< ಯೆಹೋಶುವನು 15 >
1 ೧ ಎದೋಮ್ ಸೀಮೆಯೂ, ಚಿನ್ ಅರಣ್ಯದ ಮೇರೆಯಾಗಿರುವ ಕಾನಾನ ದೇಶದ ದಕ್ಷಿಣ ಭಾಗವು ಯೆಹೂದ ಕುಲದ ಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿತು.
ಯೆಹೂದ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವುದೆಂದರೆ: ಕಟ್ಟಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಚಿನ್ ಮರುಭೂಮಿಯ ದಕ್ಷಿಣ ಭಾಗ.
2 ೨ ಅದರ ದಕ್ಷಿಣದ ಮೇರೆಯು ಲವಣ ಸಮುದ್ರದ ತೆಂಕಣ ಕೊನೆಯಿಂದ
ಲವಣ ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ,
3 ೩ ಅಕ್ರಬ್ಬೀಮ್ ಕಣಿವೆಯ ದಕ್ಷಿಣ ಮಾರ್ಗವಾಗಿ ಚಿನಿಗೆ ಹೋಗುತ್ತದೆ. ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ ಅಚ್ಮೋನಿನ ಮೇಲೆ,
ಅಕ್ರಬ್ಬೀಮ್ ಎಂಬ ಕಣಿವೆಯ ದಕ್ಷಿಣಮಾರ್ಗವಾಗಿ ಚಿನಿಗೆ ಹೋಗುವದು. ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್ ಬರ್ನೇಯಕ್ಕೂ ಅಲ್ಲಿಂದ ಹೆಚ್ರೋನನಿಂದ ಅದ್ದಾರವರೆಗೂ ಮುಂದುವರೆದು ಅಲ್ಲಿ ತಿರಿಗಿಕೊಂಡು ಕರ್ಕದವರೆಗೂ ವಿಸ್ತರಿಸಿಕೊಂಡಿತ್ತು,
4 ೪ ಐಗುಪ್ತದ ಹಳ್ಳಕ್ಕೆ ಬಂದು ಸಮುದ್ರತೀರವನ್ನು ಸೇರುವುದು. ಇದು ಅದರ ತೆಂಕಣ ಮೇರೆ.
ಅಲ್ಲಿಂದ ಈಜಿಪ್ಟನ ಅಚ್ಮೋನ ನದಿಗೆ ಬಂದು ಮೆಡಿಟೆರಿಯನ್ ಸಮುದ್ರದವರೆಗೆ ಹೋಗಿ ಸೇರುವುದು. ಇದೇ ಯೆಹೂದದ ದಕ್ಷಿಣ ಮೇರೆ.
5 ೫ ಯೊರ್ದನ್ ನದಿಯ ಮುಖದ್ವಾರದಿಂದ ಲವಣ ಸಮುದ್ರವೆಲ್ಲಾ, ಅದರ ಪೂರ್ವದಿಕ್ಕಿನ ಮೇರೆ ಆಗಿದೆ. ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನ್ ನದಿಯು ಲವಣ ಸಮುದ್ರದಿಂದ ಕೂಡುವ ಸ್ಥಳದಿಂದ
ಅದರ ಪೂರ್ವದ ಮೇರೆ, ಯೊರ್ದನ್ ನದಿ ಕೊನೆಯ ಮಟ್ಟಿಗಿರುವ ಲವಣ ಸಮುದ್ರವು. ಉತ್ತರ ಕಡೆಗೆ ಯೊರ್ದನ್ ನದಿ ಮೇರೆ ಕೊನೆ ಹತ್ತಿರ ಸಮುದ್ರದ ಮುಖದ್ವಾರದಿಂದ ಇತ್ತು;
6 ೬ ಬೇತ್ ಹೊಗ್ಲಾ ಬೇತ್ ಆರಾಬದ ಉತ್ತರ ಪ್ರಾಂತ್ಯ ರೂಬೇನನ ಮಗನಾದ ಬೋಹನನ ಬಂಡೆ,
ಅಲ್ಲಿಂದ ಬೇತ್ ಹೊಗ್ಲಾಕ್ಕೂ, ಅಲ್ಲಿಂದ ಉತ್ತರಕ್ಕಿರುವ ಬೇತ್ ಅರಾಬನ್ನು ದಾಟಿ, ರೂಬೇನನ ಮಗ ಬೋಹನನ ಬಂಡೆಯ ವರೆಗೆ ಇತ್ತು.
