< ಯೋಹಾನನು 18 >

1 ಯೇಸು ಈ ಮಾತುಗಳನ್ನಾಡಿದ ಮೇಲೆ ತನ್ನ ಶಿಷ್ಯರ ಜೊತೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಆತನೂ, ಆತನ ಶಿಷ್ಯರೂ ಅಲ್ಲಿದ್ದ ಒಂದು ತೋಟದೊಳಗೆ ಪ್ರವೇಶಿಸಿದರು.
tāḥ kathāḥ kathayitvā yīśuḥ śiṣyānādāya kidrōnnāmakaṁ srōta uttīryya śiṣyaiḥ saha tatratyōdyānaṁ prāviśat|
2 ಆತನನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು ಏಕೆಂದರೆ, ಆಗಾಗ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಸೇರಿಬರುತ್ತಿದ್ದರು.
kintu viśvāsaghātiyihūdāstat sthānaṁ paricīyatē yatō yīśuḥ śiṣyaiḥ sārddhaṁ kadācit tat sthānam agacchat|
3 ಹೀಗಿರಲಾಗಿ ಯೂದನು ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಸೈನಿಕರ ಗುಂಪನ್ನೂ, ಕಾವಲಾಳುಗಳನ್ನೂ ಕರೆದುಕೊಂಡು ದೀಪಗಳನ್ನೂ, ಪಂಜುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಅಲ್ಲಿಗೆ ಬಂದನು.
tadā sa yihūdāḥ sainyagaṇaṁ pradhānayājakānāṁ phirūśināñca padātigaṇañca gr̥hītvā pradīpān ulkān astrāṇi cādāya tasmin sthāna upasthitavān|
4 ಆಗ ಯೇಸು ತನಗೆ ಸಂಭವಿಸಲಿರುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಿದನು.
svaṁ prati yad ghaṭiṣyatē taj jñātvā yīśuragrēsaraḥ san tānapr̥cchat kaṁ gavēṣayatha?
5 ಅದಕ್ಕೆ ಅವರು, “ನಜರೇತಿನ ಯೇಸುವನ್ನು ಹುಡುಕುತ್ತಿದ್ದೇವೆ” ಎಂದರು. ಯೇಸು ಅವರಿಗೆ “ನಾನೇ ಆತನು” ಎಂದು ಹೇಳಿದನು. ಆತನನ್ನು ಹಿಡಿದು ಕೊಡುವ ಯೂದನು ಸಹ ಅವರ ಜೊತೆಯಲ್ಲಿ ನಿಂತಿದ್ದನು.
tē pratyavadan, nāsaratīyaṁ yīśuṁ; tatō yīśuravādīd ahamēva saḥ; taiḥ saha viśvāsaghātī yihūdāścātiṣṭhat|
6 ಆತನು ಅವರಿಗೆ “ನಾನೇ ಆತನು” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.
tadāhamēva sa tasyaitāṁ kathāṁ śrutvaiva tē paścādētya bhūmau patitāḥ|
7 ಆಗ ಆತನು ಪುನಃ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು ಹುಡುಕುತ್ತೇವೆ” ಎಂದರು.
tatō yīśuḥ punarapi pr̥ṣṭhavān kaṁ gavēṣayatha? tatastē pratyavadan nāsaratīyaṁ yīśuṁ|
8 ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಹೋಗಲುಬಿಡಿರಿ” ಎಂದನು.
tadā yīśuḥ pratyuditavān ahamēva sa imāṁ kathāmacakatham; yadi māmanvicchatha tarhīmān gantuṁ mā vārayata|
9 ಹೀಗೆ “ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳೆದುಕೊಳ್ಳಲಿಲ್ಲ” ಎಂದು ತಾನೇ ಹೇಳಿದ ಮಾತು ನೆರವೇರಿತು.
itthaṁ bhūtē mahyaṁ yāllōkān adadāstēṣām ēkamapi nāhārayam imāṁ yāṁ kathāṁ sa svayamakathayat sā kathā saphalā jātā|
10 ೧೦ ಸೀಮೋನ್ ಪೇತ್ರನ ಬಳಿಯಲ್ಲಿ ಒಂದು ಕತ್ತಿ ಇತ್ತು; ಆಗ ಅದನ್ನು ಅವನು ಹೊರಕ್ಕೆ ಎಳೆದುಕೊಂಡು, ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಆಳಿನ ಹೆಸರು ಮಲ್ಕನು.
