< ಯೋಹಾನನು 14 >

1 “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
ಮನೋದುಃಖಿನೋ ಮಾ ಭೂತ; ಈಶ್ವರೇ ವಿಶ್ವಸಿತ ಮಯಿ ಚ ವಿಶ್ವಸಿತ|
2 ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಾನಗಳಿವೆ, ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು. ನಾನು ನಿಮಗಾಗಿ ಸ್ಥಳವನ್ನು ಸಿದ್ಧಮಾಡುವುದಕ್ಕೆ ಹೋಗುತ್ತೇನಲ್ಲಾ!
ಮಮ ಪಿತು ಗೃಹೇ ಬಹೂನಿ ವಾಸಸ್ಥಾನಿ ಸನ್ತಿ ನೋ ಚೇತ್ ಪೂರ್ವ್ವಂ ಯುಷ್ಮಾನ್ ಅಜ್ಞಾಪಯಿಷ್ಯಂ ಯುಷ್ಮದರ್ಥಂ ಸ್ಥಾನಂ ಸಜ್ಜಯಿತುಂ ಗಚ್ಛಾಮಿ|
3 ನಾನು ಹೋಗಿ ನಿಮಗಾಗಿ ಸ್ಥಳವನ್ನು ಸಿದ್ಧಪಡಿಸಿದ ಮೇಲೆ, ಪುನಃ ಬಂದು ನಿಮ್ಮನ್ನುನನ್ನ ಬಳಿಗೆ ಸೇರಿಸಿಕೊಳ್ಳುವೆನು. ಏಕೆಂದರೆ, ನಾನಿರುವಲ್ಲಿ ನೀವು ಸಹ ಇರಬೇಕು.
ಯದಿ ಗತ್ವಾಹಂ ಯುಷ್ಮನ್ನಿಮಿತ್ತಂ ಸ್ಥಾನಂ ಸಜ್ಜಯಾಮಿ ತರ್ಹಿ ಪನರಾಗತ್ಯ ಯುಷ್ಮಾನ್ ಸ್ವಸಮೀಪಂ ನೇಷ್ಯಾಮಿ, ತತೋ ಯತ್ರಾಹಂ ತಿಷ್ಠಾಮಿ ತತ್ರ ಯೂಯಮಪಿ ಸ್ಥಾಸ್ಯಥ|
4 ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದಿದೆ” ಎಂದನು.
ಅಹಂ ಯತ್ಸ್ಥಾನಂ ಬ್ರಜಾಮಿ ತತ್ಸ್ಥಾನಂ ಯೂಯಂ ಜಾನೀಥ ತಸ್ಯ ಪನ್ಥಾನಮಪಿ ಜಾನೀಥ|
5 ತೋಮನು ಆತನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ ಎಂಬುದೇ ನಮಗೆ ತಿಳಿಯದು, ಮತ್ತೆ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಲು,
ತದಾ ಥೋಮಾ ಅವದತ್, ಹೇ ಪ್ರಭೋ ಭವಾನ್ ಕುತ್ರ ಯಾತಿ ತದ್ವಯಂ ನ ಜಾನೀಮಃ, ತರ್ಹಿ ಕಥಂ ಪನ್ಥಾನಂ ಜ್ಞಾತುಂ ಶಕ್ನುಮಃ?
6 ಯೇಸು ಅವನಿಗೆ, “ನಾನೇ ಮಾರ್ಗವೂ, ಸತ್ಯವೂ ಮತ್ತುಜೀವವೂ ಆಗಿದ್ದೇನೆ. ನನ್ನ ಮೂಲಕವಲ್ಲದೆ ಯಾರೂ ತಂದೆಯ ಬಳಿಗೆ ಬರಲಾರರು.
ಯೀಶುರಕಥಯದ್ ಅಹಮೇವ ಸತ್ಯಜೀವನರೂಪಪಥೋ ಮಯಾ ನ ಗನ್ತಾ ಕೋಪಿ ಪಿತುಃ ಸಮೀಪಂ ಗನ್ತುಂ ನ ಶಕ್ನೋತಿ|
7 ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿಯುತ್ತಿದ್ದಿರಿ. ಈಗಿನಿಂದ ನೀವು ಆತನನ್ನು ತಿಳಿದಿದ್ದೀರಿ ಮತ್ತು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.
