< ಯೋಹಾನನು 8 >

1 ಯೇಸು ಎಣ್ಣೆಮರಗಳ ಗುಡ್ಡಕ್ಕೆ ಹೋದನು.
प्रत्यूषे यीशुः पनर्मन्दिरम् आगच्छत्
2 ಬೆಳಗಿನಜಾವದಲ್ಲಿ ಆತನು ತಿರುಗಿ ದೇವಾಲಯಕ್ಕೆ ಬಂದಾಗ ಎಲ್ಲಾ ಜನರು ಆತನ ಬಳಿಗೆ ಬಂದರು. ಆತನು ಕುಳಿತುಕೊಂಡು ಅವರಿಗೆ ಬೋಧಿಸಿದನು.
ततः सर्व्वेषु लोकेषु तस्य समीप आगतेषु स उपविश्य तान् उपदेष्टुम् आरभत।
3 ಶಾಸ್ತ್ರಿಗಳೂ ಮತ್ತು ಫರಿಸಾಯರೂ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಹೆಂಗಸನ್ನು ಹಿಡಿದು ಆತನ ಬಳಿಗೆ ತಂದು ಆಕೆಯನ್ನು ಅವರ ಗುಂಪಿನ ಮಧ್ಯದಲ್ಲಿ ನಿಲ್ಲಿಸಿ;
तदा अध्यापकाः फिरूशिनञ्च व्यभिचारकर्म्मणि धृतं स्त्रियमेकाम् आनिय सर्व्वेषां मध्ये स्थापयित्वा व्याहरन्
4 ಯೇಸುವಿಗೆ, “ಬೋಧಕನೇ, ಈ ಸ್ತ್ರೀ ವ್ಯಭಿಚಾರ ಮಾಡುತ್ತಿರುವಾಗಲೇ ಸಿಕ್ಕಿಬಿದ್ದಳು.
हे गुरो योषितम् इमां व्यभिचारकर्म्म कुर्व्वाणां लोका धृतवन्तः।
5 ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ಧರ್ಮಶಾಸ್ತ್ರದಲ್ಲಿ ನಮಗೆ ಆಜ್ಞಾಪಿಸಿದ್ದಾನೆ. ಈಕೆಯ ವಿಷಯದಲ್ಲಿ ನೀನು ಏನು ಹೇಳುತ್ತೀ?” ಎಂದು ಆತನನ್ನು ಕೇಳಿದರು.
एतादृशलोकाः पाषाणाघातेन हन्तव्या इति विधिर्मूसाव्यवस्थाग्रन्थे लिखितोस्ति किन्तु भवान् किमादिशति?
6 ಅವರು ಆತನನ್ನು ಪರೀಕ್ಷಿಸುವವರಾಗಿ ಆತನ ಮೇಲೆ ತಪ್ಪುಹೊರಿಸಬೇಕೆಂದೇ ಹೀಗೆ ಕೇಳಿದರು. ಆದರೆ ಯೇಸು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು.
ते तमपवदितुं परीक्षाभिप्रायेण वाक्यमिदम् अपृच्छन् किन्तु स प्रह्वीभूय भूमावङ्गल्या लेखितुम् आरभत।
7 ಅವರು ಆತನನ್ನು ಬಿಡದೆ ಪ್ರಶ್ನಿಸುತ್ತಿರುವಾಗ, ಆತನು ನೆಟ್ಟಗೆ ಕುಳಿತುಕೊಂಡು, ಅವರಿಗೆ, “ನಿಮ್ಮಲ್ಲಿ ಪಾಪವಿಲ್ಲದವನು ಯಾರಿದ್ದಾನೋ ಅವನೇ ಮೊದಲು ಆಕೆಯ ಮೇಲೆ ಕಲ್ಲು ಎಸೆಯಲಿ” ಎಂದು ಹೇಳಿದನು
ततस्तैः पुनः पुनः पृष्ट उत्थाय कथितवान् युष्माकं मध्ये यो जनो निरपराधी सएव प्रथमम् एनां पाषाणेनाहन्तु।
8 ತಿರುಗಿ ಆತನು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು.
पश्चात् स पुनश्च प्रह्वीभूय भूमौ लेखितुम् आरभत।
9 ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬನೇ ಉಳಿದನು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.
