< ಯೆಹೋಶುವನು 2 >
1 ೧ ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಗುಪ್ತವಾಗಿ ಯೆರಿಕೋ ಪಟ್ಟಣವನ್ನೂ ನೋಡುವುದಕ್ಕೋಸ್ಕರ ಶಿಟ್ಟೀಮಿನಿಂದ ಕಳುಹಿಸಿದನು. ಅವರಿಗೆ “ನೀವು ಹೊರಟು ಹೋಗಿ ಕಾನಾನ್ ದೇಶದ ಯೆರಿಕೋ ಪಟ್ಟಣವನ್ನು ನೋಡಿರಿ” ಎಂದನು. ಆಗ ಅವರು ಹೊರಟು ಹೋಗಿ ರಾಹಾಬಳೆಂಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು.
नूनका छोरा यहोशूले शित्तीमबाट दुई जना मानिसलाई जासुसको रूपमा पठाए । तिनले भने, “जाओ, त्यो भूमिलाई हेर, विशेष गरी यरीहोलाई हेर ।” तिनीहरू गए र राहब नाउँ गरेकी वेश्याकहाँ आए र तिनीहरू त्यहीँ बास बसे ।
2 ೨ ಜನರು ಯೆರಿಕೋವಿನ ಅರಸನಿಗೆ “ಇಗೋ, ಈ ರಾತ್ರಿ ಇಸ್ರಾಯೇಲ್ಯರ ಕಡೆಯವರು ನಮ್ಮ ದೇಶವನ್ನು ಸಂಚರಿಸಿ ಹೊಂಚುಹಾಕುವುದಕ್ಕೆ ಬಂದಿದ್ದಾರೆ” ಎಂದು ತಿಳಿಸಿದರು.
यरीहोका राजालाई यसो भनियो, “हेर्नुहोस्, यस भूमिको भेद पत्ता लगाउन इस्राएलका मानिसहरू यहाँ आएका छन् ।”
3 ೩ ಆಗ ಯೆರಿಕೋವಿನ ಅರಸನು ರಾಹಾಬಳಿಗೆ “ನಿನ್ನ ಮನೆಯಲ್ಲಿ ಇಳಿದುಕೊಂಡಿರುವ ಆ ಮನುಷ್ಯರನ್ನು ತಂದೊಪ್ಪಿಸು; ಅವರು ದೇಶವನ್ನೆಲ್ಲಾ ಸಂಚರಿಸಿ ನೋಡಿ ಹೊಂಚುಹಾಕುವುದಕ್ಕೆ ಬಂದವರು” ಎಂದು ಹೇಳಿ ಕಳುಹಿಸಿದನು.
यरीहोका राजाले राहबकहाँ खबर पठाए र भने, “तिमीकहाँ आउने ती मानिसहरूलाई बाहिर लेऊ, जो तिम्रो घरमा प्रवेश गरेका थिए, किनभने तिनीहरू सारा भूमिको जासुस गर्न आएका छन् ।”
4 ೪ ಆದರೆ ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು ಕೇಳಲು ಬಂದವರಿಗೆ, “ಆ ಮನುಷ್ಯರು ನನ್ನ ಬಳಿಗೆ ಬಂದದ್ದು ನಿಜ; ಅವರು ಎಲ್ಲಿಯವರೆಂಬುದು ನನಗೆ ತಿಳಿಯಲಿಲ್ಲ.
तर ती महिलाले ती दुई जना मानिसलाई लगेर लुकाएकी थिइन् । तिनले भनिन्, “हो, मानिसहरू मकहाँ आएका थिए, तर तिनीहरू कहाँबाट आएका थिए, मलाई थाहा भएन ।
5 ೫ ಊರಬಾಗಿಲನ್ನು ಮುಚ್ಚುವ ಹೊತ್ತಿನಲ್ಲಿ ಕತ್ತಲಲ್ಲೇ ಹೊರಟುಹೋದರು. ಎಲ್ಲಿಗೆ ಹೋದರೆಂಬುದು ಗೊತ್ತಿಲ್ಲ. ಬೇಗನೆ ಅವರನ್ನು ಬೆನ್ನಟ್ಟಿರಿ; ನಿಮಗೆ ಸಿಕ್ಕಾರು” ಎಂದು ಹೇಳಿದಳು.
