< ಯೆಹೋಶುವನು 17 >
1 ೧ ಯೋಸೇಫನ ಚೊಚ್ಚಲ ಮಗನಾದ ಮನಸ್ಸೆಯ ವಂಶದವರಿಗೆ ಸಿಕ್ಕಿದ ಸ್ವತ್ತಿನ ವಿವರ: ಮನಸ್ಸೆಯ ಹಿರಿಯ ಮಗನೂ ಗಿಲ್ಯಾದನ ತಂದೆಯೂ ಆಗಿರುವ ಮಾಕೀರನು ಯುದ್ಧವೀರನಾಗಿದ್ದನು. ಆದ್ದರಿಂದ ಅವನಿಗೆ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳು ಸಿಕ್ಕಿದವು.
यो मनश्शेको (जो योसेफका जेठा छोरा थिए) कुलको भूमिको भाग थियो, माकीरका निम्ति, जो जेठा छोरा थिए र तिनी गिलादका पिता थिए । माकीरका सन्तानहरूलाई गिलाद र बाशानको भू-भाग दिइयो, किनभने माकीर योद्धा थिए ।
2 ೨ ಯೋಸೇಫನ ಮಗನಾಗಿರುವ ಮನಸ್ಸೆಯ ಉಳಿದ ಗಂಡು ಮಕ್ಕಳಾದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೆರ್, ಶೆಮೀದಾ ಎಂಬುವವರ ವಂಶದವರಿಗೆ ಯೊರ್ದನಿನ ಈಚೆಯಲ್ಲಿ ಸ್ವತ್ತು ಸಿಕ್ಕಿತು.
यो भू-भागलाई मनश्शेका बाँकी कुल अबीएजेर, हेलेक, अस्रीएल, शकेम, हेपेर, शमीदालाई तिनीहरूका कुलअनुसार दिइयो ।
3 ೩ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನೂ ಆದ ಚಲ್ಪಹಾದನಿಗೆ ಹೆಣ್ಣು ಮಕ್ಕಳ ಹೊರತು ಗಂಡು ಮಕ್ಕಳು ಇರಲಿಲ್ಲ. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬುವವರು ಅವನ ಹೆಣ್ಣು ಮಕ್ಕಳು.
मनश्शेका छोरा माकीरका छोरा गिलादला छोरा हेपेरका छोरा सलोफादको कुनै छोरा थिएन, तर छोरीहरू मात्र थिए । तिनकी छोरीहरूका नाउँ महला, नोआह, होग्ला, मिल्का र तिर्सा थिए ।
4 ೪ ಇವರು ಮಹಾಯಾಜಕನಾದ ಎಲ್ಲಾಜಾರ, ನೂನನ ಮಗನಾದ ಯೆಹೋಶುವ, ಹಾಗೂ ಕುಲಾಧಿಪತಿಗಳ ಬಳಿಗೆ ಬಂದು, “ನಮ್ಮ ಅಣ್ಣತಮ್ಮಂದಿರೊಡನೆ ನಮಗೂ ಪಾಲುಕೊಡಬೇಕೆಂದು ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನಲ್ಲಾ?” ಎಂದು ಹೇಳಲು ಯೆಹೋಶುವನು ಯೆಹೋವನ ಅಪ್ಪಣೆಯಂತೆ ಅವರಿಗೆ ಅವರ ತಂದೆಯ ಅಣ್ಣತಮ್ಮಂದಿರ ಜೊತೆಗೆ ಸ್ವತ್ತನ್ನು ಕೊಟ್ಟನು.
तिनीहरू पुजारी एलाजार, यहोशू र अगुवाहरूकहाँ आए र भने, “परमप्रभु परमेश्वरले हाम्रा दाजुभाइहरूसँगै उत्तराधिकार दिनू भनी आज्ञा गर्नुभएको थियो ।” त्यसैले, परमप्रभुको आज्ञाअनुसार, तिनले ती महिलाहरूलाई तिनीहरूका बुबाका दाजुभाइहरूमाझ उत्तराधिकार दिए ।
5 ೫ ಮನಸ್ಸೆ ಕುಲದ ಹೆಣ್ಣುಮಕ್ಕಳಿಗೆ ಗಂಡು ಮಕ್ಕಳ ಸಹಿತವಾಗಿ ಸ್ವಾಸ್ತ್ಯ ದೊರಕಿದ್ದರಿಂದ ಮನಸ್ಸೆಯವರಿಗೆ ಯೊರ್ದನಿನ ಆಚೆಯಲ್ಲಿ ಬಾಷಾನ್ ಮತ್ತು ಗಿಲ್ಯಾದ್ ಪ್ರಾಂತ್ಯಗಳ ಜೊತೆಗೆ ಈಚೆಯಲ್ಲಿಯೂ ಹತ್ತು ಪಾಲು ಸಿಕ್ಕಿದವು.