तां कथं श्रुत्वा ते स्वस्वमनसि प्रबोधं प्राप्य ज्येष्ठानुक्रमं एकैकशः सर्व्वे बहिरगच्छन् ततो यीशुरेकाकी तयक्त्तोभवत् मध्यस्थाने दण्डायमाना सा योषा च स्थिता।
10 ೧೦ ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಸ್ತ್ರೀಯೇ, ಅವರು ಎಲ್ಲಿಗೆ ಹೋದರು? ನಿನ್ನನ್ನು ಖಂಡಿಸುವುದಕ್ಕೆ ಯಾರೂ ಉಳಿಯಲಿಲ್ಲವೋ?” ಎಂದನು.
तत्पश्चाद् यीशुरुत्थाय तां वनितां विना कमप्यपरं न विलोक्य पृष्टवान् हे वामे तवापवादकाः कुत्र? कोपि त्वां किं न दण्डयति?
11 ೧೧ ಅದಕ್ಕೆ ಆಕೆಯು “ಕರ್ತನೇ, ಯಾರೂ ಶಿಕ್ಷೆ ವಿಧಿಸಲಿಲ್ಲ” ಎಂದಳು. ಯೇಸು ಆಕೆಗೆ “ನಾನೂ ಸಹ ನಿನ್ನನ್ನು ಶಿಕ್ಷೆ ವಿಧಿಸುವುದಿಲ್ಲ, ಹೋಗು, ಇನ್ನು ಮುಂದೆ ಪಾಪಮಾಡಬೇಡ” ಎಂದು ಹೇಳಿದನು.
सावदत् हे महेच्छ कोपि न तदा यीशुरवोचत् नाहमपि दण्डयामि याहि पुनः पापं माकार्षीः।
12 ೧೨ ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.
ततो यीशुः पुनरपि लोकेभ्य इत्थं कथयितुम् आरभत जगतोहं ज्योतिःस्वरूपो यः कश्चिन् मत्पश्चाद गच्छति स तिमिरे न भ्रमित्वा जीवनरूपां दीप्तिं प्राप्स्यति।
13 ೧೩ ಫರಿಸಾಯರು ಆತನಿಗೆ “ನಿನ್ನ ವಿಷಯವಾಗಿ ನೀನೇ ಸಾಕ್ಷಿ ಹೇಳುತ್ತಿರುವೆ, ನಿನ್ನ ಸಾಕ್ಷಿಯು ನಿಜವಲ್ಲ” ಎಂದು ಹೇಳಲು
ततः फिरूशिनोऽवादिषुस्त्वं स्वार्थे स्वयं साक्ष्यं ददासि तस्मात् तव साक्ष्यं ग्राह्यं न भवति।
14 ೧೪ ಯೇಸು ಅವರಿಗೆ “ನನ್ನ ವಿಷಯವಾಗಿ ನಾನು ಸಾಕ್ಷಿನೀಡಿದರೂ, ನನ್ನ ಸಾಕ್ಷಿ ಸತ್ಯವಾದದ್ದು. ನಾನು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತೇನೆ ಎಂದು ನನಗೆ ತಿಳಿದಿದೆ, ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ಎಂಬುದು ನಿಮಗೆ ತಿಳಿಯದು.
तदा यीशुः प्रत्युदितवान् यद्यपि स्वार्थेऽहं स्वयं साक्ष्यं ददामि तथापि मत् साक्ष्यं ग्राह्यं यस्माद् अहं कुत आगतोस्मि क्व यामि च तदहं जानामि किन्तु कुत आगतोस्मि कुत्र गच्छामि च तद् यूयं न जानीथ।
15 ೧೫ ನೀವು ಶಾರೀರಿಕ ರೀತಿಯಲ್ಲಿ ತೀರ್ಪು ಮಾಡುತ್ತೀರಿ, ನಾನು ಯಾರಿಗೂ ತೀರ್ಪು ಮಾಡುವುದಿಲ್ಲ.
