< ಯೋಬನು 36 >
1 ೧ ಆಮೇಲೆ ಎಲೀಹು ಮತ್ತೆ ಹೀಗೆಂದನು,
Elihu mah doeh,
2 ೨ “ಸ್ವಲ್ಪ ತಾಳು, ನಾನು ತಿಳಿಸುತ್ತೇನೆ, ದೇವರ ಪರವಾಗಿ ಹೇಳತಕ್ಕ ಮಾತುಗಳು ಇನ್ನೂ ಕೆಲವು ಉಂಟು.
na zing kue raeh, kang patuek han, Sithaw zuengah lokthuih han ka tawnh.
3 ೩ ದೂರದಿಂದ ಸಂಪಾದಿಸಿದ ನನ್ನ ತಿಳಿವಳಿಕೆಯ ಪ್ರಕಾರ, ನನ್ನ ಸೃಷ್ಟಿಕರ್ತನನ್ನು ಧರ್ಮಸ್ವರೂಪನೆಂದು ಹೊಗಳುವೆನು.
Kangthla parai ahmuen hoiah palunghahaih to ka hak, kai sahkung loe toeng, tiah kam tuengsak han.
4 ೪ ನನ್ನ ಮಾತುಗಳು ಸುಳ್ಳಲ್ಲವೆಂಬುದು ನಿಶ್ಚಯ, ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.
Tangtang ni amsawnlok ka thui mak ai; panoekhaih hoi akoep kami loe na taengah oh.
5 ೫ ಇಗೋ, ದೇವರು ಮಹಾಶಕ್ತನಾಗಿದ್ದರೂ ಯಾರನ್ನೂ ತಿರಸ್ಕರಿಸುವುದಿಲ್ಲ, ಆತನ ಬುದ್ಧಿ ಸಾಮರ್ಥ್ಯವು ಅಪಾರವಾಗಿದೆ.
Khenah, Sithaw loe thacak, toe mi kawbaktih doeh khet patoekhaih tawn ai; anih loe thacakhaih, palunghahaih hoiah akoep.
6 ೬ ಆತನು ದುಷ್ಟರ ಪ್ರಾಣವನ್ನು ಉಳಿಸುವುದಿಲ್ಲ, ಗತಿಹೀನರ ನ್ಯಾಯವನ್ನು ಸ್ಥಾಪಿಸುವನು.
Kahoih ai kami ih hinghaih to anih mah patawn pae ai, toe amtang kaminawk loe toenghaih hoiah lok a caek.
7 ೭ ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸದೆ, ಅರಸರೊಂದಿಗೆ ಸಿಂಹಾಸನದ ಮೇಲೆ ಶಾಶ್ವತವಾಗಿ ಕುಳಿತುಕೊಳ್ಳುವ, ಉನ್ನತಪದವಿಗೆ ಅವರನ್ನು ತರುವನು.
Anih loe katoeng kami to angqoi taak ai, siangpahrangnawk salakah anghnutsak, ue, nihcae to caksak poe moe, kasang ah atoengh tahang.
8 ೮ ಅವರು ಒಂದು ವೇಳೆ ಬಂಧನಕ್ಕೆ ಸಿಕ್ಕಿಕೊಂಡು, ಬಾಧೆಗಳೆಂಬ ಹಗ್ಗಗಳಿಂದ ಕಟ್ಟಲ್ಪಟ್ಟಿದ್ದರೆ,
Nihcae to qui hoiah pathlet o moe, pacaekthlaekhaih qui mah taoeng caeng nahaeloe,
9 ೯ ಆತನು ಅವರ ದುಷ್ಕೃತ್ಯವನ್ನೂ, ಸೊಕ್ಕಿನ ದ್ರೋಹಗಳನ್ನೂ ಅವರಿಗೆ ತೋರಿಸುವನು.
Anih mah nihcae sethaih hoi sakpazae ih hmuennawk to thuih pae, nihcae amoekhaih to amtuengsak.