tadā śimōnpitarasya nikaṭē khaṅgalsthitēḥ sa taṁ niṣkōṣaṁ kr̥tvā mahāyājakasya mālkhanāmānaṁ dāsam āhatya tasya dakṣiṇakarṇaṁ chinnavān|
11 ೧೧ ಆಗ ಯೇಸು ಪೇತ್ರನಿಗೆ, “ಕತ್ತಿಯನ್ನುಒರೆಯಲ್ಲಿ ಹಾಕು. ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ಎಂದು ಹೇಳಿದನು.
tatō yīśuḥ pitaram avadat, khaṅgaṁ kōṣē sthāpaya mama pitā mahyaṁ pātuṁ yaṁ kaṁsam adadāt tēnāhaṁ kiṁ na pāsyāmi?
12 ೧೨ ಆಮೇಲೆ ಆ ಸೈನಿಕರ ಗುಂಪು ಮತ್ತು ಸಹಸ್ರಾಧಿಪತಿಯೂ, ಯೆಹೂದ್ಯರ ಓಲೇಕಾರರೂ ಯೇಸುವನ್ನು ಹಿಡಿದು ಕಟ್ಟಿದರು.
tadā sainyagaṇaḥ sēnāpati ryihūdīyānāṁ padātayaśca yīśuṁ ghr̥tvā baddhvā hānannāmnaḥ kiyaphāḥ śvaśurasya samīpaṁ prathamam anayan|
13 ೧೩ ಆತನನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.
sa kiyaphāstasmin vatsarē mahāyājatvapadē niyuktaḥ
14 ೧೪ ಆ ಕಾಯಫನೇ, ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವುದು ಹಿತ ಎಂದು ಯೆಹೂದ್ಯರಿಗೆ ಸಲಹೆ ಕೊಟ್ಟವನು.
san sādhāraṇalōkānāṁ maṅgalārtham ēkajanasya maraṇamucitam iti yihūdīyaiḥ sārddham amantrayat|
15 ೧೫ ಸೀಮೋನ್ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಯೇಸುವನ್ನು ಹಿಂಬಾಲಿಸಿದರು. ಆ ಶಿಷ್ಯನಿಗೆ ಮಹಾಯಾಜಕನ ಪರಿಚಯವಿದ್ದುದರಿಂದ ಯೇಸುವಿನ ಜೊತೆ ಮಹಾಯಾಜಕನ ಅಂಗಳದೊಳಗೆ ಹೋದನು.
tadā śimōnpitarō'nyaikaśiṣyaśca yīśōḥ paścād agacchatāṁ tasyānyaśiṣyasya mahāyājakēna paricitatvāt sa yīśunā saha mahāyājakasyāṭṭālikāṁ prāviśat|
16 ೧೬ ಆದರೆ ಪೇತ್ರನು ಹೊರಗೆ ಬಾಗಿಲಿನ ಬಳಿಯಲ್ಲಿ ನಿಂತಿದ್ದನು. ಮಹಾಯಾಜಕನ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.
kintu pitarō bahirdvārasya samīpē'tiṣṭhad ataēva mahāyājakēna paricitaḥ sa śiṣyaḥ punarbahirgatvā dauvāyikāyai kathayitvā pitaram abhyantaram ānayat|
17 ೧೭ ಆಗ ದ್ವಾರಪಾಲಕಿಯು, “ನೀನು ಸಹ ಆ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಪೇತ್ರನನ್ನು ಕೇಳಲು, ಅವನು, “ನಾನಲ್ಲ” ಎಂದನು.
tadā sa dvārarakṣikā pitaram avadat tvaṁ kiṁ na tasya mānavasya śiṣyaḥ? tataḥ sōvadad ahaṁ na bhavāmi|
18 ೧೮ ಚಳಿಯಿದ್ದುದರಿಂದ ಆಳುಗಳೂ, ಓಲೇಕಾರರೂ ಇದ್ದಲಿನ ಬೆಂಕಿ ಮಾಡಿ ಚಳಿ ಕಾಯಿಸಿಕೊಳ್ಳುತ್ತಾ ನಿಂತಿರಲಾಗಿ; ಪೇತ್ರನೂ ಅವರ ಜೊತೆಯಲ್ಲಿ ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದನು.
