< ಯೋಹಾನನು 10 >

1 “ನಿಮಗೆನಿಜನಿಜವಾಗಿ ಹೇಳುತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ, ಬೇರೆ ಕಡೆಯಿಂದ ಹತ್ತಿ ಬರುವವನು ಕಳ್ಳನೂ, ದರೋಡೆಕೋರನೂ ಆಗಿದ್ದಾನೆ.
“मी तुम्हास खरे खरे सांगतो, जो मेंढवाड्यांत दरवाजातून न जातां दुसरीकडून चढून जातो, तो चोर आणि लुटारू आहे.
2 ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು.
जो दरवाजाने आत जातो तो मेंढपाळ आहे.
3 ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ; ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ತನ್ನ ಸ್ವಂತ ಕುರಿಗಳ ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ.
त्याच्यासाठी द्वारपाल दरवाजा उघडतो आणि मेंढरे त्याची वाणी ऐकतात. तो आपल्या मेंढरांना ज्याच्या त्याच्या नावाने हाक मारतो आणि त्यांना बाहेर नेतो;
4 ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ.
आणि आपली सर्व मेंढरे बाहेर काढल्यावर तो त्यांच्यापुढे चालतो आणि मेंढरे त्याच्यामागे चालतात; कारण ती त्याचा वाणी ओळखतात.
5 ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವುದಿಲ್ಲ. ಏಕೆಂದರೆ ಅವು ಅಪರಿಚಿತರ ಸ್ವರವನ್ನು ಗುರುತಿಸುವುದಿಲ್ಲ” ಎಂದು ನಿಮಗೆ ಹೇಳುತ್ತೇನೆ.
ती परक्याच्या मागे कधीच जाणार नाहीत, तर ती त्याच्यापासून पळतील; कारण ती परक्यांची वाणी ओळखीत नाहीत.”
6 ಈ ಸಾಮ್ಯವನ್ನು ಯೇಸು ಅವರಿಗೆ ಹೇಳಿದನು. ಆದರೂ ಆತನು ಹೇಳಿದ ವಿಷಯಗಳ ಅರ್ಥ ಏನೆಂಬುದು ಅವರು ಗ್ರಹಿಸಲಿಲ್ಲ.
येशूने त्यांना हा दाखला सांगितला. तरी ज्या गोष्टी तो त्यांच्याबरोबर बोलला त्या काय आहेत हे त्यांना समजले नाही.
7 ಆಗ ಯೇಸು ಪುನಃ ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ; ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ,
म्हणून येशू त्यांना पुन्हा म्हणाला, “मी तुम्हास खरे खरे सांगतो की, मी मेंढरांचे द्वार आहे.
8 ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
जे माझ्या पूर्वी आले ते सर्व चोर आणि लुटारू आहेत, त्याचे मेंढरांनी ऐकले नाही.
9 ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.
मी द्वार आहे; माझ्याद्वारे कोणी आत जाईल तर त्याचे तारण होईल; तो आत येईल आणि बाहेर जाईल आणि त्यास खावयास मिळेल.
10 ೧೦ ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.
१०चोर तर, तो केवळ चोरी, घात व नाश करायला येतो. मी तर त्यांना जीवन प्राप्ती व्हावी व विपुलपणे व्हावी म्हणून आलो आहे.
11 ೧೧ “ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
११मी उत्तम मेंढपाळ आहे; उत्तम मेंढपाळ मेंढरांकरिता आपला जीव देतो.
12 ೧೨ ಕೂಲಿಯಾಳು ಕುರಿಗಳ ಕುರುಬನೂ ಒಡೆಯನೂ ಆಗಿರದೆ, ಅವನು ತೋಳ ಬರುವುದನ್ನು ನೋಡುತ್ತಲೇ ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಮಂದೆಯನ್ನು ಚದರಿಸುತ್ತದೆ.
१२जो मेंढपाळ नाही तर मोलकरीच आहे आणि ज्याची स्वतःची मेंढरे नाहीत, तो लांडग्याला येत असलेले पाहून मेंढरे सोडून पळून जातो; आणि लांडगा त्यांच्यावर झडप घालून धरतो त्यांची दाणादाण करतो.