7 ೭ ಆಕೋರಿನ ಕಣಿವೆ ಇವುಗಳ ಮೇಲೆ ದೆಬೇರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಹಳ್ಳದ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್ ಏನ್ ಷೆಮೆಷ್ ಅನ್ನಿಸಿಕೊಳ್ಳುವ ಬುಗ್ಗೆ ಏನ್ ರೋಗೆಲ್ ಇವುಗಳ ಮೇಲೆ
ಅಲ್ಲಿಂದ ಆಕೋರ್ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಗೆ ತಿರುಗಿಕೊಂಡು ದಕ್ಷಿಣದಲ್ಲಿರುವ ಅದುಮೀಮಿನ ದಿಬ್ಬೆಗೆ ಎದುರಾಗಿರುವ ಗಿಲ್ಗಾಲಿಗೂ, ಅಲ್ಲಿಂದ ಏನ್ ಷೆಮೆಷ್ ಎಂಬ ಬುಗ್ಗೆಗೂ, ಅಲ್ಲಿಂದ ಏನ್ ರೋಗೆಲ್‌ವರೆಗೂ ಇತ್ತು.
8 ೮ ಬೆನ್ ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಅಲ್ಲಿಂದ ಅದು ಯೆರೂಸಲೇಮ್ ಪಟ್ಟಣವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲಿರುವ ರೆಫಾಯೀಮ್ ಕಣಿವೆಯ ಉತ್ತರದಲ್ಲಿರುವ ಬೆಟ್ಟದ ತುದಿಗೆ ಹೋಗುತ್ತದೆ.
ಅಲ್ಲಿಂದ ಯೆಬೂಸಿಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣಮಾರ್ಗವಾಗಿ ಹಿನ್ನೋಮ್ ತಗ್ಗನ್ನು ದಾಟಿ, ಉತ್ತರಕ್ಕಿರುವ ರೆಫಾಯಿಮ್ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕೆ ಬೆನ್ ಹಿನ್ನೋಮನ ತಗ್ಗಿನ ಮುಂದಿರುವ ಬೆಟ್ಟದ ಶಿಖರದವರೆಗೂ ಹೋಗುತ್ತದೆ.
9 ೯ ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಫ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ಪಟ್ಟಣಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನ್ನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.
ಆ ಬೆಟ್ಟದ ಶಿಖರದಿಂದ ನೆಫ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣಗಳಿಗೂ ಅಲ್ಲಿಂದ ಕಿರ್ಯತ್ ಯಾರೀಮ್ ಆದ ಬಾಲಾ ಎಂಬ ಊರಿನವರೆಗೆ ಹೋಗುತ್ತದೆ.
10 ೧೦ ಅಲ್ಲಿಂದ ಪಶ್ಚಿಮದಲ್ಲಿರುವ ಸೇಯೀರ್ ಬೆಟ್ಟದ ಕಡೆಗೆ ತಿರುಗಿಕೊಂಡು ಕೆಸಾಲೋನ್ ಎನ್ನಿಸಿಕೊಳ್ಳುವ ಯಾರೀಮ್ ಬೆಟ್ಟದ ಉತ್ತರಮಾರ್ಗವಾಗಿ ಇಳಿಯುತ್ತಾ ಬೇತ್ ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಬಂದು
ಬಾಲಾದಿಂದ ಪಶ್ಚಿಮಕ್ಕಿರುವ ಸೇಯೀರ್ ಬೆಟ್ಟವನ್ನು ಸುತ್ತಿ, ಅಲ್ಲಿಂದ ಕೆಸಾಲೋನಿನ ಯಾರೀಮ್ ಬೆಟ್ಟದ ಉತ್ತರಕ್ಕೂ ಅಲ್ಲಿಂದ ಬೇತ್ ಷೆಮೆಷ್ ಕಡೆಗೆ ಇಳಿದು ತಿಮ್ನಾಗೆ ಹೋಯಿತು.