tataḥ paraṁ yatsthānē dāsāḥ padātayaśca śītahētōraṅgārai rvahniṁ prajvālya tāpaṁ sēvitavantastatsthānē pitarastiṣṭhan taiḥ saha vahnitāpaṁ sēvitum ārabhata|
19 ೧೯ ಅಷ್ಟರೊಳಗೆ ಮಹಾಯಾಜಕನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಆತನ ಉಪದೇಶದ ವಿಷಯವಾಗಿಯೂ ವಿಚಾರಿಸಿದನು.
tadā śiṣyēṣūpadēśē ca mahāyājakēna yīśuḥ pr̥ṣṭaḥ
20 ೨೦ ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿ ಬರುವ ಸಭಾಮಂದಿರಗಳಲ್ಲಿಯೂ, ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸಿದ್ದೇನೆ, ಗುಪ್ತವಾಗಿ ಯಾವುದನ್ನೂ ನಾನು ಮಾತನಾಡಲಿಲ್ಲ.
san pratyuktavān sarvvalōkānāṁ samakṣaṁ kathāmakathayaṁ guptaṁ kāmapi kathāṁ na kathayitvā yat sthānaṁ yihūdīyāḥ satataṁ gacchanti tatra bhajanagēhē mandirē cāśikṣayaṁ|
21 ೨೧ ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತನಾಡಿದೆನೋ ಅದನ್ನು ಕೇಳಿದವರನ್ನೇ ವಿಚಾರಿಸು. ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ” ಎಂದು ಉತ್ತರಕೊಟ್ಟನು.
mattaḥ kutaḥ pr̥cchasi? yē janā madupadēśam aśr̥ṇvan tānēva pr̥ccha yadyad avadaṁ tē tat jāninta|
22 ೨೨ ಯೇಸು ಈ ಮಾತನ್ನು ಹೇಳಿದಾಗ ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ತನ್ನ ಕೈಯಿಂದ ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು.
tadētthaṁ pratyuditatvāt nikaṭasthapadāti ryīśuṁ capēṭēnāhatya vyāharat mahāyājakam ēvaṁ prativadasi?
23 ೨೩ ಯೇಸು ಅವನಿಗೆ “ನಾನು ಏನಾದರೂ ತಪ್ಪನ್ನು ಮಾತನಾಡಿದ್ದರೆ, ಆ ತಪ್ಪಿನ ವಿಷಯವಾಗಿ ಸಾಕ್ಷಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದು ಕೇಳಿದನು.
tatō yīśuḥ pratigaditavān yadyayathārtham acakathaṁ tarhi tasyāyathārthasya pramāṇaṁ dēhi, kintu yadi yathārthaṁ tarhi kutō hētō rmām atāḍayaḥ?
24 ೨೪ ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.
pūrvvaṁ hānan sabandhanaṁ taṁ kiyaphāmahāyājakasya samīpaṁ praiṣayat|
25 ೨೫ ಇತ್ತ, ಸೀಮೋನ್ ಪೇತ್ರನು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು, “ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅವನು ಅದನ್ನು ನಿರಾಕರಿಸಿ, “ನಾನಲ್ಲ” ಎಂದನು.
śimōnpitarastiṣṭhan vahnitāpaṁ sēvatē, ētasmin samayē kiyantastam apr̥cchan tvaṁ kim ētasya janasya śiṣyō na? tataḥ sōpahnutyābravīd ahaṁ na bhavāmi|
26 ೨೬ ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು, ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಜೊತೆಯಲ್ಲಿ ನೋಡಿದೆನಲ್ಲವೇ?” ಎಂದನು.
tadā mahāyājakasya yasya dāsasya pitaraḥ karṇamacchinat tasya kuṭumbaḥ pratyuditavān udyānē tēna saha tiṣṭhantaṁ tvāṁ kiṁ nāpaśyaṁ?