तिनीहरू सहरको प्रवेशद्वार बन्द गर्ने समय हुँदा साँझपख गए । तिनीहरू कता गए मलाई थाहा भएन । तपाईंहरू छिटो-छिटो जानुभयो भने सम्भवतः तपाईंहरूले तिनीहरूलाई भेट्टाउनु हुनेछ ।”
6 ೬ ಆದರೆ ಅವಳು ಆ ಮನುಷ್ಯರನ್ನು ಮಾಳಿಗೆಯ ಮೇಲೆ ಹತ್ತಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನ ಹೊರೆಗಳ ಮಧ್ಯದಲ್ಲಿ ಬಚ್ಚಿಟ್ಟಿದ್ದಳು.
तर तिनले तिनीहरूलाई कौसीमा लगेकी थिइन् र तिनले कौसीमाथि थुपारेकी सनको डाँठहरूमुनि लुकाएकी थिइन् ।
7 ೭ ಅರಸನ ಆಳುಗಳು ಯೊರ್ದನಿನ ದಾರಿ ಹಿಡಿದು ಹೋಗಿ ಹೊಳೆದಾಟುವ ಸ್ಥಳದವರೆಗೂ ಹುಡುಕಿದರು. ಅವರನ್ನು ಹಿಂದಟ್ಟುವವರು ಹೋದ ಕೂಡಲೇ ಹೆಬ್ಬಾಗಿಲನ್ನು ಮುಚ್ಚಿದರು.
त्यसैले ती मानिसहरू यर्दनको जाँघरहरूतिर जाने बाटो हुँदै तिनीहरूको पिछा गरे । ती पिछा गर्नेहरू जाने बित्तिकै प्रवेशद्वार बन्द गरियो ।
8 ೮ ಆ ಗೂಢಚಾರರು ಮಲಗಿಕೊಳ್ಳುವ ಮೊದಲೇ ಆಕೆಯು ಮಾಳಿಗೆ ಹತ್ತಿ ಅವರ ಬಳಿಗೆ ಬಂದು ಹೇಳಿದ್ದೇನೆಂದರೆ
ती मानिसहरू राति सुत्नुअगि नै तिनी कौसीमाथि तिनीहरूकहाँ आइन् ।
9 ೯ “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆಂದು ನಾನು ಬಲ್ಲೆನು. ನಿಮ್ಮ ವಿಷಯದಲ್ಲಿ ನಮಗೆ ಮಹಾಭಯವುಂಟಾಗಿದೆ; ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟುಹೋಗಿದ್ದಾರೆ.
तिनले भनिन्, “मलाई थाहा छ, परमप्रभुले यो भूमि तपाईंहरूलाई दिनुभएको छ र तपाईंहरूको डर हामीमाथि आइपरेको छ । यो भूमिमा बस्ने सबै मानिस तपाईंहरूको सामु शिथिल हुने छन् ।
10 ೧೦ ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟಿದ್ದನ್ನೂ, ನೀವು ಯೊರ್ದನಿನ ಆಚೆಯಲ್ಲಿರುವ ಸೀಹೋನ್ ಮತ್ತು ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನಾಶಮಾಡಿದ್ದನ್ನೂ ಕೇಳಿ
तपाईंहरू मिश्रबाट आउनुहुँदा परमप्रभुले लाल समुद्रको पानी कसरी सुकाउनुभयो भनी हामीले सुनेका छौँ । तपाईंहरूले यर्दन पारिका दुई जना एमोरी राजाहरू सीहोन र ओगलाई के गर्नुभयो भनेर पनि हामीले सुनेका छौँ ।
11 ೧೧ ನಮ್ಮ ಎದೆ ಒಡೆದು ಹೋಯಿತು; ನಿಮ್ಮನ್ನು ಎದುರಿಸುವ ಧೈರ್ಯವು ಯಾರಿಗೂ ಇಲ್ಲ. ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು.
