awurade de saa asase yi ama mo. Yɛn nyinaa suro mo. Yɛn mu biara abɔ huboa.
10 ೧೦ ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟಿದ್ದನ್ನೂ, ನೀವು ಯೊರ್ದನಿನ ಆಚೆಯಲ್ಲಿರುವ ಸೀಹೋನ್ ಮತ್ತು ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನಾಶಮಾಡಿದ್ದನ್ನೂ ಕೇಳಿ
Yɛate sɛdeɛ Awurade maa Ɛpo Kɔkɔɔ no weeɛ ma monyaa ɛkwan faa mu ɛberɛ a mofirii Misraim no. Na yɛnim sɛdeɛ moyɛɛ Sihon ne Og a na wɔyɛ Amorifoɔ ahemfo wɔ Asubɔnten Yordan apueeɛ fam no ne sɛdeɛ mosɛee wɔn nkurɔfoɔ pasaa no.
11 ೧೧ ನಮ್ಮ ಎದೆ ಒಡೆದು ಹೋಯಿತು; ನಿಮ್ಮನ್ನು ಎದುರಿಸುವ ಧೈರ್ಯವು ಯಾರಿಗೂ ಇಲ್ಲ. ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು.
Ɛnyɛ nwanwa sɛ yɛn akoma atu na yɛabɔ huboa. Obiara nni akokoɔduru a sɛ ɔte nsɛm a ɛte sei a, ɔbɛko. Na Awurade, mo Onyankopɔn no, ne otumfoɔ Onyankopɔn a ɔwɔ sorosoro ne asase ase.
12 ೧೨ ಆದುದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತನ್ನು ಕೊಡಬೇಕು. ನಾನು ನಿಮಗೆ ದಯೆತೋರಿಸಿದಂತೆ ನೀವೂ ಸಹ ನನ್ನ ತಂದೆಯ ಮನೆಯವರಿಗೆ ದಯೆತೋರಿಸಬೇಕೆಂದು ಯೆಹೋವನ ಮೇಲೆ ವಾಗ್ದಾನ ನೀಡಬೇಕು.
“Enti momfa Awurade nka ntam nkyerɛ me sɛ, ɛsiane sɛ maboa mo enti, mobɛyɛ me ne mʼabusuafoɔ adom. Momfa biribi nsi mo bɔhyɛ so sɛ,
13 ೧೩ ನನ್ನ ತಂದೆ ತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗಿರುವುದೆಲ್ಲವನ್ನು ನಾಶಮಾಡದೆ ಉಳಿಸುವುದಾಗಿ ಯೆಹೋವನ ಹೆಸರಿನಲ್ಲಿ ವಾಗ್ದಾನ ಮಾಡಬೇಕು ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎಂದಳು.
moko fa Yeriko a, morenkum me ne mʼagya ne me maame, me nuammarima ne nuammaa ne wɔn mʼabusuafoɔ nyinaa.”
14 ೧೪ ಆಗ ಆ ಗೂಢಚಾರರು “ನೀವು ನಮ್ಮ ವಿಷಯವನ್ನು ಬಹಿರಂಗ ಮಾಡದಿದ್ದರೆ ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿರುತ್ತೇವೆ; ಯೆಹೋವನು ಈ ದೇಶವನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ಕೊಟ್ಟ ಮಾತಿನಂತೆ ನಿನ್ನಲ್ಲಿ ದಯೆಯಿಂದಲೂ ನಂಬಿಗಸ್ತಿಕೆಯಿಂದಲೂ ನಡೆದುಕೊಳ್ಳುವೆವು” ಅಂದರು.
Mmarima no penee so kaa sɛ, “Yɛde yɛn nkwa si yɛn bɔhyɛ so. Sɛ woanyi yɛn amma na sɛ Awurade de asase no ma yɛn a, yɛbɛdi yɛn bɔhyɛ so.”