11 ೧೧ ಮುಂದೆ ಉತ್ತರದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾ ಗುಡ್ಡದ ಮೇಲೆ ಯಬ್ನೇಲಿಗೆ ಹೋಗಿ ಸಮುದ್ರದಲ್ಲಿ ಮುಗಿಯುತ್ತದೆ.
ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೂ, ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯಬ್ನೆಯೇಲಿಗೆ ಹೊರಟು ಸಮುದ್ರ ತೀರದಲ್ಲಿ ಮುಗಿಯುತ್ತದೆ.
12 ೧೨ ಮಹಾಸಾಗರದ ತೀರವೇ ಪಶ್ಚಿಮ ಮೇರೆಯು. ಯೆಹೂದಾ ಗೋತ್ರಗಳ ದೇಶದ ಸುತ್ತಣ ಮೇರೆಗಳು ಇವೇ.
ಅದು ಪಶ್ಚಿಮದ ಮೇರೆಯ ಮೆಡಿಟರೇನಿಯನ್ ಮಹಾಸಾಗರವಾಗಿದೆ. ಇದೇ ಯೆಹೂದ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.
13 ೧೩ ಯೆಹೋಶುವನು ಯೆಹೋವನ ಅಪ್ಪಣೆಯಂತೆ ಯೆಫುನ್ನೆಯ ಮಗನಾದ ಕಾಲೇಬನಿಗೆ ಯೆಹೂದ ಕುಲದವರ ಮಧ್ಯದಲ್ಲಿಯೇ ಅನಾಕನ ತಂದೆಯಾದ ಅರ್ಬನ ಪಟ್ಟಣವಾಗಿದ್ದ ಹೆಬ್ರೋನನ್ನು ಕೊಟ್ಟನು.
ಇದಲ್ಲದೆ ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರ ಯೆಫುನ್ನೆಯ ಮಗ ಕಾಲೇಬನಿಗೆ ಅನಾಕನ ತಂದೆಯ ಕಿರ್ಯತ್ ಅರ್ಬ ಎಂಬ ಹೆಬ್ರೋನನ್ನು ಯೆಹೂದನ ಮಕ್ಕಳ ನಡುವೆ ಸೊತ್ತಾಗಿ ಕೊಟ್ಟನು.
14 ೧೪ ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಓಡಿಸಿಬಿಟ್ಟನು.
ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ, ಅಹೀಮನ್, ತಲ್ಮೈರನ್ನು ಹೊರಡಿಸಿಬಿಟ್ಟನು.
15 ೧೫ ಆನಂತರ ಅವನು ಹೊರಟು ಕಿರ್ಯತಸೇಫೆರ್ ಎನ್ನಿಸಿಕೊಳ್ಳುತ್ತಿದ್ದ ದೆಬೀರಿನ ನಿವಾಸಿಗಳೊಡನೆ ಯುದ್ಧ ಮಾಡಿದನು.
ಕಾಲೇಬನು ಅಲ್ಲಿಂದ ಹೊರಟು, ಕಿರ್ಯತ್ ಸೇಫೆರ್ ಎಂದು ಅನ್ನಿಸಿಕೊಳ್ಳುತ್ತಿದ್ದ ದೆಬೀರಿನ ವಾಸಿಗಳ ವಿರೋಧವಾಗಿ ಹೋದನು.
16 ೧೬ ಅವನು “ಕಿರ್ಯತಸೇಫೆರನ್ನು ಹಿಡಿದುಕೊಳ್ಳವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ” ಎಂದನು.