हामीले यो सुन्ने बित्तिकै हाम्रा हृदय शिथिल भए, कसैसँग पनि साहस रहेन, किनभने परमप्रभु तपाईंहरूका परमेश्वर नै माथि स्वर्गमा र तल पृथ्वीमा परमेश्वर हुनुहुन्छ ।
12 ೧೨ ಆದುದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತನ್ನು ಕೊಡಬೇಕು. ನಾನು ನಿಮಗೆ ದಯೆತೋರಿಸಿದಂತೆ ನೀವೂ ಸಹ ನನ್ನ ತಂದೆಯ ಮನೆಯವರಿಗೆ ದಯೆತೋರಿಸಬೇಕೆಂದು ಯೆಹೋವನ ಮೇಲೆ ವಾಗ್ದಾನ ನೀಡಬೇಕು.
बिन्ती छ, मैले जसरी तपाईंहरूलाई दया गरेको छु त्यसरी नै तपाईंहरूले पनि मेरो पिताको घरानालाई दयापूर्वक व्यवहार गर्नुहुने छ भनी परमप्रभुको नाउँमा शपथ खानुहोस् । मलाई एउटा चिन्ह दिनुहोस्,
13 ೧೩ ನನ್ನ ತಂದೆ ತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗಿರುವುದೆಲ್ಲವನ್ನು ನಾಶಮಾಡದೆ ಉಳಿಸುವುದಾಗಿ ಯೆಹೋವನ ಹೆಸರಿನಲ್ಲಿ ವಾಗ್ದಾನ ಮಾಡಬೇಕು ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎಂದಳು.
कि तपाईंहरूले मेरा बुबा, आमा, दाजुभाइहरू, दिदी-बहिनीहरू र तिनीहरूका सबै परिवारको जीवन बचाउनुहुने छ र तपाईंहरूले हामीलाई मृत्युबाट जोगाउनुहुने छ ।
14 ೧೪ ಆಗ ಆ ಗೂಢಚಾರರು “ನೀವು ನಮ್ಮ ವಿಷಯವನ್ನು ಬಹಿರಂಗ ಮಾಡದಿದ್ದರೆ ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿರುತ್ತೇವೆ; ಯೆಹೋವನು ಈ ದೇಶವನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ಕೊಟ್ಟ ಮಾತಿನಂತೆ ನಿನ್ನಲ್ಲಿ ದಯೆಯಿಂದಲೂ ನಂಬಿಗಸ್ತಿಕೆಯಿಂದಲೂ ನಡೆದುಕೊಳ್ಳುವೆವು” ಅಂದರು.
ती मानिसहरूले तिनलाई भने, “मृत्युसम्म नै तिमीहरूको जीवनको सट्टामा हाम्रो जीवन! यदि तिमीले हाम्रो कामबारे बताएनौ भने, जब परमप्रभुले यो भूमि हामीलाई दिनुहुने छ हामी तिमीसँग दयालु र विश्वासयोग्य हुने छौँ ।”
15 ೧೫ ಅವಳ ಮನೆಯು ಊರಗೋಡೆಯ ಮೇಲಿದ್ದುದರಿಂದ ಅವರನ್ನು ಹಗ್ಗದ ಮೂಲಕ ಕಿಟಿಕಿಯಿಂದ ಕೆಳಕ್ಕೆ ಇಳಿಸಿ ಅವರಿಗೆ
त्यसैले तिनले डोरीको सहायताले तिनीहरूलाई झ्यालबाट तल झारे । तिनी बसोवास गर्ने घर सहरको पर्खालभित्र नै बनाइएको थियो ।
16 ೧೬ “ನಿಮ್ಮನ್ನು ಹಿಂದಟ್ಟುವವರಿಗೆ ನೀವು ಸಿಕ್ಕದಂತೆ ಆ ಬೆಟ್ಟಕ್ಕೆ ಓಡಿ ಹೋಗಿ ಅಲ್ಲಿ ಮೂರು ದಿನ ಅಡಗಿಕೊಂಡಿದ್ದು, ತರುವಾಯ ಅವರು ಹಿಂದಿರುಗಿದ ಮೇಲೆ ನಿಮ್ಮ ದಾರಿ ಹಿಡಿದು ಹೋಗಿರಿ” ಎಂದಳು.