27 ೨೭ ಅದಕ್ಕೆ ಪೇತ್ರನು ಪುನಃ ನಿರಾಕರಿಸಿ “ನಾನಲ್ಲ” ಎಂದನು. ಆಗ ಕೂಡಲೇ ಕೋಳಿ ಕೂಗಿತು.
kintu pitaraḥ punarapahnutya kathitavān; tadānīṁ kukkuṭō'raut|
28 ೨೮ ಮುಂಜಾನೆ ಅವರು ಯೇಸುವನ್ನು ಕಾಯಫನ ಬಳಿಯಿಂದ ಅರಮನೆಗೆ ಕರೆದುಕೊಂಡು ಹೋದರು. ಅವರು ತಮಗೆ ಮೈಲಿಗೆಯಾಗಿ ಪಸ್ಕದ ಊಟ ಮಾಡುವುದಕ್ಕೆ ಅಡ್ಡಿಯಾದೀತೆಂದು ಅರಮನೆಯ ಒಳಗೆ ಹೋಗಲಿಲ್ಲ.
tadanantaraṁ pratyūṣē tē kiyaphāgr̥hād adhipatē rgr̥haṁ yīśum anayan kintu yasmin aśucitvē jātē tai rnistārōtsavē na bhōktavyaṁ, tasya bhayād yihūdīyāstadgr̥haṁ nāviśan|
29 ೨೯ ಹೀಗಿರಲಾಗಿ ಪಿಲಾತನು ಹೊರಗೆ ಅವರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದನು.
aparaṁ pīlātō bahirāgatya tān pr̥ṣṭhavān ētasya manuṣyasya kaṁ dōṣaṁ vadatha?
30 ೩೦ ಯೆಹೂದ್ಯರು ಅವನಿಗೆ, “ಈತನು ದುಷ್ಕರ್ಮಿಯಲ್ಲದಿದ್ದರೆ ನಾವು ಈತನನ್ನು ನಿನಗೆ ಒಪ್ಪಿಸಿ ಕೊಡುತ್ತಿರಲಿಲ್ಲ” ಎಂದು ಉತ್ತರಕೊಟ್ಟರು.
tadā tē pētyavadan duṣkarmmakāriṇi na sati bhavataḥ samīpē nainaṁ samārpayiṣyāmaḥ|
31 ೩೧ ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಆತನಿಗೆ ತೀರ್ಪು ಮಾಡಿರಿ” ಎಂದು ಹೇಳಿದನು. ಅದಕ್ಕೆ ಯೆಹೂದ್ಯರು, “ಮರಣ ದಂಡನೆಯನ್ನು ವಿಧಿಸುವ ಅಧಿಕಾರವು ನಮಗೆ ಇಲ್ಲ” ಎಂದರು.
tataḥ pīlātō'vadad yūyamēnaṁ gr̥hītvā svēṣāṁ vyavasthayā vicārayata| tadā yihūdīyāḥ pratyavadan kasyāpi manuṣyasya prāṇadaṇḍaṁ karttuṁ nāsmākam adhikārō'sti|
32 ೩೨ ಇದರಿಂದ ಯೇಸು ತಾನು ಎಂಥಾ ಮರಣವನ್ನು ಹೊಂದುವನೆಂದು ಸೂಚಿಸಿ ಹೇಳಿದ ಮಾತು ನೆರವೇರಿತು.
ēvaṁ sati yīśuḥ svasya mr̥tyau yāṁ kathāṁ kathitavān sā saphalābhavat|
33 ೩೩ ಆಗ ಪಿಲಾತನು ಪುನಃ ಅರಮನೆಯೊಳಗೆ ಹೋಗಿ ಯೇಸುವನ್ನು ಕರೆದು ಆತನಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.
tadanantaraṁ pīlātaḥ punarapi tad rājagr̥haṁ gatvā yīśumāhūya pr̥ṣṭavān tvaṁ kiṁ yihūdīyānāṁ rājā?
34 ೩೪ ಯೇಸು, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೇ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೋ?” ಎಂದನು.
yīśuḥ pratyavadat tvam ētāṁ kathāṁ svataḥ kathayasi kimanyaḥ kaścin mayi kathitavān?
