< ಯೋಬನು 39 >
1 ೧ ಬೆಟ್ಟದ ಮೇಕೆಗಳು ಈಯುವ ಸಮಯವನ್ನು ತಿಳಿದುಕೊಂಡಿದ್ದೀಯೋ? ಹರಿಣಗಳ ಹೆರಿಗೆಯನ್ನು ನೋಡಿಕೊಳ್ಳುವೆಯಾ?
Sabes tu o tempo em que as cabras montezes parem? ou consideraste as dores das cervas?
2 ೨ ಅವು ಗರ್ಭವನ್ನು ಹೊರುವ ತಿಂಗಳುಗಳನ್ನು ಎಣಿಸುತ್ತೀಯೋ? ಅವು ಈಯುವ ಕಾಲವನ್ನು ಗೊತ್ತುಮಾಡುವೆಯೋ?
Contarás os meses que cumprem? ou sabes o tempo do seu parto?
3 ೩ ಅವು ಮರಿಗಳನ್ನು ಹಾಕಿದೊಡನೆಯೇ ತಮ್ಮ ವೇದನೆಯನ್ನೂ ತೊರೆದುಬಿಡುವವು.
Quando se encurvam, produzem seus filhos, e lançam de si as suas dores.
4 ೪ ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ ಬೆಳೆದು ಅಗಲಿದ ಮೇಲೆ ತಾಯಿಯ ಬಳಿಗೆ ಪುನಃ ಸೇರುವುದೇ ಇಲ್ಲ.
Seus filhos enrijam, crescem com o trigo: saem, e nunca mais tornam a elas.
5 ೫ ಕಾಡುಕತ್ತೆಯನ್ನು ಸ್ವತಂತ್ರವಾಗಿರುವಂತೆ ಯಾರು ಕಳುಹಿಸಿಬಿಟ್ಟರು? ಅದರ ಕಟ್ಟನ್ನು ಬಿಚ್ಚಿದವರು ಯಾರು?
Quem despediu livre o jumento montez? e quem soltou as prisões ao jumento bravo?
6 ೬ ನಾನು ಅಡವಿಯನ್ನು ಅದಕ್ಕೆ ಮನೆಯನ್ನಾಗಿಯೂ, ಮರುಭೂಮಿಯನ್ನು ಅದರ ನಿವಾಸವನ್ನಾಗಿಯೂ ಮಾಡಿದ್ದೇನಷ್ಟೆ.
Ao qual dei o ermo por casa, e a terra salgada por suas moradas.
7 ೭ ಅದು ಊರುಗದ್ದಲವನ್ನು ಧಿಕ್ಕರಿಸಿ, ಹೊಡೆಯುವವನ ಕೂಗಾಟವನ್ನು ಕೇಳಿದ್ದೇ ಇಲ್ಲ.
Ri-se do arroido da cidade: não ouve os muitos gritos do exator.
8 ೮ ಅದರ ಕಾವಲು ವಿಶಾಲವಾದ ಬೆಟ್ಟಗಳೇ. ಹಸಿರು ಎಲ್ಲಿದ್ದರೂ ಅದನ್ನು ಹುಡುಕುತ್ತಲೇ ಇರುವುದು.
O que descobre nos montes é o seu pasto, e anda buscando tudo que está verde.
9 ೯ ಕಾಡುಕೋಣವು ನಿನ್ನನ್ನು ಸೇವಿಸಲು ಒಪ್ಪಿ, ನಿನ್ನ ಗೋದಲಿಯ ಹತ್ತಿರ ತಂಗುವುದೋ?
Ou, querer-te-á servir o unicórnio? ou ficará na tua cavalariça?
10 ೧೦ ನೇಗಿಲ ಸಾಲಿಗೆ ಕಾಡುಕೋಣವನ್ನು ಹಗ್ಗದಿಂದ ಕಟ್ಟುವೆಯಾ? ಅದು ತಗ್ಗಿನ ಭೂಮಿಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೋ?
Ou amarrarás o unicórnio com a sua corda no rego? ou estorroará após ti os vales?