10 ೧೦ ಇದಲ್ಲದೆ ಶಿಕ್ಷಣವನ್ನು ಕೇಳುವಂತೆ ಅವರ ಕಿವಿಗಳನ್ನು ತೆರೆದು, ಅಧರ್ಮವನ್ನು ಬಿಟ್ಟುಬಿಡಬೇಕೆಂದು ಅವರಿಗೆ ಆಜ್ಞಾಪಿಸುವನು.
Thuitaekhaih lok tahngai koehhaih palungthin to paongh pae moe, kasae sakhaih caeh taak hanah a thuih pae.
11 ೧೧ ಅವರು ಅದನ್ನು ಕೇಳಿ ಆತನನ್ನು ಸೇವಿಸಿದರೆ, ತಮ್ಮ ದಿನಗಳನ್ನು ಸುಖದಲ್ಲಿಯೂ, ವರ್ಷಗಳನ್ನು ಸಂತೋಷದಲ್ಲಿಯೂ ಕಳೆಯುವರು.
Nihcae mah lok to tahngai o moe, a tok to sah o nahaeloe, hing thung khosakhoih o ueloe, kamongah om o tih.
12 ೧೨ ಕೇಳದಿದ್ದರೆ ದೈವಾಸ್ತ್ರದಿಂದ ಅಳಿದುಹೋಗುವರು, ಜ್ಞಾನಹೀನರಾಗಿಯೇ ಪ್ರಾಣಬಿಡುವರು.
Toe nihcae mah anih ih lok to tahngai o ai nahaeloe, sumsen hoi anghmaa o tih, panoekhaih om ai ah dueh o tih.
13 ೧೩ ದೇವರನ್ನು ಹೃದಯದಲ್ಲಿ ನಂಬದಿರುವವರು ಸಿಟ್ಟುಗೊಂಡಿರುವರು, ಆತನು ಅವರನ್ನು ಬಂಧಿಸುವಾಗಲೂ ಆತನಿಗೆ ಮೊರೆಯಿಡುವುದಿಲ್ಲ.
Sithaw panoek ai angsahcop kaminawk loe palung thungah palungphui o; Anih mah qui hoi pathlet naah doeh tahmenhaih hni o ai.
14 ೧೪ ಯೌವನದಲ್ಲೇ ಸಾಯುವರು. ಅವರ ಜೀವವು ಪುರಷಗಾಮಿಗಳ ಜೀವದಂತೆ ಕ್ಷಯಿಸುವುದು.
Nihcae loe thendoeng nathuem ah duek o moe, kaciim ai kaminawk hoi nawnto a duek o.
15 ೧೫ ಬಾಧೆಪಡುವವರನ್ನು ಅವರ ಬಾಧೆಗಳ ಮೂಲಕವೇ ರಕ್ಷಿಸುವನು, ಅವರು ಅನುಭವಿಸುವ ಹಿಂಸೆಯಿಂದಲೇ ಅವರ ಕಿವಿಯನ್ನು ತೆರೆಯುವನು.
Anih mah patangkhang amtang kaminawk to loisak, raihaih a tongh o naah thaih kophaih to a paek.
16 ೧೬ ಇದೇ ಮೇರೆಗೆ ನಿನ್ನನ್ನೂ ಕಷ್ಟದೊಳಗಿಂದ ತಪ್ಪಿಸಿ, ಇಕ್ಕಟ್ಟಿಲ್ಲದ ವಿಶಾಲ ಸ್ಥಳಕ್ಕೆ ಬರಮಾಡಬೇಕೆಂದೂ, ನಿನ್ನ ಮೇಜಿನ ಆಹಾರಗಳು ತುಪ್ಪದಿಂದ ತುಂಬಿರಬೇಕೆಂಬುದು ಆತನ ಉದ್ದೇಶವಾಗಿದೆ.