13 ೧೩ ಅವನು ಕೇವಲ ಕೂಲಿಯಾಳಾಗಿರುವುದರಿಂದ, ಕುರಿಗಳ ಚಿಂತೆ ಅವನಿಗಿಲ್ಲದೆ ಓಡಿ ಹೋಗುತ್ತಾನೆ.
१३मोलकरी पळून जातो कारण तो मोलकरीच आहे आणि त्यास मेंढरांची काळजी नाही.
14 ೧೪ ನಾನೇ ನಿಜವಾದ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ಬಲ್ಲವನಾಗಿದ್ದೇನೆ. ನನ್ನ ಕುರಿಗಳು ನನ್ನನ್ನು ಬಲ್ಲವು.
१४मी उत्तम मेंढपाळ आहे; आणि, जसा पिता मला ओळखतो आणि मी पित्याला ओळखतो तसे जे माझे आहेत त्यांना मी ओळखतो आणि जे माझे आहेत ते मला ओळखतात;
15 ೧೫ ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.
१५आणि मी मेंढरांसाठी आपला जीव देतो.
16 ೧೬ ಇದಲ್ಲದೆಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.
१६या मेंढवाड्यातली नाहीत अशी माझी दुसरी मेंढरे आहेत; तीही मला आणली पाहिजेत आणि ती माझी वाणी ऐकतील. मग एक कळप आणि एक मेंढपाळ असे होईल.
17 ೧೭ ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ.
१७मी आपला जीव परत घेण्याकरिता देतो म्हणून पिता माझ्यावर प्रीती करतो.
18 ೧೮ ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ಅದನ್ನು ಕೊಡುವುದಕ್ಕೆ ನನಗೆ ಅಧಿಕಾರ ಉಂಟು. ಅದನ್ನು ಪುನಃ ಪಡೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಹೊಂದಿದ್ದೇನೆ” ಎಂದನು.
१८कोणी तो माझ्यापासून घेत नाही. तर मी होऊनच तो देतो. मला तो देण्याचा अधिकार आहे आणि मला तो परत घेण्याचा अधिकार आहे. ही आज्ञा मला माझ्या पित्यापासून मिळाली आहे.”
19 ೧೯ ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಪುನಃ ಬೇಧ ಉಂಟಾಯಿತು.
१९म्हणून या शब्दांवरून यहूदी लोकात पुन्हा फूट पडली.
20 ೨೦ ಅವರಲ್ಲಿ ಅನೇಕರು ಆತನಿಗೆ, “ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?” ಎಂದರು.
२०त्यांच्यातील पुष्कळजण म्हणाले, “त्याला भूत लागले आहे आणि तो वेडा आहे. तुम्ही त्याचे का ऐकता?”
21 ೨೧ ಇನ್ನು ಕೆಲವರು, “ಇವು ದೆವ್ವಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು.
२१दुसरे म्हणाले, “ही वचने भूत लागलेल्या मनुष्याची नाहीत. भूताला आंधळ्याचे डोळे उघडता येतात काय?”
22 ೨೨ ಆನಂತರ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವು ನಡೆಯಿತು. ಅದು ಚಳಿಗಾಲವಾಗಿತ್ತು.
२२तेव्हा यरूशलेम शहरात पुनःस्थापनेचा सण असून हिवाळा होता.
23 ೨೩ ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ,
२३आणि येशू परमेश्वराच्या भवनात शलमोनाच्या देवडीत फिरत होता.
24 ೨೪ ಯೆಹೂದ್ಯರು ಆತನನ್ನು ಸುತ್ತುವರೆದು ಆತನಿಗೆ, “ಇನ್ನು ಎಷ್ಟು ಕಾಲ ನಮ್ಮನ್ನು ಸಂದಿಗ್ಧದಲ್ಲಿ ಇಡುತ್ತಿ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು” ಎಂದರು.