तिनले तिनीहरूलाई भने, “पहाडतिर जानुहोस् र लुक्नुहोस्, नत्र पिछा गर्नेहरूले तपाईंहरूलाई भेट्टाउने छन् । पिछा गर्नेहरू नफर्केसम्म तिन दिनसम्म त्यहीँ लुक्नुहोस् । अनि आफ्नो बाटो लाग्नुहोस् ।”
17 ೧೭ ಆಗ ಅವರಲ್ಲಿ ಒಬ್ಬನು ಆಕೆಗೆ “ನಾವು ಹೇಳುವ ಮಾತಿನಂತೆ ನೀನು ನಡೆಯದಿದ್ದರೆ, ನೀನು ನಮ್ಮಿಂದ ಮಾಡಿಸಿದ ವಾಗ್ದಾನಕ್ಕೆ ನಾವು ಹೊಣೆಗಾರರಲ್ಲ;
ती मानिसहरूले तिनलाई भने, “यदि तिमीले यो कुरा गरेनौ भने हामीले तिमीलाई गरेका प्रतिज्ञाहरू लागु हुने छैनन् ।
18 ೧೮ ನಾವು ಈ ದೇಶದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಇಳಿಸಿದ ಕಿಟಿಕಿಗೆ ಈ ಕೆಂಪು ದಾರವನ್ನು ಕಟ್ಟಬೇಕು ಮತ್ತು ನಿನ್ನ ತಂದೆತಾಯಿಗಳನ್ನೂ ಅಣ್ಣತಮ್ಮಂದಿರನ್ನೂ ಎಲ್ಲಾ ಬಂಧುಬಳಗದವರನ್ನೂ ನಿನ್ನ ಮನೆಯಲ್ಲಿ ಸೇರಿಸಿಕೊಂಡಿರಬೇಕು.
हामी यो भूमिमा आउँदा तिमीले हामी जुन झ्यालबाट झरेका थियौँ त्यहीँ नै यो रातो डोरी बाँध्नुपर्छ र तिमीले तिम्रा बुबा, आमा, तिम्रा दाजुभाइहरू र तिम्रा बुबाका सबै घरानालाई घरभित्र ल्याउनुपर्छ ।
19 ೧೯ ಅವರಲ್ಲಿ ಯಾರಾದರೂ ಮನೆಬಿಟ್ಟು ಬೀದಿಗೆ ಬಂದರೆ ಅವರ ಮರಣಕ್ಕೆ ಅವರೇ ಕಾರಣರು; ಅದಕ್ಕೆ ನಾವು ಹೊಣೆಗಾರರಲ್ಲ. ಆದರೆ ನಿನ್ನೊಡನೆ ಮನೆಯಲ್ಲಿದ್ದವರ ಮೇಲೆ ಯಾರಾದರೂ ಕೈ ಮಾಡಿದ್ದಾದರೆ ಆ ರಕ್ತಾಪರಾಧವು ನಮ್ಮ ತಲೆಯ ಮೇಲೆ ಇರುವುದು.