ಅಲ್ಲಿ ಕಾಲೇಬನು, “ಕಿರ್ಯತ್ ಸೇಫೆರನ್ನು ದಾಳಿಮಾಡಿ ತೆಗೆದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ,” ಎಂದು ಹೇಳಿದ್ದನು.
17 ೧೭ ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನೀಯೇಲನು ಅದನ್ನು ವಶಪಡಿಸಿಕೊಂಡನು. ಅವನಿಗೆ ಕಾಲೇಬನ ಮಗಳಾದ ಅಕ್ಷಾಳನ್ನು ಮದುವೆಮಾಡಿಕೊಟ್ಟನು.
ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.
18 ೧೮ ಆಕೆಯು ತನ್ನ ತಂದೆಯ ಮನೆ ಸೇರಿದಾಗ, ತನ್ನ ತಂದೆಯ ಹತ್ತಿರ ಭೂಮಿಯನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿಂದ ಇಳಿದಳು ಕಾಲೇಬನು, “ನಿನಗೇನು ಬೇಕು” ಎಂದು ಆಕೆಯನ್ನು ಕೇಳಲು
ಒಂದು ದಿನ ಅಕ್ಷಾ ಒತ್ನಿಯೇಲನೊಂದಿಗೆ ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಇನ್ನೂ ಒಂದು ಹೊಲವನ್ನು ಕೇಳುವುದಕ್ಕೆ ಅವನನ್ನು ಪ್ರೇರೇಪಿಸಿ, ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳಿಗೆ, “ನಿನಗೆ ಏನು ಬೇಕು?” ಎಂದನು.
19 ೧೯ ಆಕೆಯು “ನನಗೊಂದು ಕೊಡುಗೆ ಬೇಕು. ನನ್ನನ್ನು ದಕ್ಷಿಣ ದೇಶದ ಬೆಂಗಾಡಿಗೆ (ಬರಡು ಭೂಮಿ) ಕೊಟ್ಟುಬಿಟ್ಟೆಯಲ್ಲಾ? ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು” ಎಂದಳು. ಆಗ ಅವನು ಆಕೆಗೆ ಮೇಲಣ ಮತ್ತು ಕೆಳಗಣ ಬುಗ್ಗೆಗಳನ್ನು ಕೊಟ್ಟನು.
ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನೀನು ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.
20 ೨೦ ಯೆಹೂದದ ಕುಲಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ವಿವರ:
ಯೆಹೂದ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸೊತ್ತಿನ ವಿವರ:
21 ೨೧ ಎದೋಮ್ ಪ್ರಾಂತ್ಯದ ಮೇರೆಯಾಗಿರುವ ದಕ್ಷಿಣ ಭಾಗದಲ್ಲಿ ಕಬ್ಜೇಲ್, ಏದೆರ್, ಯಾಗೂರ್,
ದಕ್ಷಿಣದ ಕಟ್ಟಕಡೆಗಿರುವ ಎದೋಮಿನ ಮೇರೆಗೆ ಸರಿಯಾಗಿ ಯೆಹೂದ ಗೋತ್ರಕ್ಕೆ ಇರುವ ಪಟ್ಟಣಗಳು. ಅವು: ಕಬ್ಜಯೇಲ್, ಏದೆರ್, ಯಾಗೂರ್,
22 ೨೨ ಕೀನಾ, ದೀಮೋನ್, ಅದಾದ್,
ಕೀನಾ, ದೀಮೋನಾ, ಅದಾದಾ,
23 ೨೩ ಕೆದೆಷ್, ಹಾಚೋರ್, ಇತ್ನಾನ್,
ಕೆದೆಷ್, ಹಾಚೋರ್, ಇತ್ನಾನ್,