गिलाद र बाशानमा मनश्शेलाई दस भाग जमिन दिइयो, जुन यर्दन पारिपट्टि छ,
6 ೬ ಗಿಲ್ಯಾದ್ ಸೀಮೆಯು ಮನಸ್ಸೆಯ ಉಳಿದ ಗೋತ್ರಗಳಿಗೆ ಸಿಕ್ಕಿತು.
किनभने मनश्शेका छोरीहरूले आफ्ना दाजुभाइहरूसँगै उत्तराधिकार पाए । गिलादको भू-भाग मनश्शेका बाँकी कुललाई दिइयो ।
7 ೭ ಮನಸ್ಸೆಯವರ ಸ್ವತ್ತಿನ ಮೇರೆಯು ಆಶೇರ್ ಊರಿನಿಂದ ಶೆಕೆಮಿನ ಪೂರ್ವದಲ್ಲಿರುವ ಮಿಕ್ಮೆತಾತಿನ ಮೇಲೆ ದಕ್ಷಿಣದಲ್ಲಿರುವ ತಪ್ಪೂಹದ ಬುಗ್ಗೆಗೆ ಹೋಗುತ್ತದೆ.
मनश्शेको क्षेत्र आसेरबाट मिक्मतातसम्म पुग्यो, जुन शकेमको पूर्वमा छ । त्यसको सिमाना तप्पूहको पानीको मुहान नजिक बसोबास गर्नेहरूकहाँसम्म दक्षिणतिर निस्क्यो ।
8 ೮ ತಪ್ಪೂಹ ಪಟ್ಟಣಕ್ಕೆ ಸೇರುವ ಭೂಮಿಯು ಮನಸ್ಸೆಯವರದು; ಆದರೆ ಅವರ ಮೇರೆಗೆ ಹೊಂದಿರುವ ತಪ್ಪೂಹ ಪಟ್ಟಣವು ಎಫ್ರಾಯೀಮ್ಯರದು;
(तप्पूहको भू-भाग मनश्शेको थियो, तर मनश्शेको सिमानामा पर्ने तप्पूहको नगर एफ्राइम कुलको थियो ।)
9 ೯ ಅಲ್ಲಿಂದ ಅವರ ಮೇರೆಯು ಇಳಿಯುತ್ತಾ ಕಾನಾ ಹಳ್ಳದ ದಕ್ಷಿಣಕ್ಕೆ ಹೋಗುತ್ತದೆ. ಅಲ್ಲಿ ಮನಸ್ಸೆಯವರಿಗೆ ಇರುವಂತೆ ಎಫ್ರಾಯೀಮ್ಯರಿಗೂ ಕೆಲವು ಪಟ್ಟಣಗಳಿರುತ್ತವೆ. ಮನಸ್ಸೆಯವರ ಮುಂದಿನ ಮೇರೆಯು ಹಳ್ಳದ ಉತ್ತರ ತೀರವನ್ನು ಅನುಸರಿಸಿ ಹೋಗಿ ಸಮುದ್ರದ ದಡದಲ್ಲಿ ಮುಕ್ತಾಯಗೊಳ್ಳುತ್ತದೆ.
त्यो सिमाना कनाको खोलासम्मै तल गएर निस्क्यो । मनश्शेका नगरहरू माझका खोलाको दक्षिणतिरका यी सहरहरू एफ्राइमका थिए । मनश्शेको सिमाना खोलाको उत्तरतिर थियो र यो समुद्रमा टुङ्गिएको थियो ।
10 ೧೦ ಆ ಹಳ್ಳದ ದಕ್ಷಿಣ ತೀರವು ಎಫ್ರಾಯೀಮ್ಯರದು; ಉತ್ತರ ತೀರವು ಮನಸ್ಸೆಯವರದು. ಸಮುದ್ರವೇ ಇವರ ಪಶ್ಚಿಮದ ಮೇರೆಯು. ಉತ್ತರಕ್ಕೆ ಆಶೇರ್ ಕುಲದವರ ಪ್ರಾಂತ್ಯವೂ ಪೂರ್ವಕ್ಕೆ ಇಸ್ಸಾಕಾರ್ ಕುಲದವರ ದೇಶವೂ ಇರುತ್ತದೆ.