तिम्रो घरबाहिर बाटोतिर जानेहरूको रगत तिनीहरूको शिरमाथि पर्ने छ र हामी दोषरहित हुने छौँ । तर घरमा तिमीसँगै रहने कुनै माथि हात लगाइयो भने, त्यसको रगत हाम्रो शिरमा पर्ने छ ।
20 ೨೦ ಇದಲ್ಲದೆ ನೀನು ನಮ್ಮ ವಿಷಯವನ್ನು ಬಹಿರಂಗಪಡಿಸಿದರೆ ನಮ್ಮಿಂದ ಮಾಡಿಸಿದ ವಾಗ್ದಾನಕ್ಕೆ ನಾವು ಹೊಣೆಗಾರರಲ್ಲ” ಎಂದು ಹೇಳಿದರು.
तर यदि तिमीले हाम्रा कामहरूबारे बतायौ भने, तिमीले हामीलाई खान लगाएको शपथबाट हामी मुक्त हुने छौँ ।
21 ೨೧ ಅದಕ್ಕೆ ಅವಳು “ನಿಮ್ಮ ಮಾತಿನಂತೆಯೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿದಳು; ಅವರು ಹೊರಟು ಹೋದ ಮೇಲೆ ಆ ಕೆಂಪು ದಾರವನ್ನು ಕಿಟಿಕಿಗೆ ಕಟ್ಟಿದಳು.
राहबले जवाफ दिए, “तपाईंहरूले भन्नुभएबमोजिम नै होस् ।” तिनले तिनीहरूलाई पठाए र तिनीहरू गए । अनि तिनले झ्यालमा त्यो रातो डोरी बाँधिन् ।
22 ೨೨ ಗೂಢಚಾರರು ಹೊರಟು ಹೋಗಿ ಆ ಬೆಟ್ಟವನ್ನು ಸೇರಿ ಬೆನ್ನಟ್ಟುವವರು ಹಿಂದಿರುಗುವ ತನಕ ಮೂರು ದಿನಗಳ ಕಾಲ ಅಲ್ಲೇ ತಂಗಿದ್ದರು. ಬೆನ್ನಟ್ಟುವವರು ಅವರನ್ನು ದಾರಿಯುದ್ದಕ್ಕೂ ಹುಡುಕಿ ಕಾಣದೆ ಹಿಂದಿರುಗಿದರು.
तिनीहरू गए र पहाडतिर गए अनि तिनीहरूको पिछा गर्नेहरू नफर्केसम्म तिनीहरू तिन दिनसम्म त्यहीँ नै बसे । पिछा गर्नेहरूले बाटोमा सबैतिर खोजे र केही पनि भेट्टाएनन् ।
23 ೨೩ ಆಗ ಅವರಿಬ್ಬರೂ ಬೆಟ್ಟದಿಂದಿಳಿದು, ಹೊಳೆದಾಟಿ, ನೂನನ ಮಗನಾದ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದರು.
ती दुई जना मानिस फर्के र नूनका छोरा यहोशूकहाँ आए र तिनीहरूले तिनीहरूमाथि आइपरेका सबै कुरा तिनलाई बताए ।
24 ೨೪ ಇದಲ್ಲದೆ ಅವರು “ಯೆಹೋಶುವನಿಗೆ ನಿಶ್ಚಯವಾಗಿ ಯೆಹೋವನು ಆ ದೇಶವನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ; ಅದರ ನಿವಾಸಿಗಳೆಲ್ಲಾ ನಮ್ಮ ನಿಮಿತ್ತ ನಡುಗುತ್ತಾ ಕಂಗೆಟ್ಟು ಹೋಗಿದ್ದಾರೆ” ಎಂದು ತಿಳಿಸಿದರು.
तिनीहरूले यहोशूलाई भने, “साँच्चै, यो भूमि परमप्रभुले हामीलाई दिनुभएको छ । त्यो भूमिका सबै बासिन्दा हाम्रो कारणले शिथिल भइरहेका छन् ।”