Anih mah loklam tamcaek ahmuen hoiah lam tamcaek kaom ai ahmuen kakawk ah na suem ueloe, na caboi nuiah caaknaek kahoih koimongah na patoemh pae tih.
17 ೧೭ ನೀನಾದರೋ ದುಷ್ಟನಿರ್ಣಯಗಳಿಂದ ತುಂಬಿದವನಾಗಿ, ನ್ಯಾಯವಿಚಾರಣೆಗೂ, ನ್ಯಾಯತೀರ್ಪಿಗೂ ಒಳಗಾಗಿದ್ದಿ.
Toe nang loe zaehaih pongah lokcaekhaih na tongh boeh; na sak ih zaehaih atho lokcaekhaih to na tong tih.
18 ೧೮ ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕದಂತೆ ನೋಡಿಕೋ! ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ!
Palungphui pongah, danpaekhaih oh han ai ah acoe ah; akranghaih atho paek mang cadoeh na loih thai mak ai.
19 ೧೯ ಕಷ್ಟಾನುಭವವಿಲ್ಲದೆ ನಿನ್ನ ಐಶ್ವರ್ಯವೂ, ಧನಸಾಮರ್ಥ್ಯವೂ ನಿನಗೆ ಈಡಾಗುವುದೇ?
Nang raenghaih hmuenmae mah na bomh thai tih maw? Sui hoi na thacakhaih ah kaom pop parai hmuenmaenawk to na paek cadoeh, na bomh thai mak ai.
20 ೨೦ ಜನಾಂಗಗಳು ತಟ್ಟನೆ ನಿರ್ಮೂಲವಾಗುವಾಗ ಅವರ ವಿರುದ್ಧ ಪಾಪಮಾಡದಂತೆ, ರಾತ್ರಿಯನ್ನು ಬಯಸಬೇಡ.
Khoving to zing hmah; kaminawk loe aqum ah ni angmacae ohhaih ahmuen hoiah anghmat o.
21 ೨೧ ಎಚ್ಚರಿಕೆಯಾಗಿರು, ಅಧರ್ಮದ ಕಡೆಗೆ ಕಾಲಿಡಬೇಡ. ಕಷ್ಟವನ್ನು ಅನುಭವಿಸಲೊಲ್ಲದೆ ಅಧರ್ಮವನ್ನೇ ಆರಿಸಿಕೊಂಡಿದ್ದಿ.
Zaehaih thungah amlaem let han ai, acoe ah; patangkhanghaih pongah to hmuen to ni na koeh kue boeh.
22 ೨೨ ಇಗೋ, ದೇವರು ತನ್ನ ಶಕ್ತಿಯಿಂದ ಉನ್ನತ ಕಾರ್ಯಗಳನ್ನು ನಡೆಸುವನು, ಆತನಂತಹ ಉಪದೇಶಕನು ಯಾರು?
Khenah, Sithaw loe a thacakhaih hoiah pakoeh ah oh boeh; anih baktih patukkung mi maw kaom?
23 ೨೩ ಆತನ ಮಾರ್ಗವನ್ನು ಆತನಿಗೆ ಯಾರು ನೇಮಿಸಿದರು? ‘ನೀನು ಅನ್ಯಾಯವನ್ನು ನಡೆಸಿದಿ’ ಎಂದು ಯಾರು ಹೇಳಬಲ್ಲರು?
Mi mah maw a caehhaih loklam anih han patuek vaih? To ai boeh loe mi mah maw sakpazaehaih na tawnh, tiah naa vaih?
24 ೨೪ ಮನುಷ್ಯರು ಕೀರ್ತಿಸುವ, ಆತನ ಕೆಲಸವನ್ನು ಹೊಗಳಲು ಮರೆಯಬೇಡ.
Kaminawk loe a sak o ih hmuen to laasakhaih hoiah pakoeh o, nang doeh pakoeh toeng han pahnet hmah.
