< ಯೆಹೋಶುವನು 11 >
1 ೧ ಹಾಚೋರಿನ ಅರಸನಾದ ಯಾಬೀನನು ಇದನ್ನೆಲ್ಲಾ ಕೇಳಿ ಯೋಬಾಬನೆಂಬ ಮಾದೋನಿನ ಅರಸನು ಶಿಮ್ರೋನಿನ ಅರಸನನ್ನು ಅಕ್ಷಾಫಿನ ಅರಸನನ್ನು, ಉತ್ತರ ದಿಕ್ಕಿನ ಪರ್ವತ ಪ್ರದೇಶ,
၁ထိုသိတင်းကို ဟာဇော်မင်းကြီးယာဘိန်သည် ကြားသောအခါ၊ မာဒုန်မင်းကြီးယောဗပ်၊ ရှိမြုန်မင်းကြီး အာခရှပ်မင်းကြီးတို့ထံသို့၎င်း၊
2 ೨ ಕಿನ್ನೆರೋತ್ ಸಮುದ್ರದ ದಕ್ಷಿಣದಲ್ಲಿನ ತಗ್ಗಾದ ಪ್ರದೇಶ, ಇಳುಕಲ್ಲಿನ ಪ್ರದೇಶ, ದೋರ್ ಊರಿನ ಪಶ್ಚಿಮದಲ್ಲಿದ್ದ ಬೆಟ್ಟದ ಮೇಲಿನ ಪ್ರದೇಶ, ಇವುಗಳ ಅರಸರನ್ನೂ ಪೂರ್ವಪಶ್ಚಿಮಗಳಲ್ಲಿರುವ
၂တောင်ရိုး မြောက်ဘက်အရပ်၊ ဂင်္နေသရက်မြို့ တောင်ဘက်လွင်ပြင်အရပ်၊ ချိုင့်ထဲအရပ်၊ အနောက်မျက် နှာ ဒေါရပြည်နယ်၌ရှိသော မင်းကြီးများထံသို့၎င်း၊
3 ೩ ಕಾನಾನ್ಯರು, ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಬೆಟ್ಟದ ಮೇಲಿನ ಪ್ರದೇಶದಲ್ಲಿದ್ದ ಯೆಬೂಸಿಯರು, ಹೆರ್ಮೋನಿನ ತಗ್ಗಿನಲ್ಲಿದ್ದ ಮಿಚ್ಪಾ ದೇಶದಲ್ಲಿದ್ದ ಹಿವ್ವಿಯರು ಇವರನ್ನೂ ಕರೆಕಳುಹಿಸಿದನು.
၃အရှေ့အနောက်၌နေသော ခါနနိလူ၊ တောင် ပေါ်မှာနေသော အာမောရိလူ၊ ဟိတ္တိလူ၊ ဖေရဇိလူ၊ ယေဗု သိလူ၊ မိဇပါပြည်၊ ဟေရမုန်တောင်ခြေရင်း၌နေသော ဟိဝိလူတို့ရှိရာသို့၎င်း စေလွှတ်၍၊
4 ೪ ಅವರು ಒಡನೆ ಬಹು ರಥಾಶ್ವಗಳಿಂದ ಕೂಡಿರುವ ತಮ್ಮ ಸರ್ವಸೈನ್ಯಗಳನ್ನು ತೆಗೆದುಕೊಂಡು ಹೊರಟರು. ಆ ಸೈನಿಕರು ಸಮುದ್ರ ತೀರದ ಮರಳಿನಂತೆ ಅಸಂಖ್ಯರಾಗಿದ್ದರು.
၄ထိုမင်းကြီးများတို့သည် အရေအတွက်အားဖြင့် သမုဒ္ဒရာသဲလုံးနှင့်အမျှ အလွန်များစွာသော ဗိုလ်ပါ အပေါင်း၊ မြင်းများ၊ ရထားများအပေါင်းတို့နှင့်တကွ ထွက် လာကြ၏။
5 ೫ ಈ ಎಲ್ಲಾ ಅರಸರು ಒಟ್ಟಾಗಿ ಸೇರಿ ಮೇರೋಮ್ ಜಲಾಶಯದ ಬಳಿಯಲ್ಲಿ ಇಸ್ರಾಯೇಲ್ಯರೊಡನೆ ಯುದ್ಧಮಾಡುವುದಕ್ಕಾಗಿ ಇಳಿದುಕೊಂಡರು.