11 ೧೧ ಬಲ ಹೆಚ್ಚಾಗಿರುವುದರಿಂದ ಅದರಲ್ಲಿ ನಂಬಿಕೆಯಿಟ್ಟು, ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯೋ?
Ou confiarás nele, por ser grande a sua força? ou deixarás a seu cargo o teu trabalho?
12 ೧೨ ಅದು ನಿನ್ನ ಕಣದಲ್ಲಿ ಕಾಳನ್ನು ಕೂಡಿಸಿ, ನಿನ್ನ ಬೆಳೆಯನ್ನು ಹೊತ್ತುಕೊಂಡು ಬರುವುದೆಂದು ಭರವಸವಿಡುವೆಯಾ?
Ou fiarás dele que te torne o que semeaste e o recolherá na tua eira?
13 ೧೩ ಉಷ್ಟ್ರಪಕ್ಷಿಯ ಪಕ್ಷವು ಸಂತೋಷದಿಂದ ಬಡಿದಾಡುವುದು, ಆದರೆ ಅದರ ರೆಕ್ಕೆಗರಿಗಳಿಗೆ ಪ್ರೀತಿಭಾವವುಂಟೋ?
Vem de ti as alegres asas dos pavões, que tem penas de cegonha e da águia?
14 ೧೪ ಅದು ತನ್ನ ಮೊಟ್ಟೆಗಳನ್ನು ಭೂಮಿಯಲ್ಲಿಟ್ಟು, ಧೂಳಿನಿಂದಲೇ ಅವುಗಳಿಗೆ ಕಾವು ಕೊಡಿಸುವುದಲ್ಲವೇ.
A qual deixa os seus ovos na terra, e os aquenta no pó.
15 ೧೫ ಯಾರಾದರು ಕಾಲಿನಿಂದ ತುಳಿದಾರು, ಕಾಡುಮೃಗ ತುಳಿದೀತು ಎಂದು ಯೋಚಿಸುವುದೇ ಇಲ್ಲ.
E se esquece de que algum pé os pise, ou os animais do campo os calquem.
16 ೧೬ ತನ್ನ ಮರಿಗಳನ್ನು ತನ್ನವುಗಳೆಂದೆಣಿಸದೆ ಬಾಧೆಗೊಳಪಡಿಸುವುದು, ತನ್ನ ಹೆರಿಗೆ ನಿಷ್ಫಲವಾದರೂ ಅದಕ್ಕೆ ಏನೂ ಚಿಂತೆ ಇಲ್ಲ.
Endurece-se para com seus filhos, como se não fossem seus: debalde é seu trabalho, porquanto está sem temor.
17 ೧೭ ದೇವರು ಅದಕ್ಕೆ ಜ್ಞಾನವನ್ನು ಮರೆಮಾಡಿ, ವಿವೇಕವನ್ನು ದಯಪಾಲಿಸದೆ ಇದ್ದಾನಷ್ಟೆ!
Porque Deus a privou de sabedoria, e não lhe repartiu entendimento.
18 ೧೮ ಅದು ರೆಕ್ಕೆಬಡಿಯುತ್ತಾ ನೀಳವಾಗಿ ಓಡುವ ಸಮಯದಲ್ಲಾದರೋ, ಕುದುರೆಯನ್ನೂ, ಸವಾರನನ್ನೂ ಹೀಯಾಳಿಸುವುದು.
A seu tempo se levanta ao alto: ri-se do cavalo, e do que vai montado nele.
19 ೧೯ ನೀನು ಕುದುರೆಗೆ ಶಕ್ತಿಯನ್ನು ಕೊಟ್ಟು, ಅದರ ಕೊರಳಿಗೆ ಗುಡುಗನ್ನು ಕಟ್ಟಿದವನು ನಿನಲ್ಲವೇ?
Ou darás tu força ao cavalo? ou vestirás o seu pescoço com trovão?
20 ೨೦ ಅದು ಮಿಡತೆಯ ಹಾಗೆ ಕುಪ್ಪಳಿಸಿ ಹಾರುವಂತೆ ಮಾಡಿದೆಯಾ? ಅದರ ಕೆನೆತನದ ಪ್ರತಾಪವು ಭಯಂಕರವಾಗಿದೆ.