25 ೨೫ ಎಲ್ಲಾ ಮನುಷ್ಯರೂ ಅದನ್ನು ಕಂಡಿದ್ದಾರೆ; ಆದರೆ ನರನು ದೂರದಿಂದ ನೋಡುತ್ತಾನಷ್ಟೆ.
Kami boih mah anih toksakhaih to hnuk o; kami mah kangthla hoiah khen thai tih.
26 ೨೬ ಆಹಾ, ದೇವರು ಮಹೋನ್ನತನಾಗಿದ್ದಾನೆ, ನಾವು ಆತನನ್ನು ಅರಿಯಲಾರೆವು; ಆತನ ವರ್ಷಗಳು ಅಸಂಖ್ಯಾತವಾಗಿವೆ.
Khenah, Sithaw loe Len parai; anih to aicae mah panoek thai ai; anih hinghaih saningnawk doeh kroek thai ai.
27 ೨೭ ನೀರಿನ ಹನಿಗಳನ್ನು ಎಳೆದುಕೊಳ್ಳುವನು, ಅವು ತಿಳಿಮಳೆಯಾಗಿ ಆತನ ಮಂಜಿನಿಂದ ಉದುರುವವು.
Anih loe kaca tui to van ah azuh tahang moe, tamai to khotui ah angcoengsak;
28 ೨೮ ಮೋಡಗಳು ಅದನ್ನು ಸುರಿಸಿ ಸಮೃದ್ಧಿಯಾಗಿ ಜನರ ಮೇಲೆ ಚಿಮುಕಿಸುವುದು.
tamai thung hoiah tui to krak moe, kami nuiah pop parai kho to angzohsak.
29 ೨೯ ಆಹಾ, ಮೇಘಗಳ ಹರಡುವಿಕೆಯನ್ನೂ, ಆತನ ಗುಡಾರದಲ್ಲಿನ ಗರ್ಜನೆಗಳನ್ನೂ ಯಾರು ಗ್ರಹಿಸಬಲ್ಲರು?
Anih mah kawbangmaw tamai to anghaehsak moe, kawbangmaw ohhaih ahmuen hoiah khopazihsak, tiah panoek kami oh maw?
30 ೩೦ ಇಗೋ, ತನ್ನ ಪ್ರಕಾಶವನ್ನು ಸುತ್ತಲು ಹರಡಿಕೊಂಡು, ಅದನ್ನು ಜಲಸಮೂಹಗಳಿಂದ ಮುಚ್ಚಿಕೊಳ್ಳುವನು.
Khenah, anih loe a ohhaih ranuiah aanghaih to suek moe, kathuk koek tuipui talae doeh a kraeng khoep.
31 ೩೧ ಮೋಡಗಳ ಮುಖಾಂತರವಾಗಿಯೇ ಜನಾಂಗಗಳಿಗೆ ನ್ಯಾಯವನ್ನು ವಿಧಿಸಿ, ಆಹಾರವನ್ನು ಧಾರಾಳವಾಗಿ ದಯಪಾಲಿಸುವನಷ್ಟೆ.
To tiah kaminawk to lokcaek moe, kamthlai pokah caaknaek to a paek.
32 ೩೨ ಕೈತುಂಬಾ ಸಿಡಿಲನ್ನು ಹಿಡಿದು ನೀನು ವೈರಿಯನ್ನು ಹೊಡೆದು ಗುರಿಮುಟ್ಟುಲು ಬಿಡುವನು.
Tamai hoiah aanghaih to kraeng moe, patoep ih ahmuen to kah hanah lok a paek.
33 ೩೩ ಅದರ ಆರ್ಭಟವು ಆತನ ವಿಷಯವಾಗಿ ಪ್ರಕಟಿಸುವುದು, ದನಕರುಗಳೂ ಸಹ ಆತನ ಆಗಮನವನ್ನು ತಿಳಿಯುವವು.”
Anih ih khopazih tuen mah takhi sae song tih boeh, tiah panoeksak, maitaw mah doeh takhi sae song tih, tiah panoek.