ಯದಿ ಮಾಮ್ ಅಜ್ಞಾಸ್ಯತ ತರ್ಹಿ ಮಮ ಪಿತರಮಪ್ಯಜ್ಞಾಸ್ಯತ ಕಿನ್ತ್ವಧುನಾತಸ್ತಂ ಜಾನೀಥ ಪಶ್ಯಥ ಚ|
8 ಫಿಲಿಪ್ಪನು, “ಕರ್ತನೇ, ನಮಗೆ ತಂದೆಯನ್ನು ತೋರಿಸು ನಮಗೆ ಅಷ್ಟೇ ಸಾಕು” ಎಂದನು.
ತದಾ ಫಿಲಿಪಃ ಕಥಿತವಾನ್, ಹೇ ಪ್ರಭೋ ಪಿತರಂ ದರ್ಶಯ ತಸ್ಮಾದಸ್ಮಾಕಂ ಯಥೇಷ್ಟಂ ಭವಿಷ್ಯತಿ|
9 ಯೇಸು ಅವನಿಗೆ, “ಫಿಲಿಪ್ಪನೇ, ನಾನು ಇಷ್ಟು ಕಾಲ ನಿಮ್ಮ ಜೊತೆಯಲ್ಲಿಯೇ ಇದ್ದರೂ ಇನ್ನೂ ನೀನು ನನ್ನನ್ನು ತಿಳಿಯಲಿಲ್ಲವೇ! ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ, ಮತ್ತು ನಮಗೆ ತಂದೆಯನ್ನು ತೋರಿಸು ಎಂದು ನೀನು ಹೇಳುವುದಾದರು ಹೇಗೆ?
ತತೋ ಯೀಶುಃ ಪ್ರತ್ಯಾವಾದೀತ್, ಹೇ ಫಿಲಿಪ ಯುಷ್ಮಾಭಿಃ ಸಾರ್ದ್ಧಮ್ ಏತಾವದ್ದಿನಾನಿ ಸ್ಥಿತಮಪಿ ಮಾಂ ಕಿಂ ನ ಪ್ರತ್ಯಭಿಜಾನಾಸಿ? ಯೋ ಜನೋ ಮಾಮ್ ಅಪಶ್ಯತ್ ಸ ಪಿತರಮಪ್ಯಪಶ್ಯತ್ ತರ್ಹಿ ಪಿತರಮ್ ಅಸ್ಮಾನ್ ದರ್ಶಯೇತಿ ಕಥಾಂ ಕಥಂ ಕಥಯಸಿ?
10 ೧೦ ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂಬುದನ್ನು ನೀನು ನಂಬುವುದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವುದಿಲ್ಲ; ತಂದೆಯು ನನ್ನಲ್ಲಿ ಇದ್ದುಕೊಂಡು ತನ್ನ ಕಾರ್ಯಗಳನ್ನು ಮಾಡುತ್ತಾನೆ.
ಅಹಂ ಪಿತರಿ ತಿಷ್ಠಾಮಿ ಪಿತಾ ಮಯಿ ತಿಷ್ಠತೀತಿ ಕಿಂ ತ್ವಂ ನ ಪ್ರತ್ಯಷಿ? ಅಹಂ ಯದ್ವಾಕ್ಯಂ ವದಾಮಿ ತತ್ ಸ್ವತೋ ನ ವದಾಮಿ ಕಿನ್ತು ಯಃ ಪಿತಾ ಮಯಿ ವಿರಾಜತೇ ಸ ಏವ ಸರ್ವ್ವಕರ್ಮ್ಮಾಣಿ ಕರಾತಿ|
11 ೧೧ ನಾನು ತಂದೆಯಲ್ಲಿಯೂ, ತಂದೆಯು ನನ್ನಲ್ಲಿಯೂ ಇದ್ದಾನೆಂದು ತಿಳಿದು ನೀವು ನನ್ನನ್ನು ನಂಬಿರಿ. ಇಲ್ಲವೇ ನಾನು ಮಾಡಿದ ಕಾರ್ಯಗಳ ನಿಮಿತ್ತದಿಂದಾದರೂ ನೀವು ನನ್ನನ್ನು ನಂಬಿರಿ.