၅ထိုမင်းကြီးအပေါင်းတို့သည် စည်းဝေးလျက်၊ ဣသရေလအမျိုးကို တိုက်ခြင်းငှါ ချီလာ၍၊ မေရုံအိုင်နား မှာ တစုတည်း တပ်ချလျက်နေကြ၏။
6 ೬ ಆಗ ಯೆಹೋವನು “ಯೆಹೋಶುವನಿಗೆ ನೀನು ಅವರಿಗೆ ಹೆದರಬೇಡ. ನಾಳೆ ಇದೇ ವೇಳೆಗೆ ಅವರನ್ನು ಇಸ್ರಾಯೇಲ್ಯರಿಗೆ ಒಪ್ಪಿಸುವೆನು, ಇಸ್ರಾಯೇಲರು ಅವರನ್ನು ಸಂಹರಿಸಿ ಬಿಡುವರು. ನೀನು ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ರಥಗಳನ್ನು ಸುಟ್ಟುಬಿಡಬೇಕು” ಅಂದನು.
၆ထာဝရဘုရားကလည်း၊ သူတို့ကို မကြောက်နှင့်။ ငါသည် နက်ဖြန်နေ့ ယခုအချိန်၌ ဣသရေလအမျိုးရှေ့ မှာ၊ ထိုသူအပေါင်းတို့ကို အသေအပ်မည်။ မြင်းတို့၏ ခြေကြောကို ဖြတ်ရမည်။ ရထားတို့ကို မီးရှို့ရမည်ဟု ယောရှုအား မိန့်တော်မူ၏။
7 ೭ ಯೆಹೋಶುವನು ಮಿಚ್ಪೆಯ ತನ್ನ ಎಲ್ಲಾ ಭಟರೊಡನೆ ಹೊರಟು ಹೋಗಿ, ಮೇರೋಮ್ ಜಲಾಶಯದ ಬಳಿಯಲ್ಲಿದ್ದ ಶತ್ರುಗಳ ಮೇಲೆ ಪಕ್ಕನೆ ಬಿದ್ದನು.
၇ယောရှုသည်လည်း၊ မိမိစစ်သူရဲအပေါင်းတို့နှင့် တကွ မေရုံအိုင်နားသို့ အမှတ်တမဲ့ စစ်ချီ၍ တိုက်လေ၏။
8 ೮ ಯೆಹೋವನು ಅವರನ್ನು ಇಸ್ರಾಯೇಲರ ಕೈಗೆ ಒಪ್ಪಿಸಿದನು. ಇವರು ಅವರನ್ನು ದೊಡ್ಡ ಚೀದೋನ್ ಹಾಗೂ ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಬೈಲಿನವರೆಗೂ ಅವರನ್ನು ಹಿಂದಟ್ಟಿ ಹೊಡೆದರು. ಒಬ್ಬನಾದರೂ ಉಳಿಯದಂತೆ ಎಲ್ಲರನ್ನೂ ಸಂಹರಿಸಿದರು.
၈ထာဝရဘုရားသည် သူတို့ကို ဣသရေလ အမျိုး သားတို့လက်၌ အပ်တော်မူသဖြင့်၊ သူတို့ကို လုပ်ကြံ၍ ဇိဒုန်ရဗ္ဗာမြို့၊ မိသရဖေါသမိမ်မြို့ အရှေ့မျက်နှာ မိဇပါ ချိုင့်တိုင်အောင် လိုက်၍ တယောက်ကိုမျှ မကျန်ကြွင်းစေ ခြင်းငှါ လုပ်ကြံကြ၏။
9 ೯ ಯೆಹೋಶುವನು ಯೆಹೋವನ ಅಪ್ಪಣೆಗನುಸಾರವಾಗಿ ಅವರ ಕುದುರೆಗಳ ಹಿಂಗಾಲಿನ ನರಗಳನ್ನು ರಥಗಳನ್ನು ಸುಟ್ಟುಬಿಟ್ಟನು.
၉ထာဝရဘုရား မှာထားတော်မူသည်အတိုင်း၊ ယောရှုသည် မြင်းတို့၏ ခြေကြောကို ဖြတ်၍ ရထားတို့ကို မီးရှို့လေ၏။
10 ೧೦ ಕೂಡಲೇ ಯೆಹೋಶುವನು ಹಿಂದಿರುಗಿ ಹಾಚೋರನನ್ನೂ ಅವರ ಅರಸನನ್ನೂ ಕತ್ತಿಯಿಂದ ಸಂಹರಿಸಿದನು. ಹಾಚೋರೆಂಬುವುದು ಪೂರ್ವಕಾಲದಲ್ಲಿ ಆ ಎಲ್ಲಾ ರಾಜ್ಯಗಳಿಗಿಂತಲು ಶ್ರೇಷ್ಠವಾಗಿತ್ತು.