२४म्हणून यहूदी लोक त्याच्याभोवती जमले आणि त्यास म्हणाले, “आपण कोठवर आमची मने संशयात ठेवणार? तुम्ही ख्रिस्त असाल तर आम्हास उघडपणे सांगा.”
25 ೨೫ ಅದಕ್ಕೆ ಯೇಸು, “ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬುವುದಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಯಾಗಿವೆ.
२५येशूने त्यांना उत्तर दिले, “मी तुम्हास सांगितले तरी तुम्ही विश्वास ठेवत नाही. मी माझ्या पित्याच्या नावाने जी कामे करतो ती माझ्याविषयी साक्ष देतात.
26 ೨೬ ಆದರೂ, ನೀವು ನಂಬದೆ ಇದ್ದೀರಿ, ಏಕೆಂದರೆ ನೀವು ನನ್ನ ಕುರಿಗಳಲ್ಲ.
२६तरी तुम्ही विश्वास ठेवत नाही, कारण तुम्ही माझ्या मेंढरांपैकी नाही.
27 ೨೭ ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
२७माझी मेंढरे माझी वाणी ऐकतात, मी त्यांना ओळखतो आणि ती माझ्यामागे येतात.
28 ೨೮ ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದೇ ಇಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು. (aiōn g165, aiōnios g166)
२८मी त्यांना सार्वकालिक जीवन देतो; त्यांचा कधीही नाश होणार नाही आणि कोणी त्यांना माझ्या हातातून हिसकावून घेणार नाही. (aiōn g165, aiōnios g166)
29 ೨೯ ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ಮಹೋನ್ನತನು. ಅವುಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕಸಿದುಕೊಳ್ಳಲಾರರು.
२९पित्याने मला जे दिले ते सर्वांहून मोठे आहे आणि पित्याच्या हातातून ते कोणी हिसकावून घेऊ शकत नाही.
30 ೩೦ ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು.
३०मी आणि पिता एक आहोत.”
31 ೩೧ ಆಗ ಯೆಹೂದ್ಯರು ಆತನನ್ನು ಕೊಲ್ಲಬೇಕೆಂದು ತಿರುಗಿ ಕಲ್ಲುಗಳನ್ನು ತೆಗೆದುಕೊಂಡರು,
३१तेव्हा यहूदी लोकांनी त्यास दगडमार करायला पुन्हा दगड उचलले.
32 ೩೨ ಯೇಸು ಅವರಿಗೆ, “ನನ್ನ ತಂದೆಯಿಂದ ಅನೇಕ ಒಳ್ಳೆಯ ಕ್ರಿಯೆಗಳನ್ನು ನಿಮಗೆ ತೋರಿಸಿದ್ದೇನೆ. ಅವುಗಳಲ್ಲಿ ಯಾವ ಕ್ರಿಯೆಗಳ ನಿಮಿತ್ತ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದು ಕೇಳಿದ್ದಕ್ಕೆ,
३२येशू त्यांना म्हणाला, “मी माझ्या स्वर्गीय पित्याकडची पुष्कळ चांगली कामे तुम्हास दाखवली आहेत. त्या कामांतील कोणत्या कामाकरता तुम्ही मला दगडमार करता?”
33 ೩೩ ಯೆಹೂದ್ಯರು, “ನಾವು ನಿನ್ನ ಮೇಲೆ ಕಲ್ಲೆಸೆಯುವುದು ಒಳ್ಳೆಯ ಕಾರ್ಯಗಳಿಗಾಗಿ ಅಲ್ಲ, ಆದರೆ ದೇವದೂಷಣೆಗಾಗಿಯೂ ಮತ್ತು ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವುದಕ್ಕಾಗಿಯೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ” ಎಂದು ಉತ್ತರ ಕೊಟ್ಟರು.
३३यहूदी लोकांनी त्यास उत्तर दिले, “आम्ही चांगल्या कामासाठी तुला दगडमार करीत नाही, पण दुर्भाषणासाठी करतो; कारण तू मनुष्य असून स्वतःला देव म्हणवतोस.”