ಅತಏವ ಪಿತರ್ಯ್ಯಹಂ ತಿಷ್ಠಾಮಿ ಪಿತಾ ಚ ಮಯಿ ತಿಷ್ಠತಿ ಮಮಾಸ್ಯಾಂ ಕಥಾಯಾಂ ಪ್ರತ್ಯಯಂ ಕುರುತ, ನೋ ಚೇತ್ ಕರ್ಮ್ಮಹೇತೋಃ ಪ್ರತ್ಯಯಂ ಕುರುತ|
12 ೧೨ “ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನನ್ನನ್ನು ನಂಬುವವನು ನಾನು ಮಾಡುವ ಕಾರ್ಯಗಳನ್ನು ತಾನು ಸಹ ಮಾಡುತ್ತಾನೆ; ಮತ್ತು ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಮಾಡುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.
ಅಹಂ ಯುಷ್ಮಾನತಿಯಥಾರ್ಥಂ ವದಾಮಿ, ಯೋ ಜನೋ ಮಯಿ ವಿಶ್ವಸಿತಿ ಸೋಹಮಿವ ಕರ್ಮ್ಮಾಣಿ ಕರಿಷ್ಯತಿ ವರಂ ತತೋಪಿ ಮಹಾಕರ್ಮ್ಮಾಣಿ ಕರಿಷ್ಯತಿ ಯತೋ ಹೇತೋರಹಂ ಪಿತುಃ ಸಮೀಪಂ ಗಚ್ಛಾಮಿ|
13 ೧೩ ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನು ನಾನು ನೆರವೇರಿಸುವೆನು. ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವುದು.
ಯಥಾ ಪುತ್ರೇಣ ಪಿತು ರ್ಮಹಿಮಾ ಪ್ರಕಾಶತೇ ತದರ್ಥಂ ಮಮ ನಾಮ ಪ್ರೋಚ್ಯ ಯತ್ ಪ್ರಾರ್ಥಯಿಷ್ಯಧ್ವೇ ತತ್ ಸಫಲಂ ಕರಿಷ್ಯಾಮಿ|
14 ೧೪ ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ನಾನು ಅದನ್ನು ನೆರವೇರಿಸುವೆನು.
ಯದಿ ಮಮ ನಾಮ್ನಾ ಯತ್ ಕಿಞ್ಚಿದ್ ಯಾಚಧ್ವೇ ತರ್ಹಿ ತದಹಂ ಸಾಧಯಿಷ್ಯಾಮಿ|
15 ೧೫ “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ.
ಯದಿ ಮಯಿ ಪ್ರೀಯಧ್ವೇ ತರ್ಹಿ ಮಮಾಜ್ಞಾಃ ಸಮಾಚರತ|
16 ೧೬ ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು, ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕಳುಹಿಸಿ ಕೊಡುವನು. (aiōn g165)
ತತೋ ಮಯಾ ಪಿತುಃ ಸಮೀಪೇ ಪ್ರಾರ್ಥಿತೇ ಪಿತಾ ನಿರನ್ತರಂ ಯುಷ್ಮಾಭಿಃ ಸಾರ್ದ್ಧಂ ಸ್ಥಾತುಮ್ ಇತರಮೇಕಂ ಸಹಾಯಮ್ ಅರ್ಥಾತ್ ಸತ್ಯಮಯಮ್ ಆತ್ಮಾನಂ ಯುಷ್ಮಾಕಂ ನಿಕಟಂ ಪ್ರೇಷಯಿಷ್ಯತಿ| (aiōn g165)
17 ೧೭ ಆ ಸಹಾಯಕನು ಯಾರೆಂದರೆಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ, ತಿಳಿಯದೆಯೂ ಇರುವುದರಿಂದ ಆತನನ್ನು ಸ್ವೀಕರಿಸಲಾರದು. ನೀವು ಆತನನ್ನು ಬಲ್ಲಿರಿ, ಹೇಗೆಂದರೆ ಆತನು ನಿಮ್ಮೊಂದಿಗೆ ವಾಸಮಾಡುತ್ತಾನೆ ಮತ್ತು ನಿಮ್ಮೊಳಗೆ ಇರುವನು.
ಏತಜ್ಜಗತೋ ಲೋಕಾಸ್ತಂ ಗ್ರಹೀತುಂ ನ ಶಕ್ನುವನ್ತಿ ಯತಸ್ತೇ ತಂ ನಾಪಶ್ಯನ್ ನಾಜನಂಶ್ಚ ಕಿನ್ತು ಯೂಯಂ ಜಾನೀಥ ಯತೋ ಹೇತೋಃ ಸ ಯುಷ್ಮಾಕಮನ್ತ ರ್ನಿವಸತಿ ಯುಷ್ಮಾಕಂ ಮಧ್ಯೇ ಸ್ಥಾಸ್ಯತಿ ಚ|
18 ೧೮ “ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ, ನಿಮ್ಮ ಬಳಿಗೆ ಬರುತ್ತೇನೆ.