यूयं लौकिकं विचारयथ नाहं किमपि विचारयामि।
16 ೧೬ ನಾನು ತೀರ್ಪು ಮಾಡಿದರೂ ನನ್ನ ತೀರ್ಪು ಸತ್ಯವಾದದ್ದೇ. ಏಕೆಂದರೆ ನಾನು ಒಬ್ಬಂಟಿಗನಲ್ಲ, ನನ್ನನ್ನು ಕಳುಹಿಸಿಕೊಟ್ಟ ನನ್ನ ತಂದೆಯೂ ನನ್ನ ಜೊತೆಯಲ್ಲಿ ಇದ್ದಾನೆ.
किन्तु यदि विचारयामि तर्हि मम विचारो ग्रहीतव्यो यतोहम् एकाकी नास्मि प्रेरयिता पिता मया सह विद्यते।
17 ೧೭ ಇಬ್ಬರ ಸಾಕ್ಷಿಯು ಸತ್ಯವಾದದ್ದು ಎಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ.
द्वयो र्जनयोः साक्ष्यं ग्रहणीयं भवतीति युष्माकं व्यवस्थाग्रन्थे लिखितमस्ति।
18 ೧೮ ನನ್ನ ವಿಷಯವಾಗಿ ಸಾಕ್ಷಿ ನೀಡುವವನು ನಾನೇ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿ ನೀಡುತ್ತಾನೆ” ಎಂದನು.
अहं स्वार्थे स्वयं साक्षित्वं ददामि यश्च मम तातो मां प्रेरितवान् सोपि मदर्थे साक्ष्यं ददाति।
19 ೧೯ ಅವರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದರು. ಅದಕ್ಕೆ ಯೇಸು, “ನೀವು ನನ್ನನ್ನೂ ತಿಳಿದಿಲ್ಲ ಹಾಗೂ ನನ್ನ ತಂದೆಯನ್ನೂ ತಿಳಿದಿಲ್ಲ. ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿದಿರುವಿರಿ” ಎಂದು ಉತ್ತರ ಕೊಟ್ಟನು.
तदा तेऽपृच्छन् तव तातः कुत्र? ततो यीशुः प्रत्यवादीद् यूयं मां न जानीथ मत्पितरञ्च न जानीथ यदि माम् अक्षास्यत तर्हि मम तातमप्यक्षास्यत।
20 ೨೦ ಯೇಸು ದೇವಾಲಯದ ಕಾಣಿಕೆಯ ಪೆಟ್ಟಿಗೆಗಳು ಇರುವ ಸ್ಥಳದಲ್ಲಿ ಬೋಧನೆ ಮಾಡುತ್ತಿರುವಾಗ ಈ ಮಾತುಗಳನ್ನು ಹೇಳಿದನು. ಆದರೆ ಆತನ ಸಮಯ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನನ್ನು ಬಂಧಿಸಲಿಲ್ಲ.
यीशु र्मन्दिर उपदिश्य भण्डागारे कथा एता अकथयत् तथापि तं प्रति कोपि करं नोदतोलयत्।
21 ೨೧ ಯೇಸು ತಿರುಗಿ ಅವರಿಗೆ, “ನಾನು ಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ ಮತ್ತು ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದನು.
ततः परं यीशुः पुनरुदितवान् अधुनाहं गच्छामि यूयं मां गवेषयिष्यथ किन्तु निजैः पापै र्मरिष्यथ यत् स्थानम् अहं यास्यामि तत् स्थानम् यूयं यातुं न शक्ष्यथ।
22 ೨೨ ಅದಕ್ಕೆ ಯೆಹೂದ್ಯರು, “ನಾವು ಹೋಗುವಲ್ಲಿಗೆ ನೀವು ಬರಲಾರಿರೆಂದು ಹೇಳುತ್ತಾನಲ್ಲಾ? ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿದ್ದಾನೋ?” ಎಂದು ಮಾತನಾಡಿಕೊಂಡರು.
तदा यिहूदीयाः प्रावोचन् किमयम् आत्मघातं करिष्यति? यतो यत् स्थानम् अहं यास्यामि तत् स्थानम् यूयं यातुं न शक्ष्यथ इति वाक्यं ब्रवीति।
23 ೨೩ ಆತನು ಅವರಿಗೆ, “ನೀವು ಕೆಳಗಿನವರು; ನಾನು ಮೇಲಿನಿಂದ ಬಂದವನು. ನೀವು ಈ ಲೋಕದವರು; ನಾನು ಈ ಲೋಕದವನಲ್ಲ.