34 ೩೪ ಅದಕ್ಕೆ ಯೇಸು, “‘ನೀವು ದೇವರುಗಳೇ ಆಗಿದ್ದೀರಿ ಎಂದು ನಾನು ಹೇಳಿದೆನು’ ಎಂಬುದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿಲ್ಲವೋ?
३४येशूने त्यांना म्हटले, “तुम्ही देव आहा, असे मी म्हणालो हे तुमच्या शास्त्रात लिहिले नाही काय?
35 ೩೫ ಧರ್ಮಶಾಸ್ತ್ರವು ನಿರರ್ಥಕವೇನೂ ಅಲ್ಲ. ದೇವರ ವಾಕ್ಯವನ್ನು ಹೊಂದಿರುವವರಿಗೆ ‘ದೇವರುಗಳೆಂದೂ,’ ಆತನು ಕರೆದಿರುವುದಾದರೆ
३५ज्यांना देवाचे वचन प्राप्त झाले त्यांना जर त्याने देव म्हणले आणि शास्त्रलेखाचा भंग होत नाही,
36 ೩೬ ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ‘ನಾನು ದೇವರ ಮಗನಾಗಿದ್ದೇನೆಂದು’ ಹೇಳಿದ್ದಕ್ಕೆ ‘ನೀನು ದೇವದೂಷಣೆ ಮಾಡುತ್ತೀ ಎಂದು ನೀವು ನನಗೆ ಹೇಳುತ್ತಿರಲ್ಲಾ?’
३६तर ज्याला पित्याने पवित्र कार्यास्तव नेमून जगात पाठवले, त्या मला, मी देवाचा पुत्र आहे असे म्हटल्यावरून तुम्ही ‘दुर्भाषण करता’ असे तुम्ही मला म्हणता काय?
37 ೩೭ ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ
३७मी जर माझ्या पित्याची कामे करीत नसेन तर माझ्यावर विश्वास ठेवू नका.
38 ೩೮ ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದೆ ಇದ್ದರೂ, ಈ ಕಾರ್ಯಗಳನ್ನಾದರೂ ನಂಬಿರಿ. ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ, ತಂದೆಯಲ್ಲಿ ನಾನು ಇದ್ದೇನೆಂತಲೂ ನಿಮಗೆ ತಿಳಿಯುವುದು ಮತ್ತು ಮನದಟ್ಟಾಗುವುದು” ಎಂದನು.
३८पण जर मी ती करीतो तर माझ्यावर विश्वास न ठेवला तरी त्या कामांवर विश्वास ठेवा. अशासाठी की, माझ्यामध्ये पिता आहे आणि पित्यामध्ये मी आहे. हे तुम्ही ओळखून घ्यावे.”
39 ೩೯ ಅವರು ಪುನಃ ಆತನನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು, ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು ಹೋದನು.
३९ते त्यास पुन्हा धरावयास पाहू लागले, परंतु तो त्यांच्या हाती न लागता निघून गेला.
40 ೪೦ ಆ ಮೇಲೆ ಆತನು ಯೊರ್ದನ್ ಹೊಳೆಯನ್ನು ದಾಟಿ, ಯೋಹಾನನು ಮೊದಲು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಉಳಿದು ಕೊಂಡನು.
४०मग तो पुन्हा यार्देनेच्या पलीकडे जेथे योहान पहिल्याने बाप्तिस्मा करीत असे त्याठिकाणी जाऊन राहिला.
41 ೪೧ ಆಗ ಅನೇಕರು ಆತನ ಬಳಿಗೆ ಬಂದು, “ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ, ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ಸತ್ಯವಾಗಿದೆ” ಎಂದು ಮಾತನಾಡುತ್ತಿದ್ದರು.
४१तेव्हा पुष्कळ लोक आले; ते म्हणाले, “योहानाने काही चिन्ह केले नाही हे खरे आहे, तरी योहानाने याच्याविषयी जे काही सांगितले ते सर्व खरे आहे.”
42 ೪೨ ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.
४२तेथे पुष्कळ जणांनी त्याच्यावर विश्वास ठेवला.

< ಯೋಹಾನನು 10 >