24 ೨೪ ಜೀಫ್, ಟೆಲೆಮ್, ಬೆಯಾಲೋತ್,
ಜೀಫ್, ಟೆಲೆಮ್, ಬೆಯಾಲೋತ್,
25 ೨೫ ಹಾಚೋರ್ ಹದತ್ತಾ, ಹಾಚೋರ್ ಎಂಬ ಕಿರ್ಯೋತ್, ಹೆಚ್ರೋನ್, ಹಾಚೋರ್,
ಹಾಚೋರ್ ಹದತ್ತಾ, ಕಿರ್ಯೋತ್ ಹೆಚ್ರೋನ್, ಎಂಬುವ ಹಾಚೋರ್,
26 ೨೬ ಅಮಾಮ್, ಶೆಮ, ಮೋಲಾದಾ,
ಅಮಾಮ್, ಶೆಮ, ಮೋಲಾದ,
27 ೨೭ ಹಚರ್ ಗದ್ದಾ, ಹೆಷ್ಮೋನ್, ಬೇತ್ಪೆಲೆಟ್,
ಹಜರ್ ಗದ್ದಾ, ಹೆಷ್ಮೋನ್, ಬೇತ್ ಪೆಲೆಟ್,
28 ೨೮ ಹಚರ್ ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ,
ಹಚರ್ ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ,
29 ೨೯ ಬಾಲಾ, ಇಯ್ಯೀಮ್, ಎಚೆಮ್,
ಬಾಲಾ, ಇಯೀಮ್, ಎಚೆಮ್,
30 ೩೦ ಎಲ್ಟೋಲದ್, ಕೆಸೀಲ್, ಹೊರ್ಮಾ,
ಎಲ್ತೋಲದ್, ಕೆಸೀಲ್, ಹೊರ್ಮಾ,
31 ೩೧ ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ,
ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ,
32 ೩೨ ಲೆಬಾವೋತ್, ಶಿಲ್ಹೀಮ್, ಅಯಿನ್, ರಿಮ್ಮೋನ್ ಎಂಬ ಇಪ್ಪತ್ತೊಂಬತ್ತು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು,
ಲೆಬಾವೋತ್, ಶಿಲ್ಹೀಮ್, ಆಯಿನ್, ರಿಮ್ಮೋನ್ ಎಂಬವುಗಳೇ ಪಟ್ಟಣಗಳೆಲ್ಲಾ ಇಪ್ಪತ್ತೊಂಬತ್ತು ಮತ್ತು ಅವುಗಳ ಗ್ರಾಮಗಳು.
33 ೩೩ ಇಳಿಜಾರು ಪ್ರದೇಶದಲ್ಲಿ ಎಷ್ಟಾವೋಲ್, ಚೊರ್ಗಾ, ಅಶ್ನಾ
ಪಶ್ಚಿಮದ ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ಣಾ,
ಜಾನೋಹ, ಏಂಗನ್ನೀಮ್, ತಪ್ಪೂಹ, ಏನಾಮ್,
35 ೩೫ ತಪ್ಪೂಹ, ಏನಾಮ್, ಯರ್ಮೂತ್,
ಯರ್ಮೂತ್, ಅದುಲ್ಲಾಮ್, ಸೋಕೋ, ಅಜೇಕಾ,
36 ೩೬ ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
37 ೩೭ ಚೆನಾನ್, ಹದಾಷಾ, ಮಿಗ್ದಲ್ಗಾದ್,
ಚೆನಾನ್, ಹದಾಷಾ, ಮಿಗ್ದಲ್ಗಾದ್,
38 ೩೮ ದಿಲಾನ್, ಮಿಚ್ಪೆ, ಯೊಕ್ತೇಲ್,
ದಿಲಾನ್, ಮಿಚ್ಪೆ, ಯೊಕ್ತೇಲ್,
39 ೩೯ ಲಾಕೀಷ್, ಬೊಚ್ಕತ್, ಎಗ್ಲೋನ್,
ಲಾಕೀಷ್, ಬೊಚ್ಕತ್, ಎಗ್ಲೋನ್,
40 ೪೦ ಕಬ್ಬೋನ್, ಲಹ್ಮಾಸ್, ಕಿತ್ಲೀಷ್, ಗೆದೇರೋತ್, ಬೇತ್‌ದಾಗೋನ್, ನಾಮಾ,
ಕಬ್ಬೋನ್, ಲಹ್ಮಾಸ್, ಕಿತ್ಲೀಷ್,
41 ೪೧ ಮಕ್ಕೇದಾ, ಎಂಬ ಹದಿನಾರು ಪಟ್ಟಣಗಳೂ, ಅವುಗಳ ಗ್ರಾಮಗಳು.