15 ೧೫ ಅವಳ ಮನೆಯು ಊರಗೋಡೆಯ ಮೇಲಿದ್ದುದರಿಂದ ಅವರನ್ನು ಹಗ್ಗದ ಮೂಲಕ ಕಿಟಿಕಿಯಿಂದ ಕೆಳಕ್ಕೆ ಇಳಿಸಿ ಅವರಿಗೆ
Esiane sɛ wɔsii Rahab fie sii kuro no ɔfasuo so enti, ɔde ahoma sianee wɔn faa mpomma mu ma wɔsii fam.
16 ೧೬ “ನಿಮ್ಮನ್ನು ಹಿಂದಟ್ಟುವವರಿಗೆ ನೀವು ಸಿಕ್ಕದಂತೆ ಆ ಬೆಟ್ಟಕ್ಕೆ ಓಡಿ ಹೋಗಿ ಅಲ್ಲಿ ಮೂರು ದಿನ ಅಡಗಿಕೊಂಡಿದ್ದು, ತರುವಾಯ ಅವರು ಹಿಂದಿರುಗಿದ ಮೇಲೆ ನಿಮ್ಮ ದಾರಿ ಹಿಡಿದು ಹೋಗಿರಿ” ಎಂದಳು.
Afei ɔka kyerɛɛ wɔn sɛ, “Monnwane mfa bepɔ so ɔman no so. Momfa mo ho nsie nnansa kɔsi sɛ atifoɔ no a wɔrehwehwɛ mo no bɛsane wɔn akyi ansa na moakɔ mo kwan.”
17 ೧೭ ಆಗ ಅವರಲ್ಲಿ ಒಬ್ಬನು ಆಕೆಗೆ “ನಾವು ಹೇಳುವ ಮಾತಿನಂತೆ ನೀನು ನಡೆಯದಿದ್ದರೆ, ನೀನು ನಮ್ಮಿಂದ ಮಾಡಿಸಿದ ವಾಗ್ದಾನಕ್ಕೆ ನಾವು ಹೊಣೆಗಾರರಲ್ಲ;
Ansa na mmarima no bɛkɔ no, wɔka kyerɛɛ no sɛ, “Yɛbɛbɔ mo nkwa ho ban
18 ೧೮ ನಾವು ಈ ದೇಶದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಇಳಿಸಿದ ಕಿಟಿಕಿಗೆ ಈ ಕೆಂಪು ದಾರವನ್ನು ಕಟ್ಟಬೇಕು ಮತ್ತು ನಿನ್ನ ತಂದೆತಾಯಿಗಳನ್ನೂ ಅಣ್ಣತಮ್ಮಂದಿರನ್ನೂ ಎಲ್ಲಾ ಬಂಧುಬಳಗದವರನ್ನೂ ನಿನ್ನ ಮನೆಯಲ್ಲಿ ಸೇರಿಸಿಕೊಂಡಿರಬೇಕು.
na mmom, gya ahoma kɔkɔɔ a ɛsɛn wo mpomma ano no na ma wʼabusuafoɔ a ɛyɛ wʼagya, wo maame, wo nuammarima ne wɔn mmusuafoɔ nyinaa mmɛhyɛ efie no mu a wɔnnkɔ baabiara.
19 ೧೯ ಅವರಲ್ಲಿ ಯಾರಾದರೂ ಮನೆಬಿಟ್ಟು ಬೀದಿಗೆ ಬಂದರೆ ಅವರ ಮರಣಕ್ಕೆ ಅವರೇ ಕಾರಣರು; ಅದಕ್ಕೆ ನಾವು ಹೊಣೆಗಾರರಲ್ಲ. ಆದರೆ ನಿನ್ನೊಡನೆ ಮನೆಯಲ್ಲಿದ್ದವರ ಮೇಲೆ ಯಾರಾದರೂ ಕೈ ಮಾಡಿದ್ದಾದರೆ ಆ ರಕ್ತಾಪರಾಧವು ನಮ್ಮ ತಲೆಯ ಮೇಲೆ ಇರುವುದು.