၁၀ထိုအခါ ယောရှုသည် ပြန်၍ ဟာဇော်မြို့ကို တိုက်ယူသဖြင့်၊ မင်းကြီးကို ထားနှင့်ကွပ်မျက်လေ၏။ ရှေးကာလ၌ ဟာဇော်မြို့သည် ထိုပြည်များတို့ကို အုပ်စိုးရ သတည်း။
11 ೧೧ ಇಸ್ರಾಯೇಲ್ಯರು ಅದರಲ್ಲಿದ್ದ ಎಲ್ಲರನ್ನು ಕತ್ತಿಯಿಂದ ಸಂಹರಿಸಿ ಹಾಚೋರ್ ಪಟ್ಟಣವನ್ನು ಸುಟ್ಟುಬಿಟ್ಟರು. ಒಂದು ಜೀವಿಯಾದರೂ ಉಳಿಯಲಿಲ್ಲ.
၁၁ထိုမြို့သူမြို့သားအပေါင်းတို့ကို ထားနှင့်ကွပ် မျက်သဖြင့် တယောက်ကိုမျှ အသက်ရှင်စေခြင်းငှါမထား။ ရှင်းရှင်းဖျက်ဆီး၍ မြို့ကိုလည်း မီးရှို့လေ၏။
12 ೧೨ ನಂತರ ಯೆಹೋಶುವನು ಉಳಿದ ಅರಸರನ್ನೂ ಅವರ ಎಲ್ಲಾ ಪಟ್ಟಣಗಳನ್ನು ಹಿಡಿದು ಯೆಹೋವನ ಸೇವಕನಾದ ಮೋಶೆಯ ಆಜ್ಞೆಯಂತೆ ಅವರನ್ನು ಕತ್ತಿಯಿಂದ ಸಂಹರಿಸಿದನು.
၁၂ထာဝရဘုရား၏ကျွန် မောရှေမှာထားသည် အတိုင်း၊ ထိုမင်းကြီးများအစိုးရသော မြို့ရှိသမျှတို့နှင့် မင်းကြီးအပေါင်းတို့ကို ယောရှုတိုက်ယူ၍ ထားနှင့်လုပ်ကြံ သဖြင့် ရှင်းရှင်းဖျက်ဆီးလေ၏။
13 ೧೩ ಯೆಹೋಶುವನು ಸುಟ್ಟ ಹಾಚೋರ್ ಒಂದನ್ನು ಬಿಟ್ಟರೆ ಇಸ್ರಾಯೇಲರು ದಿನ್ನೆಯ ಮೇಲಿನ ಬೇರೆ ಯಾವ ಪಟ್ಟಣವನ್ನೂ ಸುಟ್ಟುಹಾಕಲಿಲ್ಲ.
၁၃သို့ရာတွင်၊ ဟာဇော်မြို့မှတပါး၊ တောင်ပေါ်၌ တည်သောမြို့တို့ကို ဣသရေလလူတို့သည် မီးမရှို့ကြ။ ဟာဇော်မြို့ တမြို့ကိုသာ ယောရှုမီးရှို့သတည်း။
14 ೧೪ ಇಸ್ರಾಯೇಲರು ಅವುಗಳಲ್ಲಿದ್ದ ಪಶುಪ್ರಾಣಿಗಳನ್ನೂ ವಸ್ತುಗಳನ್ನೂ ಕೊಳ್ಳೆ ಹೊಡೆದರು. ಆದರೆ ಜನರೆಲ್ಲರನ್ನೂ ಕತ್ತಿಯಿಂದ ಹೊಡೆದು ನಿರ್ಮೂಲ ಮಾಡಿದರು. ಉಸಿರಿರುವ ಒಂದನ್ನೂ ಅವರು ಉಳಿಸಲಿಲ್ಲ.
၁၄ထိုမြို့များ၌ လက်ရဥစ္စာနှင့် တိရစ္ဆာန်ရှိသမျှတို့ ကို ဣသရေလလူတို့သည် ကိုယ်အဘို့ သိမ်းယူကြ၏။ လူတို့ကို မဖျက်ဆီးမှီတိုင်အောင် ရှိသမျှတို့ကို ထားနှင့် လုပ်ကြံကြ၏။ တယောက်ကိုမျှ အရှင်မကျန်ကြွင်းစေကြ။
15 ೧೫ ಯೆಹೋವನ ಸೇವಕನಾದ ಮೋಶೆಯು ದೇವರು ತನಗೆ ಹೇಳಿದ್ದನ್ನೆಲ್ಲಾ ಯೆಹೋಶುವನಿಗೆ ಹೇಳಿದ್ದನು. ಯೆಹೋಶುವನು ಅದರಂತೆಯೇ ಮಾಡಿದನು, ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಮೀರಲಿಲ್ಲ.