ಗೆದೇರೋತ್, ಬೇತ್‌ದಾಗೋನ್, ನಾಮಾ, ಮಕ್ಕೇದಾ, ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳು.
42 ೪೨ ಲಿಬ್ನಾ, ಎತೆರ್, ಆಷಾನ್,
ಇದಲ್ಲದೆ ಲಿಬ್ನಾ, ಎತೆರ್, ಆಷಾನ್,
44 ೪೪ ಅಶ್ನಾ, ನೆಚೀಬ್, ಕೆಯೀಲಾ, ಅಕ್ಜೀಬ್, ಮಾರೇಷಾ, ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
ಕೆಯೀಲಾ, ಅಕ್ಜೀಬ್, ಮಾರೇಷಾ, ಎಂಬ ಒಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳು.
45 ೪೫ ಎಕ್ರೋನ್ ಸಂಸ್ಥಾನವೂ ಅದಕ್ಕೆ ಸೇರಿದ ಗ್ರಾಮ ಪಟ್ಟಣಗಳು.
ಎಕ್ರೋನ್ ಅದರ ಪಟ್ಟಣಗಳು ಗ್ರಾಮಗಳು ಸಹ.
46 ೪೬ ಎಕ್ರೋನಿನಿಂದ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು;
ಎಕ್ರೋನಿನ ಪಶ್ಚಿಮ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು.
47 ೪೭ ಮತ್ತು ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ ಪಟ್ಟಣಗಳು; ಗಾಜಾ ಸಂಸ್ಥಾನ ಹಾಗೂ ಐಗುಪ್ತ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲಾ ಗ್ರಾಮ, ಪಟ್ಟಣಗಳು.
ಅಷ್ಡೋದ್ ಪಟ್ಟಣ ಮತ್ತು ಅದರ ಸುತ್ತಲಿನ ಪಟ್ಟಣಗಳೂ ಗ್ರಾಮಗಳೂ, ಗಾಜಾ, ಅದರ ಪಟ್ಟಣಗಳು, ಅದರ ಗ್ರಾಮಗಳು. ಈಜಿಪ್ಟಿನ ಕಲ್ಲಿನ ನಾಲೆ, ಮೆಡಿಟೆರಿಯನ್ ಸಮುದ್ರ, ಅದರ ಮೇರೆ ಇವುಗಳವರೆಗೂ ಇತ್ತು.
48 ೪೮ ಬೆಟ್ಟದ ಮೇಲಿನ ಪ್ರದೇಶದಲ್ಲಿರುವ ಶಾಮೀರ್, ಯತ್ತೀರ್, ಸೋಕೋ,
ಬೆಟ್ಟಗಳಲ್ಲಿರುವ ಪ್ರದೇಶಗಳು: ಶಾಮೀರ್, ಯತ್ತೀರ್, ಸೋಕೋ,
49 ೪೯ ದನ್ನಾ, ದೆಬೀರ್, ಎಂಬ ಕಿರ್ಯತ್ ಸನ್ನಾ,
ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ,
50 ೫೦ ಅನಾಬ್, ಎಷ್ಟೆಮೋ, ಅನೀಮ್,
ಅನಾಬ್, ಎಷ್ಟೆಮೋ, ಅನೀಮ್,
51 ೫೧ ಗೋಷೆನ್, ಹೋಲೋನ್, ಗಿಲೋ ಎಂಬ ಹನ್ನೊಂದು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
ಗೋಷೆನ್, ಹೋಲೋನ್ ಮತ್ತು ಗಿಲೋ ಎಂಬ ಹನ್ನೊಂದು ಪಟ್ಟಣಗಳು ಅವುಗಳ ಗ್ರಾಮಗಳು.