दक्षिणतिरको भू-भाग एफ्राइमको थियो, र उत्तरतिरको भू-भाग मनश्शेको थियो; यसको सिमाना समुद्र थियो । उत्तरतिर आशेरसम्म र पूर्वतिर इस्साखारसम्म पुगेको थियो ।
11 ೧೧ ಇದಲ್ಲದೆ ಮನಸ್ಸೆಯವರಿಗೆ ಇಸ್ಸಾಕಾರ್, ಆಶೇರ್ ಎಂಬುವವರ ಪ್ರಾಂತ್ಯಗಳಲ್ಲಿ ಬೇತಷೆಯಾನ್, ಇಬ್ಲೆಯಾಮ, ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ದುರ್ಗತ್ರಯವಾದ ಎಂದೋರ, ತಾನಾಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳಿಗೆ ಸೇರಿದ ಊರುಗಳು ಸಿಕ್ಕಿದವು.
इस्साखार र आशेरमा पनि मनश्शेले बेथ-शान र यसका गाउँहरू, योबलाम र यसका गाउँहरू, डोरका बासिन्दाहरू र यसका गाउँहरू, एन्दोर र यसका गाउँहरू, तानाका बासिन्दाहरू र यसका गाउँहरू, मगिद्दोका बासिन्दाहरू र यसका गाउँहरू (र तेस्रो सहरचाहिँ नपेत हो) ।
12 ೧೨ ಆದರೆ ಮನಸ್ಸೆಯವರು ಆ ಪಟ್ಟಣಗಳ ನಿವಾಸಿಗಳನ್ನು ಹೊರದೂಡಲಿಲ್ಲ. ಕಾನಾನ್ಯರಿಗೆ ಅಲ್ಲಿ ವಾಸಿಸುವುದಕ್ಕೆ ಅನುಕೂಲವಾಯಿತು.
तैपनि मनश्शेको कुलले ती सहरहरू अधिकार गर्न सकेनन्, किनभने यस भू-भागमा कनानीहरू निरन्तर बस्दै रहे ।
13 ೧೩ ಇಸ್ರಾಯೇಲ್ಯರು ಬಲಗೊಂಡ ಮೇಲೆ ಕಾನಾನ್ಯರನ್ನು ಹೊರಡಿಸದೇ ಅವರನ್ನು ದಾಸತ್ವಕ್ಕೆ ಹಚ್ಚಿದರು.
जब इस्राएलका मानिसहरू वृद्धि भए, तिनीहरूले कनानीहरूलाई बेगारी काममा लगाए, तर तिनीहरूलाई पूर्ण रूपमा धपाएनन् ।
14 ೧೪ ಆದರೆ ಯೋಸೇಫನ ಸಂತಾನದವರು ಯೆಹೋಶುವನಿಗೆ, “ನೀನು ಚೀಟು ಹಾಕಿ, ನಮಗೆ ಒಂದೇ ಭಾಗವನ್ನು ಕೊಟ್ಟದ್ದೇಕೆ? ಯೆಹೋವನು ನಮ್ಮನ್ನು ಇಂದಿನವರೆಗೂ ಆಶೀರ್ವದಿಸಿರುವುದರಿಂದ ನಾವು ಮಹಾಜನಾಂಗವಾಗಿದ್ದೇವಲ್ಲಾ?” ಎಂದು ಹೇಳಲು
त्यसपछि योसेफका सन्तानहरूले यहोशूलाई यसो भने, “तपाईंले हामीलाई किन जमिन एक भाग र उत्तराधिकारको निम्ति एक अंश मात्र दिनुभएको, किनभने हामी धेरै सङ्ख्यामा भएका मानिसहरू हौँ र परमप्रभुले हामीलाई पर्याप्त आशिष् दिनुभएको छ?”