Sɛ wɔpue si abɔntene a, wɔbɛkum wɔn nyinaa na obi rentumi mmɔ yɛn soboɔ sɛ yɛabu yɛn ntam so. Na yɛka ntam sɛ, obiara a ɔhyɛ efie yi mu no, wɔrenkum no. Obiara nso rentene ne nsa wɔ wɔn so.
20 ೨೦ ಇದಲ್ಲದೆ ನೀನು ನಮ್ಮ ವಿಷಯವನ್ನು ಬಹಿರಂಗಪಡಿಸಿದರೆ ನಮ್ಮಿಂದ ಮಾಡಿಸಿದ ವಾಗ್ದಾನಕ್ಕೆ ನಾವು ಹೊಣೆಗಾರರಲ್ಲ” ಎಂದು ಹೇಳಿದರು.
Na sɛ wodi yɛn hwammɔ deɛ a, ntam yi renkyekyere yɛn wɔ ɛkwan biara so.”
21 ೨೧ ಅದಕ್ಕೆ ಅವಳು “ನಿಮ್ಮ ಮಾತಿನಂತೆಯೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿದಳು; ಅವರು ಹೊರಟು ಹೋದ ಮೇಲೆ ಆ ಕೆಂಪು ದಾರವನ್ನು ಕಿಟಿಕಿಗೆ ಕಟ್ಟಿದಳು.
Ɔbaa no buaa sɛ, “Mepene mo nhyehyɛeɛ no nyinaa so.” Ɔgyaa wɔn ɛkwan wɔ ɛberɛ a ahoma kɔkɔɔ no sɛne efie no mpomma no ano.
22 ೨೨ ಗೂಢಚಾರರು ಹೊರಟು ಹೋಗಿ ಆ ಬೆಟ್ಟವನ್ನು ಸೇರಿ ಬೆನ್ನಟ್ಟುವವರು ಹಿಂದಿರುಗುವ ತನಕ ಮೂರು ದಿನಗಳ ಕಾಲ ಅಲ್ಲೇ ತಂಗಿದ್ದರು. ಬೆನ್ನಟ್ಟುವವರು ಅವರನ್ನು ದಾರಿಯುದ್ದಕ್ಕೂ ಹುಡುಕಿ ಕಾಣದೆ ಹಿಂದಿರುಗಿದರು.
Akwansrafoɔ no kɔɔ bepɔ asase no so kɔtenaa hɔ nnansa. Atifoɔ no hwehwɛɛ ɛkwan no so baabiara, sane kɔɔ wɔn kurom a wɔanhunu akwansrafoɔ no wɔ baabiara.
23 ೨೩ ಆಗ ಅವರಿಬ್ಬರೂ ಬೆಟ್ಟದಿಂದಿಳಿದು, ಹೊಳೆದಾಟಿ, ನೂನನ ಮಗನಾದ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದರು.
Afei akwansrafoɔ baanu no siane firii bepɔ asase no so twaa Asubɔnten Yordan bɛkaa nsɛm a ɛtoo wɔn nyinaa kyerɛɛ Yosua.
24 ೨೪ ಇದಲ್ಲದೆ ಅವರು “ಯೆಹೋಶುವನಿಗೆ ನಿಶ್ಚಯವಾಗಿ ಯೆಹೋವನು ಆ ದೇಶವನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ; ಅದರ ನಿವಾಸಿಗಳೆಲ್ಲಾ ನಮ್ಮ ನಿಮಿತ್ತ ನಡುಗುತ್ತಾ ಕಂಗೆಟ್ಟು ಹೋಗಿದ್ದಾರೆ” ಎಂದು ತಿಳಿಸಿದರು.
Wɔkaa sɛ, “Ampa ara Awurade de asase no nyinaa bɛma yɛn, ɛfiri sɛ, yɛn ho hu atɔ nnipa a wɔwɔ asase no so nyinaa so.”

< ಯೆಹೋಶುವನು 2 >