ततो यीशुस्तेभ्यः कथितवान् यूयम् अधःस्थानीया लोका अहम् ऊर्द्व्वस्थानीयः यूयम् एतज्जगत्सम्बन्धीया अहम् एतज्जगत्सम्बन्धीयो न।
24 ೨೪ ಆದುದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ನಾನು ಹೇಳಿದೆನು. ನೀವುನನ್ನನ್ನು ಯಾರೆಂದು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು.
तस्मात् कथितवान् यूयं निजैः पापै र्मरिष्यथ यतोहं स पुमान् इति यदि न विश्वसिथ तर्हि निजैः पापै र्मरिष्यथ।
25 ೨೫ ಆಗ ಅವರು ಆತನಿಗೆ, “ನೀನು ಯಾರು?” ಎನ್ನಲೂ, ಯೇಸು ಅವರಿಗೆ, “ಮೊದಲಿನಿಂದಲೇನಾನು ನಿಮಗೆ ಹೇಳಿದಂಥದ್ದೇ.
तदा ते ऽपृच्छन् कस्त्वं? ततो यीशुः कथितवान् युष्माकं सन्निधौ यस्य प्रस्तावम् आ प्रथमात् करोमि सएव पुरुषोहं।
26 ೨೬ ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ, ನಿಮ್ಮ ಮೇಲೆ ತೀರ್ಪು ಮಾಡುವುದಕ್ಕೂ ಅನೇಕ ಸಂಗತಿಗಳು ನನಗುಂಟು. ಆದರೆ ನನ್ನನ್ನು ಕಳುಹಿಸಿ ಕೊಟ್ಟಾತನು ಸತ್ಯವಂತನು. ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ” ಎಂದನು.
युष्मासु मया बहुवाक्यं वक्त्तव्यं विचारयितव्यञ्च किन्तु मत्प्रेरयिता सत्यवादी तस्य समीपे यदहं श्रुतवान् तदेव जगते कथयामि।
27 ೨೭ ಆತನು ತಂದೆಯ ಕುರಿತಾಗಿ ಅವರೊಂದಿಗೆ ಮಾತನಾಡಿದನೆಂದು ಅವರು ಗ್ರಹಿಸಲಿಲ್ಲ.
किन्तु स जनके वाक्यमिदं प्रोक्त्तवान् इति ते नाबुध्यन्त।
28 ೨೮ ಹೀಗಿರಲಾಗಿ ಯೇಸು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೆತ್ತಿದಾಗ, ನಾನೇ ಆತನೆಂದೂ, ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನೆಂದು ನೀವು ತಿಳಿದುಕೊಳ್ಳುವಿರಿ. ಆದರೆ ನನ್ನ ತಂದೆಯು ನನಗೆ ಬೋಧಿಸಿದ ಸಂಗತಿಗಳನ್ನೇ ಮಾತನಾಡುತ್ತೇನೆ.
ततो यीशुरकथयद् यदा मनुष्यपुत्रम् ऊर्द्व्व उत्थापयिष्यथ तदाहं स पुमान् केवलः स्वयं किमपि कर्म्म न करोमि किन्तु तातो यथा शिक्षयति तदनुसारेण वाक्यमिदं वदामीति च यूयं ज्ञातुं शक्ष्यथ।
29 ೨೯ ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ. ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವುದರಿಂದ, ಆತನು ನನ್ನನ್ನು ಒಬ್ಬಂಟಿಗನಾಗಿ ಬಿಡುವುದಿಲ್ಲ” ಎಂದನು.
मत्प्रेरयिता पिता माम् एकाकिनं न त्यजति स मया सार्द्धं तिष्ठति यतोहं तदभिमतं कर्म्म सदा करोमि।
30 ೩೦ ಆತನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಆತನಲ್ಲಿ ನಂಬಿಕೆಯಿಟ್ಟರು.
तदा तस्यैतानि वाक्यानि श्रुत्वा बहुवस्तास्मिन् व्यश्वसन्।
31 ೩೧ ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ, ನಿಜವಾಗಿಯೂ ನೀವು ನನ್ನ ಶಿಷ್ಯರಾಗಿರುವಿರಿ.