35 ೩೫ ಪಿಲಾತನು, “ನಾನೇನು ಯೆಹೂದ್ಯನೋ? ನಿನ್ನ ಸ್ವಂತ ಜನಾಂಗವೂ, ಮುಖ್ಯಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದ್ದಕ್ಕೆ,
pīlātō'vadad ahaṁ kiṁ yihūdīyaḥ? tava svadēśīyā viśēṣataḥ pradhānayājakā mama nikaṭē tvāṁ samārpayana, tvaṁ kiṁ kr̥tavān?
36 ೩೬ ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ. ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಗೆ ಒಪ್ಪಿಸಲ್ಪಡದಂತೆ ನನ್ನ ಸೇವಕರು ನನ್ನ ಪರವಾಗಿ ಹೋರಾಡುತ್ತಿದ್ದರು, ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ” ಎಂದು ಉತ್ತರಕೊಟ್ಟನು.
yīśuḥ pratyavadat mama rājyam ētajjagatsambandhīyaṁ na bhavati yadi mama rājyaṁ jagatsambandhīyam abhaviṣyat tarhi yihūdīyānāṁ hastēṣu yathā samarpitō nābhavaṁ tadarthaṁ mama sēvakā ayōtsyan kintu mama rājyam aihikaṁ na|
37 ೩೭ ಅದಕ್ಕೆ ಪಿಲಾತನು, “ಹಾಗಾದರೆ ನೀನು ಅರಸನೋ?” ಎಂದನು. ಯೇಸು, “ನನ್ನನ್ನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿದವನು, ಇದಕ್ಕಾಗಿಯೇ ಲೋಕಕ್ಕೆ ಬಂದಿದ್ದೇನೆ. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನು ನನ್ನ ಸ್ವರವನ್ನು ಕೇಳುತ್ತಾನೆ” ಎಂದು ಉತ್ತರಕೊಟ್ಟನು.
tadā pīlātaḥ kathitavān, tarhi tvaṁ rājā bhavasi? yīśuḥ pratyuktavān tvaṁ satyaṁ kathayasi, rājāhaṁ bhavāmi; satyatāyāṁ sākṣyaṁ dātuṁ janiṁ gr̥hītvā jagatyasmin avatīrṇavān, tasmāt satyadharmmapakṣapātinō mama kathāṁ śr̥ṇvanti|
38 ೩೮ ಪಿಲಾತನು, “ಸತ್ಯ ಎಂದರೇನು?” ಎಂದನು. ಇದನ್ನು ಹೇಳಿ ಪಿಲಾತನು ಪುನಃ ಯೆಹೂದ್ಯರ ಬಳಿ ಹೊರಗೆ ಬಂದು, “ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುತ್ತಿಲ್ಲ.
tadā satyaṁ kiṁ? ētāṁ kathāṁ paṣṭvā pīlātaḥ punarapi bahirgatvā yihūdīyān abhāṣata, ahaṁ tasya kamapyaparādhaṁ na prāpnōmi|
39 ೩೯ ಆದರೆ ಪಸ್ಕ ಹಬ್ಬದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟು ಕೊಡುವ ಪದ್ಧತಿ ಉಂಟಷ್ಟೆ. ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟು ಕೊಡುವುದು ನಿಮಗೆ ಇಷ್ಟವೋ?” ಎಂದು ಅವರನ್ನು ಕೇಳಿದನು.
nistārōtsavasamayē yuṣmābhirabhirucita ēkō janō mayā mōcayitavya ēṣā yuṣmākaṁ rītirasti, ataēva yuṣmākaṁ nikaṭē yihūdīyānāṁ rājānaṁ kiṁ mōcayāmi, yuṣmākam icchā kā?
40 ೪೦ ಅದಕ್ಕೆ ಅವರೆಲ್ಲರೂ, “ಆತನನ್ನು ಬೇಡ ನಮಗೆ ಬರಬ್ಬನನ್ನು ಬಿಟ್ಟುಕೊಡಬೇಕು” ಎಂದು ಪುನಃ ಕೂಗಿಕೊಂಡರು. ಈ ಬರಬ್ಬನು ದರೋಡೆಗಾರನಾಗಿದ್ದನು.
tadā tē sarvvē ruvantō vyāharan ēnaṁ mānuṣaṁ nahi barabbāṁ mōcaya| kintu sa barabbā dasyurāsīt|

< ಯೋಹಾನನು 18 >