ಅಹಂ ಯುಷ್ಮಾನ್ ಅನಾಥಾನ್ ಕೃತ್ವಾ ನ ಯಾಸ್ಯಾಮಿ ಪುನರಪಿ ಯುಷ್ಮಾಕಂ ಸಮೀಪಮ್ ಆಗಮಿಷ್ಯಾಮಿ|
19 ೧೯ ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವುದಿಲ್ಲ, ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವು ಜೀವಿಸುವಿರಿ.
ಕಿಯತ್ಕಾಲರತ್ ಪರಮ್ ಅಸ್ಯ ಜಗತೋ ಲೋಕಾ ಮಾಂ ಪುನ ರ್ನ ದ್ರಕ್ಷ್ಯನ್ತಿ ಕಿನ್ತು ಯೂಯಂ ದ್ರಕ್ಷ್ಯಥ; ಅಹಂ ಜೀವಿಷ್ಯಾಮಿ ತಸ್ಮಾತ್ ಕಾರಣಾದ್ ಯೂಯಮಪಿ ಜೀವಿಷ್ಯಥ|
20 ೨೦ ನಾನು ನನ್ನ ತಂದೆಯಲ್ಲಿಯೂ, ನೀವು ನನ್ನಲ್ಲಿಯೂ ಮತ್ತು ನಾನು ನಿಮ್ಮಲ್ಲಿಯೂ ಇರುವುದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ.
ಪಿತರ್ಯ್ಯಹಮಸ್ಮಿ ಮಯಿ ಚ ಯೂಯಂ ಸ್ಥ, ತಥಾಹಂ ಯುಷ್ಮಾಸ್ವಸ್ಮಿ ತದಪಿ ತದಾ ಜ್ಞಾಸ್ಯಥ|
21 ೨೧ ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಪ್ರಕಟಪಡಿಸಿ ತೋರಿಸುವೆನು” ಎಂದು ಹೇಳಿದನು.
ಯೋ ಜನೋ ಮಮಾಜ್ಞಾ ಗೃಹೀತ್ವಾ ತಾ ಆಚರತಿ ಸಏವ ಮಯಿ ಪ್ರೀಯತೇ; ಯೋ ಜನಶ್ಚ ಮಯಿ ಪ್ರೀಯತೇ ಸಏವ ಮಮ ಪಿತುಃ ಪ್ರಿಯಪಾತ್ರಂ ಭವಿಷ್ಯತಿ, ತಥಾಹಮಪಿ ತಸ್ಮಿನ್ ಪ್ರೀತ್ವಾ ತಸ್ಮೈ ಸ್ವಂ ಪ್ರಕಾಶಯಿಷ್ಯಾಮಿ|
22 ೨೨ ಯೂದನು, (ಇವನು ಇಸ್ಕರಿಯೋತನಲ್ಲ) “ಕರ್ತನೇ, ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಮಾತ್ರ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು?” ಎಂದು ಕೇಳಿದನು.
ತದಾ ಈಷ್ಕರಿಯೋತೀಯಾದ್ ಅನ್ಯೋ ಯಿಹೂದಾಸ್ತಮವದತ್, ಹೇ ಪ್ರಭೋ ಭವಾನ್ ಜಗತೋ ಲೋಕಾನಾಂ ಸನ್ನಿಧೌ ಪ್ರಕಾಶಿತೋ ನ ಭೂತ್ವಾಸ್ಮಾಕಂ ಸನ್ನಿಧೌ ಕುತಃ ಪ್ರಕಾಶಿತೋ ಭವಿಷ್ಯತಿ?
23 ೨೩ ಯೇಸು ಅವನಿಗೆ, “ಯಾವನಾದರೂ ನನ್ನನ್ನು ಪ್ರೀತಿಸುವುದಾದರೆ ನನ್ನ ಮಾತಿನಂತೆ ನಡೆಯುವನು. ಅವನನ್ನು ನನ್ನ ತಂದೆಯು ಪ್ರೀತಿಸುವನು ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು, ಅವನೊಂದಿಗೆ ನೆಲೆಸುವೆವು.