ये यिहूदीया व्यश्वसन् यीशुस्तेभ्योऽकथयत्
32 ೩೨ ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.
मम वाक्ये यदि यूयम् आस्थां कुरुथ तर्हि मम शिष्या भूत्वा सत्यत्वं ज्ञास्यथ ततः सत्यतया युष्माकं मोक्षो भविष्यति।
33 ೩೩ ಅದಕ್ಕವರು ಆತನಿಗೆ, “ನಾವು ಅಬ್ರಹಾಮನ ಸಂತಾನದವರು ಮತ್ತು ನಾವು ಎಂದೂ ಯಾರಿಗೂ ದಾಸರಾಗಿಲ್ಲ, ನಿಮಗೆ ಬಿಡುಗಡೆಯಾಗುವುದೆಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.
तदा ते प्रत्यवादिषुः वयम् इब्राहीमो वंशः कदापि कस्यापि दासा न जातास्तर्हि युष्माकं मुक्त्ति र्भविष्यतीति वाक्यं कथं ब्रवीषि?
34 ೩೪ ಅದಕ್ಕೆ ಯೇಸು, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪ ಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ.
तदा यीशुः प्रत्यवदद् युष्मानहं यथार्थतरं वदामि यः पापं करोति स पापस्य दासः।
35 ೩೫ ದಾಸನು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ, ಆದರೆ ಮಗನು ಶಾಶ್ವತವಾಗಿ ಇರುತ್ತಾನೆ. (aiōn g165)
दासश्च निरन्तरं निवेशने न तिष्ठति किन्तु पुत्रो निरन्तरं तिष्ठति। (aiōn g165)
36 ೩೬ ಆದುದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ, ನಿಜವಾಗಿಯೂ ನಿಮಗೆ ಬಿಡುಗಡೆಯಾಗುವುದು.
अतः पुत्रो यदि युष्मान् मोचयति तर्हि नितान्तमेव मुक्त्ता भविष्यथ।
37 ೩೭ ನೀವು ಅಬ್ರಹಾಮನ ಸಂತಾನದವರೆಂದು ನಾನು ಬಲ್ಲೆನು, ಆದರೂ ನನ್ನ ವಾಕ್ಯಕ್ಕೆ ನಿಮ್ಮಲ್ಲಿ ಸ್ಥಳವಿಲ್ಲದ ಕಾರಣ ನೀವು ನನ್ನನ್ನು ಕೊಲ್ಲುವುದಕ್ಕೆ ನೋಡುತ್ತಿದ್ದೀರಿ.
युयम् इब्राहीमो वंश इत्यहं जानामि किन्तु मम कथा युष्माकम् अन्तःकरणेषु स्थानं न प्राप्नुवन्ति तस्माद्धेतो र्मां हन्तुम् ईहध्वे।
38 ೩೮ ನಾನುತಂದೆಯ ಬಳಿಯಲ್ಲಿ ನೋಡಿದ್ದನ್ನೇ ಮಾತನಾಡುತ್ತೇನೆ, ನೀವು ತಂದೆಯಿಂದ ಕೇಳಿದ್ದನ್ನೇ ಮಾಡಿರಿ” ಎಂದನು.
अहं स्वपितुः समीपे यदपश्यं तदेव कथयामि तथा यूयमपि स्वपितुः समीपे यदपश्यत तदेव कुरुध्वे।
39 ೩೯ ಅದಕ್ಕೆ ಅವರು, “ನಮ್ಮ ತಂದೆಯು ಅಬ್ರಹಾಮನೇ” ಎಂದರು. ಅದಕ್ಕೆ ಯೇಸು ಅವರಿಗೆ, “ನೀವು ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದಂಥ ಕೃತ್ಯಗಳನ್ನು ಮಾಡುತ್ತಿದ್ದೀರಿ.