၁၅ထာဝရဘုရားသည် မိမိကျွန်မောရှေကို မှာထား တော်မူသည်အတိုင်း၊ မောရှေသည် ယောရှုကို ဆင့်ဆို၏။ ယောရှုလည်း ထိုသို့ ပြုလေ၏။ ထာဝရဘုရားသည် မောရှေကို မှာထားတော်မူသမျှသောအမှု တစုံတခုကို လှပ်၍မထား။
16 ೧೬ ಈ ಪ್ರಕಾರ ಬೆಟ್ಟದ ಮೇಲಿನ ಪ್ರದೇಶ, ದಕ್ಷಿಣ ಪ್ರಾಂತ್ಯ ಗೋಷೆನ್ ಸೀಮೆ, ಇಳಿಜಾರಿನ ಪ್ರದೇಶ, ತಗ್ಗಾದ ಪ್ರದೇಶ, ಇಸ್ರಾಯೇಲ್ ಸೀಮೆಯ ಪರ್ವತ ಪ್ರಾಂತ್ಯ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವುಗಳೆಲ್ಲವೂ ಯೆಹೋಶುವನಿಗೆ ಸ್ವಾಧೀನವಾದವು.
၁၆ထိုသို့ စိရလမ်းတွင်ရှိသော ဟာလက်တောင်မှ စ၍ ဟေရမုန်တောင်ခြေရင်း၊
17 ೧೭ ಅವನು ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಬೆಟ್ಟದಿಂದ ಹೆರ್ಮೋನಿನ ಬುಡದಲ್ಲಿ ಲೆಬನೋನಿನ ಕಣಿವೆಯಲ್ಲಿರುವ ಬಾಲ್ಗಾದ್ ಪಟ್ಟಣದವರೆಗೂ ಇರುವ ದೇಶವನ್ನೆಲ್ಲಾ ಸೆರೆಹಿಡಿದು ಅದರ ಎಲ್ಲಾ ಅರಸರನ್ನು ಹಿಡಿದು ಸಂಹರಿಸಿಬಿಟ್ಟನು.
၁၇လေဗနုန်ချိုင့်၌ရှိသော ဗာလဂဒ်မြို့တိုင်အောင်၊ တောင်ပေါ်အရပ်၊ တောင်မျက်နှာအရပ်၊ ဂေါရှင်ပြည်၊ ချိုင့်များ၊ လွင်ပြင်များ၊ ဣသရေလတောင်၊ ဣသရေလ ချိုင့်နှင့်တကွ ထိုပြည်အလုံးစုံကို ယောရှုသည် သိမ်းယူ၍၊ မင်းကြီးအပေါင်းတို့ကို အောင်သဖြင့် လုပ်ကြံကွပ်မျက် လေ၏။
18 ೧೮ ಯೆಹೋಶುವನು ಈ ಎಲ್ಲಾ ಅರಸರೊಡನೆ ಬಹು ದಿನಗಳವರೆಗೂ ಯುದ್ಧ ಮಾಡಿದನು.
၁၈ထိုမင်းကြီးအပေါင်းတို့ကို ကာလကြာမြင့်စွာ စစ် တိုက်ရ၏။
19 ೧೯ ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರು ಹೊರತು ಯಾವ ಪಟ್ಟಣದವರೂ ಇಸ್ರಾಯೇಲರೊಡನೆ ಒಪ್ಪಂದಮಾಡಿಕೊಳ್ಳಲಿಲ್ಲ ಎಲ್ಲರನ್ನೂ ಯುದ್ಧದಿಂದಲೇ ವಶಮಾಡಿಕೊಳ್ಳಬೇಕಾಯಿತು.
၁၉ဟိဝိလူ၊ ဂိဗောင်မြို့သားမှတပါး ဣသရေလ အမျိုးသားတို့နှင့် မိဿဟာယဖွဲ့သော မြို့တမြို့မျှမရှိ။ အခြားသော မြို့ရှိသမျှတို့ကို တိုက်၍ အနိုင်သိမ်းယူရကြ ၏။
20 ೨೦ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಇಸ್ರಾಯೇಲರು ಅವರೆಲ್ಲರನ್ನು ಕರುಣೆಯಿಲ್ಲದೆ ಸಂಹರಿಸಿ ಬಿಡುವ ಹಾಗೆ ಯೆಹೋವನು ತಾನೇ ಆ ಜನರ ಹೃದಯಗಳನ್ನು ಕಠಿಣಪಡಿಸಿ ಯುದ್ಧಕ್ಕೆ ಬರುವಂತೆ ಮಾಡಿದನು.