ತತೋ ಯೀಶುಃ ಪ್ರತ್ಯುದಿತವಾನ್, ಯೋ ಜನೋ ಮಯಿ ಪ್ರೀಯತೇ ಸ ಮಮಾಜ್ಞಾ ಅಪಿ ಗೃಹ್ಲಾತಿ, ತೇನ ಮಮ ಪಿತಾಪಿ ತಸ್ಮಿನ್ ಪ್ರೇಷ್ಯತೇ, ಆವಾಞ್ಚ ತನ್ನಿಕಟಮಾಗತ್ಯ ತೇನ ಸಹ ನಿವತ್ಸ್ಯಾವಃ|
24 ೨೪ ನನ್ನನ್ನು ಪ್ರೀತಿಸದವನು, ನನ್ನ ಮಾತುಗಳನ್ನು ಕೈಕೊಂಡು ನಡೆಯುವುದಿಲ್ಲ. ನೀವು ಕೇಳಿದ ಮಾತು ನನ್ನದಲ್ಲ. ನನ್ನನ್ನು ಕಳುಹಿಸಿದ ತಂದೆಯದೇ ಆಗಿದೆ.
ಯೋ ಜನೋ ಮಯಿ ನ ಪ್ರೀಯತೇ ಸ ಮಮ ಕಥಾ ಅಪಿ ನ ಗೃಹ್ಲಾತಿ ಪುನಶ್ಚ ಯಾಮಿಮಾಂ ಕಥಾಂ ಯೂಯಂ ಶೃಣುಥ ಸಾ ಕಥಾ ಕೇವಲಸ್ಯ ಮಮ ನ ಕಿನ್ತು ಮಮ ಪ್ರೇರಕೋ ಯಃ ಪಿತಾ ತಸ್ಯಾಪಿ ಕಥಾ|
25 ೨೫ “ಈ ಮಾತುಗಳನ್ನು ನಾನು ಇನ್ನೂ ನಿಮ್ಮ ಬಳಿಯಲ್ಲಿರುವಾಗಲೇ ಹೇಳಿದ್ದೇನೆ.
ಇದಾನೀಂ ಯುಷ್ಮಾಕಂ ನಿಕಟೇ ವಿದ್ಯಮಾನೋಹಮ್ ಏತಾಃ ಸಕಲಾಃ ಕಥಾಃ ಕಥಯಾಮಿ|
26 ೨೬ ಆದರೆ ಆ ಸಹಾಯಕನು, ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನೆಲ್ಲಾ ನಿಮ್ಮ ನೆನಪಿಗೆ ತಂದುಕೊಡುವನು.
ಕಿನ್ತ್ವಿತಃ ಪರಂ ಪಿತ್ರಾ ಯಃ ಸಹಾಯೋಽರ್ಥಾತ್ ಪವಿತ್ರ ಆತ್ಮಾ ಮಮ ನಾಮ್ನಿ ಪ್ರೇರಯಿಷ್ಯತಿ ಸ ಸರ್ವ್ವಂ ಶಿಕ್ಷಯಿತ್ವಾ ಮಯೋಕ್ತಾಃ ಸಮಸ್ತಾಃ ಕಥಾ ಯುಷ್ಮಾನ್ ಸ್ಮಾರಯಿಷ್ಯತಿ|
27 ೨೭ “ನಾನು ನನ್ನಸಮಾಧಾನವನ್ನು ನಿಮಗೆ ಕೊಟ್ಟು ಹೋಗುತ್ತಿದ್ದೇನೆ. ನನ್ನಲ್ಲಿರುವಂಥ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.
ಅಹಂ ಯುಷ್ಮಾಕಂ ನಿಕಟೇ ಶಾನ್ತಿಂ ಸ್ಥಾಪಯಿತ್ವಾ ಯಾಮಿ, ನಿಜಾಂ ಶಾನ್ತಿಂ ಯುಷ್ಮಭ್ಯಂ ದದಾಮಿ, ಜಗತೋ ಲೋಕಾ ಯಥಾ ದದಾತಿ ತಥಾಹಂ ನ ದದಾಮಿ; ಯುಷ್ಮಾಕಮ್ ಅನ್ತಃಕರಣಾನಿ ದುಃಖಿತಾನಿ ಭೀತಾನಿ ಚ ನ ಭವನ್ತು|
28 ೨೮ ನಾನು ಹೋಗಿ ಪುನಃ ನಿಮ್ಮ ಬಳಿಗೆ ಬರುತ್ತೇನೆ ಎಂದು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ತಂದೆಯ ಬಳಿಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದೀರಿ, ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು.