तदा ते प्रत्यवोचन् इब्राहीम् अस्माकं पिता ततो यीशुरकथयद् यदि यूयम् इब्राहीमः सन्ताना अभविष्यत तर्हि इब्राहीम आचारणवद् आचरिष्यत।
40 ೪೦ ಆದರೂ, ನೀವು ಹಾಗೆ ಮಾಡದೇ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾದ ನನ್ನನ್ನು ಕೊಲ್ಲುವುದಕ್ಕೆ ಹುಡುಕುತ್ತಿದ್ದೀರಿ. ಅಬ್ರಹಾಮನು ಹೀಗೆ ಮಾಡಲಿಲ್ಲ.
ईश्वरस्य मुखात् सत्यं वाक्यं श्रुत्वा युष्मान् ज्ञापयामि योहं तं मां हन्तुं चेष्टध्वे इब्राहीम् एतादृशं कर्म्म न चकार।
41 ೪೧ ನೀವು ನಿಮ್ಮ ತಂದೆಯ ಕಾರ್ಯಗಳನ್ನು ಮಾಡುತ್ತಿದ್ದೀರಿ” ಎಂದನು. ಅದಕ್ಕವರು, “ನಾವು ವ್ಯಭಿಚಾರದಿಂದ ಹುಟ್ಟಿದವರಲ್ಲ. ನಮಗೆ ಒಬ್ಬನೇ ತಂದೆ, ಆತನು ದೇವರೇ” ಎಂದರು.
यूयं स्वस्वपितुः कर्म्माणि कुरुथ तदा तैरुक्त्तं न वयं जारजाता अस्माकम् एकएव पितास्ति स एवेश्वरः
42 ೪೨ ಯೇಸು ಅವರಿಗೆ, “ದೇವರು ನಿಮಗೆ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ, ಏಕೆಂದರೆ ನಾನು ದೇವರಿಂದಲೇ ಹೊರಟು ಲೋಕಕ್ಕೆ ಬಂದವನಾಗಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ, ಆದರೆ ದೇವರೇ ನನ್ನನ್ನು ಕಳುಹಿಸಿದ್ದಾನೆ.
ततो यीशुना कथितम् ईश्वरो यदि युष्माकं तातोभविष्यत् तर्हि यूयं मयि प्रेमाकरिष्यत यतोहम् ईश्वरान्निर्गत्यागतोस्मि स्वतो नागतोहं स मां प्राहिणोत्।
43 ೪೩ ನೀವು ನನ್ನ ಮಾತನ್ನು ಯಾಕೆ ಗ್ರಹಿಸುತ್ತಿಲ್ಲ? ಏಕೆಂದರೆ ನೀವು ನನ್ನ ವಾಕ್ಯಕ್ಕೆ ಕಿವಿಗೊಡದೆ ಇರುವುದರಿಂದಲೇ.
यूयं मम वाक्यमिदं न बुध्यध्वे कुतः? यतो यूयं ममोपदेशं सोढुं न शक्नुथ।
44 ೪೪ ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ.
यूयं शैतान् पितुः सन्ताना एतस्माद् युष्माकं पितुरभिलाषं पूरयथ स आ प्रथमात् नरघाती तदन्तः सत्यत्वस्य लेशोपि नास्ति कारणादतः स सत्यतायां नातिष्ठत् स यदा मृषा कथयति तदा निजस्वभावानुसारेणैव कथयति यतो स मृषाभाषी मृषोत्पादकश्च।
45 ೪೫ ಆದರೂ, ನಾನು ಸತ್ಯವನ್ನು ಹೇಳುವವನಾಗಿದ್ದರೂ ನೀವು ನನ್ನನ್ನು ನಂಬುವುದಿಲ್ಲ.
अहं तथ्यवाक्यं वदामि कारणादस्माद् यूयं मां न प्रतीथ।
46 ೪೬ ನನ್ನಲ್ಲಿ ಪಾಪವಿದೆಯೆಂದು ಸಮರ್ಥಿಸಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ? ನಾನು ಸತ್ಯವನ್ನೇ ಹೇಳುವುದಾದರೆ, ನೀವು ನನ್ನನ್ನು ಯಾಕೆ ನಂಬುವುದಿಲ್ಲ?
मयि पापमस्तीति प्रमाणं युष्माकं को दातुं शक्नोति? यद्यहं तथ्यवाक्यं वदामि तर्हि कुतो मां न प्रतिथ?