၂၀အကြောင်းမူကား၊ ထာဝရဘုရားသည် မောရှေ ကို မှာထားတော်မူသည်အတိုင်း၊ ထိုလူမျိုးတို့ကို ကျေးဇူး မပြု အကုန်အစင် သုတ်သင်ပယ်ရှင်းစေမည် အကြောင်း၊ သူတို့သည် ဣသရေလအမျိုးသားတို့ကို ဆီး၍ တိုက်ဝံ့ သည်တိုင်အောင် သူတို့စိတ်နှလုံး ခိုင်မာစေခြင်းငှါ ထာဝရ ဘုရားအလိုရှိတော်မူသတည်း။
21 ೨೧ ಅದೇ ಕಾಲದಲ್ಲಿ ಯೆಹೋಶುವನು ಮಲೆನಾಡುಗಳಾದ ಹೆಬ್ರೋನ್, ದೆಬೀರ್, ಅನಾಬ್ ಎಂಬ ಊರುಗಳಲ್ಲಿಯೂ ಯೆಹೂದ ಹಾಗೂ ಇಸ್ರಾಯೇಲ್ ಪ್ರಾಂತ್ಯದ ಬೆಟ್ಟಗಳಲ್ಲಿಯೂ ವಾಸವಾಗಿದ್ದ ಅನಾಕ್ಯರನ್ನು (ಉನ್ನತ ಪುರುಷರು) ನಾಶಮಾಡಿ ಅವರ ಪಟ್ಟಣಗಳನ್ನು ಹಾಳುಮಾಡಿದನು.
၂၁ထိုကာလအခါ ယောရှုသည် ချီသွား၍၊ အာနက လူတို့ကို တောင်ပေါ်အရပ် ဟေဗြုန်မြို့၊ ဒေဗိရမြို့၊ အာ နပ်မြို့၊ ယုဒတောင်၊ ဣသရေလတောင် ရှိသမျှတို့မှ ပယ် ရှား၍၊ သူတို့မြို့များနှင့်တကွ ရှင်းရှင်းဖျက်ဆီးလေ၏။
22 ೨೨ ಇಸ್ರಾಯೇಲರ ಪ್ರಾಂತ್ಯಗಳಲ್ಲಿ ಯಾರೊಬ್ಬರೂ ಉಳಿಯಲಿಲ್ಲ. ಆದರೆ ಗಾಜಾ, ಗತೂರು, ಅಷ್ಡೋದ್, ಎಂಬ ಊರುಗಳಲ್ಲಿ ಮಾತ್ರ ಕೆಲವರು ಉಳಿದಿದ್ದರು.
၂၂ဂါဇမြို့၊ ဂါသမြို့၊ အာဇုတ်မြို့မှတပါး၊ ဣသ ရေလတိုင်းနိုင်ငံတွင် ကျန်ကြွင်းသော အာနကလူတ ယောက်မျှမရှိ။
23 ೨೩ ಯೆಹೋವನು ಮೋಶೆಯ ಮುಖಾಂತರ ವಾಗ್ದಾನ ಮಾಡಿದ ಪ್ರದೇಶಗಳನ್ನೆಲ್ಲಾ ಯೆಹೋಶುವನು ಸೆರೆ ಹಿಡಿದುಕೊಂಡು ಇಸ್ರಾಯೇಲ್ ಕುಲಭಾಗಗಳಿಗನುಗುಣವಾಗಿ ಅವುಗಳನ್ನು ವಿಭಾಗಿಸಿ ಹಂಚಿಕೊಟ್ಟನು. ಯುದ್ಧವು ನಿಂತು ದೇಶದಲ್ಲೆಲ್ಲಾ ಸಮಾಧಾನವುಂಟಾಯಿತು.
၂၃ထာဝရဘုရားသည် မောရှေကို မိန့်တော်မူသမျှ အတိုင်း၊ ယောရှုသည် ထိုပြည်တရှောက်လုံးကို သိမ်းယူ၍ ဣသရေလအမျိုးအနွယ် အသီးသီးတို့အား အမွေပေး သဖြင့်၊ တပြည်လုံးစစ်ငြိမ်းလေ၏။