ಅಹಂ ಗತ್ವಾ ಪುನರಪಿ ಯುಷ್ಮಾಕಂ ಸಮೀಪಮ್ ಆಗಮಿಷ್ಯಾಮಿ ಮಯೋಕ್ತಂ ವಾಕ್ಯಮಿದಂ ಯೂಯಮ್ ಅಶ್ರೌಷ್ಟ; ಯದಿ ಮಯ್ಯಪ್ರೇಷ್ಯಧ್ವಂ ತರ್ಹ್ಯಹಂ ಪಿತುಃ ಸಮೀಪಂ ಗಚ್ಛಾಮಿ ಮಮಾಸ್ಯಾಂ ಕಥಾಯಾಂ ಯೂಯಮ್ ಅಹ್ಲಾದಿಷ್ಯಧ್ವಂ ಯತೋ ಮಮ ಪಿತಾ ಮತ್ತೋಪಿ ಮಹಾನ್|
29 ೨೯ ಇದೆಲ್ಲಾ ನಡೆಯುವಾಗ ನೀವು ನನ್ನನ್ನು ನಂಬುವಂತೆ, ಅದು ನಡೆಯುವುದಕ್ಕಿಂತ ಮೊದಲೇ ನಿಮಗೆ ತಿಳಿಸಿದ್ದೇನೆ.
ತಸ್ಯಾ ಘಟನಾಯಾಃ ಸಮಯೇ ಯಥಾ ಯುಷ್ಮಾಕಂ ಶ್ರದ್ಧಾ ಜಾಯತೇ ತದರ್ಥಮ್ ಅಹಂ ತಸ್ಯಾ ಘಟನಾಯಾಃ ಪೂರ್ವ್ವಮ್ ಇದಾನೀಂ ಯುಷ್ಮಾನ್ ಏತಾಂ ವಾರ್ತ್ತಾಂ ವದಾಮಿ|
30 ೩೦ ಇನ್ನು ಮೇಲೆ ನಾನು ನಿಮ್ಮ ಜೊತೆ ಹೆಚ್ಚು ವಿಷಯಗಳನ್ನು ಮಾತನಾಡುವುದಿಲ್ಲ. ಏಕೆಂದರೆಇಹಲೋಕಾಧಿಪತಿಯು ಬರಲಿದ್ದಾನೆ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ.
ಇತಃ ಪರಂ ಯುಷ್ಮಾಭಿಃ ಸಹ ಮಮ ಬಹವ ಆಲಾಪಾ ನ ಭವಿಷ್ಯನ್ತಿ ಯತಃ ಕಾರಣಾದ್ ಏತಸ್ಯ ಜಗತಃ ಪತಿರಾಗಚ್ಛತಿ ಕಿನ್ತು ಮಯಾ ಸಹ ತಸ್ಯ ಕೋಪಿ ಸಮ್ಬನ್ಧೋ ನಾಸ್ತಿ|
31 ೩೧ ಆದರೂ ನಾನು ತಂದೆಯನ್ನು ಪ್ರೀತಿಸುತ್ತೇನೆಂದು ಲೋಕಕ್ಕೆ ತಿಳಿಯಬೇಕೆಂದು ತಂದೆ ನನಗೆ ಆಜ್ಞಾಪಿಸಿದಂತೆಯೇ ನಾನು ಮಾಡುತ್ತೇನೆ. ಏಳಿರಿ, ನಾವು ಇಲ್ಲಿಂದ ಹೋಗೋಣ” ಎಂದನು.
ಅಹಂ ಪಿತರಿ ಪ್ರೇಮ ಕರೋಮಿ ತಥಾ ಪಿತು ರ್ವಿಧಿವತ್ ಕರ್ಮ್ಮಾಣಿ ಕರೋಮೀತಿ ಯೇನ ಜಗತೋ ಲೋಕಾ ಜಾನನ್ತಿ ತದರ್ಥಮ್ ಉತ್ತಿಷ್ಠತ ವಯಂ ಸ್ಥಾನಾದಸ್ಮಾದ್ ಗಚ್ಛಾಮ|

< ಯೋಹಾನನು 14 >