47 ೪೭ ದೇವರಿಗೆ ಸೇರಿದವನು ದೇವರ ವಾಕ್ಯಕ್ಕೆ ಕಿವಿಗೊಡುತ್ತಾನೆ. ನೀವು ದೇವರಿಗೆ ಸೇರಿದವರಲ್ಲದ ಕಾರಣ ನೀವು ದೇವರ ವಾಕ್ಯಕ್ಕೆ ಕಿವಿಗೊಡುವುದಿಲ್ಲ” ಎಂದು ಹೇಳಿದನು.
यः कश्चन ईश्वरीयो लोकः स ईश्वरीयकथायां मनो निधत्ते यूयम् ईश्वरीयलोका न भवथ तन्निदानात् तत्र न मनांसि निधद्वे।
48 ೪೮ ಅದಕ್ಕೆ ಯೆಹೂದ್ಯರು, “ನೀನು ಸಮಾರ್ಯದವನು ಮತ್ತು ನಿನಗೆ ದೆವ್ವಹಿಡಿದಿದೆ ಎಂದು ನಾವು ಹೇಳುವುದು ಸರಿಯಲ್ಲವೋ?” ಎಂದು ಕೇಳಿದರು.
तदा यिहूदीयाः प्रत्यवादिषुः त्वमेकः शोमिरोणीयो भूतग्रस्तश्च वयं किमिदं भद्रं नावादिष्म?
49 ೪೯ ಅದಕ್ಕೆ ಯೇಸು; “ನನಗೆ ದೆವ್ವ ಹಿಡಿದಿಲ್ಲ. ನಾನು ನನ್ನ ತಂದೆಯನ್ನು ಗೌರವಿಸುತ್ತೇನೆ, ಆದರೆ ನೀವು ನನಗೆ ಅವಮಾನಪಡಿಸುತ್ತೀದ್ದಿರಿ.
ततो यीशुः प्रत्यवादीत् नाहं भूतग्रस्तः किन्तु निजतातं सम्मन्ये तस्माद् यूयं माम् अपमन्यध्वे।
50 ೫೦ ನಾನು ನನ್ನ ಮಹಿಮೆಯನ್ನು ಹುಡುಕುವುದಿಲ್ಲ, ಮಹಿಮೆಯನ್ನು ಹುಡುಕುವಾತನು ಒಬ್ಬನಿದ್ದಾನೆ, ಆತನೇ ನ್ಯಾಯಾಧಿಪತಿ.
अहं स्वसुख्यातिं न चेष्टे किन्तु चेष्टिता विचारयिता चापर एक आस्ते।
51 ೫೧ ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾವನಾದರೂ ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ” ಅಂದನು. (aiōn g165)
अहं युष्मभ्यम् अतीव यथार्थं कथयामि यो नरो मदीयं वाचं मन्यते स कदाचन निधनं न द्रक्ष्यति। (aiōn g165)
52 ೫೨ ಅದಕ್ಕೆ ಯೆಹೂದ್ಯರು “ನೀನು ದೆವ್ವಹಿಡಿದವನೆಂದು ಈಗ ನಮಗೆ ತಿಳಿಯಿತು. ಅಬ್ರಹಾಮನು ಸತ್ತನು ಮತ್ತು ಪ್ರವಾದಿಗಳೂ ಸತ್ತರು, ಆದರೆ ನೀನು ‘ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ’ ಎಂದು ಹೇಳುತ್ತೀಯಲ್ಲಾ? (aiōn g165)
यिहूदीयास्तमवदन् त्वं भूतग्रस्त इतीदानीम् अवैष्म। इब्राहीम् भविष्यद्वादिनञ्च सर्व्वे मृताः किन्तु त्वं भाषसे यो नरो मम भारतीं गृह्लाति स जातु निधानास्वादं न लप्स्यते। (aiōn g165)
53 ೫೩ ಸತ್ತುಹೋದ ನಮ್ಮ ತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೋ? ಪ್ರವಾದಿಗಳೂ ಸತ್ತುಹೋದರು, ನಿನ್ನನ್ನೇ ನೀನು ಯಾರೆಂದು ಭಾವಿಸಿಕೊಳ್ಳುತ್ತಿದ್ದೀ?” ಎಂದು ಕೇಳಿದರು.