15 ೧೫ ಯೆಹೋಶುವನು ಅವರಿಗೆ, “ಮಹಾಜನಾಂಗವಾದ ನಿಮಗೆ ಎಫ್ರಾಯೀಮ್ ಬೆಟ್ಟದ ಸೀಮೆ ಸಾಲದಿದ್ದರೆ ಪೆರಿಜ್ಜೀಯರ ಮತ್ತು ರೆಫಾಯರ ಸೀಮೆಗಳಿಗೆ ಹೋಗಿ ಅಲ್ಲಿನ ಕಾಡು ಕಡಿದು ಸ್ಥಳಮಾಡಿಕೊಳ್ಳಿ” ಎಂದನು.
यहोशूले तिनीहरूलाई भने, “यदि तिमीहरू धेरै सङ्ख्यामा छौ भने, तिमीहरू जङ्गलतिर जाओ र परिज्जीहरू र रपाईहरूको भू-भागमा आफ्नो निम्ति फँडानी गर । यसो गर, किनभने एफ्राइमको पहाडी देश तिमीहरूको निम्ति साह्रै सानो छ ।”
16 ೧೬ ಅವರು ತಿರುಗಿ ಯೆಹೋಶುವನಿಗೆ, “ನಮ್ಮ ಪರ್ವತ ಪ್ರದೇಶವು ನಮಗೆ ಸಾಲುವುದಿಲ್ಲ. ಬೇತಷೆಯಾನ್ ಮತ್ತು ಅದಕ್ಕೆ ಸೇರಿದ ಊರುಗಳಿರುವ ಕಣಿವೆಯಲ್ಲೂ ಹಾಗೂ ಇಜ್ರೇಲಿನ ಕಣಿವೆಯಲ್ಲೂ ವಾಸಮಾಡುವ ಕಾನಾನ್ಯರೆಲ್ಲರೂ ಕಬ್ಬಿಣದ ರಥವುಳ್ಳವರು” ಎಂದರು
योसेफका सन्तानहरूले भने, “पहाडी देश हामीलाई पर्याप्त हुँदैन । तर बेथ-शान र यसका गाउँहरू अनि यिजरेलको बेँसी दुवैमा बस्ने कनानीहरूसँग फलामका रथहरू छन् ।
17 ೧೭ ಯೆಹೋಶುವನು ಯೋಸೇಫರಾದ ಎಫ್ರಾಯೀಮ್ ಹಾಗೂ ಮನಸ್ಸೆ ಕುಲಗಳ ಜನರಿಗೆ, “ನೀವು ಮಹಾಜನಾಂಗವೂ ಬಹು ಬಲವುಳ್ಳವರೂ ಆಗಿರುವುದು ನಿಜ. ನೀವು ಒಂದು ಭಾಗಕ್ಕಿಂತ ಹೆಚ್ಚು ತೆಗೆದುಕೊಳ್ಳಬಹುದಾಗಿದೆ.
त्यपछि यहोशूले योसेफका घराना एफ्राइम र मनश्शेलाई भने, “तिमीहरू धेरै सङ्ख्यामा भएका मानिसहरू हौ र तिमीहरूसँग धेरै शक्ति छ । तिमीहरूसँग एक भाग मात्र हुनुहुँदैन ।
18 ೧೮ ಆ ಬೆಟ್ಟದ ಸೀಮೆಯನ್ನು ನಿಮಗೆ ಕೊಟ್ಟಿರುತ್ತೇನೆ. ಅದರಲ್ಲಿ ಕಾಡುಗಳಿದ್ದರೂ ನೀವು ಅವುಗಳನ್ನು ಕಡಿದುಹಾಕಬಹುದು. ಅದಕ್ಕೆ ಸೇರಿರುವ ಬಯಲು ಭೂಮಿ ನಿಮ್ಮದೇ. ಕಾನಾನ್ಯರು ಬಲಿಷ್ಠರಾಗಿ ಕಬ್ಬಿಣದ ರಥಗಳುಳ್ಳವರಾಗಿದ್ದರೂ ನೀವು ಅವರನ್ನು ಹೊರದೂಡುವಿರಿ” ಎಂದು ಉತ್ತರ ಕೊಟ್ಟನು.
पहाडी देश पनि तिमीहरूको नै हुने छ । तथापि यो जङ्गल हो, तिमीहरूले यसलाई फँडानी गर र यसलाई र यसका टाढा-टाढाको सिमानासम्म अधीन गर । तिमीहरूले कनानीहरूलाई धपाउने छौ, तथापि तिनीहरूसँग फलामका रथहरू छन् र तिनीहरू बलिया छन् ।”