Ou espanta-lo-ás, como ao gafanhoto? terrível é o fogoso respirar das suas ventas.
21 ೨೧ ಅದು ತಗ್ಗಿನ ನೆಲವನ್ನು ಕೆರೆದು ತನ್ನ ಬಲಕ್ಕೆ ಹಿಗ್ಗಿ, ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೋಗುವುದು.
Escarva a terra, e folga na sua força, e sai ao encontro dos armados.
22 ೨೨ ಅದು ಕಳವಳಗೊಳ್ಳದೆ ಖಡ್ಗಕ್ಕೆ ಹಿಂದೆಗೆಯದೆ ಭಯವನ್ನು ತಾತ್ಸಾರ ಮಾಡುವುದು.
Ri-se do temor, e não se espanta, e não torna atráz por causa da espada.
23 ೨೩ ಬತ್ತಳಿಕೆಯೂ, ಥಳಥಳಿಸುವ ಭರ್ಜಿಯೂ, ಈಟಿಯೂ ಅದರ ಮೇಲೆ ಜಣಜಣಿಸುವವು.
Contra ele rangem a aljava, o ferro flamante da lança e do dardo.
24 ೨೪ ಅದು ತುತ್ತೂರಿಯ ಶಬ್ದವನ್ನು ಕೇಳಿದರೂ, ನಿಲ್ಲದೆ ಉಗ್ರತೆಯಿಂದ ಕಂಪಿಸುತ್ತಾ ನೆಲವನ್ನು ನುಂಗಿಬಿಡುವುದೋ ಎಂಬಂತೆ ಓಡುವುದು.
Sacudindo-se, e removendo-se, escarva a terra, e não faz caso do som da buzina.
25 ೨೫ ತುತ್ತೂರಿ ಊದಿದಾಗೆಲ್ಲಾ ಆಹಾ! ಎಂದುಕೊಂಡು ಕಾಳಗ, ಆರ್ಭಟ, ಸೇನಾಪತಿಗಳ ಗರ್ಜನೆ, ಇವುಗಳನ್ನು ದೂರದಲ್ಲಿದ್ದರೂ ಮೂಸಿನೋಡಿ ತಿಳಿಯುವುದು.
Na fúria do som das buzinas diz: Eia! e de longe cheira a guerra, e o trovão dos príncipes, e o alarido.
26 ೨೬ ಗಿಡಗವು ತನ್ನ ರೆಕ್ಕೆಗಳನ್ನು ಹರಡಿ, ದಕ್ಷಿಣದಿಕ್ಕಿಗೆ ಹಾರುವುದು ನಿನ್ನ ವಿವೇಕದಿಂದಲೋ?
Ou vôa o gavião pela tua inteligência, e estende as suas asas para o sul?
27 ೨೭ ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ ಗೂಡುಮಾಡುವುದು ನಿನ್ನ ಅಪ್ಪಣೆಯಿಂದಲೋ?
Ou se remonta a águia ao teu mandado, e põe no alto o seu ninho?
28 ೨೮ ಅದಕ್ಕೆ ಬಂಡೆಯೇ ನಿವಾಸವು; ಅದು ಶಿಲಾಶಿಖರದಲ್ಲಿಯೂ, ದುರ್ಗದಲ್ಲಿಯೂ ತಂಗುವುದು.
Nas penhas mora e habita: no cume das penhas, e nos lugares seguros.
29 ೨೯ ಅಲ್ಲಿಂದಲೇ ಬೇಟೆಯನ್ನು ನೋಡುತ್ತಾ; ದೂರದಲ್ಲಿದ್ದರೂ ಅದನ್ನು ಕಂಡುಹಿಡಿಯುವುದು.
Desde ali descobre a preza: seus olhos a avistam desde longe.
30 ೩೦ ಹೆಣಬಿದ್ದಲ್ಲಿ ರಣಹದ್ದೂ ಅದರ ಮರಿಗಳೂ ಹೀರುತ್ತವೆ ರಕ್ತವನ್ನು;
E seus filhos chupam o sangue, e onde há mortos ai está.