तर्हि त्वं किम् अस्माकं पूर्व्वपुरुषाद् इब्राहीमोपि महान्? यस्मात् सोपि मृतः भविष्यद्वादिनोपि मृताः त्वं स्वं कं पुमांसं मनुषे?
54 ೫೪ ಯೇಸು “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆಯು ಏನೂ ಅಲ್ಲ. ನನ್ನನ್ನು ಮಹಿಮೆಪಡಿಸುವವನು ನನ್ನ ತಂದೆಯೇ, ನೀವು ಆತನನ್ನು ನಿಮ್ಮ ದೇವರು ಅನ್ನುತ್ತೀರಿ,
यीशुः प्रत्यवोचद् यद्यहं स्वं स्वयं सम्मन्ये तर्हि मम तत् सम्मननं किमपि न किन्तु मम तातो यं यूयं स्वीयम् ईश्वरं भाषध्वे सएव मां सम्मनुते।
55 ೫೫ ಆದರೂ ನೀವು ಆತನನ್ನು ತಿಳಿಯದೆ ಇದ್ದೀರಿ. ನಾನಂತೂ ಆತನನ್ನು ಬಲ್ಲೆನು, ಆತನನ್ನು ಅರಿಯೆನೆಂದು ಹೇಳಿದರೆ ನಿಮ್ಮ ಹಾಗೆ ಸುಳ್ಳುಗಾರನಾಗುವೆನು. ಆದರೆ ನಾನು ಆತನನ್ನು ತಿಳಿದಿದ್ದೇನೆ. ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ.
यूयं तं नावगच्छथ किन्त्वहं तमवगच्छामि तं नावगच्छामीति वाक्यं यदि वदामि तर्हि यूयमिव मृषाभाषी भवामि किन्त्वहं तमवगच्छामि तदाक्षामपि गृह्लामि।
56 ೫೬ ನಿಮ್ಮ ಮೂಲಪುರುಷನಾದ ಅಬ್ರಹಾಮನು ನನ್ನ ದಿನವನ್ನು ತಾನು ನೋಡುತ್ತೇನೆಂದು ಉಲ್ಲಾಸಪಟ್ಟನು ಮತ್ತು ಅದನ್ನು ನೋಡಿ ಸಂತೋಷಪಟ್ಟನು” ಎಂದು ಹೇಳಿದನು.
युष्माकं पूर्व्वपुरुष इब्राहीम् मम समयं द्रष्टुम् अतीवावाञ्छत् तन्निरीक्ष्यानन्दच्च।
57 ೫೭ ಅದಕ್ಕೆ ಯೆಹೂದ್ಯರು, “ನಿನಗೆ ಇನ್ನೂ ಐವತ್ತು ವರ್ಷವಾಗಿಲ್ಲ, ನೀನು ಅಬ್ರಹಾಮನನ್ನು ನೋಡಿದ್ದೀಯಾ?” ಅಂದರು.
तदा यिहूदीया अपृच्छन् तव वयः पञ्चाशद्वत्सरा न त्वं किम् इब्राहीमम् अद्राक्षीः?
58 ೫೮ ಯೇಸು, “ನಿಮಗೆ ನಾನು ನಿಜನಿಜವಾಗಿ ಹೇಳುತ್ತೇನೆ; ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ” ಎಂದನು.
यीशुः प्रत्यवादीद् युष्मानहं यथार्थतरं वदामि इब्राहीमो जन्मनः पूर्व्वकालमारभ्याहं विद्ये।
59 ೫೯ ಆಗ ಅವರು ಆತನ ಮೇಲೆ ಎಸೆಯಲು, ಕಲ್ಲುಗಳನ್ನು ಎತ್ತಿಕೊಂಡರು. ಆದರೆ ಯೇಸು ಮರೆಯಾಗಿ ದೇವಾಲಯದೊಳಗಿನಿಂದ ಹೊರಗೆ ಹೊರಟು ಹೋದನು.
तदा ते पाषाणान् उत्तोल्य तमाहन्तुम् उदयच्छन् किन्तु यीशु र्गुप्तो मन्तिराद् बहिर्गत्य तेषां मध्येन प्रस्थितवान्।

< ಯೋಹಾನನು 8 >