53 ೫೩ ಯಾನೂಮ್, ಬೇತ್ ತಪ್ಪೂಹ, ಅಫೇಕಾ,
ಯಾನೂಮ್, ಬೇತ್ ತಪ್ಪೂಹ, ಅಫೇಕಾ,
54 ೫೪ ಹುಮ್ಟಾ, ಹೆಬ್ರೋನೆಂಬ ಕಿರ್ಯತ್‌ಅರ್ಬ, ಚೀಯೋರ್ ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳು.
ಹುಮ್ಟಾ, ಹೆಬ್ರೋನೆಂಬ ಕಿರ್ಯತ್ ಅರ್ಬ, ಚೀಯೋರ್ ಎಂಬ ಒಂಬತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳು.
ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ,
56 ೫೬ ಕರ್ಮೆಲ್, ಜೀಫ್, ಯುಟ್ಟಾ,
ಇಜ್ರೆಯೇಲ್, ಯೊಗ್ದೆಯಾಮ್, ಜಾನೋಹ,
57 ೫೭ ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
ಕಯಿನ್, ಗಿಬೆಯ, ತಿಮ್ನಾ ಎಂಬ ಹತ್ತು ಪಟ್ಟಣಗಳು, ಅವುಗಳ ಗ್ರಾಮಗಳು.
58 ೫೮ ಹಲ್ಹೂಲ್, ಬೇತ್‌ಚೂರ್, ಗೆದೋರ್,
ಹಲ್ಹೂಲ್, ಬೇತ್ ಚೂರ್, ಗೆದೋರ್,
59 ೫೯ ಮಾರಾತ್, ಬೇತನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
ಮಾರಾತ್, ಬೇತ್ ಅನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು, ಅವುಗಳ ಗ್ರಾಮಗಳು.
60 ೬೦ ಕಿರ್ಯಾತ್ಯಾರೀಮ್ ಅನಿಸಿಕೊಳ್ಳುವ ಕಿರ್ಯಾತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳು ಗ್ರಾಮಗಳು.
ಕಿರ್ಯತ್ ಯಾರೀಮ್ ಎಂಬ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
61 ೬೧ ಅರಣ್ಯದಲ್ಲಿರುವ ಬೇತ್ ಆರಾಬಾ, ಮಿದ್ದೀನ್, ಸೆಕಾಕಾ,
ಮರುಭೂಮಿಯಲ್ಲಿರುವ ಬೇತ್ ಅರಾಬಾ, ಮಿದ್ದೀನ್, ಸೆಕಾಕಾ,
62 ೬೨ ನಿಬ್ಷಾನ್, ಉಪ್ಪಿನ ಪಟ್ಟಣವು, ಏಂಗೆದೀ ಎಂಬ ಆರು ಪಟ್ಟಣಗಳು, ಅವುಗಳ ಗ್ರಾಮಗಳು.
ನಿಬ್ಷಾನ್, ಉಪ್ಪಿನ ಪಟ್ಟಣವು ಮತ್ತು ಏನ್ಗೆದಿ ಎಂಬ ಪಟ್ಟಣಗಳನ್ನು ಒಳಗೊಂಡ ಆರು ಪಟ್ಟಣಗಳು ಅವುಗಳ ಗ್ರಾಮಗಳು.
63 ೬೩ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಯೆಹೂದ ಕುಲದವರಿಂದ ಆಗದೆ ಹೋಯಿತು. ಆದುದರಿಂದ ಅವರು ಇಂದಿನವರೆಗೂ ಯೆಹೂದ ಕುಲದವರೊಡನೆ ಯೆರೂಸಲೇಮಿನಲ್ಲೇ ವಾಸವಾಗಿದ್ದಾರೆ.
ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೆಹೂದ ಗೋತ್ರದವರಿಂದ ಹೊರಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ದಿವಸದವರೆಗೂ ಯೆಬೂಸಿಯರು ಯೆಹೂದ ಗೋತ್ರದವರ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.